ತೀರ ಇತ್ತೀಚಿನ ಬರಹ/ಪ್ರತಿಕ್ರಿಯೆಗಳು ಲಾಗಿನ್ ಆದವರಿಗೆ ಮಾತ್ರ ಕಾಣಿಸಿಕೊಳ್ಳುವುದು
ಕಳೆದ ವಾರಗಳಲ್ಲಿ ಸಂಪದದ ಓದುಗರು ಹಲವರು ಈ ಬಗ್ಗೆ ಪತ್ರ ಬರೆದಿದ್ದರು. ಸಮಯಾಭಾವದಿಂದ ಎಲ್ಲರಿಗೂ ಉತ್ತರಿಸಲಾಗದೆ ಇಲ್ಲಿಯೇ ಬರೆಯುತ್ತಿರುವೆ.
ಇತ್ತೀಚೆಗೆ ಸಂಪದ ಓದುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ - ಕಳೆದ ತಿಂಗಳು ಸಂಪದದಲ್ಲಿ ರೆಕಾರ್ಡ್ ಆದ ಒಟ್ಟು ಭೇಟಿಗಳ ಸಂಖ್ಯೆ (hits) ೨.೨ ಮಿಲಿಯನ್. ಇದು ಒಳ್ಳೆಯ ಬೆಳವಣಿಗೆಯೇ, ಆದರೆ ಸರ್ವರ್ ಮೇಲೆ ಇದರಿಂದಾಗುವ ಲೋಡ್ ಕಡಿಮೆ ಮಾಡಲು 'ಸಂಪದ'ದಲ್ಲಿ ಲಾಗಿನ್ ಆಗಿರದ ಸದಸ್ಯರಿಗೆ "cache" ಆದ ಪ್ರತಿ ಓದಲು ಸಿಗುವಂತೆ ಮಾಡಲಾಗಿದೆ. ಅರ್ಧ ಘಂಟೆಗೊಮ್ಮೆ ಈ cache ಹೊಸತಾಗುತ್ತದಾದ್ದರಿಂದ ಕೆಲವು ಬರಹಗಳು/ಪ್ರತಿಕ್ರಿಯೆಗಳು ಲಾಗಿನ್ ಆಗದವರಿಗೆ ಕಾಣದೆ ಹೋಗಬಹುದು.
ಲಾಗಿನ್ ಆದ ಸದಸ್ಯರಿಗೆ ಇತ್ತೀಚೆಗೆ ಸೇರಿಸಿದ ಲೇಖನ/ಪ್ರತಿಕ್ರೆಯೆಗಳು ಕೂಡಲೆ ಕಾಣಿಸಿಕೊಳ್ಳುವುದು.

- Login or register to post comments
- 551 hits
- Email this forum





RSS: