Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಕಲೆ › ಸಿನಿಮಾ

ಹಸೀನಾ ಮತ್ತು ಪಹೇಲಿ

September 27, 2005 - 12:01pm — nilagriva

ಪಹೇಲಿ (ಅಮೋಲ್ ಪಾಲೇಕರ್ ನಿರ್ದೇಶನದ, ರಾಣಿ ಮೂಖರ್ಜಿ ಮತ್ತು ಶಾರುಖ್ ಖಾನ್ ನಟನೆಯ ಚಿತ್ರ) ಆಸ್ಕರ್ ಗೆ ಆಯ್ಕೆಯಾಗಿದೆ. ನಮ್ಮ ಕರ್ಣಾಟಕದಿಂದ ಗಿರೀಶ ಕಾಸರವಳ್ಳಿಯವರ "ಹಸೀನಾ" ಚಿತ್ರವನ್ನು ಈ ಆಯ್ಕೆಗೆ ಕಳಿಸಲಾಗಿತ್ತು. ಆದರೆ ಪಹೇಲಿಯ ಆಯ್ಕೆ ಆಗಿದೆ.

ನಾನು ಎರಡೂ ಚಿತ್ರಗಳನ್ನು ನೋಡಿಲ್ಲ. ಆದರೆ ಒಂದು ಪ್ರಶ್ನೆ. ಹಸೀನಾ ಒಳ್ಳೆಯ ಚಿತ್ರವೋ ಅಥವಾ ಪಹೇಲಿಯೋ ? ಎರಡು ಭಿನ್ನ ರೀತಿಯ ಚಿತ್ರಗಳನ್ನು ಹೋಲಿಸುವುದು ಅಷ್ಟೊಂದು ಸರಿಯಲ್ಲ. ಆದರೂ ಸಂಪದದ ಸದಸ್ಯರನ್ನು ಕೇಳಲೇಬೇಕಿತ್ತು. ದುರದೃಷ್ಟವಶಾತ್ ನಾನು ಈ ಎರಡೂ ಚಿತ್ರಗಳನ್ನು ನೋಡಿಲ್ಲ. ಹಾಗೆಯೇ ಕುತೂಹಲವಷ್ಟೆ. ಈ ಎರಡು ಚಿತ್ರಗಳಲ್ಲಿ ಯಾವ ಚಿತ್ರ ಆಸ್ಕರ್ ಗೆ ಚೆನ್ನಾಗಿರುತ್ತಿತ್ತು ಅನ್ನುವುದೇ ನನ್ನ ಪ್ರಶ್ನೆ.

ಯಾರಾದರೂ ಈ ಎರಡೂ ಚಿತ್ರಗಳನ್ನು ನೋಡಿದ್ದರೆ ದಯವಿಟ್ಟು ಉತ್ತರಿಸಿರಿ.

ಧನ್ಯವಾದಗಳು.

‹ ಈ ಯಾವ ಚನ್ನಾಗಿರೋ ಸಿನಿಮ ನಡೇತಾ ಇದೆ? ಬೆಂಗಳೂರು ಚಿತ್ರೋದ್ಯಮದ ಕೈಯಲ್ಲಿ ಬಡವಾಗುತ್ತಿರುವ ಕನ್ನಡ ›
  • ಸಿನಿಮಾ
Ornamental seperator
  • Login or register to post comments
  • 950 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 28, 2005 - 9:26pm — hpn

ಪಹೇಲಿ vs ಹಸೀನ

hpn's picture

'ಪಹೇಲಿ' ಚಿತ್ರ ಆಯ್ಕೆಯಾದದ್ದು ಸಹಜವೇ. ಅಮೇರಿಕನ್ನರ ಮನವೊಲಿಸುವಂತಹ ಚಿತ್ರ ಈ ಬಾರಿ ಯಾವುದಾದರೂ ಆಗಿದ್ದರೆ ಅದು 'ಪಹೇಲಿ'ಯೇ ಆಗಿರಬೇಕು. ಒಳ್ಳೆಯ ಬಜೆಟ್, ಸ್ಕ್ರೀನ್ ಪ್ಲೇ, ಹಾಗೂ ಬಹಳ ಒಳ್ಳೆಯ ನಿರ್ದೇಶನವಿರುವುದು, ಅದಕ್ಕೆ. (ಬರಿಯ ಕಲಾತ್ಮಕ ಚಿತ್ರವಾದ ಮಾತ್ರಕ್ಕೆ ಆಸ್ಕರ್ ಲಭಿಸೋದಿಲ್ಲ - ಅಮೇರಿಕನ್ನರಿಗೆ ಚಿತ್ರ ಹಿಡಿಸಬೇಕು, ಅಲ್ಲದೆ ಆ ಚಿತ್ರಕ್ಕೆ ಕ್ಯಾಂಪೇಯ್ನ್ ಮಾಡುವ ಹಣಕಾಸುಳ್ಳ ದಿಗ್ಗಜರು ಬೇಕು)

ಹಸೀನಾ ನಾನೂ ವೀಕ್ಷಿಸಿಲ್ಲ, ಆದ್ದರಿಂದ ಆ ಚಿತ್ರ ಹೇಗಿದೆಯೋ ನಾನೂ ಹೇಳಲಾರೆ.

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
December 27, 2005 - 3:19pm — Jagadish

ಹಸೀನಾ vs ಪಹೇಲಿ

Jagadish's picture

hpn, ಒಂದಂತೂ ನಿಜ. ಅಲ್ಲಿ ಕ್ಯಾಂಪೇಯ್ನ್ ಮಾಡಕ್ಕೆ ದುಡ್ಡು ಬೇಕು, ಅದಕ್ಕೆ ಪಹೇಲಿ ಸರಿ ಹೋಗುತ್ತೆ.

ನಾನು ಎರಡೂ ಚಿತ್ರಗಳ್ನೂ ನೋಡಿದಿನಿ...ಹಸೀನಾ ತುಂಬ ನೈಜವಾಗಿದೆ. ಪಹೇಲಿಯಲ್ಲಿ ಕತೆ ತುಂಬ ಕಾಲ್ಪನಿಕ. ಅವ್ರು ಹೇಳಿರೋ ಹಾಗೆ ಜನಪದ ಕತೆ ತರಹನೇ. ಅದೇ ತರಹ ಕತೆ ಇರೋ 'ನಾಗಮಂಡಲ' ತುಂಬ ಚೆನ್ನಾಗಿದೆ. ಪಹೇಲಿ ಇದರ ಮುಂದೆ ನಿಲ್ಲೋಲ್ಲ. ಖರ್ಚು ಮಾಡಿರೋದ್ ಬಿಟ್ರೆ ಅದ್ರಲ್ಲಿ ಏನೇನೂ ಇಲ್ಲ. ಅಮೇರಿಕನ್ನರು ಬಿಡಿ ಅವ್ರಿಷ್ಟ ಬಂದಂಗೆ ಕೊಡೋದು. ಆಸ್ಕರ್ ಕತೇನೂ ಅಷ್ಟೆ. ನನ್ನ ಕೇಳಿದ್ರೆ ಹಸೀನಾ ತುಂಬ ಚೆನ್ನಾಗಿದೆ ಪಹೇಲಿ ಮುಂದೆ.

ಯಾವ್ದೋ ಮ್ಯಾಗಝೀನ್ ಅಲ್ಲಿ ಓದಿದ್ದು:
"Solve this paheli: Paheli selected for oscar"

~~~~~~~~~~~~~~~
"ನಾನು ಕನ್ನಡದ ಕಂದ"
~~~~~~~~~~~~~~~

  • Login or register to post comments
  • link
  • Email this ಪ್ರತಿಕ್ರಿಯೆ
December 27, 2005 - 7:13pm — hpn

ನಾಗಮಂಡಲ

hpn's picture

'ನಾಗಮಂಡಲ' ಹಳೆಯ ಚಿತ್ರ ಅಲ್ವ? ಈ ವರ್ಷ ಬಂದದ್ದೆ? (ನಾನೊಂದು 'ನಾಗಮಂಡಲ' ಚಿತ್ರ ನೋಡಿದ್ದೆ... ಟಿ ಎಸ್ ನಾಗಾಭರಣರವರದ್ದು - ಗಿರೀಶ್ ಕರ್ನಾಡ್ ಬರೆದ ನಾಟಕವನ್ನಾದರಿಸಿದ್ದು... ಈ ಪುಟ ನೋಡಿ - ಅದೇನಾ ನೀವು ಹೇಳ್ತಿರೋದು?)

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
December 28, 2005 - 12:08pm — Jagadish

ನಾಗಮಂಡಲ

Jagadish's picture

ಹೌದು. ಅದೇ ನಾಗಮಂಡಲ. ಪಹೇಲಿಯಲ್ಲೂ ಇದೇ ತರಹ ಕತೆ, ಸ್ವಲ್ಪ ಇಲ್ಲಾಜಿಕಲ್....
ನಾಗಮಂಡಲ ಅದ್ಭುತವಾಗಿದೆ ಹಂಗೆ ನೋಡಕ್ಕೆ ಹೋದ್ರೆ....ಆದ್ರೆ ಮಾರ್ಕೆಟಿಂಗ್ ಇಲ್ಲ ಸರಿಯಾಗಿ...Sad

~~~~~~~~~~~~~~~
"ನಾನು ಕನ್ನಡದ ಕಂದ"
~~~~~~~~~~~~~~~

  • Login or register to post comments
  • link
  • Email this ಪ್ರತಿಕ್ರಿಯೆ
December 29, 2005 - 1:45am — anil_rvce

anil_rvce's picture

ರಂಗಶಂಕರದಲ್ಲಿ ಚಂದ್ರಶೇಕರ ಕಂಬಾರರು ಬರೆದಿರುವ 'ಸಿರಿ ಸಂಪಿಗೆ' ನಾಟಕ ನೋಡಿದೆ, ಅದು ಸಹ 'ನಾಗಮಂಡಲ'ದಂತಿತ್ತು

  • Login or register to post comments
  • link
  • Email this ಪ್ರತಿಕ್ರಿಯೆ
January 3, 2006 - 4:59pm — ಪ್ರಶಾಂತ.ಪಂಡಿತ

ಪಹೇಲಿ, ನಾಗಮಂಡಲ, ದುವಿಧಾ ...

ಪ್ರಶಾಂತ.ಪಂಡಿತ's picture

ಗಿರೀಶ ಕಾರ್ನಾಡರ ನಾಗಮಂಡಲ ಹಾಗು ಕಂಬಾರರ ಸಿರಿಸಂಪಿಗೆ ನಾಟಕಗಳು ಕನ್ನಡ ಜಾನಪದ ಕಥೆಯನ್ನು ಆಧರಿಸಿದ್ದು. 1996ರಲ್ಲಿ ಕಾರ್ನಾಡರ ನಾಟಕ ಆಧರಿಸಿ ನಾಗಾಭರಣರು ಅದೇ ಹೆಸರಿನ ಚಿತ್ರ ಮಾಡಿದರು. ರಾಜಸ್ಥಾನದ ಖ್ಯಾತ ಲೇಖಕ ವಿಜಯ ದಾಂಡೇತ ಅಲ್ಲಿನ ಜಾನಪದ ಕಥೆಯನ್ನು ಆಧರಿಸಿ ದೊಹ್ರಿಜೂನ್ ಎಂಬ ಹೆಸರಿನ ನೀಳ್ಗತೆಯನ್ನು ಪ್ರಕಟಿಸಿದ್ದರು. ಮುಂದೆ ಉಲ್ಝನ್ ಹಾಗು ದುವಿಧಾ ಎಂಬ ಹೆಸರಿನಲ್ಲಿ ಎರಡು ಭಾಗಗಳಲ್ಲಿ ಅದನ್ನು ಹಿಂದಿಗೆ ಅನುವಾದಿಸಲಾಯಿತು. 1973ರಲ್ಲಿ ಮಣಿ ಕೌಲ್ (ಹಿಂದಿಯ ಕಲಾತ್ಮಕ ಚಿತ್ರಗಳ ನಿರ್ದೇಶಕ) ದುವಿಧಾ ಎಂಬ ಹೆಸರಿನಲ್ಲಿ ಚಿತ್ರ ನಿರ್ಮಿಸಿದರು. ಅಮೋಲ್ ಪಾಲೇಕರನ ಪಹೇಲಿ ಈ ಹಿಂದಿ ಕಥೆಯನ್ನು ಆಧರಿಸಿದ್ದು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಿತ್ರಗಳನ್ನು ಅಪ್ಲೋಡ್ ಮಾಡಲು ಅನುಮತಿಯ ಕೋರಿಕೆ
  • ನಮ್ಮ ಮನೆಯ ದೀಪಾವಳಿ (ಭಾಗ 2)
  • ಮುಂಗಾರುಮಳೆ ಮತ್ತು ದ್ವೀಪ
  • "ಮುಂಗಾರು ಮಳೆ" ಮತ್ತು "ದ್ವೀಪ"
  • ಒಂದೆರಡು ರೇಖಾಚಿತ್ರಗಳು
Syndicate content

ಲೇಖಕರು

nilagriva's picture

ಪರಿಚಯ

ನಾನೊಬ್ಬ ಸಾಮಾನ್ಯ ಮನುಷ್ಯ. ಕನ್ನಡ, ಭಾರತ, ಸಂಸ್ಕೃತ ಮತ್ತು ನಮ್ಮ ಸಂಸ್ಕೃತಿಯೆಂದರೆ ನನಗೆ ಬಹಳ ಇಷ್ಟ. ಬೆಂಗಳೂರುವಾಸಿ. ಸಾಹಿತ್ಯಾಸಕ್ತ. ಒಮ್ಮೊಮ್ಮೆ ಏನೋ ಬರೆಯುವುದುಂಟು. ಪರಿಚಯಕ್ಕೆ ಇಷ್ಟು ಸಾಕು, ಅಲ್ಲವೇ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸವಾಲೊಂದು ನಿನ್ನ ಮ್ಯಾಲ...
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
  • ಮಧುವನ ಕರೆದರೇ, ತನುಮನ ಸೆಳೆದರೆ
  • ಆರನೇ ವಿಬಕುತಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
ಇನ್ನಷ್ಟು

ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator