ಸಂ"ಪದ": ಎಸ್ಕಲೇಟರ್
ಚಲಿಸುವ ಮೆಟ್ಟಲುಗಳನ್ನು ಎಸ್ಕಲೇಟರ್ ಎನ್ನುತ್ತಾರೆ. ಶಿವರಾಮ ಕಾರಂತರು ತಮ್ಮ "ಅಪೂರ್ವ ಪಶ್ಚಿಮ" ಕೃತಿಯಲ್ಲಿ ಇವಕ್ಕೆ ಸೋಪಾನ ಪಥ ಎಂಬ ಪದಪ್ರಯೋಗ ಮಾಡಿದ್ದಾರೆ. ನಿಮಗೇನನಿಸುತ್ತೆ?

- Login or register to post comments
- 580 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಉ: ಸಂ"ಪದ": ಎಸ್ಕಲೇಟರ್
ಸ್ವಲ್ಪ ಕಠಿಣವಾಯಿತು ಅನಿಸುತ್ತೆ. ವಿಜಯಕರ್ನಾಟಕದಲ್ಲಿ ಕೆಲಸಮಯ ಹಿಂದೆ ಆರಂಭವಾಗಿರುವ ’ದಿನಪದ’ ಅಂಕಣದಲ್ಲಿ ಈ ಪದಕ್ಕೆ ಕನ್ನಡ ಸಂವಾದಿಯೊಂದನ್ನು ಬಳಸಿದ್ದರು. ’ಏರಿಳಿ’ ಎಂಬುದು ಆ ಶಬ್ದ. ವಿದ್ವಾನ್ ಜಿ.ವೆಂಕಟಸುಬ್ಬಯ್ಯನವರು ಸೂಚಿಸಿದ ಶಬ್ದವಂತೆ ಅದು. ಎಸ್ಕೆಲೇಟರ್ ಅನ್ನುವುದು ಕೇವಲ ’ಏರಿಸುವುದ’ನ್ನು ಮಾತ್ರ ಧ್ವನಿಸಿದರೆ ’ಏರಿಳಿ’ ಎನ್ನುವುದು ಇಳಿಯುವುದಕ್ಕೂ ಹೊಂದುತ್ತದೆ - ಆ ಮೂಲಕ ಆ ಯಂತ್ರಕ್ಕೆ ಸೂಕ್ತ ಕನ್ನಡ ಪದವಾಗಿದೆ. ಸೋಪಾನ ಪಥ ಎನ್ನುವುದನ್ನು ಕನ್ನಡಿಸಿದರೆ ’ಮೆಟ್ಟಿಲ ದಾರಿ’ ಎಂದಷ್ಟೇ ಆಗುತ್ತದೆ ಮತ್ತು ಎಸ್ಕೆಲೇಟರ್‍ನ ಚಿತ್ರಣ ಕೊಡುವುದರಲ್ಲಿ ಸೋಲುತ್ತದೆ ಎಂದು ನನ್ನ ಭಾವನೆ. ಆದ್ದರಿಂದ ಶಿವರಾಮ ಕಾರಂತರಿಗೆ ಪೂರ್ತಿ ಗೌರವ ಸಲ್ಲಿಸುತ್ತಾ ’ಏರಿಳಿ’ಯನ್ನೇ ಬಳಸುವ. ಏನಂತೀರಿ?
ಉ: ಸಂ"ಪದ": ಎಸ್ಕಲೇಟರ್
ಹಾಗೆ ನೋಡಿದರೆ ಏರಿಳಿ ಕೂಡಾ ಎಸ್ಕಲೇಟರ್‍ನ ಕಲ್ಪನೆ ಕೊಡುವುದಿಲ್ಲ. ಏರಿಳಿ ಅಂದರೆ ನಾವೇ ಏರಿಳಿಯಬೇಕು ಅನ್ನುವ ಅರ್ಥ ಕೊಡುವುದಿಲ್ಲವೇ? ಆದರೆ ಎಸ್ಕಲೇಟರ್‍ನಲ್ಲಿ ನಾವು ಸುಮ್ಮನೆ ನಿಂತರೆ ಏರಿಳಿಯಬಹುದು.
ಹಾಗಾಗಿ ಬೇರೆ ಪದ ಹುಡುಕಬೇಕು.
*ಅಶೋಕ್
ಉ: ಸಂ"ಪದ": ಎಸ್ಕಲೇಟರ್
ಮಹೇಶರೆ,
ಚಲತ್+ ಸೋಪಾನಮ್ ಇದು ಚಲತ್ಸೋಪಾನಮ್ ಎಂದಾಗಬಹುದೇ ವಿನಃ ಚಲಚ್ಚೋಪನಮ್/ಚಲಚ್ಚೋಪಾನಮ್ ಆಗಲು ಸಾಧ್ಯವಿಲ್ಲ. ಚಲಚ್ಚಿತ್ರಮ್ ಅನ್ನುವುದು ಶ್ಚುತ್ವ ಸಂಧಿ. "ಸ್ತೋ: ಶ್ಚುನಾ ಶ್ಚು:" ಎಂಬ ಸೂತ್ರದ ಪ್ರಕಾರ ಸಕಾರ ಮತ್ತು ತವರ್ಗದ ಅಕ್ಷರಗಳಿಗೆ ಶ ಮತ್ತು ಚವರ್ಗ ಅಕ್ಷರಗಳು ಪರವಾದಾಗ ಶ/ಚವರ್ಗಗಳೇ ಆದೇಶವಾಗುತ್ತವೆ. ಚಲತ್+ಸೋಪಾನಂ ಇಲ್ಲಿ ಅಂಥ ಪ್ರಕ್ರಿಯೆ ಬಂದಿಲ್ಲ. ಆದ್ದರಿಂದ ನೀವು ಹೇಳಿದ ರೂಪ ಆಗಲಾರದು. [ಇಷ್ಟು ಉದ್ದ ಬರೆದದ್ದನ್ನು ನೀವು ’ಪಾಂಡಿತ್ಯ ಪ್ರದರ್ಶನ’ ಎಂದುಕೊಳ್ಳಲಾರಿರಿ ಎಂದುಕೊಂಡಿದ್ದೇನೆ
]
ಅಶೋಕರು ಹೇಳಿದಂತೆ ’ಏರಿಳಿ’ ಅನ್ನುವುದು ಒಂದು ಆಜ್ಞೆಯಂತೆ ತೋರುತ್ತದೆ. ಅದರ ಬದಲು ನೀವು ಹೇಳಿದ ’ಏರಿಳಿಗೆ’ ಚೆನ್ನಾಗಿದೆ. ಇನ್ನೂ ಹೊಸ ಪದ ಹುಡುಕುವುದಕ್ಕೆ ಅಭ್ಯಂತರವೇನಿಲ್ಲ. ಆದರೆ ಅದು ಇಷ್ಟೇ ಸರಳವಾಗಿ, ಚೊಕ್ಕವಾಗಿ ಇದ್ದರೆ ಆಯಿತು ಅಷ್ಟೆ. ಯಾವುದಕ್ಕೂ ಎಸ್ಕೆಲೇಟರ್ ಬದಲಿಗೆ ಏರಿಳಿಗೆಯನ್ನು ಹತ್ತಿ ಇಳಿಯುವುದನ್ನು ಮೊದಲು ಮಾಡುವ, ಅಲ್ವಾ?
ಉ: ಸಂ"ಪದ": ಎಸ್ಕಲೇಟರ್
ಶ್ಚುತ್ವ ಸಂಧಿ ಅಂತಾನೂ ಇದೆಯೇ!
ಕಾರಂತರು "ಏರಿಳಿಗೆ" ಶಬ್ದ ಅನುಮೋದಿಸಿದ ಹಾಗೆ ಕನಸು ಬಿತ್ತು.
*ಅಶೋಕ್
ಉ: ಸಂ"ಪದ": ಎಸ್ಕಲೇಟರ್
ಅಶೋಕ್,
ಎಂಥ ಪುಣ್ಯ ಮಾಡಿದ್ರಿ ನೀವು. ಬೀಸಣಿಗೆ, ಈಳಿಗೆ, ಬಾಚಣಿಗೆ ರೀತಿಯಲ್ಲಿ ಏರಿಳಿಗೆ. ಸಖತ್ತಾಗಿದೆ. ಏರಿಳಿಯುವುದಕ್ಕೆ ಬಳಸುವುದು ಏರಿಳಿಗೆ. ಸೂಪರ್. ನನಗೆ ಇಷ್ಟವಾಯಿತು. ಅಂದ ಹಾಗೆ ನಿಮಗೆ ಕಣಸು ಅಂದ್ರೆ ಗೊತ್ತಾ. ಈ ಪುಟ ನೋಡಿ - ನನ್ನ ಕನ್ನಡ ಕಲಿಕೆ -೧. ನಮ್ಮ ಶ್ರೀಕಾಂತ ಮಿಶ್ರಿಕೋಟಿಗಳು, ಈ ಕಾಮೆಂಟಿನಲ್ಲಿ - ನಿಮ್ಮ ಕನಸಿನ ( ಕಣಸೋ ಏನೋ? ) ದಾರಿ ಕಾಯುತ್ತಿರುವೆ ಕಾರಂತರದ್ದೇ ಒಂದು ಪದ್ಯವನ್ನು ಪ್ರಸ್ತಾಪಿಸಿದ್ದರು.
ಉ: ಸಂ"ಪದ": ಎಸ್ಕಲೇಟರ್
ರಾಷ್ಟ್ರಪತಿ ಕಲಾಂ ಹೇಳೋದು "ಕಣಸು ಕಾಣಿರೋ" ಎಂದು "ಕನಸು ಕಾಣಿ" ಅಂತಲ್ಲ ಎಂದು ಗೊತ್ತು ಮಾಡಿದ ಸುನೀಲ್‍ರಿಗೆ(ಸು"ನಿಲ್" ಅಲ್ಲ) thanks
*ಅಶೋಕ್
ಉ: ಸಂ"ಪದ": ಎಸ್ಕಲೇಟರ್
ಉ: ಸಂ"ಪದ": ಎಸ್ಕಲೇಟರ್
ಅಹುದುಹದು. ನಿಮ್ಮ ಮಾತು ದಿಟವೋ ದಿಟ.
ಇಲ್ಲಿ ಸಂಧಿ ಬಿಡಸಲು ಯಾರು ನೆರವಿಗೆ ಇರಲಿಲ್ಲ. ನೀವು ಬಂದಿರಿ.
ನಂಗೆ ಶ್ಚುತ್ವ, ಷ್ಚುತ್ವ, ಜಸ್ತ್ವ ಇವೆಲ್ಲ ಮರೆತು ಹೋದಂತೆ ಇದೆ.
"ಚಲತ್ಸೋಪಾನಂ" ಸರಿಯೋ ಸರಿ. ನನಗೆ ಏರಿಳಿಗೆ ಹಿಡಿಸಿದೆ!
ಇನ್ನು "ಪಾಂಡಿತ್ಯ ಪ್ರದರ್ಶನ" ಇದನ್ನು ಮಾಡಬೇಕು ಸಾರ್ ...
ಕೊಳಂಬೆ ಪುಟ್ಟಣ್ಣಗೌಡರು ಅವರು "ತಿಳಿಗನ್ನಡಿ ನುಡಿವಣಿಗಳು"ಅಲ್ಲಿ ಹೀಗೆ ಹೇಳಿದ್ದಾರೆ.
ಬಳಗದಿಂ ಮುಸುಕಿರ್ಪ ತಿಳಿದವನಾದೊಡೇಂ
ಮನೆಯೊಳಗವನೊಂದು ಬೀಸುಕಲ್ಲಂತೆ|
ತಿಳಿದು ತಿದ್ದಿರ್ಪವಂಗೆಲ್ಲಿಯುಂ ಬೆಲೆಯಂತೆ
ಕಡಲಿಂದ ಮೇಲೆದ್ದ ಬಲೆವಣಿಯಂತೆ ||
ಬಳಗದಿಂ(ದ) ಮುಸಕಿ ಇರ್ಪ ತಿಳಿದವನು ಆದೊಡೆ ಏನ್? ಮನೆಯೊಳಗೆ ಅವನು ಒಂದು ಬೀಸುಕಟ್ಟಂತೆ. ತಿಳಿದು ತಿದ್ದಿ ಇರ್ಪಂಗೆ ಎಲ್ಲಿಯುಂ ಬೆಲೆಯಂತೆ. ಕಡಲಿಂದ ಮೇಲೆದ್ದ ಬಲೆವಣಿಯಂತೆ.
ತಿಳಿದುಕೊಂಡು ಬಳಗದವರನ್ನು ತಿದ್ದದೇ ಇರುವವನು, ಮನೆಯುಲ್ಲಿ ಇರುವ ಬೀಸುಕಲ್ಲಂತೆ. ಆದರೆ ತಿಳಿದು ತಿದ್ದುವವನಿಗೆ ಎಲ್ಲೆಡೆ ಬಲೆಯಿದೆ. ಅವನು ಕಡಲಿಂದ ಮೇಲೆ ಬಂದ ಬಲೆಯುಳ್ಳ ಮಣಿಯಂತೆ.
ಹೀಗೆ ನೀವು ಬೆಲೆವಣಿಯಂತೆ. ನನ್ನನ್ನು ತಿದ್ದಿದ್ದಕ್ಕೆ ಬಹಳ ನನ್ನಿ!!
-ಮಾಯ್ಸ
ಉ: ಸಂ"ಪದ": ಎಸ್ಕಲೇಟರ್
ಸಂಸ್ಕೃತದಲ್ಲಿ - ಚಲಚ್ಚೋಪನಂ( ಚಲತ್ + ಸೋಪಾನಂ ; ಚಲತ್ + ಚಿತ್ರಂ = ಚಲಚ್ಚಿತ್ರಂ ತರ )
ಕನ್ನಡದಲ್ಲಿ = ಸರಿಯುವ ಮೆಟ್ಟಿಲು. ಸರ-ಮಟ್ಟಿಲ್ಲು!
"ಏರಿಳಿಗೆ" ಅಂತ ಮಾಡಿದರೆ ಅದು ಏರಲು, ಇಳಿಯಲು ಒಂದು instrument.
ಉ: ಸಂ"ಪದ": ಎಸ್ಕಲೇಟರ್
"ಏರಿಳಿಗೆ" ಸರಳ ಪದವೇನೋ ಸರಿ. ಆದರೆ ಅದು ಎಲಿವೇಟರ್ ಅಥವಾ ಎಸ್ಕಲೇಟರ್ ಯಾವುದಾದ್ರೂ ಆಗಬಹುದಲ್ವಾ??
ಉ: ಸಂ"ಪದ": ಎಸ್ಕಲೇಟರ್
ಎಲಿವೇಟರ್ = ಏತ...
ನೀರೇತ = ನೀರನ್ನು ಎಲಿವೇಟ್ ಮಾಡುವುದು.
ಏಟ = general ಎಲಿವೇಟರ್
ಉ: ಸಂ"ಪದ": ಎಸ್ಕಲೇಟರ್
ಸರಿಯುವ ಸೋಪಾನ, ಅಥವಾ ಸರಿವ ಸೋಪಾನ ಆದೀತೆ ?
ಉ: ಸಂ"ಪದ": ಎಸ್ಕಲೇಟರ್
ಚಿಕ್ಕದಾದರೆ ಚೊಕ್ಕ!
*ಅಶೋಕ್