ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಇಲ್ಲಿ ನಮ್ಮ ಕನ್ನಡಕ್ಕೆ ಸೇರಿಬೇಕಾದ ಹೊಸ ಸೊಲ್ಲುಗಳು, ಬೇಡವಾದ ಹೇರಿಕೆಯ ಅಕ್ಕರಗಳ ಬಗ್ಗೆ ಮಾತಾಡೋಣ.
ಹೆಣೆಯವರೇ
"ಸಂಯುಕ್ತ ಸೊರ" ಬಗ್ಗೆ, ನುಡಿ economy ಕುರಿತು ಬರೆಯಿರಿ.
ಆದನಿತ್ತು, ನಮ್ಮ ನಮ್ಮ ಬುಡಕಟ್ಟಿನ ಒರೆಗಳಿಗೆ ಒತ್ತು ನೀಡೋಣವಿಲ್ಲಿ. ಅಂದರೆ ಸಕ್ಕದ ತಱ್ಗುವು(ಕಡಮೆ)
!!
ಈ ಕುರಿತು ಈಗಾಗಲೇ ಹೊರಬಂದ ಅರಿವುಗಳು
ಹೆಣೆ
===================================
ನಾನು ಹೇಳಬೇಕೆಂದಿದ್ದು - ಅ (ಅಥವಾ ಅರೆ ಅ) ಮತ್ತು ಉ ಗಳ ಮಧ್ಯದ ಒಂದು ಸ್ವರ, ಅ ಮತ್ತು ಆ ಗಳ ಮಧ್ಯದ ಒಂದು ಸ್ವರ, ಮತ್ತೊಂದು æ ಗೆ ಹತ್ತಿರವಾದ್ದು...
===================================
ಸಂಗನ
===================================
ಈಗಿನ ಕನ್ನಡ ಬರೆಹ ಸಕ್ಕದಕ್ಕಾಗಿ ಮಾಡಿದ್ದು ಅಂತಾ ಕೇಳಿದ್ದೇನೆ.
ಅದನ್ನು ಕನ್ನಡಕ್ಕೆ ಬಳಸಿಕೊಳ್ಳುವಾಗ ಬೇಕಾದ ಮಾರ್ಪಾಟ್ ಬೇಕು ಅನಸತೈತ
====================================
ಮಯೇಸ
====================================
ಸೊರಗಳ ಬಗ್ಗೆ ನಿಮ್ಮ ಮಾತನ್ನು, ಇನ್ನೂ ಬಿಡಿಸಿ ಹೇಳಿರಿ.
"ಸಂಯುಕ್ತ ಸ್ವರ" ಅಂದ್ರೆ ಎರಡು ಸೊರಗಳು ಸೇರಿ ಆದ ಸೊರ, ಅಂತ ನನ್ನ ತಿಳಿವು.
ಐ, ಔ ಗಳು ಬರಿ ಸೊರವಲ್ಲ, ಇವನ್ನು a diphthong (also gliding vowel) (Greek δίφθογγος, "diphthongos", literally "with two sounds," or "with two tones") i
ಐ = ಅಯ್, ಔ=ಅವ್. ಅ+ ಏ = ಐ, ಅ + ಓ = ಔ ( ವೃದ್ಧಿ ಸಂಧಿ )
ನೀವು ಹೇಳುತ್ತಿರುವ ಸೊರಗಳು ಇಂಗ್ಲೀಸಲ್ಲಿವೆ. ಅಲ್ವಾ?
=====================================
ಹೆಣೆ
=====================================
ಕನ್ನಡದ ಅಕ್ಷರ ಮಾಲೆಗೆ ಹೊರೆಯಾದ ಅಕ್ಷರಗಳನ್ನು ತೆಗೆದು ಹಾಕುವ ಮಾತು ಸಂಪದದ ಕಟ್ಟೆಯ ಮೇಲೆ ಕೇಳಿದೆ. ಈ ದಿಕ್ಕಿನಲ್ಲೇ ಹೆಜ್ಜೆ ಹಾಕುತ್ತ, ಕನ್ನಡ ಅಕ್ಷರಮಾಲೆಯಲ್ಲಿ ಈಗಿರದ ಸಂಯುಕ್ತ ಸ್ವರಗಳನ್ನು ಅದಕ್ಕೆ ಸೇರಿಸಬೇಕಾದ್ದೂ ಅಗತ್ಯ ಅಲ್ಲವೆ?
=====================================
ಮಯೇಸ
=====================================
ಕನ್ನಡದ ನಾಲಗೆ ಉಲಿಯವುದಾದರೇ ಸೇರಿಸಲೇ ಬೇಕು.. ಸೇರಿಸಲು ನನ್ನ ಬಳಿಯೂ ಒಂದಿದೆ.
Aನೋ? Aರೋ, ಈ A ಕನ್ನಡದಲ್ಲಿ ಹಲವು ಉಲೀವರು. Smiling
ಹಾಗೆ ಮೂಗು ರ, ಮೂಗು ಯ, ಮೂಗು ಲ ಗಳು, ಱ, ೞಗಳು ಬಳಕೆ ಉಲಿಯಲ್ಲಿ ಇನ್ನೂ ಇದೆ.
ರೆಕ್ಕೆ = ಱೆಕ್ಕೆ( ಉಲಿದು ನೋಡಿರಿ ), ರೋಡು = ಱೋಡು
ಕುಳಿತು = ಕುೞಿತು, ಹಳತು = ಹೞತು
=====================================
ಹೆಣೆ
=====================================
ಮೇಲೆ ಕೂರಲು ಬಂದದ್ದು ಈಗಷ್ಟೇ. ಕನ್ನಡದ ಒರೆಗಳ (ಸಂಪದದ ಕಟ್ಟೆಯ ಮೇಲೆ ನಾನು ಕಲಿತ ಒರೆ ಇದು!) ಮೇಲೆ ಸಂಸ್ಕೃತ ಒರಗಿಕೊಂಡಿರುವುದರ ಬಗ್ಗೆ ನೀವೆಲ್ಲಾ ಒರೆದೂ ಒರೆದೂ ಇಟ್ಟಿದ್ದೀರಿ! ಈಗಾಗಲೇ ನುಡಿಯೊಳಗೆ ನೆಟ್ಟು ಕೂತ ಪರನುಡಿಗಳನ್ನು ಬುಡ ಅಡ್ಚಿ ಕೀಳುವ ಪ್ರಯತ್ನ, ಅಥವಾ ಮೇಲೆ ಬಿದ್ದ ನುಡಿಗಳನ್ನು ದೆರಳೆಯಂತೆ ಗುಡಿಸುವ ಪ್ರಯತ್ನದ ಬಗ್ಗೆಯೆಲ್ಲಾ ಓದುತ್ತಿದ್ದೇನೆ. ಒಂದು ಕಾಲದಲ್ಲಿ ಹೊರಗಿನಿಂದ ಬಂದ ನುಡಿಗಳಿಗೂ, ಈಗಲೂ ಬರುತ್ತಿರುವ ನುಡಿಗಳಿಗೂ ನಮ್ಮ ಹಿತ್ತಿಲಲ್ಲೇ ಬೀಜ ಹುಡುಕಿ ತೆಗೆಯುವ ಪ್ರಯತ್ನಗಳೆಲ್ಲಾ ನಡೆಯುತ್ತಿರುವ ಪ್ರಸಂಗದಲ್ಲಿ, ಅಂದರೆ ಹೊಸ (relative) ವಸ್ತು/ಕ್ರಿಯೆ/ಅನುಭವಗಳಿಗೆ ನಮ್ಮ ಮನೆಯೊಳಗಿನ ಅಟ್ಟದ ಮೂಲೆಯಲ್ಲೆಲ್ಲೋ ಧೂಳು ತಿನ್ನುತ್ತಿರಬಹುದಾದ, ವರ್ಲೆ ಹಿಡಿದು ಮಣ್ಣಾಗಿಹೋದ ಒರೆಗಳನ್ನೇ ಹುಡುಕಿ ತೆಗೆದು ತೊಳೆದು ಬಳಸುವ ಪ್ರಸಂಗದಲ್ಲಿ, ಒಂದೇ ಪದಕ್ಕೆ ಒಂದು ಸಣ್ಣ ಸಮುದಾಯದೊಳಗೇ ತುಂಬ ಬೇರೆಬೇರೆಯಾದ ಬಳಕೆಗಳಿರುವುದು ಸ್ವಲ್ಪ ಕಾಡುತ್ತದೆ.
Economy ಯ ಬಗ್ಗೆ ಮತ್ತೊಮ್ಮೆ ಬರೆಯುವೆ
=======================================================
ಹೆಣೆ
=======================================================
ಆದರೆ ಒಂದೇ ಸಮುದಾಯದಲ್ಲಿ, ಒಂದೇ ನುಡಿ ಆಡುವ ಜನರಲ್ಲಿ, ಅವರ ಪರಿಸರಕ್ಕೇ ವಿಶಿಷ್ಟವಾದ ವಸ್ರು/ಕ್ರಿಯೆ/ಅನುಭವ ಹೇಳುವ ಪದಗಳು ಸಹ ಕೆಲವೊಮ್ಮೆ ಹೀಗಿರುತ್ತವೆ. 'ತಳಿ' ಎಂಬ ಪದ ಇಲ್ಲಿ ನೆನಪಾಗುತ್ತಿದೆ. (ಇಂತಹವು ಹಲವಾರಿವೆ ಎಂದಿಟ್ಟುಕೊಳ್ಳಿ) ನಾಮಪದವಾಗಿ ತಳಿ ಅಂದರೆ ಅನ್ನ ಬೆಂದಾದಮೇಲೆ ಬಸಿಯಬಹುದಾದ ದಪ್ಪ ನೀರು (ಗಂಜಿಯಲ್ಲ, ತಳಿ ಅನ್ನದೊಟ್ಟಿಗೇ ಇದ್ದರೆ ಅದು ಗಂಜಿ). ತೆಂಗಿನ ಗರಿ ಹೆಣೆದು ಮಾಡಿದ ಮಡ್ಲ್-ಇನ ಮುಚ್ಚಿಕೆಯೂ ತಳಿಯೇ. ಮಳೆಗಾಲದಲ್ಲಿ ಊರುಮನೆಯ ಜಗಲಿಗೆ ಮುಚ್ಚಿಕೆಯಾಗಿ ಇದನ್ನು ಹಾಕುತ್ತಾರೆ. ಕ್ರಿಯಾಪದವಾಗಿ, ಒಪ್ಪವಾಗಿರುವುದನ್ನು ಕೆಡಿಸುವುದೂ ತಳಿಯೇ- ಮಡಿಸಿಟ್ಟ ವಸ್ತ್ರ ತಳಿಯಬೇಡ; ಚಿಮುಕಿಸು - ಹಿಟ್ಟು ಗಟ್ಟಿಯಾಗಿದ್ದರೆ ಒಂದು ಚೂರು ನೀರು ತಳಿ; ಚದುರಿಸು - ನಾಲ್ಕು ಕಾಳು ಉಪ್ಪು ತಳಿ... ಸದ್ಯಕ್ಕೆ ಹಂಬಲಾಗುತ್ತಿರುವುದು ಇಷ್ಟು. ಇವೆಲ್ಲವೂ ಒಂದು ಹತ್ತಿಪ್ಪತ್ತು ಚದರ ಕಿಲೋಮೀಟರು ದೊಡ್ಡದಿರುವ ಊರಿನ ಜನರ ನುಡಿಗಳು.
ನೂರಾರು ಕಿಲೋಮೀಟರ್ ದೂರವಿರುವ ಬೇರೆ ಊರಲ್ಲಿ ತಳಿಗೆ ಜಾತಿ, species ಎಂಬ ಅರ್ಥವೂ ಇದೆ. ನನಗೆ ತಿಳಿಯದ ಇನ್ನೂ ಏನೇನೋ ಅರ್ಥಗಳಿದ್ದರೂ ಇರಬಹುದು.
ನೀವು ಪದದ ಮೇಲೆ ಅರ್ಥಗಳ ಹೊರೆ ಎಂದಿರಿ. ನನ್ನನ್ನ ಕೇಳಿದರೆ, ಪದಗಳು ಹೆಚ್ಚೆಚ್ಚು ಹೊರೆ ಹೊತ್ತಷ್ಟೂ ನುಡಿಯ ಮೇಲಿನ ಪದಗಳ ಹೊರೆ ಕಡಿಮೆಯಾಗುತ್ತದೆ. ಇದನ್ನೇ ನಾನು ನುಡಿಯ economy ಎಂದಿದ್ದು. ಇದಕ್ಕೆ ತೀರ ವಿರುದ್ಧವಾದ ಒಂದು ವಿದ್ಯಮಾನವೂ ಇದೆ. ಅದರ ಬಗ್ಗೆ ಬೇರೊಮ್ಮೆ ಮಾತಾಡೋಣ.
==========================================================
ಹೆಣೆ
========================================================
ಒಂದೇ ಪದ ತೀರ ಬೇರೆಯಾದ ಹಲವಾರು ಅರ್ಥಗಳನ್ನು ಸೂಚಿಸುವುದು ಏಕೆ, ಹೇಗೆ? ಇದು ನುಡಿಯ economyಯೇ?
=======================================================
ಹೆಣೆಯವರು ಈ ಮಾತುಗಳಿಗೆ ಬಲು ನನ್ನಿ!! ನಲವು!

- Login or register to post comments
- 1054 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಅವುದಪ್ಪ, ಅವುದು.
ಕನ್ನಡದ ಸದ್ದುಗೆ ಸಕ್ಕದ ಬರೆಯಲೆಂದೇ ಮಾಡಿದಂತಿದೆ. ಅದಕ್ಕೆ ಕನ್ನಡಕ್ಕೆ ಬೇಕಾದ ಹಲವು ಸೊರಗಳು, ಬೆಂಜನಗಳು, ಇದರಲ್ಲಿಲ್ಲ. ಹಾಗೆ ಕನ್ನಡ ಬೇಡವಾದ ಬರೀ ಸಕ್ಕದಕ್ಕೆ ಬೇಕಾದ ಅಕ್ಕರಗಳು ತುಂಬಿಕೊಂಡಿವೆ.
ಮಾರ್ಪಾಟು ಬೇಕು ಅಂತ ಶಬ್ದಮಣಿದರ್ಪಣದ ಹೊತ್ತಿನಿಂದಲೂ ಮಾತಿದೆ. ಶಬ್ದಮಣಿದರ್ಪಣದಂತೆ ಕನ್ನಡದಲ್ಲಿ 'ಋ' ಇಲ್ಲ, ಅಲ್ವಾ??? ಅದರಂತೆ ಕನ್ನಡಕ್ಕೆ ಬರಿ ನಲವತ್ತೇಳು(47) ಸಾಕು!!?( ನನ್ನ ನೆನೆಪು ಮಾಸಿದೆ Sad ). ಜೊತೆಗೆ ಅಲ್ಲಿ ಮಹಾಪ್ರಾಣಗಳು ಕನ್ನಡ ಏಕೆ ಬೇಕೆಂದು ನೀಡಿರುವ ಓಸುಗರಗಳು ಬಲು ಪೊಳ್ಳೆಂದು ಕಲಿತವರು ಹೇಳಿದ್ದಾರೆ!
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಸರಿ, ನಾನು "ಸಂಯುಕ್ತ ಸ್ವರ" ಅಂದ್ರೆ diphthong ಅಂತವೇ ತಿಳಿದುಕೊಂಡಿದ್ದು.
ಆದ್ರೆ.
ಇಲ್ಲಿ ಯಾವುದು diphthong ? æ? ತುಸು ಬಿಡಿಸಿ ಹೇಳೀಪ್ಪ.
ಐ, ಔ! ಇವು ಕನ್ನಡದಕ್ಕೆ ಬೇಡವಾದ diphthongಗಳು, ಅವನ್ನು ನಾನು ಅಯ್, ಅವ್ ಎಂದು ಉಲಿಯುವುವು.( ಶಂಕರ ಬಟ್ರು )
http://en.wikipedia.org/wiki/Diphthong
ಹಾಗೆ ಕನ್ನಡದಲ್ಲಿ ಯ, ವ ಇವು half vowel( ಈ ಒರೆ ಸರಿಯೇ?
ಮರವು ) ). ಯ ಮತ್ತು ಎ, ವ ಮತ್ತು ಒ ಅದಲು ಬದಲು ಮಾಮೂಲಿ.
ಕೆರೆ = ಕ್ಯರೆ
ಒರೆ = ವರೆ
ಹೊಡೆ = ಹ್ವಡೆ
ಹೋದ = ಹ್ವಾದ
ಕೇಮೆ = ಕ್ಯಾಮೆ
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಎಲ್ಲಿ ಹೋದ್ರೀ ಹೆಣೆ!
ಸಂಯುಕ್ತ ಸೊರ ಅಂದ್ರೆ Triphthong ಇದು ಆಗಬಹುದಲ್ಲ. ಕನ್ನಡದಲ್ಲಿ ಇವು ಇವಾ?
http://en.wikipedia.org/wiki/Triphthong
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಕೆಲಸದೊಳಗೆ ಕಗ್ಗಂಟಾಗಿ ಕೂತಿದ್ದೇನೆ... ಬಿಡಿಸಿಕೊಂಡು ಹೊರಬಂದ ಮೇಲೆ ಮುಂದಿನ ಮಾತು.
ಹೆಣೆ
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಮಹೇಶ ಮತ್ತು ಹೆಣೆ- ಇಬ್ಬರನ್ನೂ ಕುರಿತು:
ನಮ್ಮ ಈಗಿರುವ ಅಕ್ಷರಮಾಲೆಯ ಮೇಲೆ ನಿಮಗೇಕೆ ಸಿಟ್ಟು?
ಕೆಲವು ಅಕ್ಷರಗಳು ಬೇಡವೆಂದು ಅನಿಸಿದ ಕೂಡಲೇ ಅವುಗಳನ್ನು ಅಕ್ಷರಮಾಲೆಯಿಂದ ಕಿತ್ತೊಗೆಯುವ, ಮತ್ತೆ ಹೊಸತು ಬೇಕೆಂದೆನಿಸಿದಾಗ ಸೇರಿಸುವ ಬಗ್ಗೆ ಚರ್ಚೆಗಳು ಕನ್ನಡ ಬಿಟ್ಟು ಬೇರಾವ ಭಾಷೆಯಲ್ಲೂ ನನಗೆ ಗೊತ್ತಿರುವಂತೆ ನಡೆದಿಲ್ಲ. (ನಡೆದಿದ್ದರೆ ನನಗೂ ಹೇಳುವಂತಹವರಾಗಿ).
ನಾನು ತಿಳಿದುಕೊಂಡಹಾಗೆ ಅಕ್ಷರಮಾಲೆ ಇರುವುದು ನುಡಿಯಲ್ಲಿ ಉಪಯೋಗಿಸಲಾಗುವ Basic ಸ್ವರ - ವ್ಯಂಜನಗಳನ್ನು ತಿಳಿಸಲು.
ಉಳಿದಂತೆ ಎಲ್ಲ ಪ್ರಯೋಗಗಳು ಇವುಗಳನ್ನೇ ಹೆಚ್ಚು - ಕಡಿಮೆ ಬೆರೆಸಿ ತಯಾರಾಗುವಂತಹವುಗಳು.
ಇನ್ನು ’ae” ಮೊದಲಾದ ಸ್ವರಗಳು ಇಂಗ್ಲಿಶ್ ನಲ್ಲೂ ಇವೆಯಲ್ಲ? ಅಲ್ಲಿ ಉಲಿಯುವ ಆದರೆ ಅಕ್ಷರಮಾಲೆಯಲ್ಲಿ ಇಲ್ಲದ ಅದೆಷ್ಟೋ ಅಕ್ಷರಗಳಿವೆ. ಉದಾಹರಣೆಗೆ cat, ate, call ... ಇಲ್ಲಿ ಎಲ್ಲ ಕಡೆಯೂ a ಯ ಉಚ್ಚಾರಣೆ ಬೇರೆ ಬೇರೆಯಾಗಿದೆ.
ಆದರೆ ಅಲ್ಲಿ ಇವನ್ನೆಲ್ಲ phonetic symbols ಬಳಸಿ ಸ್ಪಷ್ಟಪಡಿಸುವ ಪದ್ಧತಿ ಇದೆ. ಹಾಗೇ ಕನ್ನಡಕ್ಕೂ ನನಗನ್ನಿಸುವಂತೆ ಈಗ ಬೇಕಾಗಿರುವುದು ಒಂದು standard phonetic symbol ಗಳ ತಯಾರಿ. ಅದನ್ನು ಮಾಡಿದರೆ ಎಲ್ಲ ಸಮಸ್ಯೆಗಳೂ ಇಲ್ಲವಾಗುವವು.
ಇದಕ್ಕೆ ನೀವೇನಂತೀರಿ?
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
"ಒಂದು standard phonetic symbol ಗಳ ತಯಾರಿ. ಅದನ್ನು ಮಾಡಿದರೆ ಎಲ್ಲ ಸಮಸ್ಯೆಗಳೂ ಇಲ್ಲವಾಗುವವು."
ಇದೇ ನಾವು ಹೇಳ ಹೊರಟ್ಟಿದ್ದು. ಅದಕ್ಕೆ ನೀವು ಹೆಸರು ಮಡಗಿದಿರಿ.
ಒಂದು ನುಡಿಕೂಟಕ್ಕೆ( language family )ಗೆ ನಿಕ್ಕುವ, ಇಂತಿಷ್ಟೇ, ಎಂಬ ಸೊಲ್ಲುಗಳು ( phones ) ಇರುತ್ತದೆ.
ಮಾದರಿ: ಇಂಡೋ-ಆರ್ಯನ್ ಅಲ್ಲಿ ಱ, ೞ, ಒ, ಎ, ಳ, ಇಲ್ಲ ( ಮರಾಟಿ ಅಂತ ಎರಡು ನುಡಿಕೂಟಗಳ ಬರಕೆಯಿಂದ ಬಂದ ನುಡಿಗಳ ಸಂಗತಿ ಬೇರೆ ). ಅವನ್ನು ಅವರ ನಾಲಗೆಯಲ್ಲಿ ಉಲಿಯಲು ಎಂದು ತೊಡರೇ. ಆದರೇ ಈ ನುಡಿಗಳು phonetically rich. ಇವರ ಬಳಿ ಹೆಚ್ಚು phones ಇವೆ.
ಹಾಗೇ ಕನ್ನಡ ಸೇರಿರುವ ದ್ರಾವಿಡ ನುಡಿಕೂಟದಲ್ಲೀ ಮೊದಲಿಂದಲೂ
೧) ಅಲ್ಪಪ್ರಾಣ, ಮಹಾಪ್ರಾಣಕ್ಕೆ(aspirated) ಬೇರೆತನವಿಲ್ಲ. ಅಂದ್ರೆ ಮಹಾಪ್ರಾಣವನ್ನು ದ್ರಾವಿಡ ನುಡಿಗರು naturally ಹೇಳಲಾರರು. ಹೇಳಲು ಅವರಿಗೆ ಕಷ್ಟವೇ.
೨) ಶ, ಷ, ಹ ಇವು ಇಲ್ಲ.
೩) ಋ, ೠ ಲೃ( retroflex ) ಇಲ್ಲ
೪) ಇನ್ನೂ ಹೇಳಬೇಕೆಂದರೆ, voiced ಮತ್ತು unvoiced ( ಕರ್ಕಶ ಮತ್ತು ಮೃದು ) ವೆಂಜನಗಳು ನಡುವೆ ಬೇರೆತನವಿಲ್ಲ.
ದ್ರಾವಿಡ ನುಡಿಕೂಟವು phonetically not rich as Indo european. ಅಂದರೆ ಈ ನುಡಿಗಳ ಬುಡಕಟ್ಟಿನ ಮಂದಿಗೆ ಸ್ವಾಭಿಕವಾಗಿ ಈ ಸೊಲ್ಲುಗಳು/phones ಉಲಿಯಲು ಹಾವಳಿ, ಅವರು ಅದನ್ನು ಪ್ರಯತ್ನಪೂರ್ವಕವಾಗೇ/ಒದ್ದಾಡಿ ಹೇಳಬೇಕು.
ಆದರೆ ದ್ರಾವಿಡ ನುಡಿಗಳ ವ್ಯಾಕರಣ, ವಾಕ್ಯರಚನೆ, ಲಿಂಗಗಳು, ವಚನಗಳು ಮುಂತಾದವು, ಇಂಡೋ-ಯುರೋಪಿಯನ್( ಸಂಸ್ಕೃತದ family) ನುಡಿಗಳಿಗಿಂತ ಹೆಚ್ಚು ಚನ್ನಾಗಿದೆ ಮತ್ತು ಬಲವಾಗಿದೆ. ಇದರ ಬಗ್ಗೆ ಮುಂದೆ ಮಾತಾಡೋಣ.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಪಟವರ್ಧನರೆ,
ನನಗೆ ಕನ್ನಡ ಅಕ್ಷರಮಾಲೆಯ ಮೇಲೆ ಸಿಟ್ಟಿದೆ ಅಂತ ನನ್ನ ಯಾವ ಮಾತಿನಿಂದ ನಿಮಗನಿಸಿತು ಸ್ವಲ್ಪ ಹೆಕ್ಕಿ ತೋರಿಸುತ್ತೀರಾ? ಅಥವಾ ಸಂಸ್ಕೃತ-ಕನ್ನಡದ 'ಗುದ್ದಾಟ'ದ ಬಗ್ಗೆ ನನ್ನ ನಿಲುವೇನು ಅಂತ ಹೇಳುವ ಒಂದೇ ಒಂದು ಪದ ನೀವು ಹೆಕ್ಕಿದರೂ ಸಾಕು. (ಅಥವಾ ಈ ಗುದ್ದಾಟದ ಬಗ್ಗೆ ಚರ್ಚೆ ನಡೆಯುತ್ತಿರುವ ಕಟ್ಟೆಗೆ ಆಗಾಗ ನಾನು ಬಂದುಹೋಗುವುದೇ ಈ ಸಿಟ್ಟಿನ ಸಂಕೇತ ಅಥವಾ ಅದರ ಬಗ್ಗೆ ನನ್ನ ನಿಲುವೇನು ಅಂತ ಅದೇ ತೋರಿಸಿಬಿಡುತ್ತದೆ ಎಂದು ನೀವು ತೀರ್ಮಾನಿಸಿಬಿಟ್ಟಿದ್ದರೆ ನಾನೇನೂ ಮಾಡಲಾರೆ!)
ಸಂಪದದ ಕಟ್ಟೆ ಮೇಲೆ ಕೂತು ಪಟ್ಟಾಂಗ ಹೊಡೆಯಲು ಸಮಯವನ್ನು ಬೇರೆಲ್ಲಿಂದಲೋ ಕದ್ದು ತರಬೇಕು. ಹೀಗಿರುವಾಗ ಅನಿಸುವುದೆಲ್ಲವನ್ನೂ ಒಂದೇ ಬಾರಿ ಹೇಳಿಬಿಡುವುದು ಸಾಧ್ಯವಾಗುವುದಿಲ್ಲ. ಏನೋ ಯೋಚನೆ ಬಂದಾಗ ಗುರುತು ಹಾಕಿಕೊಳ್ಳುವಂತೆ ಇಲ್ಲಿ ಬಂದು ನುಡಿಮುತ್ತುಗಳನ್ನು ಉದುರಿಸಿ ಹೊರಟುಹೋಗುತ್ತೇವೆ. ಅದರಲ್ಲೂ ಯಾರಾದರೂ ಅಡ್ಡಹಾದಿಗೆ ಎಳೆದರೆ ಅಲ್ಲಿಂದ ತಪ್ಪಿಸಿಕೊಂಡು ಮತ್ತೆ ಹಾದಿ ಹಿಡಿಯುವಷ್ಟರಲ್ಲಿ ಮತ್ತಷ್ಟು ಸಮಯ ದಂಡವಾಗಿಬಿಟ್ಟಿರುತ್ತದೆ. ಇರಲಿ.
ವಿಷಯಕ್ಕೆ ಬರೋಣ. Phonetic symbols ಬಗ್ಗೆ ನೀವು ಪ್ರಸ್ತಾಪ ಮಾಡಿದ್ದು ನನ್ನ (ಎಲ್ಲರ) ಸಮಯ ಉಳಿಸಿತು! ಈ ಚರ್ಚೆಗೆ ಭವಿಷ್ಯವಿರುವುದೇ ಹೌದಾದರೆ ಮುಂದುವರೆಯಲು ಸರಿಯಾದ ಹಾದಿ ತೋರಿಸಿದ್ದೀರಿ.
ಸದ್ಯಕ್ಕಿಷ್ಟೆ,
ಹೆಣೆ
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಹೆಣೆಯವರೆ,
ಮಾತುಕತೆಯ ತಿರುಳಿಗೆ ವಾಲಿ ಮಾತು ನಡೆಸೋಣ. ಅವರು ಹಾಗಂದ್ರು ಹೀಗಂದ್ರು ಇವೆಲ್ಲ ಅತ್ತ ಕಡೆ ಇಡೋಣ.
ಇಸ್ಟು ಬರೆದವರು "Phoetic symbols" ಬಗ್ಗೆ ಏನು ಹೇಳೇ ಇಲ್ಲ!
ದಯವಿಟ್ಟು ಶಂಕರ ಭಟ್ಟರ ಹೊತ್ತಗೆಗಳನ್ನು ಓದಿಕೊಳ್ಳಿರಿ, ಇದಕ್ಕೆ ನೆರವಾಗುವುದು.!
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಮಹೇಶರೆ,
ನಾನಿರುವ ಊರಿನಲ್ಲಿ ಕನ್ನಡ ಪುಸ್ತಕ (ಅದರಲ್ಲೂ ಇಂತಹ ಪುಸ್ತಕ) ಸಿಗುವುದಿಲ್ಲ ಅಂದುಕೊಂಡಿದ್ದೇನೆ. ಸಿಕ್ಕಾಗ ಖಂಡಿತ ಓದುತ್ತೇನೆ. ಈ ಪುಸ್ತಕ ಮತ್ತೆ ಮತ್ತೆ ಇಲ್ಲಿ ತಲೆದೋರುತ್ತಿರುವ ಪರಿ ಕಂಡರೆ, ಅದನ್ನು ಓದಿಕೊಂಡ ಮೇಲೆ ನನ್ನ ಅನಿಸಿಕೆಗಳೆಲ್ಲ redundant ಆಗಿಬಿಡುವ ಸೂಚನೆ ಸಿಗುತ್ತಿದೆ. ಅದನ್ನು ಓದುವವರೆಗೆ ಇಲ್ಲಿ ಕೈಕಾಲು ಕಳಕೊಂಡಹಾಗೆ ಇರಬೇಕಷ್ಟೆ.
ಹೆಣೆ
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಚಿನ್ನದ ನಾಡಾದ ನಮ್ಮ ಕನ್ನಡವನ್ನು ಬಿಟ್ಟು ಎಲ್ಲಿದ್ದೀರೋ
ಅಂಚೆಯಾಸೆ ತರಿಸಿವ ಮೊಗಸು ಮಾಡಿ.. ಕನ್ನಡ grammar/linguistics ಅಲ್ಲಿ ಹುರುಪಿರುವವರು ಓದಲೇ ಬೇಕಾದ ಹೊತ್ತಗೆಗಳು.
ಹೆಸರುಗಳು
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
ಕನ್ನಡ ಬರಹ ಸರಿಪಡಿಸೋಣ.
totalkannada ಅವರನ್ನು ಕೇಳಿ ನೋಡಿರಿ.
ಗೆಲುವಾಗಲಿ!
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಹೆಣೆಯವರೆ,
ಪರಪಂಚದ ಯಾವ ಮೂಲೆಲಿದ್ದೀರ ಸ್ವಾಮಿ? "total kannada" ದಿಂದ ಪಡೆಯಬಹುದು.
ನಿಮ್ಮ ಕನ್ನಡದ ಹುರುಪು ನೋಡಿ ಹೀಗನ್ನುತ್ತಿರುವೆ.. ನೀವು ಬಳಸಿರುವ ಒರೆಗಳಿಗೆ ಕನ್ನಡದ್ದೆ ಆದ( ನಾಲಿಗೆಗೆ ಹೊಂದುವ) ಒರೆಗಳಿವೆ
ಪುಸ್ತಕ - ಹೊತ್ತಿಗೆ
ಖಂಡಿತ - ನಿಕ್ಕುವ
ಇವುಗಳನ್ನ ಬಳಸಲೇಬೇಕೆಂಬ ಒತ್ತಾಯವಿಲ್ಲ
ನಿಮಗೆ ಬಿಟ್ಟಿದ್ದು.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
redundantಗೆ ’ಹೆಚ್ಚುವರಿ’ ಎಲ್ವ ಕನ್ನಡದ ಒರೆ ಐತಲ್ವರ ಬುದ್ದಿ.
ತುಸು ಸಂಗತಿ ಕಡೆ ಗಮನ ಕೊಡಿ.
ನೀವು ನನ್ನ ಕೇಳ್ಮೆಗೆ ಮರು ಹೇಳಲೇ ಇಲ್ಲ.
ಸಂಯುಕ್ತ ಸೊರ ಅಂದ್ರೆ Triphthong ಇದು ಆಗಬಹುದಲ್ಲ. ಕನ್ನಡದಲ್ಲಿ ಇವು ಇವಾ?
http://en.wikipedia.org/wiki/Triphthong
ನೋಡಿ ನನ್ನ ಅರಿವಂತೆ ಕನ್ನಡದಾಗೆ ಈ ’ಸಂಯುಕ್ತ ಸೊರ’ ಅನ್ನೋದೇ ಇಲ್ಲ.
ಸಾಇ ಕನ್ನಡದಾಗೆ ಸಾಯಿ, ಆಇ ಕನ್ನಡದಾಗೆ ಆಯಿ, ಲಖನಉ ಕನ್ನಡದಾಗೆ ಲಖನವು ಆಯ್ತದೆ. ಕನ್ನಡದಾಗೆ ಉದ್ದಕ್ಕೆ ಸೊರಗಳೇ ಬರಕ್ಕೆ ಆಗಕ್ಕಿಲ್ಲ.
ಅಇ = ಅಯಿ
ಅಉ = ಅವು, ಆಯ್ತವೆ.
ಆದ್ರೆ ಇಂಡೋ-ಯುರೋಪಿನ್ ನುಡಿಗಳಲ್ಲಿ ಇವು ಅವೆ.
ಹೊಉಸ್ = house ಇದನ್ನು ನಾವು ಹವ್ಸ್ ಅಂತೀವಿ. ಆದರೆ ಅದರ ಸರಿಯಾದ ಉಲಿಯೇ ಬೇರೆ ಐತೆ. ಇದು ನಿಮಗೆ
ಈ ಇಂಡೋ-ಯುರೋಪಿನ್ ಕತೆ ಅತ್ತಲಾಗೆ ಇರಲಿ, ನಮ್ಮ ದ್ರಾವಿಡದ ಕನ್ನಡದ ಕಡೆ ನೋಡೂಮ.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಹೌದು.. ಅಕ್ಕರ ಪಟ್ಟಿಯಲ್ಲಿ ಹಲವು ಅಕ್ಷರಗಳು ಅಚ್ಚ ಕನ್ನಡದಲ್ಲಿ ಇಲ್ಲದವು. ಒಪ್ಪಿದೆ.
ಆದರೆ ಅವುಗಳನ್ನು ಕಿತ್ತೊಗೆಯುವುದರಿಂದ ಏನು ಲಾಭ? ಐದು ಹತ್ತು ಅಕ್ಷರ ಹೆಚ್ಚು ಕಲಿತರೆ ಏನು ನಷ್ಟ? ಅಷ್ಟಕ್ಕೂ ಇವೆಲ್ಲ ಅಕ್ಷರಗಳೂ ನಾವೆಲ್ಲ (ಕೊನೇ ಪಕ್ಷ ನಾನು) ಬಳಸುವ ಕನ್ನಡಕ್ಕೆ ಬೇಕೇ ಬೇಕು. ಹೀಗೆ ಅಕ್ಷರಗಳನ್ನು ಕಿತ್ತೊಗೆದರೆ ನಾಳೆ ನಾನು ಬರೆದದ್ದು ಯಾರಿಗೆ ಅರ್ಥ ಆದೀತು? (ಇದನ್ನು ನನ್ನ ಪರಮ ಸ್ವಾರ್ಥ ಅಂತಲೇ ಇಟ್ಟುಕೊಳ್ಳಿ.) ನನ್ನ ಕನ್ನಡ; ನಾನು ಓದಿದ, ಬರೆದ ಕನ್ನಡ- ಹೇಗಿದೆಯೋ ಹಾಗೇ ಇರಬೇಕೆಂಬುದು ನನ್ನ ಬಯಕೆ. (ಲಿಪಿಯ ಬಗ್ಗೆ ನಾನು ಹೇಳುತ್ತಿರುವುದು.)
ಇನ್ನು ಕನ್ನಡದ ಒರೆಗಳಿದ್ದಾಗಲೂ ಸಂಸ್ಕೃತ ಪದಗಳನ್ನು ಒತ್ತಾಯದಿಂದ ಬಳಸುವ ಬಗ್ಗೆ ನನಗೂ ಅಸಮಾಧಾನ ಇದೆ.
(ಹಿಂದೆ ಈ ಬಗ್ಗೆ ಇದ್ದ ನನ್ನ ಅಭಿಪ್ರಾಯ ಈಗ ಬದಲಾಗುತ್ತಿದೆ. ಸಂಪದಕ್ಕೆ ನನ್ನಿ.) ಆದರೆ ನನ್ನ ಮಟ್ಟಿಗೆ ಹೇಳುವುದಾದರೆ, ಹಲವು ಸಂಸ್ಕೃತ ಪದಗಳು ನನಗೆ ಕನ್ನಡವೇ ಆಗಿವೆ. ಸಣ್ಣಂದಿನಿಂದಲೂ ಆಡಿಕೊಂಡು ಬಂದ ಪದಗಳು.. ಒತ್ತಾಯವಿಲ್ಲದೆ ಸಹಜವಾಗಿ ಬರುವ ಪದಗಳು.. ಅಥವಾ ಅಲ್ಪ ಸ್ವಲ್ಪ ಸಂಸ್ಕೃತ ಓದಿದ್ದರಿಂದ ಗೊತ್ತಾಗಿರುವ ಪದಗಳು.. ಇವೆಲ್ಲ ನನಗೆ ಕನ್ನಡವೇ. ಅಂತೂ ಬಾಯಿಮಾತಲ್ಲಿ ಬಳಸುವ ಸಂಸ್ಕೃತ ಪದಗಳ ಬಗ್ಗೆ ನನಗೆ ಮಮತೆ ಇದೆ. ಅವುಗಳನ್ನು ಬಿಟ್ಟುಕೊಡಲು ನನಗೆ ಮನಸ್ಸಿಲ್ಲ.
ಇನ್ನು ’ಬೃಹತ್ ಬೆಂಗಳೂರು’ , ’ ಕುಕ್ಕುಟ ಸಾಕಣಾ ಕೇಂದ್ರ’ , ’ ಸಿದ್ಧ ಸ್ಮೃತಿ ಕೋಶ’ - ಮೊದಲಾದವು ನನಗೂ ಮೆಚ್ಚುಗೆ ಇಲ್ಲದವು.
ಹಾಂ.. ಹಳೆಯ , ನಮಗೆ ಮರೆತು ಹೋಗಿರುವ ಕನ್ನಡ ಪದಗಳನ್ನು ಆಡುಮಾತಿಗೆ ತರುವುದು ಒಂದು ದೊಡ್ಡ ಕೆಲಸ. ಅದು ಆಗಬೇಕಾಗಿದೆ. ನಾವು - ನೀವು ಇಲ್ಲಿ ಬರೆದ ಕೂಡಲೇ ಅದು ಸಾಧ್ಯ ಆಗುವುದಿಲ್ಲ. ಪತ್ರಿಕೆಗಳಲ್ಲಿ ಬರೆಯುವವರು, ಪಠ್ಯಪುಸ್ತಕ ತಯಾರಿಸುವವರು, ಸಿನಿಮಾ- ಟಿವಿ ಮಂದಿ - ಇಂಥವರನ್ನು ಮೊದಲು target ಮಾಡಬೇಕು. ಇವರು ಕನ್ನಡ ಬರೆಯಲು - ಆಡಲು ತೊಡಗಿದರೆ ಎಲ್ಲರೂ ಅದನ್ನು ಒಪ್ಪಿಕೊಳ್ಳುತ್ತಾರೆ. ಹಾಗಾದಾಗ ನಮ್ಮ ಮಕ್ಕಳು ಮಾತಾಡುವ- ಬರೆಯುವ ಕನ್ನಡಕ್ಕೂ ನಾವು ಆಡುವ - ಬರೆಯುವ ಕನ್ನಡಕ್ಕೂ ಸ್ವಲ್ಪ ವ್ಯತ್ಯಾಸ ಕಂಡೀತು.
’Redundant’ ನಾನು ತಿಳಿದ ಹಾಗೆ ಹೆಚ್ಚುವರಿ ಅಲ್ಲ.
ಬದಲಿಗೆ, ಅದು ' ಅಸಂಗತ '.
Relevant (ಸಂಗತ)ಕ್ಕೆ ವಿರುದ್ಧವಾದದ್ದು.
ಇದಕ್ಕೆ ಕನ್ನಡ ನುಡಿ ಇದ್ದರೆ ಹೇಳಿ.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ನೀವು ಈ ಬಳಕೆಗಳನ್ನು ಕೇಳಿರಬಹುದು.
೧. ಹೆಚ್ಚುವರಿ ನೀರನ್ನು ನದಿಯಿಂದ ಸಮುದ್ರಕ್ಕೆ ಬಿಡಲಾಗುತ್ತಿದೆ.
೨. ಹೆಚ್ಚುವರಿ ದಾಸ್ತಾನನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು.
Redundant = Exceeding what is necessary or natural; superfluous.
ಹೆಚ್ಚುವರಿ = ಹೆಚ್ಚು + ಪರಿ
ಪರಿ = Ka. pari, hari to run, flow, proceed (as work), go away, disappear, be discharged (as a debt); n. moving, running, flowing, stream;
ಕನ್ನಡದಲ್ಲಿ ಹೆಚ್ಚುವರಿ ಎಂಬ ಪದವು ಮೊದಮೊದಲು ನೀರಿನಂಶಕ್ಕೆ ಬಳಕೆಯಾಗುತ್ತಿತ್ತೆಂದು ಕಾಣುತ್ತದೆ. ಆದರೆ ಈಗ ಈ ಪದ ಎಷ್ಟೊ ವೇಳೆ ಇತರ ಸನ್ನಿವೇಶಗಳಲ್ಲಿಯೂ ಬಳಕೆಯಾಗುತ್ತಿದೆ.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಸ್ವಾಮೀ,
ಈ ಹೆಚ್ಚುವರಿ ಎಂಬ ಶಬ್ದ ನನಗೆ ಹೊಸತಲ್ಲ. ಆದರೆ ಹೆಣೆ ಹೇಳಿದ Context ನೋಡಿ:
" ಈ ಪುಸ್ತಕ ಮತ್ತೆ ಮತ್ತೆ ಇಲ್ಲಿ ತಲೆದೋರುತ್ತಿರುವ ಪರಿ ಕಂಡರೆ, ಅದನ್ನು ಓದಿಕೊಂಡ ಮೇಲೆ ನನ್ನ ಅನಿಸಿಕೆಗಳೆಲ್ಲ redundant ಆಗಿಬಿಡುವ ಸೂಚನೆ ಸಿಗುತ್ತಿದೆ. ಅದನ್ನು ಓದುವವರೆಗೆ ಇಲ್ಲಿ ಕೈಕಾಲು ಕಳಕೊಂಡಹಾಗೆ ಇರಬೇಕಷ್ಟೆ."
ಅಂದರೆ ಪುಸ್ತಕ ಓದಿದ ಮೇಲೆ ಅವರ ಈಗಿನ ಅನಿಸಿಕೆಗಳು ಹೆಚ್ಚುವರಿ ಆಗುತ್ತವೆಯೇ? ಅಲ್ಲ; ಅವರಿಗಿರುವುದು ಅವರ ಇಂದಿನ ಅನಿಸಿಕೆಗಳು ’ಅಪ್ರಸ್ತುತ’ ಅಥವಾ ’ಅಸಂಗತ’ ಆಗುವ ಆತಂಕ.
MSN Encarta ನೀವು ಕೊಟ್ಟ ’superfluous' ಶಬ್ದಕ್ಕೆ ಹೇಳಿರುವ ಅರ್ಥ ಇದು:
superfluous: not or no longer needed or wanted.
Context ಗೆ ತಕ್ಕ ಹಾಗೆ ಅರ್ಥ ಹುಡುಕಬೇಕು - ಅಲ್ಲವೆ?
ಇನ್ನು ಹಣೆ ಅವರೇ ಅವರು ಉಪಯೋಗಿಸಿದ ರೀತಿ ಯಾವುದು ಎಂದು ಸ್ಪಷ್ಟಪಡಿಸಬೇಕೋ ಏನೋ!!
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಇಲ್ಲಿ ನೋಡಿ- ನಿಮ್ಮ ಶಂಕೆ ದೂರವಾದೀತು:
http://encarta.msn.com/thesaurus_/redundant.html
Redundant ಗೆ ಸಮಾನಾರ್ಥಕ ಪದಗಳನ್ನು ಹೀಗೆ ಪಟ್ಟಿ ಮಾಡಲಾಗಿದೆ:
laid off, let go, out of work, out of a job, jobless, fired, dismissed, terminated
ಇದನ್ನೇ ನೀವುಗಳು ’ ಹೆಚ್ಚುವರಿ ’ ಅನ್ನುವುದಾದರೆ ನಾನೇನೂ ಮಾಡಲಾರೆ.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಕಿಶೋರ ಅಯ್ಯ( ಇದು ಕನ್ನಡದಲ್ಲಿ ಗರುವ ತೋರಿಸುವ ಒರೆ )
೧)Reduntantಗೆ ಹೆಚ್ಚುವರಿ ತಕ್ಕುದಾದುದು. ಆದರೂ ತಮ್ಮ ಮಾತಲ್ಲಿ ಬಂದ ಇವಕ್ಕೆ ಕನ್ನಡಲ್ಲಿ => relevant ( ತಕ್ಕುದಾದ ), irrelevant ( ತಕ್ಕುದ್ದಲ್ಲದ ). redundantಗೆ ಅತಿ(ಸಂಸ್ಕತ) ಒಗ್ಗುವುದು. ಈ ಬಗ್ಗೆ ಸುನಿಲ ಮಾತಿಗೆ ನನ್ನ ಒಡಗೊರಲಿದೆ(ಸಹಧ್ವನಿ). ಆದರೆ ಇದು ನಮ್ಮ ಮಾತುಕತೆಯ ತಿರುಳಲ್ಲ. ಇದು ಇರಲಿ ಬಿಡಿ.
ಕನ್ನಡದಲ್ಲಿ ಅಗ್ಗಲಿಸು ಅಂದರೆ to become redundant
ಇನ್ನು ಇಲ್ಲಿಯ ತಲೆಮೆ( ಮುಖ್ಯ ) ಸಂಗತಿಯನ್ನೇ ನೋಡೋಣ.
ನಿಮ್ಮ ಮಾತಿನಲ್ಲಿ
೧)
ಸರಿ, ಇನ್ನು ಕನ್ನಡದಲ್ಲಿ ಹೆಚ್ಚಿಗೆ ಬೇಕಾಗಿರುವ ಅಕ್ಕರಗಳನ್ನೂ ಅಂದರೆ ae, a, ಮುಂತಾದವನ್ನು ಸೇರಿಸಿ ಒಂದು ದೊಡ್ಡ ಅಕ್ಕರ ಪಟ್ಟಿ ಮಾಡೋಣ. ಇದನ್ನು ಮಾತಿಗೆ(per say) ಪಂಡಿತರ/ದೊಡ್ಡ ಅಕ್ಕರಪಟ್ಟಿ ಅನ್ನೋಣ. ಇದನ್ನು ತಮ್ಮಂತ/ನಮ್ಮಂತ ಸಕ್ಕದ, ಇಂಗ್ಲೀಸು, ಮುಂತಾದ ನುಡಿಗಳ ಅರಿವಿರುವವರು ಬರೆಯಲು ಬಳಸಬಹುದು. ಇದೊಂದು advanced Privilege.
ಈ ಅಕ್ಕರ ಪಟ್ಟಿಗೆ ಸಂಪ್ರದಾಯವೊಂದೇ ಓಸುಗರ. ನಿಮ್ಮಂತೆ/ನನ್ನಂತೆ ಸಕ್ಕದದ ದಟ್ಟು ನೆರಳು/ಪ್ರಭಾವದ ಸಂಪ್ರದಾಯದಲ್ಲಿ ಕನ್ನಡ ಕಲಿತವರಿಗಾಗಿ. ಸಂತಸವೇ!
.
.
.
ಈ ಅಕ್ಕರಪಟ್ಟಿಯಲ್ಲದೇ, ಮಾಮೂಲಿ ಮಂದಿಗೆ, ಅಚ್ಚಕನ್ನಡಿಗರಿಗೆ, ಕನ್ನಡದಲ್ಲಿ ಇರದ ಸೊಲ್ಲುಗಳನ್ನು ಬರೆಯಲು ಕೊಂಚವೂ ಇಂಗಿತವಿಲ್ಲದವರಿಗಾಗಿ, ಮಾತಿಗೆ(per say) "ಮಾಮೂಲಿ/ಪಾಮರರ
/ಸರಳ"ಅಕ್ಕರ ಪಟ್ಟಿ ಬೇಕೇ ಬೇಕು.
ಆದರೆ ನಮ್ಮ ಅಕ್ಕರಪಟ್ಟಿ ಯಾಕೆ? ಕೆಳಗಿನ ಓಸುಗರಗಳಿಂದ.
೧) ನಮ್ಮ ಕನ್ನಡದ/ದ್ರಾವಿಡದ phonotic systemಗೆ ನಮ್ಮ ಅಕ್ಕರ ಪಟ್ಟಿ ಹೊಂದಲ್ಲ. ಜಗದ ಎಲ್ಲ ಹೆಚ್ಚು ನುಡಿಗಳ ಅಕ್ಕರ ಪಟ್ಟಿ ಅವರ ಉಲಿಕೆ/phonticsಗೆ ಹೊಂದುವುದು.
೨) ಯಾವಾಗಲೂ ಉಲಿದಂತಗೆ ಬರೆಯುವುದೇ ಸಲೀಸು. ನಮ್ಮ ಮಂದಿಗೆ ಅಲ್ಪಪ್ರಾಣ, ಮಹಾಪ್ರಾಣ, ಶ, ಷ, ಋ ಗಳನ್ನು ಉಲಿಯಲಾಗದೇ, ಬಲು ಬರಹ ತಪ್ಪುಗಳನ್ನು, (spelling mistakes) ಮಾಡುವರು. ಈ ಸರಳ ಅಕ್ಕರಪಟ್ಟಿಯಿಂದ ಆ ತಪ್ಪುಗಳೆಲ್ಲ ತಪ್ಪುಗಳೇ ಆಗಿರುವುದಿಲ್ಲ.
೩) ಈ ಸರಳ ಸುದ್ದಗೆಯಿಂದ ಸಕ್ಕದ ಒರೆಗಳನ್ನು ಇನ್ನು ಕನ್ನಡಕ್ಕೆ ಸುರಿಯುವುದು ಬಲು ಎಡರಿನಿಂದ(ಕಷ್ಟ) ಕೂಡಿರುತ್ತದೆ. ಅಲ್ಲದೇ ಸಕ್ಕದ ಒರೆಗಳು ತನ್ತಾನೆ ತದ್ಬವಗಳಾಗಿ ಕನ್ನಡಕ್ಕೆ ಸೇರುವುವು.
೪) ಅಕ್ಕರಗಳು ಕಡಮೆ ಆದ ಅನಿತ್ತೂ ಬರೆಯುವುದು ಓದುವುದು ಸಲೀಸೇ, ಇದಕ್ಕೆ ಇಂಗ್ಲೀಸು ಮುಂತಾದ ಯುರೋಪಿನ ನುಡಿಗಳು, ತಮಿಳು ಪುರಾವೆ. ಇದರಿಂದ ಕನ್ನಡ ಕಲಿಕೆ ಸಲೀಸು
ಕನ್ನಡ/ದ್ರಾವಿಡದ phonotic system ಅಂತೆ, ಕನ್ನಡಕ್ಕೆ ಕನ್ನಡದ್ದೇ ಸರಳ ಅಕ್ಕರ ಪಟ್ಟಿ ಬೇಕೇ ಬೇಕು. ಅದರಲ್ಲಿ ದ್ರಾವಿಡ ನುಡಿಗಳ ಗುಣಗಳಾದ
೧) aspirated/unaspirated( ಅಲ್ಪಪ್ರಾಣ/ಮಹಾಪ್ರಾಣ) ಎರಡೂ ಒಂದೇ, ಬೇರೆತನವಿಲ್ಲ.
೨) ಅ, ಇ, ಉ ಎ, ಒ ಮತ್ತು ಅವುಗಳ ಉದ್ದು ಸೊರಗಳು ಸಾಕು
ಕನ್ನಡದ ಗುಣಗಳದ
೨) ಸ, ಶ, ಷ ಮೂರು ಒಂದೇ
ಈ ಗುಣಗಳು ಎದ್ದು ಕಾಣಬೇಕು. ನಮ್ಮ ಕನ್ನಡತನ ನಮ್ಮ ಅಕ್ಕರ ಪಟ್ಟಿಯಲ್ಲೂ ಇರಬೇಕು. ಈಗಿನ ಅಕ್ಕರ ಪಟ್ಟಿ ಅಚ್ಚ-ಸಕ್ಕದತನವನ್ನೇ ತೋರಿಸುವುದು.
ತಿರುಳು:
೧) ಪಂಡಿತರ ಅಕ್ಕರ ಪಟ್ಟಿ, advanced/ಮುಂದವರಿದ ಬಳಕೆದಾರರಿಗೆ, ಇವರ ಬಲು ಕಡಮೆ.
೨) ಸರಳ, ಕನ್ನಡದ ಗುಣಗಳನ್ನು ತೋರುವ ಅಕ್ಕರ ಪಟ್ಟಿ ಮಾಮೂಲಿ ಮಂದಿಗೆ
ಈಗ ಇಬ್ಬರಿಗೂ ನಲಿವೇ. ಆದರೆ ಇಂದು ಈ ’ಸಂಸ್ಕೃತದ ಅಕ್ಷರ ಮಾಲೆ" ಕನ್ನಡದ phontic system ಮೇಲೇ ಹೇರಿಕೆ.!
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಇತ್ತೀಚೆಗೆ ಇದು ದ್ವಂದ್ವಾರ್ಥ ಸಿನಿಮಾ ಸಂಭಾಷಣೆಗೆ ಮೀಸಲಾಗಿದೆ.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಅಯ್ಯಾ!!! ನಿಮ್ಮ ಹೆಸರು ಅರುಹಬಹುದೇ?
ನಮ್ಮ ತಾತ, ಮುತ್ತಾತರ, ಹೆಸರಲ್ಲೇ 'ಅಯ್ಯ' ಇತ್ತು, ನನ್ನ ಹೆಸರಲ್ಲೂ 'ಅಯ್ಯ' ಇದೆ
.
ಯಾವುದೋ ಒಂದು ಸಿನಿಮದಲ್ಲಿ ಹಂಗೆ ಬಂದರೆ ಅದಕ್ಕೆಲ್ಲ ತೆಲೆಬಿಸಿ ಮಾಡಿಕೊಳ್ಳಕ್ಕೆ ಆಗಲ್ಲ, ಬಿಡಿ!!
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಅಹುದು...'ಅಯ್ಯ' ಎಂದು ಕೊನೆಯ ಹೆಸರಾಗಿ ಬರುವುದನ್ನು ನಾನೂ ಬಲ್ಲೆ.
ನಾನು ಸೂಚ್ಯವಾಗಿ ಇತ್ತೀಚೆಗೆ ಈ ಒರೆ ಗೌರವಸೂಚಕವಾಗಿ ಬಳಕೆಯಲ್ಲಿಲ್ಲ ಎಂದು ಹೇಳಹೊರಟಿದ್ದೆ.
ಕೆಪಿಬೊಳುಂಬು
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ನಮ್ಮ ಕಡೆ "ಅಯ್ಯ, ಅಣ್ಣ, ಅಪ್ಪ, ಅಮ್ಮ, ಅಕ್ಕ" ಇವೆಲ್ಲ ಇನ್ನೂ ಗರುವದ ಒರೆಗಳಾಗಿ ಇವೆ.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಅಯ್ಯೋ ದೇವರೆ, ಅಯ್ಯ, ಅಮ್ಮ ಅನ್ನೋದನ್ನೂ ಸಿನಿಮಾದವರು ಹೀಗೆ ಕೆಡಿಸಿದರೇ
?
ಅಯ್ಯ, ಅಜ್ಜ ಎರಡೂ ಆರ್ಯ ಪದದ ತದ್ಭವಗಳು ಎಂಬುದು ನನ್ನ ಭಾವನೆ. ಆಜ್ಜ ಅಂತೂ ಖಂಡಿತಾ ಆರ್ಯ ದಿಂದಲೇ ಬಂದಿರುವುದು. ಆರ್ಯ, ಅಯ್ಯ ಈ ಎರಡಕ್ಕೂ ಇರುವ ಇರುವ ಗೌರವಿಸಲ್ಪಡಬೇಕಾದವನು ಎಂಬ ಅರ್ಥವನ್ನೂ, ನೋಡಿದರೆ, ಈ ಅನುಮಾನ ಬಲವಾಗುತ್ತದೆ.
ಅಯ್ಯ ಎನ್ನುವುದು ಕನ್ನಡದಲ್ಲಿ ಶತಮಾನಗಳಿಂದ ಉಪಯೋಗಿಸಲ್ಪಡುತ್ತಿರುವ ಗೌರವ ಸೂಚಕ. ವಡ್ಡಾರಾಧನೆಯಲ್ಲಿಯೂ ಇದನ್ನು ನೋಡಿರುವ ನೆನಪಿದೆ. ಆದಿಕವಿ ಪಂಪನ ಹೆಸರು ಪದ್ಮಪಯ್ಯ (ಪದ್ಮಪ -> ಕಮಲದಲ್ಲಿ ಹುಟ್ಟಿದವನು=ಬ್ರಹ್ಮ, ಅಯ್ಯ -> ಗೌರವ ಸೂಚಕ. ಜೈನರು ಬ್ರಹ್ಮ ಹಾಗೂ ಸರಸ್ವತಿಯನ್ನು ತಮ್ಮ ನಂಬಿಕೆಯ ದೇವರುಗಳಲ್ಲಿ ಸೇರಿಸಿರುವುದು ತಿಳಿದ ವಿಷಯವೇ. ಜೈನ ಮತಾವಲಂಬಿಗಳು ಅಯ್ಯ ಪ್ರತ್ಯಯದೊಡನೆ ಹೆಸರಿಟ್ಟುಕೊಳ್ಳುವುದು ಇಂದಿಗೂ ಕಾಣಬಹುದು - ಪದ್ಮರಾಜಯ್ಯ, ಜ್ವಾಲನಯ್ಯ ಮೊದಲಾದ ಹೆಸರುಗಳನ್ನು ಗಮನಿಸಬಹುದು)
ಹಲವು ಕುಟುಂಬಗಳಲ್ಲಿ ರೂಢಿಯಲ್ಲಿ ತಂದೆಯನ್ನು ಕರೆಯುವಾಗ ಅಯ್ಯ ಎಂದು ಕರೆಯುವುದು ಇದೆ. ಅದೇ ಅಲ್ಲದೆ, ಪೂಜೆ ಮಾಡುವವರನ್ನೂ ಅಯ್ಯನವರು/ಐನೋರು ಎನ್ನುವುದೂ ಸಾಮಾನ್ಯ.
-ಹಂಸಾನಂದಿ
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಮತ್ತೆ ಹಂಸಾನಂದಿ ಅಯ್ಯರಿಂದ "quote" ತಪ್ಪು
"ಅಯ್ಯ, ಅಜ್ಜ ಎರಡೂ ಆರ್ಯ ಪದದ ತದ್ಭವಗಳು ಎಂಬುದು ನನ್ನ ಭಾವನೆ"
ಇಲ್ಲಿ ನೋಡಿರಿ.
http://dsal.uchicago.edu/cgi-bin/philologic/getobject.pl?c.0:1:199.burro...
Ka. ayya, aya father, grandfather, master, lord, teacher.
Ka. ayyō, ayyayyō, ayyayyē interj. expr. grief; interj. expr. astonishment; interj. expr. compassion.
ಹೀಗೆ ಅಪ್ಪಪ್ಪ, ಅಮ್ಮಮ್ಮ, ಇವೆ!!
http://dsal.uchicago.edu/cgi-bin/philologic/getobject.pl?c.0:1:53.burrow
Ka. acci mother, a Malayāḷa woman; ajja grandfather; ajji grandmother.
ಇವು ನಮ್ಮವೇ ಎಂದು ಅಂದುಕೊಳ್ಳಲೂ ಕೂಡ ತಕ್ಕಮಟ್ಟಿನ ಪುರಾವೆ ಇದೆ! ಇವು ನಮ್ಮವೇ!!
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಮತ್ತೆ ಹಂಸಾನಂದಿ ಅಯ್ಯರಿಂದ "quote" ತಪ್ಪು
"ಅಯ್ಯ, ಅಜ್ಜ ಎರಡೂ ಆರ್ಯ ಪದದ ತದ್ಭವಗಳು ಎಂಬುದು ನನ್ನ ಭಾವನೆ"
ಇಲ್ಲಿ ನೋಡಿರಿ.
ನೀವು ತಪ್ಪು ಎಂದು ಹೇಳಿದ್ದು ಬರೀ quote ಬಗ್ಗೆ ಎಂದುಕೊಳ್ಳುತ್ತೇನೆ.
ಹಾಗಿದ್ದರೆ ಮುಂದಿದ್ದನ್ನು ನೀವು ಬಿಟ್ಟುಬಿಡಿ
ಈಗ ನೋಡಿದೆ. ಪ್ರಿಸ್ಮ್ ಪದಕೋಶ ಹೀಗೆ ಹೇಳುತ್ತೆ:
ಅಜ್ಜ : ಪಿತಾಮಹ (ಸಂ) (ನಾ) ೧ ತಂದೆಯ ತಂದೆ, ಅಜ್ಜ, ತಾತ ೨ ಬ್ರಹ್ಮ ೩ ರಾಜ, ಅರಸ ೪ ಬೇರೆಯವರ ಮನಸ್ಸಿನಲ್ಲಿರುವುದನ್ನು ತಿಳಿಯುವವನು
ಅಯ್ಯ (<ಸಂ. ಆರ್ಯ) (ನಾ) ೧ ತಂದೆ ೨ ತಾತ ೩ ಜಂಗಮ ೪ ಹಿರಿಯ ೫ ಉಪಾಧ್ಯಾಯ
ಆರ್ಯದಿಂದಲೇ ಅಯ್ಯ ಬಂದಿರುವುದನ್ನು ಇದೂ ಸಮರ್ಥಿಸುತ್ತಿದೆ.
-ಹಂಸಾನಂದಿ
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಸರಿ !!
burrow ಮತ್ತು prism ಇಬ್ಬರು ಇದನ್ನು ಬಿಡಿಸಬೇಕು.
ಆದರೆ prism etymology ಒರೆಗಂಟು ಅಲ್ಲದೇ ಇರುವದರಿಂದ ಅದನ್ನು etymology ಬಗ್ಗೆ ಬಳಸುವುದು ಕಡಮೆ ತಕ್ಕದ್ದು!! ಆದುದರಿಂದ ಅದು "ಆರ್ಯದಿಂದಲೇ ಅಯ್ಯ ಬಂದಿರುವುದನ್ನು ಪೂರ್ಣವಾಗಿ ಸಮಥಿಸುವುದಿಲ್ಲ". ಒಂದು etymology ಒರೆಗಂಟಿಂದ ಹುಡುಕಿ ಹೇಳಿರಿ.
ಮಿಕ್ಕಿದ್ದು ನಿಮ್ಮ ಇಂಗಿತ.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
(mwd) = Cologne Digital Sanskrit Lexicon
(cap) = Capeller's Sanskrit-English Dictionary
(otl) = Cologne Online Tamil Lexicon
(cpd) = Concise Pahlavi Dictionary
1 (otl) ayyA * 1. father; 2. respectable man
2 (otl) ayyA a subdivision of the par6aiya caste (TLS)
http://webapps.uni-koeln.de/tamil/
(mwd) = Cologne Digital Sanskrit Lexicon
(cap) = Capeller's Sanskrit-English Dictionary
(otl) = Cologne Online Tamil Lexicon
(cpd) = Concise Pahlavi Dictionary
1 (mwd) ajJa mfn. ( %{jJA}) , not knowing ; ignorant , inexperienced ; unconscious ; unwise , stupid.
to order , command , direct MBh. &c. ; to assure R. vi , 103 , 10. [133,2]
2 (mwd) AjJA 1 %{-jAnAti} (Impv. 2. pl. %{-jAnIta} ; perf. %{-jajJau} ; p. %{jAna4t}) to mind , perceive , notice , understand RV. i , 94 , 8 ; 156 , 3 S3Br. Ta1n2d2yaBr. ; (cf. %{a4n-AjAnat}): Caus. %{-jJApayati} , %{-te} (Inf. %{-jJaptum} R. iv , 40 ,
3 (mwd) AjJA 2 f. order , command Mn. x , 56 MBh. &c. ; authority , unlimited power Ba1lar. ; N. of the tenth lunar mansion VarBr2. ; permission (neg. %{anAjJayA} instr. ind. without permission of (gen.) Mn. ix , 199).
==========================================================
http://ehl.santafe.edu/cgi-bin/main.cgi?root=config
http://ehl.santafe.edu/cgi-bin/query.cgi?root=config&morpho=0&basename=/...
Database query to South Dravidian etymology
Proto-South Dravidian : *aj-an
Meaning : father
Dravidian etymology:
Tamil : ayyan_, aiyan_
Tamil meaning : father, sage, priest, teacher, brahman, superior person, master, king
Tamil derivates : ayyƒ father, respectable man; aiyar men worthy of respect, sages, brahmans, title of smƒrta brahmans, etc.; tam-aiyan_ elder brother or parallel male cousin; numaiyan_ your elder brother; ai lord, master, husband, king, guru, priest, teacher, father
Malayalam : ayyan
Malayalam meaning : father, lord
Malayalam derivates : tamayan elder brother
Kannada : ayya, aya
Kannada meaning : father, grandfather, master, lord, teacher
Kodagu : ayye¨
Kodagu meaning : father's brother or parallel male cousin, mother's sister's husband
Kodagu derivates : tammayyƒN younger brtoher (voc.)
Tulu : ayye
Tulu meaning : priest, minister, teacher, master
Tulu derivates : tammaiya an affectionate form of addressing a younger brother
Proto-Nilgiri : *aj-
==============================================================
Proto-South Dravidian : *a¾¾-
Meaning : father, grandfather
Dravidian etymology:
Tamil : accan_
Tamil meaning : father
Tamil derivates : acci Nƒyar woman (< Ma.); acciyar women ascetics; acc¡ excl. of pity or of wonder
Malayalam : accan
Malayalam meaning : father, lord
Malayalam derivates : acca mother; acci id., Nƒyar woman; acc¡ interj. of surprise or pain
Kannada : acci
Kannada meaning : mother, a Malayƒl·a woman
Kannada derivates : ajja grandfather; ajji grandmother
Kodagu : ajje¨
Kodagu meaning : grandfather
Kodagu derivates : mutt-ajje¨ great-grandfather
Tulu : ajje
Tulu meaning : grandfather
Tulu derivates : ajji grandmother
Proto-Nilgiri : *a¾
=====================================================
ಅದು etymologyಗಳ ದೊಡ್ಡ ಗುಡಾಣ!!
ಹಂಸಾನಂದಿಯವರು ದಯವಿಟ್ಟು ಗಮನಿಸಿ, ಅದರಲ್ಲಿ proto-south-dravidian form ಕೂಡ ಇದೆ.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
(mwd) = Cologne Digital Sanskrit Lexicon
(cap) = Capeller's Sanskrit-English Dictionary
(otl) = Cologne Online Tamil Lexicon
(cpd) = Concise Pahlavi Dictionary
1 (mwd) ajJa mfn. ( %{jJA}) , not knowing ; ignorant , inexperienced ; unconscious ; unwise , stupid.
2 (mwd) AjJA 1 %{-jAnAti} (Impv. 2. pl. %{-jAnIta} ; perf. %{-jajJau} ; p. %{jAna4t}) to mind , perceive , notice , understand RV. i , 94 , 8 ; 156 , 3 S3Br. Ta1n2d2yaBr. ; (cf. %{a4n-AjAnat}): Caus. %{-jJApayati} , %{-te} (Inf. %{-jJaptum} R. iv , 40 , to order , command , direct MBh. &c. ; to assure R. vi , 103 , 10. [133,2]
3 (mwd) AjJA 2 f. order , command Mn. x , 56 MBh. &c. ; authority , unlimited power Ba1lar. ; N. of the tenth lunar mansion VarBr2. ; permission (neg. %{anAjJayA} instr. ind. without permission of (gen.) Mn. ix , 199).
ಇದನ್ನು ನೀವು ಏಕೆ ಹೇಳುತ್ತಿದ್ದೀರಿ ತಿಳಿಯಲಿಲ್ಲ.
ಇವೆಲ್ಲ ಪದಗಳು ಅಜ್ಞ/ಆಜ್ಞಾ ಗಳಿಗೆ ಸಂಬಂಧಿಸಿದ್ದೇ ಹೊರತು ಅಜ್ಜನಿಗೆ ಯಾವರೀತಿಯಲ್ಲೂ ನಂಟಿಲ್ಲವಲ್ಲ?
ಹಂಸಾನಂದಿ
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
(mwd) = Cologne Digital Sanskrit Lexicon
(cap) = Capeller's Sanskrit-English Dictionary
(otl) = Cologne Online Tamil Lexicon
(cpd) = Concise Pahlavi Dictionary
1 (otl) ayyA * 1. father; 2. respectable man
2 (otl) ayyA a subdivision of the par6aiya caste (TLS)
http://webapps.uni-koeln.de/tamil/
ಇದು ತಮಿಳು lexicon!
==========================================================
http://ehl.santafe.edu/cgi-bin/main.cgi?root=config
http://ehl.santafe.edu/cgi-bin/query.cgi?root=config&morpho=0&basename=/...
Database query to South Dravidian etymology
Proto-South Dravidian : *aj-an
Meaning : father
Dravidian etymology:
Tamil : ayyan_, aiyan_
Tamil meaning : father, sage, priest, teacher, brahman, superior person, master, king
Tamil derivates : ayyƒ father, respectable man; aiyar men worthy of respect, sages, brahmans, title of smƒrta brahmans, etc.; tam-aiyan_ elder brother or parallel male cousin; numaiyan_ your elder brother; ai lord, master, husband, king, guru, priest, teacher, father
Malayalam : ayyan
Malayalam meaning : father, lord
Malayalam derivates : tamayan elder brother
Kannada : ayya, aya
Kannada meaning : father, grandfather, master, lord, teacher
Kodagu : ayye¨
Kodagu meaning : father's brother or parallel male cousin, mother's sister's husband
Kodagu derivates : tammayyƒN younger brtoher (voc.)
Tulu : ayye
Tulu meaning : priest, minister, teacher, master
Tulu derivates : tammaiya an affectionate form of addressing a younger brother
Proto-Nilgiri : *aj-
==============================================================
Proto-South Dravidian : *a¾¾-
Meaning : father, grandfather
Dravidian etymology:
Tamil : accan_
Tamil meaning : father
Tamil derivates : acci Nƒyar woman (< Ma.); acciyar women ascetics; acc¡ excl. of pity or of wonder
Malayalam : accan
Malayalam meaning : father, lord
Malayalam derivates : acca mother; acci id., Nƒyar woman; acc¡ interj. of surprise or pain
Kannada : acci
Kannada meaning : mother, a Malayƒl·a woman
Kannada derivates : ajja grandfather; ajji grandmother
Kodagu : ajje¨
Kodagu meaning : grandfather
Kodagu derivates : mutt-ajje¨ great-grandfather
Tulu : ajje
Tulu meaning : grandfather
Tulu derivates : ajji grandmother
Proto-Nilgiri : *a¾
=====================================================
ಅದು etymologyಗಳ ದೊಡ್ಡ ಗುಡಾಣ!!
ಹಂಸಾನಂದಿಯವರು ದಯವಿಟ್ಟು ಗಮನಿಸಿ, ಅದರಲ್ಲಿ proto-south-dravidian form ಕೂಡ ಇದೆ.
ಈಗ ಸರಿ ಹೋಯ್ತು. ಒಂದು ತಪ್ಪು ಆಗಿತ್ತು!!
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ನಮ್ಮ ಕಡೆ ಇವಿಷ್ಟೇ ಅಲ್ಲದೆ "ಅಜ್ಜ, ತಾತ, ಅಜ್ಜಿ " ಇತ್ಯಾದಿ ಪದಗಳೂ ಬಳಕೆಯಲ್ಲಿವೆ.
ನನ್ನ ಮಾತಿನ ಅರ್ಥವಿಷ್ಟೇ- ಸಂಬೋಧನೆಯಲ್ಲಿ 'ಅಯ್ಯ' ಎಂಬುದು ಗೌರವಸೂಚಕವಾಗಿ ಬಳಕೆಯಲ್ಲಿಲ್ಲ, ಅದನ್ನು ಬಳಕೆಗೆ ತರಬೇಕಾಗಿದೆ. ನಾನು ಅನಾಮಧೇಯನಾಗಿ ಅಲ್ಲದೆ ಹೆಸರನ್ನು ಪ್ರಕಟಿಸಿಯೇ ಉತ್ತರಿಸಿದ್ದೇನೆ.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಬೊಳುಂಬು ಅಯ್ಯ
,
ನಮ್ಮ ಕಡೆ ಅಯ್ಯ ಇನ್ನೂ ಬಳಕೆಯಲ್ಲಿ ಇದೆ ಅಯ್ಯ!!
ಬಳಸದೇ ಇರುವವರು ಬಳಕೆ ತನ್ನಿ, ನಲಿವಿನ ಸಂಗತಿ!
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಶಂಕರ ಭಟ್ಟರ ಹೊತ್ತಗೆಗಳನ್ನು ಓದಿರಿ. ಆಗ ಇನ್ನೂ ಸಂಗತಿ ತಿಳಿಯಾಗುವುದು.
ಶಂಕರ ಭಟ್ಟರನಿತು ಚನ್ನಾದ ಅರುಹು ನನ್ನ ಬಳಿ ಇಲ್ಲ.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ನನ್ನ ’ ಸ್ವಾಮೀ’ ಎಂಬ ಕರೆಯುವಿಕೆ ’ಗರ್ವ’ ವನ್ನು ಸೂಚಿಸಿದ್ದರೆ ಕ್ಷಮಿಸಿ.
ನನ್ನ ಉದ್ದೇಶ ಸ್ವಲ್ಪ ’ವ್ಯಂಗ್ಯ’ ಆಗಿತ್ತೇ ವಿನಹ ’ ಗರ್ವ’ ಆಗಿರಲಿಲ್ಲ.
ಇರಲಿ, ಕನ್ನಡದಲ್ಲಿ ’ ಆಡು ’ ಎಂಬ ಪದಕ್ಕೆ ಎರಡು ಬೇರೆ ಬೇರೆ ಅರ್ಥಗಳಿವೆ ತಾನೆ?
( a goat ಹಾಗೂ to play ).
ಇವೆರಡೂ ಸರಿ ಎಂಬುದರಲ್ಲಿ ಸಂಶಯವಿಲ್ಲ ತಾನೆ?
ಹಾಗೆಯೇ, redundant ಗೂ ಹಲವು ಅರ್ಥಗಳಿವೆ. extra ಅಥವಾ surplus ಎಂಬುದು ಅವುಗಳಲ್ಲೊಂದು. ಅದಕ್ಕೆ ನೀವು ಹೆಚ್ಚುವರಿ ಅನ್ನುವುದಾದರೆ ಅದು ನನಗೆ ಸಮ್ಮತವೇ. ಅದು ಒಳ್ಳೆಯ ಪದವೇ.
ಆದರೆ ನಾನು ಹೇಳುತ್ತಿರುವುದು ಅದಕ್ಕಿರುವ 'out dated ' ಎಂಬ ಅರ್ಥವನ್ನು.
ಅದಕ್ಕೂ ಹೆಚ್ಚುವರಿಗೂ ಎತ್ತಣಿಂದೆತ್ತಣ ಸಂಬಂಧ? (ಕೊನೆಯಲ್ಲಿ ಅಯ್ಯಾ ಎಂಬ ಪದ ಬಳಸಿಲ್ಲ.. ಅದು ಗರ್ವ ತೋರಿಸುತ್ತದಂತೆ.)
ಈ ಚರ್ಚೆಯಲ್ಲಿ ಇದು ಇಣುಕಿರುವುದರಿಂದ, ಚರ್ಚೆಯ ತಿರುಳು ಇದಲ್ಲವಾದರೂ , ಇದು ಬಗೆಹರಿಯದ ಹೊರತು ಮುಂದುವರೆಯುವುದು ನನಗೆ ಕಷ್ಟ.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
"ಹಾಗೆಯೇ, redundant ಗೂ ಹಲವು ಅರ್ಥಗಳಿವೆ. extra ಅಥವಾ surplus ಎಂಬುದು ಅವುಗಳಲ್ಲೊಂದು. ಅದಕ್ಕೆ ನೀವು ಹೆಚ್ಚುವರಿ ಅನ್ನುವುದಾದರೆ ಅದು ನನಗೆ ಸಮ್ಮತವೇ. ಅದು ಒಳ್ಳೆಯ ಪದವೇ"
ಸರಿ! ನೀವು ಹೇಳಿದುದು ಸರಿ. ಇಷ್ಟೇ!
ಗರುವ ಅಂದರೆ ಜಂಭ ಅಂತ ಅಲ್ಲ ಕಿಶೋರ್. ಗರುವ ಅಂದರೆ ಗೌರವ, ಮರ್ಯಾದೆ ಅಂತ ತಿಳಿವೂ ಇದೆ.
ಗರ್ವ ಅಂದರೆ ಸಂಸ್ಕೃತದಲ್ಲೂ ಜಂಭ ಅಲ್ಲ ಅಲ್ವಾ!! ಗರ್ವ = ಹೆಮ್ಮೆ
ಗೌರವ ಇದು ಗರ್ವದಿಂದಲೇ ಬಂದಿದೆ ಅಲ್ವಾ?(ತುಸು ಐಬಿದೆ )
ತಿರುಳಿಗೆ ಮರಳೋಣ. ಅಕ್ಕರ ಪಟ್ಟಿ ಬಗ್ಗೆ ಹೇಳಿರಿ.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಚೆನ್ನಾಗಿದೆ ನಿಮ್ಮಕಥೆ.
’ಹೊರಗೆ ಹೋಗಿ ಆಟ ಆಡು’ - ಎಂಬ ಒಂದು ವಾಕ್ಯ. ಇಲ್ಲಿ ’ಆಡು ’ ಎಂದರೆ ’goat ’ ಅಂದಿದ್ದು ನೀವು.
ನಾನು ಆಡು ಅಂದರೆ goat ಎಂಬ ಅರ್ಥವೂ ಇದೆ ಎಂದು ಒಪ್ಪಿಕೊಂಡೆ.
ಅದನ್ನು ನೋಡಿ ನೀವು ’ಇದೇ ನನಗೆ ಬೇಕಾಗಿದ್ದದ್ದು’ ಅಂದರೆ ಹೇಗೆ?
ಈ ವಾಕ್ಯದಲ್ಲಿ ’ಆಡು’ ಎಂದರೆ ' to play ' ಎಂದೇ ಅರ್ಥ.
ಅದನ್ನು ನೀವು ಒಪ್ಪಿಕೊಳ್ಳುವವರೆಗೂ ನಾನು ನಿಮ್ಮನ್ನು ಬೇತಾಳನಂತೆ ಹಿಂಬಾಲಿಸುವವನೇ.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಏನಿದು "ಆಡು" ಸಂಗತಿ? ನನಗೆ ತಿಳಿಯಾಗುತ್ತಿಲ್ಲ.!
"ಹೊರಗೆ ಹೋಗಿ ಆಟ ಆಡು" ಇದು ಯಾವಾಗ ಬಂತು?
ಇರಲಿ, ನಿಮ್ಮ "ಹೆಚ್ಚುವರಿ" ಸಮಸ್ಯೆ/ಹಾವಳಿಗೆ
, ಇಲ್ಲಿದೆ ನೋಡಿ ಮರು-ಉಲಿ.
ಹೆಚ್ಚುವರಿ = extra, excess, ಬೇಕಾದಕ್ಕಿಂತ ಹೆಚ್ಚಾದ ಇದನ್ನು
redundantಗೂ ಬಳಸಬಹುದು!
redundant = ಅತಿರಿಕ್ತ(prism), ಹೆಚ್ಚಾದ, ಹೆಚ್ಚುವರಿ, ಹೆಚ್ಚಾಗಿ ಬೇಡವಾದ,
ಇದನ್ನು ಒಪ್ಪದೇ ಇರುವ ಎಲ್ಲ ಹಕ್ಕುಗಳು ನಿಮಗೆ ಇವೆ
.
ಆದರೆ ಅಸಂಗತ(ಅಬದ್ಧ) ಅಂದರೆ redundant ಅಲ್ಲ, irrelevant.! ಇಷ್ಟೇ!!
ಇನ್ನಾದರು ಕನ್ನಡ phonology ಕಡೆ ನೋಡೋಣ!
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಸರಿ .. ನಾವಿಬ್ಬರೂ ಒಬ್ಬರನ್ನೊಬ್ಬರು ಈ ವಿಷಯದಲ್ಲಿ ಒಪ್ಪದಿರುವುದನ್ನು ಒಪ್ಪಿಕೊಳ್ಳೋಣ.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಇದು ಮಹೇಶರಿಗಲ್ಲ; ಆಸಕ್ತಿ ಇರುವ ಬೇರೆ ಯಾರಿಗಾದರೂ
Redundant ಗೆ ಕೊಟ್ಟಿರುವ ಈ synonym ಗಳನ್ನು ನೋಡಿ-
outmoded, disused, unneeded, unnecessary, unwanted
ಇವು ಇಲ್ಲಿ ಸಿಗುತ್ತವೆ: http://encarta.msn.com/thesaurus_/redundant.html
ನಾನು ಹೇಳಿರುವುದು ಈ ಅರ್ಥಗಳನ್ನು.
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಇದು ಮಹೇಶರಿಗೆ:
ಗರ್ವ - ಇದು ಸಂಸ್ಕೃತದಲ್ಲೂ ಇರುವ ಶಬ್ದ.
ಇದಕ್ಕೆ M.Monier -Williams ಒರೆಗಂಟು ಕೊಡುವ ಅರ್ಥಗಳು ಇವು: Pride, Arrogance. (ಜಂಭ , ಒರಟುತನ ).
ಇದಕ್ಕೆ ಯಾವುದೇ ’ಗೌರವ’ (respect) ಕ್ಕೆ ಹತ್ತಿರವಾದ ಅರ್ಥವೂ ಇಲ್ಲ.
ಗೌರವ ಎಂಬ ಶಬ್ದ ಬಂದಿರುವುದು ’ ಗುರು ’ ಅಂದರೆ ’ಭಾರವಾದ’ ಎಂಬರ್ಥದ ಒರೆಯಿಂದ.
ದಯವಿಟ್ಟು ಓದುಗರ ದಾರಿ ತಪ್ಪಿಸಬೇಡಿ
ಉ: ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು
ಸರಿ.
ಗರುವಕ್ಕೆ ಗೌರವ ಅನ್ನುವ ತಿಳಿವಿವೆ, ಅದಕ್ಕೆ. ನನಗೆ ಈ ಒರೆಯನ್ನು ಅಂಡಯ್ಯನ ಕಬ್ಬಿಗರ ಕಾವದಲ್ಲಿ ಓದಿದಂತೆ ನೆನೆಪು.
ಸರಿ, ನನ್ನನ್ನು ಸರಿಪಡಿಸಿದಕ್ಕೆ ನನ್ನಿ!!
ದಾರಿ ತಪ್ಪಿದವರೆಲ್ಲ ಈಗ ಮರಳಿ/ವಾಪಸ್ ಬನ್ನಿ!
ಕಿಶೋರಣ್ಣ ಸರಿಯಾದ ದಾರಿ ತೋರಿಸ್ತವ್ರೆ! 
ಕನ್ನಡದ phonology ಬಗ್ಗೆ ಹೇಳಿ, ಒರೆ ಒರೆ ಹೆಕ್ಕುವುದನ್ನು ಬಳಿಕವೂ ಮಾಡಬಹುದು!