ray ಕಿರಣ ಆದ್ರೆ radiation ವಿಕಿರಣ ಅಂತೆ !?
radiation ಗೆ ವಿಕಿರಣ ಸರಿಯಾದ ಪದವೆ?
ವಿಕಿರಣ ಅಂದ್ರೆ ವಿಶೇಶ ಕಿರಣ? ....ಅಂದ್ರೆ ಇಂಗ್ಲಿಸಿನಲ್ಲಿ ಅದು special rays ಅಂತ ಆಗಬೇಕಿತ್ತು.
[ಇದು ಕರ್ನಾಟಕ ಸರಕಾರದ ಹತ್ತನೆ ಇಯತ್ತೆಗೆ(standard) ಇರುವ ವಿಗ್ನಾನ( ಡಿ.ಎನ್.ಶಂಕರಬಟ್ಟರು ಹೇಳಿರುವ ಹಾಗೆ ಕನ್ನಡಿಗರು ಉಚ್ಚರಿಸುವುದು ಹೀಗೆ..ವಿಙ್ಞಾನ ಅಲ್ಲ) ಓದುವ ಹೊತ್ತಗೆಯಲ್ಲಿ ಹೀಗೆ ಹೇಳಲಾಗಿದೆ]
radiation ಅಂದ್ರೆ ಕನ್ನಡದಲ್ಲಿ ' ಹೊರ ಹೊಮ್ಮುವುದು' ಸರಿಯಾದ ಪದ ಅಂತ ನನಗನ್ನಿಸಿದ್ದು.
radiation ಗೆ ಇಂಗ್ಲಿಸಿನಲ್ಲಿ ಇರುವ ಪದ The spontaneous emission of a stream of particles in nuclear decay ಅಂದ್ರೆ ನೇಸರನಿಂದ ಬರುವ ಕಿರಣಗಳು ಕೂಡ ವಿಕಿರಣಗಳೇ ?

- Login or register to post comments
- 484 hits
- Email this forum





RSS:
ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !?
ಅಣ್ಣ ವಯ್ಬವ!
ಹಿಂದೆ ಇಲ್ಲೇ ನಾನು + ಹಂಸಾನಂದಿಯವರು ಸಂಸ್ಕ್ರತದಲ್ಲಿ ಇರುವ 'ಉಪಸರ್ಗ'ದ ಎಡವಟ್ಟು, ಗೊಂದಲದ ಬಗ್ಗೆ ಮಾತಾಡಿದ್ದೇವೆ. ( ಅದು ಯಾವ ಎಳೆಯಲ್ಲಿದೆ ಎಂದು ಸಿಗುತ್ತಿಲ್ಲ. ನರೇಂದ್ರವರ ಬ್ಲಾಗಲ್ಲಿ ಇರಬೇಕು )
ಈ 'ವಿಕಿರಣ' ಕೂಡ ಅಂತಹ ಒಂದು ಎಡವಟ್ಟು. ವಿ ಅಂದ್ರೆ ವಿಶೇಷ ಅಂತ ಅಲ್ಲ.
ವಿಚಿತ್ರ ಅಂದ್ರೆ ವಿಶೇಷ ಚಿತ್ರವೇ?
ವಿಕೃತ ಅಂದ್ರೆ ವಿಶೇಷವಾಗ ಕೃತವೇ?
ಇಂತಹ ಎಡವಟ್ಟುಗಳನ್ನು, ಕನ್ನಡಕ್ಕೆ sanskritized ಹೊಸ ಒರೆಗಳನ್ನು ತುಂಬುವಾಗ ಬೇಕಾದಷ್ಟು ಮಾಡಿದ್ದಾರೆ.
ಉಪವಾಸ ಅಂದರೆ ಹತ್ತಿರ ವಾಸ. ಉಪಸಸಾರ( ಬೃಗುವೈ ವಾರುಣಿಃ,|ಪಿತರಂ ಉಪಸಸಾರ. ಬೃಗು ವರುಣನ ಮಗ, ತಂದೆಯ ಹತ್ತಿರ ಹೋದನು )
ಉಪನದಿ ಅಂದ್ರೆ ಹತ್ತಿರದ ನದಿಯೇ?
ಉಪಗ್ರಹ ಅಂದ್ರೆ ಹತ್ತಿರ ಗ್ರಹವೇ?
ಉಪಾಧ್ಯಕ್ಷ ಅಂದ್ರೆ ಹತ್ತಿರದ ಅಧ್ಯಕ್ಷನೇ?
ಕನ್ನಡಕ್ಕೆ ಸಂಸ್ಕೃತವನ್ನು ಬರೆಸಿದರೆ, ಕನ್ನಡದಲ್ಲಿ ಹೊಸ ಹೊಸ ಸಂಗತಿಗಳಿಗೆ ಸಂಸ್ಕ್ರುತದಿಂದ ಒರೆ ತುಂಬಿದರೆ, ಕನ್ನಡವೂ ಇನ್ನೂ ದೊಡ್ಡ ಕಗ್ಗಂಟು, ಬಿಡಿಲಾಗದ ಗೋಜಲು ನೂಲುಂಡೆಯಂತೆ ಎಂಬುದಕ್ಕೆ ಇಂತಹ ಎಡವಟ್ಟು ಒರೆಗಳೇ ಪುರಾವೆ. ಇವನ್ನೆ ಶಂಕರ ಭಟ್ಟರೂ ಹೇಳಿರುವುದು.
ಕನ್ನಡದ Sanskritization ಯಿಂದ ಇರುವ ಕುತ್ತುಗಳಲ್ಲಿ, ಇದೂ ಒಂದು 'ಬೃಹತ್' ಸಂಕಟ
!
ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !?
ಕಿರಣ/ray
Ka. kadir ray, splendour;
kadaru, kaduru lustre.
Ka. kanal (kanald-) to be angry; (PBh.) to glow like live coals; n. wrath, anger;
kanalke wrath, anger;
kani glow; (Hav.)
kansu to blacken (pot).
ಕೊಳಂಬೆ ಒರೆಗಂಟಲ್ಲಿ ಇನ್ನೋ ಒರೆಗಳಿರಬಹುದು.
radiation = generally rays emitted by heated bodies( car radiator )
ಕಾವ್+ಕದಿರು = ಕಾವ್ಗದಿರು.
ಅನಲ್ + ಕದಿರು = ಅನಲ್ಗದಿರು
ಹೀಗೆ heat = ಬಿಸಿ/ಬೆಚ್, ಸುಟ್, ಮುಂತಾದ ಕನ್ನಡ root ಗಳನ್ನು ಬಳಸಿ ಮಾಡಬಹುದು.
ಆದರೇ "ಶಂಖದಿಂದ ಬಂದರೇ ತೀರ್ಥ" ಎಂಬಂತೆ, ಸಂಸ್ಕೃತಮೂಲವೇ ಶ್ರೇಷ್ಠ ಅನ್ನೋರಿಗೆ, ಇವೆಲ್ಲ ಹೊಳೆಯುವುದೇ ಇಲ್ಲ. ಹೊಳೆದರೂ ಅವು "exact" ಒರೆಗಳಲ್ಲ ಅಂತ ಕ್ಯಾತೆ ತಗೀತಾರೆ!
ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !?
ಅಲ್ರೀ, ನಿಮಗೆ ಯಾಕೆ ಉಪಸರ್ಗಗಳ ಮೇಲಿಷ್ಟು ಮುನಿಸು
? ಇರಲಿ.
ಕನ್ನಡವನ್ನು ಸುಲಭಗೊಳಿಸೋಣ ಎಂದರೆ - ಇವತ್ತು ನಮಗೆ ಅರ್ಥವಾಗುವ ಪದ ಇರಬೇಕಲ್ವೇನ್ರೀ?
ಈಗ ಹಾಸನದ ಮಂಗಳವಾರದ ಸಂತೆಗೆ ಹೋಗಿ ಕೇಳಿ. ಕಿರಣ ಅಂದರೆ ಏನು? ಕದಿರ್ ಎಂದರೆ ಏನು ಅಂತ. ಮತ್ತೆ ದಿನ ಅಂದರೆ ಏನು, ನಾಳ್ ಎಂದರೆ ಏನು ಅಂತ. ಸರಿ ಉತ್ತರ ಯಾವುದಕ್ಕೆ ಬರತ್ತೆ ಅನ್ನೋದು ನನಗೂ ಗೊತ್ತು. ನಿಮಗೂ ಗೊತ್ತು!
ಸಾರಾಂಶ: ಇವತ್ತು ಯಾವ ಮಾತು ಹೆಚ್ಚು ಅರ್ಥವಾಗುತ್ತೋ, ಅದನ್ನು ಇಟ್ಟುಕೊಳ್ಳೋದು ಒಳ್ಳೆಯದು; ಪಂಪ - ಕುಮಾರ ವ್ಯಾಸರ ಕಾಲಕ್ಕೆ (ಅಥವಾ proto dravidian ಗೇ ಹೋಗಬೇಕಾಗಿಲ್ಲ
ಆದರೆ, ಯಾವುದೋ ಒಂದು ಹೊಸ concept ಗೆ ಕನ್ನಡ ಪದವನ್ನು ಸೃಷ್ಟಿ ಮಾಡ್ತಾ ಇರೋವಾಗ, ನೀವು ಹೇಳೋ ಹಾಗೆ, ಅಚ್ಚ ಕನ್ನಡದ (ಅಥವಾ ಮೂಲ ದ್ರಾವಿಡದ
ಪದವನ್ನೇ ತೊಗೊಳ್ಳಬಹುದು - ಹೇಗಿದ್ದರೂ ಹೊಸ ಪದ ಆದಾಗ ಪರವಾಗಿಲ್ಲ, ಅಲ್ಲವೇ?
-ಹಂಸಾನಂದಿ
ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !?
ಬೆಂಗಳೂರಿನಲ್ಲಿ 'ಕದಿರೇನಹಳ್ಳಿ' ಅಂತ ಇದೆ.... ಕದಿರ್ ಅಂದ್ರೆ ಬಹಳ ಮಂದಿಗೆ ತಿಳೀತಿತ್ತು ಅನ್ಸುತ್ತೆ. ಯಾಕಂದ್ರೆ ನಮ್ಮ ಬೆಂಗಳೂರಿನಲ್ಲಿ ಸುತ್ತ ಇರುವ ಹಳ್ಳಿಗಳ ( ಈಗ ಹಳ್ಳಿಗಳಾಗಿ ಉಳಿದಿಲ್ಲ
) ಹೆಸರು ತುಂಬ ಸರಳವಾಗಿವೆ
ಉದಾ: ಬೊಮ್ಮನಹಳ್ಳಿ( ಬ್ರಾಹ್ಮಣ ಹಳ್ಳಿ ಅಲ್ಲ)
)
ಚಿಕ್ಕಲ್ಲಸಂದ್ರ
ಬೊಮ್ಮಸಂದ್ರ ( ಬ್ರಹ್ಮ ಸಂದ್ರ ಅಲ್ಲ)
ಗುರಗುಂಟೆ ಪಾಳ್ಯ
ಕಾಡಬೀಸನಹಳ್ಳಿ
ಗಂಗೇನಹಳ್ಳಿ ( ಈಗ ಗಂಗಾನಗರ
ಅತ್ತಿಬೆಲೆ
ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !?
ಗಂಗೇನಹಳ್ಳಿ ( ಈಗ ಗಂಗಾನಗರ Sad ) ಇದರಂತೆ ಮುಂದೆ
ಬೊಮ್ಮನಹಳ್ಳಿ = ಬ್ರಹ್ಮ ನಗರ
ಗುರಗುಂಟೆ ಪಾಳ್ಯ = ಗುರು ನಗರ
ಕಾಡಬೀಸನಹಳ್ಳಿ = ಅರಣ್ಯ ಬೀಷ್ಮ ನಗರ
ಅತ್ತಿಬೆಲೆ = ಔದುಂಬರಮೌಲ್ಯ
ಅಂತ ಆದರೂ ಯಾವ ಸೋಜಿಗವಿಲ್ಲ.
ಮೈಸೂರಲ್ಲೂ ದಟ್ನಳ್ಳಿ - ರಾಮಕೃಷ್ಣನಗರ, ಮೇಟ್ನಳ್ಳಿ - ದ್ವಾರಕಾ ನಗರ ಆಗಿವೆ, ಕುಕ್ಕರಳ್ಳಿ - ಜಯಲಕ್ಷ್ಮೀ ಪುರಂ( ಆದರೆ ಜಯಲಕ್ಷ್ಮೀಪುರಂ ಅಲ್ಲಿರುವ ಕೆರೆ ಹೆಸರು ಕುಕ್ಕರಳ್ಳಿ ಕೆರೆ
)
ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !?
ಚಾಮಿ, ಹಂಸಾನಂದಿಗಳೆ,
ಉಪಸರ್ಗದ ಹಾವಳಿಯು ನಿಮಗೂ ಚನ್ನಾಗಿ ಗೊತ್ತು! ಅದರ ಮೇಲೆ ಮುನಿಸಿಗಿಂತ ಮುಜುಗುರ, ಇರುಸು-ಮುರುಸ ಜಾಸ್ತಿ. ಇದಕ್ಕೆ ಕಾರಣ ನೀವೇ ಹೇಳಿದ್ದೀರ. ಅಲ್ವಾ. ನನಗಂತೂ ಈ ಉಪಸರ್ಗ ಹಾಕಿ ಹೊಸ ಸಂಸ್ಕೃತ ಪದ ಹುಟ್ಟಿಸುವುದು ಕನ್ನಡ ಮತ್ತು ಸಂಸ್ಕೃತ ಎರಡು ಮಾಡಿದ ದೊಡ್ಡ ಮೋಸ ಎಂದೇ ತೋರುವುದು. ನಿಮಗೂ ಉಪಸರ್ಗದಿಂದ ನೆಮ್ಮದಿ ಇಲ್ಲ ಅಂತ ಗೊತ್ತು
.
ಈಗ ಹಾಸನದ ಮಂಗಳವಾರದ ಸಂತೆಗೆ ಹೋಗಿ ಕೇಳಿ. ಕಿರಣ ಅಂದರೆ ಏನು? ಕದಿರ್ ಎಂದರೆ ಏನು ಅಂತ. ಮತ್ತೆ ದಿನ ಅಂದರೆ ಏನು, ನಾಳ್ ಎಂದರೆ ಏನು ಅಂತ. ಸರಿ ಉತ್ತರ ಯಾವುದಕ್ಕೆ ಬರತ್ತೆ ಅನ್ನೋದು ನನಗೂ ಗೊತ್ತು. ನಿಮಗೂ ಗೊತ್ತು!
ಸಾರಾಂಶ: ಇವತ್ತು ಯಾವ ಮಾತು ಹೆಚ್ಚು ಅರ್ಥವಾಗುತ್ತೋ, ಅದನ್ನು ಇಟ್ಟುಕೊಳ್ಳೋದು ಒಳ್ಳೆಯದು; ಪಂಪ - ಕುಮಾರ ವ್ಯಾಸರ ಕಾಲಕ್ಕೆ (ಅಥವಾ proto dravidian ಗೇ ಹೋಗಬೇಕಾಗಿಲ್ಲ Smiling
ಸರಿ ಮಂಗಳವಾರ ಸಂತೆಯವರಿಗೆ, ವಿಕಿರಣ, ವಿಭಜನೆ, ಪರಮಾಣು, ಕೀಟಾಣು, ಪತ್ರಹರಿತು, ವಿಸ್ಮಯ, ಅಗ್ರ ರಾಷ್ಟ್ರೀಯ ವಾರ್ತೆ ಇವು ಗೊತ್ತೋ? ಗೊತ್ತಿಲ್ಲ ಅಲ್ವಾ!
radiation ಕನ್ನಡಕ್ಕೆ ಹೊಸ ಸಂಗತಿಯೇ! ಹೆಚ್ಚ ಕನ್ನಡಿಗರಿಗೆ ಇದು ಇನ್ನೂ ಗೊತ್ತಿಲ್ಲ. ಏನೋ ನಮ್ಮಂತ ಪಟ್ಟಣಿಗರಿಗೆ ಗೊತ್ತಿರಬಹುದು.
ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !?
ಚಾಮಿ, ಹಂಸಾನಂದಿಗಳೆ,
ಉಪಸರ್ಗದ ಹಾವಳಿಯು ನಿಮಗೂ ಚನ್ನಾಗಿ ಗೊತ್ತು! ಅದರ ಮೇಲೆ ಮುನಿಸಿಗಿಂತ ಮುಜುಗುರ, ಇರುಸು-ಮುರುಸ ಜಾಸ್ತಿ. ಇದಕ್ಕೆ ಕಾರಣ ನೀವೇ ಹೇಳಿದ್ದೀರ. ಅಲ್ವಾ. ನನಗಂತೂ ಈ ಉಪಸರ್ಗ ಹಾಕಿ ಹೊಸ ಸಂಸ್ಕೃತ ಪದ ಹುಟ್ಟಿಸುವುದು ಕನ್ನಡ ಮತ್ತು ಸಂಸ್ಕೃತ ಎರಡು ಮಾಡಿದ ದೊಡ್ಡ ಮೋಸ ಎಂದೇ ತೋರುವುದು. ನಿಮಗೂ ಉಪಸರ್ಗದಿಂದ ನೆಮ್ಮದಿ ಇಲ್ಲ ಅಂತ ಗೊತ್ತು Smiling.
ಸರಿ ಮಂಗಳವಾರ ಸಂತೆಯವರಿಗೆ, ವಿಕಿರಣ, ವಿಭಜನೆ, ಪರಮಾಣು, ಕೀಟಾಣು, ಪತ್ರಹರಿತು, ವಿಸ್ಮಯ, ಅಗ್ರ ರಾಷ್ಟ್ರೀಯ ವಾರ್ತೆ ಇವು ಗೊತ್ತೋ? ಗೊತ್ತಿಲ್ಲ ಅಲ್ವಾ!
radiation ಕನ್ನಡಕ್ಕೆ ಹೊಸ ಸಂಗತಿಯೇ! ಹೆಚ್ಚ ಕನ್ನಡಿಗರಿಗೆ ಇದು ಇನ್ನೂ ಗೊತ್ತಿಲ್ಲ. ಏನೋ ನಮ್ಮಂತ ಪಟ್ಟಣಿಗರಿಗೆ ಗೊತ್ತಿರಬಹುದು.
ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !?
ಇಲ್ಲಿ ವಿಕಿರಣ ಅನ್ನೋ ಪದ "nuclear decay" ಅನ್ನೋ ಪದದಿಂದಾಗಿ ಬಂದದ್ದು ಅಂತ ನನ್ನ ಅನಿಸಿಕೆ.
ಅಂದರೆ, ಒಡೆಯುತ್ತಿರುವ, ನಶಿಸುತ್ತಿರುವ ಪದಾರ್ಥದಿಂದ ಹೊಮ್ಮುವ ಬೆಳಕು ಆದ್ದರಿಂದ ಅದನ್ನು ವಿಕಿರಣ ಅಂದಿರಬಹುದು.
ತಪ್ಪೋ, ಸರಿಯೋ- ಅದರೆ ಪದಗಳಿಗೆ "ಅರ್ಥ ಪರಂಪರೆ"ಯ ಭಾರ ತಪ್ಪಿದ್ದಲ್ಲ. ಆ ಪರಂಪರೆ ಎಷ್ಟೇ ಕಿರಿದಾದರೂ ಇರಬಹುದು.
ಉ: ray ಕಿರಣ ಆದ್ರೆ radiation ವಿಕಿರಣ ಅಂತೆ !?
ಅನಿವಾಸಿಗಳೆ,
nuclear decay ಗೂ ಮತ್ತು ವಿಕಿರಣಕ್ಕೂ ಎತ್ತಣ ನಂಟು....ತಿಳೀಲಿಲ್ಲ
decay ಅಂದ್ರೆ The process of gradually becoming inferior, A gradual decrease; as of stored charge or current
ಅಂದ್ರೆ 'ಒಂದೇ ಅಳತೆಯಲ್ಲಿ ಕಡಿಮೆಯಾಗು' ಅಂತ ತಲೆಗಿಳಿಸಿಕೊಳ್ಳಬಹುದು.
ಒಟ್ಟಿನಲ್ಲಿ ಒಂದು ವಸ್ತುವು ಒಂದೇ ಅಳತೆಯಲ್ಲಿ ಕಡಿಮೆಯಾವುದಕ್ಕೆ ಈ ರೀತಿ 'ಹೊರಹೊಮ್ಮುವಿಕೆ' ಯಾಗುತ್ತದೆ(ಮತ್ತು viceversa)..... ಇಲ್ಲಿ ಯಾವ 'ವಿಕಿರಣ'ವೂ ಇಲ್ಲ..
ನನಗೆ ಹತ್ತನೆ ಇಯತ್ತೆಯಲ್ಲಿರುವ ಮಕ್ಕಳು ಇದನ್ನು ಹೇಗೆ ತಲೆಗಿಳಿಸಿಕೊಂಡಿರುತ್ತಾರೆ ಎಂಬ ಐಬು ಕಾಡುತ್ತಿದೆ.