'ನಾಟ್ಯ ಮಯೂರಿ'
ನವಿಲುಗಳಲ್ಲಿ ನಡವಳಿಕೆಯನ್ನು ಗಮನಿಸಿದವರು, ನಾಟ್ಯ ಮಾಡುವುದು ಗಂಡು ನವಿಲು, ಹೆಣ್ಣು ನವಿಲು ನರ್ತಿಸುವುದಿಲ್ಲ, ಮಳೆ ಬಂದಾಗ ಅಥವಾ ಹೆಣ್ಣು ನವಿಲನ್ನು ಆಕರ್ಷಿಸಲು ಮಯೂರ ನರ್ತಿಸುತ್ತದೆ ಎನ್ನುತ್ತಾರೆ. ಹಾಗಾದಲ್ಲಿ, 'ನಾಟ್ಯ ಮಯೂರಿ' ಎಂದರೆ ತಪ್ಪಾಗುವುದಿಲ್ಲವೆ?
------ ಶ್ರೀ

- Login or register to post comments
- 469 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: 'ನಾಟ್ಯ ಮಯೂರಿ'
ನಾಟ್ಯ ಮಯೂರ ಅನ್ನಿ!!
ನವಿಲಂತೆ ಕುಣಿಯುವವಳು => ನಾಟ್ಯ ಮಯೂರಿ!
======================================
ಉ: 'ನಾಟ್ಯ ಮಯೂರಿ'
ನಾಟ್ಯ ಮಯೂರ ಎನ್ನುವ ಭಾಷಾ ಬಳಕೆ ಇಲ್ಲವಲ್ಲ. ನಾಟ್ಯ ಮಯೂರಿ ಎಂದೇ ಪದ ಪ್ರಯೋಗವಿರುವುದು.
ಈ ಪದ ಪ್ರಯೋಗದ ಹಿನ್ನೆಲೆ ಏನು?
ನಾಟ್ಯ ಮಯೂರಿ - ಎನ್ನುವುದು ತಾರ್ಕಿಕವಾಗಿ ತಪ್ಪು ಬಳಕೆ . ಹೆಣ್ಣು ನವಿಲು ನೃತ್ಯ ಮಾಡುವುದಿಲ್ಲ . ಅಥವಾ ಗಂಡು ನವಿಲಿನಷ್ಟು ಚೆನ್ನಾಗಿ ನೃತ್ಯ ಮಾಡುವುದಿಲ್ಲ .
ಮಯೂರಿ - ಎಂದರೆ ತಪ್ಪಾಗಲಾರದು .
ಉ: 'ನಾಟ್ಯ ಮಯೂರಿ'
'ಕುಣಿಯೋ ನವಿಲು/ನವ್ವಾಲೆ ' ಅಂದ್ಬಿಟ್ಟರೆ ಈ ತೊಂದರೆ ಇಲ್ಲ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: 'ನಾಟ್ಯ ಮಯೂರಿ'
ನಾಟ್ಯ ಮಯೂರ ಎನ್ನುವ ಭಾಷಾ ಬಳಕೆ ಇಲ್ಲವಲ್ಲ. ನಾಟ್ಯ ಮಯೂರಿ ಎಂದೇ ಪದ ಪ್ರಯೋಗವಿರುವುದು.
ಈ ಪದ ಪ್ರಯೋಗದ ಹಿನ್ನೆಲೆ ಏನು?
ನಾಟ್ಯ ಮಯೂರಿ - ಎನ್ನುವುದು ತಾರ್ಕಿಕವಾಗಿ ತಪ್ಪು ಬಳಕೆ . ಹೆಣ್ಣು ನವಿಲು ನೃತ್ಯ ಮಾಡುವುದಿಲ್ಲ . ಅಥವಾ ಗಂಡು ನವಿಲಿನಷ್ಟು ಚೆನ್ನಾಗಿ ನೃತ್ಯ ಮಾಡುವುದಿಲ್ಲ .
ಮಯೂರಿ - ಎಂದರೆ ತಪ್ಪಾಗಲಾರದು .
ಉ:
======================================
ನಾಟ್ಯ ಮಯೋರಿ = ಆದರೆ ಗಂಡು ನವಿಲು ಕುಣಿಯುವುದು
ಗಾನಕೋಗಿಲೆ = ಆದರೆ ಗಂಡು ಕೋಗಿಲೆ ಹಾಡುವುದು (?)
ಗಜಗಮನೇ, ಇದು ಗಜಾಗಮನೇ ಆಗಬೇಕು
ಉ:
ಗಾನಕೋಗಿಲೆ ಎಂದಾಗ ಅಲ್ಲಿ ಕೋಗಿಲೆ ಗಂಡೋ ಹೆಣ್ಣೋ ಅಂತ ಗೊತ್ತಾಗುವುದಿಲ್ಲ. 'ಮಯೂರಿ' ಅಂದಾಗ ಅದು ಹೆಣ್ಣು ನವಿಲು ಅಂತ ಸ್ಪಷ್ಟವಾಗುತ್ತದೆ, ಅಲ್ಲಿಯೇ ಸಮಸ್ಯೆ ಬರುವುದು. 'ಹಂಸದಂತೆ ನಡೆದು ಬಂದಳು' ಎನ್ನುವಾಗ ಅಭಾಸವೆನಿಸುವುದಿಲ್ಲ, ಯಾಕೆಂದರೆ ಹಂಸ ಗಂಡೂ ಇರಬಹುದು ಹೆಣ್ಣೂ ಇರಬಹುದು.
ಗಮನ = ನಡೆಯುವುದು, ಆಗಮನ = ಬರುವುದು, ನಿರ್ಗಮನ = ಹೋಗುವುದು, ಗಜಗಮನೆ / ಗಜಗಾಮಿನಿ = ಗಜದಂತೆ ನಡೆಯುವವಳು. ಇದರಲ್ಲಿ ತಪ್ಪೇನಿಲ್ಲ. ಗಜದಂತೆ ಬರುವವಳು ಅಂತ ಹೇಳಹೊರಟರೆ ಮಾತ್ರ ಗಜಾಗಮನೆ ಸರಿ.