ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

June 9, 2007 - 4:16am — ರಮ್ಯ

ಈ ಬಗ್ಗೆ ಇಂದು ಚರ್ಚೆ ಆಗಿಯೇ ಆಗುತ್ತದೆ ಅಂತ ಗೊತ್ತಿತ್ತು. ಹಾಗಾಗಿ ಅದನ್ನು ನಾನೇ ಆರಂಭಿಸುವ ಅಂದುಕೊಂಡೆ. ಇಂದಿನ ವಿಜಯಕರ್ನಾಟಕದಲ್ಲಿ ಅನಂತಮೂರ್ತಿಯವರನ್ನು ತೆಗಳಿ ಪ್ರತಾಪ್ ಸಿಂಹರ ಲೇಖನ ಬಂದಿದೆ. ಇಷ್ಟೊಂದು ಬರೆಯಬಾರದಿತ್ತು, ಜಾಸ್ತಿಯಾಯಿತು ಎಂದು ಅನಿಸಿದರೂ ಬರೆದದ್ದು ಸರಿಯಾಗಿಯೇ ಇದೇ ಎಂದೂ ಕಾಣುತ್ತದೆ. ನೀವೇನಂತೀರ?

‹ 'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು? ದಿನಕ್ಕೊಂದು ಹಾಡು - ಕನ್ನಡಕವನಗಳ ಬಗ್ಗೆ ಮಾತುಕತೆ. ›
  • ಸಾಹಿತ್ಯ, ಭಾಷೆ
~.~
  • Login or register to post comments
  • 1180 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 9, 2007 - 6:31am — ASHOKKUMAR

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

ASHOKKUMAR's picture

ಕೊಂಡಿ:

http://vijaykarnatakaepaper.com/pdf/2007/06/09/20070609a_008101002.jpg

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2007 - 10:29am — uniquesupri

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

uniquesupri's picture

ಪ್ರತಾಪ್ ಸಿಂಹರ ಅಂಕಣಗಳು ಜನಪ್ರಿಯವಾಗಲು ಕಾರಣ ಅದೇ. ಅವರು ತಮ್ಮ ಬರಹಕ್ಕೆ ಆಯ್ದುಕೊಳ್ಳುವ ವಿಷಯಕ್ಕೆ ನಿಷ್ಟವಾಗಿ ತಮ್ಮ ವಾದವನ್ನು ಮಂಡಿಸಿ ಅದನ್ನು ಸಮರ್ಥಿಸಲು ಸಾಕಷ್ಟು ಪುರಾವೆಗಳನ್ನು ಕಲೆಹಾಕಿ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುವ ರೀತಿಯಲ್ಲಿ ಬರೆಯುತ್ತಾರೆ. ಅನಂತಮೂರ್ತಿಯವರ ಬಗ್ಗೆ ಬರೆದದ್ದರಲ್ಲಿ ನಾವು ಆಕ್ಷೇಪಿಸಬಹುದಾದದ್ದು ಕೆಲವೇ ಕೆಲವು ಅಂಶಗಳನ್ನಾದರೂ ಇಡೀ ಬರಹದ ಉದ್ದೇಶವನ್ನು ಪ್ರಶ್ನಿಸಲಾಗದು. ಬರೆದದ್ದರಲ್ಲಿ ಯಾವುದೂ ತಪ್ಪಿಲ್ಲ. ಪುರಾವೆಗಳನ್ನು ತಮ್ಮ ವಾದಕ್ಕೆ ತಕ್ಕನಾಗಿ ದುಡಿಸಿಕೊಳ್ಳುವ ಜಾಣ್ಮೆ ಪ್ರತಾಪ್‍ರಲ್ಲಿದೆ.
ಆದರೆ ಇಡೀ ವಿವಾದದಲ್ಲಿ ವಿಜಯ ಕರ್ನಾಟಕ ವಹಿಸಿದ ಪಾತ್ರವನ್ನು ಕುರಿತು ಪ್ರತಾಪ್ ಸಮರ್ಥಿಸಿಕೊಂಡು ರವಿ ಬೆಳಗೆರೆಯವರ ಟೀಕೆಗೆ ಪ್ರತಿಕ್ರಿಯಿಸಿದ ರೀತಿ ನನಗೆ ಹಿಡಿಸಲಿಲ್ಲ. ಬೆಳಗೆರೆ ಹೇಳಿದ್ದು: ಭೈರಪ್ಪ ಕಾದಂಬರಿಕಾರ ಅಲ್ಲ, ಅವರೊಬ್ಬ ಡಿಬೇಟರ್, ಕಾವ್ಯವೆಂಬುದು ಅವರಲ್ಲಿ ಏನೂ ಇಲ್ಲ ಅಂತ ಹೇಳಿದ್ದು ಸಾಹಿತಿ ಅನಂತಮೂರ್ತಿ. ಅವರ ಟೀಕೆಯನ್ನು ವಿಮರ್ಶಿಸಲು ಕಾವ್ಯದ ಆಳಾಗಲಬಲ್ಲ, ಸಾಹಿತ್ಯಿಕ ವಲಯದವರ ಅಭಿಪ್ರಾಯ ಪಡೆಯಬೇಕೆ ಹೊರತು ಸಾಮಾನ್ಯ ಓದುಗರದ್ದಲ್ಲ. ಇದರಲ್ಲಿ ಓದುಗರನ್ನು ಕಡೆಗಣಿಸುವ ಯಾವ ಉದ್ದೇಶವೂ ಇಲ್ಲ. ಒಬ್ಬ ವಿಜ್ಞಾನಿಯ ಸಂಶೋಧನೆಯ ಗುಣಮಟ್ಟ, ಶ್ರೇಷ್ಟತೆಯ ಬಗ್ಗೆ ಮತ್ತೊಬ ವಿಜ್ಞಾನಿ ಮಾತನಾಡಿದರೆ ಅದನ್ನು ವಿರೋಧಿಸಲಿಕ್ಕೆ ವಿಜ್ಞಾನದ ಆಳ ಅಗಲ ಬಲ್ಲವನಾಗಬೇಕು ಎನ್ನುವ ಧ್ವನಿ ಬೆಳಗೆರೆಯ ಟೀಕೆಯ ಹಿಂದೆ ಇದ್ದದ್ದು.
ವಿಜಯ ಕರ್ನಾಟಕದ ಅಂಕಣಕಾರನಾಗಿ, ಉಪ ಸಂಪಾದಕನಾಗಿ ತನ್ನ ಪತ್ರಿಕೆಯ ನಿಲುವನ್ನು ಸಮರ್ಥಿಸಿಕೊಳ್ಳುವ ಎಲ್ಲಾ ಹಕ್ಕುಗಳು ಪ್ರತಾಪ್‍ರಿಗಿದೆ...
ಅನಂತಮೂರ್ತಿ - ಭೈರಪ್ಪ ವಿವಾವದದ ಬಗ್ಗೆ ಹಾಯ್ ಬೆಂಗಳೂರು ಚೆನ್ನಾಗಿ ಬರೆದಿದೆ...

ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2007 - 11:06am — muralihr

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

muralihr's picture

ಮೊನ್ನೇ ! ನಾರಾಯಣ ಮೂರ್ತಿಗಳ ಬಗ್ಗೆ ಬರೆದಿದ್ದನು ಓದಿದೆ. ಇಲ್ಲಿ೦ದಲೋ ಎಲ್ಲಿಗೋ ಕರೆದೊಕೊ೦ಡು ಹೋಗುತ್ತಾರೆ.
"ನಾರಾಯಣ ಮೂರ್ತಿಗಳ ನ್ನು ಕೋರ್ಟಿಗೆ ಎಳೆದಿದ್ದಾರೆ. (Bangalore Jun 2, 2007 Page 6 - 7)
ಅದೆಲ್ಲೋ ಮಸೀದಿ ಮೇಲೆ ಪಾಕಿಸ್ಥಾನದ ಬಾವುಟ ಹಾರಿಸಿದವರನ್ನು ಜೈಲಿಗೆ ಹಾಕದೆ ಬಿಟ್ಟಿದ್ದಾರೆ." ಹೀಗೆ ಗ೦ಭೀರವಾಗಿದ್ದ ಬರವಣಿಗೆಯನ್ನು ತಕ್ಷಣ ತೀರಾ Silly ಮಾಡಿಬಿಟ್ಟರು.
ಕೊ೦ಚ ಸ೦ಘ ಪರಿವಾರದವರ್ Influence ಜಾಸ್ತಿ. ಓದುಗರನ್ನು ದಾರಿ ತಪ್ಪಿಸುವ ಬರವಣಿಗೆ.
ಹೆಚ್ಚಾಗಿ ವ್ಯಕ್ತಿಯನ್ನು ಮತ್ತು ಆತನ ವ್ಯವಹಾರವನ್ನು ಲೇವಡಿ ಮಾಡುವ ಸಿದ್ಧಿಯನ್ನು ಹೊ೦ದಿದ್ದಾರೆ.
ಈ ಕೆಲಸ ಪತ್ರಕರ್ತನಾಗಿ ಮಾಡುವುದು ಸರಿಯೇ ??
ಆಗ ಜನ ಒಬ್ಬ ವ್ಯಕ್ತಿಯನ್ನು ದ್ವೇಷಿಸಲು ಅಥವಾ ಪೂಜಿಸಲು ಪ್ರಾರ೦ಭ ಮಾಡುವುದಿಲ್ಲಾವೇ ??
ನಾವು ನೀವು ಸ೦ಪದ "ಆವರಣದಲ"್ಲಿ ಹೆಚ್ಚಾಗಿ ಭೈರಪ್ಪನವರನ್ನೇ ಆಗಲಿ , ಅನ೦ತಮೂರ್ತಿಯವರನ್ನೇ ಆಗಲಿ ಬಾಯಿಗೆ ಬ೦ದ ಹಾಗೆ ಬೈದರೆ ಅಥವಾ ಹೊಗಳುವುದಕ್ಕೆ ಪ್ರಾರ೦ಭ ಮಾಡಿದರೆ , ಓದುವುದಕ್ಕೆ ಬೇಸರ ಮೂಡುವುದಿಲ್ಲವೇ ?
ನೀವು ಈ ಪ್ರತಾಪನ ಯಾವುದೇ ಬರವಣಿಗೆ ತೆಗೆದು ಓದಿ ಹೆಚ್ಚಾಗಿ ವ್ಯಕ್ತಿಯನ್ನು ಹೊಗಳುವುದು ಇಲ್ಲಾ ತೆಗಳುವುದು
ಕ೦ಡು ಬರುತ್ತದೆ. ಹೊಗಳುವುದು ಮತ್ತು ತೆಗಳುವುದು ಮೂಲತ: ಅಸತ್ಯ ಕಲ್ಪನೆಯ ಮೇಲೆ ನಿ೦ತಿರುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2007 - 11:13am — ASHOKKUMAR

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

ASHOKKUMAR's picture

ನಮ್ಮ ಬರವಣಿಗೆಯಲ್ಲಿ ಈ ದೋಷ ಇದ್ದೇ ಇದೆ. ಅದರಿಂದ ಹೊರಬರುವುದು ಸುಲಭವಲ್ಲ.
ಈಗ ನೀವು ಪ್ರತಾಪಸಿಂಹರ ಬಗ್ಗೆ ಬರೆದಿರುವುದು ಅವರ ಅಭಿಮಾನಿಗಳಿಗೆ ಏಕಪಕ್ಷೀಯವಾಗಿದೆ ಅನ್ನಿಸಿದರೆ ಅಚ್ಚರಿಯಿಲ್ಲ. Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2007 - 12:02pm — mahesha

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

mahesha's picture

ಮುರಳಿ ಅವರೆ ನೋಡಿದ್ರ!
ಅಶೋಕರ ಮಾತಿಗೆ ನನ್ನ ಒಡದನಿ ಇದೆ.

ನನಗೆ "ಪ್ರತಾಪ ಸಿಂಹ" ಬರಹ ಹಿಡಿಸಲ್ಲ ( ಗಮನಿಸಿ, ಅವರು ಚನ್ನಾಗಿ ಬರೆಯುವುದಿಲ್ಲ ಎಂದು ನಾನು ಹೇಳಲಿಲ್ಲ! ) . ಅದಕ್ಕೆ ನಾನು ಓದುವುದು ಬಿಟ್ಟುಬಿಟ್ಟಿದ್ದೇನೆ. ವಿಕದಲ್ಲಿ ಅವರಂತೆ ಬರೆಯೋರು ಬಹಳ ಇದ್ದಾರೆ.

ನನಗೆ ಕನ್ನಡ ಓದಲು ಹುರುಪು, ಹುಚ್ಚು. ಆದರೆ ಈ ಪೇಪರುಗಳಲ್ಲಿ, ಅದರಲ್ಲೂ ವಿಕದಲ್ಲಿ ಬರೀ ಕಿತ್ತಾಟ ಅನ್ನಿಸತ್ತೆ. ಇದರಿಂದಲೇ ಇರಬೇಕು ನಾನು ಹಳೆಗನ್ನಡ ಹಿಡಿದಿರುವುದು, ಯಾವ ಜಂಜಡವಿಲ್ಲ.!

ನಾನು ಈ ಎಲ್ಲ ಪ್ರತಾಪ ಸಿಂಹ, ಬೈರಪ್ಪ-ಕಾರ್ನಡ, ಬೈರಪ್ಪ-ಅಮೂ, ಮುಂತಾದ ಸಂಗತಿಗಳಿಂದ ಕಲಿತದ್ದು.

೧) ತೀಯಾಟದ ಬರಹ, ಕಚ್ಚಾಟದ ಬರಹ, ಅದು ಎಷ್ಟೇ ದಿಟವನ್ನು ಮರೆಸುವಂತದಾಗಿರಲಿ, ಅದನ್ನು ಓದಿದರೂ, ಮೆಚ್ಚಿದರೂ, ಅದನ್ನು ಹರಡಬಾರದು.
೨) ಇಂತ ತೀಯಾಟದ ನಡುವೆ ನಾವು ಸಿಲುಕಿಕೊಳ್ಳಬಾರದು. ಅಂದರೆ ಕಚ್ಚಾಟ ಮಾಡಲೆಂದೇ ಬರೆದರೂ, ಅವರನ್ನು ಎದುರಿಸಬಾರದು. ಏಕೆಂದರೆ ಅಂತಹವರು ತಾಳ್ಮೆ, ಕನಿಕರ, ಇವಕ್ಕೆ ಎಡೆಕೊಡದೆ, ಬರೀ ರೊಚ್ಚು, ಕೆಚ್ಚು ತುಂಬಿಕೊಂಡಿರುತ್ತಾರೆ ಹಾಗು ಅದನ್ನೇ ಸರಿ ಎಂದು ಹಟ ಮಾಡುತ್ತಾರೆ.
೩) ನಾವು ಒಬ್ಬ ಬರಹಗಾರ, ಕೂಟುಗಾರ( ನಟ ), ಹಾಡುಗಾರ ಇಂತವರನ್ನು ಎಷ್ಟು ಮೆಚ್ಚಿಕೊಂಡಿದ್ದರೂ, ಅವರ ಪಟ್ಟಶಿಷ್ಟರಂತೆ, ಬೆಂಬಲಕ್ಕೆ ನಿಲ್ಲಬಾರದು. ಯಾವ ನರನೂ ಕೊಂಚ "ಸ್ವಾರ್ಥ/ತನ್ಗಿಟ್ಟು" ಇಲ್ಲದೇ ಏನೂ ಮಾಡನು. ಹೀಗೆ ಬೆಂಬಲಿಸಿಕೊಂಡು ಹೋಗುವುದು ಒಂದು ಬಗೆ ಮನೋದಾಸ್ಯ/ಮನದೂಳ್ತನ. ಇಂತವನು ಹೇಳಿದ ಅದಕ್ಕೆ ಅದು ದಿಟ.

ಇಂತಹ ಪಾಡಿಗೆ ನಾವು ಗೊತ್ತಿಲ್ಲದೇ, ಬಿದ್ದು ಬಿಡುತ್ತೇವೆ. Insecurity!! ನಾನು ಬಿದ್ದುಬಿಟ್ಟಿರಬಹುದು( ನಮಗೆ ಅದು ಗೊತ್ತಿರುವುದಿಲ್ಲ )

ನಮ್ಮ ದೊಡ್ಡಬಾರತದ ನಡಾವಳಿಯಂತೆ ಎಲ್ಲಿಯವರೆಗೂ "ಆಳ್ತುೞಿಲು", "ಆಳ್ವಿಂಚರಿಕೆ", "ಆಳ್ವಳಿ" ಇವನ್ನು ಬಿಟ್ಟು "ಸಂಗತಿಯ ತುಱಿಲ್", "ಸಂಗತಿ ಹಿಂಚರಿಕೆ", "ಸಂಗತಿ ಹಳಿ" ಬರುವುದಿಲ್ಲವೋ, ಅಲ್ಲಿಯವರೆಗೂ ಹೀಗೆ

[ನಮ್ಮ ಮಹಾಭಾರತೀಯ ಸಂಪ್ರದಾಯದಂತೆ ಎಲ್ಲಿಯವರೆಗೂ "ವ್ಯಕ್ತಿಪೂಜೆ/Idol worship", "ವ್ಯಕ್ತಿ ಅನುಪಾಲನೆ", "ವ್ಯಕ್ತಿ ನಿಂದನೆ" ಇವನ್ನು ಬಿಟ್ಟು "ವಿಚಾರದ ಪೂಜೆ", "ವಿಚಾರದ ಅನುಪಾಲನೆ", "ವಿಚಾರ ನಿಂದನೆ" ಬರುವುದಿಲ್ಲವೋ, ಅಲ್ಲಿಯವರೆಗೂ ಹೀಗೆ.]

ಮುರಳಿ, ನೀವು ಒಬ್ಬಗೆ ಬಲು ಗಟ್ಟಿಯಾಗಿ ಬೆಂಬಲ/ಬೆನ್ನಿಲುವು ಮಾಡುವಿರಿ ಅಲ್ವಾ!! Smiling, ನಾನು ಮಾಡ್ತೀನಿ. ಇದೇ ನಮ್ಮ ಅಸ/weakness.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2007 - 2:14pm — muralihr

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

muralihr's picture

Smiling:)Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2007 - 1:52pm — mahesha

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

mahesha's picture

ಬರಿ ನಗು Smiling

ಸುಸ್ತಾ!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2007 - 3:05pm — muralihr

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

muralihr's picture

TS Eliot ನ ಈ ಪದ್ಯ ಓದುತ್ತಿದ್ದೆ !

Words strain,
Crack and sometimes break, under the burden,
Under the tension, slip, slide, perish,
Decay with imprecision, will not stay in place,
Will not stay still.

Shrieking voices
Scolding, mocking, or merely chattering,
Always assail them. The "Word in the desert"
Is most attacked by voices of temptation,
The crying shadow in the funeral dance,
*************************************
ನಮ್ಗೇ ಒ೦ದು temptation ಇದೆ. ನಿ೦ದನೆ ಮಾಡುವುದು.
ಅದರಲ್ಲಿ ಸಿಗುವ ಪರಮಾನ೦ದ, ಮಜಾ,ಮೋಜು, ಖುಷಿ, ರುಚಿ, funU , tasteU, Happinessuu..blissU..
ಇನ್ನು ಯಾವುದರಲ್ಲಿಯೂ ಇಲ್ಲಾ...ಅ೦ತಾ ತಿಳಿದು ಒಬ್ಬರನ್ನು ಮತ್ತೊಬ್ಬರು
ಉಡಾಫೆ ಮಾDi, Insult ಮಾDi, ಬೈದು , ಉಗಿದು, ಕಚ್ಚಿ , ಕೊಚ್ಚಿ ,ತಿವಿದು, ಪೆಪರ್ ನಲ್ಲಿ "ಅವನು ಗ೦ಡಸ್ಸಲ್ಲಾ" ಥೂ ಅ೦ದು, - ಹೀಗೆ ಆನ೦ದವನ್ನು ಅನುಭಿವಿಸುತ್ತೀವಿ.
ಈ ಪ್ರತಾಪರಿಗೆ ಕೂಡ ಅದೇ ಮಜಾ ನಿತ್ಯ ಸಿಗುತ್ತೆ. ಅನ೦ತಮೂರ್ತಿಗಳಿಗೆ ಕೂಡ ಭೈರಪ್ಪನವರು "ಕಾದ೦ಬರಿಕಾರ ಅಲ್ಲಾ"
ಅ೦ದಾಗ ಅದೇ ಮಜಾ ಸಿಗುತ್ತೆ. ಅನ೦ತಮೂರ್ತಿ ಯವರನ್ನು ಪೇಪರ್ ನಲ್ಲಿ ನಿ೦ದಿಸಿ ಆನ೦ದ ಪಡುವವರು ತು೦ಬಾ ಮ೦ದಿ.
ಹೀಗೆ ಒಬ್ಬ ಜೀವಿಯಿ೦ದ ಮತ್ತೊಬ್ಬ ಜೀವಿ ಆನ೦ದವನ್ನು ಪಡೆಯುವ ಸೌಲಭ್ಯ ಸೃಷ್ಟಿ ಮಾಡಿದ ಜಗಳ ಪ್ರಿಯ "ದೇವರಿಗೆ" ನಮೋ ನಮೋ.

ಈವತ್ತು ಅನ್೦ತಮೂರ್ತಿ, ನಿನ್ನೆ ನಾರಾಯಣ ಮೂತ್ರಿ ನಾಳೆ ಇನ್ನೊಬ್ಬ ಮೂರ್ತಿ.
ಮೂರು ದಿನದ ಜೀವನದಲ್ಲಿ ಈ ಮೂರ್ತಿಗಳನ್ನು (ದೇಹಗಳನ್ನು ) ನಿ೦ದನೆ ಮಾಡಿ /ಹೊಗಳಿ ಕಳೆಯುವುದು ಜೀವನವಾದರೆ ಹೇಗೆ ??
ಅದಕ್ಕೋಸ್ಕರ್ವೇನು ತ್ರಿಮೂರ್ತಿಗಳು ಈ ಜಗತ್ತನ್ನು ಸೃಷ್ಟಿ ಮಾಡಿದ್ದು ?
ನೀವು ಸುಮ್ಮನೆ ಬೀದಿಯಲ್ಲಿ ನಡೆದು ಕೊ೦ಡು ಹೋದರ,ೆ ಸಿಕ್ಕಾ ಪಟ್ಟೆ ಜನರು ಜಗಳ ಆಡ್ತಾ ಈ ಆನ೦ದವನ್ನು ಅನುಭವಿಸುವುದನ್ನು ಕಾಣಬಹುದು.
ಹೀಗೆ ಹಲವಾರು ಯೋಚನೆ ಗಳಿ೦ದ -- ನಗು ಬ೦ತು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 11, 2007 - 10:47am — mahesha

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

mahesha's picture

ಬೊಂಬಾಟಾಗಿ ಹೇಳಿದ್ರಿ ನೋಡಿಯಪ್ಪ!!

ಈ ಬೈದು ನಲಿಯೋ ತಲೆಗಳು ನಮ್ಮ ನಡುವೆ ಶಾನೆ ಅವ್ರೆ. ಅವ್ರು ಹಂಗೆ ನಾವು ಇದ್ದು ಬಿಡೋಣ ಅಂದ್ರೆ, ನಮ್ ನಮ್ ಒಳಮನ ಒಲ್ಲೇ ಅಂತೈತೆ.
ಹಿಂಗೆ ಬೈಕೊಂಡು ಆರಾಮಾಗಿ ಇರಕ್ಕೆ ಎಲ್ರುಗೂ ಆಗಕ್ಕಿಲ್ಲ. ನಿಮ್ಗೂ ಕೂಡ. ಒಂದು ಮಟ್ಟ ದಾಟಿದ ಮೇಲೆ, "ಅಯ್ಯಯ್ಯಪ್ಪ ಸಾಕು ಸಾಕು" ಅನ್ಸುತ್ತೆ.

ಅದಕ್ಕೆ ಬೈದಾಡೋದು, ತೀಯಾಡೋದರಲ್ಲಿ ಸಿಗುವ ಮೋಜು ಚನ್ನಾಗಿರಲ್ಲ. ಈ ಮೋಜಿನ ತೀಟೆ ಇಂದ್ಲೇ ಇವೊತ್ತು ನಾವು ಎಕ್ಕುಟ್ಟಿ ಹೋಗ್ತಾ ಇರೋದು.

ತೀಯಾಟಕ್ಕೆ ಅಂತ ಹೊತ್ತಗೆಗಳೂ ಬರಕ್ಕೆ ಸುರುವಾಗವೆ. ಒಂದು ಹೊತ್ತಗೆಯ ಗುರಿಯೇ ಇನ್ನೊಬ್ರನ್ನ, ಇನ್ನೊಂದು ಗುಂಪ್ನ, ಎಕ್ಕಾಮಕ್ಕಾ ಅನ್ನೋದು, ಹಗೆಕಾರೋದು.
ನೆನ್ನೆ 'ಅಂಕಿತ'ದಾಗೆ ಎರಡು ಹೊತ್ತಗೆ ನೋಡ್ದೆ. ಒಂದು "ಮನು ಮತ್ತು ಭೈರಪ್ಪ"(ಅಂತಾ?), ಮತ್ತೊಂದು ಹೆಸರು ನೆಪ್ಪಿಲ್ಲ. ಎರಡರಲ್ಲೂ ಬೈರಪ್ಪನ್ನ ಸಕ್ಕತ್ ತಾರಾಮಾರಾ ಜಾಡಸವ್ರೆ.

"ಹೊಟ್ಟೆಯ ಕಿಚ್ಚಿಗೆ ಕಣ್ಣೀರ್‍ ಸುರಿಸು,
ಕೂಡಿ ಬಾಳುವ ತೆರದಲಿ ಹರಸು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 11, 2007 - 5:59pm — vinayak.mdesai

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

vinayak.mdesai's picture

"ಉಡಾಫೆ ಮಾDi, Insult ಮಾDi, ಬೈದು , ಉಗಿದು, ಕಚ್ಚಿ , ಕೊಚ್ಚಿ ,ತಿವಿದು, ಪೆಪರ್ ನಲ್ಲಿ "ಅವನು ಗ೦ಡಸ್ಸಲ್ಲಾ" ಥೂ ಅ೦ದು, - ಹೀಗೆ ಆನ೦ದವನ್ನು ಅನುಭಿವಿಸುತ್ತೀವಿ.
ಈ ಪ್ರತಾಪರಿಗೆ ಕೂಡ ಅದೇ ಮಜಾ ನಿತ್ಯ ಸಿಗುತ್ತೆ. ಅನ೦ತಮೂರ್ತಿಗಳಿಗೆ ಕೂಡ ಭೈರಪ್ಪನವರು "ಕಾದ೦ಬರಿಕಾರ ಅಲ್ಲಾ"
ಅ೦ದಾಗ ಅದೇ ಮಜಾ ಸಿಗುತ್ತೆ. ಅನ೦ತಮೂರ್ತಿ ಯವರನ್ನು ಪೇಪರ್ ನಲ್ಲಿ ನಿ೦ದಿಸಿ ಆನ೦ದ ಪಡುವವರು ತು೦ಬಾ ಮ೦ದಿ.
ಹೀಗೆ ಒಬ್ಬ ಜೀವಿಯಿ೦ದ ಮತ್ತೊಬ್ಬ ಜೀವಿ ಆನ೦ದವನ್ನು ಪಡೆಯುವ ಸೌಲಭ್ಯ ಸೃಷ್ಟಿ ಮಾಡಿದ ಜಗಳ ಪ್ರಿಯ "ದೇವರಿಗೆ" ನಮೋ ನಮೋ."

ತಾವು ಇಲ್ಲಿ ಪ್ರತಾಪ ಸಿಂಹರ ಬಗ್ಗೆ comment ಮಾಡುತ್ತಿಲ್ಲವೆ? ನಿಮಗೂ ಇದರಲ್ಲಿ ಆನಂದ ಸಿಗುತ್ತಿರಬಹುದು.

ವಿನಾಯಕ ಮುತಾಲಿಕ ದೇಸಾಯಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 11, 2007 - 6:34pm — mahesha

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

mahesha's picture

ನಮಸ್ಕಾರ...

ಮುರುಳಿಯವರು...
http://sampada.net/forum/4435#comment-8183

ಇದಕ್ಕೆ ಮರುನುಡಿಯುತ್ತಿದ್ದರು!! Smiling

ಮುರುಳಿ ದೇವರು! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2007 - 8:56pm — mahesha

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

mahesha's picture

ಇಲ್ಲಿ ನೋಡ್ರೀ ಮುರಳೀ ದೇವರೇ...

ನಮ್ಗೇ ಒ೦ದು temptation ಇದೆ. ನಿ೦ದನೆ ಮಾಡುವುದು.
ಅದರಲ್ಲಿ ಸಿಗುವ ಪರಮಾನ೦ದ, ಮಜಾ,ಮೋಜು, ಖುಷಿ, ರುಚಿ, funU , tasteU, Happinessuu..blissU..
ಇನ್ನು ಯಾವುದರಲ್ಲಿಯೂ ಇಲ್ಲಾ...ಅ೦ತಾ ತಿಳಿದು ಒಬ್ಬರನ್ನು ಮತ್ತೊಬ್ಬರು
ಉಡಾಫೆ ಮಾDi, Insult ಮಾDi, ಬೈದು , ಉಗಿದು, ಕಚ್ಚಿ , ಕೊಚ್ಚಿ ,ತಿವಿದು, ಪೆಪರ್ ನಲ್ಲಿ "ಅವನು ಗ೦ಡಸ್ಸಲ್ಲಾ" ಥೂ ಅ೦ದು, - ಹೀಗೆ ಆನ೦ದವನ್ನು ಅನುಭಿವಿಸುತ್ತೀವಿ.
ಈ ಪ್ರತಾಪರಿಗೆ ಕೂಡ ಅದೇ ಮಜಾ ನಿತ್ಯ ಸಿಗುತ್ತೆ. ಅನ೦ತಮೂರ್ತಿಗಳಿಗೆ ಕೂಡ ಭೈರಪ್ಪನವರು "ಕಾದ೦ಬರಿಕಾರ ಅಲ್ಲಾ"
ಅ೦ದಾಗ ಅದೇ ಮಜಾ ಸಿಗುತ್ತೆ. ಅನ೦ತಮೂರ್ತಿ ಯವರನ್ನು ಪೇಪರ್ ನಲ್ಲಿ ನಿ೦ದಿಸಿ ಆನ೦ದ ಪಡುವವರು ತು೦ಬಾ ಮ೦ದಿ.
ಹೀಗೆ ಒಬ್ಬ ಜೀವಿಯಿ೦ದ ಮತ್ತೊಬ್ಬ ಜೀವಿ ಆನ೦ದವನ್ನು ಪಡೆಯುವ ಸೌಲಭ್ಯ ಸೃಷ್ಟಿ ಮಾಡಿದ ಜಗಳ ಪ್ರಿಯ "ದೇವರಿಗೆ" ನಮೋ ನಮೋ.

ಈವತ್ತು ಅನ್೦ತಮೂರ್ತಿ, ನಿನ್ನೆ ನಾರಾಯಣ ಮೂತ್ರಿ ನಾಳೆ ಇನ್ನೊಬ್ಬ ಮೂರ್ತಿ.
ಮೂರು ದಿನದ ಜೀವನದಲ್ಲಿ ಈ ಮೂರ್ತಿಗಳನ್ನು (ದೇಹಗಳನ್ನು ) ನಿ೦ದನೆ ಮಾಡಿ /ಹೊಗಳಿ ಕಳೆಯುವುದು ಜೀವನವಾದರೆ ಹೇಗೆ ??
ಅದಕ್ಕೋಸ್ಕರ್ವೇನು ತ್ರಿಮೂರ್ತಿಗಳು ಈ ಜಗತ್ತನ್ನು ಸೃಷ್ಟಿ ಮಾಡಿದ್ದು ?
ನೀವು ಸುಮ್ಮನೆ ಬೀದಿಯಲ್ಲಿ ನಡೆದು ಕೊ೦ಡು ಹೋದರ,ೆ ಸಿಕ್ಕಾ ಪಟ್ಟೆ ಜನರು ಜಗಳ ಆಡ್ತಾ ಈ ಆನ೦ದವನ್ನು ಅನುಭವಿಸುವುದನ್ನು ಕಾಣಬಹುದು.
ಹೀಗೆ ಹಲವಾರು ಯೋಚನೆ ಗಳಿ೦ದ -- ನಗು ಬ೦ತು.

ಆನಂದಕ್ಕೆ ಒಂದು ಹೊಸ ಭಾಷ್ಯ ಬರೆದಿದ್ದೀರಿ!

ಜಗಳವನ್ನು ಇಷ್ಟು ಚನ್ನಾಗಿ ವಿಷ್ಲೇಶಣೆ/explain ಮಾಡಿದವರು ಜಗದಲ್ಲಿ ಬಹಳ rare!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2007 - 2:43pm — ವೈಭವ

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

ವೈಭವ's picture

ಮುರಳಿ...ನನ್ನಿ

ಯಾಕೊ ವ್ಯಕ್ತಿಯ ಮೇಲೆ ಹರಿಹಾಯುವುದು ಜಾಸ್ತಿ ಯಾಗುತ್ತಿದೆ....ಏಟೋಂದು ಸಮಸ್ಯೆಗಳ ಬಗ್ಗೆ ಮಾತಾ ಆಗತಾ ಇಲ್ಲ... ಬರೀ ಕೆಸರು ಎರಚಾಟ ಆಗ್ತ ಇದೆ. ಅದು ತುಂಬ ಕೆಳ ಮಟ್ಟದಲ್ಲಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 11, 2007 - 5:53pm — vinayak.mdesai

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

vinayak.mdesai's picture

ಮೊನ್ನೆ ನಾರಾಯಣ ಮೂರ್ತಿ ಅವರ ಬಗ್ಗೆ ಬರೆದ ಲೇಖನದಲ್ಲಿ ಅವರು ಮೂರ್ತಿ ಅವರನ್ನು ಸಮರ್ಥಿಸಿಕೊಂಡು ಬರೆದಿಲ್ಲ. ಅವರು ಮಾಡಿದ್ದು ತಪ್ಪು ಎಂದು ಹೇಳಿದ್ದರು ಅದು ತಮ್ಮ ಗಮನಕ್ಕೆ ಬಂದಹಾಗೆ ಕಾನುವುದಿಲ್ಲ. ಪ್ರತಾಪ ಸಿಂಹ ಬರೆದಿದ್ದುದರಲ್ಲಿ ಯಾವ ತಪ್ಪೂ ಕಾಣುವುದಿಲ್ಲ. ಮಸೀದಿಗಳ ಮೇಲೆ [ಎಲ್ಲೇ ಆಗಲಿ] ಶತ್ರು ದೇಶದ ಧ್ವಜ ಹಾಕಿ ಜೈ ಕಾರ ಹಾಕುವವರು ನಾಳೆ ದೇಶಕ್ಕೆ ದ್ರೋಹ ಬಗೆಯಲಾರರು ಏಂಬ Bond ಬರೆದು ಕೊಡಬಲ್ಲಿರಾ? ಅವರು ಮಾಡಿದ ತಪ್ಪನ್ನು ಯಾವ ರಾಜಕೀಯ ಪಕ್ಷ ವಿರೋಧಿಸಿತು? ಮೂರ್ತಿ ಮಾಡಿದ್ದು ತಪ್ಪೆ ಆದರೆ ವ್ಯತ್ಯಾಸವಿದೆ ಎರಡೂ ತಪ್ಪುಗಳಲ್ಲಿ ಅಲ್ಲವೆ?

ಇನ್ನು ಎರಡನೆ ವಿಚಾರ RSS. ಇದರ ಪ್ರಭಾವ ಯಾವರೀತಿಯಲ್ಲಿ ಪ್ರತಾಪ್ ಸಿಂಹ ಮೇಲೆ ಆಗಿದೆ? ಅವರ comparison ನಲ್ಲಿ silly ಅನ್ನಿಸುವ point ನಿಮಗೆ ಸಿಕ್ಕಿದ್ದು ಎಲ್ಲಿ? [ಅದೆಲ್ಲೋ ಮಸೀದಿ ಮೇಲೆ ಪಾಕಿಸ್ಥಾನದ ಬಾವುಟ ಹಾರಿಸಿದವರನ್ನು ಜೈಲಿಗೆ ಹಾಕದೆ ಬಿಟ್ಟಿದ್ದಾರೆ]. ಅದೆಲ್ಲೋ ಯಾವುದೋ ಮಸೀದೆಯ ಮೇಲೆ ಪಾಕಿಸ್ತಾನದ ಬಾವುಟ ಹಾರಿಸಿದರೆ ಯಾರ ಅಭ್ಯಂತರವೂ ಇಲ್ಲ, ಆದರೆ ಅದು ಆಗಿರುವುದು ನಮ್ಮ ದೇಶದಲ್ಲಿ. ಮಸೀದೆ [ಭಾರತದಲ್ಲಿ] ಮೇಲೆ ಪಾಕಿಸ್ತಾನದ ಬಾವುಟ ಹಾರಿಸಿದರೆ ಶಿಕ್ಷೆ ಇಲ್ಲ ಎಂದಮೇಲೆ ರಾಷ್ತ್ರಗೀತೆಗೆ ಅವಮಾನ(?) ಮಾಡಿದವರಿಗೆ ಶಿಕ್ಷೆ ಯಾಕೆ?

ವಿನಾಯಕ ಮುತಾಲಿಕ ದೇಸಾಯಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 11, 2007 - 7:41pm — ramesh-m

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

ramesh-m's picture

ಎಲ್ಲೋ ಮಸೀದಿಯ ಮೇಲೆ ಪಾಕಿಸ್ಥಾನದ ದ್ವಜ ಹಾರಿಸಿದರು ಎಂದು ಎಷ್ಟು ಸುಲಭವಾಗಿ ಬರೆಯಲು ಸಾಧ್ಯವಾಗುತ್ತದೆ ನೋಡಿ. ಎಲ್ಲಿ ಹಾರಿಸಿದ್ದರು ಎಂಬುದನ್ನೊಮ್ಮೆ ಕೇಳಬೇಕು ಎಂದು ನಿಮಗನ್ನಿಸುವುದಿಲ್ಲ. ಉಡುಪಿಯಲ್ಲಿ ನಡೆದ ಒಂದು ಮೆರವಣಿಗೆಯಲ್ಲಿ ಯಾರೋ ಪಾಕಿಸ್ಥಾನದ ಬಾವುಟ ಹಿಡಿದಿದ್ದರೆಂದು 'ಉದಯವಾಣಿ' ಪತ್ರಿಕೆ ಬರೆದಿತ್ತು. ಅದು ಭಾರತದ ಬಹುತೇಕ ದರ್ಗಾಗಳಲ್ಲಿ ಕಾಣಿಸುವ ಹಸಿರು ಬಾವುಟ. ಅದರ ಚಿತ್ರವೂ ಪ್ರಕಟವಾಗಿದ್ದರಿಂದ ಬುದ್ಧಿ ಇರುವವರಿಗೆಲ್ಲಾ ಅದು ಅರ್ಥವಾಯಿತು. ಪರಿಣಾಮವಾಗಿ ಮರುದಿನ ಪತ್ರಿಕೆ ಕ್ಷಮೆ ಕೇಳಿತು. ಮಸೀದಿಯ ಮೇಲೆ ಹಾರುತ್ತಿದ್ದ ಪಾಕಿಸ್ತಾನ ದ್ವಜವನ್ನು ಯಾರು ನೋಡಿದ್ದು. ಆ ವರದಿ ಎಲ್ಲಿ ಪ್ರಕಟವಾಗಿತ್ತು ಎಂಬುದನ್ನೂ ತಾವು ತಿಳಿಸಿದರೆ ಒಳ್ಳೆಯದಿತ್ತು.

ಇನ್ನು ದೇಶದ್ರೋಹದ ಪ್ರಶ್ನೆ. ಈ ದೇಶಕ್ಕೆ ದ್ರೋಹ ಬಗೆದವರು ಯಾರು ಹೆಚ್ಚು ಎಂಬುದರ ಬಗ್ಗೆ ಯಾರೂ ಹೇಳಬೇಕಾಗಿಲ್ಲ. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಶೇಕಡಾ 90ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ಇರುವವರು ಯಾರು? ಲಂಚ ತಿಂದು, ವಿದೇಶೀ ವ್ಯಾಪಾರಿಗಳನ್ನು ಸ್ವಾಗತಿಸುತ್ತಿರುವವರು ಯಾರು? ಇವೆಲ್ಲವೂ ದೇಶ್ರದ್ರೋಹದ ಪರಿಧಿಯೊಳಗೆ ಬರುವುದಿಲ್ಲವೇ?

ಅದೆಲ್ಲಾ ಬಿಡಿ. ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎನ್ನುತ್ತಲೇ ದಲಿತರನ್ನು ಮನೆಯ ಹೊರಗೇ ಇಡುತ್ತಿರುವ ದೇಶ ನಮ್ಮದು. ಅವರಿಗೆ ಮೀಸಲಾತಿ ದೊರೆತರೆ ಅದು ಪ್ರತಿಭೆಗೆ ಆದ ಅನ್ಯಾಯ ಎಂದು ಗೊಣಗುವ ಮಹಾ ಪ್ರತಿಭೆಗಳು ಕಳೆದ ಅರವತ್ತು ವರ್ಷಗಳಲ್ಲಿ ಕಡಿದು ಕಟ್ಟೆ ಹಾಕಿದ್ದು ಏನು?

ರಮೇಶ್ ಸಮಗಾರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 11, 2007 - 8:01pm — muralihr

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

muralihr's picture

ತಪ್ಪಿದ್ರೇ ಕ್ಷಮೆಯಿರಲಿ . ಪ್ರತಾಪರವರ ಬರವಣಿಗೆ ಯನ್ನು ನಾನು ಮು೦ಚೆ ಓದುತ್ತಿದ್ದೆ.
RSS ಗುರೂಜಿಯವರನ್ನು ಹೊಗಳಿ ಬರೆಯುತ್ತಿದ್ದರು. ಆಗ ಅವರ Ideology ಯ ಬಗ್ಗೆ ಅರಿವಾಯಿತು.
ನೋಡಿ !!! ಈ Ideology ಇರುವುದು ಒ೦ದು ರೀತಿ ಘರ್ಷಣೆಗೆ ಕಾರಣ. ಅದು ಒಬ್ಬರನೊಬ್ಬರನ್ನು ಅರಿತು ಕೊಳ್ಳಲು ಬಿಡುವುದಿಲ್ಲಾ.
ಯಾವುದೇ Ideology ತಗೊಳ್ಳಿ ಮಾವೋ , RSS, Islam,Hitler, -- ಎಲ್ಲಾ ಮಾಡಿದ್ದು ಏನೂ ??
ಒಬ್ಬರನೊಬ್ಬರು ಕೊ೦ದಿದ್ದು.
ಮಹಾತ್ಮ ಗಾ೦ಧೀ Ideology ತಗೊಳ್ಳಿ -- ಅದು ಕೂಡ ನಮ್ಮಲ್ಲಿರುವ ಹಿ೦ಸೆಯನ್ನು ಮುಚ್ಚಿ ನಾವೆಲ್ಲ ಒಳ್ಳೆ ಯವರು ಅನ್ನುವ
ಅಸತ್ಯವನ್ನು ಸೃಷ್ಟಿ ಮಾಡ್ತು. ಅದರ ಪರಿಣಾಮ ಕಾ೦ಗ್ರೆಸ್.
ಅದರಿ೦ದ ನಾನು RSS na ತಿರಸ್ಕರಿಸಿದ್ದು ಮುಖ್ಯವಲ್ಲಾ.... Ideology ಮನುಷ್ಯನಿಗೆ ಮಾಡಿದ್ದು ಏನು ??
2>>>
ಪತ್ರಕರ್ತನಿಗೆ ಜವಾಬ್ದಾರಿ ಹೆಚ್ಚು,
ಗೀತೆಯಲ್ಲಿ ಒ೦ದು ಮಾತು ....
ಅನುದ್ವೇಗಕರ೦ ವಾಕ್ಯಮ್ ಸತ್ಯ೦ ಪ್ರಿಯಹಿತ೦ ಚ ಯತ್
ಸ್ವಾಧ್ಯಾಯಾಭ್ಯಸನ೦ ಚೈವ ವಾಗ್ಮಯಮ್ ತಪ ಉಚ್ಯತೇ...

ಆತನ ಜೀವನ್ ನಿತ್ಯ ತಪಸ್ಸಾ ಗ ಬೇಕು.
ಒಬ್ಬರ ಮುಖದ ಮೇಲೆ ತಿಪ್ಪೆ ಎರಚುವುದಲ್ಲಾ.
ಆ ಕೆಲಸ ಯಾರ್ ಬೇಕಾದರೂ ಮಾಡ ಬಹುದು.
ಆದರೆ ಇ೦ದು ನಮ್ಗೇ ಬೇಕಾಗಿರುವುದು ನಮ್ಮಲ್ಲಿ ದ್ವೇಷ ಬಿತ್ತುವ ಬರವಣಿಗೆ ಯಲ್ಲಾ..ಅರಿವು ಮೂಡಿಸುವ ಬರವಣಿಗೆ.

ಇನ್ನೊ೦ದು ದೇಶ ದ್ರೋಹಿಗಳ ಮಾತು.
ಇರುವುದೊ೦ದು ಭೂಮಿ , ಅದನ್ನು ರಾಜಕಾರಣಿಗಳು - ಪುರೋಹಿತರು ಗೆರೆ ಎಳೆದು ಹಾಳು ಮಾಡಿದ್ದಾರೆ.
ಗೆರೆ ವಾಸ್ತವವಾಗಿಲ್ಲಾ.... ಆದರೆ ನಿಮ್ಗೇ ಸ್ಖೊಲ ನಲ್ಲಿ ಮ್ಯಾಪ್ ತೋರಿಸಿ
ಇದು ಪಾಕಿಸ್ಥಾನ್...ಇದು ನಮ್ಮ ಶತ್ರು... ಹೀಗೆ ಹೇಳಿ ಹೇಳಿ.......ಏನ್ ಮಾಡಿದ್ದಾರೆ ನೀವೆ ಹೇಳಿ.....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 11, 2007 - 8:07pm — mahesha

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

mahesha's picture

ಅನುದ್ವೇಗಕರ೦ ವಾಕ್ಯಮ್ ಸತ್ಯ೦ ಪ್ರಿಯಹಿತ೦ ಚ ಯತ್
ಸ್ವಾಧ್ಯಾಯಾಭ್ಯಸನ೦ ಚೈವ ವಾಗ್ಮಯಮ್ ತಪ ಉಚ್ಯತೇ...

ಮುರಳಿ ಅಣ್ಣ.. ಮಸ್ತ ಶ್ಲೋಕ!!

ಇದರ ಮುಂದೇ ಇನ್ನೊಂದು ಮಾತಿಲ್ಲ.

ಉದ್ವೇಕಕರವಲ್ಲದ ಸತ್ಯವಾಕ್ಯವನ್ನು ಪ್ರಿಯವಾಗಿ ಹಿತವಾಗಿ, ಹೇಳಲ್ವಡುವುದು ವಾಗ್ಮಯ( ಕಾವ್ಯ/ಕವಿತ್ವಂ ). ಸರಿಯಾ?

ಸ್ವಾಧ್ಯಾಯಾಭ್ಯಸನಂ = ಸ್ವ + ಅಧಿ + ಆಯ + ಅಭಿ + ಅಸನಂ = ಸ್ವ + ಅಧ್ಯಾಯ + ಅಭ್ಯಸನಂ ಅಂದ್ರೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 11, 2007 - 8:33pm — mahesha

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

mahesha's picture

ಈ ಶ್ಲೋಕದ ಅರ್ಥ

"ಯಾವುದು ಅನುದ್ವೇಗಕರವೂ, ಸತ್ಯವೂ, ಪ್ರಿಯರಿಗೆ ಹಿತವೂ, ಆಗಿದೆಯೋ ಅದೇ ವಾಕ್ಯವು | ವಾಙ್ಮಯವಾದ ಸ್ವಾಧ್ಯಾಯ ಮತ್ತು ಅಭ್ಯಾಸಗಳಿಂದ ಯಾವುದು ಕೂಡಿದೆಯೋ ಅದೇ ತಪಸ್ಸು ||" ಅಂತೆ

ದೊಡ್ಡವರು ಹೇಳಿಕೊಟ್ಟರು.!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 11, 2007 - 10:08pm — muralihr

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

muralihr's picture

ಗುರುವೇ ನಿನ್ನ ಪಾದ Xerox ಮಾಡಿ Scan ಮಾಡ್.. ಇಲ್ಲಿ ಫೋಸ್ಟ್ ಮಾಡೂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2007 - 11:56am — mahesha

ಉ: ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

mahesha's picture

ನನ್ನ ಕಾಲ್ ಕನ್ನಡಿಕೆ ಯಾಕೆ, ಕೈಯದು ನೆಡೆಯಲ್ಲವಾ?

ಇಲ್ಲೂ ಕಾಲು ಕೈಗಿಂತ ಮೇಲಾ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ತಳ'ವೇ ಸುಟ್ಟು ಹೋಗುತ್ತಿರುವಾಗ 'ಕೆನೆ'ಯ ಬಗ್ಗೆ ಚರ್ಚೆ?
  • ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ,...
  • ಮೋದಿ,ಬೀಜೆಪಿ,ಪ್ರತಾಪ ಸಿಂಹ
  • ಮತಾಂತರದ ಬಗ್ಗೆ ಒಂದು ಒಳ್ಳೆ ಲೇಖನ..
  • ಪತ್ರಕರ್ತ
Syndicate content

ಲೇಖಕರು

ರಮ್ಯ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ನೆಗೞ್
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
  • ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 6:28pm
  • anamadheya
    ಉ: ....ಬಾರದು ಎಂದುಕೊಂಡರೆ!
    August 21, 2008 - 5:40pm
  • Sunil Jayaprakash
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 5:33pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • madhava_hs
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • kannadakanda
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:50pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:45pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:30pm
  • jp.nevara
    ಉ: ನಾಳೆ ಎಂಬುದು ಕತ್ತಲು
    August 21, 2008 - 4:27pm
ಇನ್ನಷ್ಟು


"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator