Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಸಮುದಾಯ

ಭಾರತೀಯತೆ ಅಂದ್ರೆ ಏನು?

May 20, 2007 - 4:39pm — ವೈಭವ

ನಮ್ಮಲ್ಲಿ ಹಲವರಿಗೆ ಭಾರತೀಯತೆ ಅಂದ್ರೆ ಹಿಂದಿಯಲ್ಲಿ ಮಾತಾಡೋದು, ಹಿಂದಿ ಚಿತ್ರಗಳನ್ನು ನೋಡುವುದು( ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ ) ಎನ್ನುವ ತಪ್ಪು ತಿಳುವಳಿಕೆ ಇದೆ. "ಒಂದು ದೇಶ, ಹಲವು ಭಾಷೆ, ಹಲವು ಸಂಸ್ಕೃತಿ" ಎನ್ನುವುದನ್ನು ನಾವು ಮರೆತಿದ್ದೇವೆಯೆ?
ಹಲವು ಬೇರೆ ಬೇರೆ ತನಗಳಿಂದ ಕೂಡಿ ಒಂದೇತನವನ್ನು ಮೈಗೂಡಿಸಿಕೊಂಡಿದೆ ಎನ್ನುವುದು ಅಪ್ಪಟ ದಿಟ.

ಹಿಂದಿಗೆ ಸಿಗುವಷ್ಟು ಕನ್ನಡಕ್ಕೆ ಅಥವಾ ತುಳುವಿಗೆ ಅಥವ ಕೊಡವಕ್ಕೆ ಬೆಲೆ ಸಿಗುತ್ತಿದಿಯೆ( ನಮ್ಮ ನೆಲೆದಲ್ಲಿಯೆ)? ಬ್ರಿಟಿಷರ ಅಡಿಯಾಳಾಗಿದ್ದ ನಾವು ಈಗ ಹಿಂದಿಗರ ಅಡಿಯಾಳಾಗಿದ್ದೇವೆ ಅನ್ನಿಸುತ್ತದೆ. Sad . ಇತ್ತೀಚಿನ ಅಸ್ಸಾಂನಲ್ಲಿ ನಡೆದ ಘಟನೆಗಳು ಇದಕ್ಕೆ ಕನ್ನಡಿ ಹಿಡಿದಂತಿದೆ.
ಭಾರತೀಯತೆಯನ್ನು ಮುಂದೊಡ್ಡಿ ಕನ್ನಡ ನಾಡಿಗೆ ಹಲವು ವಿಷಯಗಳಲ್ಲಿ ವಂಚನೆ ಮಾಡಲಾಗಿದೆ.

ನಿಮಗೇನನಿಸುತ್ತದೆ?

---------
ಕೊನೆಯಾದಾಗಿ, "ಭಾರತೀಯತೆ ಅಂದ್ರೆ ಕೇವಲ ದಾಲ್-ಚಾವಲ್ ಅಲ್ಲ....ರಾಗಿಮುದ್ದೆ - ಉಪ್ಪೇಸರು ಸಾರೂ ಕೂಡ"

‹ ಇ-ಮೇಲ್ ಬಗ್ಗೆ
  • ಸಮುದಾಯ
Ornamental seperator
  • Login or register to post comments
  • 661 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 20, 2007 - 7:35pm — mahesha

ಉ: ಭಾರತೀಯತೆ ಅಂದ್ರೆ ಏನು?

mahesha's picture

Smiling
ವೈಬವ ಈ ಒಗ್ಗಟ್ಟಿನ ವಿಶಯದಲ್ಲಿ ನಮ್ಮ ದೇಶದ ಪಾಡು ಹೀಗೆ ಇರುತ್ತೆ... ಓಸುಗರಗಳು.

೧) ಭಾರತ/ಇಂಡಿಯಾ ಎಂಬ ದೇಶವನ್ನು ಪರಂಗಿಗಳು ಕಟ್ಟಿದ್ದು, ಅವರ ಆಡಳಿತವನ್ನ ಸಲೀಸು ಮಾಡಲು. ಅಲ್ಲಿಯ ವರಗೂ ಬಡಗಣವೇ ಒಂದು ದೇಶ/ದೇಶಗಳು
೨) ಆಸಾಂಅನ್ನು ಬರ್ಮ ಮೇಲೆ ದಾಳಿ ಮಾಡಲು ಪರಂಗಿಯವರು ಎರಡನೇ ವಿಶ್ವಬವರದಲ್ಲಿ ಹಿಡಿದದ್ದು. ಅಲ್ಲಿಯ ವರೆಗೂ ಅದು ಭಾರತದಲ್ಲಿ ಇರಲಿಲ್ಲ.
೩)೧೯೪೭ರ ವರಗೂ ಮೈಸೂರು ಒಂದು ಸ್ವತಂತ್ರದೇಶವೇ ಆಗಿತ್ತು. ನಮ್ಮ ಮಹಾರಾಜರು ಒಪ್ಪಿ ನಮ್ಮ ನೆಲವನ್ನು indian unionಗೆ ಸೇರಿಸಿದ್ದು.
ಮುಂತಾದ ಇತಿಹಾಸ ಕಾರಣಗಳು.

ಜಗದ ಹೆಚ್ಚು ದೇಶಗಳಲ್ಲಿ ಒಂದೇ ನುಡಿ, ಯುರೋಪಲ್ಲಿ, ದೇಶಗಳು ಆಗಿರುವುದೇ ನುಡಿಯ ಮೇಲೆ. ಅಮೆರಿಕದಲ್ಲೂ ಇಂಗ್ಲೀಸೇ ಎಲ್ಲ ಅಲ್ಲ.

ನಮ್ಮೆಲ್ಲರದೂ ಗೊಂದಲದ ದೇಶತನ. ನಾವು ಬರೀ ಇಂಡಿಯರಲ್ಲ. ಇಲ್ಲ ಕನ್ನಡ-ಇಂಡಿಯನ್ ಇಲ್ಲ ತಮಿಳ್-ಇಂಡಿಯನ್. ಬರಿ ಇಂಡಿಯನ್ ಎಂಬ ಒಂದು ನಮ್ಮ identity ಅನ್ನು ಪೂರ್ತಿಗೊಳಿಸಲ್ಲ.

- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ
May 26, 2007 - 5:55pm — ಮಂಜುಬೊಮ್ನಳ್ಳಿ

ಉ: ಭಾರತೀಯತೆ ಅಂದ್ರೆ ಏನು?

ಮಂಜುಬೊಮ್ನಳ್ಳಿ's picture

ಸಂಸ್ಕ್ರತಿಯ ವ್ಯಾಖ್ಯಾನ ತುಂಬ ಸಂಕೀರ್ಣವಾದದ್ದು. ಭಾರತೀಯತೆ ಎಂಬ ಶಬ್ದವಂತೂ ಸಾವಿರಾರು ಚರ್ಚೆಗಳ ವಿದ್ಯುದ್ದೀಪಾಲಂಕ್ರತ ರಂಗಸ್ಟಳ.
ಭಾರತದ ಸಾಂಸ್ಕ್ರತಿಕ ರಾಜಕಾರಣ ವರ್ಣಮಯ. ಏಕರೂಪತೆಯನ್ನು ಹೇರುವ ಜಾಗತಿಕ ಸಾಂಸ್ಕ್ರತಿಕ ವಿದ್ಯಮಾನ ಇಲ್ಲೂ ಸಹಜ. ಇದು ಎಲ್ಲ ಹಂತಗಳಲ್ಲೂ ನಿಜ.
ಕನ್ನಡದೊಳ್ಗೇ ನೋಡಿ. ಬೆಂಗಳೂರು ಕನ್ನಡವನ್ನ ಮಾಧ್ಯಮದ ಮೂಲಕ ಹೇರಲಾಗುತ್ತಿಲ್ಲವೆ? ಪ್ಲುರಲಿಸ್ವ್ ಆದ, ಸಹಸ್ರ ಮುಖಗಳುಳ್ಳ ಸಂಸ್ಕ್ರತಿಯ ತುಳಿದು, ಏಕರೂಪತೆಯ ಹೆಸರಲ್ಲಿ ಬಹುಮತದ ಬೆಂಬಲ ಗಳಿಸುವ, ತನ್ಮೂಲಕ ಶಕ್ತಿಸಾಂದ್ರತೆಗೊಳಿಸುವ ಆಧುನಿಕ ರಾಜಕೀಯದ ಒಂದು ತಂತ್ರವಿದು.
ಹಿಂದೂಗಳೆಲ್ಲ ಭಿನ್ನತೆ ಮರೆತು ಒಂದಾಗೋಣ ಎಂಬ ಕೇಸರಿ ಶಾಲಿನವರೂ, ಮುಕ್ತ ಆರ್ಥಿಕತೆಯ ಮಂತ್ರ ಜಪಿಸುವ ವ್ಯಾಪಾರಿಗೂ ಇದೇ ಕಾರಣಕ್ಕೆ ವ್ಯತ್ಯಾಸವಿಲ್ಲದಂತಾಗಿರುವುದು.
‘ವಿವಿಧತೆಯಲ್ಲಿ ಏಕತೆ’ ಎಂಬ್ ಘೋಶಣೆಯಲ್ಲಿ ಪವರ್ ಪೊಟೆನ್ಶಿಯಲ್ ‘ಏಕತೆ’ಗೆ ಮರುಳಾಗುವ ಸ್ವಾರ್ಥ ರಾಜಕರಣಕ್ಕೆ ಪ್ರತಿಕ್ರಿಯೆಂಬಂತಾದರೂ ಜನಪರ ಸಂಸ್ಕ್ರತಿ ಚಿಂತನೆ ಗಟ್ಟಿಗೊಳ್ಳಬೇಕಿದೆ.

  • Login or register to post comments
  • link
  • Email this ಪ್ರತಿಕ್ರಿಯೆ
May 26, 2007 - 10:41pm — mahesha

ಉ: ಭಾರತೀಯತೆ ಅಂದ್ರೆ ಏನು?

mahesha's picture

ನಿಮ್ಮ ಮಾತಿನ ಹಲವು ಸಂಗತಿ ನನಗೆ ಇನ್ನೂ ಸರಿಯಾಗಿ ತಿಳಿಯಲಿಲ್ಲ.

ಕನ್ನಡದೊಳ್ಗೇ ನೋಡಿ. ಬೆಂಗಳೂರು ಕನ್ನಡವನ್ನ ಮಾಧ್ಯಮದ ಮೂಲಕ ಹೇರಲಾಗುತ್ತಿಲ್ಲವೆ?

ಇದನ್ನು ತುಸು ಬಿಡಿಸಿ ಹೇಳಿ ಸಾರ್‍.

ಕನ್ನಡ ಮೀಡಿಯಮ್ಮೋ ಇಲ್ವೇ mediaಗಳೋ?

- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ
May 27, 2007 - 7:30pm — ಮಂಜುಬೊಮ್ನಳ್ಳಿ

ಉ: ಭಾರತೀಯತೆ ಅಂದ್ರೆ ಏನು?

ಮಂಜುಬೊಮ್ನಳ್ಳಿ's picture

ಸುದ್ದಿ ಮತ್ತು ಮನರಂಜನಾ ಮಾಧ್ಯಮಗಳು. (ಇವುಗಳ ನಡುವಿನ ಗಡಿ ನಿಚ್ಚಳವಾಗಿ ಇಲ್ಲ). ಬೆಂಗಳೂರು ಕನ್ನಡವನ್ನು ಶಾಸ್ತ್ರೀಯ ಎಂಬಂತೆಯೂ, ಮಂಡ್ಯದ ಕನ್ನಡವನ್ನು ಗಂಡಸುತನದ ಭಾಶೆಯೆಂತಲೂ ಬಿಂಬಿಸಲಾಗುತ್ತದೆ. ಧಾರವಾಡ ಕನ್ನಡ ಖಳನಾಯಕನದ್ದಾದರೆ, ಮಂಗಳೂರಿನದು ಹಾಸ್ಯಗಾರನ ಬಾಯಲ್ಲಿ, ಊಟದಲ್ಲಿ ಉಪ್ಪಿನಕಾಯಿಯಂತೆ. ಅನ್ನ ಮಾತ್ರ ಬೆಂಗಳೂರಿನದು. ಇಶ್ಟವಿಲ್ಲದಿದ್ದರೂ ತಿನ್ನಲೇಬೇಕು ಮಾಧ್ಯಮದಾಸರು. ಬೆಂಗಳೂರೀಕರಣಗೊಳ್ಳುತ್ತಿರುವ ಕನ್ನಡ ನಾಡು ನುಡಿಗೂ, ಹಿಂದೀಕರಿಸಲ್ಪಡುತ್ತಿರುವ ಭಾರತೀಯತೆಗೂ ಗುರುತರ ಅಂತರವೇನಿಲ್ಲ, ಅಲ್ಲವಾ?

  • Login or register to post comments
  • link
  • Email this ಪ್ರತಿಕ್ರಿಯೆ
May 27, 2007 - 8:13pm — mahesha

ಉ: ಭಾರತೀಯತೆ ಅಂದ್ರೆ ಏನು?

mahesha's picture

ಹಾ ಹಾಗಾ...

ಹವುದವುದು. ನನ್ನ ಕೊರಲಿದೆ ನಿಮ್ಮ ಜೊತೆ.

ಈ "ಬೆಂಗಳೂರು ಕನ್ನಡ" ಅದೊಂದು ಕಲಸುಮೇಲೋಗರ. ಆದರೂ ಬೆಂಗಳೂರಲ್ಲಿ ಕೊಂಚ ಕನ್ನಡ ಇದೆ ಎಂಬ ಸಮಧಾನ.

ಆದರೆ ಸುದ್ದಿ ಮತ್ತು ಮನರಂಜನೆಯಲ್ಲಿ ಮಂಗಳೂರಿಗರು ತಕ್ಕಮಟ್ಟದಲ್ಲಿದ್ದಾರಲ್ಲವೇ?(ಊಹೆ).

ಇಲ್ಲಿ ನೀವು ಹಿಂದಿಸಿದ/ಸಂಸ್ಕೃತೀಕರಣ sanskritized ಭಾರತೀಯತೆಯನ್ನು, ಕನ್ನಡದ ಪಾಡಿಗೆ ಹೋಲಿಸಿಹಿರಿ. ಹಿಂದಿಯಲ್ಲೂ ನಾವು ಆದಷ್ಟು ಕಡಮೆ ಅಪಭ್ರಂಶಗಳನ್ನು, ಉರ್ದು-ಪಾರಸೀಯ ಸಿಹಿಪದಗಳನ್ನು ತಗೆದು ಸಂಸ್ಕೃತ ಪದವನ್ನು ಹೇಳದಿದ್ದರೆ ಅದು ಭಾರತೀಯ ಹಿಂದಿಯಲ್ಲ ಬದಲಿಗೆ ಅದು ಪಾಕಿಸ್ತಾನಿ ಉರ್ದು ಅಂತೆ. ನನ್ನೊಡ ಇರುವ ಕೆಲ BIMARUಇಗ ಅಳಲಿದು.

ಗಮನಿಸಿದ್ದೀರ? ಈಗ ಸುದ್ದಿ ಪೇಪರುಗಳಲ್ಲಿ "ತಯಾರು" ಮುಂತಾದ ಉರ್ದು ಸದ್ದು ತಗ್ಗಿ,"ಸಿದ್ಧತೆ" ಮುಂತಾದವು ಬಂದು ಬಿಟ್ಟಿದೆ. ವಿಕದಲ್ಲಿ ಒಬ್ಬರು ಈ ಸಿಹಿ-ಉರ್ದು ಉಲಿಗಳ ಮೇಲೆ ಕೆಂಡಕಾರಿದ್ದೂ ಉಂಟು.

ಹಿಂದೆ ಒಂದು ಸಂಗತಿ ನಡೆಯಿತು. ನನ್ನ ಗೆಳೆಯನ್ನು ಒಬ್ಬ ಗೌಡನಿದ್ದಾನೆ. ಅವನ ಬಳಿ ಯಾರೂ ಬಿಹಾರದವನೋ, ಮಹಾರಾಷ್ಟ್ರದವನೋ ಒಬ್ಬ ಮಹಾಹಿಂದು ಬಂದು, "ಹೆಣವನ್ನು ಹೂಳುವವರು ಹಿಂದುಗಳಲ್ಲ" ಅಂದನಂತೆ. ಇದಕ್ಕೆ ಇವನು ಮುನಿಸಿಕೊಂಡು ನಮ್ಮ ಬಳಿ ಹೇಳಿಕೊಂಡನು. ಅದಕ್ಕೆ ನಾವು "ಇರಲಿ ಬಿಡಪ್ಪ, ನೀವು ಹೆಣ ಸುಡದಿದ್ರೆ ಹಿಂದೂ ಆಗಲ್ಲ, ಆದರೆ ಗೌಡ-ಒಕ್ಕಲಿಗನಾಗಿ ಇದ್ದೇ ಇರ್ತೀಯ. ಯಾಕೆ ಮುನಿಸು. ನಮಗೆ ನೀನು ಹಿಂದುಗಿಂತ ಗೌಡನಾಗಿರೋದೇ ಇಷ್ಟ. ಮನೆಯಿಂದ ಕಜ್ಜಾಯ-ಗಿಜ್ಜಾಯ ತರ್ತೀಯ :)" ಅಂತ ಸಮಾಧಾನ ಮಾಡಿದ್ವಿ.

ಆದರೆ ಕನ್ನಡದ ವಿಷಯದಲ್ಲಿ ಹೀಗೆ ಜಾಸ್ತಿ ಇಲ್ಲ. ಕನ್ನಡದಲ್ಲಿ ಎಲ್ಲ ಕನ್ನಡಗಳೂ ಸಲ್ಲುವವು. ಬೆಂಗಳೂರಲ್ಲಿ ಹೆಚ್ಚು ಬರಹಗಾರರು ಇದ್ದಾರೆ, ಹೆಚ್ಚು publishers ಇದ್ದಾರೆ ಅದಕ್ಕೆ ಅಲ್ಲಿ ಬೆಂಗಳೂರ ಕನ್ನಡ ಇದೆ. ಹಾಗೆ ಗದಗದಿಂದ ಹೊರಬಂದ ಹೊತ್ತಗೆಗಳಲ್ಲಿ ಗದಗದ ನುಡಿಯಿದೆ.

ಬಡಗಲ ಕನ್ನಡದಲ್ಲಿ ಹಲವಾರು ಕನ್ನಡ ಸಿನಿಮಾಗಳು ಬಂದಿವೆ ಸಂತ ಶಿಶುನಾಳ ಷರೀಪ, ಸಿಂಗಾರವ್ವ, ಮುನ್ನೆ ಬಂದ ಜೊತೆಜೊತೆಯಲಿ, ಕಂಠಿ ಮುಂತಾದವು.
ನಾಯಿ ನೆರಳು ಹವ್ಯಕ + ಧಾರವಾಡ ಕನ್ನಡದಲ್ಲಿದೆ.
ಕಾಸರವಳ್ಳಿಯವರ ಹಲವು ಸಿನಿಮಾಗಳು ಮಲೆನಾಡ ಕನ್ನಡದಲ್ಲೇ ಇರೋದು.

ಹಿಂದೆ ಬಂದ "ಗುಡ್ಡದ ಭೂತ" ತುಳುನಾಡ ಕನ್ನಡವನ್ನು, "ಮೂಡಲ ಮನೆ" ಬಡಗಲ ಕನ್ನಡವನ್ನು ಸೂಸಿವೆ. ಕನ್ನಡದ ವಿಷಯದಲ್ಲಿ ಆ ಆ ಕನ್ನಡದವರು ಆ ಕನ್ನಡವನ್ನು "ಸರಕಾರದ ಬರಹ" ಬಿಟ್ಟು ಮಿಕ್ಕೆಲ್ಲೆಡೆ ಬಳಸಲು, ಬೆಳಸಲು ಅನುವಿದೆ.

ಸರಕಾರದ ಬರಹವೂ ೧೮ ಶತಮಾನದ ಮೈಸೂರು ಸಂಸ್ಥಾನದ ಕನ್ನಡದಲ್ಲಿ ನಿಂತು ಬಿಟ್ಟಿದೆ.( ಮೊನ್ನೆ ಒಂದು ಸ್ಥಿರ ಸ್ವತ್ತು ಶುದ್ಧ ಕ್ರಯಪತ್ರಕ್ಕೆ ಸಹಿ ಹಾಕಿದಾಗ ಅನ್ನಿಸಿದ್ದು )

ಕನ್ನಡದ commercial ಸಿನಿಮಾಗಳನ್ನು ಅವನ್ನು ಹೆಚ್ಚು ನೋಡುವ ನೋಡುಗನ್ನು ಮನದಲ್ಲಿಟ್ಟುಕೊಂಡು ಮಾಡ್ತಾರೆ.

ಕನ್ನಡ ಸಿನಿಮಾ ನೋಡದೇ ಇರುವದರಲ್ಲಿ ಹೆಸರುವಾಸಿಯಾದ ಮಂಗಳೂರಿಗರು(ಇದರ ಬಗ್ಗೆ ಹಿಂದೆ ಇಲ್ಲೇ ಒಂದು ಬರಹ ಬಂದಿದೆ), ತೆಲುಗು ಸಿನಿಮಾಪ್ರಿಯರಾದ ಬಳ್ಳಾರಿ, ಕೋಲಾರ, ಬೀದರ, ರಾಯಚೂರಿಗರು( ವಿಕದಲ್ಲಿ ಒಂದು ಕಿರುಬರಹ ಬಂದಿತ್ತು), ಹೀಗೆ ಬೇರೆ ಬೇರೆ ಕಾರಣಗಳಿಂದ ಅವರ ಕನ್ನಡದಲ್ಲಿ commercial ಸಿನಿಮಾ ಮಾಡಿದರೆ, ಸಿನಿಮಾ producerಗಳಿಗೆ ಗಿಟ್ಟಲ್ಲ.!!

ಕನ್ನಡ ಸಿನಿಮಾ ಜೋರಾಗಿ ನಡೆಯೋದೇ ಕಾವೇರಿ ಬಯಲು + ಮಲೆನಾಡಲ್ಲಿ( ಚಿಕ್ಕಮಗಳೂರು. ಶಿವಮೊಗ್ಗ ...) ಇಲ್ಲಿ. ಇವರ ಕನ್ನಡದಲ್ಲಿ ಬೇಕಾಷ್ಟು ಕನ್ನಡ ಸಿನಿಮ ಅದಕ್ಕೆ, ಮಾಡೋದು, ಅದೂ ಹಲವು ಹೊರರಾಜ್ಯದ producerಗಳೂ ಬಂದು.

ಗದಗ, ಕೊಪ್ಪಳ, ಬಾಗಲಕೋಟೆ, ದಾವಣಗೆರೆ-ಗಳ ಮಂದಿ ಈ ವಿಷಯದಲ್ಲಿ ಹೇಗೆ ಅಂತ ನಂಗೆ ಗೊತ್ತಿಲ್ಲ. ಇವರ ವಿಷಯ ಹೆಚ್ಚು ಎಲ್ಲೂ ಬರಲ್ಲ. ಇವರು ಒಂದು ತರಹದ ಗುಪ್ತಜೀವಿಗಳು, ಎಲೆಮರೆಯಕಾಯಿಗಳು, ಇದ್ದರೂ ಕಾಣಿಸಿಕೊಳ್ಳದ ಮಂದಿ. ಇವರ ಪಾಡುಗಿಂತ ಮಂಗಳೂರು, ಮಂಡ್ಯ, ಧಾರವಾಡ, ಬೆಳಗಾವಿಯವರ ಪಾಡು ಎಷ್ಟೋ ಮೇಲು.!

.
.
.
ಕೊನೆಯದಾಗಿ.. ಈ ಏಕೀಕರಣ, ಏಕತೆ ಎಂದು ನಮ್ಮ ನಮ್ಮ ಒಳಬಗೆಗಳನ್ನು, ಭಿನ್ನತೆಯನ್ನು ಅಳಿಸಹತ್ತಿರುವವರನ್ನು ತಡೆಯುವುದರ ಜೊತೆಗೆ, ನಮ್ಮ ನಮ್ಮ ಬೇರೆತನಗಳನ್ನು, ತನಗಳನ್ನು ಉಳಿಸಿ ಬೆಳಸಿಕೊಳ್ಳಬೇಕು. ಇದು ಅವರವರ ಹೊಣೆ.

- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ
May 27, 2007 - 9:55pm — ಮಂಜುಬೊಮ್ನಳ್ಳಿ

ಉ: ಭಾರತೀಯತೆ ಅಂದ್ರೆ ಏನು?

ಮಂಜುಬೊಮ್ನಳ್ಳಿ's picture

ಒಪ್ಪತಕ್ಕದ್ದೆ. ಮನರಂಜನೆ-ಮಾಹಿತಿಯ ವ್ಯಾಪಾರೀಕರಣದ ವಿಶಯವನ್ನ ಮುಟ್ಟಿದ್ದೀರಿ. ಅಪವಾದಗಳು ಅಲ್ಲಲ್ಲಿವೆ. ಸಮಸ್ಯೆ ಇರೋದು ಮುಖ್ಯವಾಹಿನಿಯಲ್ಲಿ.
ಭಿನ್ನತೆಯನ್ನುಳಿಸಿಕೊಳ್ಳಬೇಕೆನ್ನುವುದು ದೇವರು (ಅವನಿದ್ದರೆ) ಹೇಳಿದ ಮಾತು.

ಅಂದ ಹಾಗೆ ಈ ‘ಬರಹ’ದಲ್ಲಿ ಹೊಟ್ಟೆ ಸೀಳುವ ‘ಶ’ವನ್ನ ಬರೆಯೋದು ಹೇಗೆ? ನಾನಿಲ್ಲಿ ಹೊಸಬ. ಹೇಳ್ತೀರಾ?

  • Login or register to post comments
  • link
  • Email this ಪ್ರತಿಕ್ರಿಯೆ
May 28, 2007 - 12:06am — kishorpatwardhan

ಉ: ಭಾರತೀಯತೆ ಅಂದ್ರೆ ಏನು?

kishorpatwardhan's picture

ಶ = sha
ಷ = Sha
ಕ್ರ = kra
kRu = ಕೃ
ಜ್ಞ = j~ja

  • Login or register to post comments
  • link
  • Email this ಪ್ರತಿಕ್ರಿಯೆ
May 28, 2007 - 2:48pm — mahesha

ಉ: ಭಾರತೀಯತೆ ಅಂದ್ರೆ ಏನು?

mahesha's picture

ನೋಡಿ,

ನಾವು ನಮ್ ನಮ್ ಕನ್ನಡ ಉಳಿಸ್ಕೋಬೇಕಂದ್ರೆ, ಆದೇ ಕನ್ನಡದಾಗೆ ಹೆಚ್ಚೆಚ್ಚು ಮಾತಾಡ್ಬೇಕು, ಬರೀಬೇಕು.

ಸುಮ್ಕೆ ಸಿಸ್ಟಬಾಸೆ, ಅದೂ ಇದೂ ಮಣ್ಣೂ ಮಸಿ ಅಂತ ತಲೆಗೆಡಿಸಿಕೊಂಡ್ರೆ, ನಮ್ ನಮ್ ಹಳ್ಳೀ ಸಾವಿರ ಸಾವಿರ ಪದಗೊಳ್ ಕಾಣದಂಗೆ ಆಯ್ತಾವೆ.

ಈ ಸಂಪದದಲ್ಲೋ ಎಲ್ಲ ತರದ ಕನ್ನಡಗಳ್ನೋ ನೋಡಬೈದು. ಸಂಗನರ ಬಾಗಲಕೋಟೆ ಕನ್ನಡ, ವೈಬವರ ಮಂಡ್ಯ ಕನ್ನಡ....

ಹಿಂಗೆ ಒಂದು ಕತೆ ನೆಪ್ಪಾತು.

ಒನ್ ಸಾರಿ, ಇಂಗ್ಲೇಡಲ್ಲಿ ಒಬ್ಬ ಪರಂಗಿಯೋನು ಮಾತಾಡ್ತಿದ್ನಂತೆ, ಆಗ ಅವನು ಏನೋ ಪದ ತಪ್ ಅಂದ್ನಂತೆ. ಆಗ ಅಲ್ಲಿದ್ದ ಒಬ್ಬ ಬಾರತದೋನು ಅವಂಗೆ ಅವ್ರು ಹೇಳಿದ್ದು ತಪ್ಪು ಅಂತ ತೋರ್ಸಿದ್ನಂತೆ. ಆಗ ಆ ಪರಂಗಿವಯ್ಯ ಏನಂದ ಗೊತ್ತಾ?
"English is what an English man speaks" ಅಂತ.

ನಮ್ ನಮ್ ಎಲ್ಲ ಕನ್ನಡಗೊಳೂ, ಕನ್ನಡವೇ. ಅದ್ರಲ್ಲಿ ಚಿಕ್ದೂ, ದೊಡ್ದೂ, ಮೇಲ್ನುಡಿ, ಕೀಳ್ನಿಡಿ ಅಂತ ಇರಕ್ಕೂಡ್ದು.

ಹಂಗಂತ ಎಕ್ಕಾಮಕ್ಕ ಸಂಸ್ಕೃತ-ಇಂಗ್ಲೀಸು-ಮರಾಟಿ-ಉರ್ದು ಮುಂತಾದವನ್ನ ಹಾಕಿ ಕನ್ನಡ ಅಂದ್ರೆ ಅದನ್ನ ಒಪ್ಪಕ್ಕೆ ಆಗಕ್ಕಿಲ್ಲ.!
- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ
May 28, 2007 - 4:58pm — ಸಂಗನಗೌಡ

ಉ: ಭಾರತೀಯತೆ ಅಂದ್ರೆ ಏನು?

ಸಂಗನಗೌಡ's picture

ನಿಮ್ಮ ಮಾತು ಅಗದಿ ಸರಿ ಐತ್ ನೋಡ್ರಿ

  • Login or register to post comments
  • link
  • Email this ಪ್ರತಿಕ್ರಿಯೆ
May 29, 2007 - 6:09pm — mahesha

ಉ: ಭಾರತೀಯತೆ ಅಂದ್ರೆ ಏನು?

mahesha's picture

ನನ್ನಿ!

- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ
May 28, 2007 - 12:06am — ವೈಭವ

ಉ: ಭಾರತೀಯತೆ ಅಂದ್ರೆ ಏನು?

ವೈಭವ's picture

ನಿಮ್ಮ ದನಿಗೆ ನನ್ನ ಕೊರಲೂ ಇದೆ..

ನನ್ನ ಗೆಳೆಯರಿಂದ ನಾನು ಧಾರವಾಡ ಕನ್ನಡವನ್ನು ಚೆನ್ನಾಗಿ ಕಲಿತಿರುವೆ. ಅದನ್ನೇ ನಾನು ಹೇಳ ಹೊರಟಿದ್ದು ನಮ್ಮ ಬೇರೆ ಬೇರೆ ತನಗಳನ್ನ ಉಳಿಸಿ ಒಟ್ಟಿಗೆ ಇರುವ ಎಂದು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆಡಳಿತ ಭಾಷೆ vs ರಾಷ್ಟ್ರಭಾಷೆ
  • ನಮನ-೦೪: ಕನ್ನಡಿಗರ ಉದಾರತೆ - ಬಗ್ಗೋ? ಫೀಚರ್ರೋ?
  • ಇದು ಸೋಲುವ ಯುದ್ಧವೇ ?
  • ಕನ್ನಡ ನಾಲಡಿಗಳು - ದಯವಿಟ್ಟು ಈ ಪದ್ಯ ಬಿಡಿಸಿ
  • ಅಮ್ಮಜಿಖಷೆಸ್ಸ ಖನಮ ಒಜಿ
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator