ನೆನೆ’ಯದೆ ಇರಲಾರೆ ಸ್ವಾಮೀ ನಿನ್ನ...
ನೆನೆಯುವುದು ಎಲ್ಲರಿಗೂ ಇಷ್ಟ! ಮನಸ್ಸಿಗೆ ಹತ್ತಿರವಾದವರನ್ನು ನೆನೆಯುವುದಾದರೂ ಇರಬಹುದು.. ಮಳೆಯಲ್ಲಿ ನೆನೆಯುವುದಾದರೂ ಆಗಬಹುದು.. ಒಟ್ಟಿನಲ್ಲಿ ನೆನೆಯುವ ಪ್ರಕ್ರಿಯೆಯಲ್ಲಿ ಏನೋ ಒಂದು ಸುಖವಿದೆ. ಸುಖದ ಜೊತೆಗೆ ಸ್ವಾರಸ್ಯವೂ ಇದೆ.
ನಿಘಂಟು ತೆರೆದು ನೋಡಿದರೆ `ನೆನೆ' ಎಂಬ ಕ್ರಿಯಾಧಾತುರೂಪದ ಶಬ್ದಕ್ಕೆ ನಿಮಗೆ ನಾನಾ ಅರ್ಥಗಳೂ, ಸಮಾನಾರ್ಥಕ ಪದಗಳೂ ಸಿಗಬಹುದು. ಆದರೆ ಸ್ಥೂಲವಾಗಿ ಮತ್ತು ಮುಖ್ಯವಾಗಿ ಎರಡು ಅರ್ಥಗಳು - ಒಂದು, `ನೆನಪಿಸಿಕೊಳ್ಳು'; ಇನ್ನೊಂದು `ಒದ್ದೆಯಾಗು'. ಇವೆರಡೂ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದ ಅರ್ಥಗಳು. ಆದರೆ ಪರಸ್ಪರ ಪೂರಕವಾಗಿಯೂ ಪರ್ಯಾಯವಾಗಿಯೂ ಉಪಯೋಗಿಸಿದರೆ/ಅರ್ಥೈಸಿಕೊಂಡರೆ ಭಲೇ ಸ್ವಾರಸ್ಯವನ್ನು ಕೊಡುವಂಥವು!
ಹೇಗಂತೀರಾ? ಓದಿ ಶ್ರೀವತ್ಸ ಜೋಷಿಯವರ ವಿಚಿತ್ರ್ರಾನ್ನ

- Login or register to post comments
- 335 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ನೆನೆ’ಯದೆ ಇರಲಾರೆ ಸ್ವಾಮೀ ನಿನ್ನ...
ಮೞೆಯಲ್ಲಿ ನನೆಯುವುದು. (ನೆನೆಯುವುದಲ್ಲ.) ಯಾರನ್ನಾದರೂ ಮನದಲ್ಲಿ ನೆನೆಯುವುದು. (ಇಲ್ಲಿ ನನೆಯುವುದಲ್ಲ). ನನ್ನ ಒಂದಿಷ್ಟು ಕನ್ನಡ ಪದಗಳನ್ನು ನೋಡಿ
ಉ: ನೆನೆ’ಯದೆ ಇರಲಾರೆ ಸ್ವಾಮೀ ನಿನ್ನ...
ನಾ ಶಾಲೆಗೆ ಸೇರಿದಾಗ ಶಾಲೆ ಪ್ರಾರಂಭಕ್ಕೆ ಮುನ್ನ ಎಲ್ಲರೂ ಈ ಹಾಡನ್ನು ಹಾಡುತ್ತಿದ್ದದ್ದು ನೆನಪಾಗುತ್ತಿದೆ.
ನಿನ್ನನೆಂದಿಗೆ ಅರಿವೆನು ದೇವಾ, ನಿನ್ನನೆಂದಿಗೆ ಕಾಂಬೆನು ನಿನ್ನ, ನಿನ್ನ ನೆನೆಯಲು ಮನವದು ಬರದು, ನಿನ್ನ ನೆನೆಯಲು ಕಾಲವು ಇರದು, ಇದು ಮಂದಿರ ನಿನ್ನದು ದೇವಾ, ಬಲು ತೊಡಕಿನ ಗುಡಿಯಿದು ದೇಹ, ಜೀಯಾ ತಂದೆ . . .
ಪ್ರೀತಿಯಿಂದ
ಸಿ ಮರಿಜೋಸೆಫ್