ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? ......
ಏನಿದು ಅಂಥ ಆಶ್ಚರ್‍ಯಾನಾ?
ಹೊರ ರಾಜ್ಯದವರು ನಮ್ಮ ರಾಜ್ಯಕ್ಕೆ ಬಂದು, ನಮ್ಮ ಬೆಂಗಳೂರಿನಲ್ಲಿ ನೆಲೆಸಿ ಕನ್ನಡಕ್ಕೆ ಬೆಲೆ ಕೊಡೋದಿಲ್ಲ ಕಣ್ರೀ ... ಅದಕ್ಕೆ ಬೇಜಾರು .....
ಉದಾಹರಣೆಗೆ ....
೧: ಇಲ್ಲಿನ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು, ನಮ್ಮ ಊರನ್ನು ತೆಗಳೋದು .....
೨: ಕನ್ನಡ ಚಲನಚಿತ್ರಗಳ ಬಗ್ಗೆ ಲಘುವಾಗಿ ಮಾತನಾಡೋದು .....
೩: ಇಲ್ಲೇ ಇದ್ದುಕೊಂಡು, ಇಲ್ಲಿನ ಕಾವೇರಿ ನೀರು ಕುಡಿದು .... ತಮಿಳುನಾಡಿಗೆ ಬೆಂಬಲವಾಗಿ ಮಾತಾಡೋದು .....
೪: ರಜನಿಕಾಂತ್ ಕನ್ನಡದವನಲ್ಲ ಅಂತ ಸುಮ್ನೆ ಸುಮ್ನೆ ವಾದ ಮಾಡೋದು ......
ಈಗ ಮೇಲಿನದರ ಬಗ್ಗೆ ನೀವೇ ಹೇಳಿ .....
೧: ನಮ್ಮ ಬೆಂಗಳೂರನ್ನು ತೆಗಳೋದೇ ಆದರೆ, ಅವರವರ ರಾಜ್ಯಕ್ಕೆ ಹೋಗಿ ... ಅಲ್ಲೇ ಕೆಲಸ ಹುಡುಕಿಕೊಳ್ಳಲಿ ......
೨: ಕನ್ನಡ ಚಲನಚಿತ್ರದ ಬಗ್ಗೆ ಕೀಳಾಗಿ ಮಾತನಾಡುವವರು, ತಮ್ಮ ಭಾಷೆಯ ಚಲನಚಿತ್ರಗಳ ಬಗ್ಗೆ ಒಮ್ಮೆ ಯೋಚಿಸಿ ಮಾತನಾಡಬೇಕು (ತಮಿಳಿನಲ್ಲಾಗಲಿ, ತೆಲುಗಿನಲ್ಲಾಗಲಿ, ಹಿಂದಿಯಲ್ಲಾಗಲಿ ಕನ್ನಡದ ಹಾಗೆ ಮುಂಗಾರು ಮಳೆ, ದುನಿಯ, ಶಾಂತಿನಿವಾಸ, ಸತ್ಯವಾನ್ ಸಾವಿತ್ರಿ ತರಹ ಇಷ್ಟೊಂದು ಸೂಪರ್ ಹಿಟ್ ಚಿತ್ರಗಳು ಬಂದಿಲ್ಲ ಕಣ್ರೀ .....
೩: ಕಾವೆರಿ ವಿಶಯದಲ್ಲಿ ತಮಿಳುನಾಡಿಗೆ ಬೆಂಬಲ ಕೊಡೋದಾದ್ರೆ, ಇಲ್ಲಿ ನೆಲಸಬೇದಿ, ಕಾವೇರಿ ನೀರು ಕುಡೀ ಬೇಡಿ ..... ತಮಿಳುನಾಡಿಗೆ ತೊಲಗಿ ....
೪: ಎಷ್ಟೋ ಜನ ಹೊರ ರಾಜ್ಯದವರು ಕರ್ನಾಟಕದಲ್ಲಿ ಕೆಲಸಕ್ಕೆ ಸೇರಿಕೊಂಡು, ಇಲ್ಲೇ ಸೆಟ್ಲ್ ಆಗಿದ್ದಾರೆ ... ಇವರ್‍ಯಾರು ತಮ್ಮನ್ನು ಕನ್ನಡಿಗರೆಂದು ಹೇಳಿಕೊಳ್ಳೋಲ್ಲ .... ಹೀಗಿದ್ದ ಮೇಲೆ ಕರುನಾಡಲ್ಲಿ ಹುಟ್ಟಿ, ಬೆಳೆದು ೩೦ ವರ್ಷಗಳ ನಂತರ ತಮಿಳಿಗೆ ಹೋದ ರಜನಿಕಾಂತ್ ತಮಿಳಿಗನಾಗಲು ಹೇಗೆ ಸಾಧ್ಯ? ... ನೀವೆ ಹೇಳಿ ....
ಅದಕ್ಕೆ ಹೇಳಿದ್ದು ..... ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? ಅಂಥ ....
ಜೈ ಕರ್ನಾಟಕ ...... ಸಿರಿಗನ್ನಡಮ್ ಗೆಲ್ಗೆ .....
ನಿಮ್ಮ ಪ್ರೀತಿಯ ...
- ಮಲ್ಲೇನಹಳ್ಳಿ ಚನ್ನಕೇಶವ ಗಿರೀಶ (ಮಚಗಿ)

- Login or register to post comments
- 816 hits
- Email this forum





RSS:
ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
ಬಿಡ್ರಿ ರೀ.. ರಜನಿಕಾಂತ್ ಕನ್ನಡಿಗ ಆದ್ರೆ ಎಸ್ಟು, ತಮಿಳಿಗ ಆದ್ರೆ ಎಸ್ಟು.. ಅವ್ನಿಂದೇನ್ ಬಳಕೆ ಕನ್ನಡಕ್ಕೆ?? ರೀ ಒಂದ್ ಮಾತ್ ಹೇಳ್ತಿನಿ ಕೇಳಿ, ದೂರದ ಪಂಜಾಬಿಂದ ಬಂದಿಂದ್ರೂ ಕನ್ನಡದ ಯಾವುದೇ ಹಾಡು, ಬರಹ, ಹೊತ್ತಗೆ ಬಿಡುಗಡೆ ಸಮಾರಂಬಗಳಲ್ಲಿ ಕಾಣಿಸ್ಕೊತಾರಲ್ಲಾ, ಆ ಪಂಜಾಬಿ ತಾತ (ಅವರ ಹೆಸರು ಗೊತ್ತಾಗ್ತಿಲ್ಲಾ..) ಅವ್ರು ಕನ್ರಿ ಕನ್ನಡಿಗಾ .. ಹರುಕು ಮುರುಕು ಕನ್ನಡ ಮಾತಾಡ್ಕೊಂಡಿದ್ರು, ಕನ್ನಡಿಗರ ಬಗ್ಗೆ ಗೌರವ, ಕನ್ನಡಿಗನಾಗಿ ಇಲ್ಲಿ ಹೊಂದಿಕೊಳ್ಳಲು ಹೆಣಗ್ತಿರ್ತಾರಲ್ಲಾ, ಅವ್ರು ಕಣ್ರಿ ಕನ್ನಡಿಗರು .. ಕನ್ನಡಿಗರಿಗೂ, ತಮಿಳರಿಗೂ ಜಗಳ ಆದ್ರೆ ನಿಮ್ ರಜನಿಕಾಂತ್ ಬರ್ತಾನಾ? .. ಹೇಳಿ .. ಬರಲ್ಲಾ ..':) .. ಯಾಕಂದ್ರೆ, ಬಂದ್ರೆ ತಮಿಳರು ಸುಮ್ನಿರ್ತಾರಾ? ರಜನಿಕಾಂತ್ ಅಂತೆ, ಕನ್ನಡಿಗ ಅಂತೆ....
ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
ಇನ್ನೊಂದು ವಿಷಯ.. ರಜನಿಕಾಂತ ಮೂಲತಃ ಮಹಾರಾಷ್ಟ್ರದವನಂತೆ... ನನಗ್ಯಾರೋ ಹೇಳಿದ್ದು ನೆನಪು...
ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
ಅವರ ಹೆಸರು ಚಿರಂಜೀವಿ ಸಿಂಗ್
ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
ಅವರ ಹೆಸರು ಚಿರಂಜೀವಿ ಸಿಂಗ್
ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
ಹೌದು ಅವರು ತು೦ಬಾ ಕ್ರಿಯಾಶೀಲ ವ್ಯಕ್ತಿ ! ಮತ್ತೊಬ್ಬರು ಅಜಯ್ ಕುಮಾರ್ ಸಿ೦ಗ್ IPS ಅವರು ಅಷ್ಟೆ ಕನ್ನಡ ಕಾವ್ಯ ದಲ್ಲಿ ತು೦ಬಾ ಆಸಕ್ತಿ ಯುಳ್ಳವರು.
ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
ನಿಜ ಕಣ್ರೀ ...... ರಜನಿಕಾಂತ್ ಕನ್ನಡದ ಬಗ್ಗೆ ಬಹಿರಂಗವಾಗಿ ಅಭಿಮಾನ ತೋರಿಸಿದ್ರೆ ತಮಿಳಿಗರು ಅವರ ಬಗ್ಗೆ ಅಭಿಮಾನ ಕಳ್ಕೋತಾರೆ ..... ರಜನಿ ಒಬ್ಬ ಬುದ್ದಿವಂತ ಕನ್ನಡಿಗ ..... ನಮ್ಮ ಊರಿನಲ್ಲಿ ಹುಟ್ಟಿ, ಬೆಳೆದು ಅಲ್ಲಿ ಭರ್ಜರಿಯಾಗಿ ಮೆರೀತಿದ್ದಾರೆ .... ಅದು ಕಣ್ರೀ ಜಾಣ್ಮೆ .... ಅವರು ಕನ್ನಡ ಚಲನಚಿತ್ರಗಳನ್ನು ನೋಡ್ತಾನೆ ಇರ್ತಾರೆ ... ಬೆಂಗಳೂರಲ್ಲಿ ಶೂಟಿಂಗ್ ಮಾಡ್ತಾನೆ ಇರ್ತಾರೆ .... ಆಗಾಗ ಕರುನಾಡಿಗೆ ಬರ್ತಾನೆ ಇರ್ತಾರೆ ... ಅದೇ ಕನ್ನಡ ಅಭಿಮಾನ .....
ನಿರ್ದೇಶಕ ಪ್ರೇಮ್ ರವರ ರಜನಿಕಾಂತ್ ಅಭಿನಯಿಸಲಿರುವ ಕನ್ನಡ ಚಲನಚಿತ್ರ ನೋಡೋ ಆಸೆ .....
ಚಿರಂಜೀವಿ ಸಿಂಗ್ ಬಗ್ಗೆ ಕೇಳಿ ಖುಷಿಯಾಯ್ತು ಕಣ್ರೀ ....
ನಿಮ್ಮ ಪ್ರೀತಿಯ ಕನ್ನಡಿಗ
-ಗಿರೀಶ ಮಲ್ಲೇನಹಳ್ಳಿ ಚನ್ನಕೇಶವ (ಮಚಗಿ)
ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
ಬೆಂಗಳೂರಾಗೆ ನಡೆಯೋಸ್ಟು ಕನ್ನಡ ಚಟುವಟಿಕೆ ಯಾವ ಊರಲ್ಲೂ ನಡೆಯಲ್ಲ. ಆದರೆ ಕನ್ನಡ ಮಾತಾಡೋರು ಕಮ್ಮಿ.
ಬೆಂಗಳೂರಾಗೆ ಎಸ್ಟು ಕನ್ನಡ ಆಟಗಳು, ಹಾಡು-ಕುಣಿತಗಳು ನಡೇತಾನೇ ಇರ್ತಾವೆ.
ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
ನಿಮ್ಮ ಆಶಯವನ್ನು ನಾನು ಬೆಂಬಲಿಸುತ್ತೇನೆ. ಆದರೆ ನನ್ನದೊಂದು ವಿನಂತಿಯಿದೆ. ನಾವು ಹೇಗೆ ಕರ್ನಾಟಕದ ಹಿನ್ನೆಲೆಯಿರುವ ರಜನೀಕಾಂತ್ ತಮಿಳುನಾಡಿನ ಜನರ ಅಭಿಮಾನದಿಂದಾಗಿ ಸೂಪರ್ ಸ್ಟಾರ್ ಆಗಿ, ತಮಿಳುನಾಡಿನ ಜನರ ಅನ್ನದ ಋಣದ ಮೇಲೆ ಬೆಳೆದುನಿಂತರೂ ಕರ್ನಾಟಕದ ಬಗ್ಗೆ ಒಲುಮೆ ಇಟ್ಟುಕೊಳ್ಳಬೇಕು. ಕನ್ನಡವನ್ನು ತಮಿಳಿಗಿಂತ ಹೆಚ್ಚಾಗಿ ಪ್ರೀತಿಸಬೇಕು, ಕನ್ನಡಿಗರು ಹಾಗೂ ತಮಿಳರ ನಡುವೆ ವಿರಸವಾದಾಗ ಕನ್ನಡಿಗರಿಗೆ ಬೆಂಬಲವಾಗಿ ನಿಲ್ಲಬೇಕು ಅಂತ ಭಾವಿಸುತ್ತೇವೆಯೋ ಹಾಗೆಯೇ ತಮಿಳರು ಭಾವಿಸುವುದರಲ್ಲಿ ತಪ್ಪೇನಿದೆ?
ಕರ್ನಾಟಕದಿಂದ ಹೊರರಾಜ್ಯಕ್ಕೆ ಹೋದ ಒಬ್ಬ ವ್ಯಕ್ತಿ ಅಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲವಂತೆ, ಕನ್ನಡದ ಸಿನೆಮಾಗಳನ್ನೇ ನೋಡುತ್ತಾನಂತೆ, ಕನ್ನಡದ ಪಕ್ಷವಹಿಸುತ್ತಾನಂತೆ ಅಂದರೆ ಅದು ನಮಗೆ ಭಾಷಾಭಿಮಾನದ ಆದರ್ಶ ವ್ಯಕ್ತಿತ್ವದ ಉದಾಹರಣೆಯಾಗಿ ಕಾಣುತ್ತದೆ. ಅದೇ ಕೆಲಸವನ್ನು ಒಬ್ಬ ತಮಿಳು ಭಾಷೆಯವ, ತೆಲುಗ ಮಾಡಿದರೆ ಅದು ರಾಜ್ಯದ್ರೋಹವಾಗುತ್ತದೆ, ಸ್ವಾರ್ಥವಾಗಿ, ಭಾಷಾಂಧತೆಯಾಗು ಕಾಣುತ್ತದೆ. ಇದು ಏಕೆ ಹೀಗೆ?
ಅವರೆಲ್ಲರೂ ಅನ್ನ ಹುಡುಕಿಕೊಂಡು ನಮ್ಮ ನಾಡಿಗೆ ಬಂದವರು, ಯಾರೂ ಭಾಷಾಂಧತೆಯನ್ನು ಬೆಳೆಸಲು ಬಂದವರಲ್ಲ. ಅವರಿಗೆ ತಮ್ಮ ನಾಡುನುಡಿಯ ಬಗೆಗಿನ ಕಾಳಜಿ ಕಳಕಳಿಯನ್ನು ನಾವು ಮೆಚ್ಚಿಕೊಳ್ಳಬೇಕು. ಹಾಗೆಯೇ ನಮ್ಮ ನಾಡಿನಲ್ಲಿನ ಒಳ್ಳೆಯ ಅಂಶಗಳನ್ನು ಮೆಚ್ಚುವಂತೆ ಅವರನ್ನು ನಾವು ಪ್ರೋತ್ಸಾಹಿಸಬೇಕು. ಅವರ ಮನಸ್ಸನ್ನು ಗೆಲ್ಲುವಂತೆ ಕನ್ನಡಿಗರು ವರ್ತಿಸಬೇಕು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
ಸುಪ್ರಿ,
".... ಯಾರೂ ಭಾಷಾಂಧತೆಯನ್ನು ಬೆಳೆಸಲು ಬಂದವರಲ್ಲ..."
ಇದು ಸರಿಯಲ್ಲ. ನಮ್ಮ ನೆಲದಲ್ಲಿ ನಮಗಾಗುತ್ತಿರುವ ನೋವುಗಳಿಗೆ ಇಲ್ಲೊಮ್ಮೆ ಎಡತಾಗಿ. ನಿಮಗೆ ಗೊತ್ತಾಗುತ್ತದೆ.
http://enguru.blogspot.com/
".....ಕನ್ನಡದ ಪಕ್ಷವಹಿಸುತ್ತಾನಂತೆ ಅಂದರೆ ಅದು ನಮಗೆ ಭಾಷಾಭಿಮಾನದ ಆದರ್ಶ ವ್ಯಕ್ತಿತ್ವದ ಉದಾಹರಣೆಯಾಗಿ ಕಾಣುತ್ತದೆ. ಅದೇ ಕೆಲಸವನ್ನು ಒಬ್ಬ ತಮಿಳು ಭಾಷೆಯವ, ತೆಲುಗ ಮಾಡಿದರೆ ಅದು ರಾಜ್ಯದ್ರೋಹವಾಗುತ್ತದೆ, ಸ್ವಾರ್ಥವಾಗಿ, ಭಾಷಾಂಧತೆಯಾಗು ಕಾಣುತ್ತದೆ. ಇದು ಏಕೆ ಹೀಗೆ...."
ಯಾಕಂದ್ರೆ ಇದು ಕನ್ನಡ ನಾಡು. ಕನ್ನಡಕ್ಕೆ ಮುಡಿಪಾಗಿರುವ ನೆಲ.. ನಾವೇನು ಆಂದ್ರದಲೋ, ಮದ್ರಾಸಲ್ಲೊ ಹೋಗಿ ಮಾತಾಡ್ತ ಇಲ್ವಲ್ಲ
ನಮ್ಮ ನೆಲದಲ್ಲಿ ನಮ್ಮ ನುಡಿಗೆ ಮನ್ನಣೆ/ಮೇಲ್ಮೆ ಸಿಗಬೇಕನ್ನವುದರಲ್ಲಿ ತಪ್ಪೇನು?
ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
ರ್ರೀ... ರಜನಿಕಾಂತ ಮಧ್ಯ ವಹಿಸಿದ್ರೆ ಕಾವೇರಿ ಗಲಾಟೆ ಯಾವತ್ತು ಸರಿ ಹೊಗಲ್ಲ ಕಂಡ್ರೀ!!ಇನ್ನು ಗಲಾಟೇ
ಹೆಚ್ಚಾಗತ್ತೆ. ಬರೆದು ಇಟ್ಕೋಳ್ಳಿ. ನಾನು ಮಂಡ್ಯದವನು. ಅಲ್ಲಿನ ನಿಜವಾದ ಸಮಸ್ಯೇ ಏನು ಅಂತ ನನ್ಗ್ಗೋತ್ತು ಯಾರೋ ಬಂದ ಹೇಳಿದ್ರು ಅಂತ ಕಾವೇರೀ ನೀರ ಬಿಡ್ತಾರಾ?? ನಾನು ಇಷ್ಟು ದೇಶ ಸುತ್ತಿದ್ದಿನಿ. ಬಹಳ ಜನ ಕನ್ನಡಿಗರನ್ನ ಭೇಟಿ ಮಾಡಿದ್ದಿನಿ, ನಾನು ಕನ್ನಡಿಗ ಅಂತ ಹೆಮ್ಮೆಯಿಂದ ಹೇಳ್ಕೋಳ್ಳೋರ ತುಂಬಾ ಕಮ್ಮಿ. ಅದೇ ಪ್ರತಿ ತಮಿಳ ತಾನು ತಮಿಳಿಗ ಅಂತ ಹೆಮ್ಮೆಯಿಂದ ಹೇಳ್ಕೋಳ್ತಾತೆ. ಅಷ್ಟೆ ವ್ಯತ್ಯಾಸ!!! ನಮ್ಮ ಸ್ವಾಭಿಮಾನ ಸ್ವಲ್ಪ ಹೆಚ್ಚಾಗ್ಬೇಕು.......