ಹಿಂದು ಏನಿದು? ಅದರ ಸಿದ್ದಾಂತವೇನು
http://sampada.net/forum/4670#comment-8888
ಈ ಎಳೆಯಿಂದ...
ಪ್ರಪಂಚ
Hindu followers doubled in Australia Smiling
ಮಹೇಶ
ಈ ಮೇಲಿನ ಹಿಂದುಗಳು ದ್ವೈತದವರ, ಅದ್ವೈತದವರ, ಯಾವ ಸಿದ್ಧಾಂತವನ್ನು ಒಪ್ಪಿಕೊಂಡವರು?
ಹಿಂದು ಅನ್ನೋದು ಅಲ್ಲಿ religion ಅಂತ ಬಳಕೆಯಾಗಿದೆ. ಇಲ್ಲಿ ಅದು ಒಂದು lifestyle ಅಂದು ನುಣುಚಿಕೊಳ್ಳಬಾರದು!
ಹಿಂದು ಅನ್ನೋದು ಯಾವ ಸಿದ್ದಾಂತ? ದ್ವೈತವೋ, ಅದ್ವೈತವೋ? ಇಲ್ವೇ ಅದಕ್ಕೆ ಸಿದ್ದಾಂತವೇ ಇಲ್ವಾ?
ಪ್ರಪಂಚ
ಹಿ೦ದೂ ದರ್ಮವೆ೦ದ ತಕ್ಷಣ ಕೆಲವರ ಮನಸ್ಸಿಗೆ ಬರುವುದು ಜಾತಿ, ಉಪ ಜಾತಿ ಮತ್ತು ಇದರಲ್ಲಿರುವ ಅನಾಚಾರಗಳೇ!.
ಔದು ಈ ಪದ್ದತಿ ಮತ್ತು ಅನಾಚಾರಗಳು ದಶಕಗಳ ಹಿ೦ದೆ ಇತ್ತು, ಆದರೆ ಈಗ ಸಾಕಷ್ಟು ಬದಲಾಗಿದೆ. ಮೊದಲು ಹಿ೦ದೂ ಎ೦ದರೆ ಮೊದಲು ಕೇಳುತ್ತಿದ್ದ ಪ್ರಶ್ನೆಯೇ ನೀವೆಳಿದ ಹಾಗೆ ಶೈವರೋ? ವೈಷ್ಣವರೋ? ಇತ್ಯಾದಿ.
ಆದರೆ ಇ೦ದು ಇದು ಬದಲಾಗಿದೆ. ಈ ಬದಲಾವಣೆಗೆ ಅನೇಕ ಕಾರಣಗಳಿವೆ. ಮುಖ್ಯವಾಗಿ ನಮ್ಮ ಎಡ ಪ೦ಥೀಯರು, ವಿಚಾರವಾದಿಗಳು ಮತ್ತು ಬುದ್ದಿಜೀವಿಗಳು ಹಿ೦ದೂ ದರ್ಮದಲ್ಲಿರುವ ಅನಾಚಾರ ಒ೦ದನ್ನೇ ಇಡಿದು ಇಡೀ ದರ್ಮವೇ ಒ೦ದು ನಾಲಾಯಕ್ ಎ೦ದು ಬಣ್ಣಿಸಲು ಹೊರಟಿರುವುದೂ ಒ೦ದು.
ಇ೦ದು ಸದ್ಯ ಹಿ೦ದೂ ದರ್ಮದ ಶೈವ, ವೈಷ್ಣವ ಮು೦ತಾದ ಗು೦ಪುಗಳ ಮದ್ಯೆ ಇದ್ದ ಪರದೆ ನಿದಾನವಾಗಿ ಅದ್ರುಶ್ಯಗೊಳ್ಳುತ್ತಿದೆ. ಹಾಗಾಗಿ australiaದ ಹಿ೦ದೂ ಜನತೆಯು just hindus & need not identify with any of the above group.
Also hindu's have always extracted possitives out of past practices. So today practicing hindu darma from outsider's perspective is being vegetarian, meditation,yoga, practicing non-voilence and living simple life etc.,
Is it not a good development?
ಮಹೇಶ
ನೀವು ನನ್ನ ಕೇಳ್ಮೆಗಳಿಗೆ(ಪ್ರಶ್ನೆಗಳಿಗೆ) ಮರುಹೇಳಲಿಲ್ಲ!!
ನನ್ನ ಕೇಳ್ಮೆ ಇವು...
ಈ ಮೇಲಿನ ಹಿಂದುಗಳು ದ್ವೈತದವರ, ಅದ್ವೈತದವರ, ಯಾವ ಸಿದ್ಧಾಂತವನ್ನು ಒಪ್ಪಿಕೊಂಡವರು?
ಹಿಂದು ಅನ್ನೋದು ಅಲ್ಲಿ religion ಅಂತ ಬಳಕೆಯಾಗಿದೆ. ಇಲ್ಲಿ ಅದು ಒಂದು lifestyle ಅಂದು ನುಣುಚಿಕೊಳ್ಳಬಾರದು!
ಹಿಂದು ಅನ್ನೋದು ಯಾವ ಸಿದ್ದಾಂತ? ದ್ವೈತವೋ, ಅದ್ವೈತವೋ? ಇಲ್ವೇ ಅದಕ್ಕೆ ಸಿದ್ದಾಂತವೇ ಇಲ್ವಾ?
ಇನ್ನು ಸಲೀಸಾಗಿ. ಯಾರನ್ನು ಹಿಂದು ಎಂದು ಗುರುತಿಸಬೇಕು? ಇದಕ್ಕೊಂದು ನಿಕ್ಕುವವಾದ ದಾರಿ ಹೇಳಿರಿ.!
ಪ್ರಪಂಚ, ನಿಮ್ಮ ಮಾತು ನೋಡಿದರೆ, ಕಂಡಕಂಡವರೆಲ್ಲ ಹಿಂದುಗಳು!
ಪ್ರಪಂಚ
ತಾವು ಕೇಳಿದ ಸ೦ದಿಗ್ದ ಪ್ರಶ್ನೆಗೆ ಉತ್ತರ ಹೇಳುವಷ್ಟು ನಾನು ಬ್ರಹ್ಮ ಜ್ನಾನಿಯಲ್ಲ.
ಆದರೂ ಹಿ೦ದೂ ಧರ್ಮದಕ್ಕೆ ಇತರೆ ದರ್ಮಗಳಿಗಿರುವ೦ತೆ ಸೀಮಾ ರೇಖೆಯಿಲ್ಲ. baptise ಆದವನೇ ಕ್ರೈಸ್ತ, ಮು೦ಜಿಯಾದವನೇ ಮುಸಲ್ಮಾನ ಹೀಗೆ ಇತರೆ ದರ್ಮಗಳಲ್ಲಿರುವ ಪದ್ದತಿಯು ಹಿ೦ದೂನಲ್ಲಿಲ್ಲ.
ದ್ವೈತ, ಶೈವ ಹಾಗೂ ಇತರೆ ಗು೦ಪುಗಳ ವಿ೦ಗಡೆನೆ ಇ೦ದು ಪ್ರಸ್ತುತವಲ್ಲ. ಹಿ೦ದೂ ದರ್ಮಿಗರ ಸಮಸ್ಯೆಯೆ೦ದರೆ, ಬಹುತೇಕ ಜನ ದರ್ಮ ಪಾಲಿಸದಿರುವುದು ಅಥವ ತಮ್ಮ ಅನುಕೂಲಕ್ಕೆ ತಕ್ಕನಾಗಿ ತಿರುಚಿ ಪಾಲಿಸುವುದು. ಸರಿಯಾದ ಹಿ೦ದೂ ದರ್ಮ ಪಾಲನೆಯೆ೦ದರೆ, ಪರದರ್ಮ ಸಹಿಷ್ಣುತೆ, ಅಹಿ೦ಸೆ, ಸದಾಚಾರ ಮು೦ತಾದುವು.
ಮಹೇಶ
ಸರಿ ನೀವು, ನೀವೇ ಸಾರುವ ಹಿಂದು ದರುಮದ ಸಿದ್ದಾಂತವನ್ನು ತಿಳಿಯಲು "ಬ್ರಹ್ಮ ಜ್ಞಾನಿಯಲ್ಲ" Smiling
ನಾನು ಕೇಳುದ್ದು 'ಸಂದಿಗ್ಧ'ವೂ ಅಲ್ಲ.!!! ತಾವು 'ಇದು' ಎಂದು ಹೇಳಿಕೊಂಡುವರು, ಅದು ಏನು ಎಂದು ಮೊದಲು ತಿಳಿದುಕೊಂಡಿರಬೇಕಲ್ವಾ?
ಸರಿಯಾದ ಹಿ೦ದೂ ದರ್ಮ ಪಾಲನೆಯೆ೦ದರೆ, ಪರದರ್ಮ ಸಹಿಷ್ಣುತೆ, ಅಹಿ೦ಸೆ, ಸದಾಚಾರ ಮು೦ತಾದುವು.
ಸದಾಚಾರ ಅಂದರೆ? ಪರಧರ್ಮ ಸಹಿಷ್ಟುಣತೆ ಅಂದರೆ? ಅಹಿಂಸೆ ಅಂದರೆ? ಇದಕ್ಕೆ 'ಹಿಂದು' ಅಂತೆ ಏನು? ಈ ಸಂಸ್ಕ್ರುತ ಒರೆಗಳ ಹುರುಳು ಬಿಡಿಸಿರಿ.
'ಅಹಿಂಸೆ', ನಾನು ಕುರಿ ತಿಂದರೆ ಅದು ಹಿಂಸೆಯೇ? ಅಲ್ಲವೋ?
ಏನೋ ಹೇಳಿ ನುಣುಚಿಕೊಳ್ಳವುದಕ್ಕೆ ನಾನು 'ಬ್ರಹ್ಮಜ್ಞಾನಿಯಲ್ಲ' ಎಂದು ಹೇಳಬೇಡಿ. 'ಬ್ರಹ್ಮಜ್ಞಾನ' ಅಂದರೆ ಏನು ? ಅಂತ ಕೇಳಬಹುದು. ಆದರೆ ಅದು ಆಮೇಲೆ ಇರಲಿ!! Smiling

- Login or register to post comments
- 697 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಹಿಂದು ಏನಿದು? ಅದರ ಸಿದ್ದಾಂತವೇನು
ಮತ್ತೊಂದು ಚರ್ಚೆಯಿಂದ ಕಡ ತಂದದ್ದು -
http://en.wikipedia.org/wiki/Hindu#What_a_Hindu_is
ಸರ್ವೊಚ್ಚ ನ್ಯಾಯಲಯದ ಮಾತುಗಳಿಗೆ ಎದುರಾಡಲು ನನಗೆ ನಾನಿ ಪಾಲ್ಖಿವಾಲಾರ ಜ್ಞಾನವೂ ಇಲ್ಲ ಅರುಂಧತಿ ರಾಯರ ತಿಕ್ಕಲುತನವೂ ಇಲ್ಲ
ಸಂದೀಪ ಐತಾಳ
ಉ: ಹಿಂದು ಏನಿದು? ಅದರ ಸಿದ್ದಾಂತವೇನು
ನನ್ನಿ! ಐತಾಳರೇ...
ಆದರೆ ಈ ವಿಕೀಪಿಡಿಯ ನಂಬತಕ್ಕದ್ದಲ್ಲ!! ಆದರೆ ಅದನ್ನ ಓದಿದ್ದೇನೆ.
"When we think of the Hindu religion, we find it difficult, if not impossible, to define Hindu religion or even adequately describe it. Unlike other religions in the world, the Hindu religion does not claim any one prophet; it does not worship any one God; it does not subscribe to any one dogma; it does not believe in any one philosophic concept; it does not follow any one set of religious rites or performances; in fact, it does not appear to satisfy the narrow traditional features of any religion of creed. It may broadly be described as a way of life and nothing more."
ಇಲ್ಲೇ ಇರೋದು ಎಡವಟ್ಟು.!!
ಹಿಂದು ಅನ್ನೋ ಪದವೇ ನಮ್ಮ ಭಾರತದ ನುಡಿಯದ್ದಲ್ಲ!! ಅದೊಂದು ಪಾರಸೀ/ಇರಾನಿ/Avestan ಪದ.
http://en.wikipedia.org/wiki/Hindu#Origins_of_the_word_Hindu
ಇರಾನರಿಗೆ ಸಿಂಧು ಹೊಳೆ ಮೂಡಣಕ್ಕೆ ಇರುವುದೆಲ್ಲ ಹಿಂದೂ ದೇಶ!
ಆದರೆ ಈ 'ಹಿಂದು' ಅನ್ನೋದು ಒಂದು ಜಾತಿಯಲ್ಲ, ನಂಬಿಕೆಯಲ್ಲ, ಅದಕ್ಕೆ ಸಿದ್ಧಾಂತವೇ ಇಲ್ಲ( ಇಲ್ಲ ಎಲ್ಲ ಸಿದ್ಧಾಂತವೂ ಅದರಲ್ಲಿ ಒಪ್ಪಿಗೆ ಆಗಿದೆ ).
ಈ ಹಿಂದು ಅನ್ನೋದನ್ನ ಇರಾನಿಯರು ಸಿಂಧು ಹೊಳೆಯ ಮೂಡಣ ಬದಿಯ ಮಂದಿಯನ್ನೆಲ್ಲ ಕರೆದ 'ಹೆಸರು'. ಹೇಗೆ ನಾಮ್ಮ ಮಹಾಭಾರತದಲ್ಲಿ ಆರ್ಯರು/ಕುರನಾಡಿನವರು 'ಮ್ಲೇಚ್ಛ'ರು, ಮ್ಲೇಚ್ಛ ದರುಮದವರು ಎಂದು ಒಂದು ಜನಾಂಗವನ್ನು ಕರೆದಿದ್ದಾರೋ, ಹಾಗೆ.
ಈ ಹಿಂದು ಅನ್ನೋದಕ್ಕೆ ಒಂದು ದರುಮ-ಹೊತ್ತಗೆ ಇಲ್ಲ, ಇಲ್ಲ ಎಲ್ಲ ಹೊತ್ತಗೆಗಳೂ ಅದರ ದರುಮ-ಗ್ರಂಥಗಳು!
"it does not worship any one God;" ಈ ಮಾತು ಐತಾಳರ ಕೊಂಡಿಯಿಂದ.
ಹಾಗಾದಲ್ಲಿ. ರಾಮ ಯಾರು? ಶಿವ ಯಾರು?
"it does not follow any one set of religious rites or performances;"
ಹಾಗಾದರೆ! ದೇವಸ್ಥಾನ, ಜನ್ಮಭೂಮಿ, ಮಡಿ, ದೇವಸ್ಥಾನಕ್ಕೆ ಬೇರೆಯವರನ್ನು ಬಿಡುವುದು ಇವಕ್ಕೆ ಹಿಂದು ದರುಮದಲ್ಲಿ ಅರ್ಥವೇ ಇರಲ್ಲ!!
ಉ: ಹಿಂದು ಏನಿದು? ಅದರ ಸಿದ್ದಾಂತವೇನು
@ ""ಆದರೆ ಈ ವಿಕೀಪಿಡಿಯ ನಂಬತಕ್ಕದ್ದಲ್ಲ"" - ನಾನು ಹೇಳಿದ ತೀರ್ಪು ಕೊಟ್ಟಿದ್ದು ಭಾರತದ ಸರ್ವೊಚ್ಚ ನ್ಯಾಯಾಲಯ "Bramchari Sidheswar Shai and others (Ramakrishna Mission) Versus State of West Bengal. ಸುಪ್ರೀಂ ಕೋರ್ಟ್ ಹೇಳಿದ್ದು ಎಡವಟ್ಟು ಅನ್ನೋಕ್ಕೆ ಸಾಧ್ಯ ಆಗ್ತಾ ಇದ್ದದ್ದು "ನಾನಿ ಪಾಲ್ಖಿವಾಲಾರಿಗೆ" ಮತ್ತು ಅವರಿಗೆ ಮಾತ್ರ. ಇದು "Question of Fact" & not "Question of opinion"... ಇಲ್ಲಿ ನಂಬಿಕೆಯ ಪ್ರಶ್ನೆ ಬರಲ್ಲ. ಆದ್ರೂ ವಿಕಿ ಪೀಡಿಯ ತುಂಬ ಡೆಮಾಕ್ರಟಿಕ್ ಮತ್ತು "Least faulty " ಜಾಗ. Exceptions are there.. but exceptions prove the rule
[ಈ ಕೇಸಿನ ಹಿನ್ನಲೆ ಕೂಡ ಸ್ವಾರಸ್ಯವಾಗಿದೆ. ಎಡವಟ್ಟು ಸರ್ಕಾರ ತನ್ನ ರಾಜಕೀಯ ಉದ್ದೇಶಗಳನ್ನ ರಾಮಕೃಷ್ಣ ಮಿಶನ್ನಿನ ಮೇಲೆ ಹೇರತೊಡಗಿದಾಗ ಮಿಶನ್ನು ಅನಿವಾರ್ಯವಾಗಿ ನಾವು ಹಿಂದುಗಳೇ ಅಲ್ಲ ನಮ್ಮದೇ ಬೇರೇ ಮತ, ನಾವು ಅಲ್ಪಸಂಖ್ಯಾತರು ಅಂತ ಹೇಳಿದ್ದು.(ಅಲ್ಪ ಸಂಖ್ಯಾತರ ಸಂಸ್ತೆಗಳಲ್ಲಿ ಸರ್ಕಾರ ಏನೂ ಮಾಡೋ ಹಾಗಿಲ್ಲ). ]
'ಹಿಂದು' ಪದದ ಹುಟ್ಟಿನ ವಿಷಯ ಬದಿಯಲ್ಲಿ ಇರಲಿ. "Words have no meanings but opinions".
1. "" ಆದರೆ ಈ 'ಹಿಂದು' ಅನ್ನೋದು ಒಂದು ಜಾತಿಯಲ್ಲ, ನಂಬಿಕೆಯಲ್ಲ, ಅದಕ್ಕೆ ಸಿದ್ಧಾಂತವೇ ಇಲ್ಲ( ಇಲ್ಲ ಎಲ್ಲ ಸಿದ್ಧಾಂತವೂ ಅದರಲ್ಲಿ ಒಪ್ಪಿಗೆ ಆಗಿದೆ ).""
2. ""ಈ ಹಿಂದು ಅನ್ನೋದಕ್ಕೆ ಒಂದು ದರುಮ-ಹೊತ್ತಗೆ ಇಲ್ಲ, ಇಲ್ಲ ಎಲ್ಲ ಹೊತ್ತಗೆಗಳೂ ಅದರ ದರುಮ-ಗ್ರಂಥಗಳು!""
3.""ಹಾಗಾದರೆ! ದೇವಸ್ಥಾನ, ಜನ್ಮಭೂಮಿ, ಮಡಿ, ದೇವಸ್ಥಾನಕ್ಕೆ ಬೇರೆಯವರನ್ನು ಬಿಡುವುದು ಇವಕ್ಕೆ ಹಿಂದು ದರುಮದಲ್ಲಿ ಅರ್ಥವೇ ಇರಲ್ಲ!!""
ನೀವು ಸರಿ ದಾರಿಯಲ್ಲೆ ಅರ್ಥ ಮಾಡ್ಕೊತಾ ಇದ್ದೀರ(1,2&3) ..........'ಹಿಂದೂ' ಒಂದು abstract ಆದ Definition. ಈ Definition ಕೂಡ Exclusive (And definitely NOT Inclusive). ಇದರಲ್ಲಿ ತುಂಬ circular loop ಗಳು ಇವೆ.
ಸಾಮಾಜಿಕ ಪೀಡೆಗಳನ್ನು ನೋಡಿ "Basic framework"ನ ಆಶಯಗಳಿಗೆ ಧಕ್ಕೆ ತರಬಾರದು
On a Philosophical note,
"ದೇವ ಒಬ್ಬ ನಾಮ ಹಲವು" & " ಮೋಕ್ಷದ ಡಾರಿಗಳು ಹಲವು" ನಮ್ಮ ನಮ್ಮ ದಾರಿಗಳನ್ನು ನಾವು ಆರಿಸಿಕೊಲ್ಲಬಹುದು". ಎಂತ ಡೆಮಾಕ್ರಟಿಕ್ / ಅದ್ಭುತವಾದ ಕಲ್ಪನೆ. Contrarian ಜನರನ್ನೂ ಹಿಂದೂಗಳು ಅನ್ನಬಹುದು. ಚಾರ್ವಾಕ / ನಾಸ್ತಿಕವಾದವೂ ಇದರೊಳಗೆ ಬರುತ್ತೆ (ನಮ್ಮ ನಾರಣಪ್ಪನೂ ಹಿಂದೂನೆ). ಸ್ವಲ್ಪ ಹಿಂಜಿದರೆ. ಜಗತ್ತಿನ ಎಲ್ಲಾ ಮತಗಳನ್ನೂ ಇದರೊಳಗೆ ಸೇರಿಸಬಹುದು.
ಸಂದೀಪ ಐತಾಳ
ಉ: ಹಿಂದು ಏನಿದು? ಅದರ ಸಿದ್ದಾಂತವೇನು
ಇಲ್ಲಿ ಇನ್ನೂ ಗೊಂದಲ... ಪ್ರಶ್ನೆಗಾಗಿ ಪ್ರೆಶ್ನೆ ಮಾಡ್ತಿಲ್ಲ!
ಒಂದು ಸಾಲು 'ದೇವರು' ಎಂಬುದಿದೆ ಎಂದು ಹೇಳಿದರೆ, ಅದರ ಮರುಸಾಲೇ, ನಾಸ್ತಿಕ/ದೇವರಿಲ್ಲವೆಂಬುವನೂ ಹಿಂದು ಎನ್ನುವುದು!! ಇದು ಹೇಗೆ.
ಹಿಂದು ದರುಮದಲ್ಲಿ 'ದೇವರು' ಅಂತ ಇದೆ ಎಂದು ಹೇಳಿದೆಯೋ ಇಲ್ವೋ?
'ಮೋಕ್ಷ' ಅಂದರೆ ಯಾವುದರಿಂದ ಎಂದು ಹಿಂದು ದರುಮ ಹೇಳುವುದು?
ಜಾರ್ವಾಕರು/ನಾಸ್ತಿಕರು ಇವರೇ ನಾವು "ಯಾವ ದೇವರೂ ಇಲ್ಲ", ನಾವು ಯಾವ ದರುಮಕ್ಕೂ ಸೇರಲ್ಲ, ಅದರೂ ಅವರ ಹಿಂದುಗಳೇ ಆಗ್ತಾರ?
ಶಂಕರಾಚಾರ್ಯರು ಬುದ್ದರ ಮತವನ್ನು ಇದಿರುಗೊಂಡದ್ದು ಯಾಕೆ?
ಹಾಗಾದರೆ ಇಸ್ಲಾಮ್ಮೂ ಹಿಂದೂ ದರುಮೇ ಯಾಕೆ ಆಗಲ್ಲ? ನಾನು ಇಸ್ಲಾಮ್ಮನ್ನು ಒಪ್ಪಿದರೂ ಹಿಂದುವೇ ಆಗಿತೀನಾ? ಕ್ರಿಶ್ಚಿಯನ್ನರೂ ಹಿಂದುಗಳೇ ಆಗ್ತಾರ?
ಒಂದು ವೇಳೆ ನಾನು ಹಿಂದು ಅಲ್ಲ ಎಂದು ಆಗಬೇಕಿದ್ದರೆ ಏನು ಮಾಡಬೇಕು?
ನಿಮ್ಮ ಇಂಗ್ಲೀಶು ನನಗೆ ಸರಿಯಾಗಿ ಅರ್ಥ ಆಗದಿದ್ದರೆ ಮನ್ನಿಸಿರಿ.!! ನಂಗೆ ಇಂಗ್ಲೀಶು ಚನ್ನಾಗಿ ಬರಲ್ಲ!
ಉ: ಹಿಂದು ಏನಿದು? ಅದರ ಸಿದ್ದಾಂತವೇನು
ಹಿಂದು ಧರ್ಮ ಪ್ರತಿಪಾದಿಸುವ ದೇವರು, ಮೋಕ್ಷದ ಮಾರ್ಗವನ್ನೇ ನಿರಾಕರಿಸಿದ ಚಾರ್ವಾಕ, ನಾಸ್ತಿಕ ಮಾರ್ಗವೂ ಹಿಂದು ಧರ್ಮದ ಅಂಗವಾದರೆ ಇಸ್ಲಾಂ, ಕ್ರೈಸ್ತರು ಹಿಂದುಗಳೇ ಎಂಬ ಪ್ರಶ್ನೆ ಬಹಳ ಸೂಕ್ತವಾದದ್ದು...
ಹಿಂದು ಎನ್ನುವುದು ಒಂದು ಜೀವನ ವಿಧಾನ ಎಂಬುದರ ಬಗ್ಗೆ ಹೆಚ್ಚು ತಿಳಿಸಿದರೆ ಉಪಯುಕ್ತವಾದೀತೇನೋ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
ಉ: ಹಿಂದು ಏನಿದು? ಅದರ ಸಿದ್ದಾಂತವೇನು
ನನ್ನಿ!.. ಈ ತಕ್ಕುದಾದ ಕೇಳ್ಮೆಗೆ ಮರುನುಡಿ ಕಾಯುತ್ತಿಹೆನು.
ಇದು ಒಪ್ಪತಕ್ಕ ಮಾತೇ ಅಲ್ಲ.
ಒಬ್ಬ ಕ್ರಿಸ್ತಿಗ/christian ಇಂಗ್ಲೇಸ-ನೆಲದಲ್ಲಿ ಬೇರೆ ತರ ಬದುಕು ಸಾಗಿಸುತ್ತಾನೆ, ಇಂಡಿಯದಲ್ಲಿ ಬೇರೆ ಬಗೆಯಲ್ಲಿ. ಅಂದರೆ ಇವರ ಉಣಿಸು-ತೊಡುಗೆ-ನುಡಿ ಮುಂತಾದವು ಬೇರೆ ಬೇರೆ. ಆದರೆ ಅವರು ನಂಬುವ ಕಡವಳ/ದೇವರು ಒಂದೇ.
'ಬದುಕುವ ಬಗೆ' ಇದು ಒಬ್ಬೊಬ್ಬನದು ಒಂದೊಂದು. 'ಬದುಕುವ ಬಗೆ'ಯನ್ನು ಯಾರು ಹೇಳಿಕೊಡಬೇಕಾಗಿಲ್ಲ. ನಾವು ಹುಟ್ಟಿನಿಂದಲೇ ಹಸಿವಾದ ತಿನ್ನುವುದನ್ನು, ಜೊಂಪು ಹತ್ತಿದಾಗ ಮಲಗುವುದನ್ನು ಕಲಿತೇ ಬಂದಿರುತ್ತೇವೆ..
ಹಾಗಾದರೆ 'ಹಿಂದು' ಎನ್ವ ಒಂದು ನಿಕ್ಕುವ 'ಸಿದ್ದಾಂತ' ಇಲ್ಲ ಎಂದು ಅಂದುಕೊಂಡಿಹೆನು.!!( ಅದು ಮಾರ್ಪಡಬಹುದು )
ಉ: ಹಿಂದು ಏನಿದು? ಅದರ ಸಿದ್ದಾಂತವೇನು
This is from WikiPedia.
Ancient South India
The Vedic culture in South India has been in some respects the best preserved of ancient Vedic culture and traditions, especially when the north of India was dominated by Buddhism and later was affected by Islam.
Tamil literature and Tamil epics and classics have many references to Vedic gods and culture. The Tolkaappiyam, 1st century BCE grammar book, mentions non-Vedic, early-Vedic (Indra, Varuna) and Puranic (Vishnu) gods. The Paripadal (8; 3; 9 etc.), one of the "Eight Anthologies" of poetry (or ettuttokai), has homages to Vishnu, Lakshmi, Brahma, the twelve Adityas, the Ashvins, the Rudras, the Saptarishis, Indra, the Devas etc. The Kural, written by Tiruvalluvar, mentions gods like Indra (25) and Lakshmi (e.g. 167).
The Fifth century CE Tamil epic Silappathikaram, begins with invocations to Chandra, Surya, and Indra, and has homages to Agni, Varuna, Shiva, Subrahmanya, Vishnu-Krishna, Uma, etc. The epic states that “Vedic sacrifices [are] being faultlessly performed” and has many references to Vedic culture and Vedic texts. In the Buddhist work Manimekhalai, the submersion of the city Puhar in Kumari Kandam is attributed to the neglect of the worship to Indra.
Vedic legends
According to the Puranas, the Dravidians are descendants of the Vedic Turvasha people. According to the Matsya Purana, Manu is considered as a south Indian king.[1] In Hindu tradition the creation of the Tamil language is credited to the Rig Vedic sage Rishi Agastya[2].
ಉ: ಹಿಂದು ಏನಿದು? ಅದರ ಸಿದ್ದಾಂತವೇನು
೧) Legends are not history!
೨) ನಮ್ಮ ಕರ್ನಾಡಿನ ಹಳೆಯ ಅರಸರು ಜಿನರು! ತಮಿಳಲ್ಲೂ ಬಲು ಹಳೆಯ ಬರಹಗಳು ಬುದ್ದನ ದರುಮದವು!
೩) ತೆಂಕಣದ ಭಾರತ ಇತಿಹಾಸವೆಂದರೆ ತಮಿಳು ಇತಿಹಾಸವಲ್ಲ.!!
ಅದೂ ತಮಿಳರು ಬಹಳ ಹಿಂದಿನಿಂದಲೇ ಸಂಸ್ಕ್ರುತದ ಹಗೆ ಮಾಡಿಕೊಂಡು ಬಂದವರು. ಅವರು ಆರ್ಯ-ಆರಿಯ ಮೇಲಿನ ಸಿಟ್ಟು ಅವರ ಕಬ್ಬದಲ್ಲಿಯೇ ಇವೆಯಂತೆ! ಇವರೂ ಸಂಸ್ಕ್ರುತವನ್ನು ಆರ್ಯರ-ನುಡಿ ಎಂದು ಅದನ್ನು ದೂರ ತಳ್ಳಿದವರು!
ನಮ್ಮ ತೆಂಕಣದ ಕನ್ನಡ ದೇಶ, ತಮಿಳು, ಚೇರ ದೇಶಗಳು ಇತಿಹಾಸ ಸಿಗುವುದೇ ಅಶೋಕನ ತರುವಾಯ.
ಅಶೋಕನು ಬುದ್ಧನ ದರುಮದವರನು. ಅವನ ತಾತ ಮೌರ್ಯ ಶ್ರವಣಬೆಳಗೊಳದಲ್ಲಿ ಜಿನ ದರುಮ ಒಪ್ಪಿದವನು!
ಇಲ್ಲಿ ಇತಿಹಾಸಕ್ಕಿಂತ.. ಸಿದ್ಧಾಂತ ಮಾತುಕತೆ ಬೇಕು!