ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಅಚ್ಚಗನ್ನಡದ ಫಲಕ

June 18, 2007 - 8:30pm — cmariejoseph

ಮದುವೆ ಮಂಟಪಗಳ ಸಂಖ್ಯೆ ಹೆಚ್ಚಿದಷ್ಟೂ ಗೊಂದಲ ಉಂಟಾಗುವುದು ಸಹಜ. ಮದುವೆಗೆ ಬಂದವರು ತಪ್ಪಾಗಿ ಬೇರೊಂದು ಛತ್ರದೊಳಕ್ಕೆ ಹೋಗುತ್ತಾರೆಂದರೆ ಈ ಗೊಂದಲವೇ ಕಾರಣ. ಅದಕ್ಕೇ ಈಗೀಗ ಮದುವೆ ಮಂಟಪದ ಮುಂದೆಯೇ ದೊಡ್ಡದಾಗಿ ವಧು ವರರ ಹೆಸರನ್ನು ಪ್ರದರ್ಶಿಸಿರುತ್ತಾರೆ. ಬಣ್ಣದ ದೀಪಗಳಿಂದ ಹಿಡಿದು ಹೂಗಳ ಅಲಂಕಾರದವರೆಗೆ ಈ ಹೆಸರುಗಳು ಬಹು ಸುಂದರವಾಗಿ ರಾರಾಜಿಸುತ್ತವೆ. ರಾಜ ವೆಡ್ಸ್ ರಾಣಿ ಅಥವಾ ರಾಜ ವಿತ್ ರಾಣಿ ಎಂದೇ ಇಂಗ್ಲಿಷ್‌ನಲ್ಲಿ ಮಿಂಚುವ ಈ ಪದಗಳು ಕನ್ನಡದಲ್ಲಿ ಏಕಿರಬಾರದು? ಬೆಂಗಳೂರಿನಲ್ಲಿ ಎಲ್ಲವೂ ಇಂಗ್ಲಿಷ್‌ಮಯವೇ. ಆದರೆ ಬೆಂಗಳೂರಿನ ಹೊರಗೆ ಬನ್ನಿ. ಭಾಸ್ಕರ ಜೋಡಿ ಅನಿತಾ, ಉಮೇಶ ಸಂಗಾತಿ ದಿವ್ಯಾ, ರಾಜ ಅರ್ಧಾಂಗಿ ಲಕ್ಷ್ಮಿ, ಬಸಯ್ಯ ಮತ್ತು ಶಿವಮ್ಮ ಮುಂತಾದ ಅಚ್ಚಗನ್ನಡದ ಫಲಕಗಳನ್ನು ಕಾಣಬಹುದು. ಇವು ನಗರದ ಛಾಪಿನೊಂದಿಗೆ ಕನ್ನಡದ ಸೊಗಡನ್ನು ತುಂಬಿಕೊಂಡು ಅವಳ ಉಡುಪು ಇವಳಿಗೆ ತೊಡಿಸಿ ಚಂದ ಕಂಡಂತೆ ಅಲ್ಲವೇ?

‹ ಎಡ - ಬಲ ವಾದದಿ೦ದ ಮುಕ್ತಿ. ನನ್ನ ಸಮಸ್ಯೆಗೆ ಉತ್ತರ ಕೊಡುವಿರಾ? ›
  • ಸಮಾಜ
~.~
  • Login or register to post comments
  • 492 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 18, 2007 - 8:58pm — mahesha

ಉ: ಅಚ್ಚಗನ್ನಡದ ಫಲಕ

mahesha's picture


ಭಾಸ್ಕರ ಜೋಡಿ ಅನಿತಾ, ಉಮೇಶ ಸಂಗಾತಿ ದಿವ್ಯಾ, ರಾಜ ಅರ್ಧಾಂಗಿ ಲಕ್ಷ್ಮಿ, ಬಸಯ್ಯ ಮತ್ತು ಶಿವಮ್ಮ ಮುಂತಾದ ಅಚ್ಚಗನ್ನಡದ ಫಲಕಗಳನ್ನು ಕಾಣಬಹುದು.

ಮೇಲೆ ಬಾಸ್ಕರ ಜೋಡಿ ಅನಿತಾ, ಬಸಯ್ಯ ಮತ್ತು ಸಿವಮ್ಮ ಇವೆರಡೇ ಅಚ್ಚಗನ್ನಡ.

ಫಲಕ ಅಚ್ಚಗನ್ನಡವಲ್ಲ, ಅದು ಸಂಸ್ಕೃತ/ಸಕ್ಕದ ಹಲಗೆ ಅಚ್ಚಗನ್ನಡ.

ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬರುವಾಗ, ಹೆಬ್ಬಾಳದ ಮುನ್ನ ಒಂದು "ಮದುವೆ ಮನೆ" ಇದೆ. ಆ ಮದುವೆಮನೆಯ ಹೆಸರು "ಮದುವೆ ಮನೆ"ಅಂತೆಯೇ ಅಚ್ಚಗನ್ನಡದಲ್ಲಿ ಹೀಗಿದೆ

ನಾವು ಮಾತಲ್ಲಿ "ಮದುವೆ ಮನೆ" ಅಂತಾನೇ ಹೇಳೋದು.

ಈ ಅಚ್ಚಗನ್ನಡದಲ್ಲಿ "ಮದ" ಅಂದ್ರೆ ಏನು ಗೊತ್ತಾ?
http://dsal.uchicago.edu/cgi-bin/philologic/getobject.pl?c.1:1:2112.burrow
Ka. mada joining, wedding, marriage;
madal, madive, maduve wedding, marriage;
madaliga, madavaṇiga bridegroom;
madaligitti, madavaṇigitti, madavaḷige, (K.2)
madevaḷ bride;
madavana man connected by marriage, husband.

ಹಲವು "ಮದುರಾತ್ರಿ" ಎಂದು ಬರೆದರೆ ಅದನ್ನು "ಮಧುರಾತ್ರಿ" ಎಂದು ತಿದ್ದಿಸುವ ಅಲವಾಟವಿಟ್ಟುಕೊಂಡಿದ್ದಾರೆ ಆದರೆ "ಮದುರಾತ್ರಿ/ಮದುವಿರಳು" ಇದು ಸರಿಯಾದ ಒರೆಯೇ.

ಮದುಮಗ/ಮದುವಣಿಗ = ಮದುವೆಯ ಮಗ/bridegroom
ಮದುಮಗಳು/ಮದುವಣಗಿತ್ತಿ = brige
ಮದುವಣಿಗೆ = ಮದುವೆಯ ಮರವಣಿಗೆ?( ಇದನ್ನು ಕೇಳಿದ್ದೀನಿ ಅಂತ ಅನ್ನಿಸುತ್ತಾ ಐತೆ )
ಹಾಗೆ
ಮದುರಾತ್ರಿ/ಮದುವಿರುಳು = ಮದುವೆಯ ಇರಳು/first night

Honey moonಗೆ ಕನ್ನಡ ಒರೆಯಿಲ್ಲ. ನನ್ನ ಅರಿವಿನಂತೆ( ಅನುಭವವಿಲ್ಲ Smiling ), Dictionary ಅಲ್ಲಿ ಹುಡುಕಿದಂತೆ
Honey moon
# a holiday taken by a newly married couple
# spend a holiday after one's marriage; "they plan to honeymoon in Hawai'i"
# the early (usually calm and harmonious) period of a relationship; business or political
# A honeymoon is the traditional trip taken by newlyweds to celebrate their marriage, and presumably, consummate it.

ಇದಕ್ಕೆ ಮಧುರಾತ್ರಿ ಅನ್ನೋದು ಸರಿಯಾದ ಒರೆಯಲ್ಲ. ಇಲ್ಲಿ ಒಂದು ರಾತ್ರಿಯ program ಅಲ್ಲ, ಇದೊಂದು trip.

ಜೀನ್ದಿಂಗಳು = ಜೀನಿನಂತಹ ತಿಂಗಳು/month ಅಂತ ಹೇಳೋಣ Smiling. ಆಮೇಲೆ ಜೀನು ಕಡಿತ ಸುರುವಾಗುವುದು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಾಗ್ಯದ ಲಕ್ಷ್ಮಿ ಬಾರಮ್ಮ
  • ಮದುವೆ ಯಾರಿಗೆ ಬೇಕು...
  • ಅಲಂಕಾರದ ಸಾಮಾನುಗಳು, ಮದುವೆ, ಮುಂತಾದ ಸಮಾರಂಭಗಳಲ್ಲಿ ವಿಶೇಷ ಕಳೆಕೊಡುತ್ತವೆ !
  • ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
  • ಬೆಸುಗೆಯ ಒಸಗೆ
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಬ್ಬಿ, ಅರ್ಬಿ
  • ಪೊಳೆ, ಪೊೞೆ, ಹೊಳೆ, ಹೊೞೆ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಸ್ತ್ರೀಸೌಂದರ್ಯ
  • ದೋಣಿ
  • ತೊರೆ, ತೊಱೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 8:40am
ಇನ್ನಷ್ಟು


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator