ಗೂಗಲ್ ನ ಹೊಸ 'ಬ್ಲಾಗ್ ಸರ್ಚ್'
ಗೂಗಲ್ ಹೊಸ 'ಬ್ಲಾಗ್ ಸರ್ಚ್' ನೊಂದಿಗೆ ಮತ್ತೆ ಸರ್ಚ್ ಜಗತ್ತಿನಲ್ಲಿ ಅಲೆಯೆಬ್ಬಿಸಿದೆ. ಇದೇನು ದೊಡ್ಡ ಅಲೆಯಲ್ಲದಿದ್ದರೂ ಗೂಗಲ್ ನ ಇಂಡೆಕ್ಸ್ (Index) ಅತಿ ದೊಡ್ಡದಾದ್ದರಿಂದ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತದೆ.
ಲಿಂಕ್ ಕೆಳಗಿನಂತಿದೆ:
http://blogsearch.google.com/

- Login or register to post comments
- 891 hits
- Email this forum





RSS:
ಚೆನ್ನಾಗಿದೆ
ಗೂಗಲ್ ಬ್ಲಾಗ್ ಸರ್ಚ್ ಚೆನ್ನಾಗಿದೆ. ನಾನು ಗೂಗಲ್ ಬಗ್ಗೆ ವರ್ಷಗಳ ಹಿಂದೆ ಬರೆದ ಕವನ ಈಗ ನೆನಪಾಗುತಿದೆ. ಆಮೇಲೆ ಕಳಿಸುವೆ....
ಇದೊಂದು ಬಾಕಿಯಿತ್ತು
ನಮ್ಮನೆ ಹಿಂಬಾಗಿಲಲ್ಲಿರುವುದು ಸದ್ಯಕ್ಕೆ ಇನ್ನು ಗೂಗಲ್ನಲ್ಲಿ ಸಿಗಲ್ಲ... (ಅಂಸುತ್ತೆ...)
ಪರ್ವಾಗಿಲ್ಲ, "ಕನ್ನಡ" ಹುಡುಕಿದರೆ ಬೆಜಾನ್ ಉತ್ತರಗಳಿದ್ದಾವೆ !
ಗೂಗಲ್ ಕನ್ನಡ
http://google.co.in ಗೆ ಹೋದಾಗ, ಭಾರತೀಯ ಭಾಷೆಗಳಲ್ಲಿ ಕನ್ನಡ ಕಂಡು ಬರುತ್ತಿಲ್ಲ.
`translation page` - http://services.google.com/tcbin/tc.pyನ ಪ್ರಕಾರ ಮುಖ್ಯ ಪುಟದ ಇನ್ನೂ ಕೆಲವು ಪದಗಳ ತರ್ಜುಮೆ ಆಗುವುದಿದೆ.
ಬಿಡುವಾಗಿದ್ದಾಗ ಪದಗಳ ತರ್ಜುಮೆ ಮಾಡಿ. (ಲಾಗಿನ್ ಆಗಲು ಗೂಗಲ್ ಖಾತೆ ಬೇಕಾಗುತ್ತದೆ.)
ಕನ್ನಡ ಇದೆಯಲ್ಲಾ
ಗೂಗಲ್ ನ ಕನ್ನಡ ರೂಪಾಂತರ ಈ ವಿಳಾಸದಲ್ಲಿ ಇದೆ.
http://www.google.com/kn
http://www.google.co.in/kn
ಹಿಂದಿ, ಮರಾಠಿ ಭಾಷೆಗಳ ರೂಪಾಂತರಗಳಿಗೆ ಹೋಲಿಸಿದರೆ, ಕನ್ನಡ ರೂಪಾಂತರದಲ್ಲಿ ಹೆಚ್ಚು ಕನ್ನಡ ಪದಗಳಿವೆ.
ಮುಖ ಪುಟದಲ್ಲಿರುವ ಭಾಷೆಗಳ ಲಿಂಕ್ ಗಳು ಅದನ್ನು ಉಪಯೋಗಿಸುವವರ ಸಂಖ್ಯೆ ಮೇಲೆ ಆಧರಿಸಿದೆ ಎಂದು ಕೇಳಿದ್ದೇನೆ. ಕನ್ನಡ ವನ್ನು ಹೆಚ್ಚಾಗಿ ಉಪಯೋಗಿಸಿದರೆ, ಕನ್ನಡದ ಲಿಂಕ್ ಕೂಡ ಗೊಗಲ್ ನ ಮುಖ ಪುಟಕ್ಕೆ ಬರುವುದು.