ಲಿನಕ್ಸ್‌ನಲ್ಲಿ ಕನ್ನಡ
ನಾನು ಅನೇಕ ದಿನಗಳಿಂದ ಲಿನಕ್ಸ್ ಬಳಸುತ್ತಿದ್ದೇನೆ. ಇತ್ತೀಚಿಗೆ ಕುಬುಂಟು ಫಿಯೆಸ್ಟಿ ಹಾಕಿಕೊಂಡೆ (ಬೆರಿಲ್ ವಿಂಡೋ ಮೇನೇಜರ್ ಜೊತೆಗೆ) ತುಂಬಾ ಚೆನ್ನಾಗಿದೆ. ಆದರೆ ಅದರಲ್ಲಿ ಕನ್ನಡ ಬಳಕೆ ಹೇಗೆ. ಸಂಪದದ Font Help ವಿಕಿ ಎಲ್ಲಾ ನೋಡಿದೆ. ಆದರೂ ಯಾಕೋ ಆಗ್ತಾ ಇಲ್ಲ. scim ಅನ್ನು ಉಪಯೋಗಿಸುವುದು ಹೇಗೆ? Shortcut ನಾವೇ ಮಾಡಿಕೊಳ್ಲಬೇಕೇ? ಕಾಂಕರರ್ ನಲ್ಲಿ ಸಂಪದ ನೋಡಬಹುದು, ಆದರೆ ಫೈರ್‍ಫಾಕ್ಸ್‌ನಲ್ಲಿ ಕನ್ನಡ ಕಾಣಲ್ಲ. (Helpನಲ್ಲಿ pango ಸರಿಯಾಗಿ ತೋರಿಸಿರುವಂತೆ ಇದೆ). ಇನ್ನೇನು ಮಾಡಲಿ?

- Login or register to post comments
- 604 hits
- Email this forum




RSS:
ಉ: ಲಿನಕ್ಸ್‌ನಲ್ಲಿ ಕನ್ನಡ
ಈ ಕೊಂಡಿ ತುಸು ಸಹಾಯ ಮಾಡಬಹುದು:
http://sampada.net/article/3028
*ಅಶೋಕ್
ಉ: ಲಿನಕ್ಸ್‌ನಲ್ಲಿ ಕನ್ನಡ
ಈ ಲಿಂಕ್ ನೋಡಿ
ಫಿಯೆಸ್ಟಿಗೂ ಉಪಯೋಗಿಸಬಹುದು
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಲಿನಕ್ಸ್‌ನಲ್ಲಿ ಕನ್ನಡ
http://dev.sampada.net/wiki/Kannada-on-Ubuntu-Edgy#FirefoxonEdgy ನೋಡಿ.
ಉ: ಲಿನಕ್ಸ್‌ನಲ್ಲಿ ಕನ್ನಡ
ಬರೆಯಲು ಮರೆತೆ: SCIM ಬಗ್ಗೆ ಕೇಳಿದಿರಲ್ಲ... ಅದರ ಬಗ್ಗೆಯೂ ಡಾಕುಮೆಂಟೇಶನ್ ಇದೆ:
http://dev.sampada.net/wiki/SCIM-m17n-on-Ubuntu
https://wiki.ubuntu.com/InputMethods/SCIM/Setup
ಅದನ್ನು ಸಂಪೂರ್ಣ ಓದಿಕೊಂಡು ಪ್ರಯತ್ನಿಸಿ. ನಾನು ಪ್ರತಿನಿತ್ಯ ಸಂಪದ ಮತ್ತು ಇನ್ನುಳಿದ ಯೂನಿಕೋಡ್ ನಲ್ಲಿರುವ ಸೈಟುಗಳನ್ನು ಓದುವುದು ಹಾಗೂ ಇಲ್ಲೆಲ್ಲ ಟೈಪಿಸುವುದು ಉಬುಂಟುವಿನಿಂದಲೇ. ನಾನು ಮತ್ತು ನನ್ನ ಸ್ನೇಹಿತರು ಲಿನಕ್ಸ್ ಬಳಸಿ ಕನ್ನಡದಲ್ಲೇ ಚ್ಯಾಟ್ ಕೂಡ ಮಾಡುತ್ತಿರುತ್ತೇವೆ.
ಮತ್ತೊಂದು ವಿಷಯ, ಮೇಲಿನ ಡಾಕ್ಯುಮೆಂಟ್ ಪುಟಗಳನ್ನು (ಸಂಪದ ಐಡಿ ಬಳಸಿ ಲಾಗಿನ್ ಆಗಿ) ನೀವೂ ಬದಲಾಯಿಸಬಹುದು. ಡಾಕ್ಯುಮೆಂಟೇಶನ್ನಿನಲ್ಲಿ ಎಲ್ಲರೂ ಪಾಲ್ಗೊಳ್ಳಬಹುದು.
ಉ: ಲಿನಕ್ಸ್‌ನಲ್ಲಿ ಕನ್ನಡ
ಎಲ್ಲಾ ಮಾಡಿದರೂ ಕೊನೆಗೆ ಕನ್ನಡದ ಬದಲು ಹಿಂದಿ ಅಕ್ಷರಗಳು ಬರಲು ಸುರುವಾಯಿತು. ಈಗ ಪುನಃ ರಿ-ಇನ್ಸ್ಟಾಲ್ (?) ಮಾಡಬೇಕಾಗಿದೆ (ಬೇರೆ ಕಾರಣಕ್ಕೆ). ಇನ್ನೊಮ್ಮೆ ಪ್ರಯತ್ನಿಸುವೆ.
ಉ: ಲಿನಕ್ಸ್‌ನಲ್ಲಿ ಕನ್ನಡ
re-install ಯಾಕೆ ಮಾಡಬೇಕು? ತೊಂದರೆ ಏನೆಂಬುದನ್ನ ಕಂಡು ಹಿಡಿದು ತೆಗೆದುಹಾಕಬಹುದು. ರಿ-ಇನ್ಟ್ಸ್ಟಾಲ್ ಮಾಡೋದು hasty ವಿಧಾನ ಅನ್ಸತ್ತೆ.
ಏನು ಬದಲಾಯಿಸಿದಿರಿ? ಸರಿಯಾಗಿ ಓದಿಕೊಂಡು ಬದಲಾಯಿಸಿದಿರೋ ಹೇಗೆ?