ಕೃತಕ ಬುದ್ಧಿಮತ್ತೆ ಬಳಸಿ ಸೈಬರ್ ಅವಳಿ
artificial intelligence ಬಗ್ಗೆ ಗೊತ್ತು ತಾನೇ? ಕೃತಕ ಬುದ್ಧಿಮತ್ತೆ ಬಳಸಿ,ನಿಮ್ಮಂತೆ ಯೋಚಿಸಿ,ಸಂಭಾಷಿಸುವ ನಿಮ್ಮ ಸೈಬರ್ ಅವಳಿ ರೂಪಿಸಲು ಸಂಶೋಧಕರು ಸಫಲರಾಗಿದ್ದಾರೆ. ಆ ಬಗ್ಗೆ ಸುಧೀಂದ್ರರ ಲೇಖನ ಓದಿ. AIಗೆ ಕೃತಕ ಬುದ್ಧಿಮತ್ತೆ ಅಲ್ಲದೆ ಬೇರೆ ಸೂಕ್ತ ಪದ ಇದೆಯೇ?

- Login or register to post comments
- 492 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಕೃತಕ ಬುದ್ಧಿಮತ್ತೆ ಬಳಸಿ ಸೈಬರ್ ಅವಳಿ
ಅಶೋಕ್‌ಕುಮಾರ್ ನೀವು ನೀಡಿದ ಲಿಂಕಿನಿಂದ ಸುದ್ಧಿಯನ್ನು ನೇರವಾಗಿ ಓದಲು ಆಗುತ್ತಿರಲಿಲ್ಲ. ಆದ್ದರಿಂದ ಓದುಗರಿಗೆ ಅನುಕೂಲವಾಗಲೆಂದು ಸುಧೀಂದ್ರ ಅವರ ಲೇಖನಕ್ಕೆ ನೇರವಾದ ಲಿಂಕ್ ನೀಡುತ್ತಿದ್ದೇನೆ. ಸೈಬರ್ ಅವಳಿ - ಹರಟಿದರೆ ನಿಮಗಿಲ್ಲಿ ಬವಳಿ!
AIಗೆ ಕೃತಕ ಬುದ್ಧಿಮತ್ತೆ ಅಲ್ಲದೆ ಬೇರೆ ಸೂಕ್ತ ಪದ ಇದೆಯೇ? ಎಂಬುದಾಗಿ ನೀವು ಕೇಳಿದ ಮೇಲೆ ಇದರ ಬಗ್ಗೆ ಓವಿ ತಲೆಕೆಡಿಸಿಕೊಂಡಿದ್ದೆ. ಈ ದಿನ ಆಫೀಸಿನಿಂದ ಮನೆಗೆ ಬರುವಾಗ ಒಬ್ಬರು ತಾತ ಊರುಗೋಲಿನ ನೆರವಿನಿಂದ ನಡೆಯುತ್ತಿದ್ದರು. ಆಗ ನನಗೆ ಒಂದು ವಿಷಯ ಹೊಳಯಿತು. ಅದನ್ನು ಇಲ್ಲಿ ಹಾಕುತ್ತಿದ್ದೇನೆ. ನಿಮಗೇನನ್ನಿಸಿತು ಎಂಬುದನ್ನು ತಿಳಿಸಿ. intelligence - ತಿಳಿವು, ಚುರುಕು, ಬುದ್ಧಿಮತ್ತೆ, ಪ್ರಜ್ಞೆ ಮುಂತಾದವುಗಳಲ್ಲಿ ಚುರುಕು ಎಂಬ ಪದ ಎಲ್ಲರಿಗೂ ಓದಿದೊಡನೆಯೇ ತಿಳಿಯುತ್ತದೆ. ಆದ್ದರಿಂದ ಚುರುಕು ಎಂಬುದನ್ನ ಇಟ್ಟುಕೊಳ್ಳೋಣ. ಕನ್ನಡದ ಪರಿಭಾಷೆಯಲ್ಲಿ ಕೃತಕವಾದದ್ದು ಎಂದರೆ, ಏನೋ ಒಂಥರಾ ಮಾಡಬಾರದ್ದು (ಕೃತ್ರಿಮ ಎಂಬ ಬಳಕೆಯಿಲ್ಲವೇ) ಎಂಬ ಅರ್ಥದಲ್ಲಿಯೇ ಹೆಚ್ಚು ಬಳಕೆಯಲ್ಲಿದೆ.
artificial - ನಮ್ಮ ಕೈಯಲ್ಲಿ ಸ್ವಾಭಾವಿಕವಾಗಿ(natural) ಮಾಡಲಾಗದ್ದಕ್ಕೆ ಬೇರೆ ಯಾವುದಾದನ್ನಾದರೂ (ಅಥವಾ ಯಾರನ್ನಾದರೂ) ನಾವು ನೆಚ್ಚಿಕೊಳ್ಳುತ್ತೇವೆ. ಹಾಗಾಗಿ ನೆಚ್ಚು ಎಂಬ ಪದವನ್ನು ಪಾರಿಭಾಷಿಕವಾಗಿ ಇಲ್ಲಿ ಬಳಸಬಹುದು ಅಂತ ಅನಿಸಿತು. ಆ ಊರುಗೋಲನ್ನು ನೆನಪಿಗೆ ತಂದುಕೊಳ್ಳಿ. ಆ ಊತಾತ ನಡೆಯಲು ಊರುಗೋಲನ್ನು ನೆಚ್ಚಿಕೊಂಡಿದ್ದರು. ನೆಚ್ಚಿಕೊಳ್ಳೋದು ಎಂದರೇನು. ಕೆಲವು ದಿನನಿತ್ಯ ಬಳಕೆಗಳನ್ನು ಕೆಳಗೆ ನೀಡಿದ್ದೇನೆ. ನಿಮ್ಮ ನಿಮ್ಮ ಮನೆಗಳಲ್ಲಿಯೂ ಈ ರೀತಿಯ ಬಳಕೆಗಳು ಇರಬಹುದು. ೧. ನೆಚ್ಚು - ಅವ್ನುನ್ ನೆಚ್ಕೊಳಕ್ ಆಗಲ್ಲ ಬಿಡು. ಕೆಲವ್ ಸಲಿ ಬರ್ತಾನೆ ಇಲ್ಲಾಂದ್ರೆ ಇಲ್ಲ. ೨. ಅವ್ರು ಬರೋದೇನ್ ನೆಚ್ಕೆಯಿಲ್ಲ. ೩. ಕಡೇಗಾಲ್ದಲ್ಲಿ ಅವ್ರು ಪಾಪ ಅವನನ್ನ ತುಂಬಾ ನೆಚ್ಕೊಂಡಿದ್ರು(ಹಚ್ಕೊಂಡಿದ್ರು ಎಂಬ ಬಳಕೆಯೂ ಇದೆ). ೪. ಕರೆಂಟ್ದೇನ್ ನೆಚ್ಗೆಯಿಲ್ಲ. ಮುಂತಾದವು.....ನೆಚ್ಚು ಎಂಬುದನ್ನು ನಂಬಿಕೆ, ವಿಶ್ವಾಸವಿಡು ಎನ್ನುವ ಅರ್ಥದಲ್ಲಿ ಹೆಚ್ಚು ಬಳಸುತ್ತೇವೆ. ಕೆಳಗೆ ಪೂರಕ ಓದಿನಲ್ಲಿ ನೆಚ್ಚು ಪದದ ಲಿಂಕ್ ನೀಡಿದ್ದೇನೆ. ಕವಲಿಯವರ ಕಸ್ತೂರೀ ಕೋಶದಲ್ಲಿ ನಚ್ಚು(ಕ) = ನಂಬು, ವಿಶ್ವಾಸವಿಡು, ಅಪೇಕ್ಷಿಸು, ಆಶ್ರಯಿಸು, ಅಪೇಕ್ಷೆ, ನಂಬಿಕೆ, ವಿಶ್ವಾಸ. ಎಂಬುದಾಗಿಯಿದೆ.
ನೆಚ್ಚು, ನೆರ್ಚು ನೆರವು ಎಂಬುದರ ರೂಟ್ ನೆರ್. ಅದನ್ನು ಪಾರಿಭಾಷಿಕವಾಗಿ ಹೀಗೆ ಬಳಸಬಹುದು. ನೀವು ಇನ್ನೊಂದು ಗಮನಿಸಿರಬಹುದು. ಧಾರವಾಡ ಕಡೆ, ಮಾಡು ಎನ್ನುವುದಕ್ಕೆ ಹಚ್ಚು ಎನ್ನುತ್ತಾರೆ. ಫೋನ್ ಹಚ್ಚು ಎಂಬುದಾಗಿ.
(ಬೇಗ ಬೇಗ ಮಾತನಾಡುವಾಗ ಹೆಚ್ಚುರ್ಕು, ಚುರ್ಕ್-ಹಚ್ಚು ಅಂತಾಗುತ್ತದೆ)-> ಹಚ್ಚಿದ ಚುರುಕುತನ-> ಚುರುಕುತನ ಹಚ್ಚೋದು.
ನೆಚ್ಚುರುಕು = ನೆರ್ + ಚುರುಕು = ನೆಚ್ಚುರುಕು (ಬೇಗ ಬೇಗ ಮಾತನಾಡುವಾಗ ನೆಚ್ಚುರ್ಕು ಅಂತಾಗುತ್ತದೆ)
ಹಚ್ಚುರುಕು = ಹಚ್ + ಚುರುಕು = ಹಚ್ಚುರುಕು or ಚುರುಕುಹಚ್ಚು -> ಅಥವಾ ಹೆಚ್ಚುರುಕು ಯಾಕೆ ಬೇಡ
ಹೀಗೆ ಕನ್ನಡದಲ್ಲಿ ಪ್ರತಿಯೊಂದಕ್ಕೂ ಕಾನ್ಪೆಪ್ಚುಯಲೈಸೇಷನ್ ಮಾಡಲು. ಆದರೆ ನಾವುಗಳು ಓವಿ ಎಚ್ಚರವಹಿಸಬೇಕು ಮತ್ತು ಕನ್ನಡದ ವಿಷಯದಲ್ಲಿಯೂ ಸ್ವಲ್ಪ ಓಪನ್ ಆಗಿರಬೇಕು ಅಷ್ಟೇ.
ಪೂರಕ ಓದು.
೧. ನೆರ್ಚು ನೆಚ್ಚು ಪದದ ಬಗ್ಗೆ ದ್ರಾವಿಡ ಪದಕೋಶದ ವಿವರಣೆ.
೨. ಚುರುಕು ಪದದ ವಿವರಣೆ
ಕುಚೇಷ್ಟಗೆ
robot - ಸಂಸ್ಕೃತದಲ್ಲಿ ಯಂತ್ರಮಾನವ, ಕನ್ನಡದಲ್ಲಿ ಏನು ?
ಮಕ್ಕಿಕಾಮಕ್ಕಿ ಓದುವನಂ ಆ ಕುಡ್ಮಿ,
ಪೋಲಿ ಅಲಿಯುವಂ ಊ ಪೊರ್ಕಿ,
ಪೇಳ್ದ ಕೆಲಸವಂ ಚೆಂಗೈವನು ನಮ್ಮ ಈ ಚುರ್ಕಿ
ಉ: ಕೃತಕ ಬುದ್ಧಿಮತ್ತೆ ಬಳಸಿ ಸೈಬರ್ ಅವಳಿ
ವಂದನೆಗಳು ಸುನೀಲ್.
ಲೇಖನದ ಕೊಂಡಿ ನೇರ್ಪುಗೊಳಿಸಿ,ನೀಡಿದ್ದಕ್ಕೆ ಧನ್ಯವಾದಗಳು.
AIಗೆ ಪರ್ಯಾಯವಾಗಿ ನೆಚ್ಚುರುಕು ಅಥವಾ ಹೆಚ್ಚುರುಕು ನೀವು ಸೂಚಿಸುತ್ತಿರುವ ಪದವಲ್ಲವೇ? ನಿಮ್ಮ ಆಲೋಚನೆಗಳು ನಿಜಕ್ಕೂ ವಿಸ್ಮಯ ಹುಟ್ಟಿಸುತ್ತವೆ. ಆಳವಾಗಿ ವಿಷಯವನ್ನು ಅಭ್ಯಸಿಸಿ ಬರೆಯುವ ನಿಮ್ಮ ಪ್ರವೃತ್ತಿಗೆ ಭೇಷ್ ಎನ್ನದಿರುವುದು ಹೇಗೆ?
ರೊಬೊಟ್‍ಗೆ ಚುರ್ಕಿ ಸಹಜವಾಗಿ ಕಾಣುತ್ತದೆ. ಕುಚೇಷ್ಟೆ ಎಂದೇಕೆ ಬರೆದಿರಿ?
conceptualisationನ್ನೂ ಕನ್ನಡಕ್ಕಿಳಿಸಿ ಸುನೀಲ್.
*ಅಶೋಕ್
ಉ: ಕೃತಕ ಬುದ್ಧಿಮತ್ತೆ ಬಳಸಿ ಸೈಬರ್ ಅವಳಿ
ಸುನಿಲ,
ಸೂಪರ್.... ಸಕ್ಕತ್.. ಬೊಂಬಾಟ್
ನಿನ್ನ ಜಾಣ್ಮೆ , ಮಾತು ಹೆಚ್ಚು ತಕ್ಕುಮೆ ಉಳ್ಳದದ್ದು.!!!
======================================