ಈ ಯಾವ ಚನ್ನಾಗಿರೋ ಸಿನಿಮ ನಡೇತಾ ಇದೆ?
ಗುರುವಾರ ಬಂದಾಯ್ತು. ವೀಕೆಂಡ್ಗೆ ಈಗಲೇ ಪ್ಲಾನೋದು ಸುರು.
ಈಗ ನಡೇತಾ ಇರೋ ಸಿನಿಮಗಳಲ್ಲಿ ಯಾವುದು ಚನ್ನಾಗಿದೆ?
ಸಿನಿಮ ನೋಡಿರೋರು ತುಸು ಹೇಳ್ರಿ.

- Login or register to post comments
- 673 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಗುರುವಾರ ಬಂದಾಯ್ತು. ವೀಕೆಂಡ್ಗೆ ಈಗಲೇ ಪ್ಲಾನೋದು ಸುರು.
ಈಗ ನಡೇತಾ ಇರೋ ಸಿನಿಮಗಳಲ್ಲಿ ಯಾವುದು ಚನ್ನಾಗಿದೆ?
ಸಿನಿಮ ನೋಡಿರೋರು ತುಸು ಹೇಳ್ರಿ.




ಉ: ಈ ಯಾವ ಚನ್ನಾಗಿರೋ ಸಿನಿಮ ನಡೇತಾ ಇದೆ?
ಯಾವುದೂ ಚೆನ್ನಾಗಿರುವ ಸಿನೆಮಾ ಇಲ್ಲ ಅನ್ಸುತ್ತೆ..ನಾನು ಕಡೆಯದಾಗಿ ನೋಡಿದ ಕನ್ನಡ ಸಿನೆಮಾ 'ದುನಿಯಾ'. ಬರಗೂರರ ಜನಪದ ನೋಡೋಕಾಗ್ಲಿಲ್ಲ..ನೋಡ್ಬೇಕು ಎನ್ನುವಷ್ಟರಲ್ಲಿ ಆ ಸಿನೆಮಾ ತಿಯೇಟರ್‍ನಿಂದ ಕಾಣೆಯಾಗಿತ್ತು..ಗಣೇಶನ ಹುಡುಗಾಟ, ಸೀತರಾಮರ 'ಮೀರ ಮಾಧವ ರಾಘವ' ಸಧ್ಯಕ್ಕೆ ನಾನು ಕಾಯುತ್ತಿರುವ ಸಿನೆಮಾಗಳು..
ಉ: ಈ ಯಾವ ಚನ್ನಾಗಿರೋ ಸಿನಿಮ ನಡೇತಾ ಇದೆ?
ಪಲ್ಲಕ್ಕಿ ಹೇಗಿದೆ?
ಏಕದಂತ, ಸಂತ, ಮಸ್ತಿ ಎಲ್ಲ ಗೋತ?
ಹಾಗಾದರೆ "ಜೇಡರ ಮ್ಯಾನ್ ೩" ನೋಡಬೋದು, ಈ ವಾರ!
ಕೊನೆಗೂ ಶುಕ್ರವಾದದ ಇಳಿಸಂಜೆ ಹೇಳಿದ್ರಲ್ಲ, ಸಾಕು!
- ಮಾಯ್ಸ
ಉ: ಈ ಯಾವ ಚನ್ನಾಗಿರೋ ಸಿನಿಮ ನಡೇತಾ ಇದೆ?
ಪಲ್ಲಕ್ಕಿ ಹಾಡುಗಳು ಚೆನ್ನಾಗಿವೆ...ಚಿತ್ರ ಚೆನ್ನಾಗಿರಬೌದು..
'ಪರ್ಸ್ಯೂಟ್ ಆಪ್ ಹ್ಯಾಪಿನೆಸ್' ಕೂಡ ಚೆನ್ನಾಗಿದೆ( ತುಂಬ ಗೋಳು
)...ನಾನು ನೋಡಿರುವೆ
ಉ: ಈ ಯಾವ ಚನ್ನಾಗಿರೋ ಸಿನಿಮ ನಡೇತಾ ಇದೆ?
ಚೆನ್ನಾಗಿದೆ ಅನ್ನುತ್ತಾರೆ... ಗೋಳು ಅನ್ನುತ್ತಾರೆ... ಏನ್ಸಾರ್..!!
ಉ: ಈ ಯಾವ ಚನ್ನಾಗಿರೋ ಸಿನಿಮ ನಡೇತಾ ಇದೆ?
ಯಪ್ಪ.. ಶರಣು!
"ಸನಾದಿ ಅಪ್ಪಣ್ಣ" ಸಿನಿಮಾ ಇಲ್ವಾ ಹಂಗೆ. ಸಿನಿಮಾ ನೋಡಿ ಅತ್ತು ಕುಶಿ ಪಡೋದು
"ಪರ್ಸ್ಯೂಟ್ ಆಪ್ ಹ್ಯಾಪಿನೆಸ್" ಬಗ್ಗೆ oprahದಲ್ಲಿ ಬಂದಿತ್ತು. ನೋಡ್ದೆ. Will Smith ಮತ್ತವನ್ ಮಗ ಸೂಪರಾಗಿ ಮಾಡಿದಾರಂತೆ, ಅದರಲ್ಲಿ!
- ಮಾಯ್ಸ
ಉ: ಈ ಯಾವ ಚನ್ನಾಗಿರೋ ಸಿನಿಮ ನಡೇತಾ ಇದೆ?
ಸಿನಿಮಾದಲ್ಲಿ ಗೋಳಿದ್ರೆ ಚೆನ್ನಾಗಿರಲ್ಲ ಅಂತ ಯಾರು ಕಟ್ಟಳೆ ಮಾಡಿದ್ದು ???