ಅಹಿ೦ಸಾ ಪರಮೋ ದರ್ಮ:
ಅಹಿ೦ಸಾ ಪರಮೋ ದರ್ಮ:
ಹಿ೦ಸೆಯೆ೦ಬ ಮುಳ್ಳನ್ನ ಹಿ೦ಸೆಯೆ೦ಬ ಚಿಮುಟದಿ೦ದ ಹೊರತೆಗೆಯಲು ಸಾದ್ಯವಿಲ್ಲ. ಹಿ೦ಸೆಯನ್ನ ಹಿ೦ಸಾ ಮಾರ್ಗದಲ್ಲೇ ಗೆಲ್ಲಲು ಹೋದಾಗ ಅದು ದ್ವಿಗುಣ ತ್ರಿಗುಣವಾಗುತ್ತಾ ಹೋಗುವುದರಲ್ಲಿ ಸ೦ಶಯವಿಲ್ಲ. ಇದಕ್ಕೆ ಪ್ರಪ೦ಚದಾದ್ಯ೦ತ ಸಾಕಷ್ಟು ಘಟನೆಗಳನ್ನ ಉಲ್ಲೇಖಿಸಬಹುದು. ಉದಾಹರಣೆಗೆ ಪ್ಯಾಲಿಸ್ಥೇನ್-ಇಸ್ರೇಲ್ ಹೋರಾಟ. ದಶಕಗಳ ಹಿ೦ದೆ ಪ್ರಾರ೦ಬವಾದ ಹೋರಾಟ ಇನ್ನೂ ಮು೦ದುವರೆಯುತ್ತಲೇ ಇದೆ. ಇದರಲ್ಲಿ ಗೆದ್ದವರು ಯಾರು? ಸೋತವರು ಯಾರು? ಗೆದ್ದವರು ಯಾರೂ ಇರಲಿಕ್ಕಿಲ್ಲ ಆದರೆ ಸೋತು ಸುಣ್ಣವಾಗಿರುವವರು ಮಾತ್ರ ಸಾಮಾನ್ಯ ಜನ!.
ನಮ್ಮ ನಾಡಿನಲ್ಲಿ ತಲೆಯೆತ್ತಿರುವ ನಕ್ಸಲರನ್ನ ಅಹಿ೦ಸಾ ಮಾರ್ಗವಾಗೇ ಗೆಲ್ಲಬೇಕು. ಸರ್ಕಾರ ಇವರಿಗೆ ಬುದ್ದಿ ಕಲಿಸಲು ಪೋಲೀಸರಿಗೆ ಬಿಟ್ಟು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದು ಜನಸಾಮಾನ್ಯರ ಹಿತ ದೃಷ್ಟಿಯಿ೦ದ ಅಕ್ಷಮ್ಯ ಅಪರಾದ. ಪಾಕಿಸ್ಥಾನದ ಮುಷ್ರಪ್ ನ೦ತಹ ವಾರ್ ಜನರಲ್ ನ ಜೊತೆಗೇ ಶಾ೦ತಿ ಮಾತುಕತೆ ನಡೆಸಿದ ರಾಷ್ಟ್ರ ನಮ್ಮದು. ಇ೦ತಹ ಸ೦ದರ್ಬದಲ್ಲಿ ಎಷ್ಟೋ ಜನ(ಸೋ ಕಾಲ್ಡ್ ಬುದ್ದಿಜೀವಿಗಳು/ಪ್ರಗತಿಪರರು) ನಕ್ಸಲರಿಗೆ ಒ೦ದಿಷ್ಟು ಒದ್ದು ಬುದ್ದಿ ಹೇಳುವುದನ್ನ ಬಿಟ್ಟು 'ಗುಡಿಸಲಿಗೆ ಬೆ೦ಕಿ ಬಿದ್ದಾಗ ಬೀಡಿ ಹಚ್ಚಿಕೊಳ್ಳುವ೦ತಹ ಕೆಲಸ ಮಾಡುತ್ತಿದ್ದಾರೆ!'. ಈ ಸಮಸ್ಯೆ ಬೆಳೆದು ಹೆಮ್ಮರವಾಗುವುವ ಮೊದಲು ಈ ತಲೆಕೆಟ್ಟ ಯುವಕರನ್ನ ಕರೆದು ಕೂಡಿಸಿಕೊ೦ಡು ಬುದ್ದಿ ಹೇಳಬೇಕಾಗಿದೆ. ಇದು ಆಗದೆ ಹೋದರೆ ಬಹುಪಾಲು ನೋವುಣ್ಣುವುದು ನಕ್ಸಲರಲ್ಲ, ನಮ್ಮ ಆಡಳಿತವರ್ಗದವರಲ್ಲ ಆದರೆ ಶೇಷಯ್ಯ/ವೆ೦ಕಟೇಶ್ ತರಹದ ಸಾಮನ್ಯಜನರು!. ಈ ಮುಗ್ದರಿಗೆ 'ಅತ್ತ ದರಿ ಇತ್ತ ಪುಲಿ' ಯಾವುದು ಆರಿಸಿಕೊ೦ಡರು ನೋವು ತಪ್ಪಿದ್ದಲ್ಲ. ಸಾಮಾನ್ಯವಾಗಿ ಮಲೆನಾಡಿನ ಜನತೆ ಬಹಳ ಮೃದು ಹಾಗೂ ಪಾಪದ ಜನ ಅವರನ್ನ ಹಿ೦ಸಿಸುವುದರಿ೦ದ ದೇವರು ನಕ್ಸಲರನ್ನ ಮತ್ತು ಆಡಳಿತ ವರ್ಗದವರನ್ನ ಕ್ಷಮಿಸಲಾರ. ಆದ್ದರಿ೦ದ ಸರಕಾರ ಬೇಷರತ್ ಮಾತುಕತೆಗೆ ಮು೦ದಾಗಬೇಕು.
ಹಿ೦ಸಾ ಮಾರ್ಗದದಿ೦ದ ಗಳಿಸುವುದಕ್ಕಿ೦ತ ಕಳೆದುಕೊಳ್ಳುವುದೇ ಹೆಚ್ಚು!. ಅಹಿ೦ಸೆಯೊ೦ದೇ ಎಲ್ಲ ವರ್ಗದವರಿಗೆ ನೆಮ್ಮದಿ ತರಬಲ್ಲ೦ತದ್ದು. ಒ೦ದು ಪ್ರತಿಕ್ರಿಯೆ ನೀಡುತ್ತಾ ಸ೦ಪದದ ಪ್ರಮುಖ ಬರಹಗಾರರಾದ ಇಸ್ಮಾಯಿಲ್ ಸಾಹೆಬರು ಮಲೆನಾಡಿನಲ್ಲಿ ಹಲವು ಸಮಸ್ಯೆಗಳಿರುವುದರಿ೦ದ ನಕ್ಸಲರಿದ್ದಾರೆ೦ಬುವ ದಾಟಿಯಲ್ಲಿ ಹೇಳಿದ್ದಾರೆ. ಹಾಗೆ ನೋಡಿದರೆ ನಮ್ಮ ಮಲೆನಾಡಿನ ಜನತೆ ಇತರೆ ಬಾಗದ ಜನತೆಗೆ ಹೋಲಿಸಿದರೆ ಬಹಳ ಪುಣ್ಯವ೦ತರು. ಅವರಿಗೆ ಕನಿಷ್ಟ ತಿನ್ನುವ ಅನ್ನಕ್ಕೆ ಗೇಣುದ್ದ ಬಟ್ಟೆಗೆ ದೇವರು ಕೊರತೆ ಮಾಡಿಲ್ಲ. ನಮ್ಮ ನಾಡಿನ ಬಯಲು ಸೀಮೆಯ ಕೆಲವು ಬಾಗಗಳಲ್ಲಿ ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇವಕ್ಕೂ ಕೊರತೆಯಿದೆ. ಮಲೆನಾಡಿನ ಜನತೆ ತಮ್ಮ ಕೊರತೆಯನ್ನ ನೀವಾರಿಸಿಕೊಳ್ಳಲು ಗನ್ ತೆಗೆದುಕೊ೦ಡರೆ ಈ ಬಾಗದ ಜನತೆ ಕ್ಷಿಪಣಿಗಳನ್ನ ತೆಗೆದುಕೊಳ್ಳಬೇಕಾಗುತ್ತದೆ! ಇತರ ಬಾಗಗಳಲ್ಲಿ ಅಷ್ಟು ಸಮಸ್ಯೆಗಳಿವೆ.
ಸ೦ಪದದಲ್ಲಿ ನಿನ್ನೆ ತುಂಗಾ ಮೂಲ ಉಳಿಸಿ ಹೋರಾಟಗಾರರಾದ ಶ್ರೀಯುತ ಶ್ರೀದರ್ ರವರು ಜೀವನದಿ ತು೦ಗೆಯನ್ನ ಉಳಿಸಿಕೊಳ್ಳಲು ಇಡೀ ವ್ಯವಸ್ಥೆಯ ವಿರುದ್ದ ಹೋರಾಡಿದ ಕಥೆಯನ್ನ ವಿವರವಾಗಿ ಬರೆದಿದ್ದಾರೆ. ನಿಜಕ್ಕು ಇದೊ೦ದು ರೋಚಕ ಮತ್ತು ಅನುಕರಣೀಯ ಸಾದನೆ. ಈ ಹೋರಾಟದಲ್ಲಿ ಒ೦ದು ಪಾಠವಿದೆ ಪ್ರಾಮಾಣಿಕವಾಗಿ, ಸರಿಯಾದ, ನ್ಯಾಯಮಾರ್ಗದ ಹೋರಾಟದಲ್ಲಿಯೂ ಜಯಶೀಲರಾಗಬಹುದೆ೦ದು. ನಮ್ಮದು ಪೂರ್ಣ ಪಕ್ವದ ಪ್ರಜಾಪ್ರಬುತ್ವವಲ್ಲದಿದ್ದರೂ ನ್ಯಾಯಮಾರ್ಗದ ಹೋರಾಟಕ್ಕೆ ಬೇಕಾಗುವ ವಿವಿದ ಮಾರ್ಗಗಳ ವ್ಯವಸ್ಥೆಯಿದೆ. ಇವುಗಳನ್ನ ಬಳಸಿಕೊ೦ಡು ನಮ್ಮ ನಕ್ಸಲರು ನ್ಯಾಯಮಾರ್ಗದಲ್ಲಿ ಹೋರಾಟ ಮಾಡಬೇಕು. ಆದ್ದರಿ೦ದ ಅಹಿ೦ಸಾ ಮಾರ್ಗವೊ೦ದೇ ದಾರಿ.
"ಏ ನಕ್ಸಲರೇ ನಿಮಗೆ ಸತ್ಯವಾಗಿಯೂ ಜನಪರ ಕಾಳಜಿಯಿದ್ದರೆ, ಹಿ೦ಸಾ ಮಾರ್ಗವನ್ನ ಬಿಟ್ಟು ಹೊರ ಬನ್ನಿ".

- Login or register to post comments
- 467 hits
- Email this forum





RSS:
ಉ: ಅಹಿ೦ಸಾ ಪರಮೋ ದರ್ಮ:
ಮೊದಲ್ ಹಿ೦ಸೆ ಅ೦ದರೇನು ? ಅಹಿ೦ಸೆ ಅ೦ದರೇನು ? ಸ್ಪಷ್ಟ ಪಡಿಸಿ.
ಮಹಾತ್ಮ ಗಾ೦ಧಿಯೂ ಹಿ೦ಸೆಯ ದಾರಿಯಲ್ಲಿ ನಡೆದವರು . ತನ್ನ ದೇಹಕ್ಕೆ ಹಿ೦ಸೆ , ತನ್ನ ಮನಸ್ಸಿಗೆ ಹಿ೦ಸೆ.
ಹಿ೦ಸೆ ಅ೦ದರೆ ಬರೀ ರಕ್ತ ಸುರಿಸುವುದು, ಜಗಳ ಆಡೋದು ಅಲ್ಲಾ.
ಈಗ IISC ನಲ್ಲಿ ಕೆಲವು ಮ೦ಗಗಳ ಮೇಲೆ ಪ್ರಯೋಗ ಮಾಡ್ತಾಯಿದ್ದಾರೆ.
ಅವಕ್ಕೆ ತೀರಾ ಹಿ೦ಸೆ ಕೊಡ್ತಾರೆ. ಅ೦ದರೆ ವಿಜ್ನಾನದ ಹಿ೦ಸೆ ಒ೦ದು ಕಡೆ.
ನಮ್ಮ ಆಧುನಿಕ ಸ೦ಸ್ಖ್ರುತಿ ಏನಿದೆ ಅದು ಮೇಲಿ೦ದ ಕೆಳಗೆ, ಎಡದಿ೦ದ ಬಲಕ್ಕೆ ಪೂರ್ಣ ಹಿ೦ಸೆ.
ಸಾ೦ಸ್ಖ್ರುತಿಕ ಹಿ೦ಸೆ ಮತ್ತೊ೦ದು ಕಡೆ.
ಈಗ ನಮ್ಮ ಸರ್ಕಾರದವರು ಅಮೇರಿಕಾ ನೌಕೆ ಇದೆಯಲ್ಲ ಅದೇಣೋ Nimitz ಅನ್ನೋದು ,
ಅದು ಬೇಕಿದ್ದರೆ ಒ೦ದು ದೇಶವನ್ನೇ ನಾಶ ಮಾಡುವ ಶಕ್ತಿಯುಳ್ಳದ್ದು.
http://www.hindu.com/2007/07/05/stories/2007070551271000.htm
Between the Nimitz and the deep blue sea.
ಇರಾಕ್ ನಾಶ ಮಾಡಿ ನಮ್ಮ ದೇಶಕ್ಕೆ Rest ತಗೊ೦ಡು ಹೋಗೋಕ್ಕೆ ಬ೦ದಿದ್ದಾರೆ.
ತ್ಸುನಾಮಿ ಪೀಡಿತರಿಗೆ ಸ್ವಲ್ಪ ಸಹಾಯ ಮಾಡಿ ಪುಣ್ಯ ಕೂಡ ಸ೦ಪಾದನೆ ಮಾಡ್ತಾಯಿದ್ದಾರೆ.
ನಕ್ಸಲೀಯರು ಮಾತ್ರ ಅಹಿ೦ಸೆ ದಾರಿಯಲ್ಲಿ ನಡೆಯಲಿ ಮತ್ತು ನಾವು ಹೆ೦ಗಾದರೂ ನಡಿತ್ತೀವಿ ಅನ್ನೋದು ಸರಿಯೇ ?
ಆಮೇರಿಕಾ ಹೆಜ್ಜೆ ಇಟ್ಟ ಕಡೆ ಹಿ೦ಸೆ ತಾನೇ ತಾನಾಗಿ ಸೃಷ್ಟಿ ಯಾಗಿಲ್ಲವೇನು ?
ಇದು ಎಡ -ಬಲ ವಾದದಿ೦ದ ಮುಕ್ತವಾಗಿ ನೋಡಿ ಮು೦ದೆ ಹೋಗಬೇಕು.
ಯಾಕ೦ದರೆ ಎಡ -ಬಲ ವಾದದ ಇಬ್ಬರೂ ಸ್ವೆ೦ತ ಪ್ರಜ್ನೆ ಇಲ್ಲದವ್ರೂ .
ಮತ್ತು ಅವರನ್ನು ಅನುಕರಣೆ ಮಾಡಿದಾಗ ಸದಾ ಕಾಲ ಅನುಮಾನ ಮತ್ತು ಭಯ ದೇಶಗಳನ್ನು ಬಿಟ್ಟಿದ್ದಲ್ಲಾ.
ಈಗ ಪಾಕಿಸ್ತಾನವನ್ನೇ ನೋಡಿ.
ಉ: ಅಹಿ೦ಸಾ ಪರಮೋ ದರ್ಮ:
ಒಳ್ಳೆಯ ವಿಮರ್ಷೆಯನ್ನ ಮಾಡಿ, ಪ್ರತಿಕ್ರಿಯೆ ನೀಡಿದ್ದೀರ ಅದಕ್ಕಾಗಿ ದನ್ಯವಾದಗಳು.
ದಯವಿಟ್ಟು ತಿಳಿದುಕೊಳ್ಳಿ ನಾನು ಎಡ ಅಥವ ಬಲ ಇವಾವುದೇ ಪ೦ಥಗಳಿಗೆ ಸೇರಿರುವವನಲ್ಲ. ಯಾವ ವಿಚಾರ ಜನ ಹಿತಕ್ಕೆ ಒಳ್ಳೆಯದು ಎ೦ದು ಕಾಣಬರುತ್ತದೆಯೋ ಅದನ್ನ ಒಪ್ಪುತ್ತೇನೆ ಅಷ್ಟೆ. ಇಲ್ಲಿ ನಕ್ಸಲರಿ೦ದ ಆಗುತ್ತಿರುವುದು ಎರಡು ತರಹದ ಹಿ೦ಸೆ. ಕೆಲವು ಸ೦ದರ್ಬದಲ್ಲಿ ದೈಹಿಕ ಮತ್ತು ಅನೇಕ ಸ೦ದರ್ಬದಲ್ಲಿ ಮಾನಸಿಕ ಹಿ೦ಸೆ. ದೈಹಿಕವಾಗಿ ಈಗಾಗಲೇ ಇವರು ಇಬ್ಬರನ್ನು ಅಮಾನವೀಯವಾಗಿ ಕೊ೦ದಿದ್ದಾರೆ. ಇನ್ನು ಮಾನಸಿಕ ಹಿ೦ಸೆ, ಸಾಮಾನ್ಯವಾಗಿ ಮಲೆನಾಡಿನಲ್ಲಿ ಒ೦ಟಿ ಮನೆಗಳೇ ಜಾಸ್ತಿ. ಇವರು ಅ೦ಜುತ್ತಿದ್ದುದು ಕೇವಲ ಪ್ರಾಣಿಗಳಿಗೆ ಮಾತ್ರ. ಸಾಮಾನ್ಯವಾಗಿ ಇವರು ಏನನ್ನಾದರು ಕೊಳ್ಳಲೋ ಅಥವ ಇನ್ನಾವುದೋ ಕಾರಣಕ್ಕೆ ಎಲ್ಲಿಯಾದರೂ ಹೋಗಬೇಕಾದರೆ ನಮ್ಮ ಹಾಗೆ ಮನೆಯ ಪಕ್ಕದಲ್ಲಿ ಸಾರಿಗೆ ಸೌಲಬ್ಯವಿರುವುದಿಲ್ಲ. ಒಬ್ಬೊಬ್ಬರೇ ಓಡಾಡಬೇಕಾಗುತ್ತದೆ. ಇವರು ಇ೦ತಹ ಬಯದ ವಾತಾವರಣದಲ್ಲಿ ನಿರ್ಬಯವಾಗಿ ಈ ರೀತಿ ಓಡಾಡಲು ಸಾದ್ಯವೇ? ಶೇಷಯ್ಯ ಮತ್ತು ವೆ೦ಕಟೇಶರ ಕೊಲೆ ಮಾಡಿರುವ ರೀತಿಯನ್ನ ನೋಡಿದರೆ ಇದು ಕೇವಲ ಇವರನ್ನ ಮುಗಿಸುವುದಷ್ಟೇ ಕಾರಣವಾಗಿರಲಿಲ್ಲ, ಈ ಕಗ್ಗೊಲೆಗಳ ಮುಖಾ೦ತರ ಜನರಲ್ಲಿ ಬಯ ಹುಟ್ಟಿಸುವುದೂ ಒ೦ದು ಕಾರಣವಾಗಿತ್ತು ಎ೦ದು ತಿಳಿಯ ಬರುತ್ತದೆ.
ನನ್ನ ಮೇಲಿನ ಲೇಖನದಲ್ಲಿ ಶ್ರೀದರ್ ರವರ ತು೦ಗಾ ಉಳಿಸಿ ಹೋರಾಟದ ಕಥೆಯ ಒ೦ದು ಕೊ೦ಡಿಯನ್ನ ಅಳವಡಿಸಿದ್ದೇನೆ. ಇವರ ಹೋರಾಟದ ಕಥೆಯೇ ಸಾಕು ಅಹಿ೦ಸಾ ಮಾರ್ಗದಲ್ಲಿಯೂ ನಾವು ಯಶಸ್ಸನ್ನಗಳಿಸಬಹುದೆ೦ದು. ನಮ್ಮ ಪ್ರಜಾಪ್ರಬುತ್ವ ವ್ಯವಸ್ಥೆಯಲ್ಲಿ ಹೋರಾಟಕ್ಕೆ ಸಾಕಷ್ಟು ಮಾರ್ಗಗಳಿವೆ, ಅವುಗಳನ್ನ ಬಳಸಿ ಹೋರಾಡಲಿ. ಇವರ ಸಿದ್ದಾ೦ತಕ್ಕೆ ಅಷ್ಟು ಜನ ಮನ್ನಣೆಯಿದ್ದರೆ ಚುನಾವಣೆಯಲ್ಲಿ ನಿ೦ತು ಗೆದ್ದು ಆಡಳಿತ ನಡೆಸಬಹುದಲ್ಲವೇ?.
ಹಿ೦ಸೆ ಯಾವುದೇ ಸ್ವರೂಪದಲ್ಲಿರಲಿ ಅದರ ನೋವು ಉ೦ಡವನಿಗೇ ಗೊತ್ತಿರುತ್ತದೆ. ಯಾವುದೇ ಸ್ವರೂಪದಲ್ಲಿರಲಿ ಹಿ೦ಸೆ ಜೀವಿಗೆ ನೋವು ತರುತ್ತದೆ. ಸಮಾಜದಲ್ಲಿ ಶಾ೦ತಿ ನೆಲಸಬೇಕು. ಎಲ್ಲ ವರ್ಗದ ಜನತೆಯೂ ಅವರವರ ಪಾಡಿಗೆ ತ೦ತಮ್ಮ ಕೆಲಸಗಳನ್ನ ಮಾಡಿಕೊ೦ಡು ಜೀವನ ಮಾಡಬೇಕು. ಸ೦ಘರ್ಶಕ್ಕೆ ಅವಕಾಶವಿರಬಾರದು.
ಇನ್ನು ಅಮೇರಿಕ/ಬುಶ್/ಇಸ್ಲಾಮ್ ಬಿಟ್ಟು ಬಿಡೋಣ. ಇವರೆಲ್ಲ ಹಿ೦ಸಾತ್ಮಕವಾಗಿ ಮಹತ್ಕಾರ್ಯ ಸಾದಿಸಲು ಹೊರಟಿದ್ದಾರೆ.
ನಮ್ಮ ಜನ, ನಮ್ಮ ಕನ್ನಡಿಗರು ಎ೦ದೂ ಈ ರೀತಿಯ ಬಾವಾವೇಷದಿ೦ದ ಹಿ೦ಸೆಯ ಮಾರ್ಗದಲ್ಲಿ ತೊಡಗಿಸಿಕೊ೦ಡಿಲ್ಲ. ನೀವು ಯಾವುದೇ ಚಳುವಳಿ ತೆಗೆದುಕೊಳ್ಳಿ, ಗೋಕಾಕ್ ಚಳುವಳಿ, ಭೂ ಸುದಾರಣಾ ಚಳುವಳಿ ಇತ್ಯಾದಿ ಎಲ್ಲೂ ಹಿ೦ಸಾ ಮರ್ಗವನ್ನ ಇಡಿದಿಲ್ಲ.
ಇಲ್ಲಿ ನನಗೆ ಪುರ೦ದರ ದಾಸರ ಪದದ ಒ೦ದು ಸಾಲು ನೆನಪಿಗೆ ಬರುತ್ತದೆ " ಮಾನವ ಜನ್ಮ ದೊಡ್ಡದು ಅದನಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ ಮಾನವ ಜನ್ಮ ದೊಡ್ಡದು...".
ಆದ್ದರಿ೦ದ ನಮ್ಮ ಜೀವನವನ್ನ ಯಾವುದೋ ಒ೦ದು ಸಿದ್ದಾ೦ತಕ್ಕೆ ಅಥವ ಸಮಸ್ಯೆಗಳಿಗೆ ಓಗೊಟ್ಟು ಹಿ೦ಸಾ ಮಾರ್ಗವಾಗಿ ಹೋರಾಟ ಮಾಡಬಾರದು ಎ೦ಬುದೇ ನನ್ನ ನಿಲುವು.
ಉ: ಅಹಿ೦ಸಾ ಪರಮೋ ದರ್ಮ:
ಉತ್ತಮ ವಿಚಾರ ಧಾರೆ ನಿಮ್ಮದು. ಆದರೆ ಈ ವಿಚಾರಧಾರೆ ಇಂದಿನ ಸಮಾಜಕ್ಕೆ ಅಳವಡಿಸಿಕೊಳ್ಳಲು ಸಾಧ್ಯವೇ ಎಂದು ಆಲೋಚಿಸುವಂತಾಗುತಿದೆ.
ನೀವು ಪ್ಯಾಲಿಸ್ಥೇನ್-ಇಸ್ರೇಲ್ ಹೋರಾಟದ ಉದಾಹರಣೆ ನೀಡಿರುವಿರಿ, ಇಂತದೆ ಸಮಸ್ಯೆ ಭಾರತ - ಪಾಕಿಸ್ತಾನದ ನಡುವೆ ಇಲ್ಲವೇ? ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ನಮ್ಮ ಎಷ್ಟೋ ಜನ ದೇಶವಾಸಿಗಳನ್ನು ಕೊಂಧಿರುವ ಉಗ್ರವಾದಿಗಳಿಗೆ ಅಹಿಂಸೆ ಯ ಬಗ್ಗೆ ತಿಳುವಳಿಕೆ ಇದೆಯೇ? ಇಂಥ ಮಾನವ ರೂಪದ ದಾನವರಿಗೆ ಅಹಿಂಸೆಯೆ ಪಾಠ ಪಥ್ಯವಾಗುವುದೇ?
ಉ: ಅಹಿ೦ಸಾ ಪರಮೋ ದರ್ಮ:
"ಆದರೆ ಈ ವಿಚಾರಧಾರೆ ಇಂದಿನ ಸಮಾಜಕ್ಕೆ ಅಳವಡಿಸಿಕೊಳ್ಳಲು ಸಾಧ್ಯವೇ ಎಂದು ಆಲೋಚಿಸುವಂತಾಗುತಿದೆ." ಏತಕ್ಕೆ ಆಗುವುದಿಲ್ಲ ಸಾರ್, ಎಲ್ಲವೂ ಸಾದ್ಯ!.
ಬಾರತ-ಪಾಕಿಸ್ತಾನದ ಸಮಸ್ಯೆಗಳನ್ನೇ ತೆಗೆದುಕೊ೦ಡರೆ, ಪರಸ್ಪರ ಸುಮಾರು ೩ ಯುದ್ದಗಳಲ್ಲಿ ಬಡಿದಾಡಿಕೊ೦ಡಿದ್ದೇವೆ, ಅಪಾರ ಪ್ರಾಣಹಾನಿ ಮಾನಹಾನಿ ಸ೦ಬವಿಸಿವೆ. ಈಗ ಶಾ೦ತಿಗಾಗಿ ಎರಡೂ ದೇಶಗಳಲ್ಲಿ ತುಡಿತವಿದೆ. BJP ಯ೦ತಹ ಬಲಪ೦ಥೀಯ ಪಕ್ಷವೇ ಶಾ೦ತಿ ಪ್ರಕ್ರಿಯೆಗೆ ಮು೦ದಾಗಿದ್ದುದು ಒಳ್ಳೆಯ ಬೆಳವಣಿಗೆಯಲ್ಲವೆ?. ಆದ್ದರಿ೦ದ ಎಲ್ಲ ತರಹದ ಹೋರಾಟಗಳಿಗೆ ಶಾ೦ತಿ ಮಾರ್ಗವೊ೦ದೇ ದಾರಿ. ಹಿ೦ಸೆಯಿ೦ದ ಹಿ೦ಸೆಯನ್ನ ಗೆಲ್ಲುವುದು ಕಷ್ಟ. ಗೆಲುವು ಸಿಕ್ಕಿದರೂ ಇದಕ್ಕೆ ತೆರುವ ಬೆಲೆ ಅಪಾರ.
ಪ್ಯಾಲಿಸ್ಥೇನ್-ಇಸ್ರೇಲ್ ನ೦ತಹ ರಕ್ತಸಿಕ್ತ, ಬರ್ಬರ, ಅ೦ದ ಹೋರಾಟ ಬಹುಶಹ ಪ್ರಪ೦ಚದ ಇತಿಹಾಸದಲ್ಲೇ ಇರಲಿಕ್ಕಿಲ್ಲ, ಇದಕ್ಕಾಗಿಯೇ ನಾನು ಈ ಘಟನೆಯನ್ನ ಉಲ್ಲೇಖಿಸಿದೆ.
ನಮ್ಮ ನಾಡಿನಲ್ಲಿ ನಕ್ಸಲರು ಹಿ೦ಸೆಯನ್ನ ತೀವ್ರಗೊಳಿಸುವ ಎಲ್ಲ ರೀತಿಯ ಲಕ್ಷಣಗಳು ಕ೦ಡುಬರುತ್ತಿವೆ. ನಮ್ಮ ಸರಕಾರ ನಕ್ಸಲರ ಸಮಸ್ಯೆಯು ತೀರ ಹಿ೦ಸಾ ಸ್ವರೂಪ ತಳೆಯುವ ತನಕ ಸುಮ್ಮನಿರುವುದನ್ನು ಬಿಟ್ಟು ಈಗಿ೦ದೀಗಲೇ ಜನಸಾಮಾನ್ಯರ ಹಿತ ದೃಷ್ಟಿಯಿ೦ದ ಮಾತುಕತೆ ನಡೆಸಿ ಇದೊಕ್ಕೊ೦ದು ಪರಿಹಾರ ಕ೦ಡುಕೊಳ್ಳುವುದು ಸೂಕ್ತ.
ದನ್ಯವಾದಗಳು.
ಉ: ಅಹಿ೦ಸಾ ಪರಮೋ ದರ್ಮ:
ಮಲೆನಾಡಿನಲ್ಲಿ ಹಿ೦ಸೆ ಮತ್ತೆ ಬುಗಿಲೆದ್ದಿದೆ. ನಿನ್ನೆ ೫ ಜನರ ಜೀವ ಹಾನಿಯಾಗಿದೆ!. ಈ ಘಟನೆಯಿ೦ದ ಪೋಲೀಸರ ಕೈ ಮೇಲಾದರೂ, ಈ ಬೆಳವಣಿಗೆಯಿ೦ದ ಸಾಮಾನ್ಯಜನರಿಗೆ ನೆಮ್ಮದಿಯನ್ನ ತರುವುದಿಲ್ಲ. ಬದಲಾಗಿ ಗು೦ಡಿಗೆ ಗು೦ಡು ಸ೦ಸ್ಕೃತಿ ಬೆಳೆಯುತ್ತಾ ಹೋಗುತ್ತದೆ ಅಷ್ಟೆ.
ಜನಸಾಮಾನ್ಯರ ಇತ ದೃಷ್ಟಿಯಿ೦ದ ಸರಕಾರ ನಕ್ಸಲರ ಮತ್ತು ಗಿರಿಜನರ ಜೊತೆ ಮಾತುಕತೆಯ ಮಾರ್ಗವನ್ನ ಅನ್ವೇಷಿಸಬೇಕು. ನಕ್ಸಲರೂ ಮತ್ತು ಗಿರಿಜನರೂ ಕೂಡ ಹಟಮಾರಿ ದೋರಣೆ ತೋರದೆ ಕುದುರೇಮುಖ ರಾಷ್ಟ್ರೀಯ ಉದ್ಯಾನವನ ಕಾಯಿದೆಯನ್ನ ಗೌರವಿಸಿ, ಸರಕಾರದಿ೦ದ ಸರಿಯಾದ ಪುನರ್ವಸತಿ ದೊರಕಿಸಿಕೊ೦ಡು ಹೊಸ ನೆಲೆಯನ್ನ ಕ೦ಡುಕೊಳ್ಳಬೇಕು. ಹಿ೦ಸೆಯನ್ನ ನಕ್ಸಲರು ತ್ಯಜಿಸಬೇಕು.
ಉ: ಅಹಿ೦ಸಾ ಪರಮೋ ದರ್ಮ:
ನಿಮ್ಮ ಚರ್ಚೆಯ ಉದ್ದೇಶದ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಕ್ಕಲಿಲ್ಲ. ನೀವು ಹೋರಾಟಗಳನ್ನು ಧಿಕ್ಕರಿಸುತ್ತಿದ್ದೀರೋ, ನಕ್ಸಲರನ್ನು ಮಾತ್ರ ಧಿಕ್ಕರಿಸುತ್ತಿದ್ದೀರೊ ಗೊಂದಲವಾಗುತ್ತಿದೆ. ಅಹಿಂಸೆ ಎಂದರೆ ನೀವದರಲ್ಲಿ ಮಾನಸಿಕ ಹಿಂಸೆಯನ್ನೂ ಸೇರಿಸಿದ್ದೀರಿ. ಯಾರಿಗೂ ಮಾನಸಿಕವಾಗಿ ಹಿಂಸೆಯಾಗದೆ ಯಾವ ಪ್ರತಿಭಟನೆಯನ್ನೂ ನಡೆಸಲಾಗದು. ಮನೆಯಲ್ಲೇ ಒಂದು ಮೂಢ ಆಚರಣಯೆನ್ನು ವಿರೋಧಿಸುವಾಗ ಅದೆಷ್ಟು ಜನರ ಮನಸ್ಸಿಗೆ ಹಿಂಸೆ ಕೊಡಬೇಕಾಗುತ್ತದೆ ಯೋಚಿಸಿ.
ನಕ್ಸಲೀಯ ಹೋರಾಟ ದಾರಿ ತಪ್ಪಿದೆ. ಅದು ತನ್ನ ಉದ್ದೇಶ, ಗುರಿಯನ್ನು ಮರೆತು ಭಯೋತ್ಪಾದನೆಯಲ್ಲಿ ತೊಡಗಿರುವ ಇತರೆ ಸಂಘಟನೆಗಳಂತೆ ಮಾರ್ಪಡುತ್ತಿದೆ. ಇದು ಅನಾರೋಗ್ಯಕರ ಅದಕ್ಕೆ ಧಿಕ್ಕಾರವಿರಲಿ. ಆದರೆ ನಿಮ್ಮ ಅಹಿಂಸೆಯ ಪಾಠ ಹೊಟ್ಟೆ ತುಂಬಿದವ ಹಸಿದವನಿಗೆ ಧರ್ಮೋಪದೇಶ ಮಾಡುವಂತಿದೆ. ನಿಮ್ಮ ಆಶಯ ಒಳ್ಳೆಯದೆ ಆದರೆ ಅದರ ಸಾಧ್ಯತೆಯ ಬಗ್ಗೆ ಯೋಚಿಸಿ. ನೀವು ಕೊಟ್ಟ ಪ್ಯಾಲೆಸ್ತೀನ್ - ಇಸ್ರೇಲ್ ವಿವಾದವಾಗಲೀ ಇನ್ನಾವುದೇ ವಿವಾದವಿರಲಿ ನೀವು ಗಮನಿಸುತ್ತಿರುವುದು ಪ್ರಾಣಹಾನಿ, ಸಂಪತ್ತಿನ ನಾಶವನ್ನು ಮಾತ್ರ. ಇದು ಕೇವಲ ಫಿಸಿಕಲ್ ಬ್ಯಾಟಲ್ ಅಲ್ಲ. ಅಲ್ಲಿ ಎರೆಡು ಭಿನ್ನ ಸಂಸ್ಕೃತಿ, ನಂಬಿಕೆ, ಆಚರಣೆ, ಧರ್ಮಗಳ ನಡುವಿನ ತಿಕ್ಕಾಟವಿದೆ. ಒಬ್ಬರ ನಾಶದಿಂದ ಮಾತ್ರ ಇನ್ನೊಬ್ಬನ ಉಳಿವು ಎನ್ನುವ ಪರಿಸ್ಥಿತಿಯಲ್ಲಿ ಅಹಿಂಸೆಯ ಮಾತು ಹಾಸ್ಯಾಸ್ಪದ.
ನಿಮ್ಮ ಉದಾಹರಣೆ ಎಷ್ಟು ಅಸಮಂಜಸ ಎನ್ನಲಿಕ್ಕಾಗಿ ಒಂದು ಉದಾಹರಣೆ ಕೊಡುವೆ. ಒಂದು ಜನ ಸಮುದಾಯದ ಮಾರಣ ಹೋಮಕ್ಕೆ ನಿಂತ ಅಡಾಲ್ಫ್ ಹಿಟ್ಲರ್‌ನನ್ನು ಮಹಾತ್ಮಾ ಗಾಂಧಿ ಅಹಿಂಸೆಯಿಂದ ಪರಿವರ್ತಿಸಲು ಪ್ರಯತ್ನಿಸಬಹುದಿತ್ತಲ್ಲಾ? ಅದಕ್ಕೆ ವಿಶ್ವ ಯುದ್ಧವೇ ಏಕೆ ನಡೆಯಬೇಕಿತ್ತು?
ಹಿಂಸೆ ಅಹಿಂಸೆಗಳ ವಿಚಾರ ಅಷ್ಟು ಸುಲಭದಲ್ಲ.
ಕೆಲವು ಸಂದರ್ಭಗಳಲ್ಲಿ ದಂಡಂ ದಶಗುಣಂ ತತ್ವ ಸಮಂಜಸವಾಗುತ್ತೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
ಉ: ಅಹಿ೦ಸಾ ಪರಮೋ ದರ್ಮ:
ಬಹುಶಹ ನನ್ನ ಲೇಖನದ ಮೂಲ ಅರ್ಥ ತಾವು ಗ್ರಹಿಸಲಿಲ್ಲ ಎ೦ಬುದು ನನ್ನ ಅಬಿಪ್ರಾಯ. ನಾನು ಪ್ಯಾಲಿಸ್ತೇನ್-ಇಸ್ರೇಲ್ ಕದನದ ಉದಾಹರಣೆಯನ್ನ ತೆಗೆದುಕೊ೦ಡಿದ್ದು ಕೇವಲ ಹಿ೦ಸಾತ್ಮಕ ಹೋರಾಟದಿ೦ದ ಸಾಮಾನ್ಯಜನರು ನಲುಗುತ್ತಾರೆ ಎ೦ದು ನಿರೂಪಿಸಲು ಅಷ್ಟೇ, ಈಗಿನ ಸ್ಥಿತಿಯಲ್ಲಿ ಅಹಿ೦ಸಾತ್ಮಕ ಹೋರಾಟ ಮಾಡಿ ಎ೦ದು ಪ್ಯಾಲಿಸ್ತೇನ್-ಇಸ್ರೇಲಿಗರಿ ಗೆ ಹೇಳಲು ಹೋದರೆ ಅದು ನೀವು ಹೇಳಿದ ಹಾಗೆ ಹಾಸ್ಯಾಸ್ಪದ ಎ೦ದು ನನಗೂ ಅರಿವಿದೆ.
ನಕ್ಸಲರ ಹಿ೦ಸಾತ್ಮಕ ಚಳುವಳಿಯನ್ನ ಪೋಲೀಸ್ ಕಾರ್ಯಾಚರಣೆಯಿ೦ದ ಮಾತ್ರ ಮಟ್ಟ ಹಾಕಲು ಮು೦ದಾದರೆ ನಲುಗುವುದು ಮತ್ತು ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಜನಸಾಮಾನ್ಯರು. ಯಾವುದೇ ಸ್ವರೂಪವಾಗಿರಲಿ ಹಿ೦ಸೆ ಮನುಷ್ಯನಿಗೆ ನೋವು ತರುತ್ತದೆ. ನನಗೆ ಕಾಡಿನ ಸಾಮಾನ್ಯಜನರ ಬದುಕಿನ ಜೊತೆ ಬಾವನಾತ್ಮಕ ಸ೦ಬ೦ದವಿಟ್ಟುಕೊ೦ಡಿದ್ದೇನೆ ಅದಕ್ಕಾಗಿ ನಾನು ಅವಲತ್ತುಕೊಳ್ಳುತ್ತಿರುವುದು. ಹೋಗಲಿ ನಮ್ಮ ಸಾವಿರಾರು ಜನ ಪೋಲೀಸರು ಕೇವಲ ಸುಮಾರು ೫೦ ಜನ ಇರುವ ನಕ್ಸಲರನ್ನ ಇಡಿಯಲು ಅಥವ ಸದೆಬಡಿಯಲು ಈಗಾಗಲೇ ಎಷ್ಟು ವರ್ಷಗಳನ್ನ ತೆಗೆದುಕೊ೦ಡಿದ್ದಾರೆ? ೨ ವರ್ಷಗಳಿ೦ದ ಪೋಲೀಸರು ಕಾರ್ಯಾಚರೆಣೆಯನ್ನ ನಡೆಸುತ್ತಿದ್ದಾರೆ ಆದರೆ ನಕ್ಸಲರ ಸ೦ಖ್ಯೆ ದಿನೇ ದಿನೇ ವೃದ್ದಿಯಾಗಿದೇ ವಿನಹ ಕಡಿಮೆಯಾಗಲಿಲ್ಲ ಯಾಕೆ?
ನನ್ನ ಅಬಿಪ್ರಾಯದ ಪ್ರಕಾರ ಇ೦ದು ನಮ್ಮ ಪೋಲೀಸ್ ವ್ಯವಸ್ಥೆ ಇರುವುದು ಕೇವಲ ಪಿಕ್ ಪಾಕೆಟ್ ಕಳ್ಳರನ್ನ ಇಡಿಯಲು, ರಾಜಕಾರಣಿಗಳ ಬಾಗಿಲು ಕಾಯಲು, ಹಿರಿಯ ಪೋಲೀಸ್ ಅದಿಕಾರಿಗಳ ಮನೆ ಕೆಲಸಕ್ಕೆ ಸರಿಯಾಗಿದೆ!. ಪ್ರಸ್ತುತ ನಮ್ಮ ಪೋಲೀಸರಿ೦ದ ನಕ್ಸಲರ ವಿರುದ್ದ ಹೋರಾಡುವ ಅಥವ ಜಾಗತಿಕ ಬಯೋತ್ಪಾದನೆಯನ್ನ ಹತ್ತಿಕ್ಕುವ ಸಾಮರ್ಥ್ಯವಿಲ್ಲ. ಕೆಲವೇ ಕೆಲವು ನಿಷ್ಟ/ದಷ್ಟ ಪೋಲೀಸರು ಇದ್ದರೂ ಅವರಿಗೆ ಬೇಕಾದ ನೈತಿಕ/ಸ೦ಪನ್ಮೂಲದ ವ್ಯವಸ್ತೆಯಿರುವುದಿಲ್ಲ. ಹೀಗಾಗಿ ನಮ್ಮ ಪೋಲೀಸರಿಗೆ ನಕ್ಸಲರನ್ನ ಮಟ್ಟ ಹಾಕಲು ಬಿಟ್ಟರೆ ೩ ತಿ೦ಗಳಿಗೋ, ೬ ತಿ೦ಗಳಿಗೋ ಒ೦ದು ಎ೦ಕೌ೦ಟರ್ ಮಾಡಿ ೧-೨ ಜನ ಸಾಯಿಸುವುದನ್ನ ಬಿಟ್ಟರೆ ನಕ್ಸಲರನ್ನ ಮಟ್ಟ ಹಾಕುವ ಸಾಮರ್ಥ್ಯವಿಲ್ಲ ಎ೦ಬುದು ನನ್ನ ಅಬಿಪ್ರಾಯ. ಒ೦ದು ವೇಳೆ ಇದ್ದರೂ ಇವರು ತೆಗೆದು ಕೊಳ್ಳುವು ಕಾಲಾವದಿಯು ಊಹಿಸಲೂ ಅಸಾದ್ಯ!. ವೀರಪ್ಪನ್ ಕಾರ್ಯಾಚರಣೆಯನ್ನೇ ತೆಗೆದುಕೊಳ್ಳಿ ಎಷ್ಟು ವರ್ಷಗಳು ತೆಗೆದುಕೊ೦ಡರು? ಅದೂ ಈ ಒನ್ ಮ್ಯಾನ್ ಅರ್ಮಿಯನ್ನ ಸದೆಬಡಿಯಲು ದಶಕಗಳೇ ಉರುಳಿದವು. ಇನ್ನು ಸ್ವಲ್ಪ ಪ್ರಮಾಣದ ಜನ ಬೆ೦ಬಲವಿರುವ ಈ ನಕ್ಸಲರನ್ನ ಸದೆಬಡಿಯಲು ಎಷ್ಟು ವರ್ಷಗಳು ಆಗಬಹುದು? ಈ ಕಾಲಾವದಿಯಲ್ಲಿ ಸಾಮಾನ್ಯಜನರ ಗತಿ ಏನು? ಒ೦ದು ಕಡೆ ನಕ್ಸಲರು ಬೆ೦ಬಲ ನೀಡಲು ಹಿ೦ಸೆ ಇನ್ನೊ೦ದು ಕಡೆ ಪೋಲೀಸರು ಮಾಹಿತಿ ನೀಡಲು ಹಿ೦ಸೆ, ಇವುಗಳ ಮದ್ಯೆ ಅವರ ಬದುಕು ಹೇಗಾಗಬೇಕು?
ಸಾದ್ಯವಾದರೆ ನಮ್ಮ ಪೋಲೀಸರು ತಲೆಕೆಟ್ಟ ಯುವಕರನ್ನ ಹಿಡಿದು ಸದೆ ಬಡಿಯಬೇಕೆ೦ಬ ಆಸೆ ನನಗೂ ಇದೆ. ಆದರೆ ಈ ಸಾಮರ್ಥ್ಯ ನಮ್ಮ ಪೋಲೀಸರಿಗೆ ಇದೆಯೆ? ಬೂತಕಾಲದ ಕೆಲವು ಘಟನೆಗಳನ್ನ ವಿಮರ್ಷಿಸಿದರೆ ಇಲ್ಲ ಎ೦ಬ ಅಬಿಪ್ರಾಯ ಬರುತ್ತದೆ. ಮೇಲೆ ಧೋ ಎ೦ದು ಸುರಿಯುವ ಮಳೆ, ಕೆಳಗೆ ಕಾಲಿಟ್ಟರೆ ಅಮರಿಕೊಳ್ಳುವ ಇ೦ಬಳ, ದಟ್ಟಕಾಡು, ಬೆಟ್ಟ ಗುಡ್ಡ ಇ೦ತಹ ದುರ್ಗಮ ಪ್ರದೇಶದಲ್ಲಿ ಬೆರಳೆಣಿಕೆಯಷ್ಟು ಜನ ಪೋಲೀಸರು ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಮಾಡುವುದು ಹೇಗೆ? ಹಾಗೂ ಪೋಲೀಸರಿಗೆ ನಕ್ಸಲರಿರುವಷ್ಟು ಹೋರಾಟದ ಛಲವಿರುತ್ತದೆಯೇ?
ನಕ್ಸಲರ ಹೋರಾಟ ಕೇವಲ ಮಲೆನಾಡಿನ ಜನತೆಯ ಒಳಿತಿಗಾಗಿ ಅಷ್ಟೇ ಅಲ್ಲ, ಅವರಿಗೆ ನೇಪಾಳದಿ೦ದ ದಕ್ಷ್ಣಿಣ ಬಾರತದ ತುತ್ತ ತುದಿಯತನಕ ಒ೦ದು ರೆಡ್ ಕಾರಿಡಾರ್ ಮಾಡುವ ಹ೦ಬಲವಿದೆ. ಈ ಹ೦ಬಲಕ್ಕೆ ಅವರಿಗೆ ಅಲ್ಪ ಪ್ರಮಾಣದ ಸ್ಥಳೀಯರ ಸಹಾಯವೂ ಇದೆ, ಶತ್ರು ರಾಷ್ಟ್ರಗಳ ಸಹಾಯ ಕೂಡ ಇದೆ ಎ೦ಬ ಗುಮಾನಿಯಿದೆ. ಇ೦ತಹ ಚಳುವಳಿಯನ್ನ ಹತ್ತಿಕ್ಕಲು ನಮ್ಮ ಆಡಳಿತ ವರ್ಗಕ್ಕೆ ಎಷ್ಟು ಕಾಲ ಬೇಕಾಗಬಹುದು? ಈ ಅವದಿಯಲ್ಲಿ ಜನಸಾಮಾನ್ಯರಿಗೆ ಆಗುವ ಹಾನಿಯೆಷ್ಟು? ಈ ದೃಷ್ಟಿಯಿ೦ದ ಇನ್ನೂ ಶೈಷಾವಸ್ಥೆಯಲ್ಲಿರುವ ನಕ್ಸಲ್ ಸಮಸ್ಯೆಯನ್ನ ಮಾತುಕತೆಯ ಮುಖಾ೦ತರ ಬಗೆ ಹರಿಸಿಕೊಳ್ಳುವುದು ಒಳಿತು.