ಸಮಾಸದಿಂದ ತಮಾಷೆ
ಯಾಕೋ ಬೋರ್ ಹೊಡೀತಾ ಇದೆ...
ಕೆಲವು ತಮಾಶೆಯ ಸಮಾಸಗಳನ್ನು ಮಾಡೋಣ..
ಕೆಳಗಿನ ಸಮಾಸ ಬಿಡಿಸಿ ![]()
ಕುಕ್ಕಟಪಾದರುಚ್ಯಾಸ್ವಾದೋತ್ಸಾಹಾನಂದಮನ
ಇನ್ನು ಕೆಲವು ಬಿಡಿಸಲು ಕೊಡಿರಿ.!!

- Login or register to post comments
- 495 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಯಾಕೋ ಬೋರ್ ಹೊಡೀತಾ ಇದೆ...
ಕೆಲವು ತಮಾಶೆಯ ಸಮಾಸಗಳನ್ನು ಮಾಡೋಣ..
ಕೆಳಗಿನ ಸಮಾಸ ಬಿಡಿಸಿ ![]()
ಇನ್ನು ಕೆಲವು ಬಿಡಿಸಲು ಕೊಡಿರಿ.!!




ಉ: ಸಮಾಸದಿಂದ ತಮಾಷೆ
೧. ಮೊದಲು ಸಮಾಸದಿಂದ ತಮಾಷೆ. ಆಮೇಲೆ ಸರಿಯಾಗಿ ಸಮಾಸ ಬಿಡಿಸಿದವರೆಲ್ಲರಿಗೆ ಬಹುಮಾನವಾಗಿ ’ಸಮೋಸ’ ದಿಂದ ತಮಾಷೆ ( ಟ್ರೀಟ್)
ಸರಿ, ಮೊದಲು ಕೊಟ್ಟಿರುವ ಸಮಾಸದ ಅರ್ಥ ಹೀಗಿರಬಹುದೆಂದು ನನ್ನ ಅಂದಾಜು. (ಕುಕ್ಕಟ ಎಂದಿದ್ದನ್ನು ’ಕುಕ್ಕುಟ’ ಎಂದು ಸರಿಪಡಿಸಿಕೊಂಡು ಈ ಅರ್ಥವನ್ನು ಹೊಸೆದಿದ್ದೇನೆ)
’ಚಿಕನ್ ತೊಡೆ ಪೀಸ್’ಅನ್ನು ಭರ್ಜರಿಯಾಗಿ ಚಪ್ಪರಿಸಿದಾಗಿನ ಆನಂದ. (ನನಗಿದು ಕಪೋಲಕಲ್ಪಿತ. ನಿಜವಾಗಿ ಅನುಭವಿಸಿದವರು ಇನ್ನಷ್ಟು ಚೆನ್ನಾಗಿ ಬಣ್ಣಿಸಬಹುದು)
ಉ: ಸಮಾಸದಿಂದ ತಮಾಷೆ
ಹೌದು ಅದು "ಕುಕ್ಕುಟ" ( ಕುಟ ಕುಟ ಎಂದು ಕಡಿಯ ಬಹುದಾದುದು
)
ನಿಮ್ಮ ಬಿಡಿಸು ಸೂಪರ್.. ಎಷ್ಟೇ ಆದರೂ ನೀವು ವಿಚಿತ್ರಾನ್ನದ ಶ್ರೀವತ್ಸಜೋಶಿಗಲ್ಲವೇ( ನಿಮ್ಮ ವಿಚಿತ್ರಾನ್ನದ ವಿಚಿತ್ರತಾಭಿಮಾನಿ ನಾನು
)
"ಕುಕ್ಕಟಪಾದರುಚ್ಯಾಸ್ವಾದೋತ್ಸಾಹಾನಂದಮನ"
"ಚಿಕನ್ ತೊಡೆ ಪೀಸ್’ಅನ್ನು ಭರ್ಜರಿಯಾಗಿ ಚಪ್ಪರಿಸಿದಾಗಿನ ಆನಂದದ ಮನದವನು" ಅಂತ ಪೂರ್ತಿ ಮಾಡಬಹುದು.!!
ಇನ್ನೊಂದು ಕೊಡಲೇ...!!
"ಮಲಾಪಕರ್ಷಣತಪಾರ್ತಯೋಗೀಸಂಕಷ್ಟಹರಮಾತ್ರಿಕಾ"
- ಮಾಯ್ಸ !!
ಉ: ಸಮಾಸದಿಂದ ತಮಾಷೆ
"ಭೇದಿ ಮಾತ್ರೆ" ಎಂದುಕೊಳ್ಳುತ್ತೇನೆ.
ಮಂಗಳೂರು ಆಕಾಶವಾಣಿಯಲ್ಲಿ ’ವೈದ್ಯರೊಂದಿಗೆ ಭೇಟಿ’ ಎಂಬ ಕಾರ್ಯಕ್ರಮ ಬರುತ್ತಿತ್ತು. ಅದನ್ನು ನಾನು ’ವೈದ್ಯರೊಂದಿಗೆ ಭೇದಿ’ ಎನ್ನುತ್ತಿದ್ದೆ. ಭೇದಿಯಾದವರರಿಗೆ ಎಲ್ಲಿ ಯಾವಾಗ ’ಬರುತ್ತದೆ’ ಎಂಬ ಅರಿವಿರುವುದಿಲ್ಲ, ಅವರು ವೈದ್ಯರನ್ನು ಕಾಣಲು ಹೋದಾಗ ಅಲ್ಲೇ ’ಆದರೂ’ ಆಗಬಹುದು! ಆಗ ಅದು ವೈದ್ಯರೊಂದಿಗೆ ಭೇಟಿಯಾಗಬೇಕಿದ್ದದ್ದು ವೈದ್ಯರೊಂದಿಗೆ ಭೇದಿ ಆಗುತ್ತದೆ.
ಉ: ಸಮಾಸದಿಂದ ತಮಾಷೆ
ಪಕ್ಕಾ ಸರಿ....
ನಿಮ್ಮ ಜೋಕು ಸೂಪರ್..
ನೀವು ಒಂದೆರಡು ಇದ್ದರೆ ಹೇಳಿ!
ಇನ್ನೂ ಬೇಕಾ ಸಮಾಸ?
ಕಂಡಕಂಡನಾರೀತಾಡಿತಕಪಾಳಕ್ಷತಧೀರ
- ಮಾಯ್ಸ !!
ಉ: ಸಮಾಸದಿಂದ ತಮಾಷೆ
ಕಂಡ ಕಂಡ ನಾರಿಯರಿಂದ ಹೊಡೆಸಿಕೊಂಡ ಕಪಾಳ ಹೊಂದಿದ ಧೀರ?
*ಅಶೋಕ್
ಉ: ಸಮಾಸದಿಂದ ತಮಾಷೆ
ಹಾಗೆ ಹೊಡೆಸಿಕೊಂಡವನು ಆ ಸಂದರ್ಭದಲ್ಲಿ ಕೃಷ್ಣ ಬಂದು ಕಾಪಾಡಲಿಲ್ಲ ಎಂದು ದೂರಿದ್ದು ಹೀಗೆ:
"ಕಂಡುಕಂಡು ನೀ ಎನ್ನ ಕೈಬಿಡುವುದೇ ಕೃಷ್ಣ..."
ಉ: ಸಮಾಸದಿಂದ ತಮಾಷೆ
ಚೆನ್ನಾಗಿವೆ ರೀ! ಸಮಾಸಗಳು!
ಅಂದಹಾಗೆ, ಕಂಡಕಂಡನಾರೀ.. ಎಂದು ಅರಿಸಮಾಸ - ಬೇಡ, ಇದಕ್ಕೆ ಇನ್ನುಮುಂದೆ ಹಗೆಸಮಾಸ ಅನ್ನಬಹುದೇನೋ - ಮಾಡಿಬಿಟ್ಟಿದ್ದೀರಲ್ಲ!
-ಹಂಸಾನಂದಿ
ಉ: ಸಮಾಸದಿಂದ ತಮಾಷೆ
ನನ್ನಿ!
ಸುಮ್ನೆ ಟೈಮ್ ಪಾಸ್!
- ಮಾಯ್ಸ !!
ಉ: ಸಮಾಸದಿಂದ ತಮಾಷೆ
ಅದಕ್ಕೆ ಮುನ್ನೆಚ್ಚರಿಕೆಯ ಕ್ರಮವಾಗಿ ಅದನ್ನು ಹಲೋ ಆಕಾಶವಾಣಿ--ಪೋನ್ ಇನ್ ಕಾರ್ಯಕ್ರಮವಾಗಿಸಲಾಗಿದೆ!
*ಅಶೋಕ್
ಉ: ಸಮಾಸದಿಂದ ತಮಾಷೆ
ಅದಕ್ಕೆ ಮುನ್ನೆಚ್ಚರಿಕೆಯ ಕ್ರಮವಾಗಿ ಅದನ್ನು ಹಲೋ ಆಕಾಶವಾಣಿ--ಪೋನ್ ಇನ್ ಕಾರ್ಯಕ್ರಮವಾಗಿಸಲಾಗಿದೆ!
*ಅಶೋಕ್
*ಅಶೋಕ್
ಉ: ಸಮಾಸದಿಂದ ತಮಾಷೆ
ಕೆಳಕೆ ಕೆಲವು ಗೇಲಿ ಮಾಡಲು ಮಾಡಿದ ಸಮಾಸಗಳಿವೆ.
ಅಧಿಕಸಭ್ಯತಾಧಿಕಪ್ರಸಂಗೀವಿಶೇಷ
ಅನವಶ್ಯಕಬೋಧನಾಪ್ರವೀಣಾಧಮ
ಆತ್ಮಾಲಂಕೃತಾಭಿಮಾನಾಧಿಕಾಭಾಸವಿಷಯವಿಚಿತ್ರವಾದೀ
ಭ್ರಮಿತಸ್ವಘೋಷಿತಪಾಂಡಿತ್ಯಪೀಡಿತವಿಕಾರವಿಷಯಾಧಮ
ವಿವಿಧಾರ್ಥವಿಹೀನಮೂಢಾರ್ಥವಿಷಯಪ್ರಲಾಪಿ
ವಿಷಯವಿವಾದವಿವರಾಸಹ್ಯವಿಕೃತಮನೋವಿಲಾಸಿ
ತಮೋಪೇತಗುಣಾಚಲಧರಭೀರುಗಣನಾಯಕ
ವಿಧ್ವಂಸಕವಿಷಯವಿಚನಲೀಲಾವಿಲಾಸಸಾಹಸೀ
ಶಿರಃಖಾದನಾಪ್ರತಿಮಪ್ರವೀಣಗಮನಾನಂದಮನೋsಹಂ
- ಮಾಯ್ಸ !!