ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
ಒಂದು ಪ್ರಶ್ನೆ:
English ನ ಕೆಲವು ಶಬ್ದಗಳನ್ನು ಇದ್ದಕ್ಕಿದ್ದಹಾಗೇ ಕನ್ನಡದಲ್ಲಿ ಬರೆಯುವಾಗ ಅಲ್ಲಿನ ’ sh” ಅಥವಾ’ ch” ಗೆ ಬದಲಾಗಿ ’ ಷ’ ಕಾರದ ಉಪಯೋಗ ಆಗುವುದು ಯಾಕೆ? ’ ಶ ’ ಸಾಲದೆ?
ಉದಾಹರಣೆ:
English => ಇಂಗ್ಲಿಷ್
Cliche => ಕ್ಲೀಷೆ
ಗೊತ್ತಿರುವವರು ಹೇಳುತ್ತೀರಾ?

- Login or register to post comments
- 479 hits
- Email this forum





RSS:
ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
ಸಾಕು..
ಇಂಗ್ಲೀಸು ಅಂತ ಕೂಡ ನಡೆತ್ದೆ!
- ಮಾಯ್ಸ !!
ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
ನಾನಂತೂ ನಿರಾಳವಾಗಿ ನಾಲಿಗೆಯನ್ನು ಎಷ್ಟು ಎತ್ತರಕ್ಕೆ ಬೇಕೋ ಅಷ್ಟು ಎತ್ತರ ಒಯ್ಯುತ್ತೇನೆ. ಹಾಗಾಗಿ ನನಗದು ಇಂಗ್ಲಿಷ್. fashion ಕೂಡ ಫ್ಯಾಷನ್.
ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
=====================================
ಮಾಯ್ಸ!
ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
ಆದರೆ ಶಂಕರಬಟ್ಟರು ಮತ್ತು ಕೆ.ವಿ.ನಾರಾಯಣರವರು ಹೆಚ್ಚು ಕನ್ನಡಿಗರು ಶ, ಷ ನಡುವೆ ಉಲಿಯುವಿಕೆಯಲ್ಲಿ ಬೇರೆತನ ತೋರುವುದಿಲ್ಲ ಅಂತ.
ಷ ಬೇಕಾಗಿಲ್ಲ ಅಂತ ಅವರು ಹೇಳಿದ್ದಾರೆ. 'ಷ' ವನ್ನು ಉಲಿಯುವಾಗ ನಾಲಿಗೆ ಮಡಚಿ ಉಸಿರನ್ನು ತಳ್ಳಬೇಕು. ಆದರೆ ಹೆಚ್ಚು ಕನ್ನಡಿಗರು(ನಾನು:)) ಹೀಗೆ ಉಲಿಯುವುದಿಲ್ಲ. ಸಂಸ್ಕ್ರುತ ಓದಿರುವ ಹಲವು ಕನ್ನಡ ಮಂದಿ ಕೂಡ ಷ ಉಲಿಯುವಿಕೆ ಶ ನಂತೆಯೆ ಅಂತ ಅವರು ಹೇಳುತ್ತಾರೆ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
ಕನ್ನಡ ಕಂದರಿಗೆ ತಮ್ಮ ನಾಲಗೆ ಮೇಲೆ ಸಕ್ಕತ್ ಹೆಮ್ಮೆ
!
ಅವರು ಎಲ್ಲ phoneಗಳನ್ನು ಸರಿಯಾಗಿ ಉಲಿಯಬಲ್ಲೆ ಎಂಬ ಮರುಳಲ್ಲಿ ಇದ್ದಾರೆ! ದಯವಿಟ್ಟು ಶಂಕರಬಟ್ಟರ ಹೊತ್ತಗೆ ಓದಿ ಎನ್ನೊಬೋದು... ಹೆಚ್ಚು ಬಿಡಿಸಲು ಹೋದ್ರೆ ಮುನಿಸಿಕೊಂಡಾರು.
=====================================
ಮಾಯ್ಸ!