ಎಲ್ಲೆಡೆ ಈಗ ಮ೦ಗಳೂರಿನಲ್ಲಿ ನಡೆದ ದಾಳಿಯದೆ ಸುದ್ದಿಗಳು, ಪ್ರತಿಭಟನೆಗಳು, ಚರ್ಚೆಗಳು ನಡೆಯುತ್ತಿವೆ. ಈ ಘಟನೆಗೆ ಸ೦ಬ೦ಧಿಸಿದ೦ತೆ ಯಾರದು ಸರಿ? ಯಾರದು ತಪ್ಪು ಎ೦ದು ತಮ್ಮ ಅಭಿಪ್ರಾಯಗಳನ್ನು ಹ೦ಚಿಕೊಳ್ಲಿ.
೧. ಮೊದಲನೆಯದಾಗಿ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಲಲು ಬ೦ದಿದ್ದ ವಿದ್ಯಾರ್ಥಿಗಳು ಅವರು ಧರಿಸಿದ್ದ ಮೈ ಕಾಣುವ೦ತೆ ಬಟ್ಟೆ ತೊಟ್ಟು ಮದ್ಯ ಕುಡಿದು ಆಚರಣೆ ಮಾಡಿದ್ದು ಸರಿಯಾ ತಪ್ಪಾ?
೨. ಸರಿಯಾದ ಮಾಹಿತಿ ಇಲ್ಲದೆ ಎಕಾ ಎಕಿ ದಾಳಿ ಮಾಡಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ದಾಳಿಕೋರರ ದಾಳಿ ಸರಿಯಾ ತಪ್ಪಾ?
೩. ಆ ಘಟನೆ ನಡೆಯುವ ಮಾಹಿತಿ ಮು೦ಚೆಯೇ ಯಾರೋ ತಿಳಿಸಿದ ಹಾಗೆ ಸರಿಯಾದ ಸಮಯಕ್ಕೆ ಅಲ್ಲಿಗೆ ಬ೦ದ ಮಾಧ್ಯಮದವರು ದಾಳಿಯನ್ನು ತಡೆಯದೆ ಚಿತ್ರೀಕರಣ ಮಾಡಿದ್ದು ಸರಿಯಾ ತಪ್ಪಾ?
೪. ಮೊನ್ನೆ ಮೊನ್ನೆ ರೈಲಿನಲ್ಲಿ ಒ೦ದು ಹುಡುಗಿಯನ್ನು ನಾಲ್ಕು ಜನ ಮುಸ್ಲಿ೦ ಹುಡುಗರು ಚುಡಾಯಿಸಿ ಅವಳನ್ನು ರೈಲಿನಿ೦ದ ಆಚೆ ತಳ್ಲಿದಾಗ ಸಿಡಿಳೇಳದ ಕೋಮುವಾದಿ ಸ೦ಘಟನೆಗಳು ಈಗ ಎದ್ದಿರುವುದು ಸರಿಯಾ ತಪ್ಪಾ?
ವಿ.ಸೂಃ ಇಲ್ಲಿ ನಾನು ಯಾರನ್ನೂ ಸಮರ್ಥಿಸಿಕೊಳ್ಲುತ್ತಿಲ್ಲ. ಘಟನೆಯ ಬಗ್ಗೆ ಪಾರದರ್ಶಕವಾದ ಚರ್ಚೆ ನಡೆಯಲಿ.









ಉ: ಯಾರು ಸರಿ? ಯಾರು ತಪ್ಪು?@ಜಯಂತ್ ಅವ್ರೆ
ಜಯಂತ್ ಅವ್ರೆ
ನಾ ನೀವ್ ಕಂಡೀರೊ ಹಾಗೆ ಚ್ಹರ್ಚ್ಹೇ ವಿಭಾಗದಲ್ಲಿ ಪ್ರತಿಕ್ರಿಯಿಸುವವರು ಕಡಿಮೆ ಅಥವ ಇಲ್ಲವೇ ಇಲ್ಲ...:(:((
ಅದ್ಕೆ ಕಾರಣ(ನನಗೆ ಅನ್ನಿಸಿದ ಹಾಗೆ) : ಏನಾರ ಅಪ್ರಿಯವಾದುದನ್ನ ಹೇಳಿದರೆ ಕೆಲವರಿಗೆ ಇಸ್ಟ ಆಗದೆ ಇರಬಹುದು ಅಂತ, ಸುಮ್ಮನೇ ಯಾಕೆ ನಿಸ್ಟುರ ಕಟ್ಟಿಕೊಳ್ಳುವುದು ಅಂತ...!
ನೀವ್ ಹೇಳಿದ ಆ ಘಟನೆ ಬಗ್ಗೆ ನಾ ಪತ್ರಿಕೆಗಳಲ್ಲಿ ಓದಿರುವೆ..
ಪೂರ್ಣ ಮಾಹಿತಿ ನಿಮ್ಮಂತೆ ನನಗೂ ಇಲ್ಲ...
ಆದರೆ ನಂಗೆ ಅನ್ನಿಸಿದ ಹಾಗೆ...
ಒಂದು ವೇಳೆ ಅಲ್ಲಿ ಕೆಟ್ಟದ್ದು ಎನದರೂ ನಡೆದಿದ್ದರೆ ಅದಕಿಂಯತ ಕೆಟ್ಟದ್ದು ಈ ಜನ ಕೆಲ ಹೆಣ್ಣು ಹುಡುಗಿಯರ ಬಟ್ಟೆ ಎಳೆದು ಹರಿದು ಅವಮಾನ ಮಾಡಿದ್ದು...
ಇನ್ನು ಆ ತರಹದ ಪಾರ್ಟಿ ಇತ್ಯಾದಿ ಮಾಡುವ ಹುಡುಗ ಹುಡುಗಿಯರು ಒಮ್ಮೆ ನಮ್ಮ ದೇಶದ ಭವ್ಯ ಇತಿಹಾಸ ,ಪರಂಪರೆ,ನಾಡು ನುಡಿಗಾಗಿ ಮಡಿದವರನ್ನೊಮ್ಮೆ ನೆನಪಿಸಿಕೊಳ್ಳಬೇಕು,,,
ಮೋದ,ಅಮೋದ,ಪ್ರಮೋದಗಳಲ್ಲಿ ಮೈ ಮರೆತು ಕಾಲ ಕಳೆವ ಈಗಿನ ಯುವಕ ಯುವತಿಯರಿಗೆ ಮಾರ್ಗದರ್ಶನದ ಅವಶ್ಯಕತೆ ಇದೆ....
ಇಲವಾದರೆ ಭವಿಶ್ಯದ ಭವ್ಯ ಪ್ರಜೆಗಳು....:(( ಮತ್ತು ದೇಶದ ಭವಿಶ್ಯ....:((
ಸಕಾಲಿಕ ಬರಹ..
\|/
ಉ: ಯಾರು ಸರಿ? ಯಾರು ತಪ್ಪು?@ಜಯಂತ್ ಅವ್ರೆ
ಸಪ್ತಗಿರಿ ಅವರೇ ಕೆಲವೇ ದಿನಗಳ ಅ೦ತರದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಹೆಣ್ಣು ಎನ್ನುವ ಜೀವದ ಮೇಲೆ ದೌರ್ಜನ್ಯ ನಡೆದಿದೆ. ಇಲ್ಲಿ ನನಗೆ ಆಶ್ಚರ್ಯ ಎ೦ದರೆ ಮೊದಲನೆ ಘಟನೆಯ ಬಗ್ಗೆ ಯಾರೊಬ್ಬರೂ ಚಕಾರ ಎತ್ತದೆ ಎರಡನೆ ಘಟನೆಯ ಬಗ್ಗೆ ಮಾತ್ರ ಜನ ಯಾಕಿಷ್ಟು ಸಾಮಾಜಿಕ ಕಳಕಳಿ ಇರುವವರೆ೦ಬ೦ತೆ ಒದ್ದಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ.
ಉ: ಯಾರು ಸರಿ? ಯಾರು ತಪ್ಪು?@ಜಯಂತ್ ಅವ್ರೆ
ಮೊದಲನೆಯದು ಮಂಡ್ಯದ ಹತ್ತಿರ ನಡೆಯಿತು
ಎರಡನೆಯದು ಮಂಗಳೂರಿನ ಹತ್ತಿರ ಅದಕ್ಕೆ !
ಮೊದಲನೆಯದರಲ್ಲಿ ಮುಸ್ಲಿಂ ಹುಡುಗರಿದ್ದರು
ಎರಡನೆಯದರಲ್ಲಿ ಹಿಂದು ಹುಡುಗರಿದ್ದರು ಅದಕ್ಕೆ
ಮೊದಲನೆಯದು ಯಾವುದೆ ಪ್ಲಾನ್ ಇಲ್ಲದ ಸಹಜ ಘಟನೆ
ಎರಡನೆಯದು ಪ್ಲಾನ್ ಮಾಡಿ ನಡೆಸಿದ ಘಟನೆ ಅದಕ್ಕ
ಮೊದಲನೆಯದು ರಾಜಕೀಯ ಬೆರೆಯದ ಅಪರಾದ
ಎರಡನೆಯದು ರಾಜಕೀಯ ಬೆರೆತ ಅಪರಾದ ಅದಕ್ಕೆ
ಈ ರೀತಿ ಹಲವು ಕಾರಣ ಕೊಡಬಹುದು ಅರ್ಥವಾಯಿತ ಈಗ ಜಯಂತ್
ಬಿಟಾಕ್ಕಿ ಅದನ್ನೆಲ್ಲ ತಲೆಕೆಡಸಿಕೊಳ್ಳದಿರಿ
ಇದೆಲ್ಲ ಎಂದು ಮುಗಿಯದ ಕತೆಗಳು
ಮುಗಿಸಲು ಸಹ ಯಾರಿಗು ಇಷ್ಟವಿಲ್ಲ
ನಿಮ್ಮ ಕನ್ನಡ ಸಾಹಿತ್ಯ ಸೇವೆಯತ್ತ ಗಮನ ಕೊಡಿ
:))))
ಉ: ಯಾರು ಸರಿ? ಯಾರು ತಪ್ಪು?@ಜಯಂತ್ ಅವ್ರೆ
<<ಬಿಟಾಕ್ಕಿ ಅದನ್ನೆಲ್ಲ ತಲೆಕೆಡಸಿಕೊಳ್ಳದಿರಿ
ಇದೆಲ್ಲ ಎಂದು ಮುಗಿಯದ ಕತೆಗಳು
ಮುಗಿಸಲು ಸಹ ಯಾರಿಗು ಇಷ್ಟವಿಲ್ಲ>>
ಪಾರ್ಥಸಾರಥಿಯವರೇ ನಾನು ಸಾಧ್ಯವಾದಷ್ಟು ಇ೦ಥಹ ವಿಷಯಗಳಿ೦ದ ದೂರವಿರುತ್ತೇನೆ. ಆದರೆ ಕೆಲವೊಮ್ಮೆ ಮಾತಾಡಬೇಕು ಎನಿಸುತ್ತದೆ.
ಉ: ಯಾರು ಸರಿ? ಯಾರು ತಪ್ಪು?@ಜಯಂತ್ ಅವ್ರೆ
ಸಪ್ತಗಿರಿವಾಸರೇ,
ನಮ್ಮ ಆತ್ಮಸಾಕ್ಷಿಗೆ ಸಮ್ಮತವಾದ ’ಸತ್ಯ’ ಹೇಳುವುದಕ್ಕೆ ಮುಲಾಜೇಕೆ? ನಾವು ನಂಬಿದ ’ಸತ್ಯ’ಕ್ಕಾಗಿ ನಾಲ್ಕು ಜನರ ನಿಷ್ಠುರ ಕಟ್ಟಿಕೊಳ್ಳುವಷ್ಟಾದರೂ ’ಬಲಿದಾನ’ ಬೇಡವೇ? ತಮ್ಮಥವರು ಆಕ್ಷೇಪಿಸದಿದ್ದರೆ ನನ್ನಂಥಾ ’ಚರ್ಚೆ ಬರಹಿಗ’ರು, ’ತಾವು ಹೇಳಿದ್ದೇ ಸತ್ಯ’ ಎಂಬ ಅಜ್ಞಾನದಲ್ಲಿ ಶಾಸ್ವತವಾಗಿ ಇದ್ದುಬಿಡುವುದಿಲ್ಲವೇ? ಅದಿರಲಿ,
ಮಂಗಳೂರಿನಲ್ಲಿ ಹೆಣ್ಣು-ಗಂಡುಗಳಮೇಲೆ ಉನ್ಮಾದದ ಅಸಹ್ಯ ನಡೆಸಿದ ಗೂಂಡಾ ಗುಂಪು ’ಹಿಂದೂ ಜಾಗರಣ ವೇದಿಕೆ’ಯದ್ದಲ್ಲವಂತೆ.ವೇದಿಕೆ ಯಜಮಾನರ ಈ ಹೇಳಿಕೆ ಸಮಾಧಾನ ತಂದಿತು.
ಇನ್ನೊಂದಷ್ಟು ’ಸಾಮಾಜಿಕ ಸತ್ಯ’ವಾಗಿ ಘಟನೆಯನ್ನು (ತಥಾಕಥಿತ) ವಿಶ್ಲೇಷಿಸಲು ಸ್ವಲ್ಪ Space ತೆಗೆದುಕೊಂಡರೆ ಆಕ್ಷೇಪಣೆಯಿಲ್ಲ ತಾನೆ?
ಕಾಮ ಮತ್ತು ಕಾಮೋದ್ರೇಕ ಅಂದರೆ - Sex - ಇಂದಿನ ಸಮಾಜಿಕ-ನೈತಿಕ ಅಧೋಗತಿಗೆ ಅಷ್ಟಾಗಿ ಕಾರಣವಲ್ಲ ಎನಿಸುತ್ತದೆ. ಅದು 19ನೇ ಶತಮಾನ ಮತ್ತು ಇಪ್ಪತ್ತರ ಮೊದಲ ದಶಕಗಳಲ್ಲಿದ್ದ ಭೀತಿ. ಅದಕ್ಕೆ ತಕ್ಕಂತೆ ಕೌಟುಂಬಿಕ, ಸಾಮಾಜಿಕ ಕಟ್ಟು-ಪಾಡುಗಳ ನಿಟ್ಟಿತ್ತು. ಕಾಮ ಸಹಜ. ಅದರ ಸ್ವಚ್ಛಂದತೆಗೂ ಸಹಜ ನಿಯಂತ್ರಣ - ಸೆಲ್ಫ್-ಇನ್ಹಿಬಿಷನ್ - ಇದ್ದೇ ತೀರುತ್ತದೆ, ಕಾಲಮಾನಕ್ಕೆ ತಕ್ಕಂತೆ. ಈಗ ಅದಕ್ಕೆ ಅಂಕುಶ ಹಾಕುವ ಬುದ್ಧಿಗೆಡಿತನ, ಬಹುಶಃ, ಬೇಕಾಗುವುದಿಲ್ಲ!
ಈಗಲಾದರೋ ನಾವು ಹಾಳಾಗುತ್ತಿರುವುದು ಸಾಮಾಜಿಕ ಅಸಮಾನತೆ ಮತ್ತು ಶ್ರೀಮಂತಿಕೆಯ ಉನ್ಮಾದದಿಂದ. ಪುರುಷರ್ಥಗಳ ಪೈಕಿಯ ’ಅರ್ಥ’, ಇದಕ್ಕೆ ಆಧಾರ. ಅದಕ್ಕೆ ಇಂಬು ನೀಡುತ್ತದೆ, ರಾಜಕೀಯ ಅನೈತಿಕತೆ ಮತ್ತು ಅಪ್ರಾಮಾಣಿಕತೆ.
ಪ್ರಾಣಿಕತೆಯಿದ್ದರೆ, ’ಜಾಗರಣ’ ಸಂಘಟನೆಗಳು ಎಚ್ಚರಗೊಳ್ಳಬೇಕಾದ್ದು ಈ ’ಸತ್ಯ’ಕ್ಕೆ. ಹಾಗಲ್ಲದಿದ್ದರೆ ಆಗಿಂದಾಗ್ಗೆ ನಡೆಯುವ ಇಂಥಾ ’ಅಟಾಕ್’ಗಳು; ಪ್ರಚಾರದ ಸ್ಟಂಟ್ ಆಗುತ್ತದೆ; ಅದನ್ನು ಬಿತ್ತರಿಸುವುದೇ ಗತಿಗೆಟ್ಟ ಮಾಧ್ಯಮಗಳ ವೃತ್ತಿಯಾಗುತ್ತದೆ. ಆಗ ದೇಶ, ’ನೀತಿ’ ಎಂಬುದನ್ನು ನೋಡುವುದು ಸಧ್ಯವೇ ಆಗುವುದಿಲ್ಲ!
ಉ: ಯಾರು ಸರಿ? ಯಾರು ತಪ್ಪು?
ತಳಪಾಯ ಭದ್ರವಿಲ್ಲದ ಕಟ್ಟಡಗಳು ಹೇಗಿರಲು ಸಾಧ್ಯ, ಜಯಂತರೇ.
ಉ: ಯಾರು ಸರಿ? ಯಾರು ತಪ್ಪು?
ಕವಿಗಳೇ ನಿಮ್ಮ ಮಾತು ಅಕ್ಷರಶಹ ನಿಜ.
ಉ: ಯಾರು ಸರಿ? ಯಾರು ತಪ್ಪು?
ಜಯಂತ್ ನಿಮ್ಮ ಮೂರನೇ ಪ್ರಶ್ನೆಗೆ ಉತ್ತರ ಆ ವರದಿಗಾರನ ಮಾತಲ್ಲೇ ಕೇಳಿ
ಉ: ಯಾರು ಸರಿ? ಯಾರು ತಪ್ಪು?
ಕು೦ಬ್ಳೆ ಅವರೇ ನನಗೆ ಧ್ವನಿ ಕೇಳುವ ಸೌಲಭ್ಯ ಇಲ್ಲ. ಆದ್ದರಿ೦ದ ಆತನ ಹೇಳಿಕೆಯನ್ನು ನೀವೇ ಹೇಳಿಬಿಡಿ :)
ಉ: ಯಾರು ಸರಿ? ಯಾರು ತಪ್ಪು?
ಕು೦ಬ್ಳೆ ಅವರೇ ಆತನ ಹೇಳಿಕೆ ನೋಡಿದರೆ ಏನು ಹೇಳಬೇಕೋ ಒ೦ದೂ ಗೊತ್ತಾಗುತ್ತಿಲ್ಲ.
ಉ: ಯಾರು ಸರಿ? ಯಾರು ತಪ್ಪು?
ಜಯಂತ್, ಪ್ರತೀ ಘಟನೆಯನ್ನೂ ಧರ್ಮದ ದುರ್ಬೀನಿಂದ ನೋಡುವ ಅಲ್ಪತನವನ್ನು ಸಮಾಜ ಬಿಡುವುದು ಒಳ್ಳೆಯದು. ಮಂಗಳೂರಿನಲ್ಲಿ ನಡೆದ ಆಕ್ರಮಣ, ಅತಿಕ್ರಮಣ ಮತ್ತು ಹಲ್ಲೆಗೂ, ರೈಲಿನಲ್ಲಿ ಅಥವಾ ಬಸ್ಸಿನಲ್ಲಿ ನಡೆಯುವ ಮಹಿಳಾ ಪೀಡನೆಗೂ ಸಂಬಂಧ ಕಲ್ಪಿಸುವುದು ತರವಲ್ಲ. ಸಂಸ್ಕೃತಿಯ ರಕ್ಷಣೆ ಎಂದು ಅಮಾಯಕ ಹೆಣ್ಣು ಮಕ್ಕಳ ಮೇಲೆ ನಡೆದ ಹಲ್ಲೆಯನ್ನು ಸಮರ್ಥಿಸುವ ವರ್ತನೆ ಸರಿಯಲ್ಲ. ಸಂಸ್ಕೃತಿ, ರೀತಿ ರಿವಾಜು ಎಂದು ಜನರ ಮೇಲೆ ಹಲ್ಲೆ ಮಾಡುತ್ತಾ ಪಕ್ಕದ ದೇಶವೊಂದರ ಸಂಘಟನೆಗಳು ಆ ದೇಶಕ್ಕೆ ತಂದ ಹೆಸರು ಎಂಥದ್ದು ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈಗ ವಿಶ್ವ ಆ ದೇಶವನ್ನು banana republic ಎಂದು ಹಾಸ್ಯ ಮಾಡುತ್ತಿದೆ. ಆ ನಾಮಕರಣ ನಮಗೂ ಬೇಕೇ? ಪಬ್ಬು, ರಿಸಾರ್ಟ್ ಗಳ ಮೇಲೆ ಧಾಳಿ ಮಾಡುವ ಪ್ರಕ್ರಿಯೆಗಳು ಮರುಕಳಿಸುತ್ತಿದ್ದರೆ ನಮಗೂ banana republic ಎಂದು ಹಣೆಪಟ್ಟಿ ಅಂಟಿಕೊಳ್ಳುವ ದಿನ ಬಹು ದೂರವಿಲ್ಲ.
ಅರೆ ಬರೆ ಬಟ್ಟೆ ತೊಟ್ಟು ಬಾಟಲಿ ಸಹವಾಸ ಮಾಡುತ್ತಾ ಆಧುನಿಕ ಸಂಸ್ಕೃತಿಯನ್ನು ಅನುಕರಿಸೋದು ನಮ್ಮ ಮಹಾನ್ ಸಂಸ್ಕೃತಿಗೆ ಮಾಡುವ ಅವಮಾನ ಹೌದು. ಆದರೆ ಈ ಹಲ್ಲೆ ಆಕ್ರಮಣಗಳನ್ನು ಪಬ್ ಅಥವಾ ರಿಸಾರ್ಟ್ ಗಳಿಗೇಕೆ ಸೀಮಿತಗೊಳಿಸಬೇಕು? ಎಲ್ಲೆಂದರಲ್ಲಿ ರಾರಾಜಿಸುತ್ತಿರುವ ಮದ್ಯದಂಗಡಿಗಳ ಮೇಲೇಕೆ ಗಮನ ಹೋಗುತ್ತಿಲ್ಲ? ಜೂಜಿನ ಅಡ್ಡಾ ಗಳ ಮೇಲೇಕೆ ಸಂಸ್ಕೃತಿ ರಕ್ಷಕರು ಹರಿಹಾಯುತ್ತಿಲ್ಲ? ಮದ್ಯ ಮತ್ತು ಜೂಜಿನ ಕಾರಣ ಎಷ್ಟು ಮನೆಗಳು ಹಾಳಾಗಿಲ್ಲ? ಎಷ್ಟು ಹೆಣ್ಣುಮಕ್ಕಳ ಬದುಕು ನರಕ ಸದೃಶವಾಗಿಲ್ಲ? call girls ರೀತಿಯ ಹಾವಭಾವ ಪ್ರದರ್ಶಿಸುವ cheer girl ಬಗ್ಗೆ ಏಕೆ ಮೌನ? ಇವು ಮಹಾನ್ ಸಂಸ್ಕೃತಿಗೆ ತಕ್ಕುದಾದ ನಡವಳಿಕೆಗಳೋ? jism , jism 2 ನಂಥ ಚಿತ್ರಗಳ ಮೇಲೇಕೆ ಧಾಳಿ ನಡೆಯುತ್ತಿಲ್ಲ? ಸಂಸ್ಕಾರದ ರಕ್ಷಣೆಯಲ್ಲಿ selective ಮನೋಭಾವ ಏಕೆ?
ಉ: ಯಾರು ಸರಿ? ಯಾರು ತಪ್ಪು?
ಅಬ್ದುಲ್ ಭಾಯ್ ನಾನು ಕಡೆಯಲ್ಲಿ ಹೇಳಿದ್ದನ್ನು ನೀವು ಗಮನಿಸಿಲ್ಲ ಎ೦ದುಕೊಳ್ಳುತ್ತೇನೆ. ನಾನು ಖ೦ಡಿತ ಯಾರನ್ನೂ ಸಮರ್ಥಿಸಿಕೊಳ್ಳುತ್ತಿಲ್ಲ. ನನ್ನ ಪ್ರಶ್ನೆ ಇಷ್ಟೇ ರೈಲಿನಲ್ಲಿ ನಡೆದ ಘಟನೆಗೂ ಮ೦ಗಳೂರಿನ ಘಟನೆಗೂ ಹೆಚ್ಚು ವ್ಯತ್ಯಾಸವಿಲ್ಲ. ಲೆಕ್ಕಕ್ಕೆ ನೋಡಿದರೆ ರೈಲಿನ ಘಟನೆ ಮ೦ಗಳೂರಿನ ಘಟನೆಗಿ೦ತಲೂ ಅಮಾನವೀಯ ಕ್ರುತ್ಯವಾಗಿತ್ತು. ಅ೦ಥದ್ದರಲ್ಲಿ ಮ೦ಗಳೂರಿನ ಘಟನೆಗೆ ಯಾಕಿಷ್ಟು ಬಣ್ಣ ಹಚ್ಚುತ್ತಿದ್ದಾರೆ ಎ೦ದು? ತಪ್ಪು ಯಾರು ಮಾಡಿದರೂ ಅದು ತಪ್ಪು, ಅದು ಯಾವುದೇ ಧರ್ಮದವರಾಗಿರಬಹುದು.
ಇನ್ನು ನೀವು ಎರಡನೆ ಪ್ಯಾರಾದಲ್ಲಿ ಹೇಳಿರುವ ಮಾತು ನಾನು ಒಪ್ಪುತ್ತೇನೆ. ಇಲ್ಲೂ ಒ೦ದು ಅನುಮಾನ ಇ೦ಧಹ ಸಿನಿಮಾಗಳ ಬಗ್ಗೆ ಏಕೆ ಮಹಿಳಾ ಸ೦ಘಟನೆಗಳು ವಿರೋಧ ವ್ಯಕ್ತ ಪಡಿಸುವುದಿಲ್ಲ ಎ೦ದು?
ಉ: ಯಾರು ಸರಿ? ಯಾರು ತಪ್ಪು?
ಜಯಂತ ರಾಮಾಚಾರ ರವರಿಗೆ ವಂದನೆಗಳು
ತಮ್ಮ ಬರಹ ಓದಿದೆ ಇವೆಲ್ಲ ಸಮಾಜ ತಲೆ ತಗ್ಗಿಸುವ ಘಟನೆಗಳು. ದೌರ್ಜ್ಯನ್ಯ ವೆಸಗಿದವರು ಖಂಡಿತ ಶಿಕ್ಷೆಗೆ ಗುರಿಯಾಗಬೇಕು ಅಂದರೆ ಮಾತ್ರ ಇಂತಹ ಪೈಶಾಚಿಕ ಕೃತ್ಯಗಳು ನಿಲ್ಲಲು ಸಾಧ್ಯ.
ಉ: ಯಾರು ಸರಿ? ಯಾರು ತಪ್ಪು?
ನಿಜ ಪಾಟೀಲರೇ ಪಾರದರ್ಶಕವಾದ ತನಿಖೆ ನಡೆಸಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಬೇಕು.
ಉ: ಯಾರು ಸರಿ? ಯಾರು ತಪ್ಪು?
ಎಲ್ಲವೂ ಸರಿ ಎಲ್ಲವೂ ತಪ್ಪು, ಎಲ್ಲವೂ ನಾವೇ ಸೃಷ್ಟಿಸಿಕೊಂಡಿರುವುದು, ಜಯಂತ್