"ಕಾರ್ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ???
ನಮಸ್ಕಾರ.
ನನಗೆ "ಕಾರ್ ಪೂಲ್ಸ್" (carpools) ಮತ್ತು "ಗ್ರೀನ್ ಕನ್ಸರ್ಟ್" (green concert) ಇವುಗಳ ಅರ್ಥ ತಿಳಿದುಕೊಳ್ಳಬೇಕಾಗಿದೆ. ದಯವಿಟ್ಟು ಇವುಗಳನ್ನು ಅನುವಾದಿಸಿ ಕೊಡಿ.
ಧನ್ಯವಾದಗಳು

- Login or register to post comments
- 589 hits
- Email this forum





RSS:
ಉ: "ಕಾರ್ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ???
ಕಾರ್ ಪೂಲ್ ಎಂದರೆ ,
ಕಾರುಗಳಿರುವವರು ಎಲ್ಲರೂ ಕಾರು ಬಳಸದೆ ಸರತಿಯಂತೆ ತಮ್ಮ ಕಾರನ್ನು ತೆಗೆದುಕೊಂಡು ಇತರ ಕಾರ್ ಮಾಲೀಕರನ್ನು ಕರೆದುಕೊಂಡು ಹೋಗುವದು .
ಇದರಿಂದ ರಸ್ತೆಯಲ್ಲಿ ದಟ್ಟಣೆ , ಮಾಲಿನ್ಯ ತಪ್ಪುತ್ತದೆ , ಹಣ ಉಳಿತಾಯವೂ ಆಗುತ್ತದೆ .
ಒಬ್ಬರೇ ಡ್ರೈವ್ ಮಾಡುವ ಕಾರುಗಳಿಗ ಕೆಲವೆಡೆ ಹೆಚ್ಚಿನ ಪ್ರವೇಶ ತೆರಿಗೆ ವಿಧಿಸುವದನ್ನು ಕೇಳಿದ್ದೇನೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: "ಕಾರ್ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ???
http://en.wikipedia.org/wiki/Carpool
======================================
ಉ: "ಕಾರ್ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ???
ಆ ವಿಕಿಯಲ್ಲಿ lift sharing/ride sharing ಎಂಬ ಪದಗಳನ್ನೂ ಕೊಟ್ಟಿದ್ದಾರೆ. ನನಗೆ ಹೊಳೆದ ಕೆಲವು ಕನ್ನಡ ಸಮಾರ್ಥಕಗಳು - ’ಜತೆಗಾಡಿ’( ಅಥವಾ ’ಗಾಡಿಜೊತೆ’), ಗುಂಪುಪಯಣ (ಇದು ಕ್ಲಿಷ್ಟ), ಒಗ್ಗಾಡಿ(=ಒಂದು+ಗಾಡಿ; ಇದೂ ಸರಳವಲ್ಲ), ಸೇರುಯಾನ ಇತ್ಯಾದಿ.
ಸಹಸಂಪದರಿಂದ ಇನ್ನೂ ಹೆಚ್ಚಿನ ಆಯ್ಕೆಗಳು ಬಂದರೆ ಆರಿಸಲು ಅನುಕೂಲವಾಗುತ್ತದೆ.
ಉ: "ಕಾರ್ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ???
ಜತೆಗೂಡಿ ಪಯಣ
*ಅಶೋಕ್
ಉ: "ಕಾರ್ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ???
MNS Rao
‘ಕಾರ್ ಪೂಲ್’ ಗೆ ಕನ್ನಡದ ಸಮಾನ ‘ಬಹುಮಂದಿ ಹೊರುವ ಕಾರ್’ ‘ಒಬ್ಬಂಟಿ ಸವಾರಿ ವಿರೋಧಿ’ ಇರಬಹುದೇ? ಪದಗಳನ್ನು ಕಡಿಮೆ ಮಾಡಿದರೆ ಅರ್ಥ ಸರಿಯಾಗಿ ಬರುವುದಿಲ್ಲ - ಏನು ಮಾಡಲಿ!
ಸತ್ಯನಾರಾಯಣ ರಾವ್
ಉ: "ಕಾರ್ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ???
ಕಾರ್‌ಪೂಲ್ಸ್‌ಗೆ ಅರ್ಥ ಈಗಾಗಲೇ ಗೊತ್ತಾಗಿದೆ.
ಆದರೆ ಗ್ರೀನ್ ಕಾನ್ಸರ್ಟ್ ಅನ್ನೋದು ಪಾಶ್ಚಿಮಾತ್ಯ ಸಂಗೀತ ಸಭೆಯಲ್ಲಿ ಬಳಸುವ ಜಗಜಗಿಸುವ ದೀಪ, ಅತಿ ಹೆಚ್ಚು ವಿದ್ಯುತ್ ಬಳಸುವ ಶಬ್ಬದ ಸಲಕರಣೆಗಳ ಬಗ್ಗೆ ಗಮನ ಹರಿಸಿ, ಅದಕ್ಕೆ ಪ್ರತಿಯಾಗಿ ಗಿಡ ನೆಡುವುದೋ ಅಥವಾ ಇನ್ನಾವುದೋ ರೂಪದಲ್ಲಿ ಭೂಮಿಗೆ ಒಳಿತಾಗುವ ಕೆಲಸವನ್ನು ಮಾಡುವ ಕ್ರಮ ಎಂದು ನನ್ನ ಗ್ರಹಿಕೆ.
ಅನುವಾದಗಳು ಸಮಂಜಸವಾಗಿ ಹೊಳೆಯುತ್ತಿಲ್ಲ. ಪೂಲ್ ಪದಕ್ಕೆ ಅದರ ಹಿಂದಿನ ಚಿಂತನೆಗೆ ಸರಿಹೋಗುವ ಪದ ಬೇಕಾಗುತ್ತದೆ. ಮತ್ತು ಗ್ರೀನ್ ಪದ ಆಂಗ್ಲ ಭಾಷೆಯಲ್ಲಿ ಬರೇ ಬಣ್ಣದ ಹೆಸರಾಗಿರದೆ, ಕಾಡು/ಗಿಡ/ನೀರು/ಹವೆ/ಮಲೆ/ನೆಲ/ ದ ಬಗ್ಗೆಗಿನ ಚಿಂತನೆಯ ನಾಮರೂಪವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಯೋಚಿಸಬೇಕಾಗುತ್ತದೆ.