ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||

— ಡಿ ವಿ ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸ೦ನ್ಯಾಸ ಎ೦ದರೆ

ನಾನು ಮೊನ್ನೆ ಶ್ರಿ ರ೦ಗ ಅವರ ಸಾಹಿತಿಯ ಆತ್ಮ ಜಿಜ್ಞಾಸೆ ಓದುತ್ತಿದೆ.
ನಾನು ಓದಿರುವ ಉತ್ತಮ ಪುಸ್ತಕದಲ್ಲಿ ಒ೦ದು.
ಅಲ್ಲಿ ಸ೦ನ್ಯಾಸ ದ ಬಗ್ಗೆ ಈ ಮಾತುಗಳಿದ್ದವು.
************************************************

ಸ೦ನ್ಯಾಸ ಎ೦ದರೆ ಪ್ರಪ೦ಚದಿ೦ದ ನಿವೃತ್ತಿ ಎ೦ಬ ಕಲ್ಪನೆ ನಮ್ಮಲ್ಲಿ
ರೂಢವಾಗಿದೆ.ಈ ಕಾರಣಕ್ಕಾಗಿ ನಮ್ಮ ಸಮಾಜದಲ್ಲಿ ಯೋಗ್ಯತೆಯ
ಮು೦ದಳುಗಳು ಇಲ್ಲದ೦ತವಾಗಿದೆ.ಇದಲ್ಲದೆ ಜೀವನವನ್ನು ಎದುರಿಸಬೇಕಾದ
ನಮ್ಮ ಮನೋವೃತ್ತಿಯೂ ಪೌರುಷ ಹೀನವಾಗಿದೆ.
ಸ೦ನ್ಯಾಸ ಎ೦ದರೆ ಪ್ರಪ೦ಚದಿ೦ದ ನಿವೃತ್ತಿಯೆ ??
ಅಲ್ಲ.
ಸ೦ನ್ಯಾಸ ಎ೦ದರೆ ಪ್ರಪ೦ಚಕ್ಕಾಗಿ ನಿವೃತ್ತಿ.
************************************************************
ನಮ್ಮ ದೇಶದಲ್ಲಿ ಸ೦ನ್ಯಾಸಿಗಳು ಕ೦ಡರೆ ಕಾಲಿಗೆ ಬೀಳುತ್ತಾರೆ.
ಮತ್ತು ಮಠಗಳ ಶಬ್ದ ಕೇಳಿದೊಡನೆ ಓಡಿ ಮೋಕ್ಷವ ಗಿಟ್ಟಿಸಿಕೊಳ್ಳುವ ಜನ ಅವುಗಳಿಗೆ ಉನ್ನತ ಸ್ಥಾನವನ್ನು ಕೊಟ್ಟಿರುವುದು ಸರಿಯೇ ??
ಮಠ ಮತ್ತು ಸ೦ನ್ಯಾಸಿಗಳಿ೦ದ ಸಮಾಜಕ್ಕೆ ಪ್ರಯೋಜನವು೦ಟೇ ??
ಅಥವಾ ಅವು ಕೇವಲ ಪರಲೋಕಕ್ಕೇ ಪಯಣಿಸುವುದಕ್ಕೆ ಟಿಕೇಟ್ ಕೊಡುವ ಸ್ಟಾ೦ಡುಗಳೇನು ??
************************************************************

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಸ೦ನ್ಯಾಸ ಎ೦ದರೆ

ವೈಭವ's picture

ಪುರಂದರ ದಾಸರ ಪದ 'ಈಸಬೇಕು ಇದ್ದು ಜೈಸಬೇಕು...' ಸಂನ್ಯಾಸಕ್ಕೆ ಮಾರುತ್ತರ. ಅಂದರೆ ಲೌಕಿಕವಾದ ಬದುಕಿನಲ್ಲಿ ನುಡಿದಂತೆ ನಡೆದರೆ ಅದಕ್ಕಿಂತ ಒಳ್ಳೆಯ ಸಂನ್ಯಾಸತ್ವವಿಲ್ಲ. ಅರಿವಿನಂತೆ ನಡತೆಯು ಇದ್ದರೆ ಅವನೇ ಐನಾತಿ ಅಸಲಿ ಸಂನ್ಯಾಸಿ

ಉ: ಸ೦ನ್ಯಾಸ ಎ೦ದರೆ

mahesha's picture

ವೈಬವ...

ಸಂನ್ಯಾಸದ ಬಗ್ಗೆ ಹೆಚ್ಚು ತಿಳಿಯಲು, "ಸಾರ್ಥ"ದ ಮಂಡನಮಿಶ್ರ ಮತ್ತು ಶಂಕರಾಚಾರ್ಯರ ವಾದವನ್ನು ಓದಿ.. ಚೆನ್ನಾಗಿದೆ.

"ಸಂನ್ಯಾಸಯೋಗ.. ಶುದ್ಧ ಸತ್ವಾಃ| ತೇ ಬ್ರಹ್ಮಲೋಕೇ ತು ಪರಾಂತ ಕಾಲೇ... "!!
======================================

ಉ:

muralihr's picture

ಅದು ಸರಿ ..ನೀವು ಏನ್ ಹೇಳ್ತೀರಾ ..
ನಾನು ಅದೇ ಹೇಳ್ತೀನಿ ಅ೦ತಿರೋ ??

ಉ:

mahesha's picture

ನಂಗೆ ನಿಂಮ ಮಾತು ತಿಳೀವೊಲ್ದು!
======================================

ಉ: ಸ೦ನ್ಯಾಸ ಎ೦ದರೆ

uniquesupri's picture

ಸಂನ್ಯಾದ ಕಲ್ಪನೆ ನಮ್ಮಲ್ಲಿ ಬಹಳ ಮಟ್ಟಿಗೆ ಕಲಬೆರಕೆಗೆ ಒಳಗಾಗಿದೆ. ಲೋಕ ವ್ಯವಹಾರದಿಂದ ನಿವೃತ್ತಿ ಸಂನ್ಯಾಸವಾಗಲಾರದು. ಲೋಕ ವ್ಯವಹಾರಗಳ ಮೇಲಿನ ಮೋಹ, ಅವಲಂಬನೆಯಿಂದ ನಿವೃತ್ತರಾಗೋದು ಸಂನ್ಯಾಸದ ಗುರಿಯಿರಬಹುದು. ಸಂನ್ಯಾಸ ಜೀವ ವಿರೋಧಿಯಾಗಬಾರದು.

****************************************************************************** 

  ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.