ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

May 28, 2007 - 6:37pm — cmariejoseph

ಕನ್ನಡಕ್ಕೊಂದು ಶಾಸ್ತ್ರೀಯ ನಿಘಂಟು ಒದಗಿಸಿದ ಕೀರ್ತಿ ಕಿಟೆಲರದೆಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದಕ್ಕಾಗಿ ಕಿಟೆಲರು ಕನ್ನಡದ ಎಲ್ಲ ಪ್ರಾಚೀನ ಗ್ರಂಥಗಳ, ಕಡತಗಳ, ಶಾಸನಗಳ, ಜನಸಾಮಾನ್ಯರ ಆಡುನುಡಿಗಳ ಅಧ್ಯಯನ ಮಾಡಿದರು. ಅವರ ದುರದೃಷ್ಟವೆಂದರೆ ಅವರಿಗೆ ಪಂಪನು ಬರೆದ 'ವಿಕ್ರಮಾರ್ಜುನ ವಿಜಯ' ಸಿಗದೇ ಹೋದದ್ದು. ಸಿಗಲಿಲ್ಲ ಎಂದರೆ ಏನರ್ಥ? ಆ ಸಮಯದಲ್ಲಿ ಅಂಥದೊಂದು ನಿಜವಾಗಿ ಇರಲಿಲ್ಲವೆಂದೇ? ಅಥವಾ ಲಂಡನ್, ಪ್ಯಾರಿಸ್, ಜರ್ಮನಿಯ ಲೈಬ್ರರಿಗಳಿಗೆ ಯಾರಾದರೂ ಹೊತ್ತೊಯ್ದರೆಂದೇ? ಎಂಥದೂ ಇಲ್ಲ. ಅದು ನಮ್ಮವರೇ ಆದ ಮಡಿವಂತರ ಮನೆ ಮಠಗಳ ಅಟ್ಟದಲ್ಲಿ, ಬಟ್ಟೆಯಲ್ಲಿ ಸುತ್ತಿಟ್ಟದ್ದು ತಾಳೆಗ್ರಂಥಗಳ ರೂಪದಲ್ಲೇ ಅಡಗಿತ್ತು. ಅಂಥ ಎಷ್ಟೋ ಪ್ರಾಚೀನ ಗ್ರಂಥಗಳನ್ನು ಬೇಡಿ ಪಡೆದು ಕಣ್ಣಲ್ಲಿ ಕಣ್ಣಿಟ್ಟು ಓದಿ ಅರ್ಥೈಸಿ ಇತರ ಪ್ರತಿಗಳೊಂದಿಗೆ ತುಲನೆ ಮಾಡಿ ಶುದ್ಧ ಪ್ರತಿ ತಯಾರಿಸಿ ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಿದ್ದರಿಂದಾಗಿಯೇ ಇಂದು ನಾವೆಲ್ಲ ಕನ್ನಡದ ಸಾಹಿತ್ಯ ಶ್ರೀಮಂತಿಕೆಯನ್ನು ಹೆಮ್ಮೆಯಿಂದ ಹಾಡಿ ಜಗತ್ತಿಗೆ ತೋರಿಸುತ್ತಿದ್ದೇವೆ.
ಹಾಗೆ ನೋಡಿದರೆ ಅಟ್ಟಗಳಲ್ಲಿ ಇಲ್ಲವೇ ಕಣಜಗಳಲ್ಲಿ ಉಳಿದುಹೋಗಿ ಗೆದ್ದಲುಗಳಿಗೆ ಆಹಾರವಾದ ಗ್ರಂಥಗಳೆಷ್ಟೋ ನಮ್ಮ ಗಮನಕ್ಕೇ ಬಂದಿಲ್ಲ. ಕವಿರಾಜಮಾರ್ಗಕಾರ ಹೇಳುವ ಅಸಗ ಮತ್ತು ಗುಣನಂದಿ ಕವಿಗಳ ಕೃತಿಗಳನ್ನು ನಾವು ಇನ್ನೂ ನೋಡಲಾಗಿಲ್ಲ. ಪೊನ್ನನು ಬರೆದಿರುವ ಭುವನೈಕರಾಮಾಭ್ಯುದಯ, ರನ್ನನದೇ ಆದ ಚಕ್ರೇಶ್ವರಚರಿತೆ, ಪರಶುರಾಮಚರಿತೆಗಳನ್ನೂ ನೋಡಲಾಗಿಲ್ಲ. ಕೆಲವು ಶಾಸನಗಳಲ್ಲಿ ಕಂಡುಬರುವ ವಿದ್ವತ್ಪೂರ್ಣ ಬರಹಗಳಿಗೆ ಪ್ರೇರಣೆಯಿತ್ತ ಕವಿಗಳಾರು ಅಥವಾ ಕೃತಿಗಳಾವುವು ಎಂಬ ಸಂದೇಹಕ್ಕೂ ಪರಿಹಾರ ಸಿಕ್ಕಿಲ್ಲ.
ಶಾಸನಗಳ ಮೂಲಕ ಕರ್ನಾಟಕ ಇತಿಹಾಸದ ಪುನರ್ರಚನೆ ಮಾಡಿದ ರೈಸ್, ಫ್ಲೀಟರಾಗಲೀ, ಪ್ರಾಚೀನ ಗ್ರಂಥಗಳನ್ನು ಪರಿಶೀಲಿಸಿ ತಿದ್ದಿ ಗ್ರಂಥಸಂಪಾದನೆಯ ಹೊಳಹು ತೋರಿಸಿಕೊಟ್ಟ ಕಿಟೆಲರಾಗಲೀ, ಹಳೆಯ ಹಸ್ತಪ್ರತಿಗಳನ್ನು ಮುದ್ರಣರೂಪಕ್ಕೆ ತಂದು ಚಿರಸ್ಥಾಯಿಯಾಗಿಸಿದ ಅಸಂಖ್ಯ ವಿದೇಶೀಯರಾಗಲೀ ನಮಗೆಲ್ಲ ಸದಾ ಪೂಜನೀಯರೇ. ತಮ್ಮ ದಿನನಿತ್ಯದ ಕರ್ತವ್ಯದ ಜೊತೆಜೊತೆಗೇ ಅವರು ಕನ್ನಡದ ಕೆಲಸವನ್ನು ಹವ್ಯಾಸದಂತಲ್ಲದೆ ವ್ರತದಂತೆ ಸಾಧಿಸಿದರು. ಅದಕ್ಕಾಗಿ ಅವರು ತಮ್ಮ ಕನ್ನಡ ಒಡನಾಡಿಗಳ ಹಾಗೂ ಪಂಡಿತರ ನೆರವನ್ನು ಪಡೆದಿದ್ದರೆಂಬುದೂ ಸತ್ಯಸ್ಯಸತ್ಯ. ಕನ್ನಡಿಗರು ತಮ್ಮನ್ನು ಹಾಡಿ ಕೊಂಡಾಡಲಿ ಎಂದೇನೂ ಅವರು ಈ ಕೆಲಸಗಳನ್ನು ಮಾಡಲಿಲ್ಲ.
ವಿದೇಶೀಯರೆಂದರೆ ಫರಂಗಿಯವರು, ಮ್ಲೇಚ್ಛರು ಎಂದು ತುಚ್ಛೀಕರಿಸುತ್ತಿದ್ದ ಅಂದಿನ ದಿನಗಳಲ್ಲಿ ಇಂಥ ಘನಕಾರ್ಯಗಳನ್ನು ಮಾಡಲು ಅವರಲ್ಲಿದ್ದುದು ಹೊಸತನವನ್ನು ಅರಿಯಬೇಕೆನ್ನುವ ಸಾಹಸೀ ಮನೋವೃತ್ತಿ. ಅಂಥ ಸಾಹಸ ಗುಣವನ್ನು ಮೈಗೂಡಿಸಿಕೊಂಡು ಜಾಗತಿಕ ಮಟ್ಟದಲ್ಲಿ ಪ್ರಕಾಂಡವಾಗಿ ಬೆಳಗಬೇಕಿದ್ದ ಕನ್ನಡಿಗರು ಇಂದು ಕಾಮಾಲೆಯ ಕನ್ನಡಕ ಧರಿಸಿಕೊಂಡು ಜಾತಿ ಪಂಗಡಗಳೆಂಬ ಹೊಲಸು ನೀರು ಎರಚಾಡುತ್ತಾ 'ಬಿರುದು ಗಳಿಸಲಿಕೆಸೆಪ ಹೆಸರು ಪಸರಿಸಲೆಸೆಪ ದುರಿತಗಳ್ಗೆಣೆಯುಂಟೇ?' ಎಂಬಂತೆ ರಾಡಿ ಎಬ್ಬಿಸುತ್ತಾ ಇರುವುದನ್ನು ನೋಡುತ್ತಿದ್ದೇವೆ.
ಜರ್ಮನ್ ಸಂಜಾತರಾದ ಫರ್ಡಿನೆಂಡ್ ಕಿಟೆಲ್ ಅವರು ಕಳೆದ ಶತಮಾನದಲ್ಲಿ ನಮ್ಮ ಕನ್ನಡನಾಡಿಗೆ ಬಂದು ಕ್ರಿಸ್ತಸಂದೇಶ ಪ್ರಚಾರದ ಜೊತೆಗೇ ಕನ್ನಡ ನುಡಿಯ ಕೈಂಕರ್ಯವನ್ನೂ ಶ್ರದ್ಧೆಯಿಂದ ಮಾಡಿದರು. ಕಾವ್ಯಗಳೇ ತುಂಬಿದ್ದ ಅಂದಿನ ಕಾಲಘಟ್ಟದಲ್ಲಿ ಅವರು ಯೇಸುಜೀವನದ ಆಖ್ಯಾಯಿಕೆಗಳನ್ನು ಕಾವ್ಯದಲ್ಲೇ ಕೊಡುವ ಪ್ರಯತ್ನ ಮಾಡಿದರು. ಛಂದಸ್ಸಿಗೆ ಬದ್ದರಾಗುವ ಇಬ್ಬಂದಿತನದಲ್ಲಿ ಕಾವ್ಯಸೌಂದರ್ಯ ಕುಂಠಿತವಾದರೂ ಈ ನಿಟ್ಟಿನ ಅವರ ಪ್ರಯತ್ನ ಶ್ಲಾಘನೀಯ. ದುರದೃಷ್ಟವೆಂದರೆ ಅವರು ಬರೆದ ಆ ಕಾವ್ಯದ ಪೂರ್ಣಪಾಠ ಇಂದು ಲಭ್ಯವಿಲ್ಲ. ಕಾವ್ಯಾಸಕ್ತರು ಕಿಟೆಲ್ ಕಾವ್ಯದ ಸೊಬಗನ್ನು ಸವಿಯಲೆಂದು ಭಾಮಿನೀ ಷಟ್ಪದಿಯಲ್ಲಿರುವ ಕೆಲ ಲಭ್ಯ ಪದ್ಯಗಳನ್ನು ನೀಡಲಾಗಿದೆ. ಯಾರಾದರೂ ಆಸಕ್ತಿವಹಿಸಿ ಇದರಪೂರ್ಣಪಠ್ಯವನ್ನು ಹುಡುಕಿ ಕೊಟ್ಟರೆ ಒಳ್ಳೆಯದು.
(ಸಮುದ್ರದಲ್ಲಿ ಬಿರುಗಾಳಿ ಬೀಸಿದ ಸಂದರ್ಭ)
(ರಾಗ: ಕಲ್ಯಾಣಿ)
ಒಂದು ದಿನದಲ್ಲೇಸು ತನ್ನೊಡ
ಬಂದ ಶಿಷ್ಯರ ಸಹಿತ ಹಡಗವ
ನೆಂದಿನಂದದಿಯೇರಿ ಹೋಗಲಕಾಸಮಯದೊಳಗೇ
ಸುಂದರಾನಿಲ ಶಾಂತಿಯಿದ್ದೆಡೆ
ಮುಂದಘೋರದ ಕಂಪವೇಳಲ್
ಕಂದನಂದದಿ ನಿದ್ದೆ ಮಾಡುತಲೇಸು ಮಲಗಿಹನೂ

(ರಾಗ: ಅಠಾಣ)
ಜ್ಯೋತಿ -ಮಂಡಲವಡಗಿ ಬಿರ್ರನೆ
ವಾತ ಬೀಸಲು ಕಡಲಿನಲ್ಲಲೆ
ಘಾತವಾಗುತ ಥೋರಥೋರದ ತೆರೆಗಳುಕ್ಕುತಲೆ
ಘಾತ ಪೊದಗುವ ಹಾಗೆ ಹಡಗವ
ಜಾತಕಾತರದಲೆಗಳದರಿಸ-
ಲಾತನಡಿಗಡೆ ಶಿಷ್ಯರೋಡುತ ಬಂದು ಕೂಗಿದರೂ

(ರಾಗ: ಭೈರವಿ)
ಒಡೆಯ ಈ ಪರಿ ತೆರೆಯು ಹಡಗವ
ಹೊಡೆಯೆ ಚಿಂತೆಯು ನಿಂಗೆ ಹತ್ತದೆ
ಯೊಡೆದು ಹೋದೀತೀಗ ಯೆಲ್ಲರು ನಶಿಸಿಯೇವೆನ್ನೇ
ಮಡಿವ ಭಯದವರನ್ನು ತನ್ನಯ
ದಡಿಯಲೆಚ್ಚತ್ತೀಕ್ಷಿಸೇಸುವು
ನುಡಿದ ಪವನವ ಕಡಲ ಬೆದರಿಸಿ ಸುಮ್ಮನಿರಿಸಿದನೂ

(ರಾಗ: ಮೋಹನ)
ಶಾಂತಿಯಾಯಿತು ಘಾಳಿ ನಿಂತುವಿ
ಕಾಂತಿ ಪಸರಿಸಿತೆಳೆಯ ಬಿಸಿಲಿಂ
ಕ್ರಾಂತಿ ಕರ್ತನು ಬಳಿಕ ಶಿಷ್ಯರಿಗೊರೆದನಿಂತೆಂದೂ
ಭ್ರಾಂತರಾದಿರಿ ಹೇಡಿಗಳೆ ಯಾ
ಕಾಂತುಕೊಳ್ಳದೆ ನನ್ನ ಶಕ್ತಿ
ಕ್ಷಾಂತಿ ಮಾಡುವದೆಷ್ಟೊ ಸತ್ಯಾವೆ ನಿಮ್ಮಪನಂಬಿಕೆಯಾ

(ರಾಗ:ಹಿಂದೋಳ)
ಪಾಪಸಾಗರ ದಾಟಿ ಸಗ್ಗಕೆ
ಪೋಪ ಹಡಗವನೇಸುವೊಡೆಯನು
ಕಾಪು ಕಾಯ್ವುದು; ಕಾಯದಿದ್ದರೆ ಕೇಳಿರಾಳುಗಳೇ
ದೀಪವಿಲ್ಲದ ಗಾಢದಿರುಳಲಿ
ಶಾಪದಲೆಗಳು ಹೊಡೆದು ಬಡೆಯಲು
ತಾಪದಿಂ ನೀವಲೆಗಳೊಳ್ ಮುಳುಮುಳುಗಿ ಹೋಗುವಿರಿ

‹ ಅಚ್ಚಗನ್ನಡ ಒರೆಗಳು 'ಸಹೋದರಿ' ಸರಿಯೇ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 1075 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 28, 2007 - 9:13pm — mahesha

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

mahesha's picture

ಕನ್ನಡಕ್ಕೆ ಕಿಟ್ಟಲ್, ರೈಸ್ ಅವರ ಕೊಡುಗೆ ಬಲು ದೊಡ್ಡದು.

ಹೇಗೆ Cadwell, ನಮ್ಮ ಎಲ್ಲ ದ್ರಾವಿಡ ನುಡಿಗಳಿಗೆ ಒಂದು ಹೊಸ ಹೊಳಪನ್ನು ಕೊಟ್ಟನೋ , ಹಾಗೆ ಕನ್ನಡಕ್ಕೆ ಇವರು ಹೊಸ ದಾರಿಯನ್ನು ತೋರಿದವರು.

ರೈಸ್ ಅವರ "ಕನ್ನಡ ನುಡಿಯ ಇತಿಹಾಸ" ಕುರಿತ ಹೊತ್ತಗೆ ಬಲು ಹೆಸರುವಾಸಿ. Google books ಅಲ್ಲಿ
A Grammar of the Kannada language by Rev.F.Kittel
http://books.google.com/books?id=rnNxtHfKxZAC&pg=PA3&ots=p8hGBGcc6F&dq=kittel+canarese&sig=6iRh_mPdZdgSK9MaDZEnVlBKAUQ#PPP1,M1
ಇದು ಬಹಳ ಒಳ್ಳೆಯ ಹೊತ್ತಗೆ.

ಹಾಗೆ ರೈಸರ ಹೊತ್ತಗೆಯೂ ಅಲ್ಲಿ ದೊರೆಯುವುದು.

ಕನ್ನಡಕ್ಕೆ ಬ್ರಿಟೀಷರ ಕೊಡುಗೆಗಳು
೧) ಹಂಪೆಯನ್ನು ಉಳಿಸಲು, ಮೊದಲು ಅದಕ್ಕೆ ಕಾವಲು ಒದಗಿಸಿದ್ದು.
೨) ಕನ್ನಡವನ್ನು ಆಡಳಿತದಲ್ಲಿ ಇರಿಸಿಕೊಂಡಿದ್ದು ( ಮದ್ರಾಸು ಮತ್ತು ಮುಂಬಾಯಿ ಪ್ರಾಂತ್ಯದಲ್ಲೀ ಮುಖ್ಯವಾಗಿ). ನಮ್ಮ ಹಿಂದಿನ ಎಷ್ಟೋ ಅರಸರು ಪ್ರಾಕೃತ, ಸಂಸ್ಕೃತ, ಉರ್ದು ಮುಂತಾದವುಗಳಲ್ಲಿ ಕನ್ನಡನೆಲವನ್ನು ಆಳಿದ್ದಾರಂತೆ.
೩) ಬಂಬಾಯಿ ಮತ್ತು ಮದ್ರಾಸು ರಾಜ್ಯದಲ್ಲಿ ಕನ್ನಡ ಉಳಿಯಲು, ಕನ್ನಡ ಶಾಲೆಗಳನ್ನು ತರೆದಿದ್ದು. ಮುಂಬಯಿ ನಗರವೊಂದರಲ್ಲೇ ೫೫ ಕನ್ನಡ ಶಾಲೆ ತೆರೆದಿ‌ದ್ದರಂತೆ.
ಇನ್ನು ಹಲವು...

ಕಿಟ್ಟಲ್ಲರ ಪದ್ಯಗಳಿಗಾಗಿ ಬಹಳ ನನ್ನಿ.

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2007 - 9:14pm — mahesha

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

mahesha's picture

ಅಂದ ಹಾಗೆ ಈ ಚಿತ್ರ ಯಾರದು ಗೊತ್ತಾ?


- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2007 - 9:34pm — ವೈಭವ

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

ವೈಭವ's picture

ಫರ್ಡಿನಾಂಡ್ ಕಿಟ್ಟೆಲ್ ಮಹಾಶಯರದ್ದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2007 - 9:39pm — ವೈಭವ

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

ವೈಭವ's picture

Edward. P. Rice ಅವರ 'A History of Kannada Literature' ಕೂಡ ತುಂಬ ಹೆಸರುವಾಸಿಯಾಗಿದೆ. ನಾನು ಓದಿರುವ ಕೆಲವು ಇತಿಹಾಸದ ಹೊತ್ತಗೆಗಳಲ್ಲಿ ಈ 'ರೈಸ'ರ ಹೆಸರು ಹೇಳ್ತಾರೆ.

http://books.google.com/books?id=2fhCH-NRatUC&pg=PP1&ots=HCv5CRyp_e&dq=h...

ಈ ಇಂಗ್ಲೀಸರೆ 'ಕನ್ನಡ' ವನ್ನು 'ಕೆನಾರೀಸ್' ಮಾಡಿದ್ದು ಕೂಡ Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2007 - 11:25pm — muralihr

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

muralihr's picture

ಇರಲಿ , ಅವರು ಮಾಡಿದ ಮತ್ತೊ೦ದು ದೊಡ್ಡ ತಪ್ಪು ಈ ಶಾಲೆಗಳನ್ನು ತೆಗೆದದ್ದು. ನಾನು ಒಬ್ಬ ಲೆಕ್ಚರರಾಗಿ ಈ ಮಾತು ಹೇಳುತ್ತಿಲ್ಲಾ.
ನನ್ನ ಸ್ವ೦ತ ಅನುಭವದ ನೆಲೆಯ ಮೇಲೆ ನಿ೦ತು ಹೇಳುತ್ತಿದ್ದೇನೆ.ಕ್ರೈಸ್ತ ಧರ್ಮದಲ್ಲಿ ಈ ಚರ್ಚ್ಗಗಳಿಗೆ ಪ್ರಾಮುಖ್ಯ. ಅಲ್ಲಿ ಆ Father ನುಡಿದ್ದದ್ದೇ ಕೊನೆ ಮಾತು. ಚರ್ಚಿನಲ್ಲಿ ಚರ್ಚೆಗೆ ಆಸ್ಪದವೇ ಇಲ್ಲಾ. ನಾನು ಈ ಸತ್ಯವನ್ನು ಕಾಣಲೆ೦ದು ಎಷ್ಟೋ ಬಾರಿ ಚರ್ಚಿನಲ್ಲಿ ನಡೆಯುವ ಕ್ರಿಯೆಯನ್ನು ಸಾಕ್ಷಿರೂಪದಲ್ಲಿ ಕ೦ಡಿದ್ದೇನೆ. ಈ ಬೆ೦ಚಿನ ಮೇಲೆ ಒಟ್ಟಿಗೆ ಕುಳಿತು ದೇವರಲ್ಲಿ ಮೊರೆ ಹೋಗುವುದು ತೀರಾ ಬಾಲೀಶ.

ಅಲ್ಲಿ ಒಬ್ಬ Father ಜ್ನಾನ ದೀಕ್ಷೆಯನ್ನು ಕೊಡುತ್ತಾನೆ.. ಅದಕ್ಕಾಗಿ ಭಕ್ತಾದಿಗಳು ಬೆ೦ಚಿನ ಮೇಲೆ ಕುಳಿತುಕೊಳ್ಳುತ್ತಾರೆ. ಆಮೇಲೆ ತಾನು ನ೦ಬಿದ ಎಲ್ಲಾ ಕಟ್ಟು ಕಥೆಗಳು..ನ೦ಬಿಕೆಗಳನ್ನು ಭಕ್ತಾದಿಗಳ ತಲೆಯ ಮೇಲೆ ಕಟ್ಟುವ ಕೆಲಸ ನಡೆಯುತ್ತದೆ.ಎಲ್ಲರೂ ನಿಲ್ಲಿ ಅ೦ದರೆ ನಿಲ್ಲ ಬೇಕು.ಕ್ಯಾ೦ಡಲ್ ಅ೦ಟಿಸಿ ಅ೦ದರೆ ಅ೦ಟಿಸ ಬೇಕು. Father ನ Authority ಪ್ರಶ್ನೆ ಮಾಡುವ ಸ್ವಾತ೦ತ್ರ್ಯ ಯಾರಿಗೂ ಸಮಾಜದಲ್ಲಿ ಇರುವಿದಿಲ್ಲಾ. Father ನಾನು ಪಾಪ ದಿ೦ದ ಬಿಡುಗಡೆ ಮಾಡುತ್ತೇನೆ ಅ೦ದರೆ ನಾವೆಲ್ಲರೂ ನ೦ಬಬೇಕು,ಅವನು ತೋರಿಸಿದ ದಾರಿಯಲ್ಲಿ ನಡೆಯದಿದ್ದರೆ ನಾವೆಲ್ಲಾ ಪಾಪಿಗಳು ಹಾಗೂ ನಡೆದರೆ ಪುಣ್ಯವ೦ತರು ಎ೦ಬ ಲೇಬಲ್ ಹಣೆಗೆ ಅ೦ಟಿಸುತ್ತಾನೆ. ಸತ್ತ ಮೇಲೆ ಸ್ವರ್ಗವೋ ನರಕವೋ ಎ೦ಬ ದ್ವ೦ದವನ್ನು ಬದುಕಿರುವಾಗಲೇ ಕಟ್ಟುತ್ತಾನೆ. ಈ Father ನಮ್ಮ ದೇಶದ ಸ್ಕೂಲ್ ಸ೦ಸ್ಖ್ರುತಿಗೆ ಬುನಾದಿ.

ನಮ್ಮ ಚರ್ಚ್ ಮತ್ತು ಕಾಲೇಜುಗಳಿಗು ಕಿ೦ಚಿತ್ತಾದರೂ ವ್ಯತ್ಯಾಸ ಕಾಣಿಸುವುದಿಲ್ಲಾ. ಇಲ್ಲಿ Father ಬದಲಿ Principal ನಿರುತ್ತಾನೆ.
" ತ೦ತ್ರಜ್ನಾನದ ಸ್ನಾನವನ್ನು ಮಾಡಿಸುತ್ತೇನೆ. ಸ್ವರ್ಗಕ್ಕೆ ಮೂರು ಮೆಟ್ಟಿಲು . ಒ೦ದನೆಯದು puc ಯಲ್ಲಿ ಒಳ್ಳೆ ಮಾರ್ಕ್ಸ, ಎರಡೆನೆಯದು ನಮ್ಮ ಕಾಲೇಜು ಸೇರುವುದು, ಮೂರಬೆಯದು ಕ್ಯಾ೦ಪಸ್ ನಲ್ಲಿ ಕೆಲಸಕ್ಕೆ ಸೇರುವುದು. ನನ್ನ ಹಿ೦ದೆ ಬನ್ನಿ ನಿಮ್ಮನ್ನು ಸ್ವರ್ಗಕ್ಕೆ ಸೇರಿಸುತ್ತೇನೆ, ಇಲ್ಲವಾದರೆ ನರಕದಲ್ಲಿ ಸದಾಕಾಲ ಬೀಳುವಿರಿ. ಗು೦ಪು ಗು೦ಪು ಶರಣರ ಆವಶ್ಯಕತೆ ಇಬ್ಬರಿಗೂ ಇರುತ್ತದೆ. ಹೆದರಿಸಿ ಬೆದರಿಸಿ ನಿತ್ಯ ದುಡ್ಡೂ ವಸೂಲಿ ಮಾಡುವುದು ಹವ್ಯಾಸ. ವಸ್ತ್ರದಲ್ಲಿ ಇಬ್ಬರೂ ಕೋಟು ಧರಿಸುವವರೆ. ಸಜ್ಜನರ೦ತೆ ಹೊರಗಿನಿ೦ದ ಕ೦ಡರು ಒಳಗಿ೦ದೊಳಗೆ ಕುಟಿಲರು. ಸಮಾಜವನ್ನು ಬೆರಳ ತುದಿಯಲ್ಲಿ ಆಡಿಸುವ ಶಕ್ತಿಯನ್ನು ಹೊ೦ದಿರುತ್ತಾರೆ . ಶಿಕ್ಷೆಯನ್ನು ನೀಡುವ ಕ್ರಮ ಕೂಡ ಒ೦ದೇ. ಎರಡು ಕಡೆ ನಡೆಯುವ ಬೋದನೆಗೂ ಮತ್ತು ವಾಸ್ತವ ಸಮಾಜಕ್ಕೂ ಚೂರು ಸ೦ಬ೦ಧವಿರುವುದಿಲ್ಲಾ. ಆದರಿ೦ದ ಚರ್ಚ್ ಬೇರೆಯಲ್ಲಾ, ನಮ್ಮ ಕಾಲೇಜು ಬೇರೆಯಲ್ಲಾ. ಈ ಎರಡು ಸ೦ಸ್ಥೆಗಳಿಗೆ ಬಲಿ ಪಶು ವಾಗುವ ಸಾಮಾನ್ಯ ಮನುಷ್ಯನಿಗೆ ಹೃದಯದಲ್ಲಿ ಭಯಭೀತಿ ಹೆಚ್ಚು. ಭಯಭೀತಿ ಯ ನಿವಾರಣೆಗೆ ಮನಸ್ಸನ್ನು ಅನ್ವೇಷಿಸದೆ, ಈ ಸ೦ಸ್ಥೆಗಳಿಗ ಶರಣು ಹೋಗುತ್ತಾನೆ. ಹಾಗೆ ನೋಡಿದರೆ ಈ ಸ೦ಸ್ಥೆಗಳು ಬೆಳೆದು ಪ್ರಬಲಗುಳ್ಳುವುದೆ ಮಾನವ ಕ್ಷುದ್ರ ಹೃದಯ ದೌರ್ಬಲ್ಯದಿ೦ದ . ಇ೦ತಹ ವ್ಯವಸ್ಥೆಯನ್ನು ತ೦ದವರನ್ನು ಮಹನೀಯರೆ೦ಬುದು ಹೇಗೆ ??."

ನಾನು ಮೊನ್ನೆ ಒ೦ದು ಬುಡಕಟ್ಟು ಜನರನ್ನು ಭೇಟಿ ಮಾಡಲು ಹೋಗಿದ್ದೆ. ಆ ಶುದ್ಧ ಪರಿಸರಕ್ಕೆ ಒಬ್ಬ ಕ್ರೈಸ್ತ ಒ೦ದು ಚರ್ಚ್ ಮತ್ತು ಕಾನ್ವೆ೦ಟ್ ತರುವ ಹೊ೦ಚು ಹಾಕುವ ವಿಷಯ ತಿಳಿದು ನನ್ನ ಮನಸ್ಸಿನಲ್ಲಿ ಈ ಆಲೋಚನೆ ಗಟ್ಟಿ ಯಾಯಿತು. ನಾನು ಓದಿದ್ದು ಸಾಗರದ ಕಾನ್ವೆ೦ಟಿನಲ್ಲಿ . ಕೆಲವೊಮ್ಮೆ ಅಲ್ಲಿ ಓದಿರುವ ವಿಷಯವಾಗಿ ಬೇಸರವು೦ಟಾಗುತ್ತದೆ.ಅಲ್ಲಿ೦ದ ಚಿತ್ರದುರ್ಗದಲ್ಲಿಯೂ ಕ೦ಡದ್ದು ಏನೆ೦ದರೆ ?
ಅಲ್ಲಿಉ ಚರ್ಚ್ ಪಕ್ಕ ಕಾನ್ವೆ೦ಟ. ಹೀಗೆ ಅವರು ಧರ್ಮದ ಪ್ರಸಾರ ಮತ್ತು ( ಶಿಕ್ಷಣ???? )ಪ್ರಸಾರವನ್ನು ರಾಜಕೀಯ
ದುರ್ಬಳಕೆಯಿ೦ದ ಮಾಡುವಲ್ಲಿ ಯಶಸ್ವಿಯಾದರು.
ನೀವು ಈ ವಿಷಯವಾಗಿ IVAN ILLICH ನ ಪುಸ್ತಕಗಳನ್ನು ಓದಿದರೆ ಹೆಚ್ಚು ತಿಳಿಯುತ್ತದೆ.
The Church, Change, and Development By Ivan Illich
ಆತನು ಒಬ್ಬ ಕ್ರೈಸ್ತ ಮಿಷನರಿಯಗಿ ಕೆಲಸವನ್ನು ಮಾಡಿ ಫೋಪ್ ನೊ೦ದಿಗೆ ಬೇಸತ್ತು ವಿಧಾಯ ಹೇಳಿದ.
ಆತನು ಭಾರತಕ್ಕೆ ಭೇಟಿಯಿತ್ತು ಭಾರತೀಯ ಭಾಷೆಗಳ ಬಗ್ಗೆ ಅಧ್ಯಾಯನವನ್ನು ನಡೆಸಿದ.

http://www.religion-online.org/showarticle.asp?title=3355

After World War II, well-meaning people in the North almost universally supported development programs in the Third World. The churches took major leadership in this process. In the 1960s Illich did not oppose development as such. He saw that change was inevitable. But he did not want the church to associate itself with any one pattern of change. He was critical both of the "hierarch who wants to justify collections by increasing his service to the poor, and [of] the rebel-priest who wants to use his collar as an attractive banner in agitation." (The Church, Change and Development, page 17.)

The standard debate was between those who wanted to progress by dealing directly with the needs of the poor and those who were convinced that only when the poor gained power could their real needs be addressed. Illich would not take sides in this debate. He thought the church should avoid both directions. The only development in which the church should engage was development into Christ.

ಹೀಗೆ ಧರ್ಮದ ಹೆಸರಿನಲ್ಲಿ ಚರ್ಚ್ ಮಾಡಿದಷ್ಟು ಹಿ೦ಸೆ ಮತ್ತು ಪಾಪ ಮತ್ತೊ೦ದು ಸ೦ಸ್ಥೆ ಮಾನವ ಚರಿತ್ರೆಯಲ್ಲಿಯೇ ಇಲ್ಲಾ.
ಆದರೆ ಅದೇ ಕೇ೦ದ್ರಗಳು , ತಾವು ಪಾಪದಿ೦ದ ಬಿಡುಗಡೆ ಮಾಡುತ್ತೇವೆ ಎ೦ದಾಗ ಹಾಸ್ಯಾಸ್ಪದವಾಗಿ ಕಾಣುತ್ತದೆ.
ಒಬ್ಬ ಕ್ರೈಸ್ತ ಈ ರೀತಿ ಹೇಳಿರುವುದನ್ನು ಕ೦ಡಾಗ , ಅಥವಾ ಕೇಳಿದಾಗ ಈ ಮತಾ೦ತರದಿ೦ದ ಅದೆಷ್ಟು ಅನಾಹುತ ಭೂಮಿಯಲ್ಲಿ ನಡೆದಿದೆಯೋ ??

I knew that individual Christians and the church as a whole had done bad things, but I thought of these crimes as part of the human condition of sinfulness rather than as peculiarly Christian. Beginning in the sixties I was forced to recognize that Christian teaching itself has been responsible at least in major part, for horrendous crimes: the persecution of Jews culminating in the Holocaust, patriarchal domination and exploitation of women, contempt for people of different religious commitments, colonialism, sexual repression, an anthropocentrism that resulted in the devastating exploitation of the natural environment, and much else.

ಬಹುಶ: ಕ್ರೈಸ್ತ ಚರಿತ್ರೆಯನ್ನು ಅಧ್ಯಾಯನವನ್ನು ಮತ್ತು ಚರ್ಚೆಯನ್ನು ಬೈಬಲ್ ನೊ೦ದಿಗೆ ಮಾಡುವ ಆವಶ್ಯಕತೆ ಇ೦ದು ಇದೆ.
Illich is not anti-church; he loves the church. He claims the church was born in Spirit and it was called to live in Spirit. However, from Constantine's "use" of Christ's cross as an "instrument" for his military victory in 312 AD through various liturgical and political transformations, the church moved in the direction not of denying spirit but of trying to control it so that its activity and fruits might both be harnessed and assured. The church (clerics) would "control grace," and the people would then be "guaranteed" the salvation, the eternal life, for which they yearned.
"The corruption of the best is the worst." Illich gives us here his view of why that is so, and how it happened.
ಇದ೦ತೂ ತಪ್ಪದೇ ಓದಬೇಕು ಮಿಷನರಿಗಳನ್ನು Hypocrites ಎ೦ದು ಕರೆದಿರುವ ಧಾಟಿ ಯಲ್ಲಿ ಎ೦ತಹ ಕಠೋರ ಸತ್ಯವಿದೆ.
To Hell with Good Intentions by Ivan Illich
http://www.swaraj.org/illich_hell.htm

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 1:03pm — jaiguruji

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

jaiguruji's picture

ಓಹ್ ಮುರುಳಿ,

ಐವಾನ್ ಪುಸ್ತಕದ ಬಗ್ಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು. ಖಂಡಿತ ಆ ಪುಸ್ತಕವನ್ನು ಓದುವೆ. ಮೇಲಿನ ಅನೇಕ ಅಭಿಪ್ರಾಯಗಳಿಗೆ ನನ್ನ ಸಹಮತ ಇದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 1:13pm — mahesha

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

mahesha's picture

ಮುರಳಿ ಸಾರ್‍..

ಇರಲಿ ಬಿಡಿ.. "ಮತಾಂತರ"ದ ಬಗ್ಗೆ ಹೆಚ್ಚು ಕಿತ್ತಾಟಬೇಡ. ಇದು ಆಗಲೇ ನಮ್ಮ ಮಂದಿಯ ಮನಗೆಡಸಿ, ರೊಚ್ಚಿಗೆಬ್ಬಿಸಿದೆ. ಎಲ್ಲ ಮತದವರೂ ತಮ್ಮ ಮತವನ್ನು ಮೆರೆಸಲು ಏನೇನೋ ಸರ್ಕಸ್ ಮಾಡ್ತಾರೆ.

ಈಗಾಲೇ ನಮ್ಮ ಕನ್ನಡಕ್ಕೂ ಈ 'ತೀಯಾಟ' ಹೆಚ್ಚು ಹೆಚ್ಚು ಹಬ್ಬುತ್ತಿದೆ. ಹಿಂದಿನಿಂದಲೂ 'ಧರ್ಮದ ಜಗಳ'ದ ವಿಷಯದಲ್ಲಿ ಬಡಗಲ ಮಹಾರಾಷ್ಟ್ರ, ಮುಂತಾದ ಪ್ರಾಂತ್ಯಗಳಿಗಿಂತ ಮೆದು ನಡುವಳಿಕೆಯನ್ನು, ತಾಳ್ಮೆಯನ್ನು ನಾವು ತೋರಿಕೊಂಡು ಬಂದಿದ್ದೇವೆ.

ಈ ಎಳೆಯಲ್ಲಿ, ಕನ್ನಡಕ್ಕೆ ಕಿಟ್ಟಲ್, ರೈಸರ ಕೊಡುಗೆಯ ಬಗ್ಗೆ ಒತ್ತು ಕೊಡೋಣ. ಕನ್ನಡ ಕ್ರೈಸ್ತರು 'ಕರುನಾಡ ಒಗ್ಗೂಡಿಕೆ'ಯಲ್ಲೂ ಪಾಲುಗೊಂಡಿದ್ದರು.

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 6:58pm — muralihr

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

muralihr's picture

ನಾನು ಬರೆದದ್ದು ಕಿತ್ತಾಟದ೦ತೆ ಕ೦ಡಿದ್ದರೆ ಕ್ಷಮೆ ಕೋರುತ್ತೇನೆ.
ಈ ಚರ್ಚ್ ಮತ್ತು ಮಿಷನರಿಗಳ ಮೇಲಿನ ಅಸಮಾಧಾನ ವೋಳ್ಟೇರ್ ( Voltaire ) ಪುಸ್ತಕಗಳನ್ನು ಓದಿದ ನ೦ತರ
ಹೆಚ್ಚಾಯಿತು. ನಾನು ಇತ್ತೀಚೆಗೆ ವೋಳ್ಟೇರ್ ನ ಕ್ಯಾ೦ಡಿಡ್ ಪುಸ್ತಕವನ್ನು ಅನುವಾದ ಮಾಡುತ್ತಿರುವೆ.
http://en.wikipedia.org/wiki/Candide
ಅಲ್ಲಿ ವೋಳ್ಟೇರ್ ಚರ್ಚ್ ಆತನ ದೇಶ ಮತ್ತು ಸಮಾಜದ ಮೇಲೆ ಎಸಗಿದ ಅತ್ಯಾಚಾರವನ್ನು ಚಿತ್ರಿಸಿದ್ದಾನೆ.
ಈ ಪುಸ್ತಕವನ್ನು ಅನಾಮಧೇಯನಾಗಿ ಬರೆದ. ಈ ರೀತಿ ಬರೆದದ್ದಕ್ಕೆ , ದೇಶದಿ೦ದ ಚರ್ಚ್ ನವರು ಹೊರ ತಳ್ಳಿಸಿದರು. ಪುಸ್ತಕವನ್ನು ಬ್ಯಾನ್ ಮಾಡಿದ್ದು ಉ೦ಟು.
ಆದರೂ ಆತ ಒಬ್ಬನೇ ನಿ೦ತು ಪೋಪ್ ನೊಡನೆ ಪೆನ್ನು ಹಿಡಿದು ಕಾದಾಡಿದ.
ಕೊನೆಗೆ ಆತನೇ ಗೆದ್ದದ್ದು. ಮು೦ದೆ French Revolution ನಲ್ಲಿ ಆತನ ಬರವಣಿಗೆಯ ಪಾತ್ರ ಮಹತ್ತ್ವವಾದದ್ದು.
ಆ ಕ್ರಾ೦ತಿಯಲ್ಲಿ 10,000 ಪಾದ್ರಿಗಳನ್ನು ದೇಶದಿ೦ದ ಓಡಿಸಿದರು.
http://en.wikipedia.org/wiki/Voltaire
He did not believe that faith was needed to believe in God. He wrote, "What is faith? Is it to believe that which is evident? No. It is perfectly evident to my mind that there exists a necessary, eternal, supreme, and intelligent being. This is no matter of faith, but of reason." [1]
Voltaire's personal enemies, the Bible, and the Roman Catholic Church, showing the literary and personal character of Voltaire.

He was critical of Christian missionaries attempting to malign the Hindu religion and summarized it the following way:

"This is only a small part of the ancient cosmogony of the Brahmins. Their rites, their pagodas, prove that among them everything was allegorical; they still represent virtue beneath the emblem of a woman who has ten arms, and who combats ten mortal sins represented by monsters. Our missionaries have not failed to take this image of virtue for that of the devil, and to assure us that the devil is worshipped in India. We have never been among these people but to enrich ourselves and to calumniate them. "
ಭಾರತದ ಬಗ್ಗೆ ಆತನಿಗೆ ತು೦ಬಾ ಆಸಕ್ತಿಯಿತ್ತು.
On philosophy of Brahmins, India and Hinduism:
ಎ೦ಬುವ ಪುಸ್ತಕವನ್ನು ಬರೆದಿರುವನು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 7:06pm — mahesha

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

mahesha's picture

ಮುರುಳಿ ಸಾರ್‍..

ಅಯ್ಯೋ ನಾನು "ನೀವು ಕಿತ್ತಾಡ್ತೀರ ಅಂತ" ಹೇಳ್ಲಿಲ್ಲ.

ನೀವು ವೋಲ್ಟೈರ್‍ ಬಗ್ಗೆ ಹೇಳ್ತೀರ...

ನಮ್ ದೇಶದಲ್ಲೇ ನಡ್ದದಿಲ್ವಾ!!

ಗೊವೆಯಲ್ಲಿ ಪೋರ್ಚುಗೀಸರು ಹೇಗೆ ಮಂದಿಯನ್ನು 'ಮತಾಂತರ' ಮಾಡಿದರು ಅಂತ ಓದಿದರೆ ತಿಳಿಯುವುದು.

ಮೆಕ್ಸಿಕೋದೇಶದ ಮಯರನ್ನು ಕ್ಯಾತೊಲಿಕ್ ಗೆ ತರಲು, ಮಯ ನಡಾವಳಿಯ ಎಲ್ಲ ಹೊತ್ತಗೆಯನ್ನು ಸುಟ್ಟರಂತೆ, ಅವರ ದೊಡ್ಡದೊಡ್ಡ ಗುಡಿಗಳನ್ನು ಬೀಳಿಸಿದ್ದಾರಂತೆ.

ಹುಡುಕಿದರೆ ಇನ್ನೂ ೪೮ ಸಿಕ್ಕಾವು.. ಇರಲಿ ಬಿಡಿ

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 28, 2007 - 11:30pm — muralihr

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

muralihr's picture

ಪಾಪಸಾಗರ ದಾಟಿ ಸಗ್ಗಕೆ
ಪೋಪ ಹಡಗವನೇಸುವೊಡೆಯನು
ಕಾಪು ಕಾಯ್ವುದು; ಕಾಯದಿದ್ದರೆ ಕೇಳಿರಾಳುಗಳೇ
ದೀಪವಿಲ್ಲದ ಗಾಢದಿರುಳಲಿ
ಶಾಪದಲೆಗಳು ಹೊಡೆದು ಬಡೆಯಲು
ತಾಪದಿಂ ನೀವಲೆಗಳೊಳ್ ಮುಳುಮುಳುಗಿ ಹೋಗುವಿರಿ

-- ರಮಣ ಮಹರ್ಷಿಗಳ ಒ೦ದು ವಾಕ್ಯದಲ್ಲಿ ತನ್ನನ್ನು ತಾನೇ ಪಾಪಿ ಎ೦ದುಕೊ೦ಡು ಹೀಯಾಳಿಸುವುದು ಘೋರ ಪಾಪ.
"ಮುಳುಮುಳುಗಿ ಹೋಗುವಿರಿ", ಶಾಪದಲೆಗಳು ಹೊಡೆದು ಬಡೆಯಲು - ಇಲ್ಲಿ ಕೇವಲ ಬೋಧನೆ ಮತ್ತು ಭಯ ಇದೆ.
ಪಾಪಿ ಪಾಪ ದ ಬಗ್ಗೆ ತೀರಾ ತಲೆ ಕೆಡೆಸಿಕೊ೦ಡಿರುವವರು ಈ ಚರ್ಚಿನವರೆ.
ಆದರೆ ಅವರಷ್ಟು ಪಾಪ ಮಾಡಿರುವವರು ಯಾರು ಇಲ್ಲಾ.....ಅವರನ್ನೇ ಉದ್ಧಾರ ಮಾಡದಿರುವ ದೇವರು ಮತ್ಯಾರನ್ನು
ಉದ್ಧಾರ ಮಾಡುತ್ತಾನೆ ????

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 9:25am — anantha.p

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

anantha.p's picture

ನಿಜವಾದ ವಿಷಯ ಏನೆಂದರೇ ವಿದೇಶಿಯರಲ್ಲ, ನಮ್ಮವರಲ್ಲೇ ಕನ್ನಡದ ಗಂಭೀರ ಅಷ್ಟು ಸೇರಿಯಾಗಿ ಗೊತ್ತಾಗಿಲ್ಲ.
ಈಗ ನಡೆಯುತ್ತಿರುವ online revolution ನಲ್ಲಿ ಕನ್ನಡಕ್ಕೆ ಸೆಗುತ್ತಿರುವ ಸಲ್ಲಿಕೆಗಳು ಬಹಳ ಆನಂದಕಾರ.
ಯಾರೋ ಪುಣ್ಯಾತ್ಮ artificial intelligence ಅನ್ನು ಉಪಯೋಗಿಸಿ, caps lock ಅನ್ನೇ ಉಪಯೋಗಿಸದೇ ಅತಿ ಸುಲಬವಾಗಿ ಕನ್ನಡದ ಕೋಶದ ಬಗ್ಗೆ ಮಾಹಿತಿ ಅನ್ನು ಪಡೆದು http://quillpad.in/kannada/ ಅನ್ನು ತಯಾರಿಸಿದ್ದಾನೆ.
ಒಂದು ಸಾರಿ ನೋಡಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 10:02am — ASHOKKUMAR

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

ASHOKKUMAR's picture

ನಾವು ಟೈಪಿಸುತ್ತಿರುವುದನ್ನು ತನ್ನಿಂದ ತಾನೇ ತಿಳಿದುಕೊಂಡು ತೆರೆಯಲ್ಲಿ ಮೂಡಿಸುವ ಈ ತಂತ್ರಾಂಶ ನಿಜಕ್ಕೂ ಅದ್ಭುತ. ಹಿಂದಿನ ವಾಕ್ಯದಲ್ಲಿ ತಂತ್ರಾಂಶ ಶಬ್ದವನ್ನು ಮಾತ್ರ ನಾನು ಟೈಪಿಸಲು ಕಷ್ಟ ಪಡಬೇಕಾಯಿತು! ಧನ್ಯವಾದಗಳು ಅನಂತ್.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 5:47pm — ಸಂಗನಗೌಡ

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

ಸಂಗನಗೌಡ's picture

ಇದನ್ನು ಟ್ರಾಯ ಮಾಡಿ, http://www.mykannada.net/KannadaTypePad.htm

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 1:09pm — jaiguruji

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

jaiguruji's picture

ಇನ್ನೊಂದು ಮಾತು,

ಸ್ವಾಮಿ ವಿವೇಕಾನಂದ ಕೂಡ ರಮಣ ಮಹರ್ಷಿಗಳಂತೆ ಹೇಳಿದ್ದಾರೆ..ನಾವೆಲ್ಲಾ ಅಮೃತಸ್ಯ ಪುತ್ರಃ....ಅಂದರೆ ಯಾರೂ ಪಾಪಿಗಳಲ್ಲ..ನಾವುಗಳೆಲ್ಲ ಆ ದೇವರ ಒಂದಂಶ. ಹುಟ್ಟಾ ಪಾಪಿ..ನೀನು ಪಾಪಿ ಪಾಪಿ ಅಂತ ಹಲುಬುವದು ಎಂತಹ ಜೀವನ ವಿರೋಧಿ ಧೋರಣೆ. ಅದೇ..ಅಮೃತಸ್ಯ ಪುತ್ರಃ ಎಂದರೆ ಧೈರ್ಯ ತುಂಬಿದಂತಲ್ಲವೇ?

’ಸಿನ್ನರ್’ ಎನ್ನಲು ಅದೇ ತಾನೇ ಹುಟ್ಟಿದ ಪುಟ್ತ ಮಗು ಕೂಡ ಏನು ಪಾಪ ಮಾಡಿರುತ್ತೆ?

ಗೊತ್ತಿದ್ದವರು ಅರ್ಥ ಮಾಡಿಸಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2007 - 6:01pm — ಸಂಗನಗೌಡ

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

ಸಂಗನಗೌಡ's picture

ಈ ಪಾಪದ concept ಬಳಸಿಕೊಂಡು ಏನೂ ತಿಳಿಯದ ಮಂದಿಯನ್ನು ಮರುಳ ಮಾಡಿ, ಮನಬಂದಂತೆ ಅವರನ್ನು ಆಡಿಸಿಕೊಂಡವರು, ಆಡಿಸಿಕೊಳ್ಳುತಿರುವವರು ಬರೀ ಚರ್ಚುಗಳು ಅಸ್ಟೇ ಅಲ್ಲ. ಹಿಂದು ಗುಡಿ ಪದ್ದತಿಯೂ ಅದನ್ನೇ ಮಾಡಿಕೊಂಡು ಬಂದಿದೆ. ಹೊಲೆಯರು ಹುಟ್ಟಾ ಪಾಪಿಗಳು, ಹಾರುವ ಹುಟ್ಟಾ ಪುಣ್ಯವಂತ!. ಮುಸಲ್ಮಾನರು, ಮೂರ್ತಿ ಪೂಜೆ ಮಾಡುವವರು ಪಾಪಿಗಳು, ಅಂತ ನಂಬುತ್ತಾರೆ. ಈ ಪಾಪ-ಪುಣ್ಯ ಅನ್ನುವ conceptನಲ್ಲೇ ಎಡವಟ್ ಇದೆ. ಅದೇ ಶೋಶಣೆಗೆ ಹಾದಿ ಮಾಡಿ ಕೊಟ್ಟಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಭಾಷೆ ಆಡುವವರೆಲ್ಲ ಕನ್ನಡಿಗರು...... .
  • ಪೂರ್ವದಿಂದಲೂ ಹೆಸರು ಪಡೆದ ತಿರುಳ್ಗನ್ನಡ ನಾಡಿನ ನಡುಮನೆಯಾದ ಧಾರವಾಡದವರಿಗೆ ಮಾತ್ರ ...( ಉ.ಕ.ಕ-ಕೊನೆಯ ಕಂತು)
  • ಕನ್ನಡದ ಕಂಪು
  • ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ !
  • ಮನುಷ್ಯನ ಜೀವನ ಎಂಬ ಬಾಣಕ್ಕೆ ಒಂದೇ ಗುರಿ ಇರುತ್ತದೆ....
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಹೆಸರು
    venkatesh
    ಪುಟ
    ಉ: ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ
    ಸಮಯ
    October 12, 2008 - 4:59am
  • ಹೆಸರು
    anivaasi
    ಪುಟ
    ಉ: ಕುಮಾರ ಪರ್ವತದಲ್ಲಿ ಚಾರಣ
    ಸಮಯ
    October 12, 2008 - 2:42am
  • ಹೆಸರು
    anivaasi
    ಪುಟ
    ಉ: ಗುರುದತ್ ಎಂಬ ದುರಂತ ನಾಯಕ
    ಸಮಯ
    October 12, 2008 - 2:32am
  • ಹೆಸರು
    anivaasi
    ಪುಟ
    ಉ: ವಾಪಾಸ್ ಬಂದುಬಿಟ್ಟೆ...!
    ಸಮಯ
    October 12, 2008 - 2:25am
  • ಹೆಸರು
    palachandra
    ಪುಟ
    ಉ: ಕುಮಾರ ಪರ್ವತದಲ್ಲಿ ಚಾರಣ
    ಸಮಯ
    October 11, 2008 - 10:14pm
  • ಹೆಸರು
    ಚನ್ನಬಸವಪುತ್ತೂರ್ಕರ್
    ಪುಟ
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    ಸಮಯ
    October 11, 2008 - 9:40pm
  • ಹೆಸರು
    rajeshnaik111
    ಪುಟ
    ಉ: ಕುಮಾರ ಪರ್ವತದಲ್ಲಿ ಚಾರಣ
    ಸಮಯ
    October 11, 2008 - 9:25pm
  • ಹೆಸರು
    vijayp
    ಪುಟ
    ಉ: ಗುರುದತ್ ಎಂಬ ದುರಂತ ನಾಯಕ
    ಸಮಯ
    October 11, 2008 - 9:20pm
  • ಹೆಸರು
    mowna
    ಪುಟ
    ಉ: ಗುರುದತ್ ಎಂಬ ದುರಂತ ನಾಯಕ
    ಸಮಯ
    October 11, 2008 - 7:04pm
  • ಹೆಸರು
    hpn
    ಪುಟ
    ಉ: ಗುರುದತ್ ಎಂಬ ದುರಂತ ನಾಯಕ
    ಸಮಯ
    October 11, 2008 - 6:29pm
ಇನ್ನಷ್ಟು


ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator