Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಅರಳಿ ಕಟ್ಟೆ › ಹರಟೆ ಕಟ್ಟೆ

ಗೂಗಲ್ ಸರ್ಚ್ ಈಗ ಸಂಪೂರ್ಣ ಕನ್ನಡದಲ್ಲಿ ಲಭ್ಯ

September 20, 2005 - 3:31pm — hpn

ಗೂಗಲ್ ನ ಸರ್ಚ್ ಸೌಲಭ್ಯ ಈಗ ಸಂಪೂರ್ಣ ಕನ್ನಡ ಇಂತರ್ಫೇಸಿನಲ್ಲಿ (ಸಂಪೂರ್ಣ ಕನ್ನಡ ಮಾಧ್ಯಮದಲ್ಲಿ) ಲಭ್ಯ.

ಕೆಳಗಿನ ಸ್ಕ್ರೀನ್ ಶಾಟ್ ನೋಡಿ:
google-kannada

ನಿಮ್ಮ ಬ್ರೌಸರಿನಲ್ಲಿಯೂ ಗೂಗಲ್ ಕನ್ನಡದಲ್ಲೇ ಬರುವಂತೆ ಮಾಡಬೇಕೆನಿಸಿದರೆ ಗೂಗಲ್ ಸರ್ಚಿನ "preferences" ಲಿಂಕ್ ಮೇಲೆ ಕ್ಲಿಕ್ಕಿಸಿ "Ineterface language" ನಲ್ಲಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಿ.

***

ಇದನ್ನು ಸಾಕಾರಗೊಳಿಸಿದ ಕೀರ್ತಿಯೂ ಹಲವು ಕನ್ನಡಾಭಿಮಾನಿ ಕನ್ನಡಿಗರದೆ!
ಜನವರಿ - ಫೆಬ್ರುವರಿ ಸಮಯದಲ್ಲಿ ನಾನೂ ಒಂದಷ್ಟು ಅನುವಾದಗಳನ್ನು ಗೂಗಲಿನ ಅನುವಾದ ಮಾಡುವ ಇಂಟರ್ಫೇಸಿಗೆ ಸೇರಿಸಿದ್ದೆ. ಆಗ ಇಷ್ಟು ಅನುವಾದಗಳು ಆಗಿರಲಿಲ್ಲ. ಅನುವಾದ ಮಾಡಿದವರ ಪೈಕಿ ಸಂಪದದಲ್ಲಿರುವವರು ಯಾರು ಯಾರು? Smiling

ಇದರ ಕುರಿತ ಸಂಪರ್ಕಗಳು

1) ಕನ್ನಡ ಅನುವಾದಗಳಿಗಾಗಿ ಗೂಗಲ್ ಗ್ರೂಪ್ಸ್ ನಲ್ಲಿ ನಡೆದ ಮಾತುಕತೆ
2) ಅನುವಾದ ಮಾಡುವ ಇಂಟರ್ಫೇಸ್

‹ ಜ್ಯೋತಿಷ್ಯ - ಎಷ್ಟರ ಮಟ್ಟಿಗೆ ನಂಬಬಹುದು? ಸುದ್ದಿ ಸಂಪಾದಕ (RSS aggregator) ನಿಮ್ಮ Browserನಲ್ಲಿ ›
  • ಹರಟೆ ಕಟ್ಟೆ
Ornamental seperator
  • Login or register to post comments
  • 1682 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 20, 2005 - 4:58pm — Rohit

ಗೂಗಲ್ ಸರ್ಚ್

Rohit's picture

ಗೂಗಲ್ ಕನ್ನಡ ಬಹಳಷ್ಟು ಉತ್ತಮಗೊಂಡಿದೆ. ಹಾಗೇ ಸಾಕಷ್ಟು ತಿದ್ದುವಿಕೆಯೂ...ಹಿಂದೆ ಆಯ್ಕೆಗಳು ಎಂದು Preferences ಅನುವಾದಿಸಿದ್ದೂ ಈಗ ಸಮುಚಿತಗಳು ಎಂದಾಗಿದೆ. ಅನವಶ್ಯಕವಾಗಿ ಸಂಸ್ಕೃತ ಪದಗಳನ್ನು ಎಳೆದು ತರುವುದರ ಬಗ್ಗೆ ನನ್ನ ವಿರೋಧವಿದೆ.

  • Login or register to post comments
  • link
  • Email this ಪ್ರತಿಕ್ರಿಯೆ
September 20, 2005 - 5:08pm — hpn

ಸಂಸ್ಕೃತ ಪದಗಳ ಬಳಕೆ

hpn's picture

ಅನವಶ್ಯಕವಾಗಿ ಸಂಸ್ಕೃತ ಪದಗಳ ಬಳಕೆಯನ್ನು ನಾನೂ ವಿರೋಧಿಸುತ್ತೇನೆ. ಕೆಲವೊಮ್ಮೆ ಆಂಗ್ಲದಲ್ಲೇ ಉಳಿಸಿದರೂ ಪರವಾಗಿಲ್ಲ, ಅರ್ಥವಾಗದ ಯಾವುದೋ ಶಬ್ದಕ್ಕೆ ಅನುವಾದ ಮಾಡಿಬಿಟ್ಟರೆ ಅದನ್ನುಪಯೋಗಿಸುವವರಿಗೆ ಕಷ್ಟ.

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
September 20, 2005 - 5:25pm — Rohit

ಒಂದು ಉದಾಹರಣೆ

Rohit's picture

ಇಲ್ಲೊಂದು ಉದಾ. ನೋಡಿ : ಸ್ವಕೀಯತೆ ಕಾರ್ಯನೀತಿ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದರ ಅರ್ಥವೇನೆಂದು ತಲೆ ಕೆರೆದುಕೊಳ್ಳುತ್ತಿದ್ದೇನೆ. ಇನ್ನೂ ಹೊಳೆದಿಲ್ಲ. ಸಾಮಾನ್ಯವಾಗಿ ಅತಿ ಜನಪ್ರಿಯ ಇಂಗ್ಲಿಷ್ ಬಳಕೆಗಳನ್ನು ನಾನು ಹಾಗೆಯೇ ಉಳಿಸಿಬಿಡುತ್ತೇನೆ.

  • Login or register to post comments
  • link
  • Email this ಪ್ರತಿಕ್ರಿಯೆ
September 21, 2005 - 12:36pm — prakashaka

ಎಲ್ಲಾ ಓ.ಕೆ. ಆದರೆ ಗೂಗ್ಲ್ ನಲ್ಲಿ "ಕನ್ನಡ" ಇಲ್ಲ ಯಾಕೆ?

prakashaka's picture

Google.co.in ದೊರೆಯುವ ಭಾಷೆಗಳು: English हिन्दी বাংলা తెలుగు मराठी தமிழ்

ಭಾರತೀಯ ಗೂಗ್ಲ್ ತೆರೆದಾಗ (ಕನ್ನಡ ಅಥವಾ ಆಂಗ್ಲ ಭಾಷೆಯ) ಅಲ್ಲಿ ನಿಮಗೆ ಮೇಲಿನಂತೆ ಒಕ್ಕಣೆ ಸಿಗುತ್ತದೆ, ಕನ್ನಡದಲ್ಲಿಯೂ ಗೂಗಲ್ ಇದೆ ಎಂದು ಮುಖಪುಟದಲ್ಲಿ ತೋರಿಸುವುದೇ ಇಲ್ಲ. ಇಷ್ಟು ದೊಡ್ಡ ಸಿಲಿಕಾನ್ ಸಿಟಿ ಎಂಬ ಪ್ರಸಿದ್ಧಿ ಪಡೆದ ನಗರದ ಭಾಷೆಯಾದ ಕನ್ನಡಕ್ಕೆ ಅಲ್ಲಿ ಸ್ಥಾನವಿಲ್ಲವೇ?? ಮರಾಠಿ ಹಾಗೂ ಹಿಂದೀ ಎರಡೂ ಭಾಷೆಗಳು ದೇವನಾಗರಿ ಲಿಪಿಯಲ್ಲಿದ್ದರೂ ಅವೆರಡೂ ಆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿವೆ.. ನಾವೇಕೆ ಈ ನಿಟ್ಟಿನಲ್ಲಿ ಚಳವಳಿ ಮಾಡಬಾರದು?

  • Login or register to post comments
  • link
  • Email this ಪ್ರತಿಕ್ರಿಯೆ
September 21, 2005 - 3:37pm — Vinay

ಉತ್ತರ

Vinay's picture

ಸ್ವಾಮಿ,

ಮೊದಲೇ ಹೇಳಿದಂತೆ, ಮುಖಪುಟದಲ್ಲಿರುವ ಭಾಷೆಗಳು ಅದನ್ನು ಉಪಯೋಗಿಸುವವರ ಸಂಖ್ಯೆಯ ಮೇಲೆ ಆಧರಿಸಿದೆ. ಎಲ್ಲಾ ಕನ್ನಡಿಗರೂ ಗೂಗಲ್ ನ ಕನ್ನಡ ಅವತರಣಿಕೆಯನ್ನೇ ಉಪಯೋಗಿಸಿದರೆ, ಖಂಡಿತ ಕನ್ನಡ ಮುಖಪುಟದಲ್ಲಿ ಬರುತ್ತದೆ.

ಮರಾಠಿ ಮತ್ತು ಹಿಂದಿಗಳಿಗೆ ಲಿಪಿ ಒಂದೆಯಾದರೂ, ಬೇರೆ ಬೇರೆ ಭಾಷೆಗಳಲ್ಲವೇ?

  • Login or register to post comments
  • link
  • Email this ಪ್ರತಿಕ್ರಿಯೆ
September 21, 2005 - 5:21pm — hpn

ಹೌದು

hpn's picture

ಹೌದು, ವಿನಯ್ ಹೇಳಿದಂತೆ ಹೆಚ್ಚು ಜನ ಗೂಗಲ್ ಕನ್ನಡ ಉಪಯೋಗಿಸಿದರೆ ತಂತಾನೆ ಕನ್ನಡ ಮುಖ್ಯಪುಟದಲ್ಲಿ ಮೂಡುವುದು. ಗೂಗಲ್ ನವರಿಗೆ ಯಾವುದೇ ಭಾಷೆಯ ಮೇಲೆ ಹೆಚ್ಚು ಅಥವಾ ಕಡಿಮೆ ಪ್ರಾಧಾನ್ಯತೆ ಎಂಬುದು ಇಲ್ಲ.

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
September 21, 2005 - 7:24pm — Rohit

ಅದು ಹಾಗಲ್ಲ

Rohit's picture

ಗೂಗಲ್ ಇಂಡಿಯಾ ಮುಖ್ಯಪುಟದಲ್ಲಿ ಸ್ಥಾನ ಪಡೆದಿರುವ ಭಾಷೆಗಳು ಅಲ್ಲಿರುವುದಕ್ಕೆ ಕಾರಣ 1991ರ ಜನಗಣತಿಯಂತೆ ಭಾರತದಲ್ಲಿ ಜನರು ಹೆಚ್ಚಾಗಿ ಮಾತೃಭಾಷೆಯನ್ನಾಗಿ ಬಳಸುವ ಭಾಷೆಗಳು ಈ ಕ್ರಮದಲ್ಲಿವೆ.
ಅಂದ್ರೆ :

ಹಿಂದಿ
ಬಂಗಾಳಿ
ತೆಲುಗು
ಮರಾಠಿ
ತಮಿಳು
ಗುಜರಾತಿ
ಕನ್ನಡ
ಮಲಯಾಳ
ಒರಿಯಾ....

ಹೀಗಾಗಿ ಮೊದಲ ಐದು ಸ್ಥಾನಗಳಲ್ಲಿರುವ ಭಾಷೆಗಳಿಗೆ ಮಾತ್ರವೇ ಲಿಂಕ್ ಒದಗಿಸಿದ್ದಾರೆ.

2001 ರ ಜನಗಣತಿಯ ಭಾಷೆಗೆ ಸಂಬಂಧಿಸಿದ ಅಂಕಿಅಂಶಗಳು ಇನ್ನೂ ಲಭ್ಯವಾಗಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
September 21, 2005 - 7:38pm — Vinay

ಆದರೆ

Vinay's picture

ಆದರೆ, ಯಾವುದನ್ನಾದರೂ ಅನುವಾದ ಮಾಡುವಾಗ, ಮೊದಲು ಬಂಗಾಳಿ, ತಮಿಳು, ತೆಲುಗು, ಮಲಯಾಳ, ಮರಾಠಿ... ಕನ್ನಡ ಯಾವಾಗಲೂ ನಂತರವೇ ಇರುತ್ತದೆ. ಅದು ಏಕೆ?

  • Login or register to post comments
  • link
  • Email this ಪ್ರತಿಕ್ರಿಯೆ
September 21, 2005 - 8:17pm — Rohit

ಹೀಗೆ ಎಲ್ಲಿದೆ

Rohit's picture

ನೀವಿದನ್ನು ಎಲ್ಲಿ ಗಮನಿಸಿದ್ದೀರಿ? ನನಗಿದು ಗಮನಕ್ಕೆ ಬಂದಿಲ್ಲ...ನೀವು ಯಾವುದರ ಅನುವಾದದ ಬಗ್ಗೆ ಹೇಳುತ್ತಿದ್ದೀರಿ...ಏಕೆಂದರೆ ಮೈಕ್ರೋಸಾಫ್ಟ್ ನವರು ತಮ್ಮ ಆಫೀಸ್ ತಂತ್ರಾಂಶವನ್ನು ಭಾರತೀಯ ಭಾಷೆಗಳಲ್ಲಿ ತಂದಾಗ, ಹಿಂದಿಯ ನಂತರ ಕನ್ನಡವೇ ಪ್ರಾಶಸ್ತ್ಯ ಪಡೆದಿತ್ತು...

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೂಗಲ್ ನಲ್ಲಿ ಬ್ಲಾಗ್ ಹುಡುಕಾಟ
  • ಗೂಗಲ್ ನ ಹೊಸ 'ಬ್ಲಾಗ್ ಸರ್ಚ್'
  • 'ಕನ್ನಡ'ದ ಟ್ರೆಂಡು
  • ಗೂಗಲ್ ಸರ್ಚ್
  • ಗೂಗಲ್ ನ ಹೊಸ 'ಗೂಗಲ್ ಅನಲಿಟಿಕ್ಸ್'
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator