ಎರಡು ಹೊಸ ಕನ್ನಡ ಸಮಾನಾರ್ಥಕಗಳು
ಮಿಂಚಂಚೆ : e-mail ("ಅಡಿಕೆ ಪತ್ರಿಕೆ"ಯಿಂದ)
ಸಜೀವ ಪ್ರಕ್ಷೇಪಣ : live telecast (thatskannada ಜೀವಿ ಕಾಲಂ ನಿಂದ)
ನಿಮ್ಮ ಅಭಿಪ್ರಾಯ ತಿಳಿಸಿ.
ಧನ್ಯವಾದ,
ಕೇಶವ ಮುರಳಿ

- Login or register to post comments
- 536 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮಿಂಚಂಚೆ : e-mail ("ಅಡಿಕೆ ಪತ್ರಿಕೆ"ಯಿಂದ)
ಸಜೀವ ಪ್ರಕ್ಷೇಪಣ : live telecast (thatskannada ಜೀವಿ ಕಾಲಂ ನಿಂದ)
ನಿಮ್ಮ ಅಭಿಪ್ರಾಯ ತಿಳಿಸಿ.
ಧನ್ಯವಾದ,
ಕೇಶವ ಮುರಳಿ




ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು
e-mail :ಮಿಂಚೋಲೆ
live telecast : "ದೂರದಲ್ಲಿರುವುದನ್ನು ಹೇಗಿದಿಯೋ ಹಾಗೆ ತೋರಿಸು" ಈ ರೀತಿ ಅರ್ತ ಮಾಡಿಕೊಳ್ಳಬೇಕು.
: "ದೂರದಲ್ಲಾಗುತ್ತಿರುವುದನ್ನು ಹೇಗಿದಿಯೋ ಹಾಗೆ ತೋರಿಸು"
tele ಅಂದ್ರೆ ದೂರ, cast ಅಂದ್ರೆ "The visual appearance of something or someone"
ಇಲ್ಲಿ live ಸಜೀವ ಅಲ್ಲ ..'ಹೇಗಿದಿಯೋ ಹಾಗೆ' ಅಂದರ್ತ ಮಾಡ್ಕೊಬೇಕು. ಏಕೆಂದರೆ recording ಮಾಡಿ ತೋರಿಸುವುದರಲ್ಲಿ ಕೂಡ ಜೀವವಿರುತ್ತದೆ.
ನನ್ನ ಗೊತ್ತಿರೊ ಮಟ್ಟಿಗೆ 'ಸಜೀವ ಪ್ರಕ್ಷೇಪಣ' ಕನ್ನಡ ಅಲ್ಲ.. ಸಂಸ್ಕ್ರುತ....ಬಲ್ಲವರು ಇದರ ಬಗ್ಗೆ ತಿಳಿಸಿ.
ತಾವು ದಯವಿಟ್ಟು
ಡಿ. ಎನ್. ಶಂಕರಬಟ್ಟರ 'ಕನ್ನಡ ಬರಹವನ್ನು ಸರಿಪಡಿಸೋಣ' ಮತ್ತು ' ಕನ್ನಡಕ್ಕೆ ಬೇಕು ಕನ್ನಡದೇ ವ್ಯಾಕರಣ' ಓದಿ ನೋಡಿ. ಅವ್ರು ಹೊಸ ಪದಗಳನ್ನು ಮಾಡುವಾಗ 'ಕನ್ನಡ' ದಲ್ಲಿ ಮಾಡಿ ಎಂದು ಹೇಳಿದ್ದಾರೆ.. ಹೀಗೆ ಮಾಡಲು ಕಾರಣಗಳೇನು ಎಂಬುದನ್ನು ಚೆನ್ನಾಗಿ ಹೇಳಿದ್ದಾರೆ. ಎಲ್ಲ ಕನ್ನಡಿಗರು ಓದಲೇ ಬೇಕಾದ ಹೊತ್ತಗೆಗಳಿವು.
ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು
ಇವೆರಡೂ ದೇವರಾಣೆ ಸಂಸ್ಕೃತದ ಒರೆಗಳು!!
- ಮಾಯ್ಸ !!
ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು
೧) electricity = ಮಿಂಚಾರ್ಪು/ಮಿಂಚಾರಂ( ಕನ್ನಡದಲ್ಲಿ )
)
ಆದರೆ ಇದರ ಬಳಕೆಯಿಲ್ಲ.
೨) e-mail = electronic-mail = ಮಿಂಚು-ಅಂಚೆ- ಮಿನ್ನಂಚೆ/ಮಿನ್ನೋಲೆ. ಇದರ ಬಳಕೆಯೂ ಇಲ್ಲ.
electronic = ( ವಿದ್ಯುತ್ + ಮಾನ = ವಿದ್ಯುನ್ಮಾನ ) ( ಇದು ಎಷ್ಟು ಸರಿಯೋ ದೇವರೇ ಬಲ್ಲ
live bomb = ಸಜೀವ ಬಾಂಬು,
ಇವೆಲ್ಲ
..
live telecast = ಸಜೀವ ಪ್ರಸಾರ
live bomb = ಸಿಡಯತಕ್ಕ ಬಾಬ್
live telecast = ನೇರ ಪ್ರಸಾರ / ನೇರ ಹರಿವು ( ಪ್ರಸಾರ = ಹರಿವು )
ಪ್ರಕ್ಷೇಪಣೆ
, ಪ್ರಕ್ಷೇಪ ಅಂದ್ರೆ ಬಿಸಾಕು, ಎಸೆ ಅಂತ ಅಲ್ವಾ ತಿಳಿವು!!
ಏನೋಪ್ಪ!! ಇವೆಲ್ಲ ತೀರಾ ಆಯ್ತು!!
- ಮಾಯ್ಸ !!
ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು
ಸಿಡಯತಕ್ಕ ಬಾಂಬು = ಸಿಡಿಯತಕ್ಕ
- ಮಾಯ್ಸ !!
ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು
ಮಿ೦ಚ೦ಚೆ: ಮಿ೦ಚಿನ೦ತೆ ಸ೦ಚರಿಸುವ ಅ೦ಚೆ ಮಾರಾಯ್ರೆ...ಪದಾನುವಾದವಲ್ಲ...ಭಾವಾರ್ಥ...ನನ್ನ ಪ್ರಕಾರ ಇದು ಒ೦ದು ಒಳ್ಳೆಯ ಸಮಾನಾರ್ಥಕ ಪದ.
live telecast: ನೇರ ದೂರಪ್ರಸಾರ, live ಅನ್ನೋದು "ಪ್ರತ್ಯಕ್ಷ" ಅ೦ದುಕೊ೦ಡರೆ, "ಪ್ರತ್ಯಕ್ಷ ಪ್ರಸಾರ" ಯಾಕಾಗಬಾರದು?
ಏನ೦ತೀರಿ?
ರೂಪೇಶ
ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು
ನೇರಪ್ರಸಾರ ಈಗಲೇ ಬಳಕೆಯಲ್ಲಿದೆ. ಮಿಂಚಂಚೆ ಚೆನ್ನಾಗಿದೆ. ಬಳಕೆಯಲ್ಲಿ ತರೋಣ-ನಮ್ಮ ಬರಹಗಳಲ್ಲಿ.
*ಅಶೋಕ್
ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು
ಕೇಶವ ಮುರಳಿಯವರೆ,
ಅದರ ಕೊಂಡಿ/ಲಿಂಕ್ ನೀಡಿ, ದಯವಿಟ್ಟು. ನಂಗೆ ಸಿಕ್ತಿಲ್ಲ!
- ಮಾಯ್ಸ !!
ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು
ನಮಸ್ಕಾರ ಮಹೇಶರೆ,
ಅಡಿಕೆ ಪತ್ರಿಕೆ ಯ ಅಂತರ್ಜಾಲ ತಾಣ ಇಲ್ಲ ಅನ್ನಿಸುತ್ತೆ. ಅದರ ಬಗ್ಗೆ ವಿವರಣೆ ಈ ಕೊಂಡಿಯಲ್ಲಿ ಇದೆ :
http://www.farmedia.org/adikepatrike.html
ಜೀವಿ ಕಾಲಂ ಲಿಂಕ್ ಇಲ್ಲಿದೆ:
http://thatskannada.oneindia.in/column/gv/020607patanjali_yogapeeta_swam...
ಧನ್ಯವಾದ,
ಕೇಶವ ಮುರಳಿ
ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು
ನನ್ನಿ!!
ಆದರೆ ನಂಗೆ ಸಿಕ್ಲಿಲ್ಲ.!! ಇರಲಿ ಬಿಡಿ!
- ಮಾಯ್ಸ !!
ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು
e-mail ಗೆ ಮಿನ್ನಂಚೆ ಎಂದು ನನ್ನ ಕೆಲವು ಗೆಳೆಯರು ಹಲವಾರು ವರ್ಷಗಳಿಂದ ಬಳಸುತ್ತಿದ್ದಾರೆ.
?
ನೇರಪ್ರಸಾರವಿರುವಾಗ ಸಜೀವ ಪ್ರಕ್ಷೇಪಣವೇಕೆ
-ಹಂಸಾನಂದಿ
ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು
live telecast = ನೇರ ಬಿತ್ತರ, ನೇರ ಬಿತ್ತರಿಕೆ ( ಮಿಶ್ರಕೋಟಿಯವರು ಹೇಳಿದುದು )
ಬಿತ್ತರಿಕೆ = telecast, broadcast
ಪ್ರಸಾರ = relay.
"ನೇರ ಬಿತ್ತರ" ಬಲು ಸೊಗಸಾದ ಒರೆ.!! ನೋಡೂಮ, ಇದನ್ನಾದರೂ ಬಳಸಿಯಾರೆಂದು!!
- ಮಾಯ್ಸ !!
ಉ: ಎರಡು ಹೊಸ ಕನ್ನಡ ಸಮಾನಾರ್ಥಕಗಳು
e-mail - ಮಿಂಚೋಲೆ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"