ಮಂಗಳೂರು ಕನ್ನಡ
ಮಂಗಳೂರು ಕನ್ನಡದ ಬಗ್ಗೆ ಸಂಪದದಲ್ಲಿ ಆಗೀಗ ಕೆಲವು ಚರ್ಚೆಗಳಾಗಿವೆ. ಈ ಚರ್ಚೆ ಅದಕ್ಕೇ ಮೀಸಲು.
ಮಂಗಳೂರು ಕನ್ನಡದ ಬಗ್ಗೆ ಕೇಳಿಬರುವ ಮಾತುಗಳು -ಕೆಲವು- ಹೀಗಿವೆ:
೧. ಈ ಕನ್ನಡ ನಾವು ಬರೆಯುವ ಕನ್ನಡಕ್ಕೆ ಹತ್ತಿರವಾಗಿದೆ. ಅಂದರೆ ಹೆಚ್ಚು ಶಿಷ್ಟ / ಗ್ರಾಂಥಿಕ.
೨. ಮಂಗಳೂರು ಕಡೆಯವರ ಮನೆಯ ಭಾಷೆ ಕನ್ನಡವಲ್ಲ - ಅದು ತುಳು ಅಥವಾ ಕೊಂಕಣಿ. ಹಾಗಾಗಿ ಆ ಕನ್ನಡ ’ಕನ್ನಡಿಗರಲ್ಲದವರು” ಮಾತಾಡುವ ಕನ್ನಡ- ಅದಕ್ಕೇ ಅದು ಬರಹದ ಕನ್ನಡಕ್ಕೆ ಹತ್ತಿರವಾಗಿದೆ.
೩. ಮಂಗಳೂರು ಕನ್ನಡದಲ್ಲಿ ಬೇರೆಡೆ ಕಾಣಸಿಗದ ಕೆಲವು ವಿಶಿಷ್ಟ ಪ್ರಯೋಗಗಳು ಇವೆ.
ಇದಕ್ಕೆ ನೀವು ಏನಂತೀರಿ?

- Login or register to post comments
- 927 hits
- Email this forum





RSS:
ಉ: ಮಂಗಳೂರು ಕನ್ನಡ
ಅವುದು!
ತಟ್ಟೆ ಹೋಗಿ ಬಟ್ಲಾಗತೈತೆ
ಅಲ್ವಾ ( ನಾನು ಅಲ್ಲಿ ೨ ಏಡು ಇದ್ದೆ, ಬಹಳ ಹಿಂದೆ, ತಪ್ಪಿದ್ದರೆ ಮನ್ನಿಸಿ )
ಗುದ್ದಲಿ ಪಿಕಾಸಿ ಆಗತೈತೆ
ಪಿಕಾಸಿ ಹಾರೆ ಆಗತೈತೆ
ತಂಡಿ ಹೋಗಿ ಚಂಡಿ ಆಗತೈತೆ
ಕೆರೆತ ಹೋಗಿ ತುರುಕೆ
ತೆಳು ಹೋಗಿ ಸಪೂರ
ಸ್ವಲ್ಪ ಹೋಗಿ ಸೊಲೂಪ
ಎಂತ ಅಂದರೆ ಹೇಗೆ!
ನಿಮ್ಮ ಮೂರು ಮಾತುಗಳಿಗೆ ನನ್ನ ಒಪ್ಪಿಗೆಯಿದೆ.
ಆದರೆ ಅಲ್ಲಿಯೂ ಹವ್ಯಕ, ಕುಂದ, ಮತ್ತು ಕೋಟ ಕನ್ನಡಗಳು ತಮ್ಮದೇ ಆದ ಸೊಗಡನ್ನು ಹೊಂದಿದ್ದು, ಅವು ಹೊತ್ತಗೆಯ ಕನ್ನಡದಂತೆ ಇಲ್ಲ!
ನಮಗೆ ಮಂಗಳೂರು ಕನ್ನಡ ಬಹಳ ಮೆಲ್ಲಗೆ, ಒಂದೊಂದು ಅಕ್ಕರವನ್ನು ಬಿಡಿಬಡಿಯಾಗಿ, ಬಹಳ ಎಚ್ಚರದಿಂದ ಹೇಳಿದಂತೆ ಎಂದು ಅನ್ನಿಸುತ್ತದೆ.
ಅಲ್ಲದೆ ಅವರು ಕೆಲವು ಬಳಕೆಗಳು ಮತ್ತು accent ಬೇರೆ. "ಅವನಲ್ಲಿ ಹೇಳು" ಮುಂತಾದವು.!
ಅವರ ಮಾತಲ್ಲಿ ಸಂಸ್ಕೃತ ತುಸು ಜಾಸ್ತಿ, ನಮ್ಮಲ್ಲಿ ಹೇಗೆ ಉರ್ದು ಮತ್ತು ಇಂಗ್ಲೀಸು ಜಾಸ್ತಿಯೋ ಹಾಗೆ.
ಆದರೆ ಶಿವರಾಮ ಕಾರಂತ ಹೊತ್ತಗೆಯಲ್ಲಿ ಮಂಗಳೂರ ಕನ್ನಡವು ಹೆಚ್ಚು ಕಾಣಿಸಿವುದಿಲ್ಲವೇ?
ಅವರ "ಮೈಮನಗಳ ಸುಳಿಯಲ್ಲಿ" ಅಂತೂ ಹತ್ತಾ ನಮ್ಮ ಮೈಸೂರ ಕನ್ನಡದಲ್ಲೇ ಇದೆ.
==============================================
ಉ: ಮಂಗಳೂರು ಕನ್ನಡ
ಸಪೂರ, ಚಂಡಿ - ಎರಡೂ ಬಹುಶಃ ತುಳು ಮೂಲದ ಪದಗಳು.
ಚಂಡಿ ಎಂದರೆ ನೀರಿನಲ್ಲಿ ಒದ್ದೆಯಾಗುವುದು ಎಂಬುದು ಒಂದು ಅರ್ಥವಾದರೆ, ಹಠ ಹಿಡಿಯುವುದಕ್ಕೂ ಚಂಡಿ ಹಿಡಿಯುವುದು ಅನ್ನುತ್ತಾರೆ.
’ಠಂಡಿ’ / ಥಂಡಿ - ಹಿಂದಿಯಿಂದ ಬಂದಿರಬಹುದೆ? (ಠಂಡೀ ಹವಾ... ಯೇ ಚಾಂದ್ ನೀ ಸುಹಾನೀ...!!)
ತುಳು ಭಾಷೆಯ ಪ್ರಭಾವ ಮಂಗಳೂರು ಕನ್ನಡದ ಮೇಲೆ ಎಷ್ಟಿದೆ?
ಯಾರಾದರೂ ತುಳು ಚೆನ್ನಾಗಿ ಗೊತ್ತಿರುವವರು ಹೇಳುವರೇ?
ಉ: ಮಂಗಳೂರು ಕನ್ನಡ
’ಎಂತ’ ಅಂದರೆ ’ಹೇಗೆ’ ಅಲ್ಲ; ”ಏನು’ ಎಂದರ್ಥ.
ಬಹುಶಃ ’ಎಂತಹ ’ ಎಂಬ ಶಬ್ದದಿಂದ ಹುಟ್ಟಿದ್ದು.
ಹಾಗೇ ’ಎಂತಹುದು’ ಇದ್ದುದು ಮಾತಲ್ಲಿ ’ಎಂತದು’ / ’ಎಂಥದು’ ಆಗಿದೆ.
ಇನ್ನು ಮಂಗಳೂರಿನ ಮಾರಾಯಾ/ ಮಾರಾಯ್ರೇ / ಮಾರಾಯ್ತೀ - ಇವನ್ನು ಮರೆಯುವುದುಂಟೆ?
ಮಹಾ + ರಾಯ / ರಾಯರೇ/ ರಾಯತಿ - ಹೀಗೆ ಇವೆಲ್ಲ ಬಂದಿರುವುದು.
ಹಾಗೇ ”ಉಂಟು’ ಶಬ್ದದ ಬಳಸುವಿಕೆ ಕೂಡ ಆಡುಮಾತಲ್ಲಿ ಸಾಮಾನ್ಯ.
ಉ: ಮಂಗಳೂರು ಕನ್ನಡ
ಗುದ್ದಲಿ ಮತ್ತು ಪಿಕಾಸಿ ಎರಡೂ ಬೇರೆ ಬೇರೆ ಪದಗಳು ಹಾಗೂ ಬೇರೆ ಬೇರೆ ಸಾಧನಗಳು.
ನಿಮ್ಮವ,
ಗಿರೀಶ ರಾಜನಾಳ
ಉ: ಮಂಗಳೂರು ಕನ್ನಡ
ಮಹೇಶರು ಹೇಳಿದ ಹಾಗೆ ದ.ಕ/ಉಡುಪಿ ಯಲ್ಲಿ ಬೇರೆ ಬೇರೆ ನುಡಿಗಳು ಇವೆ.
ಕೋಟ/ಕ್ವಾಟದ ನುಡಿ ನನಗೆ ಅಲ್ಪ-ಸ್ವಲ್ಪ ಗೊತ್ತು.
ಹೋಪ/ಹ್ವಾಪ (ಎರಡರ ನಡುವಿನ ದನಿ) - ಹೋಗುವ/ಹೋಗೋಣ
ಆತ್ತ್ - ಆಗುತ್ತದೆ
ಆತ್ತಿಲ್ಲೆ/ಎಡೆಯ - ಆಗುವುದಿಲ್ಲ
ಕಾಂತಿಲ್ಯ?- ಕಾಣುವುದಿಲ್ಲವೆ?
ಕೇಂಬುದು - ಕೇಳುವುದು
ಕಾಂಬುದು - ಕಾಣುವುದು
ಎಂತಕೆ? - ಏನಕ್ಕೆ?
ವೈದೇಹಿಯವರ ಕತೆಗಳಲ್ಲೂ ಈ ನುಡಿ ಬರುತ್ತದೆ. ಅವರ "ಅಕ್ಕು" ನನಗೆ ಇಷ್ಟದ ಕತೆ.
ಉ: ಮಂಗಳೂರು ಕನ್ನಡ
ಕುಂದಾಪುರದ 'ಕುಂದಗನ್ನಡ'ದ ಬಗ್ಗೆ ಕೆಲವು ಮಾಹಿತಿಗಳು kalaharana.blogspot.com ನಲ್ಲಿ ಸಿಗುವವು . ನೋಡಿ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಮಂಗಳೂರು ಕನ್ನಡ
ಕುಂದಾಪುರ ಕನ್ನಡ ಬಗ್ಗೆ ಇನ್ನೊಂದಿಷ್ಟು:
ಅಂಬ್ರು- ಅಂತೆ
ಹೊಯ್ಕ್-ಹೋಗಬೇಕು
ಬರ್ಕ್- ಬರಬೇಕು
ಇತ್ತಾ?- ಇದೆಯಾ?- ಮಂಗಳೂರು ಕನ್ನಡದಲ್ಲಿ `ಉಂಟಾ?'
ಕಾಂಬ- ನೋಡೋಣ.
ಇತ್ತ್ ಕಾಣಿ- ಇದೆ ನೋಡಿ.
ಆಪುದಲ್ಲ- ಆಗುವುದಿಲ್ಲ (ಕಷ್ಟ ಕಷ್ಟ!)
ಹೋಯಿರ್- ಹೋಗಿದ್ದಾರೆ
ಕೇಣಿ- ಕೇಳಿ
ಗಡ- ಗಂಡು (ಚಿಕ್ಕ ಗಂಡುಮಕ್ಕಳನ್ನು ಸಂಬೋಧಿಸುವಾಗ ಕೆಲವೊಮ್ಮೆ `ಗಡ' ಎಂಬ ಪ್ರಯೋಗ ಚಾಲ್ತಿಯಲ್ಲಿದೆ. ಉದಾ- ಎಂತ ಗಡ?)