`ಡ'ಕಾರದ ಹೆಸರುಗಳಿದ್ದರೆ ಹೇಳಿ...
ಸ್ನೇಹಿತರೆ, ಬರೀ ಮಗುವಿಗೆ ಹೆಸರು ಸೂಚಿಸಿ ಅಂತ ಕೇಳ್ತಿದ್ದೀನಿ ಎಂದು ಬೇಜಾರು ಮಾಡಿಕೊಳ್ಳಬೇಡಿ. ಈ ಪ್ರಕರಣ ಸ್ವಲ್ಪ ಕಾಂಪ್ಲೆಕ್ಸ್ ಆಗಿದೆ. ಏನೆಂದರೆ, ನನ್ನ ಸ್ನೇಹಿತರೊಬ್ಬರಿಗೆ ಮೊನ್ನೆ ತಾನೇ ಜನಿಸಿದ ಗಂಡು ಮಗುವಿಗೆ ಒಂದು ಹೆಸರು ಬೇಕಾಗಿದೆ. ಗಂಡು ಮಗುವಿಗೇನು, ಬೇಕಾದಷ್ಟು ಹೆಸರುಗಳು ಸಿಗುತ್ತವೆ ಎನ್ನುತ್ತೀರಾ? ಸಮಸ್ಯೆ ಇರುವುದೇ ಇಲ್ಲಿ. ತುಸು ಸಂಪ್ರದಾಯಸ್ಥರಾದ (ತುಸು ಏನು, ಬಹಳಾನೇ!) ಅವರಿಗೆ ಮಗು ಹುಟ್ಟಿದ ಗಳಿಗೆ, ರಾಶಿ, ನಕ್ಷತ್ರ ಇತ್ಯಾದಿ ಆಧಾರಗಳ ಮೇಲೆ ಇಡಬಹುದಾದ ಹೆಸರು ಬೇಕಂತೆ. ಅಂದರೆ, ಅವರ ಮಗನ ಹೆಸರು `ಡ'ಕಾರದಿಂದ ಆರಂಭವಾಗಬೇಕಂತೆ!!!
`ಡ'ಕಾರದಿಂದ ಆರಂಭವಾಗುವ ಹೆಸರುಗಳ ಬಗ್ಗೆ ಯೋಚಿಸಿ ಯೋಚಿಸಿ ತಲೆ ಕೆಟ್ಟುಹೋಗಿದೆ. ಡಮರೇಶ್, ಡಮರೇಂದ್ರ, ಡೋಗರ ಕಕ್ಕಯ್ಯ, ಡೊಂಬಯ್ಯಗಳಂಥ ಹೆಸರುಗಳೂ ಹಾದು ಹೋದವೆನ್ನಿ. ಆದರೂ `ಡ'ಕಾರದಿಂದ ಆರಂಭವಾಗುವ ಒಂದು ಮಾಡರ್ನ್ ಹೆಸರು ಇನ್ನೂ ತಲೆಗೆ ಹತ್ತಿಲ್ಲ. ಹಾಗಾಗಿ, ನಿಮ್ಮೆಲ್ಲರ ಬಳಿ ಕೇಳಿಕೊಳ್ಳುತ್ತಿದ್ದೇನೆ- `ಡ'ಕಾರದಿಂದ ಆರಂಭವಾಗುವ ಹೆಸರುಗಳಿದ್ದರೆ ಸೂಚಿಸಿ, `ಡಯವಿಟ್ಟು!'
ಈ `ಡ'ಕಾರಾದಿ ಮಗನ ಸಹೋದರಿಯೊಬ್ಬಳು ಈಗ ತಾತ್ಕಾಲಿಕವಾಗಿ ಒಂದು ಹೆಸರಿನಿಂದ ಅವನನ್ನು ಕೂಗುತ್ತಿದ್ದಾಳೆ. ಏನು ಗೊತ್ತೆ?
`ಡೊನಾಲ್ಡ್ ಡಕ್!'

- Login or register to post comments
- 904 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
ಡುಂಡಿ = ಗಣೇಶ
ಡಮರುಗಹಸ್ತ = ಶಿವ
ಡಮರುಪಾಣಿ = ಶಿವ
ಡಕ್ಕಾಲೋಲ = ಶಿವ
ಡಿಂಡಿಮ
..
ಡಿಂಕು( ಇದು ಯಾವುದೋ ಸಿನಿಮಾದಲ್ಲಿದೆ
)
..
ಹುಡುಗಿಯಾಗಿದ್ದರೆ
"ಡಾಕಿನ್ಯಂಬಾ ಮಹೇಶ್ವರಿ" ಅಂತ ಹೇಳ್ತಿದೆ ( ಇದು ಲಿಲಿತಾ ಸಹಸ್ರನಾಮದಲ್ಲಿದೆ ಅಂತ ಅನ್ನಿಸುತ್ತೆ, ನನಗೆ ಅರ್ತ ಗೊತ್ತಿಲ್ಲ )
======================================
ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
ನಂಗೆ ಡಿಂಕು ಅಂದರೂ ಏನು ಅಂತ ಗೊತ್ತಿಲ್ಲ.!!
======================================
ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
"ಡಾಬೂ"
(ಎಪ್ಪತ್ತರ ದಶಕದಲ್ಲಿ ’ಸುಧಾ’ದಲ್ಲಿ ಪ್ರಕಟವಾಗುತ್ತಿದ್ದ ಕಾರ್ಟೂನ್‍ಸ್ಟ್ರಿಪ್ ನೆನಪಿಸಿಕೊಳ್ಳಿ)
ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
ಅಯ್ಯಯ್ಯೋ!!
ನಮ್ಮ 'ಡಿಂಗ' ನನ್ನೇ ಮರೆತಿದ್ದೆನು
ಬಾಲಮಂಗಳದ ಡಿಂಗ, ಪಕ್ರು, ಶಕ್ತಿ ಮದ್ದು "ಪ್ದಿಂ ಪ್ದುಂ"
======================================
ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
ನಿಮ್ಮ ನೆನಪು ಬಹಳ ಶಾರ್ಪು!
ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
ಜೋಶಿಯವರೇ,
ನಿಮ್ಮ ನೆನಪು ಬಹಳ ಶಾರ್ಪು!
ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
ಜಕಣಾಚಾರಿ ಮಗ ಡಕಣಾಚಾರಿ( ಅಪ್ಪನನ್ನು ಮೀರಿಸಿದ ಮಗ) ನೆಪ್ಪಾಯಿತು...
ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
ಡುಂಡಿರಾಜ
ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
ಡಾನ್ !!
ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
nanna snehitarobbaru Daambaarru anta heLtaa idru. aadre adu vastuvina hesaru anta heLide avarige.
hogli
Dombaraata anta...
adu sari illa.
dharaNeendra anta idi saar.. chennagide.
ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
ಹುಡುಗಿ ಆದರೆ "ಡಿಂಪಲ್" ಚೆನ್ನಾಗಿರುತ್ತೆ. ಅದನ್ನೇ "ಡಿಂಪು" ಅಂತಾ ಹುಡುಗನಿಗೆ ಇಡಬಹುದು.
ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
ಹೆಗಡೆಯವರೇ,
ಧರಣೀಂದ್ರ ಹೆಸರು ಚೆನ್ನಾಗಿದೆ. ಆದರೆ ಅದು `ಡ'ಕಾರದಿಂದ ಆರಂಭವಾಗುವುದಿಲ್ಲವಲ್ಲ? ಇಂಗ್ಲಿಷ್ನಲ್ಲಿ `ಡಿ'ನಿಂದ ಆರಂಭವಾದರೂ ಕನ್ನಡದಲ್ಲಿ `ಧ' ಆಗುತ್ತದೆ. ಅವರಿಗೆ `ಡ'ಕಾರದಿಂದ ಆರಂಭವಾಗುವ ಹೆಸರುಗಳೇ ಬೇಕಂತೆ.
`ಡಾಂಬರು' ಅಂತ ಇಡಬಹುದಿತ್ತು; ಆದರೆ ಆ ಮಗರಾಯ ಅಷ್ಟು ಕಪ್ಪಗಿಲ್ಲ!!!
ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
’ಡಾಣಿ’ ಎಂದು ಇಡಬಹುದೆ? ಉತ್ತರ ಕರ್ನಾಟಕದ ಕಡೆ ಡಾಣಿ ಎಂದರೆ ಸೇವು, ಮಿಕ್ಸ್ಚರ್ mixture ಖಾರ ಪದಾರ್ಥ ಎಂದರ್ಥ. ಸಿಹಿ ಜೊತೆ ಒಂದಿಷ್ಟು ಖಾರವೂ ಇದ್ದರೆ ಚೆನ್ನ. ಅಷ್ಟಕ್ಕೂ ಹೆಣ್ಣು ಮಗು ಸಿಹಿ, ಗಂಡು ಖಾರ ಖಾರ. ಹಾಗಂತ ಅಂತಾರಪ್ಪ.
ಒಂದ್ವೇಳೆ ಮಗು ದಪ್ಪ ಇದ್ದರೆ ಡುಮ್ಮ ಎಂದೂ ಇಡಬಹುದು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
ಡಿಂಡಿಮ???
ಡಿಕ್ಕಿ, ದಿಂಗ್ರಿನೂ ಸರಿಯೇ.
ಹಿಂದೂ ಹೆಸರಾರೆ ಕಷ್ಟ.
ಕ್ರಿಸ್ತರಾದ್ರೆ ಡ್ವೆಯನ್, ಡೇವಿಡ್, ಡಯಾನ, ಡಿಲ್ಬರ್ಟ್ ಅಂತ ಇಡಬಹುದು
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ