ಇನ್ಫೋಸಿಸ್‌ಗೆ ಮುತ್ತಿಗೆ
ಇಂದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬಂದಿರುವ ಸುದ್ದಿ ಓದಿ. ವಿಚಿತ್ರ ಎಂದರೆ ಇದು ಬೇರೆ ಯಾವುದೆ ಪತ್ರಿಕೆಗೆಳಲ್ಲಿ ಪ್ರಮುಖ ಸುದ್ದಿಯಾಗಿಲ್ಲ. ನಾನು ಇನ್ನೂ ಎಲ್ಲ ಪತ್ರಿಕೆಗಳ ಎಲ್ಲ ಪುಟಗಳನ್ನು ಓದಿಲ್ಲ. ಮುಖಪುಟ ಮಾತ್ರ ನೋಡಿದೆ.
ಸಿಗೋಣ,
ಪವನಜ

- Login or register to post comments
- 794 hits
- Email this forum





RSS:
ಮೊದಲು
ಮೊದಲು ಕನ್ನಡಿಗರಿಗೆ ಆದ್ಯತೆ ನೀಡಬೇಕಿರುವುದು ಹೆಚ್ ಎ ಎಲ್ ನಂತಹ ಸರಕಾರೀ ಸಂಸ್ಥೆಗಳಲ್ಲಿ! ಇನ್ಫೋಸಿಸ್ ನಲ್ಲಿ ಬೇಕಾದಷ್ಟು ಕನ್ನಡಿಗರಿದ್ದಾರೆ, ಆದರೆ ಅವರುಗಳು ಬಹುಶಃ ಬೇರೆ ಭಾಷೆಯವರಂತೆ 'ಭಾಷೆಯ' ಮೇಲೆ ಆದ್ಯತೆ ನೀಡುವುದು ಕಡಿಮೆ (ಅದು ಎಥಿಕಲ್ ಆದರೂ ಬೇರೆ ಭಾಷೆಯವರು ಹೀಗೆ ಮಾಡದೇ ಇರುವುದರಿಂದ ಬಹುಶಃ ಇಂಬ್ಯಾಲೆನ್ಸ್ ಸೃಷ್ಟಿಯಾಗಿದೆ).
ಇನ್ಫೋಸಿಸ್ ಗೆ ಮುತ್ತಿಗೆ ಹಾಕಬಾರದಿತ್ತು. ಬೆಂಗಳೂರಿನಲ್ಲಿ ನೂರಾರು ಕಂಪೆನಿಗಳಿವೆ. ಅವುಗಳನ್ನೆಲ್ಲ ಮರೆತು ಬಿಟ್ಟ ಹಾಗೆ ಕಾಣುತ್ತಿದೆ. ಮುತ್ತಿಗೆ ಹಾಕಿ ಗಲಾಟೆ, ದೊಂಬಿ ಮಾಡುವುದು ನಮ್ಮ ಕನ್ನಡಿಗರಿಗೆ ಒಳ್ಳೆಯ ಹೆಸರಂತೂ ತಂದುಕೊಡದೇ ಇರುವುದು ಗ್ಯಾರಂಟಿ.
--
"ಹೊಸ ಚಿಗುರು, ಹಳೆ ಬೇರು"
ಹೌದು ಇದು ತಪ್ಪು
ಕನ್ನಡ ಸಿನಿಮಾದವರ ತರಹ ಒಳ್ಳೆಯ ಚಿತ್ರ ಮಾಡದೆ ಬೇರೆ ಭಾಷೆಯ ಚಿತ್ರ ತೆರೆಗೆ ತರಬೆಡಿ ಅನ್ನೊ ಹಾಗೆ ಇದೆ ಇದು ಕೂಡಾ...
ಇನ್ಫೊಸಿಸ್ ಕನ್ನಡದವರು ಹೆಮ್ಮೆ ಪಡುವಂತ ಕಂಪನಿ...ಇದು ನನ್ನ ಅನಿಸಿಕೆ. ನಿವೇನಂತಿರಾ?
"ರಾಜಾ"
ಒಮ್ಮೆ ಯೋಚಿಸಬೇಕು
ಮೇಲ್ನೋಟಕ್ಕೆ, ರಕ್ಷಣಾ ವೇದಿಕೆ ಮಾಡಿದ್ದು ಸ್ವಲ್ಪ ತರ್ಲೆ ಕೆಲ್ಸ ಅನ್ಸುದ್ರೂ ಒಳಗೆಲ್ಲೋ ನನಗೆ ಅವರು ಕೇಳುತ್ತಿರುವುದರಲ್ಲಿ ತಪ್ಪೇನಿಲ್ಲ ಅನ್ಸುತ್ತೆ. ಮೆರಿಟ್ ಅಗತ್ಯವಿರುವ ಕೆಲಸಗಳನ್ನು ಬಿಟ್ಟು ಕೆಳ ದರ್ಜೆಯ ಕೆಲಸಗಳಿಗೂ ಹೊರರಾಜ್ಯದವರಿಗೆ ಮಣೆ ಹಾಕುವುದು ಎಷ್ಟರ ಮಟ್ಟಿಗೆ ಸರಿ. ಬೆಂಗಳೂರಿನಲ್ಲಿ ಇವರುಗಳು ತಮ್ಮ ಧಂಧೆ ನಡೆಸಲು ಎಷ್ಟೆಲ್ಲ ಸವಲತ್ತುಗಳನ್ನು ನಮ್ಮ ಸರ್ಕಾರ ಒದಗಿಸಿದೆ. ಈಹೊತ್ತು ಬೆಂಗಳೂರಿನಲ್ಲಿರುವ ಬಹುತೇಕ ಫ್ಲೈಓವರ್ಗಳೂ ಅವರ ಆಫೀಸುಗಳತ್ತಲೇ ಮುಖ ಮಾಡಿವೆ. ಬದಲಿಗೆ ಕರ್ನಾಟಕದ ಸಾಮಾನ್ಯರಿಗೆ ಏನು ಸಿಕ್ಕಿದೆ. ಇವರುಗಳಿದಾಗಿ ಕರ್ನಾಟಕ ಸರ್ಕಾರವು, ಇವರು ಕರೆ ತರುವ ವಲಸಿಗರಿಗೂ ಸೌಲಭ್ಯಗಳನ್ನೊದಗಿಸಬೇಕು...ನಮಗಿದ್ಯಾವ ಕರ್ಮ. ಇದರ ಮೇಲೆ, ಇವರುಗಳಿಂದ ಕರ್ನಾಟಕದ ಭಾಷಂ ಸಂಸ್ಕೃತಿಗಾಗುತ್ತಿರುವ ಅವಮಾನವನ್ನೂ ಸಹಿಸಬೇಕು. ಇತ್ತೀಚಿಗೆ ಐಬಿಎಂ ಕಂಪನಿಯವರು ತಮ್ಮ ಕಂಪನಿಯ ಉದ್ಯೋಗಿಗಳಿಗೆ ಅರಮನೆ ಮೈದಾನದಲ್ಲಿ ನಡೆಸಿದ ಸಮಾರಂಭದಲ್ಲಿ, ಕೆಲವು ಜನಪ್ರಿಯ ಗಾಯಕರು ಕನ್ನಡ ಹಾಡುಗಳನ್ನು ಹಾಡಲು ಮುಂದಾದಾಗ ಅವರನ್ನು ತದೆಯಲಾಯಿತಂತೆ. ಈಗ ಹೇಳಿ ಎಲ್ಲ ಸಹನೆಗೂ ಮಿತಿಯಿರುತ್ತದಲ್ಲವೆ...
ಪ್ರಜಾವಣಿಯಲ್ಲದೇ ಟೆಲಿಗ್ರಾಫ್ ನಲ್ಲಿ ಕೆಟ್ಟದಾಗಿ ಬರೆದಿದ್ದಾರೆ ಇದರ ಬಗ್ಗೆ. (ಅದರ ಬಗ್ಗೆ ಇಂಗ್ಲೀಷಿನಲ್ಲಿ ನನ್ನ ಅನಿಸಿಕೆ ಇಲ್ಲಿದೆ)
ಕೆವಿಕೆ ಯವರು ಸರಿಯೋ ತಪ್ಪೋ, ಐಟಿ ಕಂಪನಿಗಳು ಕನ್ನಡಿಗರನ್ನ್ದು ಮೂದಲಿಸುವುದು ಸರಿಯೇ? ವಿಜಯಕರ್ನಾಟಕದ ಪ್ರಕಾರ, ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು. ಕನ್ನಡ ಚಲನಚಿತ್ರಗಳು ಕಳಪೆಯಾಗಿರಬಹುದು, ನಮ್ಮ ಕಾರ್ಮಿರೂ ಕಳಪೆ ಎಂಬುವುದು ಅಸತ್ಯ
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ