ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
June 4, 2007 - 8:20pm — mahesha
http://thatskannada.oneindia.in/sahitya/my_karnataka/040607kannada_sanskrit_comparision.html
ಯಾರೋ ಬಾ ರಾ ಕಿರಣ ಅನ್ನೋರು ಹಿಂಗೆ ಒಂದು ಬರಹ ಬರೆದವ್ರೆ.!!
ಸಲೀಸಾದ ಮಾತುಗಳಲ್ಲಿ ಹೇಳವ್ರೆ!

- Login or register to post comments
- 1850 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
"ಸುಲಿದ ಬಾಳೆಹಣ್ಣು ಕೈಯಲ್ಲಿರುವಾಗ, ಕಬ್ಬಿಣದ ಕಡಲೆ ಯಾಕೆ" ಅಂತ ಈ ಬರಹದ ಹೆಸರನ್ನು ಮಾರ್ಪಡಿಸಿದ್ದಾರೆ!
- ಮಾಯ್ಸ !!
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಮುಂಗಾರು ಮಳೆ ಹಾಡಿನ ಉದಾಹರಣೆ ನಾಟುವಂತಿದೆ.
ಹಾಡಿನಲ್ಲಿ ಕನ್ನಡದ ವಿಶಿಷ್ಟ ಬಳಕೆ ಬಗೆಗಿನ ವಿಶ್ಲೇಷಣೆ "ಮಯೂರ"ದ "ಪದಗತಿ" ಅಂಕಣ ಲೇಖನದಲ್ಲಿದೆ. ಓದಿ:
http://www.mayuraezine.com/pdf/2007/06/01/20070601a_008101001.jpg
*ಅಶೋಕ್
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಲೇಖನದ ಮತ್ತೊಂದು ಪುಟ:
http://www.mayuraezine.com/pdf/2007/06/01/20070601a_008101002.jpg
*ಅಶೋಕ್
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಸಾರ್...
"ಮುಂಗಾರು ಮಳೆಯ ಹಾಡು" ಅಲ್ಲಿ ಬರೀ ಒಂದು ಉದಾಹರಣೆ/ಮಾದರೆ. ಬರಹವಿರುವುದು ಅದರ ಮೇಲಲ್ಲ!!
ಆ ಬರಹ ತಿರುಳ ಬಗ್ಗೆ ಏನು ನಿಮ್ಮ ಅನಿಸಿಕೆ?
- ಮಾಯ್ಸ !!
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಲೇಖನದ ಕೊನೆಯ ಪುಟ:
http://www.mayuraezine.com/pdf/2007/06/01/20070601a_070101002.jpg
----------
------------
ಹೌದು, ಅನಗತ್ಯವಾಗಿ ಸಂಸ್ಕೃತ ನಮ್ಮ ಮಾತಿನಲ್ಲಿ ನುಸುಳುತ್ತದೆ. ಬೃಹತ್ ಎನ್ನುವಾಗಿನ ಸಮಾಧಾನ ದೊಡ್ಡದು ಎನ್ನುವಾಗ ಇರುವುದಿಲ್ಲ.
ಪುಸ್ತಕ-ಹೊತ್ತಿಗೆ, ಲೇಖನ-ಬರಹ, ತೃಷೆ-ಬಾಯಾರಿಕೆ ಹೀಗೆ.
ನನಗೆ ಬಹಳ ಸಲ ಸಂಸ್ಕೃತ ಶಬ್ದವೇ ಕನ್ನಡದ್ದು ಅನ್ನಿಸುತ್ತದೆ! ಧನ್ಯವಾದ ಕನ್ನಡ ಶಬ್ದವೇ? ಮುಖ ಕನ್ನಡವಲ್ಲ ಮೊಗ ಎಂದರೆ ಅಸಮಾಧಾನವಾಗುತ್ತದೆ. ಸಮಾಧಾನ ಕನ್ನಡವೇ?
*ಅಶೋಕ್
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ನೀವು ಸಮಾಧಾನಕ್ಕೆ ಬಾಯಾರಿದಾಗ "ತೃಷೆಯಾಗಿದೆ ಜಲ ನೀಡಿ" ಎಂದು ಕೇಳುವಿರೇ ಮನೆಯಲ್ಲಿ?
ನಿಮ್ಮ ಸಮಾಧಾನದ ಲಾಜಿಕ್ ಅರ್ತ ಆಗ್ಲಿಲ್ಲ!!
- ಮಾಯ್ಸ !!
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
' ಬೃಹತ್ ' ಅಂದಾಗ ಸಮಾಧಾನ ಸಿಗುತ್ತಾ ?
ಯಾವ ತರ? 
'ದೊಡ್ಡ' ಒರೆಯ ಬಗ್ಗೆ ತುಂಬ 'ಸಣ್ಣ'ದಾಗಿ ಮಾತಾಡಿದಿರಲ್ಲ.. ನಿಮಗೆ 'ದೊಡ್ಡ' ಮತ್ತು 'ಬೃಹತ್' ಒರೆಗಳ ನಡುವೆ ಇರುವ ಬೇರೆತನ ಗೊತ್ತಾ?
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಮಾನ್ಯ ಅಶೋಕ ಅವರೆ,
ನೀರಿಗೆ ಒಂದು ಕನ್ನಡ ಪದವನ್ನು ಹೇಳಿ, ನೀರು ಇದು ಸಂಸ್ಕೃತ ಪದ.
ವಿನಾಯಕ ಮುತಾಲಿಕ ದೇಸಾಯಿ
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ವಿನಾಯಕರೆ,
ನೀರು ಹೇಗೆ ಯಾಕೆ ಸಂಸ್ಕ್ರುತ ಪದ ಎಂದು ಹೇಳುವಿರಾ?
ನಾನು ಕೊಳಂಬೆ ಪುಟ್ಟಣ್ಣಗೌಡರ ಅಚ್ಚಗನ್ನಡ ನುಡಿಕೋಶದಲ್ಲಿ ನೋಡಿದೆ. ನೀರು ಅಚ್ಚಗನ್ನಡ ಪದವೇ.
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ವಿನಾಯಕರೆ,
ವಸಿ ತಿಳ್ಕಂಡ ಬರೀರಿ..ಸುಮ್ನೆ ಏನೇನೊ ಗೀಚ್ ಬೇಡಿ...ದ್ರಾವಿಡ ಒರೆಗಂಟಿನಲ್ಲಿ ಕೊಟ್ಟಿದೆ..ನೀರು ನಮ್ಮ ಕನ್ನಡದ್ದೆ...ಗೊತ್ತಾಯ್ತ ?
http://dsal.uchicago.edu/cgi-bin/philologic/search3advanced?dbname=burro...
Ka. nīr, nīru water; īra moisture, dampness, wetness; (Gul.) nīrki thirst. Koḍ. ni·rï water. Tu. nīrů id. Te. nīru water, urine; nīḷḷu (pl.) water; īmiri moisture. Kol. i·r water.
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಅದು ಕನ್ನಡದಿಂದ ಸಕ್ಕದಕ್ಕೆ... ಹೋಗಿರಬಹುದೆ....?
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ತಪ್ಪಿದ್ದರೆ ಕ್ಷಮಿಸಿ. ನನಗೆ ಸಂಸ್ಕೃತ ಅಷ್ಟು ಬರೊಲ್ಲ. ಆದರೆ ನನಗೆ ತಿಳಿದಂತೆ, ಸಂಸ್ಕೃತದಲ್ಲಿ "ನೀರಂ" ಎಂಬ ಪದ ಇದೆ. ಜಲಂ, ಸಲಿಲಂ, ಉದಕಂ ಇತ್ಯಾದಿ ಇದಕ್ಕೆ ಸಮಾನಾರ್ಥಕ ಪದಗೆಳು. ಅಮರಕೋಶ ಒದಿದವರರಾದರು ಈ ಬಗ್ಗೆ ಬೆಳಕು ಚಲ್ಲಬೇಕು.
ಚಂದ್ರಕಾಂತ್
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ನೀರಿಗೆ ಸಂಸ್ಜ್ಕೃತದ ಶಬ್ದಗಳು - ಅಮರಕೋಶದಿಂದ
ಆಪಸ್ತ್ರ್ರ್ರೀ ಭೂಮ್ನಿ ವಾರ್ವಾರಿ ಸಲಿಲಂ ಕಮಲಂ ಜಲಂ
ಪಯಃ ಕೀಲಾಲಮಮೃತಮ್ ಜೀವನಂ ಭುವನೋ ವನಂ
ಕಬಂಧಮುದಕೋ ಪಾತಃ ಪುಷ್ಕರಃ ಸರ್ವತೋಮುಖಂ
ಅಂಭೋರ್ಣಸ್ತೋಯ ಪಾನೀಯ ನೀರ ಕ್ಷೀರೋಂಬುಶಂಬರಂ
ಮೇಘಪುಷ್ಪಂ ಘನರಸಃ ತ್ರಿಷು ದ್ವೇ ಆಪ್ಯಯಮ್ ಅಮ್ಮಯಂ
ನೀರ ಎಂಬುದನ್ನು ಇಲ್ಲಿ ನೋಡಬಹುದು - ಇದು ಖಂಡಿತವಾಗಿ ಕನ್ನಡದಿಂದ (ಮಹಾರಾಷ್ಟ್ರೀ ಪ್ರಾಕೃತಕ್ಕೆ ಅತಿ ಹತ್ತಿರವಾಗಿದ್ದುದು ಕನ್ನಡವೇ ತಾನೇ?) ಸಂಸ್ಕೃತಕ್ಕೆ ಹೋಗಿರುವ ಪದವೇ.
-ಹಂಸಾನಂದಿ
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಹಂಸಾನಂದಿಗೆ ನನ್ನ ನನ್ನಿ!!
ಚನ್ನಾಗಿರಿ!
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಏಲ್ಲ ಮಹನೀಯರಿಗೂ ನಮಸ್ಕಾರಗಳು,
"ನೀರು" ಇದು ಸಂಸ್ಕೃತ ಪದ, ಇದಕ್ಕೆ ಕನ್ನಡದಲ್ಲಿ "ಎಸರು" ಎಂದು ಕರೆಯುತ್ತಾರೆ. नीरज ಅಂದರೆ ಕಮಲ ಈ ಶಬ್ದದ ಉತ್ಪತ್ತಿ ಹಾಗು ನೀರು ಎರಡೂ ಒಂದೇ ಧಾತುವಿನಿಂದ ಆಗಿವೆ. "ನಾನೇನು ಕನ್ನಡ ದ್ವೇಶಿಯಲ್ಲ. ಸಂಸ್ಕೃತದಿಂದಲೇ ಎಲ್ಲ [ಹೆಚ್ಚು ಕಮ್ಮಿ] ಭಾರತೀಯ ಭಾಷೆಗಳು ಬೆಳೆದಿವೆ, ಹಾಗಾಗಿ ಸಂಸ್ಕೃತದ ಪ್ರಾಕೃತದಿಂದಾಗಿ ಎಲ್ಲ ಭಾರತೀಯ ಭಾಷೆಗಳು ಹುಟ್ಟಿದವು. ಕನ್ನಡ, ತೆಲುಗು, ತಮಿಳು, ಈ ಎಲ್ಲ ಭಾಷೆಗಳಲ್ಲಿಯೂ ಅಲ್ಪ ಸ್ವಲ್ಪ ಸಾಮ್ಯತೆಗಳಿವೆ. ಕನ್ನಡದಲ್ಲಿಯೂ ಆಡು ಭಾಷೆ ಹಾಗು ಲಿಪಿಯಲ್ಲಿ ತುಂಬಾ ವ್ಯತ್ಯಾಸವಿದೆ. ಉದಾ :
"ವಸಿ ತಿಳ್ಕಂಡ ಬರೀರ" ಇದು ನಮ್ಮಲ್ಲೇ ಒಬ್ಬರು ಬರೆದ ವಾಕ್ಯ ಇದರಲ್ಲಿ ಯಾವ ಶಬ್ದವೂ ಸರಿಯಾದ ಕನ್ನಡದಲ್ಲಿಲ್ಲ. ನಾನು ಕನ್ನಡ ಶಬ್ದ ಬಳಸಬಾರದೆಂದು ಹೇಳುತ್ತಿಲ್ಲ. ಮೊದಲು ಕನ್ನಡವನ್ನು [ಪ್ರಚಲಿತ] ಚನ್ನಾಗಿ ಕಲಿಯೋಣ ಆಮೇಲೆ ಕಲಿತದ್ದನ್ನು ಸರಿಪಡಿಸೊಣ. ಏನಂತೀರಾ?
ವಿನಾಯಕ ಮುತಾಲಿಕ ದೇಸಾಯಿ
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಗುರುಗಳೇ, 'ಎಸರು' ಪದವನ್ನು ಅದೆಲ್ಲಿ ಹಿಡಕೊಂಡು ಬಂದಿದಿರೋ ಗೊತ್ತಿಲ್ಲಾ, 'ನೀರು' ಪದ ಕನ್ನಡ ಮತ್ತು ಅದರ ಒಡನಾಡಿ ನುಡಿಗಳಾದ ತೆಲುಗು,ತಮಿಳು ... ಗಳಲ್ಲಿ ಮೊದಲಿಂದಲೂ ಇದೆ. ನೀವು ಹೇಳುವ 'ನೀರಜ' ಒರೆ, ಒಂದು ಬೆರಕೆ ಒರೆ. 'ಮೀನಾಕ್ಷಿ' ಒರೆಯನ್ನೇ ತಗೊಳ್ಳಿ, ಇಲ್ಲಿ 'ಮೀನು'-ಕನ್ನಡ ಅಕ್ಷಿ - ಸಕ್ಕದ. ಹೀಗೆ ಕನ್ನಡ(+ಬೇರೆ)ದ ಹಲವು ಒರೆಗಳು ಸಕ್ಕದಕ್ಕೆ ಹೋಗಿವೆ. ಕೆಲ ದಿನಗಳ ಹಿಂದೆ 'ಬಳ್ಳಿ' ಸಕ್ಕದ ಒರೆ ಅಂತ ಜಗಳ ನಡೆದಿತ್ತು.
ಬೆಂದ+ಕಾಳೂರು=ಬೆಂಗಳೂರು, ಇತ್ತೀಚೆಗೆ bangalored ಎಂಬ verb ಇಂಗ್ಲೀಸ್ ಒರೆಗಂಟಲ್ಲಿ ಸೇರಿದೆ. ಎತ್ತಣ ಮಾಮರ, ಎತ್ತಣ ಕೋಗಿಲೆ ಎಂಬಂತೆ 'ಬೆಂಗಳೂರು' ಎಂಬ ಅಚ್ಚಕನ್ನಡ ಒರೆ ದೂರದ ಅಮೆರಿಕೆಯಲ್ಲಿ ಹೊಸ ಪದವೊಂದನ್ನು ಹುಟ್ಟಿಸಿದೆ.
ಹೀಗೆ ಕನ್ನಡದಿಂದ ಹಿಂದೆ ಎಸ್ಟೋ ಪದಗಳು ಹೋಗಿವೆ.
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಸರಿ ಸಂಗನಗೌಡರೆ,
ಕನ್ನಡದಿಂದ ಪದಗಳು ಸಂಸ್ಕೃತಕ್ಕೆ ಹೋದಬಗ್ಗೆ ತಮಗೇನಾದರೂ ಹೆಚ್ಚಿನ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ,
ಕನ್ನಡದಿಂದ ಬೆರೆ ಭಾಷೆಗಳಿಗೆ ಪದಗಳು ಹೋದಮಾತ್ರಕ್ಕೆ ಬೇರೆಭಾಷೆಗಳಿಂದ ಕನ್ನಡಕ್ಕೆ ಯಾವ ಪದಗಳು ಬರಬಾರದೆಂಬ ನಿಯಮವೇನೂ ಇಲ್ಲ, ನಾನು ಮೊದಲೇ ಹೆಳಿದ್ದೇನೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ಸಾಮ್ಯತೆ ಇದೆ.
ವಿನಾಯಕ ಮುತಾಲಿಕ ದೇಸಾಯಿ
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
"...."ವಸಿ ತಿಳ್ಕಂಡ ಬರೀರ" ಇದು ನಮ್ಮಲ್ಲೇ ಒಬ್ಬರು ಬರೆದ ವಾಕ್ಯ ಇದರಲ್ಲಿ ಯಾವ ಶಬ್ದವೂ ಸರಿಯಾದ ಕನ್ನಡದಲ್ಲಿಲ್ಲ...."
ವಸಿ ತಿಳ್ಕಂಡ ಬರೀರಿ...ಇದರಲ್ಲಿ ಯಾವ ಒರೆ ಯಾಕೆ ಸರಿಯಾದ ಕನ್ನಡ ಒರೆಗಳಲ್ಲ ತಿಳಿಸುವ "ಕೃಪೆ" ಮಾಡುವಿರಾ ?
ವಸಿ = ಒಸಿ = ಸೊಲ್ಪ = ಸ್ವಲ್ಪ
ತಿಳ್ಕಂಡ = ತಿಳಿದು+ಕೊಂಡು
ಬರೀರಿ = ಬರೆ + ಇರಿ = ಬರೆಯಿರಿ
ಎಲ್ಲ ಕನ್ನಡ ಒರೆಗಳಿವೆಯಲ್ಲವೆ ?
ನನಗೆ ಹೇಳುವ ನೀವು ಇನ್ನು ನೀವು ಹೇಗೆ ಕನ್ನಡ ಪದಗಳನ್ನ ಉಳಿಸ್ತೀರ ನೋಡೋಣ
ಶಬ್ದ, ಉತ್ಪತ್ತಿ, ಧಾತು, ದ್ವೇಶಿ, ಭಾಷೆ, ಅಲ್ಪ, ಸಾಮ್ಯತೆ, ವ್ಯತ್ಯಾಸ, ಪ್ರಚಲಿತ - ೯ ಸಂಸ್ಕ್ರುತ(ಸಕ್ಕದ) ಪದಗಳು...ನೀವು ಬಳಸಿರೋದು.
ಈಗ ಹೇಳಿ ಯಾರು ಸರಿಯಾದ ಕನ್ನಡ ಬಳಸ್ತಿರೋದು... ??
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ವೈಭವ,
ನನಗೆ ಸಂಸ್ಕೃತ ಬಳಸಲು ಇಷ್ಟ, ಸಂಸ್ಕೃತದ ಬಳಕೆ ನನಗೇನೂ ಬೇಸರ ತಂದಿಲ್ಲ ಹಾಗಾಗಿ ನಾನು ಬಳಸುತ್ತಿದ್ದೇನೆ... ಕೆಲವರಿಗೆ ಬಳಸಲು ಇಷ್ಟವಿಲ್ಲದಿದ್ದರೂ ಬಳಸುತ್ತಿದ್ದುದರಿಂದ ನಾನು ಹಾಗೆಹೇಳಿದೆ .....
ತಮಗೂ ಇಷ್ಟವಿದ್ದರೆ ಧಾರಾಳವಾಗಿ ಬಳಸಿ ನನ್ನದೇನೂ ಅಭ್ಯಂತರವಿಲ್ಲ.
ವಿನಾಯಕ ಮುತಾಲಿಕ ದೇಸಾಯಿ
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಬಳಸಿ ..ನಾನು ಬೇಡ ಎಂದು ಹೇಳಿಲ್ಲ
ನೀವು ನಾನು ಬರೆದಿರುವುದು ಸರಿಯಾದ ಕನ್ನಡವಲ್ಲ(ಸರಿಯಾದ ಕನ್ನಡವನ್ನೇ ಬಳಸಿದ್ದರೂ ಕೂಡ
) ಅಂದ್ರಲ್ಲ.. ಅದಕ್ಕೆ ನಾನು ನೀವು ಬರೆದಿರುವುದು ಸರಿಯಾದ ಕನ್ನಡವಲ್ಲ ತುಂಬ ಸಕ್ಕದದ ಪದಗಳನ್ನು ಬಳಸಿದ್ದೀರಾ ಎಂದೆ.
ನೀವು ಸಕ್ಕದವನ್ನಾದರೂ ಬಳಸಿ , ಬೇಕಾದರೆ ಜರ್ಮನ್ ಆದರೂ ಬಳಸಿ. ಆದರೆ ಬೇರೆಯವರು ಬರೆದಿರುವುದನ್ನು ಸರಿಯಾಗಿ ಅರಿತು ಬರೆಯಿರಿ ಎಂದು ನಿಮ್ಮಲ್ಲಿ ನನ್ನ ಕೋರಿಕೆ
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
यद यद आचरति ष्रॆष्ठ: तत्दॆवेतरॊ जन: ।
स यत प्रमाणं कुरुते लॊकस्तदनुवर्ततॆ ॥
— ಭ್ಹಗವದ್ಗೀತಾ
ಷ್ರೇಷ್ಠ ವ್ಯಕ್ತಿಯು ಹೇಗೆ ನಡೆಯುತ್ತಾನೋ ಹಾಗೆಯೇ ಇತರರು ಅವನನ್ನು ಹಿಂಬಾಲಿಸುತ್ತಾರೆ, ಅವನು ಏನನ್ನು ತೋರಿಸಿ ಕೊಡುತ್ತಾನೊ ಅದನ್ನು ಜನರು ಸ್ವೀಕರಿಸುತ್ತಾರೆ. ["ಷ್ರೇಷ್ಠ ಎನಿಸಿಕೊಂಡ ವ್ಯಕ್ತಿ ಜಾಗರೂಕತೆಯಿಂದ ನಡೆಯಬೇಕು"]
ಹಾಗಾಗಿ ತಾವು ಆಡು ಭಾಷೆಯಲ್ಲಿ ಬರೆಯಲು ಶುರು ಮಾಡಿದರೆ ಮುಂದೆ ಎಲ್ಲರು ಆಡುಭಾಷೆಯನ್ನೇ ಬಳಸುತ್ತಾರೆ, ಆಗ ಆಡುಭಾಷೆಗೆ ಜೈಜೈ!! ಕನ್ನಡಕ್ಕೆ ಬೈಬೈ ಎಂದು ಮತೊಂದು ಚರ್ಚೆ ಆಗಬಾರದಲ್ಲವೆ?
ವಿನಾಯಕ ಮುತಾಲಿಕ ದೇಸಾಯಿ
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಹೌದು... ಆಡುನುಡಿಗೆನೇ ಜೈ(ಗೆಲ್). ಹಾಗಾದರೆ ಎಲ್ಲ ತರದ ಮಂದಿಗೂ ಒಳಿತಾಗುವುದು. ಹಾಗಾದರೆ ಕನ್ನಡ ಗೆಲ್ಲುವುದು.
ಮೊದಲು ನೀವು ಈ ಹೊತ್ತಿಗೆಗಳನ್ನು ಓದಿ, ಆಮೇಲೆ ಮಾತಿಗೆ ಬನ್ನಿ.
ಡಿ.ಎನ್. ಶಂಕರಬಟ್ಟರು ಬರೆದಿರುವ
೧) ಕನ್ನಡಕ್ಕೆ ಬೇಕು ಕನ್ನಡದ ವ್ಯಾಕರಣ
೨) ಕನ್ನಡ ಬರಹ ಸರಿಪಡಿಸೋಣ.
ಬರಹ ಮತ್ತು ಮಾತು(ಆಡುನುಡಿ) ಎರಡು ಏಕೆ ಹತ್ತಿರ ಇರಬೇಕು ಅಂತ ಸೊಗಸಾಗಿ ಹೇಳಿದ್ದಾರೆ.
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
"ಭ್ಹಗವದ್ಗೀತಾ" ಏನಿದು?
ಬಡ ಬಡಾ!!
ಇಲ್ಲಿ ಆಡುನುಡಿ ಅದೂ ಕನ್ನಡವೇ ಅಪ್ಪ!! ತುಸು ಬೇರೆಯವರು ಹೇಳಿದನ್ನು ತಲೆಗೆ ಹಾಕಿಕೊಳ್ಳಪ್ಪ. !!
ಶ್ರೇಷ್ಠ "ಷ್ರೇಷ್ಠ" ಅಲ್ಲ!!
ನಿಮಗೆ ಅರಿಯುವುದಲ್ಲಿ ಬಲು ಎಡರಿದೆ.!! ನಿಮಗೆ ನಾವು ಏನು ಮಾತಾಡುತ್ತಿದ್ದೀವಿ ಅಂತವೇ ತಿಳಿಯುತ್ತಿಲ್ಲ, ತಿಳಿಯುವ ಮೊಗಸೂ ಇಲ್ಲ.
ತುಸು ಓದಿಕೊಳ್ಳಪ್ಪ.!!
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಅಣ್ಣಾ ನೀನು ಮಾತನಾಡುತ್ತಿರುವುದು ನಿನಗೆ ಅರ್ಥವಾದರೆ ಅದು ನನ್ನ ಪುಣ್ಯ.... ಭಗವದ್ಗೀತಾ ಇದು ಮೇಲೆ ತಿಳಿಸಿರುವ ಶ್ಲೋಕ ಈ ಗ್ರಂಥದಲ್ಲಿ ಸಿಗುತ್ತದೆ ಅಂತಾ..... ತುಸು ಓದಿಕೊಳ್ಳಪ್ಪ.!!
ವಿನಾಯಕ ಮುತಾಲಿಕ ದೇಸಾಯಿ
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಅಯ್ಯೋ ಮಾರಾಯ್ರೆ!!
ಈಗ ಏನು ಭಗವದ್ಗೀತೆ ಉಪನ್ಯಾಸವಾ ಇಲ್ಲಿ??
ಬರೀ ಮಾತಿಗೊಂದು ಮಾತು.
ಅಯ್ಯ ನಾವು ಯಾವುದರ ಬಗ್ಗೆ ಮಾತಾಡ್ತಾ ಇದ್ದೀವಿ ಅಂತ ಗೊತ್ತುಂಟಾ?
ನನಗೆ ಗೊತ್ತು ಇದಕ್ಕೂ ಒಂದು ನಂಟಿಲ್ಲದ ಮಾತು ಮರುನುಡಿಯಾಗಿ ಬರುವುದು ಎಂದು. ಬರಲಿ!!
ಅಸಂಗತಚರ್ಚಾರತಿಸಂಭೋಗ!!
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ತಮಗೆ ಅರ್ಥವಾಗದ ವಿಷಯ ತಿಳಿಸಿದರೆ ಸಂಸ್ಕೃತ ಪದಗಳು ಉದುರುತ್ತವೆ ಅಲ್ಲಾ?
ನಾನೇನು ಭಗವದ್ಗೀತಾ ಉಪನ್ಯಾಸ ಕೊಡುತ್ತಿಲ್ಲ, ತಮ್ಮ ಚರ್ಚೆ ತಮಗೇ ಇರಲಿ ನಮಸ್ಕಾರ.....
ತಮ್ಮ ಚರ್ಚೆ ಮುಂದುವರಿಯಲಿ...... carry on...
ವಿನಾಯಕ ಮುತಾಲಿಕ ದೇಸಾಯಿ
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಹಾಗೇ ಆಗಲಿ / ತಥಾಸ್ತು
ಉಸ್ಸಪ್ಪ!!
ನಾವು ಏನು ಮಾತಾಡುತ್ತಿದ್ದೇವೆ ಅಂತ ಸರಿಯಾಗಿ ತಿಳಿದರೇ, ನಾವು ಬರೆದುದು ತಲೆಗಿಳಿದರೇ, ನಿಮ್ಮ ಕೊಡುಗೆಗೂ ನಲ್ವರುವೇ!!
ಒಳ್ಳೇದಾಗಲಿ!! ಟಾಟಾ!
====================================================
ನಲ್ + ಬರುವು = ನಲ್ವರುವು = ಸುಸ್ವಾಗತ. ಇದನ್ನು ಸಿಂಗಾಪುರದ 'ಹಾರುಬಂಡಿ' ತಾಣದಲ್ಲಿ ನೋಡಬಹುದು!!
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಕೊಂಡಿ ಕೊಡಿ :’(
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಇನ್ನು ನೀವು ಹೇಳುತ್ತಿರುವ ಎಸರು ಬರೀ ನೀರಲ್ಲ.. ಕೆಳಗೆ ನೋಡಿ.
ಎಸರು = ಅಕ್ಕಿಯೊಡನೆ ಕುದಿಯುತ್ತಿರುವ ನೀರು, ಬೇಳೆಕಾಳು ಕಾಯಿ ಪಲ್ಯಗಳೊಡನೆ ಕುದಿದ ನೀರು, ಮೆಣಸಿನ ನೀರು, ಮೇಲೋಗರದ ರಸ - ನೀರೆಸರ್
(ಪುಟ್ಟಣ್ಣಗೌಡರ ಅಚ್ಚಗನ್ನಡ ನುಡಿಕೋಶದಿಂದ)
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಮೊದಲು ಕೆಲವು ಹೊಮ್ ವರ್ಕ್ ಮಾಡುಬೇಕು ನೀವು.
೧) ದ್ರಾವಿಡ ನುಡಿಕೂಟ, http://ccat.sas.upenn.edu/~haroldfs/sars238/shortencybrit.html ಅಂದರೇನು.
೨) ಇಂಡೋ-ಯುರೋಪಿಯನ್ ನುಡಿಕೂಟ ಅಂದರೇನು? ಇದನ್ನು ಹುಡಕಿ ಅಣ್ಣ, ಸಿಗುತ್ತದೆ.
೩) ಕನ್ನಡ, ತಮಿಳು, ತೆಲುಗು, ಮುಂತಾದವು ಹೇಗೆ ಸಂಸ್ಕೃತ, ಪಾಕೃತದಿಂದ ಬಂದಿಲ್ಲ ಅಂತ ತಿಳಿಯಬೇಕು. ಇದನ್ನು ಇಂಟರ್ ನೆಟ್ಟಲ್ಲಿ ಹುಡುಕಿ ಸಿಗುವುದು.
ಇದನ್ನೆಲ್ಲ ಓದಿಕೊಂಡು ಆಮೇಲೆ ಬನ್ನಿ ಮಾತಾಡೋಣ.!!
ಮತ್ತೊಂದು ಸಲಹೆ, ಬರೆದುದನ್ನು ಏನು ಎಂದು ಓದಿ, ಅರಿತು ಆಮೇಲೆ ಅದಕ್ಕೆ ಮರುನುಡಿಯಿರಿ. ಸುಮ್ನೆ ೩೦% ಇಂಗ್ಲೀಸು, ೩೦% ಸಕ್ಕದ ಲೆಕ್ಕಕ್ಕೆ ಗಮನಕೊಟ್ಟು, ಬರೆದಿರುವ ಸಂಗತಿ ಬಿಟ್ಟುಬಿಟ್ಟರೆ, ನಿಮಗೆ ನಮ್ಮೆ ಮಾತಿನ ತಲೆಬುಡ ತಿಳಿಯಕ್ಕಿಲ್ಲ.
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
"ವಸಿ ತಿಳ್ಕಂಡ ಬರೀರ" ಇದು ಸರಿಯಾದ ಕನ್ನಡವೇ!! ಪಾಪ ನಿಮಗೆ ತಿಳಿಯಲ್ಲ ಬಿಡಿ. ಅವರು ಆಡುಗನ್ನಡದಲ್ಲಿ ಬರೆದಿದ್ದಾರೆ, ಇಂತವು ನೀವು ಸಂಪದದಲ್ಲಿ ಕಂಡಾಪಟ್ಟೆ ನೋಡಬಹುದು.
ಇದೊಂದು ದೊಡ್ಡ ಅರಿಯಮಿಕೆ/ignorance!
ಇನ್ನು ಕನ್ನಡವನ್ನು ಚನ್ನಾಗಿ ಕಲಿಯೋಣ ಇವೆಲ್ಲ ಇರಲಿ, ಬುದ್ದಿ!! ಮೊದಲು ನೀವು ಹಲವನ್ನು ತಿಳಿಯಬೇಕಿದೆ.
’ಉಪದೇಶ’ದ mode ಇಂದ, ತುಸು ಅರಿಯುವ modeಗೆ ಬನ್ನಿ!!
ಇದನ್ನು ಅಚ್ಚಕನ್ನಡದಲ್ಲಿ "ಹೇಳುವ ನಿಲುವಿಂದ, ಅರಿಯುವ ನಿಲುವಿಗೆ ಬನ್ನಿ" ಎನ್ನಬಹುದು. ಆದರೆ ನಿಮಗೆ ನಮ್ಮ ಕನ್ನಡ ತಿಳಿಯುವಲ್ಲಿ ಎಡರಾಗುತ್ತಿದೆ ಎಂದು ತಿಳಿಯಾಗಿ, ತುಸು ಇಂಗ್ಲೀಸ್ ಬರೆಸಿ ಹೇಳ್ತಾ ಇದ್ದೀವಿ, ನಿಮ್ಮ ನೆರವಿಗಾಗಿ!
ನಿಮ್ಮ ಸಂಗತಿ/ವಿಷಯ ಬಿಟ್ಟ ಮಾತುಗಳನ್ನು ನಾವು ಬೇಕೆಂದೇ ಕಡೆ ಮಾಡಿದ್ದೇವೆ(ignored).
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಮಹೇಶ ಅವರೆ,
ಹೆಗೆ ನಾವು "ವಸಿ" ಅನ್ನುವ ಶಬ್ದ ಆಡು ಭಾಷೆಇಂದ ಬಂದದ್ದು ಎಂದು ತಿಳಿದು ಸುಮ್ಮನಾಗುತ್ತೇವೋ ಹಾಗೆ ಯಾಕೆ ಸಂಸ್ಕೃತ ಶಬ್ಡವನ್ನು ತಿಳಿಯಬಾರದು? "ವಸಿ" ಅನ್ನುವ ಶಬ್ದವನ್ನು ಸಂಪದದಲ್ಲಿ ಎಲ್ಲರು ಬಳಸುತ್ತಾರೆ ಅಂದರೆ ಅದು ತಪ್ಪಲ್ಲ ಎಂದು ಯಾವ ಆಧಾರದ ಮೇಲೆ ಹೇಳಿದಿರಿ? ಎಲ್ಲರೂಬಳಸಿದರೆ ತಪ್ಪಲ್ಲ ಎನ್ನುವದು ತಮ್ಮ ಅಭಿಪ್ರಾಯವೇ?
ವಿನಾಯಕ ಮುತಾಲಿಕ ದೇಸಾಯಿ
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
೧) ದ್ರಾವಿಡ ನುಡಿಕೂಟ, http://ccat.sas.upenn.edu/~haroldfs/sars238/shortencybrit.html ಅಂದರೇನು.
೨) ಇಂಡೋ-ಯುರೋಪಿಯನ್ ನುಡಿಕೂಟ ಅಂದರೇನು? ಇದನ್ನು ಹುಡಕಿ ಅಣ್ಣ, ಸಿಗುತ್ತದೆ.
೩) ಕನ್ನಡ, ತಮಿಳು, ತೆಲುಗು, ಮುಂತಾದವು ಹೇಗೆ ಸಂಸ್ಕೃತ, ಪಾಕೃತದಿಂದ ಬಂದಿಲ್ಲ ಅಂತ ತಿಳಿಯಬೇಕು. ಇದನ್ನು ಇಂಟರ್ ನೆಟ್ಟಲ್ಲಿ ಹುಡುಕಿ ಸಿಗುವುದು.
ಇಷ್ಟೇ.. ಮೊದಲು ಇವನ್ನು ಓದಿ ತಿಳಿದು ಮಾತಾಡಿರಿ!!
ನಮಗೆ ಸಕ್ಕದದ ಒರೆಗಳೂ ಬೇಡ, ಇಂಗ್ಲೀಸ್ ಒರೆಗಳೂ ಬೇಡ.
ಕನ್ನಡಕ್ಕೆ ಬೇಕು ಕನ್ನಡದ್ದೇ ಒರೆಗಳು"
ಶಂಕರಭಟ್ಟರ ಹೊತ್ತಗೆಗಳನ್ನು ಓದಿರಿ, ಎಲ್ಲ ತಿಳಿಯಾಗುವುದು.
ಹೆಸರುಗಳು
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ.
ಕನ್ನಡ ಬರಹ ಸರಿಪಡಿಸೋಣ.
ಒಳ್ಳೆಯದಾಗಲಿ!!
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ವಿನಾಯಕರೆ,
ನೀವು ಹೇಳಿದ್ದು (ಇಲ್ಲವೆ ತಿಳಿದಿದ್ದು) ಸರಿಯಿಲ್ಲ...
"ಆಡುಭಾಷೆ ಇಂದ ಬಂದ್ದದ್ದು.." ಅನಲಿಕ್ಕೆ ಆಡು ಭಾಷೆ ಅನ್ನೊದು ಎಲ್ಲಿಂದ ಬಂತು .. ಅದು ಕನ್ನಡಕ್ಕೆ ಹೊರತೊ...
ಅದು ಬೇರೆ ಅಂತ ನೀವು ಅನಕೊಂಡಿದ್ದರೆ.. ಅದರ ಬಗ್ಗೆ ಬರೀರಿ... ನಾನು ಹೇಳೊದು ಸಕ್ಕದ ಕನ್ನಡಕ್ಕೆ ಹೊರತು...
ಆಡುನುಡಿ ಅಂದರೆ ಸಾಮಾನ್ಯವಾಗಿ ಹೆಚ್ಚು ಉಲಿಯುವ ಪದ. ಕನ್ನಡದ ಆಡುನುಡಿಯಲ್ಲಿ "ವಸಿ" ಅನ್ನೋದು ಇದೆ...
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
"ಆಡುಭಾಷೆ ಇಂದ ಬಂದ್ದದ್ದು.." ಅನಲಿಕ್ಕೆ ಆಡು ಭಾಷೆ ಅನ್ನೊದು ಎಲ್ಲಿಂದ ಬಂತು .. ಅದು ಕನ್ನಡಕ್ಕೆ ಹೊರತೊ...
ಅದು ಬೇರೆ ಅಂತ ನೀವು ಅನಕೊಂಡಿದ್ದರೆ.. ಅದರ ಬಗ್ಗೆ ಬರೀರಿ... ನಾನು ಹೇಳೊದು ಸಕ್ಕದ ಕನ್ನಡಕ್ಕೆ ಹೊರತು...
ಆಡುಭಾಷೆಯ ಬಗ್ಗೆ ಚನ್ನಾಗಿ ಬರೆದಿದ್ದೀರ, ಕನ್ನಡ ಒಂದೇ ಆಗಿದ್ದರೂ, ಕರ್ನಾಟಕ ಉತ್ತರ ಭಾಗದಲ್ಲಿ ನಿಮಗೇ ಹಲವಾರು ರೀತಿಯಲ್ಲಿ ಸಿಗುತ್ತವೆ, ಅವೆಲ್ಲ ಕನ್ನಡದ ಅಪಭ್ರಂಶಗಳು, ನೀವು ಬೀದರ್ ಕಡೆಗೆ ಹೋದರೆ ಅವರು ಮಾತನಾಡುವುದು ಕನ್ನಡವನ್ನೇ ಆದರೆ ಅದಕ್ಕೆ ತೆಲುಗು, ಉರ್ದು, ಮರಾಠಿ ಪ್ರಭಾವವಿದೆ, ಹಾಗೆಂದ ಮಾತ್ರಕ್ಕೆ ಅದು ಕನ್ನಡವಲ್ಲವೇ? ಅವರು ಅಚ್ಚು ಕನ್ನಡವನ್ನು ಬರೆಯಲು ಬಳಸುತ್ತಾರೆ ಆದರೆ ಮಾತನಾಡುವಾಗ ಬೇರೆ. ಹಾಗೆಯೇ ಎಲ್ಲ [ಹೆಚ್ಚು ಕಮ್ಮಿ] ಭಾಷೆಗಳು ಸಂಸ್ಕೃತದ ಆಡುಭಾಷೆಗಳಾಗಿ ಮುಂದೆ ಕನ್ನಡ etc etc ಭಾಷೆಗಳಾಗಿ ರೂಪಾಂತರಗೊಂಡವು.
ತಾವು ಹಿಂದೂ ಧರ್ಮದಬಗ್ಗೆ ನಂಬಿಕೆ ಇದ್ದರೆ ದ್ವಾಪರ ಯುಗ ತ್ರೆತಾಯುಗದಲ್ಲಿ ಬಳಕೆಯಲ್ಲಿದ್ದದ್ದು ಸಂಸ್ಕೃತವಲ್ಲವೇ? ಆಗ ಬೇರೆ ಯಾವ ಭಾಷೆ ಬಳಕೆಯಲ್ಲಿತ್ತು? ಇದ್ದದ್ದು ಬರೀ ಸಂಸ್ಕ್ರುತವಲ್ಲವೇ?
ವಿನಾಯಕ ಮುತಾಲಿಕ ದೇಸಾಯಿ
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಆ೦ಜನೇಯನ ಮಾತೃ ಭಾಷೆ ಕನ್ನಡ ಅನ್ನುವುದನ್ನು ಡಿ.ವಿ.ಜಿ ಯವರು ಎಲ್ಲೋ ಹೇಳಿದ ಹಾಗೆ ಓದಿದ್ದೆ. ಶ್ರಿ ಕೄಷ್ಣ ಕೂಡ ಕನ್ನಡ ಮಾತಾಡುತ್ತಿದ್ದ ಅನ್ನುವುದಕ್ಕೆ ಸಾಕ್ಷಿ ಸಮೇತ ಸುಧಾದಲ್ಲಿ ಓದಿದ್ದು ನೆನಪಿದೆ. ಒಟ್ಟಿನಲ್ಲಿ ಎಲ್ಲಾ ಕಾಲದಲ್ಲೂ ಎಲ್ಲಾ ಯುಗದಲ್ಲೂ ಮ೦ಗಗಳಿ೦ದ ಹಿಡಿದು ಅವತಾರ ಪುರುಷರವರೆಗೂ ಕನ್ನಡವನ್ನು ಬಳಸುತ್ತಿದ್ದರು.
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಕನ್ನಡ ಆಗ ಆಡು ಭಾಷೆ ಆಗಿದ್ದರೆ ರಾಮಾಯಣ ಸಂಸ್ಕೃತದಲ್ಲಿ ಬರೆಯಲು ಕಾರಣ?
ಕೃಷ್ಣ ಭಗವದ್ಗೀತೆಯನ್ನು ಕನ್ನಡದಲ್ಲೇ ಬೊಧಿಸಿದ್ದರೆ ಚನ್ನಾಗಿತ್ತು ಅಲ್ಲವೇ? ಅಥವಾ ಅದನ್ನು ಬರೆದವರಿಗೆ ಕನ್ನಡ ಗೊತ್ತಿರಲಿಕ್ಕಿಲ್ಲ ಅಲ್ಲವೇ?
ವಿನಾಯಕ ಮುತಾಲಿಕ ದೇಸಾಯಿ
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
"ಸಂಸ್ಕೃತದ ಪ್ರಾಕೃತದಿಂದಾಗಿ ಎಲ್ಲ ಭಾರತೀಯ ಭಾಷೆಗಳು ಹುಟ್ಟಿದವು.
ಇದೊಂದು ದೊಡ್ಡ ಅರಿಯಮಿಕೆ/ignorance!"
ಇದರಲ್ಲಿ ignorance! ಏನಿದೆ? ತಪ್ಪು ಕಲ್ಫನೆ ಇದ್ದರೆ ದಯವಿಟ್ಟು ತಿಳಿಸಿ. ಹಾಗಾದರೆ ನೀವು ಹೇಳುವ ಪ್ರಕಾರ ಕನ್ನಡ ಹಲವಾರು ಜನರು [ಜನಾಂಗ], ಸೇರಿ ಕಂಡುಹಿಡಿದದ್ದೋ? ಅದಕ್ಕೆ ಪ್ರೇರಣೆ ಇಲ್ಲವಾ? ಪ್ರೇರಣೆ ಅಂತಾ ಇದ್ದರೆ ಅದು ಯಾವದು?
"ಇನ್ನು ಕನ್ನಡವನ್ನು ಚನ್ನಾಗಿ ಕಲಿಯೋಣ ಇವೆಲ್ಲ ಇರಲಿ, ಬುದ್ದಿ!! ಮೊದಲು ನೀವು ಹಲವನ್ನು ತಿಳಿಯಬೇಕಿದೆ." ನಾನು ಒಪ್ಪುತ್ತೇನೆ. ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ, ನನಗೆ ಗೊತ್ತಿರದೆ ಇರಬಹುದು, ತಮಗೆ ಗೊತ್ತಿದ್ದರೆ ತಿಳಿಸಿ ನನಗೆ ಕಲಿಯಲು ಆಸಕ್ತಿ.
ವಿನಾಯಕ ಮುತಾಲಿಕ ದೇಸಾಯಿ
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಕಲಿಯುವ ಹುರುಪಿದೆ ಎಂದಿದ್ದೀರಿ, ಅದಕ್ಕೆ ನನಗೆ ನಿಮಗೆ ಹೇಳಲು ನಲಿವು.
ಮೊದಲು ದಯವಿಟ್ಟು ಇವನ್ನು ಓದಿರಿ!! ತಿಳಿಯಾಗುವುದು.
೧) ದ್ರಾವಿಡ ನುಡಿಕೂಟ, http://ccat.sas.upenn.edu/~haroldfs/sars238/shortencybrit.html ಅಂದರೇನು.
೨) ಇಂಡೋ-ಯುರೋಪಿಯನ್ ನುಡಿಕೂಟ ಅಂದರೇನು? ಇದನ್ನು ಹುಡಕಿ ಅಣ್ಣ, ಸಿಗುತ್ತದೆ.
೩) ಕನ್ನಡ, ತಮಿಳು, ತೆಲುಗು, ಮುಂತಾದವು ಹೇಗೆ ಸಂಸ್ಕೃತ, ಪಾಕೃತದಿಂದ ಬಂದಿಲ್ಲ ಅಂತ ತಿಳಿಯಬೇಕು. ಇದನ್ನು ಇಂಟರ್ ನೆಟ್ಟಲ್ಲಿ ಹುಡುಕಿ ಸಿಗುವುದು.
೪) ಶಂಕರಭಟ್ಟರ ಹೊತ್ತಗೆಗಳನ್ನು ಓದಿರಿ.
ನೀವು ಕೆಲವು ಸಂಗತಿಯನ್ನು ತಿಳಿಯದೇ ಮಾತಾಡುತ್ತಿದ್ದೀರಿ, ಅದು ಬಲು ಹಗುರವಾಗಿ ಕಾಣುವುದು. ಬೇಸರ ಮಾಡಿಕೊಳ್ಳಬೇಡಿ.
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ನಾವು ಇಲ್ಲಿ ಚರ್ಚೆ ಮಾದುತ್ತಿದ್ದೇವೆ ಜಗಳ ಅಲ್ಲ ಹಾಗಾಗಿ ಬೇಜಾರು ಆಗುವ ಪ್ರಶೆಯೇ ಇಲ್ಲ,
Dravidian languages
Family of 23 languages indigenous to and spoken principally in South Asia by more than 210 million people. The four major Dravidian languages of southern India — Telugu, Tamil, Kannada, and Malayalam — have independent scripts and long documented histories. They account for the overwhelming majority of all Dravidian-speakers, and they form the basis of the linguistic states of Andhra Pradesh, Tamil Nadu, Karnataka, and Kerala. All have borrowed liberally from **"Sanskrit"**. [Ref : http://www.answers.com/topic/dravidian-languages ]
The only Dravidian language spoken entirely outside of India is Brahui, with fewer than two million speakers mainly in Pakistan and Afghanistan. Of the Dravidian languages, Tamil has the greatest geographical extension and the richest and most ancient literature, which is paralleled in India only by that of Sanskrit. The Dravidian family, with no demonstrated relationship to other language families, is assumed to have covered a much more extensive area of South Asia before the spread of Indo-Aryan and was the source of loanwords into early Indo-Aryan dialects.
ವಿನಾಯಕ ಮುತಾಲಿಕ ದೇಸಾಯಿ
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ಈ ಸಂಗತಿ ಒಂದು ಸಾವಿರ ಸರತಿ ಹಿಂದೇ ಮಾತುಕತೆಯಾಗಿರುವುದರಿಂದ ಚುಟುಕಾಗಿ ಹೇಳುವೆನು.
೧) ಸಂಸ್ಕೃತದಲ್ಲಿ ಹೇರಳವಾಗಿ ದ್ರಾವಿಡ ನುಡಿಕೂಟದ ಒರೆ/ಪದಗಳಿವೆ. ಸಂಸ್ಕೃತದ etymology ಬಗ್ಗೆ ಓದಿದರೆ ತಿಳಿಯುವುದು, ಹೇಗೆ ಪುತ್ರ, ಪುತ್ರಿ("ಪದಾರ್ಥ ಚಿಂತಾಮಣಿ") ಇವು ದ್ರಾವಿಡ ಒರೆಗಳು ಎಂದು ತಿಳಿಯುವುವು.
http://en.wikipedia.org/wiki/Dravidian_substratum_in_Sanskrit
http://dsal.uchicago.edu/dictionaries/burrow/
೨) ಅಮರ ಕೋಶ ಒಂದು practical dictionary, etymological dictionary ಅಲ್ಲ. ಹೇಗೆ ಅಂದರೆ ಕನ್ನಡಕ್ಕೆ ವೆಂಕಟಸುಬ್ಬಯ್ಯನವರ prism dictionary ಇದು practical, ಆದರೆ ಕೊಳಂಬೆ ಪುಟ್ಟಣ್ಣ ಗೌಡರ "ಅಚ್ಚಕನ್ನಡ ನುಡಿಕೋಶ" etymological, ಹಾಗೆ "burrow and emeau".ಇದರಲ್ಲಿ, etymology ಅಂತೆ ಬರೀ ಕನ್ನಡದ ಒರೆಗಳಿವೆ, "ಇದರಲ್ಲಿ ನೀರು ಒಂದು"
ನನಗೆ ಸರಿಯಾದ ನೆನಪಿಲ್ಲ ತುಸು ಹೆಚ್ಚು-ಕಡಮೆ ಇದೆ. ಸಂಸ್ಕೃತದಲ್ಲಿ ಇರುವ ೨೪೦೦/2400 ಧಾತುಗಳಲ್ಲಿ/word rootಗಳಲ್ಲಿ ಬರೀ ೧೨೦೦/1200ರಷ್ಟು ಬಳಕೆಯಾಗಿದೆ. ಅಂದರೆ ಅರೆಬರೆ ಧಾತುಗಳು ಬಳಕೆಯಲ್ಲೇ ಇಲ್ಲ, ಅವು ಬರೀ ವ್ಯಾಕರಣದ ಧಾತುಪಟ್ಟಿಯಲ್ಲಿವೆ.
ಸಂಸ್ಕೃತದ etymology ಒರೆಗಂಟ/ನಿಘಂಟನ್ನು( ಅಂತದೊಂದು ಇದ್ದರೆ) ನೋಡಿರಿ.
ನೀರು ಇದು ಕನ್ನಡದ್ದೇ, ಸಂಸ್ಕೃತದವರು ಕೆಲವೆಡೆ ಇದನ್ನು ಬಳಸಿಕೊಂಡಿದ್ದಾರೆ ಅಸ್ಟೆ, ಇದಕ್ಕೆ ಕೊಳಂಬೆ ಪುಟ್ಟಣ್ಣಗೌಡರ "ಅಚ್ಚಕನ್ನಡ ನುಡಿಕೋಶ" ಮತ್ತು "Dravidian etymology dictionary" ಪುರಾವೆ.
ಬರೆಯುವವರು ನೋಡಿ ಮಾಡಿ ಬರೆಯಬೇಕು!! ಅರೆಬರೆ ತಿಳಿದು "ಇದು ಸಂಸ್ಕೃತದ್ದು" ಎಂದು ತೀರ್ಪು ಕೊಡುವುದು, ಕನ್ನಡಕ್ಕೆ ಮೋಸ, ಸೈಪಲ್ಲ/ಅನ್ಯಾಯ!
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ನಾನೆಲ್ಲೂ ಸಂಸ್ಕೃತ ಪಂಡಿತ ಎಂದು ಹೇಳಿಕೊಂಡಿಲ್ಲ, ತಮಗೆ ಹಾಗೆ ಅನ್ನಿಸಿದರೆ ಅದು ನನ್ನ ಸೌಭಾಗ್ಯ [ದೌರ್ಭಾಗ್ಯ]. ತಾವು ಬರೆದ ಪ್ರತಿಕ್ರಿಯೆಯಲಲ್ಲಿ ೩೦% ಕ್ಕೂ ಹೆಚ್ಚಾಗಿ ಆಂಗ್ಲ ಭಾಶೆಯ ಪದಗಳಿವೆ. ಹಾಗಾದರೆ ಕನ್ನಡದಲ್ಲಿ ಆಂಗ್ಲ ಭಾಶೆಯ ಪದಗಳನ್ನು ಬಳಸಬಹುದೇ? ದಯವಿಟ್ಟು ತಿಳಿಸಿ ಕನ್ನಡ ಪಂಡಿತರೆ [?]. ಇನ್ನೊಂದು ಸಂಗತಿ, ೨೦% ಕ್ಕೂ ಹೆಚ್ಚು ಸಂಸ್ಕೃತ ಪದಗಳಿವೆ. ದಯವಿಟ್ಟು ತಮ್ಮ ಪ್ರತಿಕ್ರಿಯೆಯನ್ನು ಅಚ್ಚು ಕನ್ನಡದಲ್ಲಿ ಬರೆದರೆ ಉತ್ತಮ ಎಂದು ನನ್ನ ಅಭಿಮತ. ತಮಗೇನಾದರು ಹಾಗೆ ತೋಚಿದರೆ ದಯವಿಟ್ಟು ಕನ್ನಡದಲ್ಲಿ ಬರೆಯಿರಿ.
ವಿನಾಯಕ ಮುತಾಲಿಕ
ಉ: ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ
ದೇಸಾಯಿಗಳು
೧)ನೀವು "ಸಂಸ್ಕೃತ ಪಂಡಿತ" ಅಂತ ನಾನಂತೂ ತಿಳಿದುಕೊಂಡಿಲ್ಲ.
:). ನಿಮ್ಮ ಸಕ್ಕದದ ಅರಿವಿನ ಬಗ್ಗೆ ಆಮೇಲೇ ಮಾತಾಡೋಣ.
೨) ಇಂಗ್ಲೀಸ್ ಸದ್ದುಗಳು ಏಕೆ ಅಲ್ಲಿ ಬಂತು, ಅನ್ನೋದು ಆಮೇಲೆ ಹೇಳ್ತೀನಿ, ಮೊದಲು ಅಯ್ಯೋ, ಅಲ್ಲಿ ಏನು ಬರೆದಿದೆ ಅಂತ ವಸಿ ತಲೆಗೆ ಇಳಿಸಿಕೊಳ್ಳಪ್ಪ.!
ವಸಿ = ತುಸು, ಕೊಂಚ ಇದು ಕನ್ನಡವೇ!! ಇರಲಿ!!
ಮಾತುಬೆಳಸಬೇಡಿ, ಮೊದಲು ನನ್ನ ಹಿಂದನ ಕಮೆಂಟನ್ನು ಅರಿಯಿರಿ. ತರುವಾಯ ಮುಂದೆ ಮಾತು!!