Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತತ್ವಜ್ಞಾನ

ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

June 11, 2007 - 8:31pm — mahesha

http://thatskannada.oneindia.in/column/ravibelagere/110607caste_religion_intellectuals.html

ಓದಿ ಚನ್ನಾಗಿದೆ.

ತುಣುಕು
‘ಒಬ್ಬ ಬ್ರಾಹ್ಮಣ ಮತ್ತು ಒಂದು ನಾಗರಹಾವು ಏಕಕಾಲಕ್ಕೆ ಎದುರಿಗೆ ಬಂದರೆ ಮೊದಲು ಬ್ರಾಹ್ಮಣನನ್ನು ಕೊಲ್ಲು ಅಂದರು ಮಹಾನ್‌ ನಾಸ್ತಿಕ ಹೋರಾಟಗಾರ ಪೆರಿಯಾರ್‌!’ ಅಂತ ಬರೆದ ಕನ್ನಡ ಲೇಖಕನ ಹೆಗಲ ಮೇಲೆ ಕೈಹಾಕಿ ಮುಗುಳ್ನಗುತ್ತಾ, ‘ಎಂಥ ಬ್ರೆೃಟ್‌ ರೈಟಿಂಗ್‌ ಕಣಯ್ಯಾ ನಿಂದೂ.. ! ಎಷ್ಟೊಂದು ಓದಿಕೊಂಡಿದೀಯಾ.. ’ ಅಂದರು. ಹಾಗಂದವರು ಬ್ರಾಹ್ಮಣರೂ ಆಗಿದ್ದರು!

* ರವಿ ಬೆಳಗೆರೆ

‹ ಶ್ರೀರಾಮಚಂದ್ರ ಹೇಗೆ ಸತ್ತರು?
  • ತತ್ವಜ್ಞಾನ
Ornamental seperator
  • Login or register to post comments
  • 1003 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 12, 2007 - 11:48am — jaiguruji

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

jaiguruji's picture

ಮಹೇಶ,

ಬಳಗೆರೆ ಅಲ್ಲಾ ಬೆಳೆಗೆರೆ. ಮೂರ್ತಿ ಅನ್ನ ಮೂತ್ರಿ ಅಂದ್ರೆ ಹೇಗೆ ಅಭಾಸ ಅನ್ಸುತ್ತೊ..ಇದು ಹಾಗೆ. ದಯವಿಟ್ಟು ತಿದ್ದಿ.

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 12:06pm — mahesha

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

mahesha's picture

ಗುರುಜಿ

ನನ್ನ ಕಣ್ತಪ್ಪಿ ಆಗಿಬಿಟ್ಟಿದೆ. ಈಗ ತಿದ್ದಲು ಅನುವಿಲ್ಲ.!

ಮನ್ನಿಸಿರಿ.

ಅಂದ ಹಾಗೆ

ಇಲ್ಲಿ ಅಭಾಸ ಅಂದ್ರೆ? prism ಅಲ್ಲಿ ಸಿಕ್ಕಲಿಲ್ಲ
.
.
.
'ಆಭಾಸ' ಅಂದ್ರೆ prism ಅಲ್ಲಿ ನೋಡಿದ್ರೆ.
ಆಭಾಸ (ಸಂ) (ನಾ) ೧ ಕಾಂತಿ, ಪ್ರಕಾಶ ೨ ತಪ್ಪಾಗಿ ತಿಳಿಯುವ ವಿಷಯ ೩ ಎಡವಟ್ಟು
"ಭಾಸ" ಅಂದರೆ ಬೆಳಕು

ದಯವಿಟ್ಟು ಈ ಒರೆಯ ಬಳಕೆ ತುಸು ನೋಡಿ ಮಾಡೋಣ!

ಇಲ್ಲಿ "ಆಭಾಸ ಅನ್ಸುತ್ತೆ" ಅಂದ್ರೆ
೧) ಪ್ರಕಾಶ ಅನ್ಸುತ್ತೆ. ಬೆಳಕು ಅನ್ಸುತ್ತೆ.
೨) ಎಡವಟ್ಟು ಅನ್ನುತ್ತೆ.

ಅಂತ ಎರಡು ತಿಳಿವು ಬರುತ್ತದೆ.

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 12:41pm — jaiguruji

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

jaiguruji's picture

ಅಯ್ಯೋ..ಶೀರ್ಷಿಕೆಯನ್ನ ತಿದ್ದಬಹುದ್ರೇಪಾ..ಪ್ರಯತ್ನ ಮಾಡ್ರಿ. ತಿದ್ದಲಿಕ್ಕಿ ಬರ್ತದ.

ಅಭಾಸ ತಪ್ಪು, ಆಭಾಸ ಸರಿ. ನೀವು ತಿಳಿಸಿದ ಎರಡನೇಯ ಅರ್ಥದಲ್ಲಿ ನಾನು ಬಳಸಿದ್ದು.

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 12:49pm — mahesha

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

mahesha's picture

ಗುರುಜಿ,.

ಬ್ಲಾಗಿನ ಹೆಸರು ತಿದ್ದಬಹುದು. 'ಚರ್ಚೆ'ಯದು ಆಗದು.

ಇದು ಚರ್ಚೆಯ ಅಡಿಯುಂಟು, ಮಾರಾಯ್ರೆ!

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 11:52am — prapancha

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

prapancha's picture

ಲೇಖನ ತು೦ಬಾ ಚೆನ್ನಾಗಿದೆ, ಬ್ರಾಹ್ಮಣರನ್ನ ಹೊಡಿರ್ಲ, ಇಕ್ರುಲ್ಲಾ ಅ೦ತ ಮಾತನಾಡುವ ಕೆಲವರು, ಅಲ್ಪ ಸ೦ಖ್ಯಾತರರು ತಪ್ಪು ಮಾಡಿದಾಗ ಹೀಗೆ ಹೇಳಲು ಸಾದ್ಯವೆ? ರಮೇಶ್ ಸಾಮಗರು ಒ೦ದು ಬಾರಿ ಈ ಲೇಖನವನ್ನ ಓದುವುದು ಒಳ್ಳೆಯದು. ಬ್ರಾಹ್ಮಣರು ಸ್ವಾತ್೦ತ್ರ್ಯಾ ನ೦ತರ ಕಳೆದ ಕೆಲವು ದಶಕಗಳಿ೦ದ ನಡೆಯುತ್ತಿರುವ ಶೋಶಣೆಗೆ ಒಳಗಾದ ಗು೦ಪು. ಅವರುಗಳನ್ನ ಸರಕಾರಿ ಕೆಲಸಗಳಿ೦ದ ಓಡಿಸಿಯಾಯಿತು, ನ೦ತರ ಹಳ್ಳಿಗಳಿ೦ದಲೂ ಇದ್ದ ಅಲ್ಪ ಸ್ವಲ್ಪ ಜಮೀನನ್ನು ಕಿತ್ತುಕೊ೦ಡು ಓಡಿಸಿಯಾಯಿತು. ಹೇಗೋ ಖಾಸಗೀ ಕ೦ಪನಿಗಳಲ್ಲಿ, ಅಲ್ಲಿಇಲ್ಲಿ ಕೆಲಸ ಹುಡುಕಿಕೊ೦ಡು ಎಲೆ ಮರೆ ಕಾಯಿಗಳ ಹಾಗೆ ಬದುಕಿರುವಾಗ ಅವರನ್ನ ಇನ್ನೂ ಎಳೆದು ನಿ೦ದಿಸಿ ಬಡಿಯುವುದು ನ್ಯಾಯವಲ್ಲ. ಇ೦ದು ಬ್ರಾಹ್ಮಣರು dead wood ಇದ್ದ ಹಾಗೆ. ಅವರನ್ನ ಅವರ ಪಾಡಿಗೆ ಬಿಟ್ಟು ಬಿಟ್ರೆ ಸಾಕು. ಸೆಕ್ಯುಲರ್ ವಾದಿಗಳು ಹೇಗಾದರು ಆಡಳಿತ ನಡೆಸಿಕೊ೦ಡು ಹೋಗಲಿ, ಬ್ರಾಹ್ಮಣ ವರ್ಗಕ್ಕೆ ಅದರಲ್ಲಿ ಆಸಕ್ತಿ ಇಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 3:58pm — ramesh-m

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

ramesh-m's picture

ಇಕ್ರಲಾ ವದೀರ್ಲಾ ಎಂದದ್ದು ಯಾಕೆ ರವಿಬೆಳೆಗರೆಯವರಿಗೆ ಹಾಗೆಲ್ಲಾ ಕಾಣಿಸಬೇಕು? ಈ ಪ್ರಶ್ನೆ ತಮಗೂ ಅನ್ವಯಿಸುತ್ತದೆ? ನಿಮಗೆ ನೋವಾದರೆ ನೀವು ಅಳುತ್ತೀರಿ. ಮತ್ತು ನಿಮಗೆ ನೋವುಂಟು ಮಾಡಿದ ಕಾರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತೀರೇ ಹೊರತು ಉಳಿದದ್ದರ ಬಗ್ಗೆ ಅಲ್ಲ. ಇನ್ನು ರವಿ ಬೆಳಗರೆಯವರ ಬರೆಹಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅದೊಂದು ಬೇಜವಾಬ್ದಾರಿ ಬರೆಹ ಎಂದಷ್ಟೇ ಹೇಳುತ್ತೇನೆ. ಅವರು ನೀಡಿರುವ ಪ್ರತಿಯೊಂದು ಕಾರಣವೂ ಗ್ರಾಸ್ ಸ್ಟೇಟ್ ಮೆಂಟ್ ಗಳು. ಕನ್ನಡದಲ್ಲಿ ಬರೆಯುತ್ತಿರುವ ಮುಸ್ಲಿಂ ಬರೆಹಗಾರರಲ್ಲಿ ಹೆಚ್ಚಿನವರು ಅವರ ಸಮುದಾಯವನ್ನು ಎದುರು ಹಾಕಿಕೊಂಡೇ ಬರೆದವರು. ಸಾರಾ, ಭಾನು ಮುಷ್ತಾಕ್, ಬೊಳುವಾರು ಮಹಮ್ಮದ್ ಕುಂಞಿ, ಅಬ್ದುಲ್ ರಶೀದ್ ಇವು ಕೆಲವು ಹೆಸರುಗಳು ಮಾತ್ರ. ರವಿ ಬೆಳಗೆರೆ ಹೇಳಿದ್ದನ್ನು ನೋಡಿದರೆ ಕರ್ನಾಟಕದಲ್ಲಿ ಇವರಾರೂ ಹುಟ್ಟಿಲ್ಲ ಎಂದುಕೊಳ್ಳಬೇಕಾಗುತ್ತದೆ. ದಲಿತರು ಮೇಲ್ಜಾತಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸರಿಯಾಗಿಯೇ ಇದೆ. ರವಿ ಬೆಳಗರೆಯವರಿಗೆ ದಲಿತರು ಷರಾ ಬರೆದುಕೊಡಬೇಕಾಗಿಲ್ಲ ಎಂಬುದೂ ನಿಜವಲ್ಲವೇ?
ರಮೇಶ್ ಸಮಗಾರ

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 4:02pm — ramesh-m

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

ramesh-m's picture

ಪ್ರಿಯ ಪ್ರಪಂಚರೇ ಈಗಲೂ ಸರಕಾರೀ ಉದ್ಯೋಗಗಳಲ್ಲಿ ಅದರಲ್ಲೂ ಮುಖ್ಯವಾಗಿ ಐಎಎಸ್ ಅಧಿಕಾರಿಗಳಲ್ಲಿ ಶೇಕಡಾ 94ರಷ್ಟು ಮಂದಿ ಮೇಲ್ಜಾತಿಯವರೇ ಇದ್ದಾರೆ. ಸರಕಾರಿ ಹುದ್ದೆಯಿಂದ ಬ್ರಾಹ್ಮಣರನ್ನು ಓಡಿಸುವಷ್ಟು ಪ್ರಬಲವಾಗಿ ಬೆಳೆಯಲು ದಲಿತರಿಗೆ ಇನ್ನೂ ಸಾಧ್ಯವಾಗಿಲ್ಲ. ತಾವು ಬಯ ಬೀಳದಿರಿ. ನಿಮಗೆ ಇನ್ನಷ್ಟು ಕಾಲ ಶೋಷಿಸುವ ಅವಕಾಶವುಂಟು.
ರಮೇಶ್ ಸಮಗಾರ

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 4:16pm — mahesha

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

mahesha's picture

ಐಎಎಸ್ ಅಧಿಕಾರಿಗಳಲ್ಲಿ ಶೇಕಡಾ 94ರಷ್ಟು ಮಂದಿ ಮೇಲ್ಜಾತಿಯವರೇ ಇದ್ದಾರೆ. ಸರಕಾರಿ ಹುದ್ದೆಯಿಂದ ಬ್ರಾಹ್ಮಣರನ್ನು ಓಡಿಸುವಷ್ಟು ಪ್ರಬಲವಾಗಿ ಬೆಳೆಯಲು ದಲಿತರಿಗೆ ಇನ್ನೂ ಸಾಧ್ಯವಾಗಿಲ್ಲ.

ರಮೇಶರೇ,

ತುಸು ತಣ್ಣಗಾಗಿ, ಹಾರ್ಬರೂ ಈ ಮಣ್ಣಿನವರೇ. ಅವರ ಕಡೆಯೂ ತುಸು ಕನಿಕರವಿರಲಿ. ಇಷ್ಟು 'ನಿಷ್ಠೂರತನ'/ಬಿರುಸುತನ ಬೇಡ.

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 4:36pm — ramesh-m

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

ramesh-m's picture

ಖಂಡಿತವಾಗಿಯೂ ದಲಿತರು ಅಷ್ಟೊಂದು ನಿಷ್ಠುರರಲ್ಲ. ರವಿಬೆಳಗರೆಯವರು ಕೇಳಿದಂತೆ "...ಆದಾಗ ಯಾರಾದರೂ ಮುಸ್ಲಿಮರನ್ನು ಪ್ರಶ್ನಿಸಿದರೇ?" ಎಂದು ದಲಿತರು ಯಾರನ್ನೂ ಕೇಳಲಿಲ್ಲ. ಇಲ್ಲದಿದ್ದರೆ ಮನುಧರ್ಮ ಶಾಸ್ತ್ರ ಭಾರತದ ಸಂವಿಧಾನವಾಗಬೇಕಿತ್ತು ಎಂದು ಹಲವು ಹೈಕೋರ್ಟ್ ಗಳ ನ್ಯಾಯಾಧೀಶರಾಗಿದ್ದ ರಾಮಾ ಜೋಯಿಸರು ಹೇಳಿದಾಗಾಗಲೀ, ಆಡ್ವಾಣಿ, ವಾಜಪೇಯಿಯಂಥವರು ಈ ಹೇಳಿಕೆಗೆ ಅಡಿ ಒತ್ತು ಸೇರಿಸಿದಾಗಾಗಲೀ, ನಮ್ಮನ್ನು 'ಒಂದು' ಮಾಡಲು ಹೊರಟಿರುವ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷ ಅಶೋಕ್ ಸಿಂಘಾಲ್ ದಲಿತರ ಪ್ರಾಣಕ್ಕಿಂತ ಗೋವಿನ ಪ್ರಾಣವೇ ಮುಖ್ಯ ಎಂದೂ ಮನು ಸ್ಮೃತಿಯನ್ನು ಹಾಡಿ ಹೊಗಳಿದಾಗಾಗಲೀ ನಾವು ರವಿ ಬೆಳಗರೆಯನ್ನಾಗಲೀ, ಭೈರಪ್ಪನವರನ್ನಾಗಲೀ ಚಿದಾನಂದಮೂರ್ತಿಯವರನ್ನಾಗಲೀ ಶೇಷಗಿರಿರಾಯರನ್ನಾಗಲೀ ನೀವೇಕೆ ಇದನ್ನು ಖಂಡಿಸುತ್ತಿಲ್ಲ ಎಂದು ಕೇಳಿಲ್ಲ. ಏಕೆಂದರೆ ಔರಂಗಜೇಬನೆಂಬ ರಾಜ ಮಾಡಿದ ತಪ್ಪಿಗೆ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಗಳಾದ ಮುಸ್ಲಿಮರನ್ನು ಹೊಣೆಗಾರರನ್ನಾಗಿ ಮಾಡುವ ಇವರೆಲ್ಲರಲ್ಲೂ ಇರುವಂಥ ತಂತ್ರಗಾರಿಕೆ ನಮ್ಮಲ್ಲಿಲ್ಲ.
ರಮೇಶ್ ಸಮಗಾರ

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 4:45pm — mahesha

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

mahesha's picture

ದಲಿತರ ಪ್ರಾಣಕ್ಕಿಂತ ಗೋವಿನ ಪ್ರಾಣವೇ ಮುಖ್ಯ ಎಂದೂ ಮನು ಸ್ಮೃತಿಯನ್ನು ಹಾಡಿ ಹೊಗಳಿದಾಗಾಗಲೀ

ಹಂಗೆಲ್ಲ ಅಯ್ತ ಅದರಾಗೆ!! ನಂಗೆ ಗೊತ್ತೇ ಇರ್ನಿಲ್ಲ.
ಇದು ಶಾನೆ ತಪ್ಪು. ನಾನೂ ಒಪ್ಪಕ್ಕಿಲ್ಲ.

ನೀವು VHP, BJP ಅಂದ್ರೆ ಹಾರ್ಬರು ಅಂತ ಹೇಳ್ತಿರೋ ಹಾಗಿದೆ. ಕಾಂಗ್ರಸ್ಸಾಗು ಶಾನೆ ಬ್ರಾಂಬ್ರು ಅವ್ರೆ. ಇಲ್ಲಿ ಎರಡು ಕಡೆಗೂ ಬ್ರಾಂಬ್ರೇ ಇರೋದು. ಹಿಂಗಿರುವಾಗ, ನೀವು ಹಾಕೆ ಒಂದು ಕಡೆ ಬ್ರಾಂಬ್ರನ್ನ ನೋಡ್ತೀರಿ. ಎಲ್ಲ ಜಾತಿಯಲ್ಲೂ ಎಲ್ಲಾ ತರ ಮಂದಿ ಇರಕ್ಕಿಲ್ವಾ?

ಈಗ ಉತ್ತರ ಪ್ರದೇಶದಾಗೆ ಮಾಯಾವತಿಯಮ್ಮ ಕೂಟ ಬ್ರಾಂಬ್ರು ಬೇಕು, ಅಂತ ತನ್ನ ಗುಂಪಿಗೆ ಸೇರಿಸಿಕೊಂಡವ್ರೆ.

ಕಾಲ ಬದಲಾಗ್ತಾ ಐತೆ.!!!

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 7:42pm — jaiguruji

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

jaiguruji's picture

ನೋಡಿ, ಮನುಸ್ಮೃತಿ ಕೆಟ್ಟದಾಗಿದ್ರೆ (ನಾನಂತೂ ಅದನ್ನ ಓದಿಲ್ಲ !), ಅದನ್ನು ಹರಿದು ತಿಪ್ಪೆಗೆ ಹಾಕಿ, ಇನ್ನೂ ಸಮಾಧಾನವಾಗದಿದ್ರೆ ಸುಟ್ಟು ಹಾಕಿ! ಆದ್ರೆ, ಬೇರೆ ಧರ್ಮಗ್ರಂಥಗಳಲ್ಲಿಯೂ ಇದೇ ರೀತಿ objectionable ಸಂಗತಿಗಳಿದ್ದರೇ, ಮನುಸ್ಮೃತಿಗೆ ಕೊಟ್ಟಂತಹ ’ರಾಜ ಮರ್ಯಾದೆ’ಯನ್ನ ಅವಕ್ಕೂ ಕೊಡಲಿಕ್ಕೆ ತಯಾರಿದ್ದೀರಾ?

ಇಲ್ಲಿ ಗೊತ್ತಾಗುತ್ತೆ. ಬುದ್ಧಿಜೀವಿಗಳ ಹೋರಾಟ, ಹಾರಾಟವೇನಿದ್ದರೂ ಕೇವಲ ಹಿಂದು ಧರ್ಮಕ್ಕೆ ಮಾತ್ರ ಮೀಸಲು. ಅದೇ ಬೇರೆ ಮತಗಳ ಕೆಟ್ಟ ಅಂಶಗಳನ್ನು ಖಂಡಿಸಬೇಕಾದಾಗ ಅವರು ಜಾಣ ಮೌನ(selective amnesia!) ವಹಿಸುತ್ತಾರೆ. ನಮ್ಮಲ್ಲಿ ಏಷ್ಟು ಜನ ಬುದ್ಧಿಜೀವಿಗಳು ಮುಸ್ಲಿಂ ಹೆಣ್ಣುಮಕ್ಕಳಿಗೆ ಉರುಲಾಗಿರುವ ’ತಲಾಖ್’ ಬಗ್ಗೆ ಮಾತಾಡಿದ್ದಾರೆ? ಆವರಣ ಪ್ರಶ್ನೆಯೆತ್ತುವದು ಇದರ ಬಗ್ಗೆ, ವಿಷಯಾಂತರ ಮಾಡಿ ಉಪಯೋಗವಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 7:50pm — mahesha

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

mahesha's picture

ಗುರುಜಿ...

ಯಾವ ಹೊತ್ತಗೆಯಾಗಲಿ, ಅದು ಎಂತ ಕೆಟ್ಟ ಸಂಗತಿಗಳನ್ನೇ ಹೇಳಲಿ, ಅದನ್ನು ಹರಿಯುವುದು, ಸುಡುವುದು, ಒಳ್ಳೆಯದಲ್ಲ.
ಇದು ಕೆಟ್ಟದ್ದು, ಇದನ್ನು ಮಾಡಬಾರದು ಎನ್ನುವುದು ಒಂದು ಅರಿವು.

ಇಲ್ಲಿ ಎಲ್ಲರೂ ಜಾಣರೇ! Smiling ನಮ್ಮಲ್ಲಿ ಜಾಣತನ ಬೇಕಾದುದಕ್ಕಿಂತ ಕೊಂಚ ಜಾಸ್ತಿಯಾಗಿರುವುದೇ, ಈ ಎಲ್ಲ ಕೇಡುಗಳಿಗೆ ಎಡೆಮಾಡಿರುವುದು

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 8:26pm — jaiguruji

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

jaiguruji's picture

ನಾನು ನಿಮ್ಮ ಮಾತು ಒಪ್ಪುವೆ ಮಹೇಶ. ಆ ಮಾತಿನ ಹಿಂದಿನ ಉದ್ದೇಶವಿಷ್ಟೆ. ಹೀಗಾದ್ರೂ ಅವರಿಗೆ ಮನುಸ್ಮೃತಿಯ ಮೇಲಿನ ಸಿಟ್ಟು ಕಮ್ಮಿಯಾಗಿ ಬೇರೆ constructive ವಿಚಾರ ಮಾಡೋ ಹಾಗಿದ್ದರೆ ಆಗಲಿ ಅಂತಾ.

ಇನ್ನೊಂದು,

ಮನುಸ್ಮೃತಿಯ ಬಗ್ಗೆ ಏಕಪಕ್ಷೀಯವಾಗಿ ದೂರುವವರು, ಇವತ್ತು ಜಗತ್ತಿನಲ್ಲಿ terrorism ಮತ್ತು ಮೂಲಭೂತವಾದಕ್ಕೆ ಮನುಸ್ಮೃತಿ ಅಲ್ಲಾ ಬೇರೆ ಗ್ರಂಥಗಳು ಮತ್ತು ವಿಚಾರಗಳು ಕಾರಣವಾಗಿವೆ ಎಂಬುದನ್ನೂ ಅರಿಯದಷ್ಟು ಮುಗ್ಧರಾ?

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 8:29pm — jaiguruji

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

jaiguruji's picture

ಅಲ್ಲದೇ, ಮನುಸ್ಮೃತಿ ಅಷ್ಟು ಕೆಟ್ಟದಾಗಿದ್ದರೆ ಅದರಲ್ಲಿಯ ಕೆಟ್ಟ ಅಂಶಗಳನ್ನ ಹರಿದು ಹಾಕಲು ಏನೂ ಅಡ್ಡಿ ಇಲ್ಲ. ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು!

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 8:36pm — mahesha

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

mahesha's picture

ಅಲ್ಲದೇ, ಮನುಸ್ಮೃತಿ ಅಷ್ಟು ಕೆಟ್ಟದಾಗಿದ್ದರೆ ಅದರಲ್ಲಿಯ ಕೆಟ್ಟ ಅಂಶಗಳನ್ನ ಹರಿದು ಹಾಕಲು ಏನೂ ಅಡ್ಡಿ ಇಲ್ಲ. ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು!

ಒಟ್ನಲ್ಲಿ, ಪಾಪಾ ಆ ಮನುಸ್ಮೃತಿಗೆ ಬಂತು ಗ್ರಾಚಾರ...

ಸರಿಯಪ್ಪ, ಮೊದಲು ಅದನ್ನ ಹರಿದು ಬಿಸಾಕಿ!

"ಸಿಟ್ಟು ಬಂತು ಅಂತ ಶರ್ಟ್ ಹರಿದ್ರಂತೆ!" Smiling

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 7:59pm — ಶ್ಯಾಮ ಕಶ್ಯಪ

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

ಶ್ಯಾಮ ಕಶ್ಯಪ's picture

Quote:
ಮನುಸ್ಮೃತಿ ಕೆಟ್ಟದಾಗಿದ್ರೆ (ನಾನಂತೂ ಅದನ್ನ ಓದಿಲ್ಲ !),

ನಮ್ಮ ಧರ್ಮದಲ್ಲೇನಿತ್ತು, ಈಗೇನಿದೆ, ಇದನ್ನರಿಯದೇ ಮತ್ತೊಂದು ಧರ್ಮವನ್ನು ತಾವು ವಿಮರ್ಶಿಸುತ್ತಿರುವುದು ವಿಪರ್ಯಾಸ Shocked
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 8:06pm — mahesha

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

mahesha's picture

ನಮ್ಮ ಧರ್ಮದಲ್ಲೇನಿತ್ತು, ಈಗೇನಿದೆ, ಇದನ್ನರಿಯದೇ ಮತ್ತೊಂದು ಧರ್ಮವನ್ನು ತಾವು ವಿಮರ್ಶಿಸುತ್ತಿರುವುದು ವಿಪರ್ಯಾಸ

ಇದುವೇ ತೊಂದರೆ ನಮಗೆ.

ಇಸ್ಲಾಮೋರು ಮೇಲೆ ತಮ್ಮ ಧರ್ಮ ಬಿಟ್ಟು ಬೇರೆಯದನ್ನು ಅರಿಯಲ್ಲ ಅಂತ ಹಳಿತ/ಅಡ್ಡಮಾತು/ಆಕ್ಷೇಪಣೆ.
ನಮ್ಮ ಮೇಲೆ "ನಾವು ನಮ್ಮ ಧರ್ಮವನ್ನು ಪೂರ ಅರಿಯುವುದೇ ಇಲ್ಲ" ಎಂಬ ಮಾತು

ಚನ್ನಾಗಿದೆ! Smiling

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 8:11pm — ಶ್ಯಾಮ ಕಶ್ಯಪ

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

ಶ್ಯಾಮ ಕಶ್ಯಪ's picture

Quote:
"ನಾವು ನಮ್ಮ ಧರ್ಮವನ್ನು ಪೂರ ಅರಿಯುವುದೇ ಇಲ್ಲ"

ನಾನು generalize ಮಾಡ್ತಾ ಇಲ್ಲ ಸ್ವಾಮಿ. ಅದು ಶ್ರೀಯುತ ಜೈಗುರೂಜಿಗಳಿಗೆ ಮಾತ್ರ ಅನ್ವಯಿಸುವುದು.
--

ಇರುವುದೆಲ್ಲವ ಬಿಟ್ಟು, ಇರದುದದೆಇಡೆಗೆ ತುಡಿವುದೇ ಜೀವನ

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 8:20pm — jaiguruji

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

jaiguruji's picture

ನಮ್ಮ ಧರ್ಮ ಅರಿಯದೇ ಬೇರೆಯವರದನ್ನ ಅರಿಯಬಾರದು ಅಂತೆನಾದ್ರೂ indian penal codeನಲ್ಲಿ ಬರೆದಿದ್ದಾರೆಯೇ ಶ್ಯಾಮ್?

ಇಷ್ಟಕ್ಕೂ ನಾನೇನೂ ಧರ್ಮ ಅರಿಯುವ ಕೆಲಸವನ್ನೆ full time ಮಾಡುತ್ತಿಲ್ಲ, ನಿಮ್ಮಂತೆ ನಾನು ಕೂಡ ಹೊಟ್ಟೆಪಾಡಿಗೆ ಏನೋ ಕೆಲಸ ಮಾಡ್ತಿನಿ.

ಆದರೆ ನಾನು ಕೇಳಿರುವದು ಎಲ್ಲರಿಗೂ ಗೊತ್ತಿರುವಂತಹ general ಪ್ರಶ್ನೆಗಳೇ? ಅವಕ್ಕೆ ಹೆಚ್ಚಿನ ಆಧಾರ ಬೇಕಿದ್ದಲ್ಲಿ ಒದಗಿಸಬಲ್ಲೆ !

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 8:44pm — ಶ್ಯಾಮ ಕಶ್ಯಪ

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

ಶ್ಯಾಮ ಕಶ್ಯಪ's picture

Quote:

ನಮ್ಮ ಧರ್ಮ ಅರಿಯದೇ ಬೇರೆಯವರದನ್ನ ಅರಿಯಬಾರದು ಅಂತೆನಾದ್ರೂ indian penal codeನಲ್ಲಿ ಬರೆದಿದ್ದಾರೆಯೇ ಶ್ಯಾಮ್?

ಪೀನಲ್ ಕೋಡಿನಲ್ಲಿ ಬರೆದಿಲ್ಲ. ಆದರೆ ನಮ್ಮ ಮನೆಯ ದೋಸೆಯೂ ತೂತೆ ಅನ್ನುವುದು ತಿಳಿಯದೇ ಇನ್ನೊಬ್ಬರ ಮನೆಯ ದೋಸೆಯ ತೂತುಗಳನ್ನೆಣಿಸಲು general ಪ್ರಶ್ನೆಗಳನ್ನು ಕೇಳಲು ನೀವು ಇಚ್ಛಿಸಿದರೆ ಅದು ನಿಮ್ಮಿಷ್ಟ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 9:15pm — muralihr

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

muralihr's picture

ಹಿ೦ದೂ ಧರ್ಮವನ್ನು ಓದುವುದು ಅ೦ದರೆ ಶಾಸ್ತ್ರದಲ್ಲಿ ಇರುವುದನ್ನು ಓದುವುದೆ೦ಬುದು ಅಲ್ಲಾ..
ಅಕಸ್ಮಾತ ಮಹೇಶ್ ಏನಾದರೂ ಹಿ೦ದೂ ಧರ್ಮವನ್ನು ತಿಳಿಯಲು ಶಾಸ್ತ್ರ ಮತ್ತು ಪುರಾಣ ಓದೋಕ್ಕೆ ಹೋದರೆ
ಮುದುಕನಾಗಬೇಕಾಗುತ್ತೆ.
http://www.veda.harekrsna.cz/encyclopedia/puranas.htm
ಒ೦ದೊ೦ದು ಪುರಾಣ ದಲ್ಲಿ -- ಒ೦ದೊ೦ದು ಪಾಪ ಒ೦ದೊ೦ದು ಪುಣ್ಯ.
ಬದುಕೋಕ್ಕೆ ಆಗೋದಿಲ್ಲಾ..ಇನ್ನು ಮನು ಶಾಸ್ತ್ರ ಕೂಡ ಅದೇ ರೀತಿಯದು...
ಹತ್ತು ಹನ್ನೆರಡು ಉಪನಿಷತ್ತ್ ಗಳು ..ಮೂರು ಆಚಾರ್ಯರು ಹನ್ನೆರಡು ಉಪನಿಷತ್ತ್ ಗಳ ಭಾಷ್ಯ.
ಸುಸ್ತಾಗುತ್ತೆ. ಅಷ್ಟೆ ಅಲ್ಲ ಬರೀ ತಾತ್ತ್ವಿಕ ಚಿ೦ತನೆಯಲ್ಲಿ ಜೀವನ ಬೇಜಾರಾಗುತ್ತೆ.

ಇಲ್ಲಿ ಮುಖ್ಯ "ನಾನ್ಯಾರು " ಎ೦ಬ ಸತ್ಯವನ್ನು ತಿಳಿಯುವುದು.
ನಮ್ಮ ನಿಜ ಸ್ವರೂಪವನ್ನು ತಿಳಿಸುವುದಕ್ಕೆ -- ನಾವು ಯವುದೇ ಪುಸ್ತಕವನ್ನು ಓದದೇ ಕೇವಲ "ನಾನ್ಯಾರು" ಎ೦ಬ ವಿಚಾರದಿ೦ದ ಸತ್ಯವನ್ನು ತಿಳಿಯಬಹುದು ಎ೦ದವರು ರಮಣ ಮಹರ್ಷಿ.
ಅವರು ಯಾವುದೇ ಪುರಣ, ಗೀತೆ, ಶಾಸ್ತ್ರವನ್ನು ಓದದೇ ನಮ್ಮ ಧರ್ಮದ ಬಗ್ಗೆ ಎಲ್ಲಾ ಅನುಮಾನಗಳನ್ನು
ಪರಿಹರಿಸಿದರು.
http://www.sriramanamaharshi.org/whoam.html
http://www.sriramanamaharshi.org/selfenquiry.html
http://www.sriramanamaharshi.org/spritiualinstruction.html

ಈ ಮೂರು ಸಣ್ನ ಪುಸ್ತಕಗಳನ್ನು ಓದಿ ಸಾಕು ನಮ್ಮ ಧರ್ಮ ಏನು ಅ೦ತಾ ತಿಳಿಯುತ್ತೆ.
ಸುಮ್ಮನೇ ಮನು, ಪುರಾಣ .. ಎಲ್ಲಾ ಕಷ್ಟ ಓದೋದು.

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 9:21pm — mahesha

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

mahesha's picture

ನಂಗೆ ಗೊತ್ತಿತ್ತು, ನೀವು ರಮಣ ಮಹರ್ಷಿ ಲಿಂಕ್ ಕೊಡ್ತೀರ....

ಅವರಿಗಿಂತ ನಂಗೆ ಇವರೇ ಸರಿ...
http://ugkrishnamurti.com/

To Quote Smiling

"That messy thing called 'mind' has created many destructive things. By far the most destructive of them all is God"

ಅಕಸ್ಮಾತ ಮಹೇಶ್ ಏನಾದರೂ ಹಿ೦ದೂ ಧರ್ಮವನ್ನು ತಿಳಿಯಲು ಶಾಸ್ತ್ರ ಮತ್ತು ಪುರಾಣ ಓದೋಕ್ಕೆ ಹೋದರೆ
ಮುದುಕನಾಗಬೇಕಾಗುತ್ತೆ.

Smiling ಮಹೇಶನೂ ತಕ್ಕ ಮಟ್ಟಿಗೆ ಓದಿಕೊಂಡಿದ್ದಾನೆ. ಆಮೇಲೆ ಬೋರ್‍ ಆಗಿ ಬಿಟ್ ಬಿಟ್ಟ Smiling

  • Login or register to post comments
  • link
  • Email this ಪ್ರತಿಕ್ರಿಯೆ
June 13, 2007 - 12:29pm — ಶ್ಯಾಮ ಕಶ್ಯಪ

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

ಶ್ಯಾಮ ಕಶ್ಯಪ's picture

ಹಿಂದೂ ಧರ್ಮವನ್ನು ಪೂರ್ಣವಾಗಿ, ಕೂಲಂಕುಷವಾಗಿ ಓದಿ, ಅದರಲ್ಲಿರುವದನ್ನೆಲ್ಲ ಅರೆದು ಕುಡಿಯಬೇಕು ಅಂತೇನು ನಾನು ಎಲ್ಲೂ ಹೇಳಿಲ್ಲ.
ತಾವು ಮನುಶಾಸ್ತ್ರವನ್ನು ಓದಿದ್ದೀರೋ ಇಲ್ಲವೊ ನನಗೆ ಗೊತ್ತಿಲ್ಲ. ಹಿಂದೂ ಧರ್ಮದ ಅತೀ ಪ್ರಮುಖವೂ ಅತೀ ವಿವಾದಾಸ್ಪದ ಗ್ರಂಥಗಳಲ್ಲದು ಒಂದು. ಅದನ್ನೂ ಓದದೇ ಹಿಂದು ಧರ್ಮದ ಬಗ್ಗೆ ಮಾತಾಡುವುದು ಸರಿಯಲ್ಲ ಅಂತ ನನ್ನ ಅನಿಸಿಕೆ.

ಮನು ಕಷ್ಟವೇನಲ್ಲ ಓದೋದಿಕ್ಕೆ. ಅದನ್ನು ಓದಿ, ನಮ್ಮಲ್ಲೂ ಸಿಕ್ಕಾಪಟ್ಟೆ ಹುಳುಕಿದೆ ಅನ್ನುವುದನ್ನು ಅರಿಯುವುದು ಕಷ್ಟ.

ಇನ್ನು "ನಾನ್ಯಾರು" ಮತ್ತು ಅದಕ್ಕೆ ಸಂಬಂಧಿತ ತಾತ್ವಿಕ ಸತ್ಯವನ್ನು ಸಧ್ಯದ ಹಿಂದು ಮತ್ತು ಇಸ್ಲಾಮ್ ಧರ್ಮಗಳ ಆಚರಣೆಯ ವಿಚಾರದಲ್ಲಿ ತರುವುದು ಪ್ರಸ್ತುತವೇ ಎಂಬುದು ನಿಮಗೆ ಬಿಟ್ಟಿದ್ದು. ಒಂದು ಪಕ್ಷ ಮನುಸ್ಮೃತಿಯು ಅಷ್ಟೋಂದು ಮುಖ್ಯ ಅಲ್ಲ ಅಂತ ತಮಗನಿಸಿದರೆ ನಾನು ನಕ್ಕು ಸುಮ್ಮನಾಗುತ್ತೀನಿ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 4:44pm — ಶ್ಯಾಮ ಕಶ್ಯಪ

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

ಶ್ಯಾಮ ಕಶ್ಯಪ's picture

ಇದೇ ಮಾತು ಭೈರಪ್ಪ ಮತ್ತು ಅನುಯಾಯಿಗಳಿಗೂ ಅನ್ವಯವಾಗುತ್ತದೆ. especially ವಿ.ಕ ದ ಪತ್ರಕರ್ತರಿಗೆ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 7:32pm — jaiguruji

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

jaiguruji's picture

ಯಾವ ಮಾತು ಶ್ಯಾಮ್? ಸ್ವಲ್ಪ ಬಿಡಿಸಿ ಹೇಳಿ.

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 7:53pm — ಶ್ಯಾಮ ಕಶ್ಯಪ

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

ಶ್ಯಾಮ ಕಶ್ಯಪ's picture

Quote:
ತುಸು ತಣ್ಣಗಾಗಿ, ಹಾರ್ಬರೂ ಈ ಮಣ್ಣಿನವರೇ. ಅವರ ಕಡೆಯೂ ತುಸು ಕನಿಕರವಿರಲಿ. ಇಷ್ಟು 'ನಿಷ್ಠೂರತನ'/ಬಿರುಸುತನ ಬೇಡ.

ಬ್ರಾಹ್ಮಣರ ಮೇಲೆ ಹೌಹಾರಿದ ರಮೇಶ್‍ಗೆ ಮಹೇಶರ ಸಲಹೆ. ಅದೇ ಸಲಹೆ, ಭೈರಪ್ಪ ಮತ್ತು ಅನುಯಾಯಿಗಳಿಗೂ ಅನ್ವಯವಾಗುತ್ತದೆ. especially ವಿ.ಕ ದ ಪತ್ರಕರ್ತರಿಗೆ ಎಂದಿದ್ದು.

Parent thread ನ ಕೆಳಗಿರುವ ಪ್ರತಿಕ್ರಿಯೆಗಳೆಲ್ಲವೂ ಅದಕ್ಕೇ ಸಂಬಂಧಿಸಿರುತ್ತದೆ. ಗಮನಿಸಿ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 9:41pm — jaiguruji

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

jaiguruji's picture

ಧನ್ಯವಾದ ಶ್ಯಾಮ್.

ನಿಮಗೆ ವಿ.ಕ ಮತ್ತು ವಿ.ಕ ದ ಪತ್ರಕರ್ತರ ಮೇಲೆ ಮೊದಲಿನಿಂದಲೂ ಸಿಟ್ಟಿದೆ ಅದೆ ನಿಮ್ಮ ಹಳೆಯ ಪೊಸ್ಟ್ ಗಳನ್ನ ನೋಡಿದ್ರೆ ಗೊತ್ತಾಗುತ್ತೆ. ಇದೇ ಮಾತನ್ನ ಇನ್ನೊಬ್ಬರು ಪ್ರಜಾವಾಣಿಯ ಬಗ್ಗೆಯೂ ಹೇಳಬಲ್ಲರು! ಪ್ರಜಾವಾಣಿ ಭೈರಪ್ಪ ಮತ್ತು ಆವರಣದ ಬಗ್ಗೆ ಅತೀ selective ಆಗಿ ಪತ್ರ ಮತ್ತು ಸುದ್ದಿಗಳನ್ನ ಪ್ರಕಟಿಸುವ ಕಾರಣವೇನು? Smiling

ಪ್ರತಿ ಪತ್ರಿಕೆಯೂ ಸಂಪೂರ್ಣ ತಟಸ್ಥವಾಗಿಲ್ಲ. ಮತ್ತು ಹಾಗೆ ಆಗುವದು ಸಾಧ್ಯವೂ ಇಲ್ಲವೇನೊ?

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 4:42pm — prapancha

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

prapancha's picture

ಸ್ವಾಮಿ,
ನೀವು ದಯವಿಟ್ಟು ಮೇಲ್ಜಾತಿ ಗು೦ಪಿನಲ್ಲಿ ಇರುವ ಜಾತಿಗಳನ್ನ ಸ್ವಲ್ಪ ಪಟ್ಟಿ ಮಾಡುತ್ತೀರ? ಯಾಕೆ೦ದರೆ ಅವಕಾಶಕ್ಕೆ ತಕ್ಕನಾಗಿ ನೀವು ಜಾತಿಗಳನ್ನ ವಿ೦ಗಡಿಸುವುದು ನ್ಯಾಯವಲ್ಲ. ಕೆಲವು ವೇಳೆ ಬ್ರಾಹ್ಮಣರು ಮಾತ್ರ ಮೇಲ್ಜಾತಿಯವರು ಎನ್ನುತ್ತೀರ, ಕೆಲವು ಸಲ ಇನ್ನು ಯಾವ್ಯಾವುದೋ ಜಾತಿಯನ್ನ ಮೇಲ್ಜಾತಿಗೆ ಸೇರುಸುತ್ತೀರ. ಯಾಕೆ ಹೀಗೆ ಕೇಳಿದೆನೆ೦ದರೆ, ಕ೦ಬಾಲಪಲ್ಲಿಯ ನರಮೇದಕ್ಕೆ ರೆಡ್ಡಿಗಳು ಕಾರಣ ಆದ್ದರಿ೦ದ ರೆಡ್ದಿಗಳು ನಿಮ್ಮ ಪ್ರಕಾರ ಮೇಲ್ಜಾತಿಯವರೇ?
ನೋಡಿ ಸ್ವಾಮಿ ಈವತ್ತು ಬ್ರಾಹ್ಮಣರನ್ನ ಆಡಳಿತದಲ್ಲಿ ಹುಡುಕಿದರೂ ಸಿಗುವುದಿಲ್ಲ. ಇದ್ದರೂ ಈಗಲೋ ಆಗಲೋ ನಿವ್ರುತ್ತಿಯ ಹೊಸ್ತಿಲಲ್ಲಿ ಇರುವವರಿರಬೇಕು. ಶೀಘ್ರದಲ್ಲೇ ಆ ಪ್ರಾಣಿಗಳೂ ನಿರ್ಗಮಿಸುತ್ತಾರೆ, ಬೇಜಾರು ಮಾಡಿಕೊಳ್ಳಬೇಡಿ ಇನ್ನು ಮು೦ದೆ ಅದಿಕಾರ ನಿಮ್ಮದೇ.
ಇ೦ದು ದಲಿತರನ್ನ ಶೋಷಿಸುತ್ತಿರುವುದು ಬ್ರಾಹ್ಮಣರಲ್ಲ, ಅದು ಶಕ್ತಿಶಾಲಿ OBC ಗೆ ಸೇರಿದವರು. ಬ್ರಾಹ್ಮಣರು ಪಲಾಯಾನ ಮಾಡಿ ಬಹಳ ದಿನಗಳಾದವು. ಬಾಷಣವೇ ಬೇರೆ, ಪ್ರಚಲಿತವೇ ಬೇರೆ. ಸ್ವಲ್ಪ ತಾರ್ಖಿಕವಾಗಿ ನೋಡಿ ಎಲ್ಲವೂ ತಿಳಿಯುತ್ತದೆ.

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 8:13pm — jaiguruji

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

jaiguruji's picture

ಹಾಗೇ ಸಾರಾಸಗಟಾಗಿ ಬೆಳಗೆರೆ ಎತ್ತಿರುವ ಪ್ರಶ್ನೆಗಳನ್ನ ತಳ್ಳಿ ಹಾಕೋದು ನಿಮ್ಮಲ್ಲಿ ಅವಕ್ಕೆ ಉತ್ತರವಿಲ್ಲ ಎನ್ನುವದನ್ನ ತೋರಿಸುತ್ತೆ, ಮತ್ತೇನಿಲ್ಲ!

ನೀವು ಹೇಳಿದ್ದೆ ನಿಜವಾದಲ್ಲಿ, ಹೆಸರಿಸಿರುವಂತಹ ಲೇಖಕರಲ್ಲಿ ಏಷ್ಟು ಜನ ಕೆಳಗಿನ ಪ್ರಶ್ನೆಗಳನ್ನ ಎತ್ತಿ ಆತ್ಮಾವಲೋಕನಕ್ಕೆ, ವಿಮರ್ಶೆಗೆ ಕಾರಣರಾಗಿದ್ದಾರೆ?

- ಅಮಾನವೀಯ ತಲಾಖ್ ಪದ್ಧತಿ ತಪ್ಪಲ್ಲವೇ?
- ಕಾಲಕಾಲಕ್ಕೆ ಚಿಕ್ಕ ಚಿಕ್ಕ ವಿಷ್ಯಗಳಿಗೂ ಹೊರಡಿಸುವ ಫತ್ವಾಗಳು. ಅಂತಹದು ಇಲ್ಲ ಎಂದರೇ ನಾನು ಉದಾಹರಿಸಬಲ್ಲೆ!
- ಕುಟುಂಬ ಯೋಜನೆಯ ಪಾಲನೆಯ ಅಗತ್ಯತೆಯನ್ನ ಒತ್ತಿ ಹೇಳಬಾರದೆ?
- ಧರ್ಮಗ್ರಂಥಗಳಲ್ಲಿ ಇತರ ಧರ್ಮಗಳ ಬಗ್ಗೆ ಇರುವ ಅಸಹನೀಯ ಅಂಶಗಳು ತಪ್ಪು ಎಂದು? ಅಂತಹ ಅಂಶಗಳೇ ಇಲ್ಲವೆನ್ನುತ್ತೀರಾ?

ಸ್ವಲ್ಪ ವಿಚಾರಿಸಿ, ಈ ಪ್ರಶ್ನೆಗಳನ್ನ ಯಾರೇ ಮುಸ್ಲಿಂ ಲೇಖಕರು ಎತ್ತುವದು ಅಷ್ಟು ಸುಲಭವಿಲ್ಲ, ಮತ್ತು ಉತ್ತರಗಳು ಕೂಡ!

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 8:21pm — mahesha

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

mahesha's picture

ಗುರುಜಿ..

ಬೇಸರ ಮಾಡಿಕೊಳ್ಳಬೇಡಿ....

ಆದರೆ ರಮೇಶರಿಗೆ ಇಸ್ಲಾಮ್ ಬಗ್ಗೆ ಪ್ರೆಶ್ನೆ ಮಾಡುವುದು ಸರಿಯಿಲ್ಲ.

ರಮೇಶರು ಇಸ್ಲಾಮ್ ಬಗ್ಗೆ ಹೆಚ್ಚು ಹೇಳದೇ, ಬರಿ 'ದಲಿತ'ರ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಇಸ್ಲಾಮ್ ಅನ್ನು ಬೆಂಬಲಿಸಿಕೊಂಡು ಬಂದಂತೆ ಕಂಡಿಲ್ಲ.

ಇಲ್ಲಿ ರಮೇಶರ ಮಾತುಗಳು ಏನಿದ್ದರು 'ಬ್ರಾಹ್ಮಣ, ಮೇಲುಜಾತಿ, ದಲಿತ, ಮನುಸ್ಮೃತಿ' ಇದರ ಸುತ್ತ ಇದೆ.!

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 8:57pm — ramesh-m

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

ramesh-m's picture

ದಲಿತನಾಗಿ ನನಗನ್ನಿಸುವುದನ್ನು ಹೇಳಿದರೆ ನೀವು ಬೇಸರ ಪಡುವುದಿಲ್ಲ ಎಂದುಕೊಂಡೇ ಈ ಮಾತುಗಳನ್ನು ಬರೆಯುತ್ತಿದ್ದೇನೆ.
ತಥಾಕಥಿತ ಹಂದೂ ಧರ್ಮದ ಅಮಾನವೀಯತೆಯನ್ನು-ಇತಿಹಾಸದಲ್ಲಿರುವುದು ಮತ್ತು ವರ್ತಮಾನದಲ್ಲಿರುವುದೆರಡೂ ಸೇರಿ-ಮುಚ್ಚಿಡಲು, ದಲಿತರನ್ನು ನಿರಂತರವಾಗಿ ಶೋಷಿಸುವುದನ್ನು ಚರ್ಚಿಸದಂತೆ ತಡೆಯಲು ಈ ಮುಸ್ಲಿಂ ಭೂತವನ್ನು ನಮ್ಮೆದುರು ಇಡುತ್ತಿದ್ದೀರಿ ಎಂದು ಭಾವಿಸಿದರೆ ತಪ್ಪಿದೆಯೇ? ಈ ಹೊತ್ತಿನವರೆಗೂ ನಾನು ಮಾತನಾಡಿದ್ದೆಲ್ಲಾ ನನ್ನ ಸಮುದಾಯದ ಬಗ್ಗೆಯೇ. ಅದು ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆಯೇ. ಆದರೆ ನೀವು ಅದನ್ನು ಚರ್ಚೆಗೂ ಪರಿಗಣಿಸದೆ ಮತ್ತೆ ಇಸ್ಲಾಂನ ಸುತ್ತಲೇ ಸಂಚರಿಸುತ್ತಿರುವುದರ ಅರ್ಥವೇನು? ನಮ್ಮ ತಟ್ಟೆಯಲ್ಲಿ ಹೆಗ್ಗಣವೇ ಸತ್ತು ಬಿದ್ದಿರುವಾಗ ಪಕ್ಕದಲ್ಲಿರುವವನ ತಟ್ಟೆಯಲ್ಲಿರುವ ನೊಣದ ಕುರಿತೇಕೆ ಚರ್ಚೆ. ತಲಾಖ್ ನ ವಿಷಯವನ್ನೇ ಪರಿಗಣಿಸಿದರೂ ತಲಾಖ್ ನ ಪ್ರಮಾಣವೆಷ್ಟು? ನಿಮಗೆ ಪರಿಚಿತರಿರುವ ಎಷ್ಟು ಮುಸ್ಲಿಮರು ನಾಲ್ಕೈದು ಮದುವೆಯಾಗಿದ್ದಾರೆ ಎಂದು ಯೋಚಿಸಿ?

ಈ ಬಗೆಯ ಬ್ರಾಹ್ಮಿನಿಕಲ್ (ಜಾತಿ ಸೂಚಕವಲ್ಲ) ಡಿಸೈನ್ ಬಗ್ಗೆ ಅಂಬೇಡ್ಕರ್ ಬಹಳ ಹಿಂದೆಯೇ ಎಚ್ಚರಿಸಿದ್ದರು. ನೀವು ಮಾತನಾಡುತ್ತಿರುವುದೂ ಈ ಡಿಸೈನ್ ನ ಭಾಗದಂತೆಯೇ ಇದೆಯಲ್ಲವೇ? ಎಷ್ಟು ಮಂದಿ ಸವರ್ಣೀಯ ಹಿಂದೂಗಳು ತಮ್ಮ ಮಗಳು ದಲಿತನನ್ನು ಮದುವೆಯಾಗುವುದನ್ನು ಇಷ್ಟ ಪಡುತ್ತಾರೆ ಎಂದು ಹೇಳಿ? ನಗರೀಕೃತ ಪೊಲಿಟಿಕಲ್ ಕರೆಕ್ಟ್ ನೆಸ್ ಗಳನ್ನು ಬಿಟ್ಟು ಖುಲ್ಲಂ ಖುಲ್ಲ ವಿಷಯಕ್ಕೆ ಬನ್ನಿ.
ರಮೇಶ್ ಸಮಗಾರ

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 9:30pm — jaiguruji

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

jaiguruji's picture

ಖಂಡಿತಾ ಬೇಸರವಿಲ್ಲ.

ನೋಡಿ ಈ thread ಶುರುವಾಗಿದ್ದು ಮತ್ತು ಚರ್ಚೆಯ ಕೇಂದ್ರ ಬಿಂದು, ಆವರಣ ಮತ್ತದಕ್ಕೆ ಬಂದಿರುವ ಪ್ರತಿಕ್ರಿಯೆಗಳ ಬಗ್ಗೆ ಇರುವದರಿಂದ, ನಾನು ಮತ್ತೆ ಮತ್ತೆ ಅದೇ ವಿಷಯಕ್ಕೆ ಬರಬೇಕಾಯಿತು. ಅಲ್ಲದೇ ನೀವು ದಲಿತ ಸಮಸ್ಯೆಯ ಬಗ್ಗೆ ಬರೆಯುವ ಭರದಲ್ಲಿ ಇಸ್ಲಾಂನ ಐತಿಹಾಸಿಕ ತಪ್ಪುಗಳನ್ನೆ ಉಪೇಕ್ಷಿಸುವಂತೆ ಕಂಡಿತು, ಹೀಗಾಗಿ ಅದರ ಬಗ್ಗೆ ವಿವರವಾಗಿ ಬರೆದೆ ಅಷ್ಟೆ.

ಇನ್ನು, ಮನುಸ್ಮೃತಿಯ ಬಗ್ಗೆ ಹರಿಹಾಯುವ ನೀವು ಕೂಡ, ಇಂದು ಎಷ್ಟು ಆ ಹಳೆಯ ಪುಸ್ತಕವನ್ನು ಓದಿದ್ದಾರೆ ಮತ್ತು ಅನುಸರಿಸುತ್ತಿದ್ದಾರೆ ಎಂದು ಪ್ರಶ್ನಿಸಿಕೊಳ್ಳಬೇಡವೇ? ಮರಾಠಿಯಲ್ಲಿ ರಮೇಶ ಪತಂಗೆ ಬರೆದಿರುವ ’ಮೀ, ಮನು ಆಣಿ ಸಂಘ್ಹ" ಕನ್ನಡದಲ್ಲಿಯೂ ಕೂಡ "ನಾನು, ಮನು ಮತ್ತು ಸಂಘ"ವೆಂದು ಅನುವಾದವಾಗಿದೆ. ಅದನ್ನು ದಯವಿಟ್ಟು ಓದಿ ಎಂದಷ್ಟೆ ಹೇಳಬಲ್ಲೆ, ನಿರ್ಧಾರ ನಿಮಗೆ ಬಿಟ್ಟದ್ದು.

ನೀವು ಹೇಳುವ ವಿಷಯಕ್ಕೆ ಬಂದಾಗ (ಖುಲ್ಲಂ ಖುಲ್ಲ ..)
ಇಂದಿಗೂ ಕೂಡ ಗ್ರಾಮೀಣ ಭಾಗದಲ್ಲಿ ದಲಿತರ ಮೇಲೆ ಅನಾಚಾರ, ದಬ್ಬಾಳಿಕೆ ನಡೆಯುತ್ತಿರುವದು ಸತ್ಯ. ಇದಕ್ಕೆ ಆಗಾಗ ಬರುವ ಪತ್ರಿಕಾ ವರದಿಗಳೇ ಸಾಕ್ಷಿ. ಆದರೆ ಇದಕ್ಕೆ ಕಾರಣಗಳೇನು? ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದ್ರೂ ಇದರಲ್ಲಿ ಸುಧಾರಣೆ ಆಗಿಲ್ಲವೇ? ಮತ್ತು ಈ ಸಮಸ್ಯೆಗೆ ಪರಿಹಾರವೇನು? ಇವೆಲ್ಲಾ ಬೇರೆಯ ಲೇಖನದಲ್ಲಿ ಚರ್ಚಿಸಬಹುದೆನಿಸುತ್ತೆ.

ಕೆಲವು ನನಗೆ ತೋಚಿದ್ದು.
- ಇನ್ನೂ ಕೂಡ ಹೆಚ್ಚಿರುವ ಅನಕ್ಷರತೆ. ಅದನ್ನ ಹೋಗಲಾಡಿಸಲು ಸರಕಾರ ಮತ್ತು ಜನರಿಂದ(ಮುಖ್ಯವಾಗಿ ದಲಿತರಲ್ಲಿ ಮುಂದೆ ಬಂದವರಿಂದ) ಪ್ರಾಮಾಣಿಕ ಪ್ರಯತ್ನ ನಡೆಯಬೇಕು.
- ಎಂ. ಎನ್. ಶ್ರೀನಿವಾಸ್ ಹೇಳುವಂತೆ, ದಲಿತರಲ್ಲಿ ಮುಂದುವರಿದವರು ಅನೇಕ ಬಾರಿ ಮೇಲ್ಜಾತಿಯವರ ಅನುಕರಣ ಹಪ್ಯಾಪಿಗೆ ಒಳಗಾಗುತ್ತಾರೆ. ಇದನ್ನು ಬಿಟ್ಟು ತನ್ನ ಜನರನ್ನ ಮೇಲೆತ್ತುವ ಕೆಲಸ ಮಾಡಬೇಕು.
- ಸಂವಿಧಾನ ಬದ್ದವಾದ ಹಕ್ಕುಗಳನ್ನ, ಸೌಲಭ್ಯಗಳನ್ನ ಕೇಳಿ ಪಡೆಯುವ ತಿಳುವಳಿಕೆ, ಅರಿವು ಮೂಡಿಸಬೇಕು. ಮತ್ತು ಇವುಗಳ ದುರುಪಯೋಗವಾಗುವದನ್ನ ತಡೆಯಬೇಕು.
- ಕಂದಾಚಾರ, ಮೂಢನಂಬಿಕೆಗಳನ್ನ ಬಿಟ್ಟು ಆಚೆ ಬರುವಂತೆ ಆಗಬೇಕು.

ಇನ್ನೂ ಕೆಲವು ಇವೆ, ಅಮೇಲೆ ಬರೆಯುವೆ.

ಇದರಲ್ಲಿ ಏನಾದರೂ ವಿಪರೀತವೆನಿಸಿದಲ್ಲಿ ತಿದ್ದಿ.

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 7:59pm — mahesha

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

mahesha's picture

ಹಂಸಾನಂದಿಯವರು ಇಲ್ಲಿ ಹೇಳಿದ್ದಾರೆ.
http://sampada.net/forum/4475

  • Login or register to post comments
  • link
  • Email this ಪ್ರತಿಕ್ರಿಯೆ
June 12, 2007 - 7:59pm — mahesha

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

mahesha's picture

ಹಂಸಾನಂದಿಯವರು ಇಲ್ಲಿ ಹೇಳಿದ್ದಾರೆ.
http://sampada.net/forum/4475

  • Login or register to post comments
  • link
  • Email this ಪ್ರತಿಕ್ರಿಯೆ
June 13, 2007 - 10:31am — sindhu

ಉ: ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)

sindhu's picture

ಚರ್ಚೆಯನ್ನು ಮುಂದುವರಿಸುವ ಮುನ್ನ, ಎಲ್ಲರೂ ಅಬ್ದುಲ್ ರಶೀದರು ಬರೆದ ಈ ಬರಹವನ್ನೋದಿದರೆ ಒಳ್ಳೆಯದು ಅಂತ ಅನ್ನಿಸುತ್ತಿದೆ.
" ಮುಸಂಬಿ ಸುಲಿಯುವ ಸದ್ದು ಅಥವಾ ಆಹಾರ ಮತ್ತು ದೇವರು"

http://mysorepost.wordpress.com/2007/06/11/musambi-suliyuva-saddu/

ಪವರ್ ಪೊಲಿಟಿಕ್ಸ್ ಮತ್ತು ಹೊಲಸು ರಾಜಕೀಯದ ಮಂದಿಗಳಿಂದ ದೂರ ನಿಂತು ನೋಡಿದರೆ ನಾವು ಸಾಮಾನ್ಯ ಜನ, ಯಾವುದೇ ಜಾತಿ/ಧರ್ಮಕ್ಕೆ ಸೇರಿದವರಾದರೂ ಆಳದಲ್ಲಿ ಒಳ್ಳೆಯವರೇ ಅಲ್ಲವೇ? ತಪ್ಪು ಹಿಂದೆ ನಡೆದಿದೆ. ಎಲ್ಲರಿಂದಲೂ. ಇನ್ನೂ ನಡೆಯುತ್ತದೆ ಕೂಡಾ. ನಮಗೆ ತಿಳಿದಲ್ಲಿ ನಾವು ತಿದ್ದಿಕೊಳ್ಳುತ್ತಾ ಹೋಗಬೇಕಲ್ಲವೇ?! ಇದು ನನ್ನ ಪೂರ್ವನಿರ್ಧರಿತ ಮತ್ತು ಅಂತಿಮ ನಿರ್ಧಾರವಲ್ಲ. ಒಟ್ಟಿಗೆ ಬದುಕುವ ದಾರಿಯನ್ನ ಬೆಳಕಿನಲ್ಲಿ ಹುಡುಕುವ ಪ್ರಯತ್ನ.

ಪ್ರೀತಿಯಿರಲಿ,
ಸಿಂಧು

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರವಿ ಬೆಳಗೆರೆಯವರ ಲೇಖನ - ದಟ್ಸ್ ಕನ್ನಡದಲ್ಲಿ
  • ಜಾತ್ಯಾತೀತವಾದ.
  • ಪಂಚೆ ಉಟ್ಟು, ಬಾಯಿ ಮುಚ್ಚಿಕೊಂಡು, ಯಾವುದಕ್ಕೂ ಪ್ರತಿಭಟನೆ ಮಾಡದವನೇ ಕನ್ನಡಿಗ !!!
  • ರವಿ ಬೆಳಗೆರೆಯವರ ಲೇಖನ
  • IT ಕನ್ನಡಿಗರಿಂದ ಕಾವೇರಿಗಾಗಿ ಹೋರಾಟ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator