Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಸಮುದಾಯ

ಇವುಗಳಿಗೆ ಏನನ್ನುತ್ತಾರೆ ?

May 25, 2007 - 6:02pm — ವೈಭವ

ಹಚ್ಚ  ಹಸಿರು
ಹೊಚ್ಚ  ಹೊಸ
ಬೆಳ್ಳಂ ಬೆಳಿಗ್ಗೆ

ಅಂದ್ರೆ ಯಾವುದಕ್ಕೆ ಹೆಚ್ಚು ಒತ್ತು ಕೊಡುವಾಗ ಹೀಗೆ ಪದಗಳ(ಹಚ್ಚ, ಹೊಚ್ಚ, ಬೆಳ್ಳಂ) ಬಳಕೆ ಏನನ್ನುತ್ತಾರೆ...?

‹ ಅಹಿ೦ಸಾ ಪರಮೋ ದರ್ಮ: ಸಿಂಗಾಪುರ ಏರ್ ಲೈನ್ಸ್ ನವರ ಚುರುಕುತನ ›
  • ಸಮುದಾಯ
Ornamental seperator
  • Login or register to post comments
  • 448 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 25, 2007 - 8:28pm — ASHOKKUMAR

ಉ: ಇವುಗಳಿಗೆ ಏನನ್ನುತ್ತಾರೆ ?

ASHOKKUMAR's picture

ಇಂತಹ ಶಬ್ದಗಳು ಗುಣವಾಚಕ ಅಥವಾ ವಿಶೇಷಣಗಳು ಅಂತ ಅಂದು ಕೊಂಡಿದ್ದೇನೆ(adjective).
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
May 25, 2007 - 8:54pm — kishorpatwardhan

ಉ: ಇವುಗಳಿಗೆ ಏನನ್ನುತ್ತಾರೆ ?

kishorpatwardhan's picture

ಇವು ಬಹುಶಃ ವಿಶೇಷಣಗಳಲ್ಲ. ಯಾಕೆಂದರೆ ಇವಕ್ಕೆ ಪ್ರತ್ಯೇಕವಾಗಿ ಅರ್ಥ ಇಲ್ಲ. ಈ particular ಶಬ್ದಗಳ ಜೊತೆ ಉಪಯೋಗಿಸಿದಾಗ ಮಾತ್ರ ಇವು ವಿಶೇಷಣಗಳಂತೆ ವರ್ತಿಸುತ್ತವೆ. ಹಾಗಾಗಿ ಇವು ಜೋಡುಪದಗಳು ಅನ್ನಿಸುತ್ತದೆ.

  • Login or register to post comments
  • link
  • Email this ಪ್ರತಿಕ್ರಿಯೆ
May 26, 2007 - 12:50pm — mahesha

ಉ: ಇವುಗಳಿಗೆ ಏನನ್ನುತ್ತಾರೆ ?

mahesha's picture



- ಮಾಯ್ಸ Smiling
  • Login or register to post comments
  • link
  • Email this ಪ್ರತಿಕ್ರಿಯೆ
May 25, 2007 - 10:11pm — mahesha

ಉ: ಇವುಗಳಿಗೆ ಏನನ್ನುತ್ತಾರೆ ?

mahesha's picture

ಇವು ಗುಣವಾಚಕ, ವಿಶೇಷಣಗಳಲ್ಲ..

ಇವು ಬರಿ ಕನ್ನಡದಲ್ಲಿ ಇರಬಹುದಾದ ನುಡಿಯ ಅಂಶ!

ಹಚ್ಚುಹಸಿರು = ಬಹಳ ಹಸಿರು, ಕಡುಹಸಿರು ( ಹಚ್ಚ ಹಸಿರಿನ ಗುಣ ಹೇಳುತ್ತಿಲ್ಲ, ಹಸಿರೇ ಗುಣವಾಚಕ )
ಪಚ್( ದ್ರಾವಿಡ ಮೂಲ )

ಹೊಚ್ಚಹೊಸ = ಬಹಳ ಹೊಸ
ಪೊಚ್.

ಇವು ಒಂದು ಸಂಗತಿಯನ್ನು ಒತ್ತಿ ಹೇಳಲು, ಅದೇ ಒರೆಯನ್ನು ಮತ್ತೆ ಮತ್ತೆ ಹೇಳುವ ದ್ಚಿರುಕ್ತಿ, ಪುನರುಕ್ತಿ,, ಸೇರಿಸಬಹುದೇನೋ.

ನಟ್ಟನಡು, ಕಟ್ಟಕಡೆ, ಸುಮ್ಸುಮ್ನೆ, ಒಳೊಳಗೆ ಮುಂತಾದವು.

- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ
May 25, 2007 - 10:54pm — hamsanandi

ಉ: ಇವುಗಳಿಗೆ ಏನನ್ನುತ್ತಾರೆ ?

hamsanandi's picture

ಕಿಶೋರ್ ಮತ್ತು ಮಾಯ್ಸರು ಹೇಳಿದ ಹಾಗೆ ಇದು ಜೋಡು ಪದ/ದ್ವಿರುಕ್ತಿ ಎನ್ನುವುದೇ ಸರಿ ಎನ್ನಿಸುತ್ತೆ. ಜಿ.ವೆಂಕಟಸುಬ್ಬಯ್ಯನವರ ಇಗೋ ಕನ್ನಡ ದಲ್ಲಿ ಇವುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ನೆನಪು.

Quote:
ಇವು ಬರಿ ಕನ್ನಡದಲ್ಲಿ ಇರಬಹುದಾದ ನುಡಿಯ ಅಂಶ!

ಎಲ್ಲಾ ದ್ರಾವಿಡ ಭಾಷೆಗಳಲ್ಲೂ ಇರಬಹುದು ಎನ್ನಿಸುತ್ತೆ. ಆದರೆ ನನಗೆ ಈ ಕ್ಷಣದಲ್ಲಿ ತಮಿಳಿನ ಒಂದೆರಡಕ್ಕಿಂತ ಹೆಚ್ಚು ಉದಾಹರಣೆಗಳು ಹೊಳೆಯುತ್ತಿಲ್ಲ.

Quote:
ಹಚ್ಚುಹಸಿರು = ಬಹಳ ಹಸಿರು, ಕಡುಹಸಿರು ( ಹಚ್ಚ ಹಸಿರಿನ ಗುಣ ಹೇಳುತ್ತಿಲ್ಲ, ಹಸಿರೇ ಗುಣವಾಚಕ )
ಪಚ್( ದ್ರಾವಿಡ ಮೂಲ )
Quote:

ಈ ಪದಗಳು ಹಸಿರು + ಹಸಿರು ಎಂಬ ಜೋಡು ಪದ ಬಂದಾಗ, ಸ ಗೆ ಚ ಆದೇಶವೂ ( ತಮಿಳಲ್ಲಿ ಸ, ಚ ಭೇದವಿಲ್ಲವೆನ್ನುವುದೂ ಗಮನಿಸಬೇಕಾದ ಅಂಶ), ಮತ್ತು ವರ್ಗದ ಮೂರನೇ ಅಕ್ಷರಕ್ಕೆ ಮೊದಲ ಅಕ್ಷರ ಎರಡುಸಲ (ಒತ್ತಕ್ಶರ) ಆದೇಶವಾಗಿ ಬರುವುದರಿಂದ ಆಗುತ್ತವೆ.

ಹಸಿರು + ಹಸಿರು -> ಹಚ್ಚ ಹಸಿರು ( ಸ ಗೆ ಚ್ಚ)
ಮೊದಲು + ಮೊದಲು -> ಮೊತ್ತಮೊದಲು ( ಮೊಟ್ಟಮೊದಲು ಎಂಬುದು ತಪ್ಪು ಪ್ರಯೋಗ - ದ ಗೆ ತ್ತ)
ನಡುವೆ + ನಡುವೆ -> ನಟ್ಟನಡುವೆ ( ಡ ಗೆ ಟ್ಟ)

ಕಡೆಗೆ + ಕಡೆಗೆ -> ಕಟ್ಟಕಡೆ ( ಡ ಗೆ ಟ್ಟ)

ಹೊಸತು + ಹೊಸತು -> ಹೊಚ್ಚಹೊಸತು ( ಸ ಗೆ ಚ್ಚ)

ಹೊಚ್ಚಹೊಸತುಗೆ ತಮಿಳಿನ ರೂಪ ಪುದುಸು + ಪುದುಸು -> ಪುತ್ತಂಪುದುಸು (ದ ಗೆ ತ್ತ)
* ಇಲ್ಲಿಯೂ ಕನ್ನಡದ್ದೇ ನಿಯಮ ಉಪಯೋಗವಾಗಿರುವುದನ್ನು ಹಮನಿಸಬಹುದು.

ನಟ್ಟನಡುವಿಲೆ ಎಂಬ ಪ್ರಯೋಗವನ್ನೂ ತಮಿಳಿನಲ್ಲಿ ಕೇಳಿದ್ದೇನೆ. ಆದರೆ, ಮುತ್ತಮುದಲ್, ಕಟ್ಟಕಡೈಸಿ ಇತ್ಯಾದಿ (ಕನ್ನಡಕ್ಕೆ ಸಮಾಂತರವಾದ) ಪದಗಳನ್ನು ನಾನು ಕೇಳಿಲ್ಲ. ತಮಿಳು ಚೆನ್ನಾಗಿ ಬರುವವರಿದ್ದರೆ ಬರೆಯಿರಿ.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
May 26, 2007 - 12:42pm — mahesha

ಉ: ಇವುಗಳಿಗೆ ಏನನ್ನುತ್ತಾರೆ ?

mahesha's picture

ಹಂಸಾನಂದಿಯವರು ಬಹಳ ಒಪ್ಟವಾಗಿ ಅರುಹಿದ್ದಾರೆ.

ಈ ಬಗೆ ಬಳಕೆ ತಲುಗಲ್ಲೂ ಇವೆ, ಅಂತ ಕೇಳಿದ್ದೀನಿ.... ಒಟ್ಟಿನಲ್ಲಿ ದ್ರಾವಿಡ ನುಡಿಕುಳದಲ್ಲಿ ಇರುವ ಒಂದು ವಿಶೇಷ ಪ್ರಯೋಗ.

ಆದರೆ ಇದು ದ್ವಿರುಕ್ತಿಗಿಂತ ಕೊಂಚ ಬೇರೆಯಾಗಿದೆ.

ಸಂಸ್ಕೃತದಲ್ಲಿ
ಇಷದಿಷದ್ = ಕೊಂಚ ಕೊಂಚ
ಶ್ರಾವಂ ಶ್ರಾವಂ = ಕೇಳಿ ಕೇಳಿ( ಶ್ರುತ್ವಾ, ಶ್ರುತ್ವಾ ಅಂದರೆ ತಪ್ಪಂತೆ Smiling )
ಪುನಃಪುನಃ, ಮುಹುರ್ಮುಹುಃ,

ಕನ್ನಡದಲ್ಲಿ
ಮತ್ತೆ ಮತ್ತೆ, ಎದ್ದೆದ್ದು, ಒಳೊಳಗೆ, ಗಡಗಡ, ಪಳಪಳ, ಬಿಸಿಬಿಸಿ, ರಪರಪ, ಬಿರಬಿರ,

ಇಲ್ಲಿ ಅದೇ ಒರೆ ಮತ್ತೆ ಬಂದಿದೆ.

ಆದರೆ ಈ 'ಹೊಚ್ಚಹೊಸ, ಕಟ್ಟಕಡೆ', 'ನಟ್ಟನಡು' ಇಲ್ಲಿ ಹಾಗೆ ಆಗಲ್ಲ. ಬದಲಿಗೆ ದ್ರಾವಿಡ-ಧಾತು-ಮೂಲ್ ಬಂದಿದೆ, ಅಲ್ವಾ( ಹಂಸಾನಂದಿ ಇದ್ದನ್ನೇ ಹೇಳಿದು )

ಹೊಚ್/ಹೊಸ್
ಹೊಚ್ಚಹೊಸ,

ಬೆಳ್
ಬೆಳ್ಳಂಬೆಳಗು, ಬೆಳಬೆಳನೆ

ಕಟ್/ಕಡ್
ಕಟ್ಟಕಡೆ

ನಟ್/ನಡ್
ನಟ್ಟನಡು

ಪಚ್ಚಪಯಿರು ( ಪಯಿರು - ತಮಿಳು, ಪಸಿರು/ಹಸಿರು ಕನ್ನಡ, ಉಯಿರ್‍/ಉಸಿರ್‍ ಹಾಗೆ ಅಲ್ವಾ? )
================

ಇದೂ ಅಲ್ಲದೇ, ಶಬ್ದಮಣಿದರ್ಪದ ಒಂದು ಸಂಧಿಕ್ರಿಯೆ.. ಹೀಗಿದೆ
ಇನ್ + ಸರ = ಇಂಚರ ( ಸ => ಚ )
ಇರ್‍ + ಸಾಸಿರ = ಇಚ್ಚಾಸಿರ/ಇಚ್ಛಾಸಿರ ( ಮರೆತು ಹೋಗಿದೆ Sad )

ಒಟ್ಟಿನಲ್ಲಿ

ದ್ರಾವಿಡನುಡಿಗಳಲ್ಲಿ "ಸ, ಶ, ಚ" ನಡುವೆ ಹೆಚ್ಚು ಭೇದವಿಲ್ಲ ( ತಮಿಳಂತೆ )
ಮೃದು-ಕರ್ಕಶಗಳ ನಡುವೆಯೂ ಕೂಡ ಗೆಳೆಯ/ಕೆಳೆಯ, ಹೊದಿಗೆ/ಹೊದಿಕೆ

ಕ ಬದಲು ಚ
ಕಿವಿ( ಕನ್ನಡ ) = ಚಿವಿ ( ತಮಿಳು )
ಕೆಳೆ = ಸೆಳೆ/ಚೆಳೆ
ಕೇರ = ಚೇರ
ಕೈ = ಚೈ

ಮುಂದಾದವು...

ಈ ದ್ರಾವಿಡನುಡಿಗಳ ಗುಣ ಸಂಸ್ಕೃತದಲ್ಲಿ ಕಾಣಸಿಗುವುದಿಲ್ಲ.!!

- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ
May 26, 2007 - 12:43pm — ವೈಭವ

ಉ: ಇವುಗಳಿಗೆ ಏನನ್ನುತ್ತಾರೆ ?

ವೈಭವ's picture

ಇವುಗಳು ದ್ವಿರುಕ್ತಿಗಳಲ್ಲ

ದ್ವಿರುಕ್ತಿಗಳಲ್ಲಿ ಉದಾ: ಪೆಟ್ಟಿಗೆಯಲ್ಲಿ "ಝಣಝಣ" ಹಣದ ಸದ್ದು ಕೇಳಿಸಿತು.
ಶಾಲೆಯಲ್ಲಿ "ಗಣಗಣ" ಗಂಟೆ ಬಾರಿಸಿತು.
ಮಳೆಯು "ಪಟಪಟ"ನೆ ಬಂತು
ಒಗ್ಗರಣೆ 'ಚಟಚಟ' ನೆ ಸದ್ದು ಮಾಡಿತು

' ಮಾಯ್ಸ' ಹೇಳಿದ ಹಾಗೆ ಇವು ಗುಣವಾಚಕಗಳಲ್ಲ ಏಕೆಂದರೆ ಹಚ್ಚ, ಹೊಚ್ಚ ಇವುಗಳಿಗೆ independent ಅರ್ಥಗಳಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
May 26, 2007 - 12:49pm — mahesha

ಉ: ಇವುಗಳಿಗೆ ಏನನ್ನುತ್ತಾರೆ ?

mahesha's picture

ವೈವವ

ಜಣಜಣ, ಗಣಗಣ, ಪಟಪಟ, ಚಟಪಟ, ಪಳಪಳ, ರಪರಪ, ತಟತಟ, ಇವನ್ನು ದ್ವಿರುಕ್ತಿ /ಮತ್ತುಲಿ ಅಂತ ಹೇಳಿದರೂ, ಅನುಕರಣ-ವಾಚಕ/ ಅಣಕುಲಿ ಅನ್ನೋದು ಹೆಚ್ಚು ಸರಿ ಅಂತ ನನ್ನ ಅನಿಸಿಕೆ.

ದ್ವಿರುಕ್ತಿಗೆ ಮತ್ತೆಮತ್ತೆ, ಅಡಿಗಡಿಗೆ, ಒಳಗೊಳಗೆ, ಅಲ್ಲಲ್ಲೇ, ಇಲ್ಲಿಲ್ಲೇ , ಎಲ್ಲೆಲ್ಲೋ ಇವು ಮಾದರಿ. ಇಲ್ಲಿ ಒಂದು ದಿಟವಾದ ಒರೆ ಮತ್ತೆಮತ್ತೆ ಬಂದಿದೆ.

- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಕಾವ್ಯ
  • ಪ್ರೇಮದ ಓಲೆ
  • ನಾನು ಯಾವ ಆತ್ಮ
  • ಗಂಡು-ಗಾದೆ
  • ಪುರದ ಪಾಪಿಗಳು
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator