Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವಿಜ್ಞಾನ ಸಾಹಿತ್ಯ

ಮಂಪರು ಪರೀಕ್ಷೆ:

May 28, 2007 - 4:52pm — jaykumarhs

ಬಹು ಕೋಟಿ ಛಾಪಾ ಕಾಗದ ಹಗರಣಯಾದಿಯಾಗಿ ಇತ್ತೀಚಿನ ಗಂಭೀರ ಅಪರಾಧ ಪ್ರಕರಣಗಳೆಲ್ಲದರಲ್ಲೂ ಮಂಪರು ಪರೀಕ್ಷೆ ಮತ್ತು ಸಂಬಂಧಿಸಿದ ಇತರೆ ಪರೀಕ್ಷೆಗಳನ್ನು ಭಾರತದಲ್ಲಿನ ಅಪರಾಧ ವಿಚಾರಣಾ ಸಂಸ್ಥೆಗಳು ವ್ಯಾಪಕವಾಗಿ ಬಳಸಲು ಯತ್ನಿಸುತ್ತಿವೆ.
ಸತ್ಯವನ್ನು ಹೊರಗೆಳೆಯಲು ಮತ್ತು ಸಾಕ್ಷಿ ಸಂಗ್ರಹಣೆಗಾಗಿ ಹಲವಾರು ವೈಜ್ಞಾನಿಕ ಪರೀಕ್ಷೆಗಳನ್ನು ಅಪರಾಧಿಗಳ ಮೇಲೆ ನಡೆಸಲಾಗುತ್ತದೆ. ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯಗೊಂಡಿರುವ ಪರೀಕ್ಷೆಗಳೆಂದರೆ:
1) ಪಾಲಿಗ್ರಾಫ್ ಅಥವಾ ಸುಳ್ಳು ಪತ್ತೆ ಹಚ್ಚುವ ಪರೀಕ್ಷೆ: ಆರೋಪಿಯನ್ನು ಯಂತ್ರವೊಂದಕ್ಕೆ ಕಟ್ಟಲಾಗುತ್ತದೆ. ಆ ಯಂತ್ರವು ವ್ಯಕ್ತಿಯ ರಕ್ತದೊತ್ತಡ, ನಾಡಿ ಮಿಡಿತ, ಉಸಿರಾಟ ಮತ್ತು ಸ್ನಾಯು ಚಲನೆಗಳನ್ನು ದಾಖಲಿಸುತ್ತಾ ಹೋಗುತ್ತದೆ. ಆರೋಪಿಗೆ ಹಾಕಲಾಗುವ ಪ್ರಶ್ನೆಗಳಿಗೆ ಆತನ ಪ್ರತಿಕ್ರಿಯೆಗಳನ್ನು ಅಳೆಯಲಾಗುತ್ತದೆ. ಆರೋಪಿಯು ಸುಳ್ಳು ಹೇಳಿದಾಗ ಹೆಚ್ಚಿಗೆ ಬೆವರುತ್ತಾನೆಂದು, ಅವನ ರಕ್ತದೊತ್ತಡ ಹೆಚ್ಚುತ್ತದೆಂದು ತಜ್ಞರು ಹೇಳುತ್ತಾರೆ. ಇತರೆ ಸಾಕ್ಷ್ಯಗಳೊಂದಿಗೆ ಈ ಎಲ್ಲ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಲಾಗುತ್ತದೆ. ಇದು ಮೊದಲ ಬಾರಿಗೆ ತಜ್ಞರು ಬಳಕೆಗೆ ತಂದ ವೈಜ್ಞಾನಿಕ ಪರೀಕ್ಷೆಯಾಗಿದೆ. ಇದನ್ನು ಪ್ರಕರಣದ ಆರಂಭಿಕ ಅಥವಾ ಖಚಿತಪಡಿಸಿಕೊಳ್ಳುವ ಸಲುವಾಗಿ ಮಾತ್ರವೇ ಬಳಸಲಾಗುತ್ತದೆ.
2) ಪಿ 300 ಅಥವಾ ಮಂಪರು ಪರೀಕ್ಷೆ (ಬ್ರ್ಯೇನ್ ಮ್ಯಾಪಿಂಗ್): ಆರೋಪಿಯ ತಲೆಗೆ ಸೆನ್ಸಾರುಗಳನ್ನು ಅಳವಡಿಸಿ ಕಂಪ್ಯೂಟರ್ ಮಾನಿಟರ್ ಮುಂದೆ ಅವನನ್ನು ಕೂರಿಸಲಾಗುತ್ತದೆ. ಆರೋಪಿಗೆ ಕೆಲವು ಚಿತ್ರಗಳನ್ನು ತೋರಿಸಿ ಮತ್ತೆ ಕೆಲವು ಶಬ್ದಗಳನ್ನು ಕೇಳಿಸಲಾಗುತ್ತದೆ. ಘಟನೆಗೆ ಸಂಬಂಧಿಸಿದ ಮತ್ತು ಸಂಬಂಧಿಸಿಲ್ಲದ ಪದಗಳನ್ನು ಪರದೆಯ ಮೇಲೆ ತೋರಿಸಲಾಗುತ್ತದೆ. ಈ ಸಮಯದಲ್ಲಿ ಮೆದುಳಿನಲ್ಲಿ ಉದ್ಭವಿಸುವ ವಿದ್ಯುತ್ ಚಟುವಟಿಕೆಗಳನ್ನು ಸೆನ್ಸಾರುಗಳು ಗ್ರಹಿಸಿ ಪಿ 300 ಕಂಪನಗಳನ್ನು ದಾಖಲಿಸುತ್ತವೆ. ನಿದರ್ಿಷ್ಟವಾದ ಚಿತ್ರಗಳು ಅಥವಾ ಶಬ್ದಗಳೊಂದಿಗೆ ಆರೋಪಿಗೆ ಸಂಬಂಧವಿದ್ದಲ್ಲಿ ಮಾತ್ರವೇ ಮೆದುಳಿನಲ್ಲಿ ಪಿ 300 ಕಂಪನಗಳು ಉತ್ಪತ್ತಿಯಾಗುತ್ತವೆ. ಉದಾಹರಣೆಗೆ ಛಾಪಾ ಕಾಗದ ಹಗರಣದ ಆರೋಪಿ ತೆಲಗಿಗೆಯಿಂದ ಪ್ರತಿಕ್ರಿಯೆ ಪಡೆಯಲು ತೋರಿಸಲಾದ ಕೆಲವು ವಾಕ್ಯಗಳೆಂದರೆ: 'ರೋಷನ್ಬೇಗ್ ಯಿಂದ ಬೆದರಿಕೆಯಿದೆ', ದಿಲೀಪ್ ಕಾಮತ್ಗೆ ರೂ. 75 ಲಕ್ಷ ಹಣ ನೀಡಿದ್ದೀಯಾ', ಇತ್ಯಾದಿ. ತಜ್ಞರ ನೀಡಿರುವ ಹೇಳಿಕೆಯ ಪ್ರಕಾರ ತೆಲಗಿಯು ಇದಕ್ಕೆ ಕೆಲವು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾನಂತೆ!
3) ಸತ್ಯ ಶೋಧಕ ಔಷಧೀಯ ಪರೀಕ್ಷೆ (ನ್ಯಾಕರ್ೋ-ಅನಾಲಿಸಿಸ್): ಈ ಪರೀಕ್ಷೆಯಲ್ಲಿ ಕೆಲವು ಗ್ರಾಂ ನಷ್ಟು ಸೋಡಿಯಂ ಪೆಂಟೋತಾಲ್ ಅಥವಾ ಸೋಡಿಯಂ ಅಮೈಟಾಲ್ ನ್ನು ಶುದ್ದ ನೀರಿನಲ್ಲಿ ಕರಗಿಸಲಾಗುತ್ತದೆ. ವ್ಯಕ್ತಿಯ ಲಿಂಗ, ವಯಸ್ಸು, ಆರೋಗ್ಯ ಮತ್ತು ದೈಹಿಕ ಸ್ಥಿತಿಯ ಆಧಾರದ ಮೇಲೆ ಈ ಮಿಶ್ರಣವನ್ನು ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಬಳಸಿದಲ್ಲಿ ವ್ಯಕ್ತಿಯು ಪ್ರಜ್ಞಾಹೀನತೆಗೊಳ್ಳಬಹುದು ಅಥವಾ ಸಾವಿನ ಹಂತವನ್ನು ಮುಟ್ಟಬಹುದು. ಔಷಧವು ಕೇಂದ್ರೀಯ ನರ ವ್ಯವಸ್ಥೆಯನ್ನು ತನ್ನ ನಿಯಂತ್ರಣಕ್ಕೆ ತಂದು ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ, ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ ಮತ್ತು ವ್ಯಕ್ತಿಯನ್ನು ವಶೀಕರಣ ಹಂತಕ್ಕೊಯ್ಯುತ್ತದೆ. ಈ ಹಂತದಲ್ಲಿ ವ್ಯಕ್ತಿಯನ್ನು ಅರೆ-ಪ್ರಜ್ಞಾವಸ್ಥೆಗೆ ತರುವ ಮೂಲಕ ಅವನ ಕಲ್ಪನೆಯನ್ನು ತಟಸ್ಥಗೊಳಿಸಲಾಗುತ್ತದೆ. ಅರೆ-ಪ್ರಜ್ಞಾವಸ್ಥೆಯಲ್ಲಿರುವ ಅವನು ತನ್ನ ಕಲ್ಪನಾ ಶಕ್ತಿಯನ್ನು ಬಳಸಿಕೊಳ್ಳಲು ಅಶಕ್ತನಾಗುವುದರಿಂದ ಸುಳ್ಳು ಹೇಳಲು ಸಾಧ್ಯವಾಗುವುದಿಲ್ಲವೆಂದು ತಜ್ಞರ ಅಂಬೋಣ!
ಸತ್ಯ ಶೋಧಕ ಔಷಧೀಯ ಪರೀಕ್ಷೆಯನ್ನು ಬಳಸಲು ನ್ಯಾಯಾಲಯ ಮತ್ತು ಸಂಬಂಧಿಸಿದ ವ್ಯಕ್ತಿಯ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ. ಈ ಪರೀಕ್ಷೆಯನ್ನು ವಿಚಾರಣೆಗೆ ಪೂರಕವಾಗಿ ಬಳಸಿಕೊಳ್ಳಬಹುದೇ ಹೊರತು ನ್ಯಾಯಾಲಯದಲ್ಲಿ ಯಾವುದೇ ಸಾಕ್ಷ್ಯದ ಮೌಲ್ಯವನ್ನು ಈ ಪರೀಕ್ಷಗೆ ನೀಡಲಾಗುವುದಿಲ್ಲ. ಈ ಪರೀಕ್ಷಾ ವಿಧಾನದ ವಿಶ್ವಾಸಾರ್ಹತೆಯನ್ನೇ ಹಲವು ತಜ್ಞರು ಪ್ರಶ್ನಿಸುತ್ತಾರೆ. ಇದನ್ನು ಅವೈಜ್ಞಾನಿಕವೆಂದು, ಮೂರನೇ ದಜರ್ೆಯ ವಿಚಾರಣಾ ವಿಧಾನವೆಂದು ಟೀಕಿಸಲಾಗುತ್ತದೆ. ವ್ಯಕ್ತಿಯು ಕೆಲವೊಮ್ಮೆ ತಾನು ಯಾವುದೋ ಘಟನೆಯು ಜರುಗಬೇಕೆಂದು ಬಯಸಿದ್ದಾಗ ವಾಸ್ತವವಾಗಿ ಅದು ಜರುಗಿಲ್ಲದಿದ್ದರೂ ಅದು ಜರುಗಿದ್ದಿತೆಂದು ಹೇಳುವ ಸಾಧ್ಯತೆಯೂ ಇದೆ. ಇಂಥಹ ಸಂಖ್ಯೆಯೇ ಶೇ. 50 ರಷ್ಟಿದೆಯೆಂದು ಮನೋವಿಜ್ಞಾನಿಗಳು ಹೇಳುತ್ತಾರೆ. ನ್ಯಾಯಾಲಯಗಳು ಕೆಲವೊಮ್ಮೆ ಇಂಥಹ ಪರೀಕ್ಷೆಗಳು ವ್ಯಕ್ತಿಯೊಬ್ಬನ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುವುದಿಲ್ಲವೆಂದು ಹೇಳುತ್ತವಾದರೂ ಸಂವಿಧಾನದ 20(3)ಯು ಈ ಖಾತರಿ ನೀಡುತ್ತದೆ: ಯಾವುದೇ ಆರೋಪಕ್ಕೊಳಗಾದ ಯಾವೊಂದು ವ್ಯಕ್ತಿಯನ್ನು ತನ್ನ ವಿರುದ್ದ ತಾನೇ ಸಾಕ್ಷಿ ಹೇಳುವಂತೆ ಮಾಡಬಾರದು.
ದೇಶದ ಗಂಭೀರ ಅಪರಾಧ ಪ್ರಕರಣಗಳೆಲ್ಲವನ್ನು ಬೆಂಗಳೂರಿನ ಅಪರಾಧ ಶೋಧನಾ ವಿಜ್ಞಾನದ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತಿದೆ. ಭಾರತದ ವೈಜ್ಞಾನಿಕ ನೆಲೆಯೆಂದೇ ಹೆಸರುಗಿಟ್ಟಿಸಿರುವ ಬೆಂಗಳೂರು, ವೈಜ್ಞಾನಿಕ ಸಾಧನಗಳನ್ನು ಬಳಸಿಕೊಂಡು ಯಾವುದೇ ಅಪರಾಧ ಅಥವಾ ಪ್ರಕರಣಗಳನ್ನು ಪತ್ತೆ ಹಚ್ಚಿ ಬಗೆಹರಿಸುತ್ತದೆಂಬ ತಪ್ಪು ಕಲ್ಪನೆಯು ಇದ್ದಂತಿದೆ. ಅಮೇರಿಕಾವು ಅಧಿಕೃತವಾಗಿ ಈ ಪರೀಕ್ಷೆಯನ್ನು ಬಳಸುವುದಿಲ್ಲವಾದರೂ ಯುದ್ದ ಖೈದಿಗಳ ವಿರುದ್ದ ಹಾಗೂ ತನ್ನ ನೀತಿ ಒಪ್ಪದ ತನ್ನದೇ ಜನರ ವಿರುದ್ದ ರಹಸ್ಯವಾಗಿ ಈ ಪರೀಕ್ಷೆಯೂ ಸೇರಿದಂತೆ ಹತ್ತಲವು ಅಪಾಯಕಾರಿ ಪರೀಕ್ಷೆಗಳನ್ನು ಅದು ನಡೆಸುತ್ತದೆ. ! ಸತ್ಯ ಶೋಧಕ ಔಷಧೀಯ ಪರೀಕ್ಷೆಯು ವಿಶ್ವಾಸಾರ್ಹ ವಿಜ್ಞಾನವೇನೂ ಅಲ್ಲವೆಂದು ಅಂತರಾಷ್ಟ್ರೀಯ ಮಟ್ಟದ ತಜ್ಞರು ಮತ್ತು ನ್ಯಾಯಾಲಯಗಳ ಅಭಿಪ್ರಾಯಗಳು ಹೇಳುತ್ತವೆ.
ವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಚ್ಛ ನ್ಯಾಯಾಲಯ ವ್ಯವಸ್ಥೆಗೆ ಬದ್ದವಾಗಿರಬೇಕಾದರೆ, ಕೇಂದ್ರ ಸಕರ್ಾರವು ಇಂಥಹ ವೈಜ್ಞಾನಿಕ ಪರೀಕ್ಷೆಗಳನ್ನು ಕುರಿತಂತೆ ಸ್ಪಷ್ಟ ನೀತಿಯನ್ನು ಹೊರತರಬೇಕಾಗಿದೆ.

‹ ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada ಗ್ರಹಣದಲ್ಲಿ ಗರಿಕೆ ಹುಲ್ಲು ›
  • ವಿಜ್ಞಾನ ಸಾಹಿತ್ಯ
Ornamental seperator
  • Login or register to post comments
  • 375 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 28, 2007 - 5:05pm — ASHOKKUMAR

ಉ: ಮಂಪರು ಪರೀಕ್ಷೆ:

ASHOKKUMAR's picture

Quote:
ಪಾಲಿಗ್ರಾಫ್ ಅಥವಾ ಸುಳ್ಳು ಪತ್ತೆ ಹಚ್ಚುವ ಪರೀಕ್ಷೆ: ಆರೋಪಿಯನ್ನು ಯಂತ್ರವೊಂದಕ್ಕೆ ಕಟ್ಟಲಾಗುತ್ತದೆ.

ಯಂತ್ರಕ್ಕೆ ಕಟ್ಟುವುದು ಎಂದಿದ್ದೀರಿ. ಯಾವ ಅರ್ಥದಲ್ಲಿ ಹೇಳುತ್ತಿದ್ದೀರಿ?

Quote:
ಪಿ 300 ಅಥವಾ ಮಂಪರು ಪರೀಕ್ಷೆ (ಬ್ರ್ಯೇನ್ ಮ್ಯಾಪಿಂಗ್): ಆರೋಪಿಯ ತಲೆಗೆ ಸೆನ್ಸಾರುಗಳನ್ನು ಅಳವಡಿಸಿ ಕಂಪ್ಯೂಟರ್ ಮಾನಿಟರ್ ಮುಂದೆ ಅವನನ್ನು ಕೂರಿಸಲಾಗುತ್ತದೆ.

ಮಂಪರು ಪರೀಕ್ಷೆಯಲ್ಲಿ ಆರೋಪಿಗೆ ಅಮಲು ಪದಾರ್ಥ ಕೊಡುವುದಿಲ್ಲವೇ?
ಸೆನ್ಸರು ಎನ್ನುವುದು ಸೆನ್ಸಾರು(ಸಿನೆಮಾ)ಕ್ಕಿಂತ ಒಳ್ಳೆಯದು.

*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
May 29, 2007 - 1:36pm — jaykumarhs

ಉ: ಮಂಪರು ಪರೀಕ್ಷೆ:

jaykumarhs's picture

Jaykumar.H.S
ಯಂತ್ರಕ್ಕೆ ಕಟ್ಟುವುದು ಎಂದಿದ್ದೀರಿ. ಯಾವ ಅರ್ಥದಲ್ಲಿ ಹೇಳುತ್ತಿದ್ದೀರಿ?

ಇದನ್ನು ಯಂತ್ರವೊಂದರ ಮುಂದೆ ಕೂರಿಸಿ ಅದರ ಸಂಪಕ೵ವನ್ನು ಆ ವ್ಯಕ್ತಿಗೆ ಕಲ್ಪಿಸಲಾಗುತ್ತದೆ ಎಂದು ಓದಿಕೊಳ್ಳಿ.

  • Login or register to post comments
  • link
  • Email this ಪ್ರತಿಕ್ರಿಯೆ
May 29, 2007 - 1:36pm — jaykumarhs

ಉ: ಮಂಪರು ಪರೀಕ್ಷೆ:

jaykumarhs's picture

Jaykumar.H.S
ಯಂತ್ರಕ್ಕೆ ಕಟ್ಟುವುದು ಎಂದಿದ್ದೀರಿ. ಯಾವ ಅರ್ಥದಲ್ಲಿ ಹೇಳುತ್ತಿದ್ದೀರಿ?

ಇದನ್ನು ಯಂತ್ರವೊಂದರ ಮುಂದೆ ಕೂರಿಸಿ ಅದರ ಸಂಪಕ೵ವನ್ನು ಆ ವ್ಯಕ್ತಿಗೆ ಕಲ್ಪಿಸಲಾಗುತ್ತದೆ ಎಂದು ಓದಿಕೊಳ್ಳಿ.

  • Login or register to post comments
  • link
  • Email this ಪ್ರತಿಕ್ರಿಯೆ
May 29, 2007 - 4:44pm — suresh_k

ಉ: ಮಂಪರು ಪರೀಕ್ಷೆ:

suresh_k's picture

ಈ ಪರೀಕ್ಷೆಗಳ, ಪರೀಕ್ಷಾ ಯಂತ್ರಗಳ ಸತ್ಯಾಸತ್ಯತೆಯ ಬಗ್ಗೆ, ಸುಳ್ಳು ಹೇಳುವುದರ ಹಿಂದಿನ ಸತ್ಯದ ಬಗ್ಗೆ ನಮ್ಮ ಇಸ್ಮಾಯಿಲರು `ಸುಳ್ಳು: ನೂರೆಂಟು ಸತ್ಯ' ಅಂತ ಒಂದು ಲೇಖನ ಬರೆದಿದ್ದಾರೆ. ಅದು ಏಪ್ರಿಲ್ 1ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾಗಿದೆ. ಇಸ್ಮಾಯಿಲ್ ಬಳಿ ಆ ಲೇಖನದ ಕೊಂಡಿ ಫೈಲ್ ಇದ್ದರೆ ಇಲ್ಲಿ ಪ್ರಕಟಿಸಬಹುದೇನೋ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಕಾಸು ಮತ್ತು ಇ೦ಗ್ಲಿಷ್ ಕಾಸು
  • ಅಂಚೆ ವಾಹನಗಳಿಗೂ ಜಿಪಿಎಸ್
  • ಶಾಲೆಗಳಲ್ಲಿನ ಟ್ರೈಮಿಸ್ಟರ್ ಪದ್ಧತಿ
  • ಕಂಪ್ಯೂಟರ್ ‍ ಪಾಠ -೨ . - ಕಂಪ್ಯೂಟರ್ ರಚನೆ
  • ರಸ್ತೆ ಹೊಂಡ ಮುಚ್ಚಲು ಇರುವೆಗಳು ಬಳಸುವ ಕ್ರಮ ನಮಗೆ ಉಪಯುಕ್ತವೇ?
Syndicate content

ಲೇಖಕರು

jaykumarhs's picture

ಪರಿಚಯ

Iam a post graduate in Environmental Engg. Reading Kannada literature and writing is my hobby.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator