ಗ್ರ೦ಥಾಲಯಗಳು ಇ೦ದಿಗೂ ಪ್ರಸ್ತುತವೇ?
ಈ ಮಾಹಿತಿ ತ೦ತ್ರಜ್ಞಾನದ (ಅಥವಾ ಅ೦ತರ್ಜಾಲದ) ಯುಗದಲ್ಲೂ ಗ್ರ೦ಥಾಲಯಗಳು ಪ್ರಸ್ತುತವೇ? ಹೌದು ಎ೦ದಾದರೆ, ಹೇಗೆ? ಇಲ್ಲ ಎ೦ದಾದರೆ, ಅದಕ್ಕೆ ಕಾರಣಗಳೇನು? ನಿಮ್ಮ ಅಭಿಪ್ರಾಯಗಳನ್ನು ದಾಖಲಿಸಿ.

- Login or register to post comments
- 366 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಗ್ರ೦ಥಾಲಯಗಳು ಇ೦ದಿಗೂ ಪ್ರಸ್ತುತವೇ?
ಗ್ರಂಥಾಲಯಗಳು ಇನ್ನು ಮಾಹಿತಿ ಹಂಚಿಕೆ ಕೇಂದ್ರಗಳಾಗಬೇಕು. ಪುಸ್ತಕಗಳ ಜತೆ, ಅಂತರ್ಜಾಲ ಸಂಪರ್ಕ ಹೊಂದಿದ ಕಂಪ್ಯೂಟರ್, ಕಲಿಕೆಗೆ ಅನುಕೂಲ ಕಲ್ಪಿಸುವ ಬಹುಮಾಧ್ಯಮ ಸಂಪನ್ಮೂಲಗಳು ಇತ್ಯಾದಿಗಳು ಅಲ್ಲಿರಬೇಕು.
*ಅಶೋಕ್
ಉ: ಗ್ರ೦ಥಾಲಯಗಳು ಇ೦ದಿಗೂ ಪ್ರಸ್ತುತವೇ?
ಹಲೋ, ರೂಪೇಶ್ ಕುಮಾರ್ ರವರೇ!
Welcome to Sampada Family.
ಮಾಹಿತಿ ತ೦ತ್ರಜ್ಞಾನ ಇಂದಿಗೂ ಎಲ್ಲರಿಗೂ ಸಿಗುವಂತಾಗಿಲ್ಲ ಮತ್ತು ಎಲ್ಲರೂ ಬಲ್ಲವರಲ್ಲ. ಮತ್ತೆ ಎಲ್ಲಾ ಪುಸ್ತಕಗಳೂ ಅಂತರ್ಜಾಲದಲ್ಲಿ ದೊರಕುವುದು ದುರ್ಲಭ.
ಆದರಿಂದ ಗ್ರ೦ಥಾಲಯಗಳು ಇಂದಿಗೂ ಅಗತ್ಯ.
"ಮನುಷ್ಯನನ್ನು ಮನುಷ್ಯತ್ವದಿಂದ ಕಾಣುವುದೇ ಮಾನವೀಯತೆ"
ಉ: ಗ್ರ೦ಥಾಲಯಗಳು ಇ೦ದಿಗೂ ಪ್ರಸ್ತುತವೇ?
MNS Rao
ಗ್ರಂಥಾಲಯಗಳನ್ನು ಕೇವಲ ಪುಸ್ತಕಗಳ ಶೇಖರಣೆ/ವಿತರಣೆಗಳಿಗಾಗಿ ಉಪಯೋಗಿಸಬೇಕೆಂದರೆ ಅದರ ಉಪಯುಕ್ತತೆ ಕಡಿಮೆಯಾಗುತ್ತಿದೆ. ಆದರೆ ಅಲ್ಲಿ ಇನ್ನೂ ಬಹಳಷ್ಟು ಚಟುವಟಿಕೆಗಳ ಕೇಂದ್ರವಾಗಿಸಬಹುದು. ಉದಾಹರಣೆಗೆ, VCD, DVD ವಿತರಣೆ, ಅಂತರ್ಜಾಲದ ಸೌಲಭ್ಯ, ವಿಚಾರ ಗೋಷ್ಟಿಗೆ ಸಭಾಂಗಣ, ಮಕ್ಕಳ ಚಟುವಟಿಕೆಗಳಿಗೆ ಅವಕಾಶ ಮತ್ತು ಮಾಹಿತಿ ಹಂಚುವ ಕೇಂದ್ರ. ಈ ಎಲ್ಲ ಸೌಲಭ್ಯಗಳನ್ನು ಅಮೇರಿಕಾದ ಗ್ರಂಥಾಲಯಗಳು ಒದಗಿಸುತ್ತವೆ. ಅಮೇರಿಕಾದಲ್ಲೇ ಗ್ರಂಥಾಲಯಗಳನ್ನು ಮುಚ್ಚುವ ಯೋಚನೆ ಇಲ್ಲ. ಹಾಗಿದ್ದಮೇಲೆ ನಮಗೆ ಅದು ಬೇಕೇ ಬೇಕು.