ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ
ನಾನು ಸಿಂಗಾಪುರ ಏರ್ ಲೈನ್ಸ್ ನವರಿಗೆ ನಿಮ್ಮ ವಿಮಾನದಲ್ಲಿ ಕನ್ನಡ ಸಿನಿಮಾನೂ ತೋರಿಸಿ ಅಂತ ಮೇಲ್ ಹಾಕಿದ್ದೆ.
ಅವರು ಚುರುಕಾಗಿ ನನಗೆ ೨ ತಾಸಿನೊಳಗೆ ಈ ರೀತಿ ಮಾರುಲಿಯಿತ್ತರು.
"Thank you for your email to compliment our inflight entertainment system. We are also grateful for your suggestion on the addition of movies in the Kannada language, as well as the link to Wikipedia which you have kindly provided. We will be forwarding your feedback to our Inflight Entertainment department for their attention and review. We would also like to take this opportunity to thank you for your business and support to Singapore Airlines. We wish you only the very best and look forward to welcome you back on board our flights again soon. Yours sincerely " ನಿಮಗೂ ವಿಮಾನ್ದಲ್ಲಿ ಕನ್ನಡ ಸಿನಿಮಾ ನೋಡುವ ಆಸೆಯಿದ್ದರೆ ನೀವು ಇಲ್ಲಿಂದ ಕಳಿಸಬಹುದು http://www.singaporeair.com/saa/Feedback/feFeedbackInit.jspx

- Login or register to post comments
- 604 hits
- Email this forum





RSS:
ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ
ವೈಬವಜಾ
ಅವರ ಮೆನು ಕೂಡ ಕನ್ನಡದಲ್ಲಿದೆ( ತಪ್ಪಿಲ್ಲದ ). ನಾನೊಮ್ಮೆ ಬೆಂಗಳೂರಿಂದ SFಗೆ ಸಿಂಗಾಪುರದ ಗಾಳಿಸಾರಿಗೆಯಲ್ಲಿ ಹೋಗಿದ್ದೆ. ಊಟ ಸೂಪರ್, ಒಳ್ಳೆ ಉಪ್ಪಿನಕಾಯಿ ಇತ್ತು.
ಹಾಗೆ ಅವರ airhostessಗಳೂ ಸೂಪರ್ 
ಹಾಗೆ ಗಾಳಿಬಂಡಿಯಲ್ಲಿ ಒಸಿ ತಮಿಳೂ ಕಲಿತುಕೊಂಡೆನು, "ಒಂಡ್ರು, ಇರಾಂಡು, ಮೂಣ್ರು ...."
======================================
ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ
ಇರಲಿ....ಅವ್ರಿಗೆ ಕನ್ನಡ ಸಿನೆಮ ಬಗ್ಗೆ ವಿಕಿಪಿಡಿಯಾದ ಎಳೆ ಕೊಟ್ಟಿದ್ದೆ... ಅದನ್ನ ಗಾಳಿ ಸಾರಿಗೆಯ( ನನ್ನಿ
)ಆವಯ್ಯ ನೋಡಿ ನನಗೆ 'ನನ್ನಿ' ನುಡಿದ.. ತುಂಬ ನಲಿವಾಯಿತು.
ಅದೇ ನಾನು ಐದಾರು ಸಾರಿ 'ಹಂಪಿ ಕನ್ನಡ ವಿಶ್ವವಿದ್ಯಾಲಯ'ಕ್ಕೆ ಮೇಲ್ ಮಾಡಿದ್ದೆ.. ಕೆಲವು ಕೋರ್ಸ್ ಬಗ್ಗೆ ಕೇಳಿದ್ದೆ... ಇನ್ನು ಮಾರುಲಿಯಲಿಲ್ಲ...
ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ
ನಿಮ್ಮ ಅನುಭವ ಖುಶಿ ಕೊಟ್ಟಿತು.
ಇದೇ ರೀತಿ ಬೇರೆ ವಿಮಾನಿಗರೂ ಸೌಲಭ್ಯ್ಯ ಕೊಟ್ಟರೆ ಚೆನ್ನಲ್ಲವೆ ಎಂದೆನಿಸಿತು.ಪ್ರಯತ್ನ ಮಾಡಿ ನೋದಬಹುದೇನೋ.ಹತ್ತರಿಂದ ಹನ್ನೆರದು ಗಂಟೆಗಳ ಕಾಲ ಅದಾವುದೋ ಭಾಶೆಯ ವಟಗುದುವಿಕೆಗಿಂತ
ಒಳ್ಳೆಯದೊಂದು ಕನ್ನದ ಚಿತ್ರಕ್ಕೆ ಸ್ವಾಗತ ಹೇಳಲಡ್ಡಿಯಿಲ್ಲ.
ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ
ಗಾಳಿಸಾರಿಗೆಗೆ ಪುಟ್ಟಣ್ಣಗೌಡರ ಒರೆ ' ಎಲರ್ ವಟ್ಟೆ' = ವಾಯುಪಥ = airways
ಎಲರ್ = ಗಾಳಿ , ಕಟ್ಟೆ= ದಾರಿ ?
ಇನ್ನೊಂದು ಎಲರ್ ಬಳಕೆ , ತೆಂಬಲರ್ = ತೆಂಬ+ಎಲರ್ = ತೆಂಕಣದ ಗಾಳಿ. ( ಇದು ಆಂಡಯ್ಯನ ಒರೆಕೂಟ)
ನಮ್ಮ ಹಂಸಲೇಕನೂ ಬಳಸಿದ್ದಾರೆ, ಹಾಲುಂಡ ತವರು ಸಿನಿಮಾದಲ್ಲಿ " ಎಲೆ ತೆಂಬಲರೆ, ಎಲೆ ಹೊಂಬಿಸಲೆ, ಎಲೆ ಬೆಳ್ಮುಗಿಲೆ"
ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ
ಅಬ್ಬ..
ಆಂಡಯ್ಯಯ ಆತುಮಕ್ಕೆ ಸಾಂತಿ ಸಿಗ್ತದೆ.
ಚಂನಾಗಿದೆ. ಎಲರ್ವಟ್ಟೆ!!
ಎಲರ್ವಟ್ಟೆಯಲ್ಲಿ ಗಾಳಿಬಂಡಿಯಲ್ಲಿ ಹಾರಿ ಹೋದೆನು
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ
ಅದು ತಂಬೆಲರೊ ಅಥವಾ ತೆಂಬಲರೋ?
ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ
ತಂಬೆಲರು = ತಣ್ಬು+ಎಲರು = ತಣ್ಣನೆಯ ಎಲರು/ಗಾಳಿ
ತೆಂಬೆಲರು = ತೆನ್ಪು + ಎಲರು = ತೆಂಕಣ ಗಾಳಿ/ಎಲರು
ಎರಡು ಸರಿಯೇ.
ಆದ್ರೆ ತಣ್ಣೆಲರು, ತೆನ್ನೆಲರು/ತೆಂಕೆಲರು ಇವೂ ಸರಿ ಅಂತ ನನಗೆ ಅನ್ನಿಸ್ತಾ ಇದೆ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ
ಮಾಯ್ಸ, ನನ್ನಿ
ಉ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ
ವೈಭವ : ಇಂತಹ ಒಳ್ಳೆ ಜತುನಗೈದುದಕ್ಕೆ ನನ್ನಿ
ಮಹೇಶ : ಗಾಳಿಬಂಡಿ, ಎಲರ್ವಟ್ಟೆ ಒಳ್ಳೇ ಮೊಗಸು.. ನನ್ನಿ.