ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
ನಮಸ್ಕಾರ,
ಈ ಕೆಳಗಿನ ಪದಗಳನ್ನು ರಾಷ್ಟ್ರಕವಿ ಕುವೆಂಪುರವರ ಒಂದು ಪುಸ್ತಕದಲ್ಲಿ ಓದಿದೆ. ಆದರೆ ಇವುಗಳ ಪದಶ: ಅರ್ಥ ತಿಳಿಯಲಿಲ್ಲ. ದಯವಿಟ್ಟು ತಿಳಿಸಿ."ಲಳಿಮಸಗಿದಂಬುಧಿಯಂತೆ ಅಲ್ಲೋಲಕಲ್ಲೋಲವಾಯಿತು". ಅಂಬುಧಿ ಅಂದ್ರೆ ಸಮುದ್ರ ಇರಬಹುದು. ಆದರೆ ಸಂಯುಕ್ತ ಪದದ ಅರ್ಥ ತಿಳಿಸಿ"ಹೊಸ ಹಸುರಿನ ಹಸಲೆಯನ್ನು ಚುಂಬಿಸುವ ಅಚ್ಚಲರುಗಳಂತೆ"

- Login or register to post comments
- 723 hits
- Email this forum





RSS:
ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
ಅಂಬುಧಿ = ಕಡಲು.
ಅಂಬು = ಬಾಣ(ಕ) ನೀರು(ಸಂ)
ಮೊದಲನೆಯದು ತುಸು ಗೋಜಲಿದೆ.
ಲಳಿಮ ?
ಅಸಗು = agitate
ಅಂಬುಧಿ = (ಇಲ್ಲಿ) ಕಡಲು
ಅಲ್ಲೋಲಕಲ್ಲೋಲ
೨
ಹಸಲೆ/ಪಸಲೆ = ಹುಲ್ಲು
pasale = young grass, pasturage, a place overgrown with grass, lawn
ಚುಂಬಿಸುವ = ಮುತ್ತಿಕ್ಕುವ, ಉಮ್ಮುವ
ಅಚ್ಚಲರು = ಅಚ್ಚ + ಅಲರು?
ಅಲರು = ಅರಳು, ಅರಳಿದ ಹೂ
ಸರಿಯಾಗಿ ಇದ್ಯಾ?
ಇದು ಕುವೆಂಪು ಅವರ ಯಾವ ನೆಗಳ್ಚು(ರಚನೆ)ಅಲ್ಲಿ ಇದೆ?
- ಮಾಯ್ಸ !!
ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
ಅಚ್ಚಲರ್ ಅಂದ್ರೆ fresh-blossom ಅಂತ ಅಲ್ವಾ?
ಅಚ್ಚಕರ್ಪೂರ ಬಲು ಕಂಪಿರುವ ಕರ್ಪೂರ
ಅಚ್ಚಹಸಿರು = ಕಡುಹಸಿರು, ಬಲು ಹಸಿರು.
- ಮಾಯ್ಸ !!
ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
ಧನ್ಯವಾದಗಳು ಮಹೇಶ್,
ಹೊತ್ತಿಗೆಯ ಹೆಸರು "ಸ್ವಾಮಿ ವಿವೇಕಾನಂದ".
ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
ವಿನಯುಡುಪ,
"ಲಳಿಮಸಗಿದಂಬುಧಿಯಂತೆ " ಇರದ ಮುಂದೆ ಹಿಂದೆ ಇರುವ ಸಾಲುಗಳ ಒದವು ಮಾಡಿ, ದಯವಿಟ್ಟು.
ಲಳಿಮ ಅಂದ್ರೆ ಏನು ಅಂತ ನಂಗೆ ತಿಳಿಯಬೇಕು!! ಇದು ಕನ್ನಡದ ಒರೆಯಂತೆ ಕಾಣ್ತಿಲ್ಲ!
- ಮಾಯ್ಸ !!
ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
ಅದನ್ನು "ಲು + ಅಳಿಮಸಗಿದಂಬುಧಿಯಂತೆ" ಎಂದು ಬಿಡಿಸಬೇಕು ಎಂದು ನನ್ನ ಅನಿಸಿಕೆ. "ಲು" ಅಂದರೆ "ಮಾಡಲು, ಹೋಗಲು, ಬೀಳಲು" ಅನ್ನುವ ಥರ. ವಿನಯ ಉಡುಪರೆ, ಮಹೇಶರು ಹೇಳಿದ್ದು ಸರಿ, ಹಿಂದುಮುಂದಿನ ವಾಕ್ಯವನ್ನು ಒದಗಿಸಿ. ಆ ಸಂದರ್ಭವನ್ನೂ ವಿವರಿಸಿದರೆ ಚೆನ್ನು. ವಿವೇಕಾನಂದರು ಸಮುದ್ರಕ್ಕೆ ಧುಮುಕುವ ಘಟನೆಯ ವಿವರದಲ್ಲಿ ಈ ನುಡಿ ಪ್ರಯೋಗವಾಗಿದೆಯೇ? ಹಾಗೆಯೇ, ಅದು ’ಅಳಿಮಸಗಿದ’ ಎಂದೋ ಅಥವಾ ’ಅಳಿಮೆಸಗಿದ’ ಎಂದೋ ಎಂದು ಪರೀಕ್ಷಿಸುವಿರಾ?
- ಕಿಶೋರ
ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
"ಮಹರ್ಷಿಗಳು ಪ್ರಶ್ನೆಯ ಅಗಾಧತೆಗೂ, ವಾಣಿಯ ಗಂಭೀರತೆಗೂ ವಿಸ್ಮಯಸ್ತಂಭಿತರಾದರು. ಅವರ ಎದೆ ಲಳಿಮಸಗಿದಂಬುಧಿಯಂತೆ ಅಲ್ಲೋಲಕಲ್ಲೋಲವಾಯಿತು. ಒಂದು ಸಲ ಪ್ರತ್ಯುತ್ತರವೀಯಲು ಯತ್ನಿಸಿದರು; ಆಗಲಿಲ್ಲ."
ಈ ಭಾಗ ನರೇಂದ್ರ ದತ್ತನು ಪರಮಹಂಸರ ಆಶ್ರಮ ಸೇರುವ ಮೊದಲು ಬ್ರಾಹ್ಮ ಸಮಾಜದಲ್ಲಿರುವಾಗ ಅಲ್ಲಿರುವ ಒಬ್ಬರನ್ನ ದೇವರ/ಧರ್ಮದ ಬಗೆಗೆ ಪ್ರಶ್ನಿಸಿದಾಗ ಬರುತ್ತೆ.
ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
ಆದರೆ ಮುದ್ರಣ ದೋಷ ಇದ್ದರೆ ಗೊತ್ತಿಲ್ಲ.
ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
ವಿನಯ ಉಡುಪರೆ ನಮಸ್ಕಾರ.
ವಾರಾಂತ್ಯದಲ್ಲಿ ಮನೆಗೆ ಹೋಗಿದ್ದಾಗ ಆ ಪುಸ್ತಕವನ್ನು ತೆರೆದು ನೋಡಿದೆ. ನಿಮ್ಮ ಊಹೆ ಸರಿ. ಅದು ಮುದ್ರಣದೋಷ. ’ಅಳಿ ಮಸಗಿದಂಬುಧಿಯಂತೆ’ ಎಂದು ನನ್ನ ಬಳಿ ಇರುವ ಆವೃತ್ತಿಯಲ್ಲಿದೆ. ನೋಡಿ - ’ಸ್ವಾಮಿ ವಿವೇಕಾನಂದ’ ಕರ್ತೃ-ಕುವೆಂಪು, ೧೦ನೇ ಮುದ್ರಣ(೧೯೮೪), ಪುಟ - ೫೩, ಅಧ್ಯಾಯ - ’ನಿರಂಕುಶಮತಿ’.
ಮುಂದೆ ನಾನು ಹುಡುಕಿದ್ದು- ’ಕನ್ನಡ ರತ್ನಕೋಶ’ (೧೯೯೪ರ ೨ನೇ ಆವೃತ್ತಿ; ಪ್ರಕಟಣೆ - ಕ.ಅ.ಪ್ರಾಧಿಕಾರ). ಅದರಲ್ಲಿ ಸಿಕ್ಕಿದಂತೆ -
ಅಳಿ = ನಾಶವಾಗು; ದುಂಬಿ.
ಮಸಗು = ಹರಳು, ಕೆರಳು, ವಿಜೃಂಭಿಸು (ಮಸೆ).
ಈಗ ಆ ಪದಸಮುಚ್ಚಯದ ಅರ್ಥ ಸುಲಭವಾಗಿ ಆಗುತ್ತದೆ. ’ಮಹಾಶಯ, ನೀವು ದೇವರನ್ನು ನೋಡಿದ್ದೀರಾ’ ಎಂಬ ನರೇಂದ್ರದತ್ತನ ಪ್ರಶ್ನೆ ಕೇಳಿ ಮಹರ್ಷಿ ದೇವೇಂದ್ರನಾಥ ಠಾಕೂರರ ಎದೆಯು ಅಳಿಗಾಲದಲ್ಲಿ(=ಪ್ರಳಯಕಾಲದಲ್ಲಿ) ಕೆರಳುವ ಸಮುದ್ರದಂತೆ ಅಲ್ಲೋಲಕಲ್ಲೋಲವಾಯಿತು.
ಈ ಚಿಕ್ಕ ಹುಡುಕಾಟಕ್ಕೆ ಪ್ರೇರಣೆ ಕೊಟ್ಟ ಆ ನಿಮ್ಮ ಪ್ರಶ್ನೆಗೂ, ನಿಮಗೂ ಧನ್ಯವಾದ.
ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
ನನ್ನ ಗೊಂದಲವನ್ನೂ ಬಗೆಹರಿಸಿದ ಭಟ್ಟರಿಗೆ ನನ್ನ ನನ್ನಿ/ನಲ್ಮೆ!
ಉ: ಈ ಕನ್ನಡ ಪದಗಳ ಅರ್ಥ ಸರಳ ಕನ್ನಡ ಭಾಷೆಯಲ್ಲಿ ತಿಳಿಸಿ.
ನಮಸ್ಕಾರ ಮಹೇಶ್/ಭಟ್ಟರೆ,
ನನ್ನ ಪ್ರಶ್ನೆಯನ್ನು ಉತ್ತರಿಸಿದ ನಿಮಗೆ ನನ್ನ ಧನ್ಯವಾದಗಳು. ಯಾವುದೇ ಭಾಷೆಯ ಸಮಸ್ಯೆ ಇದ್ದರು ಸಂಪದದಲ್ಲಿ ಉತ್ತರ ಹುಡುಕಬಹುದೆಂದು ತಿಳಿಯಿತು.