ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010055288
ಕೊಂಚ ಇದ ಬಗ್ಗೆ ಮಾತಾಡೋಣ!
ಮೊದಲ ನುಡಿವಣಿ( ನುಡಿಮಣಿ? )
ಆವ ಪಾಲ್ಗಡಲ ಪಾಲ್ ಮೊಲೆಗಳೆಲ್ಲವ ತುಂಬಿ
ಹೂ ಜೇನು ಹಣ್ಗಳ ಸೀಯಾಗಿ ಮುಂತೆ
ಬಗೆ ಬಗೆ ಸವಿಯಾಗಿ ಹೊನಲಾಗಿ ಕಾವುದೊ
ಪಾಲ್ಗಡಲದಕೆ ಮಣಿವೆ ಮೊದಲಂತೆ
ಎಷ್ಟು ಚನ್ನಾಗಿದೆ!
ಯಾವ ಹಾಲ ಕಡಲು, ಹಾಲ ಮೊಗೆಗಳಂತೆ ಎಲ್ಲವನ್ನು ತುಂಬಿ( ಬೆಳೆಸಿ ), ಹೂ, ಜೇನು, ಹಣ್ಣುಗಳನ್ನು ಸಿಹಿಯಾಗಿಸಿದೆ. ಮುಂದೆ ಈ ಹಾಲ್ಗಡಲ ಹಾಲೇ ಬಗೆಬಗೆಯ ಸವಿಯಾದ ಹೊನಲಾಗಿ/ಹೊಳೆ/ನದಿಯಾಗಿ ಜೀವಿಗಳನ್ನು ಕಾಯುತ್ತಿದೆ/ಪೊರೆಯುತ್ತಿದೆ. ಅಂತಹ ಹಾಲ್ಗಡಲಿಗೆ ಮೊದಲ ನಮಸ್ಕಾರ/ಕುಂಬು/ಮಣೆ/ತುೞಿಲ್ ಮಾಡುವೆನು!
ವಿಶೇಶ: ಎಲ್ಲರು ಹರಿಯ ಕುಂಬಿಂದ ಶುರುಮಾಡಿದರೇ, ಇವರು ಹರಿಗೇ ಇಂಬಾದ ಹಾಲ್ಗಡಲಿಗೆ ಮಣಿದು ಮೊದಲು ಮಾಡಿಹರು!!
- ಮಾಯ್ಸ !!

- Login or register to post comments
- 791 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ತಿದ್ದು
ಮೊಗೆಗಳಂತೆ = ಮೊಲೆಗಳಂತೆ
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಎಡರ ತೊಡರ ತೇರಿನೊಳ್ ಪೋಪ ಮೇಲ್ಮೆಯಂ
ದುಡಿಮೆಯಂ ಪೆಸರಿತ್ತಿ ಪೊಗಳುವರಂತೆ
ಉಂಡು ತಿಂದೊರಗುವ ನಾಂಬನಂ ಬಾಳ್ವೆಯಂ
ನಡೆಯೆಂದು ಹೊತ್ತದಂ ತೆಗಳುವುದಂತೆ
ಎಡರು = ಕಷ್ಟ, troble
ತೊಡರು = obstacle, ವಿಘ್ನ
ತೇರು = ರಥ
ಮೇಲ್ಮೆ = ಘನತೆ, ಹಿರಿಮೆ, fame, glory
ಒರಗು = ಮಲಗು
ನಾಂಬ = ಸೋಂಬೇರಿ, ಸೋಮಾರಿ, lazy
ಬದುಕಲ್ಲಿ ಎಡರು ತೊಡರುಗಳನ್ನು ಎದುರಿಸಿಕೊಂಡ ಹೋಗುವವನ ಮೇಲ್ಮೆಯನ್ನು ದುಡಿಮೆಯನ್ನು, ಅವನ ಹೆಸರು ಹೇಳಿ ಮಂದಿ ಹೊಗಳುವರು. ಇದನ್ನು ಬಿಟ್ಟು ಬರೀ ತಿಂದುಂಡು ಮಲಗಿ ಹೊತ್ತು-ಕಳೆಯುವ ನಾಂಬನ ಬಾಳ್ವೆಯನ್ನು ಹೊತ್ತು/ಕಾಲವು ತೆಗಳುವುದು!
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಎಡರು = ಕಷ್ಟ, trouble
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಒಹ್...ಕನ್ನಡ ತುಂಬ ತುಂಬ ತಿಳಿಯಾಗಿದೆ.. ಸಕ್ಕದಿಸಿದ ಪದ್ಯಗಳ ಓದಿ ಓದಿ ಬೇಜಾರಾಗಿತ್ತು....ಇದು 'ಹೆಜ್ಜೇನು' ಸವಿದಂತೆ ಇವೆ.
ಇನ್ನು ಕೆಲವು ವಿಶ್ಯಗಳು.
ಈ ಹೊತ್ತಗೆಯಲ್ಲಿ ಅವರು ಬಳಸಿರುವ ಒರೆಗಳು ಗಮನ ಸೆಳೆದವು
ಲೇಖಕರು - ಬರೆದವ
ಪ್ರಕಾಶಕರು - ಬೆಳಕು ಕಾಣಿಸಿದಿವ
ವರ್ಶ - ವರುಸ - ಸುಗ್ಗಿ
ಪ್ರಸ್ತಾವನೆ - ಬರೆದವನ ಕೆಲವು ಮಾತುಗಳು
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ವರುಸಕ್ಕೆ
ಸುಗ್ಗಿ
ಬಲು ಒಳ್ಳೆಯ ಒರೆ!!
ನಾವು ಮಣ್ಮಕ್ಕಳು, ಇದನ್ನೇ ಬಳಸಬೇಕು.. ನಮ್ಮ ಒಕ್ಕಲಿನ ನೆನೆಪು ತರುವುದು!!
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಓದುತ್ತಿದ್ದಂತೆಯೇ.. ಒಂದು ಚಣ ಆನಂದದಿಂದ ಮನ ತಿಳಿಯಾಗಿ (ಭಾವುಕನಾಗಿ) ಕಣ್ಣುಗಳು ತೇವವಾದವು
ಯಾರಾದರೂ ಈ ಹೊತ್ತಗೆಯನ್ನು ಇಳಿಸಿ.. ನನಗೆ .pdf ರೂಪದಲ್ಲಿ ಕಳುಹುವಿರಾ!!!
ನನ್ನ ಮಿಂಚಂಚೆ ... - khavasi.vinayak@boschrexroth.de
ಮಹೇಶ, ದಯವಿಟ್ಟು ದಿನವೂ ಒಂದೊಂದು ನುಡಿವಣಿ ಯನ್ನು ಒರೆ ಸಹಿತ ಬಿಡಿಸಿ ಪೆಳ್ವಿರಾ...
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಪೆಳ್ವಿರಾ = ಪೇಳ್ವಿರ ಎಂದು ಅಂದುಕೊಂಡಿದ್ದೇನೆ.
ಆದಾದಾಗ ಪೇಳ್ಪೆಂ! ವಾರದ ಕೊನೆಯೊಳ್ ಅಕ್ಕುಮಿಲ್ಲ !
ಅಂತೆನಗೂ ಕಳುಹಿರಾ PDF ಕಡತಮಂ. ಎನಗೆ ಇಳಿಸಲ್ ಬರದು.
- ಮಾಯ್ಸ !!
ಅಕ್ಕುಂ = ಆಗುವುದು
ಕಳುಹಿರಾ = ಕುಳುಹಿರಿ ಆ
ಅಂತೆನಗೆ = ಅಂತು ಎನಗೆ
ಹಳೆಗನ್ನಡ ಚೆನ್ನಾಗಿ ಬರುವವರು ತುಸು ನೆರವಾಗಿ ತಿದ್ದಿರಿ!!
!!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ನಿಮ್ಮೀರ್ವರಿಗೂ ಕಳುಹಿಪೆನು.
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಹೆರ್ನನ್ನಿ!
ನಿಮ್ಮ ಕಳುಪು ತಲುಪಿರ್ಪುದು!
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಸಂಗನ ನಿಮ್ಮ ಜತುನಕ್ಕೆ ನನ್ನ ನನ್ನಿ.. ಆದರೆ.. ಕಡತ ನನಗೆ ತಲುಪಲಿಲ್ಲ..
ನನ್ನ ಮಿಂಚಂಚೆಯ ವಿಳಾಸ (ಸಕ್ಕದವೆ?) ಬರೆವಲ್ಲಿ ಲೋಪವಾಗಿರಬಹುದೆಂಬೆ...
ಮರುಕಳುಹುವ ಜತುನಗೈವಿರಾ?
ಮಗುದೊಮ್ಮೆ ನನ್ನ ಮಿಂಚಂಚೆ - Khavasi.Vinayak@boschrexroth.de
ಮಹೇಶ... "ಪೇಳಿರಾ" ಸರಿ.. ನನ್ನ ಮನ ಬಗೆದುದನ್ನು ಅರಿತುದುದಕ್ಕೆ ನನ್ನಿ..
(ನನ್ನಿ = ಧನ್ಯವಾದ, ಸತ್ಯ - ಅಹುದೆ? ಇದೇ ಹೊತ್ತಗೆಯ ಆದಿಯಲ್ಲಿ ಪುಟ xi ನಿಂದ ತಿಳಿದೆ. ಅಲ್ಲಿದೆ ನನ್ನಿಯೊಡೆಯ = ಸತ್ಯನಾಥ)
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ವಿಲಾಸ ಸಕ್ಕದವು.
ವಿಲಾಸದಿಂದ ಬಂದುದಿರಬೇಕು ವಿಳಾಸ!
Addressಗೆ ಕನ್ನಡದಲ್ಲಿ ನೆಲೆ, ಇಕ್ಕೆ, ಇನ್ನು ಹುಡುಕಿ ಒರೆ ಬಳಸಬಹುದು.
locationಗೆ ಹುಡುಕುಗಳು!
http://dsal.uchicago.edu/cgi-bin/philologic/search3advanced?dbname=burrow&query=location&matchtype=exact&display=utf8
ನನ್ನಿ!
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ನನಗೆ ಮಿಂಚೋಲೆ ಕಳುಹಿ...ನಾನು PDF ಕಡತ (ಮೊದಲೆರಡು ಹೊತ್ತಗೆಗಳ್) ಗಳ ಮರುಕಳುಹುವೆ
ybharath77@gmail.com
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ನನ್ನ ಮಿಂಚೋಲೆ ವಿಳಾಸ kadakolla@gmail.com ನನಗೂ ಹೊತ್ತಿಗೆ ಕಳಿಸಿ
ಸ್ವಾಮಿ
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಇಂತ ಒಬ್ಬ ಬರಹಗಾರರನ್ನು ತೋರಿದ್ದಕ್ಕೆ ತಲೆವಾಗಿ ಮಣಿದೆ.
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಅವರ "ಕಾಲೂರ ಚೆಲುವೆ" ಡಿ.ಎಲ್.ಆಯ್ ನಲ್ಲಿದೆಯೇ?
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಈ ಕಬ್ಬದ ಸುಮಾರು ಎಲ್ಲ ಒರೆಗಳು ಈ ಒರೆಗಂಟಲ್ಲಿ ಸಿಗುವುವು. ಆದರೆ ರೋಮನ್ ಲಿಪಿಯಲ್ಲಿ ಬರೆದು ಹುಡುಕಬೇಕು.
http://dsal.uchicago.edu/dictionaries/burrow/
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಅಲ್ಲಿ ಪೋದೆ.. nanni ಎಂದು ಹುಡುಕಿದೆ...
1) 3588 Ta. naṇṇu (naṇṇi-): ಹೀಗೆ ಮೂಡುವವು.. "ṇ" ಇದಕ್ಕೇನು ಮಾಡುವುದು
2) ಬರೀ ತಮಿಳು ಪದಗಳು ಸಿಕ್ಕುವು.. ಆದರೆ ಕನ್ನಡ ಪದಗಳು?
3) ಅದನ್ನು ನೋಡಲು ರೋಮನ್ ಲಿಪಿಯಲ್ಲಿ ಹೇಗೆ ಬರೆಯಬೇಕು?
4) ಅಲ್ಲಿರುವ "ಸಹಾಯ" ಪುಟದಲ್ಲಿ ತಿಳಿಸಿದಂತೆ ಮಾಡಲು ಜತುನಗೈದೆ ಆದರೆ ನನ್ನ OS ಜರ್ಮನಿ ಭಾಷೆಯಲ್ಲಿರುವುದರಿಂದ ಯಾವ ಯಾವ ಸೆಟ್ಟಿಂಗ್ ಮಾಡಬೇಕು ಎಂದು ಗೊತ್ತಾಗಲಿಲ್ಲ (ಇದಕ್ಕೆ ನೀವು ಸಹಾಯ ಮಾಡಲಾರಿರಿ ಎಂಬುದು ಬಲ್ಲೆ.. ಆದರೆ ಸುಮ್ಮನೆ ನನ್ನ ಎಡರನ್ನು ತಿಳುಹಿದೆ ಇಲ್ಲವೆ ಹಂಚಿಕೊಳ್ಳುತ್ತಿರುವೆ ಅಂದುಕೊಳ್ಳಿ..)
ವಿನಾಯಕ
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಮೊದಮೊದಲು ಅಲುವಾಟವಾಗುವ ವರೆಗೂ ತುಸು ತೊಡಕು. ಆಮೇಲೆ ಸಲೀಸು. ಬಲು ಒಳ್ಳೆಯ ಒರೆಗಂಟದು
ಒಂದು ಮಾದರಿ ತೋರುವೆನು.
ನಾನು ಹುಡುಕ ಬೇಕಾದ ಒರೆ "ಪೆಂಪು" ( ದೊಡ್ಡದು )
ಹೀಗೆ ಮಾಡಬೇಕು
೧) Look up an entry word ಇಲ್ಲಿ 'pempu' ಎಂದು ರೋಮನ್ ಅಲ್ಲಿ ಬರೆಯಿರಿ.
೨) Words matching exactly (Example: katuvan) ಈ radio ಗುಂಡಿ ಆಯ್ಕೆಯಾಗಿದೆಯೇ ನೋಡಿಕೊಳ್ಳಿರಿ.
===> ಬೇಕಾದರೆ
I have a Unicode font installed ಇಲ್ಲವೆ I do not have a Unicode font installed ಒಂದು ಆಯ್ದುಕೊಳ್ಳಿರಿ.
೩)Enter ಮಣೆ-ಗುಂಡಿ ಬಡಿಯಿರಿ, ಇಲ್ಲವೇ "search" ಗುಂಡಿ ಕ್ಲಿಕ್ಕಿರಿ.
೪) ನಿಮಗೆ ಈ ಕೆಳಗೆನ ಹಾಳೆ ಬರುವುದು.
http://dsal.uchicago.edu/cgi-bin/philologic/search3advanced?dbname=burrow&query=pempu&matchtype=exact&display=utf8
========================================================================
Searching the entire dictionary for pempu. Your search located 3 occurrences.
Click here for a key-word-in-context display.
1. 4411 Ta. peru, perum, pēr: (page 390)
percuge, peccuge increase, etc.; perme increase, greatness, excellency, grandeur, honour, pride; piri extensiveness, largeness, abundance, frequency, greatness, advanced age; pedda largeness, bigness, greatness; peddi a great or old person, elder, senior; pempu largeness, abundance, eminence, sublimity; peggaṇa, heggaṇa bandicoot; (Gowda) higgu to swell with joy, be elated. Koḍ. perï-, perïm- big; perïja increase, excess; perï- (perïp-, perït-) to increase (intr.; family,
2. 4414 Ta. peruku (peruki-): (page 390)
4414 Ta. peruku (peruki-)
4414 Ta. peruku (peruki-) to be injured, ruined, snap as a marriage thread. Te. perugu to break or snap, as a (marriage) thread; (K.) pempu to destroy, ruin; n. damage, destruction. Pa. perŋg- to fall in ruins; perkip- (perkit-) to knock down in ruins. Kui prenga (prengi-) to be cracked, cloven; prepka (< prek-p-; prekt-) to crack, cleave;
3. 4436 Ta. pēṇ: (page 392)
peṭṭ-) to protect; peṭpu protection. Ma. pēṇuka to foster, take care of; pēṇam caution; peṇṇuka to take care of, use, take to oneself. Te. pen(u)cu to nourish, nurture, foster, support, rear, fatten, increase, extend; penupu, pempu nourishing, fostering, rearing, increase, enlargement; pempakamu adoption of a child, rearing; pempuḍu adopted; tame, domesticated. DED(S) 3633.
4437 Ta. pētu
Back to the Search Page | Back to the DDSA Page
================================================================
೫) ಇಲ್ಲಿ Ta. ಅಂದರೆ ತಮಿಳು, Ka ಅಂದರೆ ಕನ್ನಡ, Tu ತುಳು, Te ತೆಲುಗು, Ma ಮಲಯಾಳ. ತಮಿಳು ಮೊದಲಿಗೆ ಬಂದರೂ ಅಡ್ಡಿಯಿಲ್ಲ. ಅದು ಮೊದಲು ತಮಿಳು form ಅನ್ನು ಮೊದಲು ತೋರುವುದು.
೬) ಮೇಲಿನದು ದ್ರಾವಿಡ ಒರೆಗಂಟಲ್ಲಿ ಬರುವ ಎಲ್ಲ "ಪೆಂಪು"ಗಳ ಪಟ್ಟಿ.
೭) ಈಗ "4411 Ta. peru, perum, pēr: (page 390)" ಮೇಲೆ ಕ್ಲಿಕ್ಕಿರಿ... ಕೆಳಗಿ ಹಾಳೆ ಬರುವುದು.
==============================================================
4411 Ta. peru, perum, pēr
4411 Ta. peru, perum, pēr great; peritu that which is great, big, large; greatly; periya large, great, elder, important; periyār, periyōr the aged, the great, saints, kings; periyōṉ great man, god; perum-puli tiger; perun-tēṉ large-sized honey-bee; honey secreted by bees (or with 4412 Ta. piracam); peru (-pp-, -tt-) to grow thick, large, stout, become numerous; peruku (peruki-) to increase in numbers, multiply, become full, perfected, rise, overflow, swell, be increased, augmented, or enlarged, prosper, grow; peruka fully, abundantly, prosperously; perukal abundance; perukku (perukki-) to cause to increase or abound, make greater, fill, cause to swell and overflow; perukka greatly; perukkam increase, augmentation, abundance, prosperity, flood, perfection; perukkal improving, making prosperous; perukkaṉ that which is coarse; peruppam bigness, thickness; peruppi (-pp-, -tt-) to magnify, enlarge, exaggerate; peruppu becoming large, being stout; perumāṉ nobleman, king, elder, elder brother, god; pemmāṉ god, great man; perumai bigness, greatness, excellence, nobleness, abundance, excess, power, celebrity, pride; peruvar great persons; pirāṉ lord, king, master, god; pirāṭṭi lady, mistress, goddess; peṉṉam-periya, peṉṉam-perutta very large; eccu excess, increase. Ma. peru, pēr great, large, chief; periya large, great; perippam greatness, multitude, plenty; perukuka to grow large, be multiplied; perukkuka to augment, multiply, grow much, abound, grow thick; perukkam largeness, size, repetition; perukka augmentation, overflow of a river; peruṅṅuka to be prolific; pirān lord, king. Ko. pe- big (pe pa·b python; pe te·n big bee; pe ni·j big Ni·j); peb a profuse flowering of Strobilanthes (cf. 1154 Ir. ebbukaṭṭe Strobilanthes); pegaṇ bandicoot;
-- 390 --
ec much, more; ec- (ec-) to increase in number; ? peda·ry period of full-grown youth (16 to 30 years). To. pe- big (pe no·ṛ chief sacred place; pe töw chief god; pe fe·&lstroketod; thumb; pe Qwa·s̱ big thicket); pem small hill [i.e. eminence] (or with 4026 Ta. paṟampu); peš t&odieresisside;n sp. bee (or with 4412 Ta. piracam); per wïḍ adult; pex- (pexy-) to become stout, thick; egan (? egaṇ) bandicoot; ec- (e&cangle;-), ic- (i&cangle;-) (family) increases; ? ït wïḍ large.
Ka. per, pēr (before vowels) largeness, tallness, greatness; large, tall, great; hērā̆ḷa greatness, largeness, abundance; percu, peccu, heccu, eccu to become more extensive or greater in bulk, quantity, or number, increase, thrive, grow, swell, become lofty or proud; n. increase, growth, largeness, swelling, flood, extension, eminence, riches, excess, surplus, exaggeration, pride, daring; percisu, peccisu to cause to increase, multiply, etc.; percuge, peccuge increase, etc.; perme increase, greatness, excellency, grandeur, honour, pride; piri extensiveness, largeness, abundance, frequency, greatness, advanced age; pedda largeness, bigness, greatness; peddi a great or old person, elder, senior; pempu largeness, abundance, eminence, sublimity; peggaṇa, heggaṇa bandicoot; (Gowda) higgu to swell with joy, be elated. Koḍ. perï-, perïm- big; perïja increase, excess; perï- (perïp-, perït-) to increase (intr.; family, wealth, cattle); perië elder; perta very, great, much.
Tu. peri, periya large, great, high, superior; perguḍè bandicoot; permè haughtiness; percuni, pērcuni to rise, increase; perjuni to increase; heccuni to increase, augment; heccāvuni to increase (tr.), enlarge, exalt, promote; hecca more, better, high, superior, excessive, superfluous, copious; heccalmè, heccaḷa, heccaḷmè exaltation, greatness, brag, boast; hecci, heccigè, heccelů increase, promotion, excess, eminence; hedda great, large, spacious, chief, principal; hemma abundant, many; hemme pride, insolence. Te. perũgu, per(u)gu, per(u)vu to grow, grow up, increase, accumulate, be augmented, expand, extend; perũguḍu growth, increase; perime, pemme greatness, power, authority; pērima grandeur, magnificence; pērimi greatness, eminence; pēru great, large, much; pēr(u)cu to increase, rise, swell; pekku many; pekkaṇḍru, pekkuru many persons; pekkuva increase, growth, development, excess; (inscr.) perddaḷ elders; pedda great, big, large, long, tall, old, senior, chief, respectable; an elder, superior, head man; peddayu adv. much, very, exceedingly; peddi mother's elder sister; peccu excess, addition; heccu, eccu increase, greatness; much, more, superior, excessive; vb. to increase, rise; penu (before consonant), penn- (before vowel) large, big, great; pencu to enlarge; pellu excessiveness, greatness; excessive, much, great; greatly, much, very; pellidamu greatness, excessiveness; peluca much, exceeding; pelucana greatness, excessiveness; bebbuli a royal tiger. Kol. perg- (perekt-) to grow (intr.); perp- (perept-) to rear; pergip- (pergipt-) to let grow up (without providing a wife); pedda a male; (Kin.) pera, per big; (SR.) peret many; perpul tiger; perāmā mother's sister; perendā father's elder brother. Nk. perg- to grow up; perp- to rear; pedda man, male. Nk. (Ch.) phar big, elder; peruk-/perk- to live. Pa. berto big; peŋgoṭ, peñot, (S.) peru much; per-ed river (cf. 5159 Ta. yāṟu); pēpa mother's elder sister. Ga. (Oll.) pernonḍ (masc.), berit (fem. and neut.) big; berpul tiger; (S) berbullū id.; (S.2) beŋgiḍ much, more; beŋgurtul many; (P.) ber bereṭ big river. Go. (Tr.) paṛōl, (SR.) persā, (M.) biriyā, (Ko.) beriya great, big; permā (L.) great, large, (Grigson) religious headman of village; (Ko.) perma priest; (Mu.) berhor big man; (FH.) persa pēn highest god of the Gonds; (Pat.) pehara, (L.) pehro, (D.) behra big, great; (Ko.) peddal headman of village; (Koya Su.) pedeyāl father's elder brother; (Ko.) pers- to grow, grow up; caus. persp-; (A.) bers-, (Mu.) bars- to grow; (M.) persānā to extend (Voc. 2334, 2342, 2346, 2347, 2348); (Mu.) berel, berer, (S.) bereḍ river; (Ma.) beriar̥, berer̥ flood, river in flood (Voc. 2602); (M.) permāv, (Mu.) parmāv, (Ko.) perma bison; (L.) permāv sambhar (Voc. 2343); (Tr.) pēṛī, (Y. Mu. Ma.) pēri mother's elder sister, father's elder brother's wife (Voc. 2366); (Tr.) pēpī, (G. Mu. Ma. Ko.) pēpi father's elder brother (Voc. 2365); (Tr.) barēlī, (G. Mu. Ma.) berel, etc. banyan (Voc. 2604; see 382). Konḍa per, peri big, large; elder (of siblings); pir- to grow; pirp- to make to grow; (K., p. 109) pergi- to grow up. Manḍ. pēmba father's elder brother. Kui beri beri inba to swell, increase in size; pēreṛi a large rat; ? pihereju river, stream; prēnḍa father's elder brother; great-grandfather; pēro father's elder sister-in-law; great-grandmother. Kuwi bir- (-it-) to grow, multiply. Br. piring to swell (of the body or limbs). Cf. 3830 Pe. bajek. DED (S, N) 3613.
Previous entry
Next entry
Back to the Search Page | Back to the DDSA Page
==============================================================
೮) ಗಾಬರಿಯಾಗ ಬೇಡ
. ಇದು ಬಹಳ ಹೆಸರುವಾಸಿಯಾದ, ಬಳಕೆಯಲ್ಲಿರುವ ಒರೆ ದ್ರಾವಿಡನುಡಿಗಳಲ್ಲಿ. ಅದಕ್ಕೆ ಅನಿತ್ತು/ಅಷ್ಟು ಅರಿಮೆ/ಮಾಹಿತಿ ಬಂದಿವೆ.
೯) ಅಲ್ಲಿ Ka. ಯಿಂದ ಮೊದಲಾಗುವುದನ್ನು ನೋಡಿರಿ.. ನಾನು bold ಮಾಡಿ ತೋರಿಸಿದ್ದೀನಿ.
ಇದು ತುಸು ಬಳಲಿಕೆಯಾದರೂ, ಏನು ಮಾಡಲಾಗದು. ಮಿಂಚು-ಬಲೆಯಲ್ಲಿ ಅಚ್ಚಕನ್ನಡ ಒರೆಗಂಟು ಸಿಕ್ಕುತ್ತಿಲ್ಲ.!! ನೋಡೋಣ.. ಮುಂದೆ ಬರಬಹುದು.!!
ಇರುವ ಕನ್ನಡ ಒರೆಗಂಟಗಳಲ್ಲಿ
೧) ಹಲವು ಅಚ್ಚಗನ್ನಡ ಒರೆಗಳು ದೊರೆಯುವುದಿಲ್ಲ.
೨) ಹೆಚ್ಚು ಕನ್ನಡವಲ್ಲದ ಬೇರೆ ಮೂಲದ ಒರೆಗಳು ಬರುವವು.
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಆಹಾ... ಈಗ ತಿಳಿಯಿತು..
ಸವಿವರವಾಗಿ ತಿಳಿಸಿದಕ್ಕೆ ನನ್ನಿ.
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಈ ಎಳೆಗೆ ನೇರವಾಗಿ ಸಂಬಂಧಿಸದ ವಿಷಯ:
ಈ ಕೊಳಂಬೆ ಎಲ್ಲಾಯಿತು? ಮಂಗಳೂರು ಬಳಿ ಬಜ್ಪೆಯ ಬಳಿ ಕೊಳಂಬೆ ಎಂಬ ಸ್ಥಳವಿದೆ.
*ಅಶೋಕ್
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ನಂಗ್ಗೊತ್ತಿಲ್ಲ!
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
iಇದು ಪುತ್ತೂರಿನ ಅಚ್ಚುಕೂಟ ಆದರ್ಶ ಪ್ರೆಸ್‍ನಲ್ಲಿ ಅಚ್ಚಾದುದು. ಲೇಖಕರು ಚೊಕ್ಕಾಡಿ ಅಂಚೆ ನಮೂದಿಸಿದ್ದಾರೆ, ಅದು ದಕ ಜಿಲ್ಲೆಯ ಸ್ಥಳ,ಉಡುಪಿಯಲ್ಲೂ ಇದೆ. ಮುನ್ನುಡಿ ಬರೆದವರು ಮರಿಯಪ್ಪ ಭಟ್ಟರು, ಮಂಗಳೂರಿನವರು. ಅಂತೂ ನನಗೆ ನಮ್ಮೂರಿನವರ ಪುಸ್ತಕ ನಿಮಗೆಲ್ಲಾ ಖುಷಿಯಾಯಿತು ಎಂದು ಹೆಮ್ಮೆ. ಅಚ್ಚಗನ್ನಡ ಬಳಸುವುದಕ್ಕೆ ಇನ್ನೂ ಉಮೇದು!
*ಅಶೋಕ್
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ನಮ್ಗಂತೂ ಅವರು ಮಂಗಳೂರೋ, ಬೆಂಗಳೂರೋ ಇದ್ಯಾವುದು ನಮ್ಗೆ ನೋಡಬೇಕು ಅಂತ ಅನ್ಸಿಲೇ ಇಲ್ಲ.
ಒಟ್ಟಿನಲ್ಲಿ ಅವರು ನಮ್ಮ
ಕನ್ನಡದವರು
, ಕನ್ನಡಕ್ಕೆ ಒಂದು ಒಳ್ಳೇ ಕೆಲಸ ಮಾಡಿರೋರು
ನೋಡಿ, ನೀವು ಅಲುವಾಟದಂತೆ/ಅಭ್ಯಾಸದಂತೆ ಈ ಎಳೆಯಲ್ಗೂ ಮಂಗಳೂರು/ತುಳು ಕಡೆಗೆ ತಿರುಗಿಸಿದಿರಿ.
ಅದು ಒಂದು ಗಮನವಷ್ಟೇ, ಹಳಿದುದಲ್ಲ!
ತುಸು ಅವರ ಬರಹದ ಬಗ್ಗೆ ಮಾತಾಡಿರಿ ಸಾರ್.!! ಓದಿ ಚನ್ನಾಗಿದೆ!
ಈ ಎಳೆಯ ಗುರಿ ಅವರ ಬರಹವಾದ ಅಚ್ಚಗನ್ನಡದ "ತಿಳಿಗನ್ನಡ ನುಡಿವಣಿಗಳು" ಬಗ್ಗೆ ಮಾತಾಡುವುದು!!
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಅಪ್ಪಣೆ ಸ್ವಾಮೀ. ಹಾಗೇ ಮಾಡುತ್ತೇನೆ.
*ಅಶೋಕ್
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಅದು ಅಪ್ಪಣೆಯಲ್ಲ!
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ದಿ|ಕೊಳಂಬೆ ಪುಟ್ಟಣ್ಣ ಗೌಡರ ಊರು ಸುಳ್ಯ.ಸುಳ್ಯದ ಸಾಹಿತ್ಯಕವಲಯದಲ್ಲಿ ಹೆಸರುವಾಸಿ..ಅವರ ಮಗ ಕೊಳಂಬೆ ಚಿದಾನಂದ ಗೌಡ-ಕುವೆಂಪು ಯುನಿವರ್ಸಿಟಿಯಲ್ಲಿ ಉಪಕುಲಪತಿಗಳಾಗಿ ನಿವೃತ್ತರಾಗಿದ್ದಾರೆ;ಕುವೆಂಪುನವರ ಅಳಿಯ.
ಕೊಳಂಬೆ ಪುಟ್ಟಣ್ಣ ಗೌಡರ 'ಕಾಲೂರ ಚೆಲುವೆ' ಅಚ್ಚಗನ್ನಡದ ಪದಗಳನ್ನೇ ಉಪಯೋಗಿಸಿ ಬರೆದಿರುವ ಕಾವ್ಯ.
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಶಿವ ಅವರೇ, ಈ ಮಾಹಿತಿ ನೀಡಿದ್ದಕ್ಕಾಗಿ ನನ್ನಿ. ಕೊಳಂಬೆ ಪುಟ್ಟಣ್ಣಗೌಡರ ಬರಹಗಳ ಮುನ್ನುಡಿಯಿಂದ ಆಯ್ದ ಕೆಲವು ಭಾಗಗಳನ್ನು ಇಲ್ಲಿ ಹಾಕಿರುವೆ. ಕೊಳಂಬೆ ಪುಟ್ಟಣ್ಣಗೌಡರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಇದ್ದರೆ ಎಲ್ಲರೊಡನೆ ಹಂಚಿಕೊಳ್ಳಿರಿ. ಹಾಗೆಯೇ, ಅವರ ಕಾಲೂರ ಚೆಲುವೆ ಕಾವ್ಯ ಎಲ್ಲಿ ಸಿಗುತ್ತದೆ ಎಂಬುದು ತಿಳಿದಿದೆಯೇ ? ನಾನು ಅಂಕಿತ ಮತ್ತು ಅಲ್ಲಲ್ಲಿ ವಿಚಾರಿಸಿದೆ. ಸಿಗಲಿಲ್ಲ.
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಸುನಿಲ
ಇವರ "ತಿಳಿಗನ್ನಡ ನುಡಿವಣಿಗಳು" ಹೊತ್ತಗೆ ಮಾರಾಟಕ್ಕೆ ಎಲ್ಲಿವೆ ಗೊತ್ತೇ?
ನೆನ್ನೆಯಿಂದ ಇಬ್ಬರು-ಮವ್ವರು ನನ್ನನ್ನು ಹೇಳಿರುವರು. ನಾನು ನಿನ್ನ ಹೆಸರು ಹೇಳಿ ಸುಮ್ನಾದೆ
ಈ PDFಅಲ್ಲಿ ಓದೋಕ್ಕೆ ಎಡರು!
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
pdfಓದುವದು ಎಡರೇನಲ್ಲದಿದ್ರೂ ಮುಟ್ಟಿ ನೋಡಲೊಂದು ಹೊತ್ತಗೆ ಬೇಕು. ಎಲ್ಲಿ ಸಿಗುವದು ಹೇಳಿ.
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ನನ್ನಿ ಸಂಗನ!
ಸಪ್ನ ಮತ್ತು ಅಂಕಿತದಲ್ಲಿ ಹುಡುಕಿ ನೋಡಬಹುದು.!!
PDF ಓದಕ್ಕೆ ಎಡರು ಏಕೆಂದರೆ, ನಮ್ ಮನೆ PC ಲಿನಕ್ಸ ಏರಿಸಲು ಹೋಗಿ ಕೆಟ್ಟು ಕೂತಿದೆ. ಅದನ್ನು ಸರಿಪಡಿಸಲು ಹೊತ್ತು ಸಿಕ್ಕಿಲ್ಲ.!!
ಯಾರಿಗಾದರೂ ಕಂಡ ನಮ್ಮೆಲ್ಲರಿಗೂ ತಿಳಿಸಿರಿ.!
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ನನ್ನಿ ಸಂಗನ!
ಸಪ್ನ ಮತ್ತು ಅಂಕಿತದಲ್ಲಿ ಹುಡುಕಿ ನೋಡಬಹುದು.!!
PDF ಓದಕ್ಕೆ ಎಡರು ಏಕೆಂದರೆ, ನಮ್ ಮನೆ PC ಲಿನಕ್ಸ ಏರಿಸಲು ಹೋಗಿ ಕೆಟ್ಟು ಕೂತಿದೆ. ಅದನ್ನು ಸರಿಪಡಿಸಲು ಹೊತ್ತು ಸಿಕ್ಕಿಲ್ಲ.!!
ಯಾರಿಗಾದರೂ ಕಂಡರೆ ನಮ್ಮೆಲ್ಲರಿಗೂ ತಿಳಿಸಿರಿ.!
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ನನ್ನಿ ಸಂಗನ!
ಸಪ್ನ ಮತ್ತು ಅಂಕಿತದಲ್ಲಿ ಹುಡುಕಿ ನೋಡಬಹುದು.!!
PDF ಓದಕ್ಕೆ ಎಡರು ಏಕೆಂದರೆ, ನಮ್ ಮನೆ PC ಲಿನಕ್ಸ ಏರಿಸಲು ಹೋಗಿ ಕೆಟ್ಟು ಕೂತಿದೆ. ಅದನ್ನು ಸರಿಪಡಿಸಲು ಹೊತ್ತು ಸಿಕ್ಕಿಲ್ಲ.!!
ಯಾರಿಗಾದರೂ ಕಂಡರೆ ನಮ್ಮೆಲ್ಲರಿಗೂ ತಿಳಿಸಿರಿ.!
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಸುನಿಲ್,
ಕಳೆದ ಬಾರಿ ಅರಮನೆ ಮೈದಾನದಲ್ಲಿ ನಡೆದ ಬುಕ್ ಫೇರ್‍ನಲ್ಲಿ 'ಕಾಲೂರ ಚೆಲುವೆ'ಯನ್ನು ನೋಡಿದ್ದೆ.ಯಾರ ಸ್ಟಾಲ್‍ನಲ್ಲಿ ನೆನಪಿಲ್ಲ.ಸಪ್ನಾದಲ್ಲೂ ಒಮ್ಮೆ ನೋಡಿದ ನೆನಪು.ಊರಿಗೆ ಹೋದಾಗ ಈ ಪುಸ್ತಕದ ಬಗ್ಗೆ ವಿಚಾರಿಸುತ್ತೇನೆ.
ನಮ್ಮ ಮನೆಯಲ್ಲಿದೆ.ಯಾವತ್ತೂ ಓದುವ ಪ್ರಯತ್ನ ಮಾಡ್ಲಿಲ್ಲ.
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಮೊದಲು ಈ ಹೊತ್ತಗೆಯನ್ನು ತೋರಿಸಿದ ಸುನೀಲಂಗೆ ನನ್ನಿ!
Khavi ಅವರಿಗಾಗಿ!!
ಹಿಂದು : ಹಾಲ್ಗಡಲಕ್ಕೆ ಮಣಿದು....
|ಎರಡನೇ ಪದ್ಯ|
ಬಿಡುಗಣ್ಣರೇನೇನೊ ಪಡೆದ ಪಾಲ್ಗಡಲಲ್ಲಿ
ನನ್ನಿಯೊಡೆಯ ಮಲಗಿಹ ನಲವಂತೆ|
ತಿಳಿವಿಗೊಪ್ಪಾಗಿ ಬಪ್ಪಾ ಹಸುರೊಡೆಯನಂ
ಮೊರೆಯಿಡುವೆಂ ಪೊರೆ! ಮರೆಯದೆಂಬಂತೆ||
ಬಿಡುಗಣ್ಣರು ಏನೇನೋ ಪಡೆದ ಪಾಲ್ಗಡಲಲ್ಲಿ, ನನ್ನಿಯ ಒಡೆಯ ಮಲಗಿಹ ನಲವು ಅಂತೆ, ತಿಳಿವಿಗೆ ಒಪ್ಪಾಗಿ ಬಪ್ಪ, ಆ ಹಸುರ ಒಡೆಯನಂ, ಮೊರೆ ಇಡುವೆಂ ಪೊರೆ! ಮರೆಯದೆ ಎಂಬಂತೆ.
ಬಿಡುಗಣ್ಣರು =ಬರ್ದಿಲರು, ಅನಿಮಷರು, ದೇವತೆಗಳು,
ಪಾಲ್ಗಡಲು = ಹಾಲ ಕಡಲು, ಕ್ಷೀರಸಾಗರ
ನನ್ನಿ/nanni truth, love, affection (= Ta. naṉṟi, Kitt.)
ನಲವು/nala, nalavu, nalivu, naluvu, nalvu pleasure, delight;
ಒಪ್ಪ/oppa fitness, propriety, elegance, beauty, agreement;
ಬಪ್ಪ = ಬರ್ಪ, ಬರುವ
ಒಡೆಯ/oḍeya owner, lord, master, ruler;
ಮೊರೆ/moṟe to roar, cry aloud, clamour, bawl, yell;
ಪೊರೆ/pore to nourish, cherish, support, preserve, invigorate;
ಬಿಡುಗಣ್ಣು ಹಾಲ್ಗಡಲ ಕಡೆದು ತಮಗೆ ಏನೇನೋ ಪಡೆದರು. ಅಂತಹ ಹಾಲ್ಗಡಲ್ಲಿ ಸತ್ಯ/ಧರ್ಮ/ಒಲವುಗಳು ಒಡೆಯ/ಕಾಯುವವನು ಮಲಗಿದ್ದಾನೆ ನಲವಿಂದ. ತಿಳಿವಿಗೆ ತಕ್ಕಂತೆ ಬರುವ ಆ ಹಸುರೊಡೆಯ/ಹಸಿರುಮೈಯವನ್ನು " ಮರೆಯದೆ ನಮ್ಮನ್ನು ಪೊರೆ "ಎಂದು ಬೇಡುವೆನು
- ಮಾಯ್ಸ !!
ಉ: ಕೊಳಂಬೆ ಪುಟ್ಟಣ್ಣಗೌಡರ - ತಿಳಿಗನ್ನಡ ನುಡಿವಣಿಗಳು
ಏನ್-ಗುರು ಅಲ್ಲಿ ಕೊಳಂಬೆಯವರ ಬಗ್ಗೆ ಇಂದು ಬಂದಿದೆ.