20
June
2013

ಶ್ರೀ ರಾಯರ ಆರಾಧನೆ

August 8, 2012 - 11:41am
ಆರ್ ಕೆ ದಿವಾಕರ

 ಬೆಂಗಳೂರೊಂದರಲ್ಲೇ, ಇನ್ನೂರು ಚಿಲ್ಲರೆ ಸಂಸ್ಥೆಗಳಲ್ಲಿ ಶ್ರೀರಾಯರ ಅರಾಧನೆ ಮೂರು ದಿನ ವಿಜೃಂಭಣೆಯಿಮದ ನಡೆಯಿತು. ಲಕ್ಷಾಂತರ ಭಕ್ತರು ಹಯಗ್ರೀವ ಪ್ರಸಾದದಿಂದ ಸಂತೃಪ್ತರಾದರು. ಆಯಾ ಆಡಳಿತ ಮಂಡಲಿಗಳು ಈ ವಿಚಾರದಲ್ಲಂತೂ ಜಿಪುಣತನ ತೋರಿಸುವುದಿಲ್ಲ; ಮತ್ತು ಸ್ವಯಂಸೇವಕರೂ ಸೇವೆಗೆ ಒದಗಿಬರುತ್ತಾರೆ; ಉತ್ಸವ ಅದ್ದೂರಿಯಾಗುತ್ತದೆ.
 ಸಿದ್ಧಾಂತ ಪ್ರವರ್ತಕರಾದ ಮಧ್ವಾಚಾರ್ಯರ ಆರಾಧನೆಯನ್ನೂ, ಅದಕ್ಕೆ ತಾರ್ಕಿಕ ಚೌಕಟ್ಟು ಹಾಕಿಕೊಟ್ಟ ಜಯತೀರ್ಥರ ಅರಾಧನೆಯನ್ನೂ ಮಾಧ್ವರು ಮೂರು ದಿನ ಆಚರಿಸುವುದಿಲ್ಲ. ರಾಯರ ಆರಾಧನೆಗಾದರೋ ಮಾಧ್ವೇತರರ ಆರ್ಥಿಕ ಔದಾರ್ಯವೂ ಹೆಚ್ಚಾಗಿ ಒದಗಿ ಬರುವುದರಿಂದ ಶ್ರಾವಣದೀ ಸಂಭ್ರಮ ಅತಿಶಯವಾಗಿರುತ್ತದೆ.
 ಈ ಬಾರಿ ಸಣ್ಣ ಮಠವೊಂದರಲ್ಲೇ ಅರಾಧನೆಗೆ ವಾರ ಮುಂಚೆಯೇ, ಕಣ್ಣಂದಾಜಿನ ಪ್ರಕಾರ 25 ಲಕ್ಷ ಸಂಗ್ರಹವಾಗಿತ್ತಂತೆ. ಅಲ್ಲದೆ ಭಕ್ತರು ನೀಡುವ ಬೇಳೆ, ಬೆಲ್ಲ, ಅಕ್ಕಿ ಇತ್ಯಾದಿಗಳ ಸಂಗ್ರಹ ಬೇರೆ. ಆರಾಧನೆ ವೇಳೆಯಲ್ಲಂತೂ ಕಾಣಿಕೆ ಮಿಕ್ಕು-ಮೀರುವಷ್ಟು! ರಾಯರ ಆರಾಧನೆ, ಮಠವೆಂಬ ಭಕ್ತಮಾಡಲಿಗಳಿಗೆ ಲಕ್ಷ-ಲಕ್ಷ ತಂದುಕೊಡುವ ಮೂಲ ಸ್ರೋತ.
 ಇದರೊಂದು ಭಾಗ ಸರಕಾರಕ್ಕೇಕೆ ಸಂದಾಯವಾಗಬಾರದು? ಮಠವೆಂಬ ನೋಂದಾಯಿತ/ ಅನೋಂದಾಯಿತ ಸಂಸ್ಥೆಗಳನ್ನು ಸೆವಾ ತೆರಿಗೆ, ವೃತ್ತಿ ತೆರಿಗೆ ಮತ್ತು ವಾಣಿಜ್ಯ ತೆರಿಗೆ ವ್ಯಪ್ತಿಗೆ ತಂದರೆ ಶ್ರೀರಾಯರಿಗೆ ಮುನಿಸಾಗುತ್ತದೆಯೇ? 
 
Forums: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

Submitted by partha1059 on

ಇದರೊಂದು ಭಾಗ ಸರಕಾರಕ್ಕೇಕೆ ಸಂದಾಯವಾಗಬಾರದು? ??

ಏಕೆ ಸಂದಾಯವಾಗಬೇಕು. ಸರ್ಕಾರಕ್ಕೆ ತನ್ನದೆ ಆದ ಸಾಕಷ್ಟು ಹಣದ ಮೂಲಗಳಿವೆ. ಕುಡಿಯುವ ಹೆಂಡ, ಸಿಗರೇಟಿನಿಂದ ಹಿಡಿದು ನೀವು ನಡೆದಾಡುವ ರಸ್ತೆಯ ಮೇಲು ಸುಂಕವನ್ನು ಸರ್ಕಾರ ವಸೂಲಿ ಮಾಡುತ್ತಿದೆ. ಸ್ಟಾರ್ ಹೋಟೆಲಿನಲ್ಲಿ ನೀವು ಒಂದು ಕಾಪಿ ಕುಡಿದರೆ ಅದರಲ್ಲಿ ಶೆ. 12 ರಷ್ಟು (??) ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ. ಸಾಲದೆಂಬಂತೆ ಮಣ್ಣನ್ನು ಕಲ್ಲನ್ನು ವಿದೇಶಕ್ಕೆ ಸಾಗಿಸುವರಿಂದಲು ಸುಂಕ ವಸೂಲಿ ಮಾಡುತ್ತಿದೆ. ಆದರೆ ಅದರ ಸದ್ವಿನಿಯೋಗ ಆಗುತ್ತಿದೆಯ ಎಂಬ ಪ್ರಶ್ನೆ ಮಾತ್ರ ಎಲ್ಲರಿಗು ಗೊತ್ತಿರುವುದು.

ಹಾಗಿರಲು ಕೇವಲ ಭಕ್ತಿಭಾವದಿಂದ ತಮ್ಮ ಹಣವನ್ನು ಮಠಕ್ಕೆ ಕೊಟ್ಟಿರುತಾರಾಗಲಿ ಜನ ಅದರ ಬಗ್ಗೆ ಹೆಚ್ಚೇನು ಚಿಂತಿಸಲ್ಲ. ಅಬ್ಬಬ್ಬ ಎಂದರೆ ಮಠದ ಇತರೆ ಖರ್ಚಿಗೆ ಅದು ಹೋದೀತು. ದುರುಪಯೋಗ ಮಾಡಲು ಸ್ವಲ್ಪ್ ಮಟ್ಟಿನ ಭಯವಾದರು ಇರುತ್ತದೆ (ಇನ್ನೊಂದು ಕಾರಣ ಇಲ್ಲಿ ಹೇಳಲಾರೆ). ಧಾರ್ಮಿಕ ಸಂಸ್ಥೆಗಳು ಬಹಳಷ್ಟು ಇವೆ. ಕೆಲ ಕಡೆ ಹೊರದೇಶದಿಂದಲು ಹಣದ ಹೊಳೆ ಹರಿದುಬರುತ್ತದೆ. ಅದಕ್ಕೆ ಯಾವ ಲೆಕ್ಕವು ಇರುವದಿಲ್ಲ. ಕೆಲವು ಸ್ವಾಮಿಗಳು ಪೋಲಿಸರನ್ನು ಗೇಟಿನ ಬಳಿ ನಿಲ್ಲಿಸಿ ಕಾಯಿಸುತ್ತಾರೆ.
ಕೋಟಿ ಕೋಟಿ ಹಣ ಕೆಲವು ಧಾರ್ಮಿಕ ಸಂಸ್ಥೆಗಳಲ್ಲಿ ಕೊಳೆಯುತ್ತಿದೆ. ಅದರ ದುರುಪಯೋಗವಾಗುತ್ತಿದೆ. ವ್ಯಾಪಾರಿಗಳಂತೆ ಆಸ್ತಿ ಮಾಡುತ್ತ ಸುತ್ತಲಿನ ಎಲ್ಲವನ್ನು ಸ್ವಾಹ ಮಾಡುತ್ತ ಸಾಗುತ್ತಿದ್ದಾರೆ. ಶಿಕ್ಷಣ ಸಂಸ್ಥೆ ಎಂಬ ಮತ್ತೊಂದು ವ್ಯಾಪಾರ ಬೆಳೆಸುತ್ತ ಅವರು ಮತ್ತೆ ಕೊಬ್ಬುತ್ತಲೆ ಇದ್ದಾರೆ.
ಎಲ್ಲರನ್ನು ಬಿಟ್ಟು , ಗುಬ್ಬಿಯ ಮೇಲಿನ ಬ್ರಹ್ಮಾಸ್ತ್ರ ದಂತೆ ನಿಮ್ಮ ಗಮನ ಇವರ‌ ಮೇಲೇಕೆ ಬಿದ್ದಿತೊ ಅರ್ಥವಾಗುತ್ತಿಲ್ಲ.

Submitted by ಆರ್ ಕೆ ದಿವಾಕರ on

"ನಾನು" ನಡೆಯುವ ರಸ್ತೆಯ ಮೇಲೆ, "ನಾನು" ಕುಡಿಯುವ ಕಾಫಿಯ ಮೇಲೆ ಸುಂಕ ಹಾಕುತ್ತಾರೆ. "ನಾನು" ತೆರುತ್ತೆನೆ; ಸಹಿಸಿಕೊಂಡಿದ್ದೇನೆ. ’ರಾಯರ ಮಠ’ಗಲೆಂಬ ಭವ್ಯ "ಕಟ್ಟಡ"ಗಳಲ್ಲೂ ಕೋಟಿ-ಕೋಟಿ ಸಂಗ್ರಹವಾಗಲಿ; ಶಿಕ್ಷಣ ಸಂಸ್ಥೆ ಎಂಬ ವ್ಯಾಪಾರ ಹುಟ್ಟಿ ಬೆಳೆಯುವಂತಾಗಲಿ. ನನಗೆ ಯಾವ ವೈಯಕ್ತಿಕ ಸಂಕಟವೂ ಇಲ್ಲ. ಪಟ್ಟೆ ಮಕುಟಗಳಲ್ಲಿ, ಅಂಚಿನ ಧೋತ್ರಗಳಲ್ಲಿ, ತಿದ್ದಿದ ಪುಂಢ್ರ-ಮುದ್ರೆಗಳಲ್ಲಿ ’ರಯರ’ನ್ನು ಅರೆಸುತ್ತಾ ಬಂದಿದ್ದೆ. ಕಾಣಲಿಲ್ಲ. ಅದಕ್ಕೇ ಸ್ವಲ್ಪ ನಿರಾಸೆಯಯಿತು, ಅಷ್ಟೆ. ಅದಾವ ’ಗುಬ್ಬಿ’; ಇದಾವ ’ಬ್ರಹ್ಮಾಸ್ತ್ರ’?! ನಿಮಗೆ ನೋವಾಗಿದ್ದರೆ ನನ್ನನ್ನು ’ರಾಯರು’ ಮನ್ನಿಸಲಿ.

Submitted by partha1059 on

ದಿವಾಕರರವರೆ ಬೇಸರ ಬೇಡ‌
ನಾನು ಹೇಳಲು ಹೊರಟಿದ್ದು ಬೇರೆಯೆ. ಎಲ್ಲೆಲ್ಲೊ ಕೋಟಿ ಕೋಟಿ ಹಗರಣಗಳೆಲ್ಲ ನಡೆಯುತ್ತಲ್ಲಿವೆ ಸರ್ಕಾರವಾಗಲಿ ಕಾನೂನನಾಗಲಿ ಯಾವ ಕ್ರಮವನ್ನು ಜರುಗಿಸಲು ಸಿದ್ದವಿಲ್ಲ. ಇಂದು ಕರ್ನಾಟಕದಲ್ಲಿ ರಾಜಕಾರಣಿಗಳ ವಿರುದ್ದ ಕೋರ್ಟಿನಲ್ಲಿ ನಡೆಯುತ್ತಿರುವ ಬ್ರಷ್ಟಾಚಾರದ ಯಾವ ಮೊಕ್ಕದಮ್ಮೆಯೂ ಸರ್ಕಾರ ಹೂಡಿರುವದಲ್ಲ. ಯಾರೋ ವ್ಯಕ್ತಿಗಳು ಹೂಡಿರುವಂತದ್ದು. ಸಮಾಜದ ದುಸ್ಥಿತಿ ಹೀಗೆದೆ ಎಂದು ತಿಳಿಸಿದ ಅಷ್ಟೆ. ಹೋಗಲಿ ಬಿಡಿ
ಮತ್ತೆ ನಿಮ್ಮ ಮಾತು

<ಪಟ್ಟೆ ಮಕುಟಗಳಲ್ಲಿ, ಅಂಚಿನ ಧೋತ್ರಗಳಲ್ಲಿ, ತಿದ್ದಿದ ಪುಂಢ್ರ-ಮುದ್ರೆಗಳಲ್ಲಿ ’ರಯರ’ನ್ನು ಅರೆಸುತ್ತಾ ಬಂದಿದ್ದೆ. ಕಾಣಲಿಲ್ಲ. ಅದಕ್ಕೇ ಸ್ವಲ್ಪ ನಿರಾಸೆಯಯಿತು >

ಅದು ಹೇಗೆ ಸಾದ್ಯ , ತಿಳಿದವರು ನೀವು, ನಾನು ಹೇಳುವದೇನು, ರಾಯರು ನೀವು ಹುಡುಕುತ್ತಿರ್ವ ಯಾವ ಜಾಗದಲ್ಲು ಇಲ್ಲ, ಹುಡುಕುತ್ತಿರುವವರ ಹ್ಱುದಯದಲ್ಲಿದ್ದಾರೆ ಎಂದು ತಿಳಿದರೆ ಸಾಕು.

Submitted by ಆರ್ ಕೆ ದಿವಾಕರ on

ಪಾರ್ಥಸಾರಥಿಗಳೇ, ಖಂಡಿತಾ ಬೇಸರವಿಲ್ಲ. ಇದು ಶ್ರದ್ಧಾಳುಗಳ ಬಗ್ಗೆ ಅಸಮಾಧಾನವಾಗಲೀ, ಟೀಕೆಯಾಗಲೀ ಅಲ್ಲವೇ ಅಲ್ಲ! ಹುಡುಕುವವರ ಹೃದಯದಲ್ಲಿ "ರಾಯರಾ"ಗಲೀ, ಅವರ (ನಮ್ಮೆಲ್ಲರ) ಪ್ರಭುವಾಗಲೀ ಇರುವುದು ಖಚಿತವಾದಾಗ, ಹೊರಗೆ ಹುಡುಕುವ ಪ್ರಯತ್ನವಾದರೂ ಏತಕ್ಕೆ? ನಾವು ’ಲೌಕಿಕ’ವನ್ನು ಅಧ್ಯತ್ಮವಾಗಿಯೂ, ಅಧ್ಯಾತ್ಮವನ್ನು ’ಲೌಕಿಕ’ದಲ್ಲಿಯೂ ಆಚರಿಸಹೋಗುತ್ತಾ ಎರಡರ ಪ್ರಯೋಜನವನ್ನೂ ಕಳೆದುಕೊಳ್ಳುತ್ತಿದ್ದೇವೇನೋ ಎನ್ನುವುದು ನನ್ನ ಆತಂಕ. ಅದನ್ನು ತಮ್ಮಂಥವರು ಮಾನ್ಯ ಮಾಡುವಂತಾದರೆ ನನ್ನ ಅಭಿವ್ಯಕ್ತಿ ಸಾರ್ಥಕವಾದೀತು. ಆಗಿದೆ ಎಂದು ಭಾವಿಸಲೇ?