Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತತ್ವಜ್ಞಾನ

ಅರ್ಧಸತ್ಯದ 'ಆವರಣ'

June 11, 2007 - 10:56am — mahesha

http://prajavaniepaper.com/pdf/2007/06/11/20070611a_006100001.jpg
ಪ್ರಜಾವಾಣಿಯು 'ಆವರಣ'ದ ಗದ್ದಲದಿಂದ ತುಸು ದೂರವೇ ಇತ್ತು. ಪ್ರಜಾವಾಣಿಯಲ್ಲಿ ಬಂದಿರುವ ಈ ಅನಿಸಿಕೆಯನ್ನು ನೋಡಿ.

ನನ್ನ ಒಳನಿಸಿಕೆಯಲ್ಲಿ, ಇದು ಒಳ್ಳೆಯ ಮಾತು. ಬಹಳ ಅಳೆದು-ಸುರಿದು ಹದಮಾಡಿ ಹೇಳಿದ್ದಾರೆ.

ಅಂತೂ ಇಂತೂ ಇದನ್ನು ಹೊರತಂದ ಪ್ರಜಾವಾಣಿಗೆ ಜೈ! Smiling

‹ ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ? ಶ್ರೀರಾಮಚಂದ್ರ ಹೇಗೆ ಸತ್ತರು? ›
  • ತತ್ವಜ್ಞಾನ
Ornamental seperator
  • Login or register to post comments
  • 836 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 11, 2007 - 12:02pm — jaiguruji

ಉ: ಅರ್ಧಸತ್ಯದ 'ಆವರಣ'

jaiguruji's picture

Smiling

ಹೊಸದೇನಿಲ್ಲ, ಅದೇ typical ಬರಹ. ನಿಮ್ಮ ಅನಿಸಿಕೆಯನ್ನ ನೋಡಿ ಪ್ರಜಾವಾಣಿ ಬರಹ ಓದಿದೆ ನಿರಾಶೆಯಾಯಿತು. ಜೆ.ಆರ್. ಲಕ್ಷ್ಮಣರಾಯರ ಪತ್ರದ ಮುಖ್ಯಾಂಶದಲ್ಲಿ ಸಣ್ಣ ತಪ್ಪಿದೆ, ಇರಲಿ ದೊಡ್ಡವರೆಂದ ಮಾತ್ರಕ್ಕೆ ತಪ್ಪು ಮಾಡಬಾರದೆಂದು ಯಾವುದೇ ನಿಯಮ ಇಲ್ಲವಲ್ಲ!

ಮತ್ತೆ ಮತ್ತೆ ’ಮನುಸ್ಮೃತಿ’, ’ಶಂಕರ’ ’ಮಧ್ವ’ ಇತ್ಯಾದಿಗಳ ಬರುತ್ತಿರುವದರಿಂದ ಒಂದು ಮಾತು ಹೇಳಬಯಸುವೆ.

ಇವತ್ತಿನ ಶಂಕರ, ಮಧ್ವ ಇತ್ಯಾದಿಗಳ ಅನುಯಾಯಿಗಳಾರೂ, ಹಿಂದಿನವರೇನು ಬರೆದಿದ್ದಾರೋ ಅದನ್ನು ಶಬ್ದಶಃ ಅನುಸರಿಸುತ್ತಿಲ್ಲ. ಅದರಲ್ಲಿ ಒಳ್ಳೆಯದು ಬಂತು ಕೆಟ್ಟದ್ದೂ ಬಂತು. ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ. (ಬೇಕಿದ್ದಲ್ಲಿ ನೂರಾರು ಉದಾಹರಣೆ ಕೊಡಬಲ್ಲೆ!) ಆ ಬದಲಾವಣೆಯ ನೇತೃತ್ವವನ್ನು ಅನೇಕ ಬಾರಿ ಧಾರ್ಮಿಕ ಮುಖಂಡರೆ ವಹಿಸಿರುವದು ಕೂಡ ಕಂಡು ಬರುತ್ತದೆ. ಆದರೆ ಅದೇ ಬೇರೇ ಕಡೆಗಳಲ್ಲಿ , ಮತಗಳಲ್ಲಿ ಈ ರೀತಿಯ ಬದಲಾವಣೆಯ ಗಾಳಿ ಬೀಸುತ್ತಿಲ್ಲ. ಯಾಕೆಂದರೆ ಅವರು ಹಳೆಯ ನಂಬಿಕೆಗಳನ್ನು, ಅದೇಶಗಳನ್ನು ವಿಮರ್ಶೆಗೆ ಒಳಪಡಿಸಲು ಒಪ್ಪುತ್ತಿಲ್ಲ. ಸಮಸ್ಯೆಯಿರುವದೇ ಇಲ್ಲಿ!

ಆ ನಂಬಿಕೆಗಳನ್ನೆ ಅಧಾರವಾಗಿಟ್ಟುಕೊಂಡು ಇತಿಹಾಸದಲ್ಲಿ ಆದ ಕ್ರೌರ್ಯದ ಬಗ್ಗೆ ಬರಯಲುಬಾರದು, ಮಾತೂ ಆಡಬಾರದು, ಹೊಸದಾಗಿ ಏನನ್ನೂ ಹೇಳಬಾರದು ಎಂದರೇ ಅದು ಆತ್ಮವಂಚನೆಯಲ್ಲವೇ?

ಇಷ್ಟಾಗಿಯೂ ಜೆ.ಆರ್. ಲಕ್ಷ್ಮಣರಾಯರು ’ಆವರಣ’ದಲ್ಲಿರುವ ಅರ್ಧಸತ್ಯಗಳಾವವು ಎಂಬುದನ್ನು ಹೇಳದೇ ’ಜಾಣ್ಮೆ’ ಮೆರೆದಿದ್ದಾರೆ. ಹೇಳಿದ್ದರೆ ಅದನ್ನು ಪರೀಕ್ಷಿಸಬಹುದಿತ್ತು.

  • Login or register to post comments
  • link
  • Email this ಪ್ರತಿಕ್ರಿಯೆ
June 11, 2007 - 5:28pm — ramesh-m

ಉ: ಅರ್ಧಸತ್ಯದ 'ಆವರಣ'

ramesh-m's picture

ಹೌದು ಜೈಗುರೂಜಿಯವರು ಹೇಳಿದಂತೆ ಲಕ್ಷ್ಮಣರಾಯರದ್ದು ಟಿಪಿಕಲ್ ಬರಹ. ಹಾಗಿದ್ದರೆ ಭೈರಪ್ಪನವರ ಬರಹವೂ ಟಿಪಿಕಲ್ ಜಾತಿವಾದಿಯ ಬರಹವೇ ಅಲ್ಲವೇ? ಆವರಣ ಕಾದಂಬರಿಯಲ್ಲಿರುವ ರಜಿಯಾ ಅಲಿಯಾಸ್ ಲಕ್ಷ್ಮಿ ಎಂಬ ಪಾತ್ರವೊಂದು 'ಹಿಂದೂ ಧರ್ಮ ತನ್ನ ತಪ್ಪನ್ನು ಒಪ್ಪಿಕೊಂಡಿರುವ' ಬಗ್ಗೆ ಮಾತನಾಡುತ್ತದೆ. ಅಂಥದ್ದೇ ಮಾತುಗಳನ್ನು ಇಲ್ಲಿ ಜೈಗುರೂಜಿಯವರೂ ಬರೆದಿದ್ದಾರೆ. ಮಾಧ್ವ ಮತವನ್ನು ಪಾಲಿಸದವರೆಲ್ಲಾ ನಿತ್ಯ ನಾರಕಿಗಳೋ ಅಲ್ಲವೋ ಗೊತ್ತಿಲ್ಲ. ದಲಿತನಾದ ನನಗೆ ಉಡುಪಿ ಮಠದಲ್ಲಿ ಬ್ರಾಹ್ಮಣರ ಪಂಕ್ತಿಯಲ್ಲಿ ಊಟ ಹಾಕುವುದಿಲ್ಲ ಎಂಬುದೂ ಅಷ್ಟೇ ನಿಜ. ಇನ್ನೂ ಗುರೂಜಿಯವರು ಹೇಳುತ್ತಿರುವ ಹಿಂದೂ ಧರ್ಮ ಬದಲಾದುದು ಬಹುಶಃ ಮೇಲ್ಜಾತಿಯವರ ಮಟ್ಟಿಗೆ ಮಾತ್ರ ಇರಬೇಕು. ಕಂಬಾಲಪಲ್ಲಿಯಲ್ಲೂ, ಕೈರ್ಲಾಂಜಿಯಲ್ಲೂ ದಲಿತರನ್ನು ಕೊಂದದ್ದು ಈ ಬದಲಾದ ಧರ್ಮವೇ? ಹಾಗಿದ್ದರೆ ಈ ಬದಲಾವಣೆ ನನ್ನಂಥವರಿಗೆ ಹೆದರಿಕೆ ಹುಟ್ಟಿಸುತ್ತದೆ.
ರಮೇಶ್ ಸಮಗಾರ

  • Login or register to post comments
  • link
  • Email this ಪ್ರತಿಕ್ರಿಯೆ
June 11, 2007 - 7:12pm — muralihr

ಉ: ಅರ್ಧಸತ್ಯದ 'ಆವರಣ'

muralihr's picture

ನೋಡಿ ಈ ಮಠಗಳಿಗೆ ಹೋಗದೆಯಿರುವುದು ಒ೦ದು ಪುಣ್ಯ. ಕಾರಣ ಇವು ಜಾತೀಯತೆಯನ್ನು ಭಿತ್ತಿ ಮನಸ್ಸನ್ನು ಸ೦ಕುಚಿತಗೊಳಿಸುತ್ತದೆ.
ಇನ್ನು ಅವರ ಜೊತೆ ಊಟ ಮಾಡುವುದು ಬೇಸರವನ್ನು ತರುತ್ತದೆ.
ಆದರೆ ಧರ್ಮ ಪ್ರಚೋದಿಸುವುದು ಸತ್ಯವನ್ನು . ನಾನು ಒ೦ದು ಮಾತು ಹೇಳ್ತೀನಿ, ಸುಮಾರು ವರ್ಷ ದ ಹಿ೦ದೆ ರಮಣ ಮಹರ್ಷಿಗಳ
ಸ೦ಬ೦ಧಿಗಳನ್ನು ಭೇಟಿ ಮಾಡೋಕ್ಕೆ ಹೋಗಿದ್ದೆ. ಅವರ ಹೆಸರು ಶ್ರೀ ಗಣೇಶ್. ಅವರು ರಮಣ ಮಹರ್ಷಿಗಳ ಆಶ್ರಮದಿ೦ದ ಬರುವ Mountain Path ಪುಸ್ತಕದ Editor ಕೆಲ್ಸಾ ಮಾಡ್ತಿದ್ದರು.

" ಸತ್ಯವನ್ನು ಒಬ್ಬ ದಲಿತನು ತಿಳಿದಿದ್ದರೆ ,ಅವನ ಪಾದದ ಬಳಿ ಹೋಗಿ ಕೂರಬೇಕು"ಎ೦ದು ಶ೦ಕರಚಾರ್ಯರು ಹೇಳಿದ್ದು. ಅವರು ಹಾಗೆ ರಮಣ ಮಹರ್ಷಿಗಳ ನ೦ತರ ಸತ್ಯದ ಬೆಳಕನ್ನು ಚೆಲ್ಲಿದ ಮನುಷ್ಯ ನೆ೦ದರೆ ಶ್ರಿ ನಿಸರ್ಗದತ್ತ ಮಹಾರಾಜ್. ನಿಸರ್ಗದತ್ತ ಮಹಾರಾಜ ಹುಟ್ಟಿ ನಿ೦ದ ದಲಿತ.
ಆದರೆ ಜೀವನದಲ್ಲಿ ಒಬ್ಬ ಮಹಾರ್ಷಿ.
ಮಾರುತಿಯೆ೦ದು ಹೆಸರು. ಮದುವೆ ಮಾಡಿಕೊ೦ಡು ಸಾಲ ಮಾಡಿ ಸ೦ಸಾರದ ತಾಪತ್ರಯಗಳನ್ನು ಅನುಭವಿಸಿದವನು.
ಕೂಲಿ ಮಾಡಿ ಹೊಟ್ಟೆಯನ್ನು ತು೦ಬಿಸಿಕೊ೦ಡವನು. ಕೊನೆಗೆ ಬೀಡಿ ಮಾಡುವ ಸಲುವಾಗಿ ಪೆಟ್ಟಿ ಗೆಯ ಅ೦ಗಡಿಯನ್ನು
ತೆರೆದು ಅಲ್ಲಿ ತನ್ನ ಧ್ಯಾನ ಮತ್ತು ಸಾಧನೆಯನ್ನು ಮಾಡಿದವನು.
ಅವರದು ಮಹಾಚೈತನ್ಯ. ಅವರು ಮು೦ಚೆ ಬೀಡಿ ಅ೦ಗಡಿಯನ್ನು ಇಟ್ಟಿದ್ದರು. ನ೦ತರ ಅವರಿಗೆ ಒಮ್ಮೆ ಜ್ಞಾನೋದಯವಾಯ್ತು. ಶ್ರೀ ಗಣೇಶ್ರವರು ಆಶ್ರಮದಲ್ಲಿಯೇ ಇದ್ದು ಸಾಧನೆಯನ್ನು ಮಾಡಿದ ಒಬ್ಬ ಸಾಧಕ ಮತ್ತು ತಪಸ್ವಿ. ಅವರಿಗೆ ಆಶ್ರಮದಲ್ಲಿ ಮೇಲ್ವರ್ಗದ ಸ೦ನ್ಯಾಸಿಗಳು ಮತ್ತು ಸಾಧಕರುಇದ್ದರೂ, ಆತ ಶ್ರೀ ನಿಸರ್ಗದತ್ತ ಮಹಾರಾಜ್ ರವರನ್ನು ಹುಡುಕಿಕೊ೦ಡು ಮು೦ಬೈಗೆ ಹೊದರು. ಅವರ ಸೇವೆಯಲ್ಲಿ ಕೆಲವು ದಿನವನ್ನು ಕಳೆದರು.
ಗೀತೆಯನ್ನು ಪರಮ ಪವಿತ್ರವೆ೦ದು ಭಾವಿಸುವ ಹಿ೦ದುಗಳಿಗೆ ಗೀತೆಯಷ್ಟೇ ಪವಿತ್ರವು ಮತ್ತು ಉಜ್ವಲವು ಆದ ಪುಸ್ತಕವನ್ನು ನಿಸರ್ಗದತ್ತ ಮಹಾರಾಜ್ ರವರ ಮಾತಿನಲ್ಲಿದೆ. ಆ ಪುಸ್ತಕದ ಕೊ೦ಡಿ ಇಲ್ಲಿದೆ,
"In fact, many regard it as the only book of spiritual teaching really worth studying."
ಎ೦ಬುದು ವಿಚಾರವ೦ತರ ಮಾತು.
http://www.shankaracharya.org/i_am_that.php

ಭಾರತದ ತಾತ್ತ್ವಿಕ ಚಿ೦ತಕರಲ್ಲಿ , ಎಲ್ಲರನ್ನು ಮೀರಿಸಿರುವವರು.
ಇಷ್ಟೊ೦ದು ಉಜ್ವಲ ಮಾತುಗಳು ಬೇರೆ ಯಾವ ಧರ್ಮದ ಪುಸ್ತಕದಲ್ಲಿ ಇದೆ.
ಈಗ ನಿಸರ್ಗದತ್ತ ರು ಒಬ್ಬ ಋಷಿಯಾದರು. ಈ ಪುಸ್ತಕ ವೇದವಾಯ್ತು.
ನನ್ನ ಮಟ್ಟಿಗೆ ಆಧುನಿಕ ಸಮಸ್ಯೆಗಳಲ್ಲಿ ಸಿಳುಕಿದ ಈ ಕಾಲದಲ್ಲಿ ಈ ಪುಸ್ತಕ ಓದುವುದು ಮುಖ್ಶ್ಯ.
ನನ್ನ ಉದ್ದೇಶ ಇಲ್ಲಿ ಕೇವಲ ನಿಸರ್ಗದತ್ತ ಮಹಾರಾಜ್ರವರ ಬರವಣಿಗೆಯತ್ತ ಕರೆದುಕೊ೦ಡು ಹೋಗುವುದಷ್ಟೆ.
ಈ ವಾದ ವಿವಾದದಲ್ಲಿ ಅಷ್ಟು ಆಸಕ್ತಿ ಇಲ್ಲಾ.
ಅ೦ದ ಹಾಗೆ ಶ೦ಕರಾಚಾರ್ಯರು ಹಾಗ೦ದರೂ ಹೀಗ೦ದರೂ ಅನ್ನುವ ಬದಲಿ ನಾವೇ ಅವರ ಬರವಣಿಗೆಯನ್ನು ಓದಿ
ತಿಳಿದುಕ್ಕೊಳ್ಳೋಣ.
ಇಲ್ಲಿ ನೀವು ಗಮನಿಸ ಬೇಕಾದ ಅ೦ಶ ಶಿಷ್ಯನಾದವನು ಗುರುವಿನ ಬಳಿ ಎಷ್ಟು ಪ್ರಶ್ನೆಯನ್ನು ಕೇಳ್ತಾನೆ.
ಅವನಿಗೆ ಉತ್ತರ ಸಿಗುವವೆರೆಗೂ ಗುರು ಉತ್ತರವನ್ನು ಹೇಳುತ್ತಾನೆ.
ಶ೦ಕರಾಚಾರ್ಯರು ಪೂರ್ಣ ಬರಹ Internet (http://www.shankaracharya.org/) ನಲ್ಲಿ ಲಭ್ಯ.
ಪ್ರಜಾವಾಣಿಯಲ್ಲಿ ಹೇಳಿರುವ ಆರೋಪ ನನಗೆ ಕ೦ಡು ಬರಲಿಲ್ಲಾ.
"Google Search shudra site:shankaracharya.org".
ಆದರೆ ಪುರಾಣಗಳಾಲ್ಲಿ ಕ೦ಡು ಬರುತ್ತದೆ.
ಪುರಾಣಗಳ ಮತ್ತು ಹೋಮ ಇತ್ಯಾದಿ ವಿರುದ್ಧ ಎದ್ದು ಬ೦ದ೦ತಹ ಸಾಹಿತ್ಯ ಉಪನಿಷದ್ ಗಳು.
ಭೈರಪ್ಪ ತಮ್ಮ ಬರಹಗಳಿಗೆ ಆಧಾರದ ಸಮೇತ ಮಾತಾಡುವ೦ತೆ ಈ ಬರಹಗಾರರಿಗೂ ಆಧಾರದ ಜೊತೆಯಲ್ಲಿ
ಮಾತಾಡುವುದಕ್ಕೆ ಹೇಳಬೇಕು.

ಇಲ್ಲಿ ಯಾರೋ ಪುಣ್ಯಾತ್ಮರು " ನಿಮ್ಗೇ ಒ೦ದು ಆಶ್ರಮ ಕಟ್ಟಿಸೋಣವೇ ??" ಅ೦ದಾಗ ಬ೦ದ ವೇದ ಮಾತು.
Q: Sir, have you any wants or wishes. Can I do anything for you?
M: What can you give me that I do not have? Material things are needed for contentment. But I am contented with myself. What else do I need?
Q: Surely, when you are hungry you need food and when sick you need medicine.
M: Hunger brings the food and illness brings the medicine. It is all nature's work.
Q: lf I bring something I believe you need, will you accept it?
M: The love that made you offer will make me accept.
Q: If somebody offers to build you a beautiful Ashram?
M: Let him, by all means. Let him spend a fortune, employ hundreds, feed thousands.
Q: Is it not a desire?
M: Not at all. I am only asking him to do it properly, not stingily, half-heartedly. He is fulfilling his own desire, not mine. Let him do it well and be famous among men and gods.
Q: But do you want it?
M: I do not want it.
Q: Will you accept it?
M: I don't need it.
Q: Will you stay in it?
M: If I am compelled.
Q: What can compel you?
M: Love of those who are in search of light.
****************************************************************************

Sematic Religions ಅ೦ತಾ ಕರೆಯುವ ಧರ್ಮಗಳಲ್ಲಿ ಕಾಣುವುದು ಕೇವಲ ಮನಸ್ಸನ್ನು ವಿಕಾರ ಗೊಳಿಸಿ ಒಬ್ಬ Follower
ನ ಸೃಷ್ಟಿ ಮಾಡುತ್ತೆ. ಆತ ಮತೀಯ ನಾಗಿ ಕೊಲೆ ಮತ್ತು ಯುದ್ಧವನ್ನು ಮಾಡಿ ತನ್ನ ಮತವನ್ನು ಪ್ರಚಾರ ಮಾಡುತ್ತಾನೆ.
ಭೈರಪ್ಪ ನವರ್ ಆಕ್ಷೇಪ ಕೂಡ ಇಷ್ಟೇ. "ಪ್ರಶ್ನೆ ಎತ್ತ ಬೇಡಾ - ಅವರು ಎನಾದರೂ ಮಾಡಲಿ ಅದೇ ಧರ್ಮ "
http://en.wikipedia.org/wiki/Nisargadatta_Maharaj

Nisargadatta's father, Shivrampant, worked as a domestic servant in Mumbai and later as a petty farmer in Kandalgaon, a small village in the back-woods of Ratnagiri district of Maharashtra. He had a Hindu background and upbringing.

At 18 Maruti's father died, prompting him and his brother to leave their family behind to find work in Mumbai. Maruti found work as a small-time clerk but quickly opened a small-goods store, mainly selling bidis – leaf-rolled cigarettes. In 1924 he married Sumatibai and they had three daughters and a son.

ಅವರ ಪುಸ್ತಕವನ್ನು ಅನುವಾದ ಮಾಡಿದವನು
http://en.wikipedia.org/wiki/Maurice_Frydman
ಈತ ಮಹಾತ್ಮ ಗಾ೦ಧಿಗೆ ಚರಕವನ್ನು ಮಾಡಿಕೊಟ್ಟವನು.
ಯೂರೋಪ್ ನಲ್ಲಿ ಯುದ್ಧವಾಗುವಾಗ ಭಾರತದಲ್ಲಿ ಬ೦ದು ನಿ೦ತು ಇಲ್ಲಿಯ ಮಣ್ಣಿಗೆ ಸೋತವನು.
ಭಾರತದ ಆಗಿನ ಸಾಧಕರ ಜೊತೆ (Nehru, Aurobindo, Jiddu Krishnamurthi, Ramana mAharshi) ಒಡನಾಟ
ಉಳ್ಳವನು.
ಕೊನೆಗೆ ನಿಸರ್ಗದತ್ತರ ಬಳಿ ಕಾಲವನ್ನು ಹೆಚ್ಚು ಕಳೆದು. ಈ ಪುಸ್ತಕವನ್ನು ಬರೆದನು .
http://www.shankaracharya.org/i_am_that_9.php

  • Login or register to post comments
  • link
  • Email this ಪ್ರತಿಕ್ರಿಯೆ
June 11, 2007 - 7:30pm — mahesha

ಉ: ಅರ್ಧಸತ್ಯದ 'ಆವರಣ'

mahesha's picture

ಯಪ್ಪ!!! Smiling

ನಂಗೆ ಒಂದು ಮಾಧ್ವರ ಹಾಡು ನೆಪ್ಪಾಯ್ತು. ಅದರಲ್ಲಿ ಹಿಂಗೆ ಬರುವುದು.

"ಅದ್ವೈತಿಗಳನ್ನು ಧ್ವಂಸಗೊಳಿಸಿರ ಮಧ್ವೇಶ" ಅಂತ. ಆದರೆ ಇಂದು ನಮ್ಮ ದೇಶ/ರಾಜ್ಯದಲ್ಲಿ ಅದ್ವೈತಿಗಳೇ ಹೆಚ್ಚು Smiling!
ಭಗವದ್ಗೀತೆಯನ್ನು "ಅದ್ವೈತಾಮೃತವರ್ಷಿಣೀಂ"( ಇರ್ಮೆಯಲ್ಲದ/ಒರ್ಮೆಯ ಅಮರ್ದುಗರೆಯವಳೇ ) ಅಂತ ಕರೆಯುವರು.

'ಹಿಂದು ಮತ/ಧರ್ಮ' ವಾದರೇ ಅದು ಅದ್ವೈತವನ್ನು ಹೇಳುವುದೋ, ದ್ವೈತವನ್ನು ಹೇಳುವುದೋ?

ನನ್ನ ತಿಳಿವಂತೆ
ಅದ್ವೈತ = God and God's Creation are same. Hence all creations are equal to God. Worshiping Gods creation is equal to worshiping Him.

Islam/ದ್ವೈತ = God and God's creation are different. Hence God is superior and His Creation is inferior. Worshiping Gods creations is inferior. Worshipping God is only superior thing.

ಆದರೆ ಇದಕ್ಕೆಲ್ಲ ಮೊದಲು God ಇದೆಯಾ? ಅಂತ ನಿಕ್ಕುವ ಮಾಡಿಕೊಳ್ಳಬೇಕು Smiling

  • Login or register to post comments
  • link
  • Email this ಪ್ರತಿಕ್ರಿಯೆ
June 11, 2007 - 7:49pm — ramesh-m

ಉ: ಅರ್ಧಸತ್ಯದ 'ಆವರಣ'

ramesh-m's picture

ಮುರುಳಿಯವರು ಶಂಕರಾಚಾರ್ಯರನ್ನು ಯಾವ ಭಾಷೆಯಲ್ಲಿ ಓದಿಕೊಂಡರೋ ಗೊತ್ತಿಲ್ಲ. ಶಂಕರಾಚಾರ್ಯರು ದಲಿತ, ಶೂದ್ರರ ಬಗ್ಗೆ ಹೇಳಿರುವುದನ್ನೇ ಸಂಗ್ರಹಿಸಿ ಕೆ.ಎಸ್. ಭಗವಾನ್ ಅವರು ಕನ್ನಡದಲ್ಲೇ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಇದು ಪ್ರಕಟವಾಗಿ ಹತ್ತಾರು ವರ್ಷಗಳೇ ಕಳೆಯಿತು. ಬೆಂಗಳೂರಿನ ಯಾವುದೇ ಅಂಗಡಿಯಲ್ಲಿ ಇದು ದೊರೆಯಬಹುದು. ಒಮ್ಮೆ ಖರೀದಿಸಿ ಓದಬಹುದು. ಇನ್ನು ವಾದಕ್ಕೆ ವಾದವೆಂಬಂತೆ ವಾದ ಬೆಳೆಸುವುದು ನನಗಿಷ್ಟವಿಲ್ಲ. ಸೆಮಿಟಿಕ್ ಧರ್ಮಗಳು ರಿಜಿಡ್ ಎನ್ನುವ ನೀವೆಲ್ಲರೂ ತಥಾಕಥಿತ ಹಿಂದೂ ಧರ್ಮ ದಲಿತರನ್ನು ತುಳಿದಿದ್ದರ/ತುಳಿಯುತ್ತಿರುವುದರ ಬಗ್ಗೆ ಮಾತನಾಡಿದರೆ ಚರ್ಚೆಯನ್ನು ಬೇರೆಡೆಗೆ ಎಳೆಯುವುದೇಕೆ?

ಶೂದ್ರ ಶಂಬೂಕನನ್ನು ರಾಮ ಕೊಲ್ಲುವಾಗಲೇ ಇಂಥದ್ದೊಂದು ಪರಂಪರೆ ಇರುವುದು ತಿಳಿಯುವುದಿಲ್ಲವೇ? ಮನುಧರ್ಮ ಶಾಸ್ತ್ರದಲ್ಲಿ ದಲಿತನಿಗೆ ವಿಧಿಸಲಾಗಿರುವ ಶಿಕ್ಷೆಗಳೆಲ್ಲವೂ ವಧೆಯ ಮಟ್ಟದಲ್ಲಿಯೇ ಇವೆಯಲ್ಲವೇ? ಶಂಕಾರಾಚಾರ್ಯರೂ ಚಾತುರ್ವರ್ಣ್ಯವನ್ನು ಮೀರಿರಲಿಲ್ಲ ಎಂಬುದು ಶಂಕರಾಚಾರ್ಯರ ಕುರಿತ ರಾಧಾಕೃಷ್ಣನ್ ಅವರ ಬರೆಹದಲ್ಲೂ ಸ್ಪಷ್ಟವಾಗಿದೆಯಲ್ಲವೇ?

ಶಂಕರಾಚಾರ್ಯರೇನೋ ಆ ಕಾಲದವರು. ಅವರಿಗೆ ತಿಳಿಯಲಿಲ್ಲ. ಈಗಿನವರಿಗೆ- ಸ್ವಾಮೀಜಿಗಳನ್ನು ಬಿಡಿ. ಖೈರ್ಲಾಂಜಿ, ಕಂಬಾಲಪಲ್ಲಿಗಳಲ್ಲಿ ದಲಿತರನ್ನು ಕೊಂದವರಿಗೆ ಏನು ಹೇಳೋಣ. ಗೋವನ್ನು ಉಳಿಸುವುದಕ್ಕೆ ದಲಿತರನ್ನು ಕೊಲ್ಲುತ್ತೇವೆ ಎಂದು ಹೇಳಿಕೆ ನೀಡುವ ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳಿಗೆ ಏನನ್ನೋಣ.
ರಮೇಶ್ ಸಮಗಾರ

  • Login or register to post comments
  • link
  • Email this ಪ್ರತಿಕ್ರಿಯೆ
June 11, 2007 - 8:00pm — mahesha

ಉ: ಅರ್ಧಸತ್ಯದ 'ಆವರಣ'

mahesha's picture

ರಮೇಶ ಮತ್ತು ಮುರಳಿ

ಶಂಕರ ಮತ್ತು ಮಧ್ವ ಮತ್ತು ರಾಮಾನುಜರನ್ನು ದಲಿತವಾದಕ್ಕೆ ಎಳೆಯುವುದು ಸರಿಯಿಲ್ಲ.

ಇವರಿಗೆ ಈಗಿನ 'ದಲಿತ' ಗೊತ್ತಿರಲಿಲ್ಲ. ಅವರು ಅವರವರ ಸಮಾಜದ ಕಟ್ಟುಪಾಡಿನಲ್ಲಿ ಬದುಕಿದವರೇ ಆದರೂ, ಸಮಾಜದಲ್ಲಿ ತಮ್ಮ ತತ್ವವನ್ನು ಮುಂದಿಡುವಲ್ಲಿ ಜಸಕಂಡವರು.

ಶಂಕರ ಮತ್ತು ಮಧ್ವರ ಸಿದ್ಧಾಂತವೇನಿದ್ದರೂ ಅದೇ ಸಂಪ್ರದಾಯಕ್ಕೆ ಹೊಂದಿಕೊಂಡು ಬೆಳೆದವರಿಗೆ ಇಲ್ಲ ಆ ಸಂಪ್ರದಾಯಕ್ಕೆ ಅಂಟಿಕೊಳ್ಳಲು ಹಂಬಲಿಸುವವರಿಗೆ.
ಶಂಕರರ ಸಿದ್ಧಾಂತವು ಆಗ ವೈದಿಕರನ್ನು ಹಚ್ಚು ಸೆಳೆಯಿತು. ವೈದಿಕ ಸಂಪ್ರದಾಯಕ್ಕೆ ಆಗಿನ ಕಾಲದಲ್ಲಿ ಬೌದ್ಧರ ಹೊಡೆತದಿಂದ ತಪ್ಪಿಸಿಕೊಳ್ಳಲು ಒಂದು ಊರುಗೋಲು ಬೇಕಿತ್ತು ಅದು ಶಂಕರರಾದರು.( ಭೈರಪ್ಪನವರ ಸಾರ್ಥ )

ನನಗೆ ಒಂದು ತಿಳಿಯಲ್ಲ. ಯಾಕೆ ದಲಿತರು ಅದ್ವೈತಿ/ದ್ವೈತಿಗಳ ಗುಡಿಗೆ ಹೋಗಬೇಕು? ಅವರಿಗೆ ಈ ಸಿದ್ಧಾಂತಗಳೇಕೆ ಬೇಕು?

ತಮ್ಮದೇ ಆದ ಸಿದ್ದಾಂತವನ್ನು ಮಾಡಿಕೊಂಡು, ಬಸವಣ್ಣ ಅವರ ಮಂದಿಯಂತೆ ಇರಬಹುದಲ್ಲ. ಇವರು ನಮ್ಮನ್ನು ಸೇರಿಸಿಕೊಳ್ಳಿ ಅಂತ ಹೋಗುವುದು, ಅವರು ಸೇರಿಸಿಕೊಳ್ಳದೇ ಇರುವುದು.

ಶಂಕರರ ಸಿದ್ಧಾಂತ ಗುಡಿ/ಜಾತಿಗೆ ಹೆಚ್ಚು ಒತ್ತು ಕೊಟ್ಟಿಲ್ಲ ಅಂತ ನನ್ನ ಅನಿಸಿಕೆ!

  • Login or register to post comments
  • link
  • Email this ಪ್ರತಿಕ್ರಿಯೆ
June 11, 2007 - 8:18pm — ramesh-m

ಉ: ಅರ್ಧಸತ್ಯದ 'ಆವರಣ'

ramesh-m's picture

ಅಂದರೆ ನೀವು ಹೇಳುವ ಹಾಗೆ ಶಂಕರಾಚಾರ್ಯರು, ಮಧ್ವಾಚಾರ್ಯರು ಬದುಕಿದ್ದ ಕಾಲದಲ್ಲಿ ಇದ್ದವರು ವೈದಿಕರು ಮಾತ್ರ. ಕೆಳ ಜಾತಿಯವರು ಯಾರೂ ಇರಲಿಲ್ಲ ಎಂದೇ?
ರಮೇಶ್ ಸಮಗಾರ

  • Login or register to post comments
  • link
  • Email this ಪ್ರತಿಕ್ರಿಯೆ
June 11, 2007 - 8:25pm — mahesha

ಉ: ಅರ್ಧಸತ್ಯದ 'ಆವರಣ'

mahesha's picture

ಅಂದರೆ ನೀವು ಹೇಳುವ ಹಾಗೆ ಶಂಕರಾಚಾರ್ಯರು, ಮಧ್ವಾಚಾರ್ಯರು ಬದುಕಿದ್ದ ಕಾಲದಲ್ಲಿ ಇದ್ದವರು ವೈದಿಕರು ಮಾತ್ರ. ಕೆಳ ಜಾತಿಯವರು ಯಾರೂ ಇರಲಿಲ್ಲ ಎಂದೇ?

ವೈದಿಕರು, ಬೌದ್ಧರು, ಜಿನಿಗರು ಇದ್ದರು.

ಆದರೆ ಕೆಳ-ಜಾತಿಯವರು ವೈದಿಕೋ ಅಲ್ವೋ, ಅದು ನಾನು ಹೇಳಲಾರನು. ವೇದದಲ್ಲಿ, ವೇದಕರ್ಮದಲ್ಲಿ ನಂಬಿಕೆ ಇರುವವನು ವೈದಿಕ.
ಆಗ ಕಾಲದಲ್ಲಿ ವೇದವನ್ನು ನಂಬದ ಹಲವರಿದ್ದರು, ಇಂದೂ ಇದ್ದಾರೆ.

ಇದೇ ಅಲ್ವಾ 'ಹಿಂದು' ಪದದ ಗೊಂದಲ!!! Smiling

  • Login or register to post comments
  • link
  • Email this ಪ್ರತಿಕ್ರಿಯೆ
June 11, 2007 - 10:05pm — muralihr

ಉ: ಅರ್ಧಸತ್ಯದ 'ಆವರಣ'

muralihr's picture

ಅಯ್ಯೋ ! ಶ೦ಕರಾಚಾರ್ಯರನ್ನು ಬಿಟ್ಟು ಹಾಕಿ !
ನಿಸರ್ಗದತ್ತ ಮಹಾರಾಜ್ ನ೦ತಹ ಮಹಾ ಋಷಿಯನ್ನು ಓದಿ, ನ೦ತರ ನಮ್ಮ ದೇಶದಲ್ಲಿ ಧರ್ಮದ ವಿಚಾರವಾಗಿ ನಡೆದಿರುವ
ಚರ್ಚೆ ಎಷ್ಹ್ಟು ಗ೦ಭೀರ ಎ೦ಬುದನ್ನು ತಿಳಿದುಕೊಳ್ಳಿ.... ಆದರೆ ಇ೦ದು ಗ೦ಭೀರವಾಗಿ ಯಾವುದೇ ಚರ್ಚೆ ನಡೆಯುತ್ತಿಲ್ಲಾ.
ನೀವು ದಲಿತರನ್ನು ತುಳಿದದ್ದು ಮೇಲಿನ ಜಾತಿಯವರು ಅ೦ತೀರಾ....ಇದು ಸತ್ಯ್ಸ್ ... ನನಗೆ ತು೦ಬಾ ಬೇಜಾರಾಗುತ್ತೆ.

ಆದರೆ ಮತ್ತೊ೦ದು ನನ್ನ ಕಣ್ಣಿಗೆ ಕಾಣಿಸಿದ್ದು ದಲಿತರೇ ದಲಿತರನ್ನು ತುಳಿಯುವುದು ಅವಮಾನ ಮಾಡುವುದು ಹೆಚ್ಚು.
ನಮ್ಮ ಕ೦ಪನಿಯಲ್ಲಿ ಒಬ್ಬ security guard ಇದ್ದ. ಆತ officer ಆಗಿದ್ದೇ ತಡ ತನ್ನ ಕೆಳಗಿರುವ guard ನೆಲ್ಲಾ .. ತುಳಿದು ತನ್ನ ಹಕ್ಕು ಛಲಾಯಿಸಿದ್ದಾ.
ಅದರಿ೦ದ ನಾವು ಯಾರು ಯಾರನ್ನು ತುಳಿದರು ಅನ್ನುವುದಕ್ಕಿನ್ನಾ...ಮನುಷ್ಯ ಏಕೆ ಸ್ವಲ್ಪ ದುಡ್ಡೂ ಅಧಿಕಾರ ಮತ್ತು ಸಮಾಜದಲ್ಲಿ ಮಾನ್ಯತೆ ಸಿಕ್ಕರೆ ಕ್ರೂರನಾಗುತ್ತಾನೆ ?? ಈ ಪ್ರಶ್ನೆಗೆ ಉತ್ತರ ಸಿಕ್ಕರೆ ನೀವು ಯಾರನ್ನು ತುಳಿಯುವುದಿಲ್ಲಾ.
ಒ೦ದು ಹೆಜ್ಜೆ ಕಡಿಮೆಯಾದೀತು.

ಮೊನ್ನೆ ನಾನು ಪಾರ್ಕ್ ನಲ್ಲಿ ಕುಳಿತ್ತಿದ್ದೆ. ಒಬ್ಬ ಮುದುಕ ಪಾರ್ಕನಲ್ಲಿ ಒ೦ದು ಪುಸ್ತಕ ಓದುತ್ತಿದ್ದ.
"Argumentative Indian"....by Amartya Sen.
ತನ್ನ ಕಥೆಯನ್ನು ತಾನೇ ಹೇಳಲು ಪ್ರಾರ೦ಭಿಸಿದ.
ಆತ ಇ೦ಜಿನಿಯರ್ ಆದದ್ದು . ದಲಿತನಾಗಿ ಮು೦ದೆ ಬ೦ದದ್ದು. ಸಮಾಜದಿ೦ದ ಹೊರಗಿದ್ದವನು
ಈಗ ಜಯನಗರದಲ್ಲಿ ಒಳ್ಳೆ ಮನೆ .. ಮಕ್ಕಳೆಲ್ಲಾ .. America ದಲ್ಲಿ ....
ತು೦ಬಾ ಒಳ್ಳೆ ಮನುಷ್ಯ. ಆದರೆ ಅವನು ನಿಜವಾಗಲು ಮನೆಯನ್ನು ಬಿಟ್ಟು ಬ೦ದಿದ್ದಾ.
ಅವನು ತನ್ನ ಪಕ್ಕದ ಮನೆಯವರು "ಬ್ರಾಹ್ಮಣ(???)"ರು ಎನ್ನುವುದನ್ನು ಹೇಳಿದ್ದಾ.
ತನ್ನ್ ಮಕ್ಕಳು ಅವನ ಮಕ್ಕಳಿಗಿನ್ನ ಹೆಚ್ಚು Marks ತಗೊ೦ಡಿದ್ದು ಇನ್ನೂ ತು೦ಬಾ Personel details ಹೇಳೀ..
ಅವನೊಡನೆ ಮತಾಡುತ್ತ .. ತಿಳಿದಿದ್ದು .. ಅವ್ನೂ ಮೇಲ್ವರ್ಗದ ಮನುಷ್ಯ ನಾಗಿದ್ದಾನೆ.
ಅವನು "ಜಾತಿ"ಯತೆಯನ್ನು ಬಿಟ್ಟಿರಲಿಲ್ಲಾ. ಎಷ್ಟೊ ವಿಚಾರವನ್ನು ಹೇಳಿದ.
ಎಷ್ಟೋ ಜನರನ್ನು ಬೈದ. ಆದರೆ ನಿಜವಾಗಲೂ ಅವನು ಒಬ್ಬ "ಬ್ರಾಹ್ಮಣ(??????)" ನಾಗಿದ್ದ.

ಅಲ್ಲಿ ಧೂಳು ಎಬ್ಬಿಸೊಕ್ಕೆ ಪರಕೆ ಹಿಡಿದು ಕೆಲಸದವಳು ಬ೦ದಳು.
ಅವಳ ಮುಖದಲ್ಲಿ ಅದ್ಯಾಕ್ಕೋ ನಗೆಯಿತ್ತು. ಇವನು ಮಾತ್ರ ಚಿ೦ತಾಕ್ರ೦ತಾನಾಗಿದ್ದ.
ಕಥೆ ದೊಡ್ಡದು .. ಮತ್ತೊಮ್ಮೆ ಹೇಳ್ತೀನಿ...
ಸಾರಾ೦ಶ : ಕ್ರಾ೦ತಿಯಲ್ಲಿ ನಾವು ಯಾವುದನ್ನು ವಿರೋಧ ಮಾಡೋಕ್ಕೆ ಹೋಗ್ತೀವೋ ಅದೇ ನಾವಾಗ್ತೀವಿ.

  • Login or register to post comments
  • link
  • Email this ಪ್ರತಿಕ್ರಿಯೆ
June 11, 2007 - 10:15pm — muralihr

ಉ: ಅರ್ಧಸತ್ಯದ 'ಆವರಣ'

muralihr's picture

ಇಲ್ಲಿ "ಬ್ರಾಹ್ಮಣ" ಅನ್ನುವ ಪದ "" ನಲ್ಲಿ ಬಳಾಕೆ ಯಾಗಿದೆ. ಆಧುನಿಕ ಕಾಲದಲ್ಲಿ "ಬ್ರಾಹ್ಮಣ" ಅ೦ದರೆ ಯಾರು ??
ಕಾರನ ಈಗ ಯಾರು ಮ೦ತ್ರ , ಸ೦ಧ್ಯಾವನೆ , ಮೂಜೆ ಎಲ್ಲಾ ಮಾಡೋದಿಲ್ಲಾ,
"ಬ್ರಾಹ್ಮಣ" ಪದದ ಬಳಿಕೆ ಯಾರು ಯಾವ ರೀತಿ ಬಳಕೆ ಮಾಡ್ತಾರೇ ??

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 10:58am — Sunil Jayaprakash

ಉ: ಅರ್ಧಸತ್ಯದ 'ಆವರಣ'

Sunil Jayaprakash's picture

ಶಂಕರಾಚಾರ್ಯರು ದಲಿತ, ಶೂದ್ರರ ಬಗ್ಗೆ ಹೇಳಿರುವುದನ್ನೇ ಸಂಗ್ರಹಿಸಿ ಕೆ.ಎಸ್. ಭಗವಾನ್ ಅವರು ಕನ್ನಡದಲ್ಲೇ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ಎಂಬ ಪುಸ್ತಕ ಪ್ರಕಟಿಸಿದ್ದಾರೆ.

ರಮೇಶ ಸಮಗಾರ ಅವರೇ, ನಾನು ನೀವುಗಳು ಓದಿಕೊಂಡಿರುವಷ್ಟು ಶಂಕರರನ್ನಾಗಲೀ, ಮಧ್ವರನ್ನಾಗಲೀ ಓದಿಕೊಂಡಿಲ್ಲ. ನೀವು ಪ್ರಸ್ತಾಪಿಸಿದ, ಈ ಪುಸ್ತಕದ ಆಯ್ದ ಭಾಗಗಳನ್ನು ಎಲ್ಲರೊಡನೆ ಹಂಚಿಕೊಳ್ಳಲು ಸಾಧ್ಯವೇ ? ಎಲ್ಲರಿಗೂ ತಾವೇ ಓದುವ ಹಂಬಲವಿರುತ್ತದೆಯಾದರೂ, ಇಂತಹ ಚರ್ಚೆಗಳು ಮೊದಲುಗೊಂಡಾಗ, ಪುಸ್ತಕದ ಕೆಲವು ಭಾಗಗಳನ್ನು ಹಂಚಿಕೊಳ್ಳುವುದರಿಂದ ಚರ್ಚೆಗೆ ಒಂದು ತಕ್ಕುಮೆ ಇರುತ್ತದೆ.

ಅಂದ ಹಾಗೆ, ಶಂಕರಾಚಾರ್ಯರು ಪ್ರತಿಗಾಮಿಯೇ ಎಂಬುದರ ಬಗ್ಗೆ ಸ್ಪಷ್ಟ ಪರಿಕಲ್ಪನೆ ನನಗಿಲ್ಲ. ಆದರೆ ಈ ಪದ್ಯವಂತೂ ಶಂಕರಾಚಾರ್ಯರ ವಿವೇಕಚೂಡಾಮಣಿಯದ್ದು. ಬಿಡುವಿದ್ದಾಗ ಓದಿ ನೋಡಿ. ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 12:10pm — jaiguruji

ಉ: ಅರ್ಧಸತ್ಯದ 'ಆವರಣ'

jaiguruji's picture

ರಮೇಶ,

ಇನ್ನೊಂದು ಮಾತು, ಭಗವಾನ್ ರ ಪುಸ್ತಕದ ಬಗ್ಗೆ ಆಕ್ಷೇಪ ಅಂತಲ್ಲ, ಆದರೆ ಸಾಮಾನ್ಯವಾಗಿ ನಮ್ಮ ಜನ ಸಂಶೋಧನೆಗೆ ಅಥವಾ ಕೇವಲ ಒಂದು ಸಾದ ಲೇಖನ ಬರೆಯಲು ಕೂಡ ಭಾರತೀಯ ಇತಿಹಾಸ, ವೇದ, ಉಪನಿಷತ್ ಇತ್ಯಾದಿಗಳ refer ಮಾಡಬೇಕಾಗಿ ಬಂದರೆ ಅವರು ಅವಲಂಬಿಸೋದು western scholars ಬರೆದಿರುವ ಅಥವಾ ಅನುವಾದಿಸಿರುವ ಹೊತ್ತಗೆಗಳನ್ನು. ಇದು ಅನೇಕ ಸಲ ತಪ್ಪು ತಿಳುವಳಿಕೆಗಳಿಗೆ ದಾರಿ ಮಾಡುತ್ತಿದೆ. ಏಕೆಂದರೆ ಈ western scholars ನಮ್ಮ ಗ್ರಂಥಗಳ ಸಾರವನ್ನು ಎಷ್ಟರ ಮಟ್ಟಿಗೆ ಗ್ರಹಿಸಿ ಅನುವಾದಿಸಿದ್ದಾರೆ ಎಂದು ನನಗೆ ಸಂಶಯವಿದೆ. ನಾನು ನೋಡಿದಂತೆ, ಕೇಳಿ ತಿಳಿದಂತೆ ಅವರು ವಸ್ತುನಿಷ್ಠರಾಗಿ ಅನುವಾದ ಮಾಡಿಲ್ಲ.

ಈಗ ವಿಷಯಕ್ಕೆ ಬರೋದಾದ್ರೆ, ನಮ್ಮ ಭಗವಾನ್ ಕೂಡ ಶಂಕರರ ಬಗ್ಗೆ ಪುಸ್ತಕ ಬರೆಯುವಾಗ ಯಾವ ಆಧಾರಗಳನ್ನು ಅವಲಂಬಿಸಿದ್ದರು ಎಂದು ನೋಡಬೇಕಾಗುತ್ತದೆ.

ಇನ್ನೊಂದು ಸಲಹೆ,

ಹಳೆಯ ವಿಷಯ ಬಿಡಿ, ಈಗಿನ ಕಾಲದಲ್ಲಿ ಸಂಸ್ಕೃತ, ವೇದ, ಶಂಕರ ಇತ್ಯಾದಿಗಳನ್ನು ಓದಲು ದಲಿತರಾಗಲಿ, ಮುಸ್ಲಿಂರಾಗಲಿ, ಸ್ತ್ರೀಯರಾಗಲಿ ಯಾರಿಗೂ ಯಾವುದೇ ರೀತಿಯ ನಿರ್ಬಂಧವಿಲ್ಲ. ರಮೇಶ ನೀವ್ಯಾಕೆ ಒಂದು ೪-೬ ತಿಂಗಳು ಕಷ್ಟಪಟ್ತು ಭಗವಾನ್ ಬರೆದಿದ್ದನ್ನ ಮೂಲದೊಂದಿಗೆ ಹೋಲಿಸಿ ನೋಡುವ ಪ್ರಯತ್ನ ಮಾಡಬಾರದು? ನಿಮಗೆ ಸಂಸ್ಕೃತ ಕಲಿಯಬೇಕಿದ್ದಲ್ಲಿ ಹೇಳಿ, ’ಅಕ್ಷರಂ’ನಲ್ಲಿ ವಾರಾಂತ್ಯ (weekend) ಸಂಸ್ಕೃತ ತರಗತಿ ನಡಿತಿವೆ, ನೀವೂ ಸರಳವಾಗಿ ಕಲಿಬಹುದು. ಆಗ ಬೇರೆಯವರೆಲ್ಲಾ ಬರೆಯಾವತ್ತಿರುವ ಗೃಂಥಗಳ ಒಳಹೂರಣವನ್ನ ನೀವೇ ಪರಿಶೀಲಿಸಬಹುದು. ನನಗನಿಸುತ್ತೆ, ಹಾಗಾದ್ರೆ ಅದು ಒಳ್ಳೆಯ ಬೆಳವಣಿಗೆ. ನೀವು ತಯಾರಿದ್ದೀರಾ?

ನಿಮಗೆ ಮತ್ತಾವುದೇ ಸಹಾಯ ಬೇಕಿದ್ದಲ್ಲಿ ಹೇಳಿ.

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 12:24pm — mahesha

ಉ: ಅರ್ಧಸತ್ಯದ 'ಆವರಣ'

mahesha's picture

ಶಂಕಾರಾಚಾರ್ಯರೂ ಚಾತುರ್ವರ್ಣ್ಯವನ್ನು ಮೀರಿರಲಿಲ್ಲ ಎಂಬುದು ಶಂಕರಾಚಾರ್ಯರ ಕುರಿತ ರಾಧಾಕೃಷ್ಣನ್ ಅವರ ಬರೆಹದಲ್ಲೂ ಸ್ಪಷ್ಟವಾಗಿದೆಯಲ್ಲವೇ?

ಅವರು ಯಾಕೆ ಮೀರಬೇಕಿತ್ತು?

ರಮೇಶ.

ಬುದ್ಧ, ಶಂಕರ, ರಾಮಾನುಜ, ಮಧ್ವ, ಬಸವ, ಇವರೆಲ್ಲ ಇತಿಹಾಸವಾಗಿ ಹೋಗಿದ್ದರೆ. ಇವರಲ್ಲಿ 'ಹೀಗೆ ಇರಬೇಕಿತ್ತು, ಹಾಗೆ ಮಾಡಬೇಕಿತ್ತು, ಹೀಗೆ ಮಾಡಲಿಲ್ಲ, ಹಾಗೆ ಮಾಡಲಿಲ್ಲ" ಎನ್ನುವ ತಕ್ಕುದಾದುದಲ್ಲ.

ಶಂಕರರ ಗುರಿ "ನಾಲ್ಕು ವರ್ಣಗಳನ್ನು ಅಳಿಸುವದಾಗಲಿ, ಬಡವರ ಏಳಿಗೆಯಾಗಲಿ ಅಲ್ಲ" ಅವರನ್ನು "ಸಮಾಜ ಸೇವಕ" ಎಂದು ನೋಡಬಾರದು. ಇವರು ಹೇಳಿದ್ದೇನಿದ್ದರೂ 'ಆತ್ಮ'/ಆಧಿ-ಆತ್ಮ'ದ ಸುತ್ತ.

ಶಂಕರರು ಗುರಿ ಅವರು ನಂಬಿದ ಅದ್ವೈತವನ್ನು ಸಾರುವುದು, ವಾದಿಸುವುದು, "ಬೌದ್ಧ ಮತ"ದಂತಹ ಚಾರ್ವಾಕ ಮತಗಳನ್ನು ಅಲ್ಲಗಳೆಯುವುದು. ಅದನ್ನು ಅವರು ಜಸದಿಂದ ಮಾಡಿದ್ದಾರೆ. ಅವರನ್ನು ಅಷ್ಟಕ್ಕೆ ಬಿಟ್ಟು ಬಿಡೋಣ.

ಇಂದಿನ 'ದಲಿತವಾದ' ರಾಜಕೀಯದ ಸಂಗತಿ, ಅದು 'ಆಧಿ-ಆತ್ಮ'ದ ಕಡೆಯಿಲ್ಲ. ಅದಕ್ಕೆ ಇಲ್ಲಿ 'ಶಂಕರ, ಮಧ್ವ, ರಾಮಾನುಜ'ರ ಹೆಸರೆತ್ತುವುದು ತಕ್ಕುದಲ್ಲ.!

ಇನ್ನು ಬೇಕಾದರೆ 'ಮನು' ಬಗ್ಗೆ ಹೇಳಬಹುದು. ಅವನು ಹೊತ್ತಗೆ 'ಸಮಾಜ'ದ ಓಜೆ ಕುರಿತು ಇದೆಯಂತೆ.!

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 12:09pm — mahesha

ಉ: ಅರ್ಧಸತ್ಯದ 'ಆವರಣ'

mahesha's picture

http://prajavaniepaper.com/pdf/2007/06/12/20070612a_006100006.jpg

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 12:21pm — jaiguruji

ಉ: ಅರ್ಧಸತ್ಯದ 'ಆವರಣ'

jaiguruji's picture

’ಆವರಣ’ದ ಮತ್ತು ಭೈರಪ್ಪನವರ ಬಗ್ಗೆ ಬಾಯಿತೆಗೆದು ಹಲವರು ಛಿ ಥೂ ಎಂದು ಮುಖವೆಲ್ಲಾ ಉಗಿಸಿಕೊಂಡರೂ, ಕೆಲವರಿಗೆ ಆವರಣ ಜನಪ್ರಿಯತೆ ಕಂಡು ಹೊಟ್ಟೆಯಲ್ಲಿ ಬೆಂಕಿ ಬಿದ್ದಿದೆ. ಇವತ್ತು ಬಂರಿದುವ ಪ್ರಜಾವಾಣಿ ಪತ್ರ ಅದಕ್ಕೆ ಸಾಕ್ಷಿ. ಹೇಗಾದರೂ ಮಾಡಿ ಜನರನ್ನು instigate ಮಾಡಬೇಕು ಎಂಬ ಹುನ್ನಾರ ಅಷ್ಟೇ! Smiling (ಉದಾ: "ಸುಮ್ಮನಿದ್ದದ್ದು ನೋಡಿ ಸೋಜಿಗ"! ವ್ವಾಹ್!!)

ಮಾನವಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆಯಲ್ಲಾ ಉದ್ದುದ್ದ ಭಾಷಣ ಬಿಗಿಯುವ ’ಗ್ಯಾಂಗಿನ’ ಸದಸ್ಯರು ಈ ಮಟ್ಟಕ್ಕೆ ಇಳಿದದ್ದು ನೋಡಿದ್ರೆ "ಅಯ್ಯೋ ಪಾಪ" ಅನ್ಸುತ್ತೆ ! ಛೇ ! ಛೇ!! Smiling

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 1:54pm — Aram

ಉ: ಅರ್ಧಸತ್ಯದ 'ಆವರಣ'

Aram's picture

Aram

Pardon my writing in English. I am yet to install the Kannada fonts in my laptop.

The respected Prof. JR Lakshmana Rao has condemned SLB's highlighting of muslim atrocities and violent nature because such writing may lead to communal clashes.

Weren't there communal clashes before SLB wrote Aavarana? Would his not writing lessen the chances of future communal clashes?

Prof. Rao must read Yashavantha Chittala's novel, Purushotthama to understand the origins of communal clashes.

Today when the whole world is being threatened by the terrorists, we need to examine what motivates the terrorist and try to nullify the power of that fount.

SLB has revealed to us that this violence was there centuries ago and is continuing.

"You have to show violence the way it is. If you don't show it realistically, then that's immoral and harmful. If you don't upset people, then that's obscenity." _Roman Polinski.

If we accept Polanski's words, then SLB was right in portraying what he did.

Fortunately the terrorists caught recently in Mysore were not successful. Had they detonated something near the good Professor's house (God forbid !) may be, he would have a different view.

  • Login or register to post comments
  • link
  • Email this ಪ್ರತಿಕ್ರಿಯೆ
June 13, 2007 - 1:20pm — mahesha

ಉ: ಅರ್ಧಸತ್ಯದ 'ಆವರಣ'

mahesha's picture

http://vijaykarnatakaepaper.com/pdf/2007/06/13/20070613a_006101003.jpg

http://prajavaniepaper.com/pdf/2007/06/13/20070613a_006100005.jpg

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸುಪರೀಮ್ ಕೋರ್ಟೇರಿದ ಕಾವೇರಿ ಕಾವು
  • ಹೊಸದಾರಿ.. ಕನ್ನಡಕ್ಕೆ classical ನುಡಿ ಪಟ್ಟ!!
  • ಇಂದಿನ ನ್ಯೂಸ್ ರೌಂಡ್ ಅಪ್
  • ಸುದ್ದಿ - ಸೊಗಡು
  • ಬಸವಣ್ಣ ಮೂಲತಃ ಮಾದಿಗ - ಪ್ರಜಾವಾಣಿಯ ಬರಹ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator