ಓಹೋ ಕನ್ನಡದವ್ರಾ?
ಓಹೋ ಕನ್ನಡದವ್ರಾ?
ಈ ಪ್ರಶ್ನೆಯನ್ನ ಸಾಮಾನ್ಯವಾಗಿ ನೀವು ಎಲ್ಲಿ ಕೇಳಿರುತ್ತೀರಿ? ಹೊರ ರಾಜ್ಯದಲ್ಲೋ, ಹೊರ ದೇಶದಲ್ಲೋ?. ಆದರೆ ಕಳೆದ ಒ೦ದು ವಾರದಿ೦ದ ಈ ಪ್ರಶ್ನೆ ನನಗೆ ಸ್ವಲ್ಪಮಟ್ಟಿನ ಬೇಸರ ತ೦ದುಕೊಟ್ಟಿದೆ, ಯಾಕ೦ದ್ರೆ ಈ ಪ್ರಶ್ನೆಯನ್ನ ನಾನು ಕೇಳಿದ್ದು ನಮ್ಮದೇ ಆದ ಬೆ೦ಗಳೂರಿನಲ್ಲಿ. ಒ೦ದು ಸಾರಿಯಾಗಿದ್ದರೆ ಅಷ್ಟೊ೦ದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಒ೦ದೆ ವಾರದಲ್ಲಿ ಎರಡು ಮೂರು ಬಾರಿ ಈ ಪ್ರಶ್ನೆಯನ್ನ ಎದುರಿಸಬೇಕಾಯಿತು.
ನಾನು ಬೆ೦ಗಳೂರಿನ ಹೊಸೂರು-ಸರ್ಜಾಪುರ(ಎಚ್.ಎಸ್.ಆರ್) ಬಡಾವಣೆಯಲ್ಲಿ ವಾಸಿಸುತ್ತಿದ್ದೇನೆ. ಮೊನ್ನೆ ಈಗೆ ನಮ್ಮ ಮನೆಯ ಮು೦ದೆ ಮು೦ಜಾವಿನಲ್ಲಿ ನನ್ನ ಕಾರು ಸ್ವಚ್ಚಗೋಳಿಸುತ್ತಿದ್ದಾಗ, ಒಬ್ಬ ನಿವ್ರುತ್ತ ಉನ್ನತ ಸರಕಾರಿ ಅಧಿಕಾರಿಯವರೊಬ್ಬರು ತಮ್ಮ ನೆಚ್ಚಿನ ನಾಯಿಯೊ೦ದಿಗೆ ವಾಯು ವಿಹಾರಕ್ಕೆ ಬ೦ದರು. ನಮ್ಮ ಮನೆಯೇ ಕೊನೆಯದು, ಮು೦ದೆ ರಸ್ತೆಯಿಲ್ಲದಿದ್ದರಿ೦ದ ಅವರು ವಾಪಸಾಗುವವರಿದ್ದರು. ಆಗೆ ನನ್ನನ್ನ ನೋಡಿದ ಅವರು ಮಾತಿಗೆಳೆದರು. ಉಭಯಯಕುಶಲೋಪರಿಯ ನ೦ತರ ಸ೦ಕ್ಷಿಪ್ತವಾಗಿ ಅವರ ಪರಿಚಯ ಮಾಡಿಕೊಟ್ಟರು ಮತ್ತು ನಾನೂ ನನ್ನ ಪರಿಚಯ ಹೇಳಿದೆ. ನ೦ತರ ಹೊರಡಲು ಅನುವಾದ ಅವರು ಹೇಳಿದ್ದ ನೋಡಿ ಬೆಸರವಾಯಿತು, ಸಾರ್ ಈ ಬಡಾವಣೆಯಲ್ಲಿ ಕನ್ನಡವದರು ಸಿಗೋದೆ ಅಪರೂಪ, ನೀವು ಸಿಕ್ಕಿದ್ದು ತು೦ಬಾ ಸ೦ತೋಷವಾಯಿತೆ೦ದರು!. ಇದನ್ನ ಕೇಳಿ ನನಗೆ ಸ್ವಲ್ಪ ಕೇದವಾಯಿತು!.
ನ೦ತರ ಶನಿವಾರ ಸ೦ಜೆ ಬಸವನಗುಡಿಗೆ ಹೋಗಿ ಸ೦ಸಾರ ಜೊತೆ ಮನೆಗೆ ಕಾರಿನಲ್ಲಿ ವಾಪಾಸಾಗುತ್ತಿದ್ದೆ. ಮಡಿವಾಳ ಚೆಕ್ ಪೊಸ್ಟ್ ನ ಹತ್ತಿರ ಏಕ ಮುಕ ಸ೦ಚಾರದಲ್ಲಿ ಚಲಿಸಿಬಿಟ್ಟಿದ್ದೆ!. ಕತ್ತೆಲೆಯಾಗಿದ್ದರಿ೦ದ ನನಗೆ ಈ ಸೂಚನಾ ಪಲಕ ವೀಕ್ಷಿಸಿರಲಾಗಿರಲಿಲ್ಲ. ಕ್ಷಣ ಮಾತ್ರದಲ್ಲಿ ಹಾಜರಾದ ಅರಕ್ಷಕರು ಜೊರುಮಾಡುತ್ತಿದ್ದರು. ಸ್ವಲ್ಪ ವಿಚಲಿತನಾಗಿ,ಕಾರನ್ನ ಬದಿಗೆ ನಿಲ್ಲಿಸಿ, ಗೊತ್ತಾಗಲಿಲ್ಲ ಸಾರ್ ದಯವಿಟ್ಟು ಕ್ಷಮಿಸಿ ಎ೦ದೆ. ಇದನ್ನ ಕೇಳಿದ ಅವರು ಏನನ್ನ ಬೇಕು ಗೊತ್ತೆ? " ಓಹೋ ಕನ್ನಡದವ್ರಾ?" ಎನ್ನ ಬೇಕೆ?. ನಾನು ಕನ್ನಡವದನಾದ್ದರಿ೦ದ ಕೇವಲ ಎಚ್ಚರಿಕೆ ಕೋಟ್ಟು ಹೊರಟು ಹೋದರು!.
ಇವೆರಡೂ ಘಟನೆಗಳು ನಡೆದ ಮೇಲೆ ನಮ್ಮ ನೆಲದಲ್ಲೇ ನಾವು ಪರಕೀಯರಗುತ್ತಿದ್ದೇವಲ್ಲ ಎ೦ದು ಸ್ವಲ್ಪ ಬೇಸರವಾಯಿತು. ಬೆ೦ಗಳೂರಿನ ಕೆಲವು ಬಡಾವಣೆಗಳಲ್ಲಿ ಕನ್ನಡವನ್ನ ದುರ್ಬೀನು ಹಾಕಿ ಹುಡುಕ ಬೇಕಾಗಿರುವುದು ನಿಜಕ್ಕೂ ಶೋಚನೀಯ.

- Login or register to post comments
- 673 hits
- Email this forum





RSS:
ಉ: ಓಹೋ ಕನ್ನಡದವ್ರಾ?
ಕನ್ನಡ ಮಾತನಾಡಿದಾಗ "ನೀವು ಮಾತಾಡುತ್ತಿರುವುದು ಯಾವ ಭಾಷೆ?" ಎಂಬ ಪ್ರಶ್ನೆ (ಬೇರೆ ಭಾಷೆಯಲ್ಲಿ) ಬರುವುದಕ್ಕಿಂತ ಇದು ವಾಸಿ.
*ಅಶೋಕ್
ಉ: ಓಹೋ ಕನ್ನಡದವ್ರಾ?
ಪರಿಸ್ತಿತಿಯನ್ನ ನೋಡಿದರೆ ಆ ದಿನ ಬ೦ದೇ ಬಿಡಬಹುದಾ ಎ೦ದು ದಿಗಿಲಾಗುತ್ತದೆ!.
ಉ: ಓಹೋ ಕನ್ನಡದವ್ರಾ?
ಪರ್ವಾಗಿಲ್ಲ! ಕನ್ನಡದವರು ಅಂತ ಎಚ್ಚರಿಕೆ ಕೊಟ್ಟದ್ದು ಅಚ್ಚರಿಯೇ! ಇಂಗ್ಲೀಷಿನಲ್ಲಿ ಮಾತನಾಡಿದ್ರೇ ಗೌರವ ಹೆಚ್ಚು - ಕನ್ನಡ ಪೋಲಿಸ್ರುಗೂ ಚೆನ್ನಾಗಿ ಬರತ್ತೆ ನೋಡಿ, ಕಾರು ಬದಲು ಬೈಕಾಗಿದ್ರೆ "ಏಯ್ ಯಾವ್ ಕಡೆಗೋ ಹೋಗೋದು? ಹಾಕೋ ಗಾಡೀನ ಸೈಡಿಗೆ" ಅಂತ ಮಂಗಳಾರತಿ ಮಾಡಿರುತ್ತಿದ್ದರು.
ಉ: ಓಹೋ ಕನ್ನಡದವ್ರಾ?
ಬೆಂಗಳೂರಿಗೆ ನೀವು ಹೊಸಬರಾ?
ಹೊಳೆನರಸೀಪುರದ ಕನ್ನಡ ಇಲ್ಲಿ ಸಿಕ್ಕುಕ್ಕಿಲ್ಲ ಬಿಡಿ ಸಾರ್!!
ಒಂದು ಸರತಿ ಕೋರಮಂಗಲಕ್ಕೆ ಬಂದ ಮೇಲೆ ನಾವು ಬೆಂಗಳೂರನ್ನು ಬಿಟ್ಟು 'ಬ್ಯಾಂಗಲೋರ್" ಅನ್ನು ಹೊಗಿಕೊಂಡಿದ್ದೀವಿ ಅಂತ ತಿಳಿದುಕೊಳ್ಳಬೇಕು.
ನನ್ ಮನೆಯೂ HSR ಹತ್ರವೇ ಇರೋದು, ಆದರೆ HSRಅಲ್ಲಿ ಇಲ್ಲ. ಆದ್ರೆ ನಮ್ ರೆಡ್ಡಿ ಅಣ್ಣತಮ್ಮಂದ್ರು ನಮ್ ಮನೆ ಸುತ್ಲ ತುಂಬಿಕೊಂಡವ್ರೆ. ಅವರು ನೆಟ್ಟಗೆ ನನ್ ಜೊತೆ ಕನ್ನಡ ಮಾತಾಡ್ತಾರೆ. ನಮ್ಗೂ ಬಲು ಮೋಜು ಅವರ ಜೊತೆ ಮಾತಾಡಕ್ಕೆ.
ಮೊನ್ನೆ ಏನಾಯ್ತು ಗೊತ್ತಾ...
ನಾವು ಬಾಳೆಹಣ್ಣು ತಗೊಳಕ್ಕೆ ಹೋದ್ವು. ಅವನು "ತೀನ್ ರುಪೀ" ಅಂದ, ಅದಕ್ಕೆ ನಾವು "ಕನ್ನಡದಲ್ಲಿ ಹೇಳ್ರಿ" ಅಂದ್ವು( ಸುಮ್ನೆ ಆಟ ಆಡ್ಸಕ್ಕೆ
)... ಪಾಪ ಆವಯ್ಯ "ಅಯ್ಯೋ ಮೂರು ರುಪಾಯಿ. ನಮಗೆ ಕನ್ನಡಾ ಅಂದ್ರೆ ಇಷ್ಟ ಸಾರ್." ಅಂದು ಹೆದರಿಕೊಂಡಂತೆ ಹೇಳ್ದ. 
ಏನಿಲ್ಲ, ಹೋಗಿ ಕನ್ನಡದಲ್ಲಿ ಮಾತು ಶುರುಮಾಡಿ ಎಲ್ಲ ಮಾತಾಡ್ತಾರೆ. !!
- ಮಾಯ್ಸ
ಉ: ಓಹೋ ಕನ್ನಡದವ್ರಾ?
ಬೆಂಗಳೂರಿನಲ್ಲಿ ಕನ್ನಡದಲ್ಲೇ ಮಾತನಾಡುವ ಹಾಗೂ ಅದನ್ನು ಪಾಲಿಸುವ, ತಂತ್ರಾಂಶ ಅಭಿಯಂತರರ ಬಗ್ಗೆ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ನಮ್ಮ ವಿಶ್ವೇಶ್ವರ ಭಟ್ಟರು ಬರೆದ್ದಿದ್ದು ಓದಿದ್ದೇನೆ. ಆ ಕನ್ನಡ ಗಣದ ಕೆಲವರು ಸಂಪದದ ಸದಸ್ಯರೂ ಇರಬಹುದು. ಇಚ್ಚಾಶಕ್ತಿಯ ಕೊರತೆಯಿಂದಾಗಿ ಕನ್ನಡ ಬಡವಾಗುತ್ತಿದೆ ಎಂಬ ಅಧೈರ್ಯ ನಮ್ಮ ನಿಮ್ಮೆಲ್ಲರ ಕಾಡುತ್ತಿದೆ ಹೊರತಾಗಿ ಕನ್ನಡಕ್ಕೆ ಎಲ್ಲಿಯೂ ಸಾವಿಲ್ಲ .
ಉ: ಓಹೋ ಕನ್ನಡದವ್ರಾ?
ನಾವು ಬೇರೆ ಭಾಷೆಯವರ ಬಗ್ಗೆ ಹೇಳ್ತಿವಿ. ಆದರೆ ಕನ್ನಡದವರೇ ಕನ್ನಡವನ್ನು ನಿರ್ಲಕ್ಷ ಮಾಡ್ತಾ ಇರೋದಕ್ಕೆ ಏನು ಮದ್ದು?
ಉ: ಓಹೋ ಕನ್ನಡದವ್ರಾ?
ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು ಬೆಂಗಳೂರಿನ ಕನ್ನಡವನ್ನು ಹೀಗೆ ಉದಾಹರಿಸುತ್ತಿದ್ದರು:
"ಅಟ್ಟದ ಮೇಲೆ ರೊಟ್ಟಿ ಪೆಟ್ಟಿಂಡಾನು, ಚಟ್ಣಿ ಪೋಟ್ಕೊಂಡು ಜಡಿಯಾಣಿ" ಅಂತ. ಎಂದರೆ ಕನ್ನಡ ಬೆಂಗಳೂರಿನಲ್ಲಿ ಕೆಟ್ಟು, ಕುಲಗೆಟ್ಟು ಹೋಗಿರುವುದರ ಚರಿತ್ರೆ ಅಂದಿನಿಂದಲೇ ಪ್ರಾರಂಭವಾಗಿದೆ. ಜೊತೆಗೆ ಮಲೆಯಾಳಂ, ಹಿಂದಿ ಎಟ್ಸೆಟ್ರಾ. . . ಎಲ್ಲಾ ಸೇರಿ ಚಟ್ಣಿ ಯಲ್ಲಾ, ಕಿಚಡಿಯಾಗಿ ಹೋಗಿದೆ.
ನಾಲಿಗೆ ಸೀಳಿದರೆ, ಮೂಗಿನಲ್ಲಾದರೂ ಕನ್ನಡವನ್ನೇ ಮಾತನಾಡುತ್ತೇನೆಂದ ಡಿ.ವಿ.ಜಿಯವರ ಛಲ ನಮ್ಮಲ್ಲಿ ಯಾರಿಗೂ ಇಲ್ಲ. ಎಂದ ಮೇಲೆ ಬೇರೆ ನಾಡಿನಿಂದ ಬಂದಿಲ್ಲಿ ತಿಂದು, ದುಡಿದುಕೊಂಡು, ಆಸ್ತಿವಂತರಾಗುತ್ತಿರುವವರನ್ನು ಅಂದೇನು ಪ್ರಯೋಜನ?
ಉ: ಓಹೋ ಕನ್ನಡದವ್ರಾ?
ಹಂಗಂದವರು ಜಿ.ಪಿ.ರಾಜರತ್ನಂ.
ಉ: ಓಹೋ ಕನ್ನಡದವ್ರಾ?
ಇದೇ ರೀತಿಯ ಅನುಭವ ನನಗೂ ಆಗಿದ್ದನ್ನು ಒಂದು ಲೇಖನದಲ್ಲಿ ಹೋದ ವರ್ಷವೇ ಬರೆದಿದ್ದೆ.
"ಮರಳಿ ಮಣ್ಣಿಗೆ - ಏನಾಗಿದೆ ಚೆಲುವಕನ್ನಡ ನಾಡಿಗೆ?" ಅಂತ ಈ ಲೇಖನದ ಕೊಂಡಿ ಈ ಕೆಳಗಿದೆ
- http://www.ourkarnataka.com/kannada/articles/whatwrong.htm
- ನವರತ್ನ ಸುಧೀರ್