fake IDಗಳು ಸಂಪದದಲ್ಲಿ ಜಾಸ್ತಿ ಬೇಕೆ?
ಕೆಲವು ದಿನಗಳಿಂದ, ಹಲವು Fake IDಗಳು ಸಂಪದದಲ್ಲಿ ಜಾಸ್ತಿ ಆಗಿವೆ.
ಹೀಗೆ ಇಂತ Fake IDಗಳ ಜಾಸ್ತಿ ಆದ್ರೆ, ಸಂಪದ orkut ಆಗುತ್ತೆ ಅಂತ ಅಂಜಿಕೆ!!
ನಿಮ್ಮ ಅನಿಸಿಕೆ ಹೇಳಿ!!

- Login or register to post comments
- 524 hits
- Email this forum



ಕೆಲವು ದಿನಗಳಿಂದ, ಹಲವು Fake IDಗಳು ಸಂಪದದಲ್ಲಿ ಜಾಸ್ತಿ ಆಗಿವೆ.
ಹೀಗೆ ಇಂತ Fake IDಗಳ ಜಾಸ್ತಿ ಆದ್ರೆ, ಸಂಪದ orkut ಆಗುತ್ತೆ ಅಂತ ಅಂಜಿಕೆ!!
ನಿಮ್ಮ ಅನಿಸಿಕೆ ಹೇಳಿ!!




ಉ: fake IDಗಳು ಸಂಪದದಲ್ಲಿ ಜಾಸ್ತಿ ಬೇಕೆ?
ಗುಪ್ತನಾಮದಿಂದ ಬರೆಯುವವರು ಬರೆದುಕೊಳ್ಳಲಿ. ಹೆಸರು ಏನೇ ಬಳಸಿದರೂ,ಅವರ ನಿಲುವು ಬರಹಗಳಲಿ ಹೊರಹೊಮ್ಮುತ್ತದೆ ಅಂದುಕೊಳ್ಳುತ್ತೇನೆ.
ಅಂದರೂ ಅಂತವರ ಬಗ್ಗೆ ಸಂದೇಹ ಮೂಡುತ್ತದೆ. ಅವರ ಉದ್ದೇಶ ಏನು ಎಂಬ ಪ್ರಶ್ನೆ ಮೂಡುತ್ತದೆ.
*ಅಶೋಕ್
ಉ: fake IDಗಳು ಸಂಪದದಲ್ಲಿ ಜಾಸ್ತಿ ಬೇಕೆ?
ಹಲೋ ಮಾಯ್ಸರವರೇ!
ತಾವು ಗಮನಿಸಿದ ಅಂತಹ IDಗಳನ್ನು ಶ್ರೀಯುತ ನಾಡಿಗರ ಗಮನಕ್ಕೆ ತನ್ನಿ.
ಅದ್ಸರಿ, ಅವರಿಂತ ನೀವೇ ಮೊದಲು ಗಮನಿಸಿರೋದು ಆಸಕ್ತಿಕರ!
Let us see others reply.
ಉ: fake IDಗಳು ಸಂಪದದಲ್ಲಿ ಜಾಸ್ತಿ ಬೇಕೆ?
ಇನ್ನೊಂದು ಕೆಲಸ ಮಾಡಬಹುದು..
ಅಂತಹ ಐಡಿಗಳ ಸಂಖ್ಯೆ ತುಂಬಾ ಇಲ್ಲವಾದಲ್ಲಿ ದಯವಿಟ್ಟು ಇಲ್ಲೇ ಪೊಸ್ಟ್ ಮಾಡಿ. ಮತ್ತೆ ಯಾಕೇ fake ಅನ್ನಿಸ್ತು ಅಂತಾನೂ ಬರದ್ರೆ ಇನ್ನೂ ಸಂತೋಷ.
ಉ: fake IDಗಳು ಸಂಪದದಲ್ಲಿ ಜಾಸ್ತಿ ಬೇಕೆ?
ಫೇಕ್ ಐ.ಡಿ. ಎಂದರೇನು? ತಮ್ಮ ಹೆಸರನ್ನು ಹಾಕದೇ ಬರೆಯುವವರು ಎಂತಲೇ? ಅಂತಾದರೆ, ಕನ್ನಡದ ಆಸ್ತಿ ಮಾಸ್ತಿಯೂ ಫೇಕ್ ಆದಾರು ಎಚ್ಚರ!
ಒಬ್ಬರೇ ಒಂದಕ್ಕಿಂತ ಹೆಚ್ಚ್ಕಿಗೆ ಐಡಿ ಗಳನ್ನು ತೆಗೆದುಕೊಂದು ಎರಡು ಮೂರು ಹೆಸರುಗಳಲ್ಲಿ ಬರೆಯುತ್ತಿದ್ದರೆ, ಅದರ ಮೇಲೆ ಗುಮಾನಿ ಪಟ್ಟರೆ ತಪ್ಪಿಲ್ಲ.
ಈಗ ನಾನು ನನ್ನ (ನಿಜವಾದ) ಹೆಸರನ್ನು ಹಾಕದೇ ಬರೆಯುತ್ತಿದ್ದೇನೆ. ಅದು ಫೇಕ್ ಅಂದನಿಸುತ್ತೋ ಇಲ್ಲವೋ
ನನಗೆ ನೇರವಾಗಿ ಇ ಮೆಯ್ಲ್ ಕಳಿಸಿದವರಿಗೆ, ನಾನು ನನ್ನ ಹೆಸರಿನಲ್ಲೇ ಉತ್ತರಿಸುತ್ತೇನೆ - ಆದ್ದರಿಂದ, ಅದು ಫೇಕ್ ಆಗಲಾರದೇನೋ!
-ಹಂಸಾನಂದಿ