Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವಿಜ್ಞಾನ ಸಾಹಿತ್ಯ

ಭಗವದ್ ಗೀತೆಯ ಶ್ಲೋಕ!

May 31, 2007 - 12:57pm — mahesha

ನಾನು ಓದ್ತಿದ್ದಾಗ ನಮ್ಮ ಬೀಡುಶಾಲೆಯಲ್ಲಿ ಊಟದ ವೇಳೆ ೨ ಭಗವದ್ ಗೀತೆಯ ಶ್ಲೋಕಗಳನ್ನು ಹೇಳ್ತಿದ್ವು. ಅಲ್ಲಿ ಇರುವ ತನಕ ಅವುಗಳ ಅರ್ತ ನಂಗೆ ತಿಳಿಲೇ ಇಲ್ಲ. ಬರೀ ಕಾಟಾಚಾರಕ್ಕೆ ಹೇಳ್ತಿದ್ವಿ ಅಂತ ಅನ್ಸುತ್ತೆ.

ಆದರೆ ಈಗ ನೆನ್ನೆ ಉಂಕಿಸುತ್ತಾ ಆವೆರಡು ಶ್ಲೋಕಗಳ ನೆನೆಪಾಯ್ತು.

ಅವು:( ತಪ್ಪುಗಳದ್ದರೆ ತಿದ್ದಿ )

ಪ್ರಶ್ನೆ!!!
ಬ್ರಹ್ಮಾರ್ಪಣಂ ಬ್ರಹ್ಮಹವಿಃ
ಬ್ರಹ್ಮಾಗ್ನೌ ಬ್ರಹ್ಮಣಾಹುತಂ
ಬ್ರಹ್ಮೇಣ ತೇನ ಗಂತವ್ಯಂ
ಬ್ರಹ್ಮಕರ್ಮಸಮಾಧಿನಾ

ಅರ್ಪಣೆ, ಹವಿಸ್ಸು, ಅಗ್ನಿ, ಆಹುತಿ, ಇವೆಲ್ಲವೋ ಬ್ರಹ್ಮವೇ. ಬ್ರಹ್ಮವೇ ಇವಲ್ಲೆವನ್ನು ಒಯ್ಯತ್ತದೆ. ಈ ಕೆಲಸವೂ ಬ್ರಹ್ಮ(?)

ಉತ್ತರ!!
ಅಹಂ ವೈಶ್ವಾನರೋ ಭೂತ್ವಾ
ಪ್ರಾಣಿನಾಂ ದೇಹಮಾಶ್ರತಃ
ಪ್ರಾಣಾಪಾನ ಸಮಾಯುಕ್ತ್ಯ
ಪಚಾಮ್ಯನ್ನಂ ಚರ್ತುವಿಧಮ್

ನಾನು ವೈಶ್ವಾನರ-ಬೆಂಕಿಯಾಗಿ( ಜಟರಾಗ್ನಿ ), ಜೀವಿಗಳ ಮೈಗಳೇ ಇಂಬಿನಲ್ಲಿರುವೆನು. ಪ್ರಾಣ ಮತ್ತು ಅಪಾನ ಎಂಬ ಎರಡು ಗಾಳಿಗಳನ್ನು ಬರೆಸಿ ನಾಲ್ಕು ತೆರಗಳಲ್ಲಿ ಅರಗಿಸುವೆನು.

ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಎಂಬ ಐದುಗಾಳಿಗಳು( ಪಂಚಪ್ರಾಣ ).
ನಮ್ಮ ಹೊಟ್ಟೆಯಲ್ಲಿ ಅರಗುವಿಕೆಯನ್ನು ಹೀಗೆ ಹೇಳಲಾಗಿದೆ.

೪ ವಿಧದ ಅರಗಿಸುವಿಕೆಗಳಾವುವು?

ಕೆಲವು ವಿಜ್ನಾನ ಬಿಡಿಸಿಕೆಗಳೂ, ವಿವರಗಳೂ ಬೇಕು.!!

ತಿಳಿಸಿರಿ.!!

‹ ray ಕಿರಣ ಆದ್ರೆ radiation ವಿಕಿರಣ ಅಂತೆ !? ಇದು ವಿಜ್ಞಾನ ಸ್ವಾಮಿ ! ವಿಗ್ನಾನವಲ್ಲ! ›
  • ವಿಜ್ಞಾನ ಸಾಹಿತ್ಯ
Ornamental seperator
  • Login or register to post comments
  • 577 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 31, 2007 - 1:55pm — ವೈಭವ

ಉ: ಭಗವದ್ ಗೀತೆಯ ಶ್ಲೋಕ!

ವೈಭವ's picture

"..ಪಚಾಮ್ಯನ್ನಂ ಚರ್ತುವಿಧಮ್..."

ಇದು 'ಚತುರ್ವಿಧಮ್' ಆಗಿರಬೇಕು ಅಲ್ವ?

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 3:31pm — mahesha

ಉ: ಭಗವದ್ ಗೀತೆಯ ಶ್ಲೋಕ!

mahesha's picture

ಹವ್ದೂ

"ಚರ್ತುವಿಧಂ"!!
- ಮಾಯ್ಸ !!

  • Login or register to post comments
  • link
  • Email this ಪ್ರತಿಕ್ರಿಯೆ
June 11, 2007 - 11:36pm — nandakishore_bhat

ಉ: ಭಗವದ್ ಗೀತೆಯ ಶ್ಲೋಕ!

nandakishore_bhat's picture

ದೇಹದಲ್ಲಿ ಪಂಚಪ್ರಾಣಗಳ ಸ್ಥಾನಗಳ ಬಗ್ಗೆ ಅಮರಕೋಶದಲ್ಲಿ ಚುಟುಕಾಗಿ ಕೊಟ್ಟಿದ್ದಾನೆ -
ಹೃದಿಪ್ರಾಣೋ ಗುದೇsಪಾನ: ಸಮಾನೋ ನಾಭಿಸಂಸ್ಥಿತ: |
ಉದಾನ: ಕಂಠದೇಶಸ್ಥೋ ವ್ಯಾನ: ಸರ್ವಶರೀರಗ: ||

ಅರ್ಥ ಸರಳ - ಹೃದಯದಲ್ಲಿ ಪ್ರಾಣ, ಗುದದಲ್ಲಿ ಅಪಾನ, ಹೊಕ್ಕುಳಲ್ಲಿ ಸಮಾನ, ಗಂಟಲಲ್ಲಿ ಉದಾನ ಮತ್ತು ವ್ಯಾನವಾಯುವು ಇಡೀ ಶರೀರರದಲ್ಲಿ ವ್ಯಾಪಿಸಿದೆ.
(ಗುದೇ ಅಪಾನ: ಅಂತ ಬಿಡಿಸಿ ಓದಬೇಕು. ಅವಗ್ರಹ ಚಿಹ್ನೆಯನ್ನು s ನಿಂದ ಗುರುತಿಸಿದ್ದೇನೆ. ಯುನಿಕೋಡ್‍ನಲ್ಲಿ ಅವಗ್ರಹ, ಲಘು-ಗುರು ಮುಂತಾದುವುಗಳನ್ನು ಮೂಡಿಸುವ ಬಗೆ ಯಾರಿಗಾದರೂ ಗೊತ್ತೆ?)

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 2:56pm — benaka

ಉ: ಭಗವದ್ ಗೀತೆಯ ಶ್ಲೋಕ!

benaka's picture

ಮಹೇಶರೇ,

ಒಳ್ಳೆಯ ಪ್ರಶ್ನೆಯನ್ನೇ ಕೇಳಿದಿರಿ; ನನಗೆ ತಿಳಿದಿದ್ದನ್ನು ಹೇಳುತ್ತೇನೆ:

ಅಹಮ್ ವೈಶ್ವಾನರೋ... ಚತುರ್ವಿಧಮ್|| ಶ್ಲೋಕದ ಮೂರು ಪಾದಗಳನ್ನು ಸರಿಯಾಗಿಯೇ ತಿಳಿಸಿದ್ದೀರಿ. ಆದರೆ, ಕೊನೆಯ ಪಾದದ ವಿವರಣೆ ಮಾತ್ರ ತಪ್ಪಾಗಿದೆ!
ಪಚಾಮ್ಯನ್ನಂ ಚತುರ್ವಿಧಮ್ - ಎಂದರೆ "ಅನ್ನವನ್ನು ನಾಲ್ಕು ತೆರನಾಗಿ ಅರಗಿಸುವೆ" ಎಂದರ್ಥವಲ್ಲ! ಬದಲಿಗೆ "ನಾಲ್ಕು ಬಗೆಯ ಅನ್ನವನ್ನು ಅರಗಿಸುವೆ" ಎಂದರ್ಥ. --> ’ಪಚಾಮಿ ಚತುರ್ವಿಧಂ ಅನ್ನಂ’ ಎಂದು ಮರುಜೋಡಿಸಬೇಕು.

ಇಲ್ಲಿ ಅನ್ನವೆಂದರೆ ಈಗ ನಾವೆಲ್ಲ ತಿಳಿದಿರುವ ’ನೀರಿನಲ್ಲಿ ಬೇಯಿಸಿದ ಅಕ್ಕಿ’ ಅಲ್ಲ! ಬದಲಿಗೆ ಎಲ್ಲ ರೀತಿಯ ’ಆಹಾರ’ ಎಂದರ್ಥ. ಅಕ್ಕಿಯ ಅನ್ನವನ್ನು ತಯಾರಿಸಿ ತಿನ್ನುವುದು ಮಾನವರು ಮಾತ್ರ; ಆದರೆ ಶ್ರೀಕೃಷ್ಣ "...ಪ್ರಾಣಿನಾಂ ದೇಹಮಾಶ್ರಿತಃ" ಎಂದು ಹೇಳಿರುವುದರಿಂದ ಈ ’ಅನ್ನ’ ಎಲ್ಲ ’ಪ್ರಾಣಿ’(ಪ್ರಾಣವಿರುವ ಜೀವಿ)ಗಳು ತಿನ್ನಬಲ್ಲ ಆಹಾರ ಎಂದರ್ಥ. ಈ ಎಲ್ಲ ಪ್ರಾಣಿಗಳ ಅಹಾರವನ್ನೂ ನಾಲ್ಕು ವಿಧಗಳಲ್ಲಿ ವಿಂಗಡಿಸಬಹುದು - ಅದನ್ನೇ ಇಲ್ಲಿ ’ಚತುರ್ವಿಧಂ ಅನ್ನಂ’ ಎಂದು ಹೇಳಿರುವುದು.

ಆ ನಾಲ್ಕು ವಿಧಗಳೇ - ಭಕ್ಷ್ಯ, ಭೋಜ್ಯ, ಲೇಹ್ಯ ಮತ್ತು ಚೋಷ್ಯ.

ಭಕ್ಷ್ಯ = ಅಗಿದು, ಕಡಿದು ತಿನ್ನಲು ಯೋಗ್ಯವಾದುದು [ಭಕ್ಷ್ -> ಕಚ್ಚು, ಕಡಿ, ಅಗಿ, ಜಗಿ ಎಂದರ್ಥ] ಉದಾ: ಹಣ್ಣು, ಅಕ್ಕಿಯ ಅನ್ನ

ಭೋಜ್ಯ = ಅಗಿಯದೆಯೇ, ನವಣಿಸಿ ತಿನ್ನಲು ಯೋಗ್ಯವಾದುದು [ಭುಜ್/ಭುಂಜ್ -> ತಿನ್ನು, ನವಣಿಸು, ನುಂಗು] ಉದಾ: ಗಂಜಿ, ಹಿಟ್ಟು

ಲೇಹ್ಯ = ನೆಕ್ಕಿ ತಿನ್ನಲು ಯೋಗ್ಯವಾದುದು [ಲಿಹ್ -> ನೆಕ್ಕು, ನಾಲಿಗೆಯಿಂದ ಸವರು] ಉದಾ: ಉಪ್ಪಿನಕಾಯಿಯ ರಸ, ಬೆಲ್ಲದ ಪಾಕ

ಚೋಷ್ಯ = ಹೀರಿ ತಿನ್ನಲು/ಕುಡಿಯಲು ಯೋಗ್ಯವಾದುದು [ಚುಷ್ -> ಹೀರು, ಕುಡಿ] ಉದಾ: ನೀರು, ಮಾವಿನ ರಸ

ಈ ನಾಲ್ಕು ವಿಧದ ’ಅನ್ನ’ಗಳನ್ನು ಸೇವಿಸುವ ಎಲ್ಲ ಜೀವಿಗಳ ಜಠರಾಗ್ನಿಯ ರೂಪದಲ್ಲಿ ಪರಮಾತ್ಮನಿದ್ದಾನೆ ಎಂಬುದೇ ಇಲ್ಲಿಯ ಸಾರ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 3:36pm — mahesha

ಉ: ಭಗವದ್ ಗೀತೆಯ ಶ್ಲೋಕ!

mahesha's picture

ನಮೋ ಬೆನಕಾಯ

ಚರ್ತುವಿಧ ಅನ್ನಗಳ ಬಗ್ಗೆ ಅರುಹಿದ್ದಕ್ಕೆ ನನ್ನಿ!

ಇಲ್ಲಿ ಪ್ರಾಣಾಪಾನಗಳ ಪಾತ್ರವೇನು?

- ಮಾಯ್ಸ !!

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 6:27pm — kishorpatwardhan

ಉ: ಭಗವದ್ ಗೀತೆಯ ಶ್ಲೋಕ!

kishorpatwardhan's picture

ಇದು ನನ್ನ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆ ಅಂದುಕೊಳ್ಳುವೆ.

ಪ್ರಾಣ ವಾಯುವಿನ ಕೆಲಸ:

प्राणॊऽत्र मूर्धगः ।
उरः कण्ठश्चरॊ बुद्धि हृदयॆन्द्रियचित्तधृक् ।
ष्ठीवनक्षवथूद्गार निःश्वासान्नप्रवॆशकृत् । - अष्टाङ्ग हृदय

ಪ್ರಾಣ ವಾಯು ತಲೆಯಲ್ಲಿದ್ದುಕೊಂಡು, ಎದೆ ಮತ್ತು ಕೊರಳುಗಳಲ್ಲಿ ಚಲಿಸುತ್ತ, ಕೆಳಗಿನ ಕೆಲಸಗಳನ್ನು ಮಾಡುತ್ತದೆ:
ಬುದ್ಧಿ, ಹೃದಯ, ಇಂದ್ರಿಯ ಮತ್ತು ಚಿತ್ತ (ಮನಸ್ಸು) - ಇವುಗಳ ನಿಯಂತ್ರಣ,
ಉಗಿಯುವುದು, ಸೀನುವುದು, ತೇಗು, ಶ್ವಸನ ಕ್ರಿಯೆ ಮತ್ತು ಅನ್ನವನ್ನು ನುಂಗುವ ಕ್ರಿಯೆ (Deglutition / swallowing) - ಇವೂ ಸಹ ಪ್ರಾಣ ವಾಯುವಿನ ನಿಯಂತ್ರಣದಲ್ಲೇ ಇರುವುದು.
ಆಧುನಿಕ ವೈದ್ಯ ವಿಜ್ಞಾನದ ಪ್ರಕಾರವೂ ಈ ಎಲ್ಲ ಕೆಲಸಗಳು Brain ಮತ್ತು Brain Stem ನಿಂದ ನಿಯಂತ್ರಿತವಾಗುತ್ತವೆ. (ಮೂರ್ಧಾ)

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 6:41pm — mahesha

ಉ: ಭಗವದ್ ಗೀತೆಯ ಶ್ಲೋಕ!

mahesha's picture

'ಪ್ರಾಣ'ದ ಕುರಿತು ಬಹಳ ಒಳ್ಳಯ ಅರುಹು!!

ದಯವಿಟ್ಟು ಬಿಡುವಾದರೆ ಅಪಾವ, ವ್ಯಾನ, ಉದಾನ, ಸಮಾನಗಳ ಬಗ್ಗೆಯೂ ಬರೆಯಿರಿ.!!!

ವಂದನೆ! ನನ್ನಿ!
- ಮಾಯ್ಸ !!

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 6:42pm — kishorpatwardhan

ಉ: ಭಗವದ್ ಗೀತೆಯ ಶ್ಲೋಕ!

kishorpatwardhan's picture

ಅಪಾನ ವಾಯುವಿನ ಕೆಲಸ:

अपानॊऽपानगः श्रॊणिवस्तिमॆढ्रॊरुगोचरः ।
शुक्रार्तवशकृन्मूत्रगर्भनिष्क्रमणक्रियः ॥ - अ. हृ.

ಅಪಾನ ವಾಯುವಿನ ಕಾರ್ಯಕ್ಷೇತ್ರ: ಅಪಾನ . ( perinium )
ಕೆಲಸ: ಶುಕ್ರ, ಆರ್ತವ, ಶಕೃತ್ (ಮಲ), ಮೂತ್ರ, ಗರ್ಭ - ಇವುಗಳ ನಿಷ್ಕ್ರಮಣ.

ಹಾಗಾಗಿ, ಪ್ರಾಣವಾಯು ಅನ್ನಗ್ರಹಣ ಮಾಡಿದರೆ, ಅಪಾನ ವಾಯು, ಪಚನವಾಗದೆ ಉಳಿದದ್ದನ್ನು ಹೊರಕ್ಕೆ ಹಾಕುತ್ತದೆ.

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 6:54pm — kishorpatwardhan

ಉ: ಭಗವದ್ ಗೀತೆಯ ಶ್ಲೋಕ!

kishorpatwardhan's picture

ವ್ಯಾನ ವಾಯು:-

ವ್ಯಾನೋ ಹೃದಿ ಸ್ಥಿತಃ ಕೃತ್ಸ್ನ ದೇಹಚಾರೀ ಮಹಾಜವಃ |
ಗತ್ಯಪಕ್ಶೇಪಣೋತ್ಕ್ಷೇಪ ನಿಮೇಷೋನ್ಮೇಷಣಾದಿಕಾಃ |
ಪ್ರಾಯಃ ಸರ್ವಾಃ ಕ್ರಿಯಾಃ ತಸ್ಮಿನ್ ಪ್ರತಿಬದ್ಧಾಃ ಶರೀರಿಣಾಮ್ | - ಅ. ಹೃ.

ಸಮಾನ ವಾಯು:

ಸಮಾನೋ ಅಗ್ನಿ ಸಮೀಪಸ್ಥಃ ಕೋಷ್ಠೇ ಚರತಿ ಸರ್ವತಃ |
ಅನ್ನಂ ಗೃಹ್ಣಾತಿ ಪಚತಿ ವಿವೇಚಯತಿ ಮುಞ್ಚತಿ |

ಉದಾವ ವಾಯು:
ಉರಃ ಸ್ಥಾನಮುದಾನಸ್ಯ ನಾಸಾ ನಾಭಿ ಗಲಾಂಶ್ಚರೇತ್ |
ವಾಕ್ ಪ್ರವೃತ್ತಿ ಪ್ರಯತ್ನೋರ್ಜಾ ಬಲ ವರ್ಣ ಸ್ಮೃತಿಕ್ರಿಯಃ |

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 6:57pm — kishorpatwardhan

ಉ: ಭಗವದ್ ಗೀತೆಯ ಶ್ಲೋಕ!

kishorpatwardhan's picture

ತಿದ್ದುಪಡಿ:

ಗತ್ಯಪಕ್ಶೇಪ.... => ಗತ್ಯಪಕ್ಷೇಪ ...
ಉದಾವ ವಾಯು => ಉದಾನ ವಾಯು

ನನ್ನ ಟೈಪಿಂಗ್ ಸ್ಪೀಡು ಚೆನ್ನಾಗಿಲ್ಲದ್ದಕ್ಕೆ ಸಂಸ್ಕೃತ ವರ್ಶನ್ ಮಾತ್ರ ಕೊಟ್ಟಿದ್ದೇನೆ . (ಅದೂ ಬರಬರುತ್ತ ಕನ್ನಡ ಲಿಪಿಯಲ್ಲಿ )..
ಡೌಟ್ ಗಳಿದ್ದರೆ ಕೇಳಿ. ಹೇಳುತ್ತೇನೆ.

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 7:02pm — mahesha

ಉ: ಭಗವದ್ ಗೀತೆಯ ಶ್ಲೋಕ!

mahesha's picture

ವ್ಯಾನ ಗುಂಡಿಗೆ/ಹೃದಯದಲ್ಲಿ, ಸಮಾನ ಹೊಟ್ಟೆಯಲ್ಲಿ(?) ಮತ್ತು ಉದಾನ ನಾಭಿ/ಹೊಕ್ಕಳಲ್ಲಿ ಇರುವುದೆಂದು ತಿಳಿಯುತು.

ಮುಂದೆ ಹೊಳೆಯಲಿಲ್ಲ.

ಬಿಡುವಾದಾಗ ಬಿಡಿಸಿರಿ. ಅರ್ಜೆಂಟಿಲ್ಲ!!

ಶ್ಲೋಕಕ್ಕೆ ವಂದನೆಗಳು!!
- ಮಾಯ್ಸ !!

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 7:34pm — kishorpatwardhan

ಉ: ಭಗವದ್ ಗೀತೆಯ ಶ್ಲೋಕ!

kishorpatwardhan's picture

ಉದಾನವಾಯುವಿನ ಬಗ್ಗೆ:
Major site of ‘Udana Vata’ is chest. Other sites where it is active are- nose, umbilicus and throat.
Its function is to produce speech. Also, it is responsible for the effort, energy and strength required for speech- production. It helps in the recall of vocabulary required to make the speech meaningful.

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 7:36pm — kishorpatwardhan

ಉ: ಭಗವದ್ ಗೀತೆಯ ಶ್ಲೋಕ!

kishorpatwardhan's picture

ಸಮಾನವಾಯು:
Active site of ‘Samana’ is adjacent to gastro intestinal tract. It performs the functions like reception of food, its digestion ( by activating ‘Agni’ ), its division into useful and waste parts and its onward propulsion.

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 7:39pm — kishorpatwardhan

ಉ: ಭಗವದ್ ಗೀತೆಯ ಶ್ಲೋಕ!

kishorpatwardhan's picture

ವ್ಯಾನವಾಯು:

Vyana Vayu moves with great velocity all over the body and is responsible for activities like- controlling one's gait, extension, flexion, movements of eyelids and all other similar activities.

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 7:42pm — kishorpatwardhan

ಉ: ಭಗವದ್ ಗೀತೆಯ ಶ್ಲೋಕ!

kishorpatwardhan's picture

ಮೇಲಿನ ಎಲ್ಲ ಇಂಗ್ಲಿಶ್ ಗಾಗಿ ಕ್ಷಮೆ ಇರಲಿ .
(ಟೈಪಿಂಗ್ ಸ್ಪೀಡು ಕಡಿಮೆ ಇರುವುದರಿಂದ ಯಾವತ್ತೋ ಬರೆದಿಟ್ಟಿದ್ದ ವಿಚಾರವನ್ನು ಕಟ್ಟಿಸಿ ಪೇಸ್ಟಿಸಿದ್ದೇನೆ.)

ನನ್ನಿ!!

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 8:08pm — mahesha

ಉ: ಭಗವದ್ ಗೀತೆಯ ಶ್ಲೋಕ!

mahesha's picture

ಬಹಳ ಒಳ್ಳೆಯ ಅರಿಹ..!!!

ನನ್ನ ಒಂದು ಪ್ರೆಶ್ನೆ ಮರೆತುಬಿಟ್ಟಿರಾ?

ಪಚನ ಕ್ರಿಯೆಯಲ್ಲಿ ಅನ್ನಗ್ರಹಣ ಮತ್ತು ಮಲವಿಸರ್ಜನ ಸೇರಿಕೊಂಡಿದೆಯೇ?

ವಂದನೆಗಳು!
- ಮಾಯ್ಸ !!

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 8:28pm — kishorpatwardhan

ಉ: ಭಗವದ್ ಗೀತೆಯ ಶ್ಲೋಕ!

kishorpatwardhan's picture

ಪಚನ ಕ್ರಿಯೆಯಲ್ಲಿ ನಲ್ಲಿ ಅವನ್ನು ಸೇರಿಸುವುದು / ಬಿಡುವುದು ನಮಗೆ ಬಿಟ್ಟದ್ದು.
Gastro intestinal tract (ಜೀರ್ಣಾಂಗವ್ಯೂಹ (coined term) = ಸಂಸ್ಕೃತದ / ಆಯುರ್ವೇದದ ಅನ್ನವಹ ಸ್ರೋತಸ್ + ಪುರೀಷವಹ ಸ್ರೋತಸ್ ) ನ ಕೆಲಸಗಳಲ್ಲಿ ಇವೂ ಸಹ ಸೇರುತ್ತವೆ.
ಆದರೆ digestion ಎಂಬ process ನೊಳಗೆ ಇವು ಬರುವುದಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 8:40pm — mahesha

ಉ: ಭಗವದ್ ಗೀತೆಯ ಶ್ಲೋಕ!

mahesha's picture

ಆ ಶ್ಲೋಕ ಹೇಳೋದು

"ಪ್ರಾಣಾಪಾನ ಸಮಾಯುಕ್ತ್ಯ
ಪಚಾಮ್ಯನ್ನಂ ಚರ್ತುವಿಧಂ" ಅಂತ ಬಂದಿದೆ. ಅದಕ್ಕೆ ಕೇಳಿದೆ.

ವಂದನೆ!!

- ಮಾಯ್ಸ !!

  • Login or register to post comments
  • link
  • Email this ಪ್ರತಿಕ್ರಿಯೆ
May 31, 2007 - 6:59pm — mahesha

ಉ: ಭಗವದ್ ಗೀತೆಯ ಶ್ಲೋಕ!

mahesha's picture

ಶ್ಲೋಕದಲ್ಲಿ ಪಚನ ಕ್ರಿಯೆಯು ಪ್ರಾಣಾಪಾನಗಳನ್ನು ಸಮಾಯುಕ್ತಿಸಿ ನಡೆಯುದೆಂದು ಹೇಳಿದೆಯಲ್ಲ.

ಪಚನದಲ್ಲಿ ಅನ್ನಗ್ರಹಣ ಮತ್ತು ವಿಸರ್ಜನ ಸೇರುವುದೇ?

- ಮಾಯ್ಸ !!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಗೀತ ಪಾಠದ ಮೊದಲ ಗೀತೆ
  • ಭರತೇಶ ವೈಭವ ಮತ್ತು ಛಾಂದೋಗ್ಯೋಪನಿಷತ್ತು - ಕಲ್ಪು ೪
  • ಏನೀ ಸ್ಲೋಕದ ತಿರುಳು( ಅರ್ಥ )
  • ಪ್ರಶ್ನೆ - ಉತ್ತರ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು.

- ಆಲ್ಬರ್ಟ್ ಐನ್‍ಸ್ಟೈನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator