ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಸಂಪದ ಆರ್ಕೈವಿನಿಂದ

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ

ಅಪ್ಪಟ ಕನ್ನಡ ಶಬ್ದಗಳ ಬಳಕೆ ಹೆಚ್ಚಿಸಲು ಹಳೆಗನ್ನಡದ ಹುಡುಕಾಟವಾಗಬೇಕು ನುಡಿ ಪಂಡಿತರು ಹೇಳಿದ್ದಾರೆ. ಹಳೆಗನ್ನಡ ಕಶ್ಟ ಮತ್ತು ಜಡ ಎಂಬ ಅನಿಸಿಕೆ ತೊರೆದು ಅದನ್ನು ಅರಿಯುವ ಬಗ್ಗೆ ಜತುನಗೈಯಿರಿ ಎಂದು ಹೇಳಿದ್ದಾರೆ. ಅಳಿಯುತ್ತಿರುವ ಹಳೆಗನ್ನಡದ ಒರೆಗಳನ್ನು ಉಳಿಸಿ ಬೆಳೆಸುವ ಹೊಣೆ ಕನ್ನಡಿಗರದು.

ಇವತ್ತಿನ ವಿ.ಕ.ದಲ್ಲಿ ಇದರ ಬಗ್ಗೆ ಬರಹ ಬೆಳಕಿಗೆ ಬಂದಿದೆ.

http://vijaykarnatakaepaper.com/pdf/2007/06/25/20070625a_005101004.jpg

ಸಂಪದದಲ್ಲಿ ಹಲವು ಸಂಪದಿಗರು ಇದ್ರ ಬಗ್ಗೆ ಬ್ಲಾಗುತ್ತಿದ್ದರೂ ಇದಕ್ಕೆ ಒತ್ತಾಸೆಯಾಗಿ ನುಡಿ ಪಂಡಿತರು ಹೇಳಿಕೆ ನೀಡಿರುವುದು  ಒಳ್ಳೆಯ ಬೆಳವಣಿಗೆ.

ಇನ್ನಾದರೂ ಕನ್ನಡಿಗರೂ ಎಚ್ಚೆತ್ತುಕೊಳ್ಳುತ್ತಾರೆ ಅನ್ಕೊಳ್ಳಬಹುದೇ?

No votes yet

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ

mahesha's picture

ಅಪ್ಪಟ ಕನ್ನಡ ಒರೆಗಳಿಗೆ ಹುಡುಕಾಟವೇಕೆ ಬೇಕು?

ನಾವು ಆಡೋ ಕನ್ನಡದಾಗೇ ಹೇರಳವಾಗಿ ಅಪ್ಪಟಕನ್ನಡದ ಒರೆಗೊಳವೆ. ಅವನ್ನೇ ಬಳಸಿಕೊಂಡಿದ್ರೆ ಆಯ್ತು.

ಸುಮ್ನೆ ಶೋಕಿಗೆ ಸಂಸ್ಕ್ರುತ ಬರೆಸದೇ ನೆಟ್ಟಗೆ ಆಡೋ ಹಂಗೆ ಬರೆದ್ರೆ, ಅದ್ರಾಗೆ ಹಚ್ಚು ಅಪ್ಪಟ ಒರೆಗಳೇ ಇರ್ತಾವೆ!
ಬರೀ ಈ ಪೇಪರ್ರು‍, ಬಾಸಣ, ಬರವಣಿಕೆ(ಕೆಲವರಂತೂ ತೀರಾ) ಇದ್ರಾಗೆ ಯಕ್ಕಾಮಕ್ಕ ಸಕ್ಕದ ಹಾಕಿ ಕಲಸ್ತಾರೆ!

ಅಂತೂ ನಮ್ ಕನ್ನಡ ಪಂಡಿತರ್ಗೆ ಅಪ್ಪಟ ಕನ್ನಡ ಅಂದ್ರೆ ಸಂಸ್ಕ್ರುತವಿಲ್ಲದ್ದು ಅಂತ ಈಗಾದ್ರು ಹೊಳೇತಲ್ಲ!! ಬಲು ನಲಿವು! :)

ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ

mahesha's picture

"ಹಚ್ಚು ಅಪ್ಪಟ ಒರೆಗಳೇ" = "ಹೆಚ್ಚು ಅಪ್ಪಟ ಒರೆಗಳೇ" ಅನ್ಕೊಳ್ಳಿ!

ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ

ವೈಭವ's picture

ಹೌದು .. ಆಡೋ ಕನ್ನಡವನ್ನೇ ಮೊದಲು ನೋಡಬೇಕು.

ಆದರೆ ಈ ನುಡಿ ಪಂಡಿತರು ಒಂದು ಹೆಜ್ಜೆ ಮುಂದೆ ಹೋಗಿ ಆಡೊ ಕನ್ನಡದಲ್ಲಿ ಸಿಗಲಿಲ್ಲ ಅಂದ್ರೆ ಹಳೆಗನ್ನಡದಲ್ಲಿ ಹುಡುಕಿ ಅಂತ ಹೇಳಿದಾರೆ ಅನ್ಸುತ್ತೆ.

ಉದಾ: 'ಮೊಗಸು' = ಜತುನ= ಪ್ರಯತ್ನ ..ಇಲ್ಲಿ ಮೊಗಸು ಆಡೋ ಕನ್ನಡದಲ್ಲಿ ಸಿಗಲ್ಲ... ಆದ್ರೆ ಹಳೆಗನ್ನಡದಲ್ಲಿ ಇದೆ.

ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ

mahesha's picture

ಓ ಹಾಗಾ.. ಇದನ್ನೇ ಸಂಕರ ಬಟ್ರೂ ಹೇಳಿದ್ದು.

ಮಾದರಿ = ಉದಾಹರಣೆ = example!

'ಪಂಡಿತ'ಕ್ಕೂ ಕನ್ನಡದಲ್ಲಿ ಒರೆ ಇದೆ...

http://dsal.uchicago...

ಚದುರ, ಕಲಿ, ಬಲ್ಲ,
ಅರಿಗಾರ, ತಿಳಿಗಾರ ಇವೂ ಪಂಡಿತಕ್ಕೆ ಸಮವಾಗ ಬಹುದು.

ಕಲೆ - ಕನ್ನಡದ ಒರೆ

ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ

ವೈಭವ's picture

ಕಲೆ = art , ಕಲೆ = mark,

ಯಾವ ಕಲೆ ನೀವು ಹೇಳ್ತಾ ಇರೋದು ?

ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ

mahesha's picture

http://dsal.uchicago...

ಕಲೆ = art
Ka. kal (kalt-), kali (kalit-) to learn;
kalisu, kalusu to teach;
kal learning;
kali a learned man;
kalike learning, skill;
kalita, kalpi learning, erudition;
kaliyuvike act of learning, learning;
kale an art.

mark = ಗುರುತು, ಕರೆ, ಕಲೆ
http://dsal.uchicago...

ಎರಡು ಕಲೆಗಳು ಕನ್ನಡದವೆ.

ಉ: ಹಳೆಗನ್ನಡದಲ್ಲಿ ಹುಡುಕಾಟ ನಡೆಸಿ. ಅಚ್ಚಗನ್ನಡ ಉಳಿಸಿ - ವಿ.ಕ ಬರಹ

kadakolla05's picture

ಉದಾಹರಣೆಗೆ ಬದಲಾಗಿ ಕನ್ನಡದಲ್ಲಿ ಯಾವ ನುಡಿ ಇದೆಯೆಂದು ಹುಡುಕುತ್ತಿದ್ದೆ. ಇಲ್ಲಿ ನೋಡಿ ತುಂಬಾ ಗೆಲುವಾಯಿತು ನನ್ನೆದೆಗೆ.
ಮನಸ್ಸಿಗೆ ಬದಲಾಗಿ ಕನ್ನಡದಲ್ಲಿ ಯಾವ ಪದ ಇದೆ? ಅಚ್ಚ ಕನ್ನಡಗಳ ನುಡಿಗಂಟು ಯಾವುದಿದೆ ನನಗೆ ತಿಳಿಸಿ.

ನನ್ನಿ
ಸ್ವಾಮಿ
ಪುಣೆ