July 21, 2012 - 10:16am
ಖಾಸಗಿ ಶಾಲೆಗಳು, ಅದರಲ್ಲೂ ಸರಕಾರದ ಅನುದಾನದ ಹಂಗಿಲ್ಲವೆಂಬ ಉನ್ಮತ್ತ ಜನರವು, ಮಾಲ್‌ಗಳಲ್ಲಿನ ಕುರುಕು ತಿಂಡಿ ಮಳಿಗೆಗಳಂತೆ, ಇಂಗ್ಲಿಷ್ ಮಾಧ್ಯಮ, ಸಿಬಿಎಸ್‌ಇ, ಐಸಿಎಸ್‌ಇ ಶಿಕ್ಷಣವನ್ನು ಮನಸೊಇಚ್ಛೆ ಮಾರಿ ಲಕ್ಷಾಂತರ ಗೋರಿಕೊಳ್ಳುತ್ತವೆ. ಮಲ್ಲೇಶ್ವರ ಅಥವಾ ಗಾಂಧೀಬಜಾರಿನ ರಸ್ತೆಗಳಲ್ಲಿ, ಮೂರುಕಾಸಿನ ಸೀಬೆಕಾಯಿ ಮಾರಿ ಹೊಟ್ಟ ಹೊರೆಯುವ ತಳ್ಳುಗಾಡಿ ಮನುಷ್ಯರನ್ನು ಹೊರದಬ್ಬುವ ಪರಾಕ್ರಮವನ್ನು, ಸರಕಾರ, ಈ ಅಸಂಸ್ಕೃತ, ಅಕ್ರಮ ಶಿಕ್ಷಣ ಮಾರಾಟ ಉದ್ಯಮಿಗಳಮೇಲೆ ತೋರಿಸಲಿ, ನೋಡೋಣ!
Forums:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಉ: ಆಂಗ್ಲ ಮಾಧ್ಯಮ ಶಾಲೆ
ಸರ್ಕಾರದ ಅನುಧಾನ ಪಡೆದಿಲ್ಲ ಎಂಬ ಒಂದೇ ಕಾರಣಕ್ಕೆ ಯಾರೂ ಸರ್ಕಾರದ ತೀರ್ಮಾನಗಳಿಗೆ ವಿರೋಧವಾಗಲು ಸಾಧ್ಯವಿಲ್ಲ. ಏಕೆಂದರೆ ಯಾವುದೋ ರೂಪದಲ್ಲಿ ಸರ್ಕಾರದ ಲಾಭವನ್ನು ಇವರು ಪಡೆದೇ ಇರುತ್ತಾರೆ. ನೀರು, ವಿದ್ಯುತ್, ವಾಹನಗಳ ಇಂಧನ ಇವುಗಳಲ್ಲೆಲ್ಲಾ ಸರ್ಕಾರದ ಸಬ್ಸಿಡಿ ಇದ್ದೇ ಇರುವಾಗ ಇವನ್ನೆಲ್ಲಾ ಉಪಯೋಗಿಸುವ ಯಾರೇ ಆದರೂ ಸರ್ಕಾರದ ತೀರ್ಮಾನಗಳಿಗೆ ತಲೆ ಬಾಗಲೇ ಬೇಕು.
ಉ: ಆಂಗ್ಲ ಮಾಧ್ಯಮ ಶಾಲೆ
ತಮ್ಮ ಮಾತು ಅಪ್ಪಟ ಸತ್ಯ. ಇದು ಎಲ್ಲ ನಾಗರಿಕರಿಗೂ ಅನ್ವಯವಾಗುವಂಥದು. ಅಂಥದರಲ್ಲಿ ಉದಾರ ಉದ್ದೇಶಕ್ಕಾಗಿಯೋ ಎಂಬಂತೆ ಸಂಸ್ಥೆಯೊಂದನ್ನು ಸ್ಥಾಪಿಸಿಕೊಂಡವರು, ರಾಜ್ಯ ಸರಕಾರದ ಕಾಯ್ದೆಬದ್ಧ ಕಡ್ಡಾಯ ಶಿಕ್ಷಣ ಜವಾಬ್ದಾರಿ ನಿರ್ವಹಿಸುವಲ್ಲಿ ಅದಕ್ಕೆ ಅಡ್ಡಿಯಾಗುವಂತೆ ದುರಹಂಕಾರ ಪ್ರದರ್ಶಿಸುವುದು, ಮೂಢಾತ್ಮರಿಂದ ಲಕ್ಷ-ಲಕ್ಷ ಗೋರಿಹಾಕೊಂಡು ಅಸಂಸ್ಕೃತವಾಗಿ ವರ್ತಿಸುವುದು ಅಸಹ್ಯ ತರುತ್ತದೆ. ವ್ಯವಸ್ಥೆಯ ಬಗ್ಗೆ ತಿಳುವಳಿಕೆ, ಕಾಯ್ದೆ-ಕಾನೂನುಗಳ ಉದತ್ತೆತಯ ಬಗ್ಗೆ ಸ್ಪಂದನಶೀಲತೆ ಮತ್ತು ವಿದ್ಯಾವಂತರಿಗಿರಬೇಕಾದ ವಿನಯಶೀಲತೆ ತಮಗೇ ಇಲ್ಲದವರು ಮಕ್ಕಳಿಗೆ ಇನ್ನೇನನ್ನು ತಾನೇ ಕಲಿಸಿಯಾರು? ಇಂಥವುಗಳನ್ನು ಕೊಬ್ಬಿಸುವ, ಸ್ವಯಂ ಅವಿದ್ಯಾವಂತ ಶ್ರೀಮಂತ ತಾಯ್ತಂದೆಯರ ಬಗ್ಗೆ ಮರುಕವೆನಿಸುತ್ತದೆ!