ಕನ್ನಡದಲ್ಲಿ ಹಿಂದುಸ್ತಾನಿ ಸಂಗೀತ ಸಾಹಿತ್ಯದ ಕೊರತೆ
ಕನ್ನಡದಲ್ಲಿ ಈಗಲೂ ಸಂಗೀತಕ್ಕೆ ಸಂಬಂಧಿಸಿದ ಅದರಲ್ಲೂ ಹಿಂದುಸ್ತಾನಿ ಸಂಗೀತಕ್ಕೆ ಸಂಬಂಧಿಸಿದ ಸಾಹಿತ್ಯದ ಕೊರತೆ ತುಂಬಾ ಇದೆ. ನಾನು ಇತ್ತೀಚೆಗೆ ಹಿಂದುಸ್ತಾನಿ ಬಾನ್ಸುರಿ ಕಲಿಯಲು ಆರಂಭಿಸಿದಾಗ ಈ ವಿಷಯ ಗೊತ್ತಾಯಿತು. ಈ ಬಗ್ಗೆ ನಾನೂ ಈಗ ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಸಂಗೀತ ಸಾಹಿತ್ಯ ರಚನೆಗೆ ಪ್ರಾಥಮಿಕ ತಿಳಿವಳಿಕೆ ಮತ್ತು ಗುರುಗಳ ಸಲಹೆ ಸೂಚನೆಗಳು ಬೇಕೇ ಬೇಕು.
ಕನ್ನಡದಲ್ಲಿ ಹಿಂದುಸ್ತಾನಿ ಸಂಗೀತದ ಬಗ್ಗೆ ಇರುವ ಸಾಹಿತ್ಯದ ಬಗ್ಗೆ ನನಗೆ ಹೆಚ್ಚು ಮಾಹಿತಿಯನ್ನು ಯಾರಾದರೂ ತಿಳಿಸಿದರೆ ತುಂಬ ಒಳ್ಳೆಯದು. ಈ ಬಗ್ಗೆ ಈ ವೇದಿಕೆಯಲ್ಲಿ ಹೆಚ್ಚೆಚ್ಚು ಚರ್ಚಿಸೋಣ ಆಲ್ಲವೆ?

- Login or register to post comments
- 1610 hits
- Email this forum




RSS:
ಸಂಗೀತಕ್ಕಾಗಿ ಸಾಹಿತ್ಯ ಎಂದರೇನು?
ಬೇಲೂರು ಸುದರ್ಶನರೇ,
ಹಿಂದೂಸ್ತಾನಿ (ಹಿಂದೂಸ್ಥಾನಿ?) ಸಂಗೀತಕ್ಕಾಗಿ ಸಾಹಿತ್ಯ ಎಂದರೇನೆಂದು ತಿಳಿಯಲಿಲ್ಲ. ಕ್ಷಮಿಸಿ, ನನಗೆ ಈ ವಿಷಯದಲ್ಲಿ ಹೆಚ್ಚಿಗೆ ತಿಳಿಯದು. ನನ್ನ ಅಭಿಪ್ರಾಯದಲ್ಲಿ ಯಾವುದೇ ಛಂದಸ್ಸಿನ ಚೌಕಟ್ಟಿನೊಳಗೆ ಬರೆಯಲ್ಪಟ್ಟ ಕವಿತೆ ಅಥವಾ ಕಿರುಗವಿತೆಯನ್ನು ಸಂಗೀತಕ್ಕೆ ಅಳವಡಿಸಬಹುದೆಂದುಕೊಂಡಿದ್ದೇನೆ. ಉದಾಹರಣೆಗೆ ಪಂ.ಭೀಮಸೇನ ಜೋಶಿಯವರು ಪುರಂದರದಾಸರ ಕೀರ್ತನೆಗಳನ್ನು ಹಾಡಿದ್ದಾರೆ. ಹಾಗೆಯೇ ಕೆಲ ವಚನಗಳನ್ನು ಬೇರೆ ಗಾಯಕರು ಹಾಡಿದ್ದನ್ನು ಕೇಳಿದ್ದೇನೆ.
ಸಂಗೀತಶಾಸ್ತ್ರದ ಮೇಲಿನ ಸಾಹಿತ್ಯ ಬೇಕಿದೆ
ಪ್ರಿಯ ಪ್ರಶಾಂತರವರೆ,
ನನ್ನ ವಿಚಾರಕ್ಕೆ ನೀವು ಕೂಡಲೇ ಸ್ಪಂದಿಸಿದ್ದು ಒಳ್ಳೆಯದಾಯಿತು. ನನ್ನ ಚರ್ಚೆಯ ಉದ್ದೇಶ ಇದು: ಹಿಂದುಸ್ತಾನಿ ಪದ್ಧತಿಯಲ್ಲಿ ಸಂಗೀತವನ್ನು ಹಾಡುವುದಲ್ಲ; ಹಿಂದುಸ್ತಾನಿ ಸಂಗೀತದ ಕಲಿಕೆಯ ಬಗ್ಗೆ ಇರಬೇಕಾದ ಕನ್ನಡದ ಪುಸ್ತಕಗಳು. ಉದಾಹರಣೆಗೆ : ಸ್ವರ ಮಾತಾ ಲಯ ಪಿತಾ ಎಂಬ ಪುಸ್ತಕವು ಹಾರ್ಮೋನಿಯಂ ಮತ್ತು ತಬಲಾ ಕಲಿಯಲು ಆನುಕೂಲಕರ. ಹೀಗೆ ಇನ್ನೂ ಉತ್ಕೃಷ್ಟವಾದ,ಶಾಸ್ತ್ರೀಯವಾದ ಪುಸ್ತಕಗಳು ಬಂದಿಲ್ಲ ಎಂಬುದು ನನ್ನ ಆಭಿಮತ.
ನೀವು ಈ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದರೆ ತುಂಬಾ ಸಂತೋಷ.
ಹಿಂದುಸ್ತಾನಿ ಸಂಗೀತ
ಪುಸ್ತಕಗಳಿಲ್ಲವೆ? ಅವುಗಳ ಬಗ್ಗೆ ಬರವಣಿಗೆ ಇಲ್ಲವೆ? ತೊಂದರೆ ಇಲ್ಲ. ನಾವುಗಳೇ ಅಂಥವನ್ನು ಹುಟ್ಟುಹಾಕೋಣ
ವಿಕಿಪೀಡಿಯದಲ್ಲಿರುವ ಹಿಂದುಸ್ತಾನಿ ಸಂಗೀತದ ಬಗೆಗಿನ ಲೇಖನ ನೋಡಿ. ಇಂತದ್ದೇ ಲೇಖನಗಳನ್ನು ವಿಕಿಯಲ್ಲಿ ತೆರೆದು ಶಾಸ್ತ್ರೀಯ ಸಂಗೀತದ ಬಗ್ಗೆ ಬರೆದು ಕಲೆಗೂಡಿಸಬಹುದು. ತಿಳಿದವರು ತಮಗೆ ತಿಳಿದ ಮಾಹಿತಿ ಸೇರಿಸುವರು. ಏನಂತೀರಿ?
--
"ಹೊಸ ಚಿಗುರು, ಹಳೆ ಬೇರು"
ನಾನೂ ಪ್ರಯತ್ನಿಸುತ್ತಿದ್ದೇನೆ
ನಾನು ಈಗ ಹಿಂದುಸ್ತಾನಿ ಸಂಗೀತದ ಬಗ್ಗೆ ಹೆಚ್ಚು ಓದಲು ಆರಂಭಿಸಿದ್ದೇನೆ. ಹೀಗಾಗಿ ಈ ಬಗ್ಗೆ ಹಿಂದಿಯಲ್ಲಿ ಮತ್ತು ಇಂಗ್ಲಿಶಿನಲ್ಲಿ ಬಂದಿರುವ ಸಾಹಿತ್ಯಗಳನ್ನು ಕಲೆ ಹಾಕುತ್ತಿದ್ದೇನೆ. ಬಹುಶಃ ಇನ್ನೊಂದೆರಡು ವರ್ಷಗಳಲ್ಲಿ ನಾನೂ ಹಿಂದುಸ್ತಾನಿ ಸಂಗೀತದ ಬಗ್ಗೆ ಏನಾದರೂ ಬರೆಯಬಹುದು!
ಕನ್ನಡ ವಿಕಿಪೀಡಿಯಾದಲ್ಲಿ ಇರುವ ಮಾಹಿತಿ ಒಳ್ಳೆಯ ಆರಂಭ ಎನ್ನಬಹುದು. ಆದರೆ ಹೀಗೆ ಉಚಿತವಾಗಿ ಮಾಹಿತಿ ಹಂಚಲೂ ಸಾಕಷ್ಟು ಸಿದ್ಧತೆ ಬೇಕು; ಸಮಯ ಬೇಕು; ವಿಷಯವೂ ಸರಿಯಾಗಿರಬೇಕು.
ಹಾಗೇನಿಲ್ಲ
ಹಾಗೇನಿಲ್ಲ. ನಿಮಗೆ ಗೊತ್ತಿದ್ದನ್ನು ಅಲ್ಲಿ ಕಲೆ ಹಾಕುತ್ತಾ ಹೋಗಿ. ತಪ್ಪಿದ್ದಲ್ಲಿ ತಿಳಿದವರು ಅದನ್ನು ಸರಿಪಡಿಸುವರು. ನಿಮಗಾದ ಸಮಯದಲ್ಲಿ ಆದದ್ದನ್ನು ಸೇರಿಸಿ. ನೀವು ಬರೆದದ್ದು ಭವಿಷ್ಯದಲ್ಲಿ ಹಲವರಿಗೆ ಉಪಯೋಗವಾಗುವಂತಹ ವಸ್ತುವಾಗಬಹುದು!
--
"ಹೊಸ ಚಿಗುರು, ಹಳೆ ಬೇರು"
ಹಾಗೇನಿಲ್ಲವೆ?
ಬರೆಯಲು ತುಂಬಾ ಸಿದ್ಧತೆ ಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಬರೆಯುವಾಗ ಜವಾಬ್ದಾರಿ ಹೆಚ್ಚಿರುತ್ತದೆ. ಅದರಲ್ಲೂ ಈಗಿನ ದಿನಮಾನದಲ್ಲಿ ಹೊಸ ಪೀಳಿಗೆಯವರು ಬರೆದದ್ದನ್ನೆಲ್ಲ ಸತ್ಯ ಎಂದು ತಿಳಿದುಕೊಳ್ಳುತ್ತಿರುವಾಗ ನಮ್ಮ ಹೊಣೆಗಾರಿಕೆ ಹೆಚ್ಚಿನದು. ಇಂದು ಪತ್ರಿಕೋದ್ಯಮದಲ್ಲಿ ರನ್ ಆನ್ ರೂಪದಲ್ಲಿ ಬರೆದದ್ದೆಲ್ಲ ಆಂಕಣ, ಕಟ್ ಮಾಡಿದ್ದೆಲ್ಲ ಕಾವ್ಯ ಎಂಬಂತಾಗಿದೆ. ಈ ಚಾಳಿ ಬ್ಲಾಗ್‌ಗೂ ಬರುವುದನ್ನು ತಪ್ಪಿಸಲಾಗದು. ಆದರೆ ಕನ್ನಡದ ಬ್ಲಾಗ್‌ನ ಈ ಆರಂಭದ ದಿನಗಳಲ್ಲಿ ನಮ್ಮ ಹೊಣೆಗಾರಿಕೆ ಕೊಂಚ ಹೆಚ್ಚಲ್ಲವೆ?
ಕ್ಷಮಿಸಿ, ಸಂಗೀತದ ಚರ್ಚೆಯಲ್ಲಿ ಈ ಮಾತು ಬರೆದೆ. ನಾನು ಸಂಗೀತವನ್ನು ಅಭ್ಯಾಸ ಮಾಡಲು ಆರಂಭಿಸಿದ ಮೇಲೆ ಆಳವಾದ ತಿಳಿವಳಿಕೆ ಏನು ಎಂಬ ಅರಿವಾಗುತ್ತಿದೆ. "ನಾನು ಬರೆದದ್ದೆಲ್ಲ ಟ್ರಾಶ್' ಎಂದು ರಾಜೀವ ತಾರಾನಾಥರು ನಮ್ಮೆದುರು ಕಳೆದ ವರ್ಷ ಹೇಳಿದ್ದು ನೆನಪಾಗುತ್ತದೆ.
ಬರೆಯುವಾಗ ಹೊಣೆಗಾರಿಕೆ ಹೆಚ್ಚು
ಬೇಳೂರು ಸುದರ್ಶನ ಅವರ ಮಾತುಗಳನ್ನು ಬೆಂಬಲಿಸುತ್ತೇನೆ. ಬರೆಯುವವರಿಗೆ ಹೊಣೆಗಾರಿಕೆ ಹೆಚ್ಚು. ಸರಿಯಾದ ಆದ್ಯಯನವಿಲ್ಲದೆ ಬರೆಯಬಾರದು.
ಸಿಗೋಣ,
ಪವನಜ
-----------
Think globally, Act locally
ಕಾರ್ಟೂನ್!
ಪವನಜರೆ, ನೀವು ಕಾರ್ಟೂನ್ ಆಗಿದ್ದು ಯಾವಾಗ?!!!
ಕನ್ನಡಿಯಲ್ಲಿ ಕಂಡಾತ
>ಪವನಜರೆ, ನೀವು ಕಾರ್ಟೂನ್ ಆಗಿದ್ದು ಯಾವಾಗ?
ಈದಿನ ಕನ್ನಡಿ ನೋಡಿದಾಗ!
ಸಿಗೋಣ,
ಪವನಜ
-----------
Think globally, Act locally
ಇದು ಪ್ರಕಾಶ್ ಶೆಟ್ಟಿ ಅವರ ಕಾರ್ಟೂನಲ್ಲವೇ?
ಪವನಜರೇ ನಿಮ್ಮ ಕಾರ್ಟೂನು ನೋಡಿದಾಗ ಪ್ರಕಾಶ್ ಶೆಟ್ಟಿಯವರು ರಚಿಸಿದ ಹಾಗೆ ಕಾಣುತ್ತದೆ.. ನಿಜವೇ?
ಹೌದು
ಹೌದು. ಇದು ಪ್ರಕಾಶ್ ಶೆಟ್ಟಿಯವರು ರಚಿಸಿದ ಕಾರ್ಟೂನ್.
ಸಿಗೋಣ,
ಪವನಜ
-----------
Think globally, Act locally
ಬೇಲೂರರೆ
ನಿಮ್ಮ ಸಂಗೀತಾಸಕ್ತಿ ನೋಡಿ ಸಂತಸವಾಯಿತು...
ಅದೇ ಕೆಲ್ಸವನ್ನು ನಾನು ಸ್ವಲ್ಪ ಮಟ್ಟಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮಾಡುತ್ತಿರುವೆ...(junior exam pass ಆಗಿದೆ senior portions ಪಾಠ ಆಗಿದೆ).ಸದ್ಯಕ್ಕೆ ಏನೂ ಕಲಿತಾಇಲ್ಲ.
ನೀವು ಎರಡು ಶೈಲಿಯನ್ನೂ ಹೋಲಿಸಿ ಅಭ್ಯಸಿಸುವುದಾದರೆ ನಿಮಗೆ ಕರ್ನಾಟಕ ಸಂಗೀತದಲ್ಲಿ ಒಂದೆರಡು ಪುಸ್ತಕಗಳನ್ನು ಹೇಳುವೆ...
೧. ಶೃತಿ ಲಕ್ಶಣ ಪ್ರಕಾಶಿನಿ-- ರಾಗಗಳ ವಿವರಣೆ ಚೆನ್ನಾಗಿದೆ.. ಓದಿ(ಭೌತಶಾಸ್ತ್ರ ಬಲ್ಲವರಾದರೆ ಮತ್ತೂ ಒಳ್ಳೆಯದು)
೨. ಸಂಪೂರ್ಣ ವಿವರ ಬೇಕೆಂದರೆ...ಕರ್ಣಾಟಕ ಸಂಗಿತ ದೀಪಿಕೆ ಪರವಾಗಿಲ್ಲ(ಹೀಗೆ ಸುಮರು ಇವೆ ಇವುಗಳಲ್ಲಿ)..
ಮೊನ್ನೆ ಮೊನ್ನೆ ವೀಣಾ ಅಂತ ಒಂದು ಬಿಡುಗಡೆಯಾಯ್ತು ನೋಡಿ...
ಹಿಂದೂಸ್ತಾನಿ ಗೆಳೆಯರು ಅನೇಕರಿದ್ದಾರೆ..ಕೇಳಿ ತಿಳಿಸುವೆ....
ಒಳ್ಳೆಯ ಚರ್ಚೆ ಪ್ರಾರಂಭಿಸಿದ್ದಕ್ಕೆ ಧನ್ಯವಾದಗಳು
--ಶ್ರೀಶ ಕಾರಂತ
ನಿಜ
ನಿಮ್ಮನ್ನು ನೋಡೋದಕ್ಕಿಂತ ಕಾರ್ಟೂನೇ ವಾಸಿ!!!
ಇರಲಿ, ಸಂಗೀತದ ಚರ್ಚೆ ಮಾಡೋಣ. ನೀವು ಕೊಟ್ಟ ಪುಸ್ತಕ - ಟೈಪೋಗ್ರಫಿ ಮೇಲಿನದು... ಅದರಲ್ಲಿ ಸಂಗೀತದ ಹಲವು ಸಂಗತಿಗಳಿವೆ. ತುಂಬಾ ಧನ್ಯವಾದಗಳು.
Re: ನಾನು ಹಿಂದುಸ್ತಾನಿ ಸಂಗೀತದ ಬಗ್ಗೆ ಹೆಚ್ಚು ಓದಲು ಆರಂಭಿಸಿದ್ದೇನೆ !
ರಾಜಶೇಕರ್ ಮನ್ಸೂರ್, ಮುಂಬೈಗೆ ಬರುತ್ತಿದ್ದಾರೆ. ಗಂಗೂಬಾಯಿ ಹಾನಗಲ್ ರವರನ್ನು ಸಂಪರ್ಕಿಸಿ. ಮೊದಲು 'ವಿಕಿಪೀಡಿಯ'ದಲ್ಲಿ ವಿಷಯ ಸಂಗ್ರಹಮಾಡಿ. ಮನಸ್ಸಿದ್ದಲ್ಲಿ ಮಾರ್ಗ. ಈಗ ಶುರುಮಾಡುವ ಆಲೊಚನೆಸರಿಯಾಗಿದೆ. ನಿಮ್ಮ 'ವಿದ್ವತ್ಪೂರ್ಣ ಲೇಖನ'ವನ್ನು ನಿರೀಕ್ಷಿಸೋಣವೇ.... ? ?
Ceers, Good luck ! All the best....
ವೆಂ.
ಪ್ರಯತ್ನಿಸುತ್ತೇನೆ
ಓಹ್! ನಾನು ತಪ್ಪಾಗಿ ಭಾವಿಸಿದೆ. ಹಿಂದುಸ್ತಾನಿ ಸಂಗೀತದ ಕಲಿಕೆಯ ಬಗ್ಗೆ ಇರಬೇಕಾದ ಕನ್ನಡದ ಪುಸ್ತಕಗಳ ಬಗ್ಗೆ ನನಗೆ ತಿಳಿಯದು. ಹಿಂದುಸ್ತಾನಿ ಸಂಗೀತದಲ್ಲಿ ಪರಿಶ್ರಮವಿರುವ ನನ್ನ ಸ್ನೇಹಿತರಲ್ಲಿ ವಿಚಾರಿಸುತ್ತೇನೆ. ಖ್ಯಾತ ಹಾರ್ಮೋನಿಯಂ ಪಟು ಶ್ರೀ ವ್ಯಾಸಮೂರ್ತಿ ಕಟ್ಟಿಯವರು ಮರಾಠಿಯಲ್ಲಿ ಭಾತ್ಕಂಡೆ ಎಂಬವರು ಬರೆದಿರುವ ಪುಸ್ತಕಗಳ ಬಗ್ಗೆ ಪ್ರಸ್ತಾಪ ಮಾಡಿದ್ದು ಗೊತ್ತು. ಅವುಗಳ ಕನ್ನಡ ಅನುವಾದ ಸಿಗಬಹುದೇ ಅಥವಾ ಕನ್ನಡದಲ್ಲೇ ಬರೆದಿರುವ ಪುಸ್ತಕಗಳೇನಾದರೂ ಇವೆಯೇ ಎಂದು ವಿಚಾರಿಸುತ್ತೇನೆ.
ಹುಡುಕಾಟ ನಡೆಸೋಣ
ಶ್ರೀ ಭಾತಖಂಡೆಯವರ ಪುಸ್ತಕವನ್ನು ಓದಲು ನನಗೆ ಗುರುಗಳು ನೀಡಿದ್ದಾರೆ. ಈ ಪುಸ್ತಕಗಳು ನಿಜಕ್ಕೂ ಚೆನ್ನಾಗಿವೆ. ಆದರೆ ಹಿಂದುಸ್ತಾನಿ ಸಂಗೀತವು ಈಗಲೂ ಬೆಳೆಯುತ್ತಿರುವ ಸಂಗೀತ ಪ್ರಕಾರ. ಆದ್ದರಿಂದ ಇಂದಿನ ಕಾಲಮಾನಕ್ಕೆ ತಕ್ಕಂತೆ, ಬದಲಾವಣೆಗಳಿಗೆ ತಕ್ಕಂತೆ ಮಾಹಿತಿ ಸಿಗಬೇಕಿದೆ. ಆದ್ದರಿಂದಲೇ ಈ ಬಗ್ಗೆ ಹುಡುಕಾಟ ಹೆಚ್ಚಬೇಕಿದೆ.
ಸಂಗೀತ - ಸಾಹಿತ್ಯ
ಪ್ರಶಾಂತ್ ರವರೇ
ನೀವು ಹೇಳ್ಳುತ್ತಿರುವ ಸಾಹಿತ್ಯ.. ದೇವರ ನಾಮಗಳದ್ದು.
ಸಂಗೀತದ ಸಾಹಿತ್ಯದಲ್ಲಿ ಕೀರ್ತನೆಗಳು ಬಲು ಮುಖ್ಯವಾದದ್ದು.
ಇವುಗಳಲ್ಲಿ ಕೇವಲ ಸಾಹಿತ್ಯವಲ್ಲ, ಚಿಟ್ಟೆ ಸ್ವರ, ಎತ್ತುಗಡೆ ಸ್ವರ.. ಎಂಬಂತೆಲ್ಲಾ ವಿಭಾಗಗಳಿರುತ್ತವೆ.
ತ್ಯಾಗರಾಜರು ರಚಿಸಿರುವ ಕೀರ್ತನೆಗಳು ಹೆಚ್ಚು ಜನಪ್ರಿಯವಾದವು. ಈ ಪ್ರಕಾರದ ಸಾಹಿತ್ಯಗಳಿಗೆ ಅವರೇ ರಾಗ,ತಾಳ ಗಳನ್ನು ಹಾಕಿದ್ದಾರೆ.
ಆದರೆ ದಾಸರ ದೇವರನಾಮಗಳಿಗೆ ಸಂಗೀತಗಾರರು ಬೇರೆ ಬೇರೆ ರಾಗಗಳನ್ನು ಹಾಕಿರುತ್ತಾರೆ.
ಸಂಗೀತದ ಸಾಹಿತ್ಯವೆಂದರೆ ಸಂಗೀತಕ್ಕಾಗಿಯೆ ರಚಿಸಿರುವಂಥದ್ದು.
ಮಾಹಿತಿ -ಅನನ್ಯ
ನಿಮಗೆ ಬೇಕಿದ್ದರೆ ನಾನು ಕೆಲವು ಸ೦ಗೀತಗಾರರ ಪರಿಚಯವನ್ನು ಮಾಡಿಸುತ್ತೇನೆ.
ಆದರೆ ನಿಮಗೆ ಈ ವಿಷಯದಲ್ಲಿ ಮಾಹಿತಿ ಬೇಕಿದ್ದರೆ - ಇಲ್ಲಿ ಸ೦ಪರ್ಕಿಸಿ
http://www.ananyaculture.org/
ನನಗೆ ರಾಘವೇಂದ್ರರಾವ್ ಪರಿಚಯವಿದೆ
ನನಗೆ ಅನನ್ಯದ ಶ್ರೀ ರಾಘವೇಂದ್ರರಾವ್ ಪರಿಚಯವಿದೆ. ನಾನು ಅವರ ಚಟುವಟಿಕೆಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದೇನೆ.