ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

Dash Board ಗೆ ಕನ್ನಡದಾಗ ಏನ೦ತಾರ?

June 1, 2007 - 12:37pm — ಶ್ರೀನಿವಾಸ ವೀ. ಬ೦ಗೋಡಿ

ಪ್ರಶ್ನೆ ಅಷ್ಟ. ಆದರ ಚರ್ಚೆಯ ವಿಷಯ ಕನಿಷ್ಟ ೧೦ ಪದಗಳಿರಬೇಕು ಅ೦ತ ಇದನ್ನು ಸೇರಿಸಿದೆ!

‹ ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’ 'ತುಳು' ಭಾಷೆ ಇಲ್ಲಿ ಒಪ್ಪಿಗೆಯೇ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 945 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 1, 2007 - 4:10pm — mahesha

ಉ: Dash Board ಗೆ ಕನ್ನಡದಾಗ ಏನ೦ತಾರ?

mahesha's picture

ಡಿಕ್ಕಿ-ಹಲಗೆ Smiling Laughing out loud
- ಮಾಯ್ಸ !!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 5:15pm — ಸಂಗನಗೌಡ

ಉ: Dash Board ಗೆ ಕನ್ನಡದಾಗ ಏನ೦ತಾರ?

ಸಂಗನಗೌಡ's picture

ಕಾರಿನ ಹಿಂದ ಸಾಮಾನ್ ಇಡು ಜಾಗಾಕ್ ಇರತ್ತಲ್ಲಾ, ಅದನ್ 'ಡಿಕ್ಕಿ' ಅಂತಾರ್ರಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 5:18pm — mahesha

ಉ: Dash Board ಗೆ ಕನ್ನಡದಾಗ ಏನ೦ತಾರ?

mahesha's picture

ಸುಮ್ನೆ ತಮಾಷೆಗೆ ಹೇಳಿದ್ದು

ಕನ್ನಡದ "ಡಿಕ್ಕಿ" ಅಂದ್ರೆ dash.. ನೀವು ಹೇಳಿದ್ದು ಇಂಗ್ಲೀಸ್ ಡಿಕ್ಕಿ!

http://dsal.uchicago.edu/cgi-bin/philologic/getobject.pl?c.0:1:446.burrow

- ಮಾಯ್ಸ !!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 5:01pm — rupeshkumar

ಉ: Dash Board ಗೆ ಕನ್ನಡದಾಗ ಏನ೦ತಾರ?

rupeshkumar's picture

ನಿಯ೦ತ್ರಣ ಹಲಗೆ ಅಥವಾ...
ನಿಯ೦ತ್ರಣ ವೇದಿಕೆ ಅ೦ತ್ಲೇ ಅ೦ದ್ಕೊಳ್ರೀ ಮಾರಾಯ್ರೇ...

-ರೂಪೇಶ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 5:05pm — Sunil Jayaprakash

ಉ: Dash Board ಗೆ ಕನ್ನಡದಾಗ ಏನ೦ತಾರ?

Sunil Jayaprakash's picture

೧. ಮಹೇಶ ಸೂಚಿಸಿದ್ದು - ಡಿಕ್ಕಿ ಹಲಗೆ
೨, ೩. ಗಟ್ಟಾ/ಗಟ್ಟಿ ಮನೆ - ಪಗಡೆ ಆಡುವಾಗಲೋ ಏನೋ ಈ "ಗಟ್ಟಾ ಮನೆ" ಎನ್ನುವಂತಹ ಬಳಕೆ ಕೇಳಿದ್ದೇನೆ ಅನ್ನಿಸುತ್ತೆ.
೪, ೫. ಚೌಕಿ/ಚೌಕಾ ಮನೆ
೬, ೭. ಚೌಕಿ/ಚೌಕಾ ಪಟ್ಟಿ
೮. ಕೋನೇರು - ಕೊನೇರು ಹಂಪಿ ಹೆಸರು ಕೇಳಿರಬೇಕಲ್ಲವೇ, ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಚೆಸ್ ಆಟಗಾರ್ತಿ. ಇದು ಅವರ ವೆಬ್ಸೈಟ್

ಪದಗಳ ಹುಡುಕಾಟದಲ್ಲಿ ಗಂಭಿರತೆಯ ಸಂಗಡ ಕುಚೇಷ್ಟೆಯೂ ಇರಬೇಕಷ್ಟೇ
ಪಟಾಪಟಿ ಚಡ್ಡಿ, ಮನೆ-ಮನೆ ಶರ್ಟು(=ಚೆಕ್ಸ್ ಶರ್ಟು) ಎಲ್ಲರಿಗೂ ತಿಳಿದಿರಬೇಕಷ್ಟೇ Smiling ಇದನ್ನು ಗಮನದಲ್ಲಿಟ್ಟುಕೊಂಡು
೯. ಪಟಾಪಟಿ ಮನೆ - ಈ ಬಳಕೆಗಳನ್ನು ನಾನು ಕೇಳಿದ್ದೇನೆ.
೧೦. ಪಟ್ಟೆ ಮನೆ.
೧೧. ಮನೆ-ಮನೆ ಪಟ್ಟಿ = ಮನ್ಮನೆ ಪಟ್ಟಿ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 5:17pm — Sunil Jayaprakash

ಉ: Dash Board ಗೆ ಕನ್ನಡದಾಗ ಏನ೦ತಾರ?

Sunil Jayaprakash's picture

ಇದನ್ನು ಬರೆಯುವಾಗ ರೂಪೇಶ ಅವರು, ನಿಯಂತ್ರಣ ವೇದಿಕೆ ಸೂಚಿಸಿದ್ದಾರೆ. ಎಲ್ಲವೂ ಸೇರಿ ೧೨-೧೩ ಆಪ್ಶನ್ ಗಳಾದವು Eye-wink

ಅಂದ ಹಾಗೆ ಎಷ್ಟೊಂದು ರೀತಿಯ ಡಾಶ್-ಬೋರ್ಡುಗಳಿವೆ. ಯಾವ ಡಾಶ್-ಬೋರ್ಡಿಗಾಗಿ ಕನ್ನಡ ಪದ ಹುಡುಕಾಟ ನಡೆಸುತ್ತಿದ್ದೀರಿ ತಿಳಿಸಿದ್ದರೆ ಚೆನ್ನಿತ್ತು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 7:07pm — ಶ್ರೀನಿವಾಸ ವೀ. ಬ೦ಗೋಡಿ

ಉ: Dash Board ಗೆ ಕನ್ನಡದಾಗ ಏನ೦ತಾರ?

ಶ್ರೀನಿವಾಸ ವೀ. ಬ೦ಗೋಡಿ's picture

ನಮ್ಮ company ಯಲ್ಲಿ ಒ೦ದು ಹೊಸ Committee ಮಾಡಿದ್ದೇವೆ. ಅದು ನಮ್ಮಲ್ಲಿ ನಡೆಯುವ ಎಲ್ಲ ವಿದ್ಯಮಾನಗಳನ್ನು ಪ್ರಕಟಿಸುತ್ತೆ. ಆ Committee ಯನ್ನು Dash-Board ಎ೦ದಿದ್ದಾರೆ. ಅದಕ್ಕೆ ಕನ್ನಡದಲ್ಲಿ ಒ೦ದು ಹೆಸರು ಬೇಕಿತ್ತು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 7:14pm — mahesha

ಉ: Dash Board ಗೆ ಕನ್ನಡದಾಗ ಏನ೦ತಾರ?

mahesha's picture

ಸಾರು - publish/ಪ್ರಕಟಿಸು
ಸಾರುವ/ಸಾರುಪ/ಸಾರುಹ - publishing( noun )/ಪ್ರಕಟಣೆ

"ಸಾರುಹ ಹಲಗೆ", "ಸಾರುಹ ಮಣೆ", "ಸಾರುಹ" ಹೊಂದಬಹುದು!

http://dsal.uchicago.edu/cgi-bin/philologic/getobject.pl?c.0:1:2494.burrow
- ಮಾಯ್ಸ !!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2007 - 3:05pm — shivannakc

ಉ: Dash Board ಗೆ ಕನ್ನಡದಾಗ ಏನ೦ತಾರ?

shivannakc's picture

ಸ್ವಾಮಿ ಶ್ರೀ.ವೀ.ಬ ರವರೇ,

ಇದೋ ಗಮನಿಸಿ.

ಪ್ರೊ. ಜಿ.ವೆಂಕಟಸುಬ್ಬಯ್ಯನವರ ಪದಕೋಶದ ಪ್ರಕಾರ:

Dash
________________________________________
1. dash (ಕ್ರಿ) 1) ಅವಸರದಿಂದ ನುಗ್ಗು, ಢಿಕ್ಕಿ ಹೊಡಿ 2) ರಭಸದಿಂದ ಎಸೆ, ಒಗೆ, ಅಪ್ಪಳಿಸು 3) ನಾಶಮಾಡು, ಭಗ್ನಗೊಳಿಸು, ಹಾಳುಮಾಡು 4) ಎರಚು, ಹಾರಿಸು, ಸಿಡಿಸು
2. dash (ನಾ) 1) ಥಟ್ಟನೆ ನುಗ್ಗುವುದು, ಢಕ್ಕಾಡಿಕ್ಕಿ 2) ಲಘು ಮಿಶ್ರಣ, ಸ್ವಲ್ಪ ಬೆರೆಸಿದ್ದು 3) ಗೀಟು, ಸಣ್ಣ ಅಡ್ಡಗೆರೆ 4) ಎದೆಗಾರಿಕೆ, ಮುನ್ನುಗ್ಗುವ ಗುಣ
1. board (ನಾ) 1) ಹಲಗೆ, ಫಲಕ 2) ಮರದ ತುಂಡು 3) ಸಮಿತಿ, ಮಂಡಲಿ 4) ನಿಗದಿಯಾದ ಬೆಲೆಗೆ ಕೊಡುವ ಊಟ
2. board (ಕ್ರಿ) 1) (ಹಡಗು, ವಿಮಾನ ಮುಂತಾದ ಪ್ರಯಾಣದ ವಾಹಕಗಳನ್ನು) ಏರು, ಹತ್ತು 2) (ವಿಮಾನವೇರಲು) ಸಿದ್ಧನಾಗು 3) (ನಿಗದಿಯಾದ ದರಕ್ಕೆ) ಊಟ, ವಸತಿ-ಪಡೆ

[Dashboard (Single Word) - Protective covering consisting of a panel to protect people from the splashing water or mud etc.]

ನೀವು committee ಹೆಸರು ಅಂತೇನೋ ಹೇಳಿದ್ದೀರಿ... ಆದರೆ ಅದಕ್ಕೆ "ಡಿಕ್ಕಿಹೊಡಿ ಮಂಡಳಿ", "ಎದೆಗಾರಿಕೆ ಮಂಡಳಿ" ಇಲ್ಲಾ ಗೀಟು ಸಮಿತಿ ಅಂತಾ ಕರೆಯಕಾಕಿಲ್ಲ. Boardಗೆ ಮಂಡಳಿ ಸೂಕ್ತ ಪದ (Board of Directors - ನಿರ್ದೇಶಕರ ಮಂಡಳಿ). ದಯವಿಟ್ಟು ತಮ್ಮ ಮಂಡಳಿಯ ಜವಾಬ್ದಾರಿಗಳನ್ನು ತಿಳಿಸಿದರೆ (Just 1 or 2) ಅದಕ್ಕೊಂದು ಸೂಕ್ತ ಹೆಸರನ್ನು ಸೂಚಿಸಬಹುದು.
ನೀವೇನಂತಿರಿ?

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 5:06pm — mahesha

ಉ: Dash Board ಗೆ ಕನ್ನಡದಾಗ ಏನ೦ತಾರ?

mahesha's picture

"A dashboard, dash board, or simply dash (and sometimes fascia in British English) is a control panel located under the windscreen of an automobile. It contains indicators, dials, controls and displays to assist operation of the vehicle."

ಕನ್ನಡದಲ್ಲೂ "ಡ್ಯಾಶ್‌ಬೋರ್ಡೇ"(ಡ್ಯಾಸುಬೊರಡು) ಆಗಬೋದಲ್ಲ!!!

ನನ್ನ ಓಟು ಇದಕ್ಕೆ!! Smiling

- ಮಾಯ್ಸ !!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 5:16pm — mahesha

ಉ: Dash Board ಗೆ ಕನ್ನಡದಾಗ ಏನ೦ತಾರ?

mahesha's picture

board = ಪಟ, ಮಣೆ, ಹಲಗೆ, ಕೊರಡು, ಪಟ್ಟಿ/ಪಟ್ಟಿಕೆ( ಇದು ಕನ್ನಡವೇ )

ಇಲ್ಲಿ ಗುಂಡಿಗಳನ್ನು ಹೊಂದಿರುವ board!

control = ಹಿಡಿತ, ಅಂಕೆ,

ಈ ಒರೆಗಳನ್ನು ಕಲಸಿ-ಬರೆಸಿ ನೋಡಿದರೆ ಬೇಕಾದನಿತ್ತು ಒರೆಗಳು ಬರುವುವು.

ನನಗೆ "ಅಂಕೆಮಣೆ" / "ಅಂಕೆಹಲಗೆ" ಹಿಡಿಸಿತು.

ಅಂಕ = ನಂಬರ್‍, ಎಣಿಕೆ ಸಂಸ್ಕೃತದಲ್ಲಿ, ಕನ್ನಡದಲ್ಲಲ್ಲ!!

- ಮಾಯ್ಸ !!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 5:42pm — ಸಂಗನಗೌಡ

ಉ: Dash Board ಗೆ ಕನ್ನಡದಾಗ ಏನ೦ತಾರ?

ಸಂಗನಗೌಡ's picture

'ಉ' ಸೇರಿಸಿ ಪದವೊಂದನ್ನ ಕನ್ನಡ ಮಾಡೋ ಬಗೆ ನನಗೆ ಹಿಡಿಸಲಿಲ್ಲ. ಇಂಗ್ಲೀಸ್ ಪದಗಳು ಇದ್ದಕ್ಕಿದ್ದಂತೇ ಇರಲಿ ಅನ್ನುವದಾದರೆ ಸಕ್ಕದ ಪದಗಳೂ ಇರಲಿ ಬಿಡಿ, ಅದಕ್ಯಾಕೇ ತಡೆ?? ಕನ್ನಡದಲ್ಲಿ ಮಾತಾಡೋವಾಗ ನಡುವೆ ಈ ನಿಮ್ಮ 'ಡ್ಯಾಸುಬೋರ್ಡು' ಇಣುಕಿ ಬಿಟ್ಟರೆ, ಒಂದಪಾ ನಿಲ್ಲಬೇಕಾಗುತ್ತೆ. ಅದೇ ಪಟ್ಟಿ-ಮಣೆ, ಚೌಕ್-ಮಣೆ ಇವ್ ನೊಡಿ ತಟ್ ಅಂತ ತಿಳಿದ್ ಬಿಡುತ್ತೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 5:56pm — mahesha

ಉ: Dash Board ಗೆ ಕನ್ನಡದಾಗ ಏನ೦ತಾರ?

mahesha's picture

Smiling

ಒಪ್ದೆ ನಿಮ್ ಮಾತು ಸಂಗನ ಗೌಡ್ರೆ!

http://sampada.net/forum/4273#comment-7783

ನೋಡಿ, ನನ್ನ ಸಲಹೆಗಳು!!

- ಮಾಯ್ಸ !!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 6:09pm — mahesha

ಉ: Dash Board ಗೆ ಕನ್ನಡದಾಗ ಏನ೦ತಾರ?

mahesha's picture

ಇನ್ನೊಂದು ಸಂಗನ!

ನಂಗೆ ಈ ನನ್ ತಪ್ ಪೂರ್ತಿ ಹೊಳೇತು.!!

ಕೇಳ್ಮೆ ಇರೋದು "Dash Board ಗೆ ಕನ್ನಡದಾಗ ಏನ೦ತಾರ?" ಅಂತ..
Dash Board ಗೆ ಸಂಸ್ಕೃತದಾಗ ಏನ೦ತಾರ? ಇಲ್ವೇ Dash Board ಗೆ ಇಂಗ್ಲೀಶ್ದಾಗ Smiling ಏನ೦ತಾರ? ಅಂತ ಅಲ್ಲ ಅಲ್ವಾ!!

ನನ್ನಿ!
- ಮಾಯ್ಸ !!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 5:54pm — shreekant.mishrikoti

ಉ: Dash Board ಗೆ ಕನ್ನಡದಾಗ ಏನ೦ತಾರ?

shreekant.mishrikoti's picture

'ನಿಯಂತ್ರಣ ಫಲಕ' ಇಟ್ಕೊಳ್ಳಿ . ಸಂಸ್ಕೃತವೋ, ಕನ್ನಡವೋ , ಇದನ್ನು ಈಗಾಗಲೇ ಬಳಸಿಯೂ ಇದ್ದಾರೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 6:05pm — mahesha

ಉ: Dash Board ಗೆ ಕನ್ನಡದಾಗ ಏನ೦ತಾರ?

mahesha's picture

ಬೇಜಾರ ಮಾಡ್ಕೋಬೇಡಿ!

'ನಿಯಂತ್ರಣ ಫಲಕ' ಇಟ್ಕೊಳ್ಳಿ . ಸಂಸ್ಕೃತವೋ, ಕನ್ನಡವೋ , ಇದನ್ನು ಈಗಾಗಲೇ ಬಳಸಿಯೂ ಇದ್ದಾರೆ

ಇದನ್ನೇ
"ಡ್ಯಾಶ್‌ಬೋರ್ಡ್" ಇಟ್ಕೊಳ್ಳಿ, ಇಂಗ್ಲೀಶೋ, ಕನ್ನಡವೋ, ಇದನ್ನು ಈಗಾಗಲೇ ಹೆಚ್ಚಾಗಿ ಬಳಸಿಯೂ ಇದ್ದಾರೆ ಅಂದರೆ!!

"ಅದ್ಯಾಕೆ ಇಂಗ್ಲೀಶ್ ನಡೆಯಲ್ಲ? ಸಂಸ್ಕೃತ ನಡೆಯತ್ತೆ?" ಸಂಗನರ ಪ್ರೆಶ್ನೆ ನಂಗೆ ಹಿಂಗೇ ಇತ್ತು!!

ಪಾಪ ಇಂಗ್ಲೀಶು Smiling!!
- ಮಾಯ್ಸ !!

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 6:19pm — ಸಂಗನಗೌಡ

ಉ: Dash Board ಗೆ ಕನ್ನಡದಾಗ ಏನ೦ತಾರ?

ಸಂಗನಗೌಡ's picture

'ನಿಯಂತ್ರಣ ಫಲಕ' ಇಂತ ಪದಗಳನ್ನು ಆಡೋಕಾಗಲ್ಲ. ಕನ್ನಡ ಪದವನ್ನು ಗುರುತು ಮಾಡುವಾಗ ಅದನ್ನು ಮಾತಿನಲ್ಲಿ ಆಡಬಹುದಾ ಅನ್ನುವದನ್ನು ಉಂಕಿಸಬೇಕು. 'ಅಂಕೆ ಮಣೆ' 'ಹಿಡಿತದ ಮಣೆ' ಇವು ಬರೆಯುವದರೊಂದಿಗೆ ಮಾತಿನಲ್ಲೂ ಹೇಳಬಹುದು.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2007 - 9:44pm — smurthygr

ಉ: Dash Board ಗೆ ಕನ್ನಡದಾಗ ಏನ೦ತಾರ?

smurthygr's picture

ಸಾರುಹಲಗೆ - ಅಪ್ಪಟ ಕನ್ನಡದಂತೆ ಕೇಳುತ್ತೆ - ಚೆನ್ನಾಗಿದೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2007 - 2:13am — srivathsajoshi

ಉ: Dash Board ಗೆ ಕನ್ನಡದಾಗ ಏನ೦ತಾರ?

srivathsajoshi's picture

Dash board ಪದವನ್ನು ನೀವು ಉಲ್ಲೇಖಿಸಿರುವ ಸಂದರ್ಭದಲ್ಲಿ (ಅಂದರೆ, ಕಂಪೆನಿಯ/ಕಾರ್ಯಾಲಯದ ಒಟ್ಟು ಚಟುವಟಿಕೆಗಳ ಸಾರಾಂಶವನ್ನು ಪ್ರಕಟಿಸುವುದರಲ್ಲಿ) ಆದರೆ "ಸಾರಾಂಶ ಫಲಕ" ಎನ್ನಬಹುದೇನೊ. ಅದು ಸಂಸ್ಕೃತಪದಪುಂಜವಾಯಿತು ಎಂದು ಅಸಮಾಧಾನವಿದ್ದರೆ ’ಒಟ್ಟಂದ ರಟ್ಟು’ ಎನ್ನೋಣ. (ರಟ್ಟು ನಾಮಪದ/ಕ್ರಿಯಾಪದ ರೂಪಗಳನ್ನು ಮನನ ಮಾಡಿಕೊಳ್ಳಿ).

ಡ್ಯಾಶ್ ಬೋರ್ಡ್ ಗಣಪನ ಡ್ಯಾಶಿಂಗ್ ಮಾತುಗಳು... (ಪೂರಕ ಓದಿಗೆ).

ಇತಿ

ಶ್ರೀವತ್ಸ ಜೋಶಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2007 - 10:18am — ASHOKKUMAR

ಉ: Dash Board ಗೆ ಕನ್ನಡದಾಗ ಏನ೦ತಾರ?

ASHOKKUMAR's picture

ಆರಂಭದಲ್ಲೇ ಕಾರನ್ನು ರಿವರ್ಸ್ ತೆಗೆಯಬೇಕಾದಾಗ, ಒಂದೆರಡು ಇಂಚು ಮುಂದೆ ಚಲಿಸುವ ಕ್ರಮದ ಬಗ್ಗೆ ನನಗೆ ಬಹಳ ಸಿಟ್ಟು. "ಡ್ಯಾಶ್ ಬೋರ್ಡ್ ಗಣಪನ ಡ್ಯಾಶಿಂಗ್ ಮಾತುಗಳು... " ನಿಮ್ಮ ಲೇಖನ ಓದಿದಾಗ ಅಮೆರಿಕನ್ನಡಿಗರೂ ಇಂತಹ ನಂಬಿಕೆ ಹೊಂದಿದ್ದರೆ ಅನ್ನುವುದು ತಿಳಿಯಿತು. "ಅಡಿಯ ಮುಂದಿಡೆ ಸ್ವರ್ಗ" ಎನ್ನುವ ಇಂತಹ ಜನರಿಗೆ ಸ್ವರ್ಗ ಸಿಗಲಿ!

*ಅಶೋಕ್

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2007 - 3:17pm — shivannakc

ಉ: Dash Board ಗೆ ಕನ್ನಡದಾಗ ಏನ೦ತಾರ?

shivannakc's picture

ಸ್ವಾಮಿ ಶ್ರೀ.ವೀ.ಬ ರವರೇ,

ಇದೋ ಗಮನಿಸಿ.

ಪ್ರೊ. ಜಿ.ವೆಂಕಟಸುಬ್ಬಯ್ಯನವರ ಪದಕೋಶದ ಪ್ರಕಾರ:

Dash
________________________________________
1. dash (ಕ್ರಿ) 1) ಅವಸರದಿಂದ ನುಗ್ಗು, ಢಿಕ್ಕಿ ಹೊಡಿ 2) ರಭಸದಿಂದ ಎಸೆ, ಒಗೆ, ಅಪ್ಪಳಿಸು 3) ನಾಶಮಾಡು, ಭಗ್ನಗೊಳಿಸು, ಹಾಳುಮಾಡು 4) ಎರಚು, ಹಾರಿಸು, ಸಿಡಿಸು
2. dash (ನಾ) 1) ಥಟ್ಟನೆ ನುಗ್ಗುವುದು, ಢಕ್ಕಾಡಿಕ್ಕಿ 2) ಲಘು ಮಿಶ್ರಣ, ಸ್ವಲ್ಪ ಬೆರೆಸಿದ್ದು 3) ಗೀಟು, ಸಣ್ಣ ಅಡ್ಡಗೆರೆ 4) ಎದೆಗಾರಿಕೆ, ಮುನ್ನುಗ್ಗುವ ಗುಣ

1. board (ನಾ) 1) ಹಲಗೆ, ಫಲಕ 2) ಮರದ ತುಂಡು 3) ಸಮಿತಿ, ಮಂಡಲಿ 4) ನಿಗದಿಯಾದ ಬೆಲೆಗೆ ಕೊಡುವ ಊಟ
2. board (ಕ್ರಿ) 1) (ಹಡಗು, ವಿಮಾನ ಮುಂತಾದ ಪ್ರಯಾಣದ ವಾಹಕಗಳನ್ನು) ಏರು, ಹತ್ತು 2) (ವಿಮಾನವೇರಲು) ಸಿದ್ಧನಾಗು 3) (ನಿಗದಿಯಾದ ದರಕ್ಕೆ) ಊಟ, ವಸತಿ-ಪಡೆ

[Dashboard (Single Word) - Protective covering consisting of a panel to protect people from the splashing water or mud etc.]

ನೀವು committee ಹೆಸರು ಅಂತೇನೋ ಹೇಳಿದ್ದೀರಿ... ಆದರೆ ಅದಕ್ಕೆ "ಡಿಕ್ಕಿಹೊಡಿ ಮಂಡಳಿ", "ಎದೆಗಾರಿಕೆ ಮಂಡಳಿ" ಇಲ್ಲಾ "ಗೀಟು ಸಮಿತಿ" ಅಂತಾ ಕರೆಯಕಾಕಿಲ್ಲ. Boardಗೆ ಮಂಡಳಿ ಸೂಕ್ತ ಪದ (Board of Directors - ನಿರ್ದೇಶಕರ ಮಂಡಳಿ). ದಯವಿಟ್ಟು ತಮ್ಮ ಮಂಡಳಿಯ ಜವಾಬ್ದಾರಿಗಳನ್ನು ತಿಳಿಸಿದರೆ (Just 1 or 2) ಅದಕ್ಕೊಂದು ಸೂಕ್ತ ಹೆಸರನ್ನು ಸೂಚಿಸಬಹುದು.
ನೀವೇನಂತಿರಿ?

"ಮನುಷ್ಯನನ್ನು ಮನುಷ್ಯತ್ವದಿಂದ ಕಾಣುವುದೇ ಮಾನವೀಯತೆ"

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೀನಿಲ್ಲದೆ...
  • ಹೊಸದಾಗಿ ಸೇರಿಸಿದ "ನುಡಿಮುತ್ತುಗಳ" ಬಗ್ಗೆ
  • 'Chicago Board of Trade,' ಕಟ್ಟಡ.
  • ಶರಣ್ರಿಯಪ್ಪಾ
  • ಎಲ್ಲೆಯೇ ಇಲ್ಲವಂತೆ???
Syndicate content

ಲೇಖಕರು

ಶ್ರೀನಿವಾಸ ವೀ. ಬ೦ಗೋಡಿ's picture

ಪೂರ್ಣ ಹೆಸರು
ಶ್ರೀನಿವಾಸ ವೀ. ಬಂಗೋಡಿ

ಪರಿಚಯ

...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • "ಸತ್ಯವೇ ಗೊತ್ತಿಲ್ಲದ ಸತ್ಯಮ್"
  • ವಿಮಾ ರಂಗದ ಮೇಲೆ ಉದಾರೀಕರಣದ ಕರಿನೆರಳು
  • ಬಱಿಯ ಕಣ್ಣಿಗೆ ಕಾಣುವ ಗ್ರಹಗಳು
  • ಅರುಣರಾಗದಲ್ಲಿ ಸೇರಿಹೋದ ಗುರುಗ್ರಹ
  • ಆಟೋ ಸೇವೆ ಮತ್ತು ಓಡಾಟ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mgharish
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    January 8, 2009 - 2:19pm
  • Rakesh Shetty
    ಉ: ನಗುವ ನಯನ, ಮಧುರ ಮೌನ
    January 8, 2009 - 2:16pm
  • Rakesh Shetty
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 8, 2009 - 2:10pm
  • mahesha
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:09pm
  • ಅರವಿಂದ್
    ಉ: nanna kiru parichaya
    January 8, 2009 - 2:05pm
  • Rakesh Shetty
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:00pm
  • Aravinda
    ಉ: ನಗುವ ನಯನ, ಮಧುರ ಮೌನ
    January 8, 2009 - 2:00pm
  • Rakesh Shetty
    ಉ: nanna kiru parichaya
    January 8, 2009 - 1:57pm
  • palachandra
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:51pm
  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 1:43pm
ಇನ್ನಷ್ಟು


ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator