ಮಾಹಿತಿ ಹಂಚಿಕೊಳ್ಳುವುದೇ ನನ್ನ ಧ್ಯೇಯವಾಕ್ಯ
ನಾನು ಬೇಳೂರು ಸುದರ್ಶನ ಎಂಬ ಪತ್ರಕರ್ತ. ಬೆಂಗಳೂರಿನ ಕೆಲವು ಸಹಕಾರಿ ಸಂಸ್ಥೆಗಳಿಗೆ ಮಾಧ್ಯಮ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಪತ್ರಿಕೋದ್ಯಮ ತರಬೇತಿಯಲ್ಲಿಯೂ ನಿರತ. ಕೆಲವು ಚೀನೀ - ಟಿಬೆಟ್ ಸಂಬಂಧಿ ಪುಸ್ತಕಗಳನ್ನು ಕನ್ನಡಕ್ಕೆ ಕೆಟ್ಟದಾಗಿ ಆನುವಾದಿಸಿದ್ದೇನೆ. ಕವಿ, ಕಥೆಗಾರ ಎಂದೂ ಕೆಲವರು ಹೇಳುತ್ತಾರೆ. ಎಲ್ಲಿಯೂ ನಿಲ್ಲದಿರು ಎಂಬ ಕುವೆಂಪು ಮಾತನ್ನು ಅಕ್ಷರಶಃ ಪಾಲಿಸುತ್ತಿರುವ ಕೆಲವರ ಪೈಕಿ ನಾನೂ ಒಬ್ಬ!
ನನ್ನ ಮೂಲ ಊರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೇಳೂರು.
ಈಗಷ್ಟೆ ನಾನು ಹಿಂದುಸ್ತಾನಿ ಕೊಳಲು ಕಲಿಯುತ್ತಿರುವೆ. ಸಂಗೀತದ ಸುಖವನ್ನು ಈಗ ಚೆನ್ನಾಗಿ ಅನುಭವಿಸುತ್ತಿರುವೆ.
ನಾನು ಕಳೆದ ಒಂಬತ್ತು ವರ್ಷಗಳಿಂದ ಅಂತರಜಾಲದಲ್ಲಿ ವಿಹರಿಸುತ್ತಿರುವೆ. ಹೀಗಾಗಿ ಟನ್ನುಗಟ್ಟಳೆ ಮಾಹಿತಿಯನ್ನು ಕಲೆಹಾಕಿರುವೆ. ವಿವಿಧ ತಂತ್ರಾಂಶಗಳ ಬಗ್ಗೆ ತಿಳಿದುಕೊಳ್ಳುವುದು, ವೈರಸ್‌ಗಳನ್ನು ಓಡಿಸಲು ಹೊಡೆದಾಡುವುದು ನನ್ನ ಆಸಕ್ತಿಗಳು.
ಶೇರಿಂರ್ ನಾಲೆಜ್ ಅಂದರೆ ಮಾಹಿತಿಯನ್ನು ಹಂಚಿಕೊಳ್ಳುವುದೇ ನನ್ನ ಬದುಕಿನ ಧ್ಯೇಯವಾಕ್ಯ. ಅಂತರಜಾಲದಲ್ಲಿ ಮಾಹಿತಿ ಉಚಿತವಾಗಿ ಸಿಗಬೇಕು ಅನ್ನೋ ಅಭಿಯಾನಿಗಳಲ್ಲಿ ನಾನೂ ಒಬ್ಬ.

- Login or register to post comments
- 816 hits
- Email this forum




RSS:
ವೈರಸ್ ಓಡಿಸುವುದು
ಈಗಷ್ಟೆ ನನ್ನ ಲ್ಯಾಪ್ ಟಾಪಿನಲ್ಲಿ ವಿಂಡೋಸ್ ರನ್ ಮಾಡಿ (ಯಾವುದೇ ವೈರಸ್ ಇಲ್ಲದೆಯೂ) ಗಬ್ಬೆದ್ದು ಹೋಗಿರುವುದನ್ನು ನೋಡಿ, ಉರಿದುಬಿದ್ದು, ಮತ್ತೆ ಲಿನಕ್ಸಿಗೆ ಕಾಲ್ಕಿತ್ತದ್ದಾಯಿತು. ಇನ್ನು ಅಂಥದ್ದರಲ್ಲೇ ಇದ್ದುಕೊಂಡು ವೈರಸ್ ಗಳನ್ನ ಹೇಗೆ ಅಟ್ಟಿಕೊಂಡು ಹೋಗುತ್ತೀರ ಮಾರಾಯ್ರೆ? ನೀವು ನಿಜಕ್ಕೂ ಬಹಳ 'patience' ಉಳ್ಳವರು.
ಸದ್ಯ ವಿಂಡೋಸ್ ಗೆ ಎನ್ಸೆಫಲೈಟಿಸ್ ವೈರಸ್ ಒಂದು ಬಂದಿಲ್ಲ, ನೋಡಿ... ಇನ್ನುಳಿದವೆಲ್ಲ ಇವೆ
--
"ಹೊಸ ಚಿಗುರು, ಹಳೆ ಬೇರು"
ಸ್ವಾಗತ
ಅಯ್ಯೊ, ಮರೆತೇ ಬಿಟ್ಟೆ. 'ಸಂಪದ'ಕ್ಕೆ ನಿಮಗೆ ಸ್ವಾಗತ
--
"ಹೊಸ ಚಿಗುರು, ಹಳೆ ಬೇರು"
ಗಣಕಧರ್ಮ
ಸ್ವಾಮಿ, ವಿಂಡೋಸ್ ಇದ್ದ ಮೇಲೆ ವೈರಸ್‌ಗಳ ವಿರುದ್ಧ ಹೋರಾಡಲೇಬೇಕು. ಅದು ಗಣಕಧರ್ಮ!
ವೈರಸ್‍ಗೆ ಅಂಜಿದಡೆಂತಯ್ಯಾ
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೆಡೆಂತಯ್ಯಾ..?
ಕಂಪ್ಯೂಟರಿಗೆ ವಿಂಡೋಸ್ ಲೋಡ್ ಮಾಡಿ ವೈರಸ್‍ಗೆ ಅಂಜಿದಡೆಂತಯ್ಯಾ..?