ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಅನುವಾದ ಕಾರ್ಯ

July 3, 2007 - 7:08pm — cmariejoseph

ಅನುವಾದ ಕಾರ್ಯದಲ್ಲಿ ನಿಘಂಟುಗಳ ಮರೆಹೊಗುವುದು (ಮರೆಹೊಗು = ಪುಟ್ಟಮಗು ಬೆದರಿದಾಗ ತಾಯಿಯ ನಿರಿಗೆಯ ಮರೆ ಹೊಕ್ಕು ಅಲ್ಲಿಂದ ಇಣುಕಿ ನೋಡುತ್ತದೆ) ಅನಿವಾರ್ಯ. ಪದಶಃ ಅನುವಾದಗಳು ಹಾಗೂ ನಮ್ಮ ಪರಿಕಲ್ಪನೆಯ ಇತಿಮಿತಿಗಳು ಅನುವಾದಕ್ಕೆ ನ್ಯಾಯ ಒದಗಿಸುವುದಿಲ್ಲ. ಜನಪ್ರಿಯ ಪತ್ರಿಕೆಯೊಂದರಲ್ಲಿ ವಿದೇಶದ ಪ್ರಸಿದ್ಧ ಕ್ರಿಕೆಟಿಗನೊಬ್ಬ (ಲಕ್ನೋ ಬಳಿ) ತಾನು ಹುಟ್ಟಿದ ಆಸ್ಪತ್ರೆಯನ್ನೂ ಅದರಲ್ಲಿನ ಕಾರ್ಮಿಕರ ಕೋಣೆಯನ್ನೂ ಸಂದರ್ಶಿಸಿದನೆಂದು ವರದಿಯಾಗಿತ್ತು. ಈ ಕಾರ್ಮಿಕರ ಕೋಣೆಯೆಂಬುದು Labour Ward ಎಂಬುದರ ಪದಶಃ ಅನುವಾದ. ವಾಸ್ತವವಾಗಿ ಲೇಬರ್ ವಾರ್ಡನ್ನು ಕನ್ನಡದಲ್ಲಿ ಹೆರಿಗೆ ಕೋಣೆ ಅಥವಾ ಸಂಸ್ಕೃತದಲ್ಲಿ ಪ್ರಸೂತಿಗೃಹ ಎನ್ನಲಾಗುತ್ತದೆ.
ಈ ಪ್ರಸೂತಿಗೃಹವೆಂಬುದು ಕನ್ನಡದ್ದೇ ಎನ್ನುವಷ್ಟು ಬಳಕೆಯಲ್ಲಿ ಬಂದುಬಿಟ್ಟಿದೆ. ಮೂಡಣ ಪಡುವಣವೆಂಬ ಕನ್ನಡ ಪದಗಳು ಇಂದು ಮಾಯವಾಗಿ ಪೂರ್ವ ಪಶ್ಚಿಮವೆಂಬ ಸಂಸ್ಕೃತ ಪದಗಳು ರಾರಾಜಿಸುತ್ತಿವೆ. ಪದಾರ್ಥ (ಪದ + ಅರ್ಥ) ತೋಚದಾಗ ಹಿಂದೀಯಿಂದಲೋ ಸಂಸ್ಕೃತದಿಂದಲೋ ಅನಾಮತ್ತಾಗಿ ಎತ್ತಿಕೊಂಡುಬಿಡುವುದು ಅನುವಾದ ಕಾರ್ಯದ ಒಂದು ದೋಷ. ಇಂಜಿನಿಯರ್ ಎಂಬ ಪದಕ್ಕೆ ಸಂಸ್ಕೃತದಲ್ಲಿ ಅಭಿಯಂತಾ ಎಂಬ ಪದವಿದೆ. ಕನ್ನಡದಲ್ಲಿ ಅದು ಅಪರಿಚಿತ ಮಾತ್ರವಲ್ಲ ಅದೇ ಅಪಭ್ರಂಶವನ್ನು ಅಭಿಯಂತರು / ಅಭಿಯಂತರರು ಎಂದು ಬಳಸುವ ಪರಿಪಾಠವಿತ್ತು. ಅದೇ ರೀತಿ ಪೊಲೀಸ್ ಎಂಬ ಪದವನ್ನು ಆರಕ್ಷಕ / ಅರಕ್ಷಕ ಇತ್ಯಾದಿಯಾಗಿ ಬಳಸಿದ ಉದಾಹರಣೆಯಿದೆ.
ನಾನು ಕೆಲಸ ಮಾಡುವ ಎಚ್ ಎ ಎಲ್ ಕಾರ್ಖಾನೆಯಲ್ಲಿ Test Bed ಎಂಬ ಪದವನ್ನು ಒಬ್ಬರು ಪರೀಕ್ಷಾ ತಲ್ಪ ಎಂಬುದಾಗಿ ತರ್ಜುಮೆ ಮಾಡಿದ್ದರು. ವಿಮಾನದ ಇಂಜಿನ್ ಅನ್ನು ವಿಮಾನಕ್ಕೆ ಅಳವಡಿಸುವ ಮುನ್ನ ನೆಲದ ಮೇಲೆಯೇ ಅದನ್ನು ಪರೀಕ್ಷಿಸಿ ಎಲ್ಲ ಮಾನಕ ಅಂಶಗಳನ್ನೂ ಅದು ಪೂರೈಸುತ್ತಿದೆಯೇ ಎಂದು ಒರೆಗೆ ಹಚ್ಚಿ ನೋಡಲು ಒಂದು ವೇದಿಕೆ ಸ್ಥಾಪಿಸಿ ಉಡ್ಡಯನ, ಹಾರಾಟ, ಏರಿಳಿತಗಳ ಸಹಜ ಸನ್ನಿವೇಶದಲ್ಲಿ ಇಂಜಿನ್ ಹೇಗೆ ಪ್ರವರ್ತಿಸುತ್ತದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಅಂದರೆ ಚಿನ್ನ ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಲು ಒರೆಗೆ ಹಚ್ಚಿ ನೋಡುವುದಿಲ್ಲವೇ ಹಾಗೆ. ಅಂತೆಯೇ ಟೆಸ್ಟ್ ಬೆಡ್ ಅನ್ನು ಒರೆಗೆ ಹಚ್ಚುವ ವೇದಿಕೆ ಅರ್ಥಾತ್ ಒರೆಪೀಠ ಎನ್ನಬಹುದಲ್ಲದೆ ಪರೀಕ್ಷಾತಲ್ಪ ಅರ್ಥಾತ್ ಪರೀಕ್ಷಾ ಹಾಸಿಗೆ ಎನ್ನುವುದು ಎಷ್ಟು ಸರಿ?
ನಮ್ಮ ಸಾಮಾನ್ಯ ಆಡುಭಾಷೆಯಲ್ಲಿಯೇ ನಾವು ಹಲವಾರು ಸಲ ಕನ್ನಡವನ್ನು ಬಿಟ್ಟು ಸಂಸ್ಕೃತ ಇಂಗ್ಲಿಷ್ ಇತ್ಯಾದಿಗಳತ್ತ ಒಲೆದಿರುತ್ತೇವೆ. ಯಾರಾದರೂ ತಮ್ಮ ಹೆಂಡತಿಯನ್ನು ಪರಿಚಯಿಸುವಾಗ ಈಕೆ ನನ್ನ ಪತ್ನಿ ಎನ್ನುತ್ತಾರಾಗಲೀ ನನ್ನ ಹೆಂಡತಿ ಎಂದು ಹೇಳುವುದುಂಟೇ? ಈಗೀಗ ನನ್ನ ವೈಫ್ ಎನ್ನಲಾಗುತ್ತದೆ. ಹೆಂಡತಿಯನ್ನು ಹೆಂಡತಿ ಎಂದು ಕರೆಯಲು ಹೆಂಡತಿಯದೇ ಭಯವಿದ್ದರೂ ಇದ್ದೀತು! ಹಳ್ಳಿಗರೂ ತಮ್ಮ ಹೆಂಡತಿಯ ಬಗ್ಗೆ ಹೇಳುವಾಗ ನಮ್ ಹೆಂಗುಸ್ರು ಅನ್ತಾರೆ. ಅದು ಬಹುಶಃ ಅವರು ತಮ್ಮ ಹೆಂಡತಿಗೆ ಕೊಡುವ ಗೌರವ.
ಇರಲಿ ಇನ್ನು ನಮ್ಮ ಅನುವಾದದ ಕಥೆಗೆ ಬರೋಣ. Aeroplane ಬರುವ ಮುನ್ನ ನಮ್ಮಲ್ಲಿ ವಿಮಾನ ಇತ್ತಲ್ಲವೇ, ಆದರೆ ನಮ್ಮಲ್ಲಿ ಬಸ್ ಅನ್ನೋದು ಇರಲಿಲ್ಲ, ಅದಕ್ಕೇ ಬಸ್ಸು ಅನ್ತೀವಿ, ಅಂತೆಯೇ ಕಾರು ರೈಲು ಇತ್ಯಾದಿಗಳಿವೆ. ಇಂಗ್ಲಿಷಿನ ಟೇಬಲ್ ನಮ್ಮ ಕನ್ನಡದಲ್ಲಿ ಮೇಜು ಆಗುತ್ತೆ ಎಂದು ಯಾರಾದರೂ ಹೇಳುತ್ತಾರೆ ಆದರೆ ವಾಸ್ತವವಾಗಿ ಈ ಮೇಜು ಅನ್ನೋದು ಪೋರ್ಚುಗೀಸ್ ಪದ. ಪೋರ್ಚುಗೀಸರು ಇಂಡಿಯಾಕ್ಕೆ ಬಂದಾಗ ಅವರ ಮೇಜನ್ನು ನಮಗೆ ಪರಿಚಯಿಸಿದರು.
ಅಂದಹಾಗೇ ನಮ್ಮ ಚಿತ್ರಾನ್ನವನ್ನು ಇಂಗ್ಲಿಷಿನಲ್ಲಿ ಏನಂತಾರೆ? ಕನ್ನಡದ ಉಪ್ಪಿಟ್ಟು ತಮಿಳಿನಲ್ಲಿ ಉಪ್ಪುಮಾವ್ ಆಗುತ್ತೆ. ಅದನ್ನೇ ಇಂಗ್ಲಿಷಿನಲ್ಲಿ Upma ಎಂದು ಬರೆಯುತ್ತಾರೆ. ಅಂದರೆ ಇತರ ಭಾಷೆಗಳ ಸತ್ವಗಳನ್ನೂ ಮೈಗೂಡಿಸಿಕೊಂಡು ಅಂದರೆ ಅವುಗಳ ಪದಸಂಪತ್ತನ್ನೂ ತನ್ನದಾಗಿಸಿಕೊಂಡು ಇಂಗ್ಲಿಷು ಜನಪ್ರಿಯವಾಗಿದೆ.
ನಾನು ನಮ್ಮ ಕಾರ್ಖಾನೆಯ ನಾಮಫಲಕಗಳನ್ನು ಕನ್ನಡೀಕರಿಸುವ ಪ್ರಕ್ರಿಯೆಯಲ್ಲಿ Blade Shop ಎಂಬುದನ್ನು ಅಲಗುಶಾಲೆ ಎಂದು ಬಳಸಿದೆ. ಶಾಲೆ ಎಂಬ ಪದ ನೋಡಿದಾಕ್ಷಣ ಹಲವರು ಅದನ್ನು ಸೀಮಿತಾರ್ಥದಲ್ಲಿ school ಎಂದು ಪರಿಭಾವಿಸಿಕೊಂಡರು. ಹಾಗೆ ನೋಡಿದರೆ ಶಾಲೆ ಎಂದರೆ ಆವರಣ ಎಂದರ್ಥ. ಉದಾಹರಣೆಗೆ ಭೋಜನಶಾಲೆ, ಗೋಶಾಲೆ, ಗಜಶಾಲೆ, ಆಯುಷ್ಕರ್ಮಶಾಲೆ, ಆಯುಧಶಾಲೆ, ಪಾಠಶಾಲೆ ಇತ್ಯಾದಿಗಳಲ್ಲಿ ಶಾಲೆ ಎಂದರೆ ಆವರಣ ಎಂದೇ ಅರ್ಥ.
ಅದೇ ರೀತಿ ಪೊಲೀಸ್ ಕಾರ, ಗಂಗಡಕಾರ, ಚರ್ಮಗಾರ>ಸಮಗಾರ, ಬಳೆಗಾರ ಇತ್ಯಾದಿಗಳನ್ನು ಗಮನಿಸಿದಾಗ ‘ಕಾರ’ ಎಂಬ ಪ್ರತ್ಯಯವು ವ್ಯಕ್ತಿಯನ್ನು ಸೂಚಿಸುವುದನ್ನು ನೋಡುತ್ತೇವೆ. ಆದರೆ Machine Shop ಎನ್ನುವುದನ್ನು ಯಂತ್ರಗಾರ ಎನ್ನುವುದು ಸರಿಯಲ್ಲ. ಯಂತ್ರಗಳಿರುವ ಆಗರ / ಆಗಾರ (ಸ್ಥಳ) ವು ಯಂತ್ರಾಗಾರ (ಸವರ್ಣದೀರ್ಘ ಸಂಧಿ) ಆಗುವುದೇ ಸರಿ. ಇನ್ನು ಕೆಲವರು ಉಪ+ಆಹಾರ = ಉಪಾಹಾರವನ್ನು ಉಪಹಾರ ಎನ್ನುತ್ತಾರೆ.
ನಾಮಫಲಕಗಳು ಎದ್ದು ಕಾಣುವಂತಿದ್ದು ದೂರದಿಂದಲೇ ಸುಲಭವಾಗಿ ಓದಲು ಸಾಧ್ಯವಾಗುವಂತಿರಬೇಕು. ಅಕ್ಷರಗಳು ಕಡಿಮೆಯಿದ್ದು ದೊಡ್ಡವಾಗಿದ್ದರೆ ಓದಲು ಸುಲಭ. ಉದಾಹರಣೆಗೆ ‘ಗೆಳೆಯರು’ ಎಂಬ ನಾಲ್ಕು ಅಕ್ಷರಗಳ ಪದಕ್ಕಿಂತ ‘ಮಿತ್ರರು’ ಎಂಬ ಮೂರಕ್ಷರದ ಪದ ಸೂಕ್ತವೆನಿಸುತ್ತದೆ. ‘ನೋಟುಮುದ್ರಣಕೇಂದ್ರ’ ಎಂಬುದಕ್ಕಿಂತ ‘ಟಂಕಸಾಲೆ’ ಅತ್ಯಂತ ಸೂಕ್ತವಾಗಿ ಒಪ್ಪುತ್ತದೆ. Workshop ಗೆ ಕಾರ್ಯಾಗಾರ ಎನ್ನುವುದಕ್ಕಿಂತ ‘ಕಮ್ಮಟ’ ಎನ್ನುವುದು ಉಚಿತ. ಹಾಗೆಯೇ Heat Treatment Shop ಎನ್ನುವುದನ್ನು ಉಷ್ಣ ಸಂಸ್ಕರಣ ಕಾರ್ಯಾಗಾರ ಎನ್ನುವುದಕ್ಕಿಂತ ‘ತಾಪಸಂಸ್ಕಾರ’ ಎನ್ನುವುದೇ ಸರಿಯೇನೋ?
ಆಯಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಅಥವಾ ಆಯಾ ಕ್ಷೇತ್ರದ ನಿಕಟ ಪರಿಚಯ ಇರುವವರಿಗೆ ಮಾತ್ರವೇ ತಮ್ಮ ಪರಿಧಿಯ ವಸ್ತುವೊಂದರ ಅಥವಾ ಪದವೊಂದರ ನಿರ್ದುಷ್ಟ ಪರಿಕಲ್ಪನೆಯಿರುತ್ತದೆ. ಆದ್ದರಿಂದ ಅನುವಾದ ಕಮ್ಮಟಗಳಲ್ಲಿ ನಿಘಂಟು ತಜ್ಞರೊಂದಿಗೆ ಆಯಾ ಕ್ಷೇತ್ರಗಳನ್ನು ಪ್ರತಿನಿಧಿಸುವವರೂ ಇದ್ದರೆ ಒಳ್ಳೆಯದು.

‹ ಕನ್ನಡ ತಮಿೞಿಗಿಂತ ಹೞೆಯದೇ? 'ಸರೆಗಮ'ದ ನಿರ್ಲಕ್ಷ್ಯ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 428 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 4, 2007 - 9:25pm — ritershivaram

ಉ: ಅನುವಾದ ಕಾರ್ಯ

ritershivaram's picture

ಜೋಸೆಫ್ ಅವರೇ,

"ಇಂಗ್ಷೀಷ್ ಇತರ ಭಾಷೆಗಳಿಂದ ಪದಗಳನ್ನು ಮುಕ್ತವಾಗಿ ಸ್ವೀಕರಿಸುತ್ತಲೆ ಬಂದಿದೆ; ಜೊತೆಗೆ ಬೆಳೆದಿದೆ; ಹಾಗೆ ಬೆಳೆಯುತ್ತಲೆ ಎಲ್ಲೆಡೆ ತನ್ನ ಪ್ರಭಾವ ಬೀರುತ್ತಲೇ ಇದೆ. ನಮ್ಮ ಅನುವಾದಕರಲ್ಲೋ (ಎಲ್ಲರೂ ಅಲ್ಲ) ಪದಗಳನ್ನಷ್ಟೇ ಹೀಡಿದು ಜಗ್ಗಾಟ, ಸ್ವಭಾಷೆ ಬಗ್ಗೆ ಸಲ್ಲದ ಅತೀವ್ಯಾಮೋಹ ನಡೆದೇ ಇರುವುದು ವೈಪರಿತ್ಯವೇ ಆಗಿದೆ.

ನೀವು ಅನುವಾದದ ಬಗ್ಗೆ ಕೆಲವು ಗಮನಾರ್ಹ ಅಂಶಗಳನ್ನು ತೆರೆದಿಡುತ್ತಾ ತುಂಬ ಉಪಯುಕ್ತವಾದ ಲೇಖನ ಬರೆದಿದ್ದೀರಿ.
ಧನ್ಯವಾದಗಳು.

-ಎಚ್.ಶಿವರಾಂ.

ಯಾವುದೇ ವಿದ್ಯೆಯ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕು; ಆದರೆ, ಜೊತೆಗೆ ಇಂಗ್ಲೀಷ್ ಇರಬೇಕು.
ಜೀವನ-ಚೇತನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • Bangalore ಅನ್ನು BENGALURU ಆಗಿ ಬದಲಾಯಿಸುವ
  • firefox tab, keyboard tabಗಳಿಗೆ ಕನ್ನಡ ಪದಗಳು
  • ನಮಗೆ ರಿಮೇಕ್ ಪತ್ರಿಕೆ ಬೇಕೇ?
  • ಸಂಸ್ಕೃತ ಕಲಿತರೆ ಕನ್ನಡಕ್ಕೇ ಒಳ್ಳೆಯದು
  • ಅನುವಾದದಲ್ಲಿ 'ಆಹಾ!' - wildcard ಗೆ ಕನ್ನಡ ಪದ
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
  • ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?
  • ಮದುವೆಯಾಗಿ ನಿಮ್ಮ ಬದುಕು ಬದಲಾಯಿತೆ?ಹೇಗೆ?
  • ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?
  • ದಿನಕ್ಕೊಂದು ಪದ
  • ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?
  • ತೋಡ ಪ್ಯಾರ್‍ ತೋಡ ಮ್ಯಾಜಿಕ್ ಎಂಬ ಮಕ್ಕಳ ಹಿಂದಿ ಸಿನಿಮದಲ್ಲಿ ಈ ಹಾಡು..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ದನಿಯಱಿವು
    July 4, 2008 - 12:09pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:01pm
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:58am
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:47am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:43am
  • anil.ramesh
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:41am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:39am
  • anil.ramesh
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:38am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:32am
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:14am
ಇನ್ನಷ್ಟು


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator