ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಇದು ಬಂಜಗೆರೆಯಲ್ಲ ತುಂಬಿದ ಕೆರೆ

July 15, 2007 - 8:26pm — cmariejoseph

ಬಂಜಗೆರೆ ಜಯಪ್ರಕಾಶ ಅವರು ಬರೆದಿರುವ “ಆನುದೇವಾ ಹೊರಗಣವನು” ಎಂಬ ಸಂಶೋಧನಾ ಪ್ರಬಂಧದ ಕುರಿತಂತೆ ದೊಡ್ಡ ವಿವಾದ ನಡೆದಿದೆ. ಈ ಪುಸ್ತಕದಲ್ಲಿ ಅವರು ಬಸವಣ್ಣನವರು ವಿಚಾರಕ್ರಾಂತಿಗೆ ನಾಂದಿಯಾಗಿ ಬ್ರಾಹ್ಮಣತ್ವವನ್ನು ತೊರೆದರೆಂಬ ಸಿದ್ಧ ನಿಲುವಿಗೆ ವ್ಯತಿರಿಕ್ತವಾದ ವಾದವನ್ನು ಮುಂದಿಡುತ್ತಾ ತಮ್ಮ ವಾದಕ್ಕೆ ಪೂರಕವಾದ ಪುರಾವೆಯನ್ನು ಎಳೆಎಳೆಯಾಗಿ ಬಿಡಿಸಿಡುತ್ತಾ ಹೋಗುತ್ತಾರೆ.

ಹಾಗೆ ನೋಡಿದರೆ ಬಸವಣ್ಣನವರ ಬಗ್ಗೆ ಬರೆದ ಪರಿಚಯ ಸಾಹಿತ್ಯವೆಲ್ಲವೂ ಅವರ ಸಮಕಾಲೀನರು ಬರದಿದ್ದಲ್ಲ. ಬಸವನ ನಂತರ ಅಂದರೆ ನೂರು ನೂರೈವತ್ತು ವರ್ಷಗಳ ನಂತರ ಲಭ್ಯ ವಚನಗಳ ಆಧಾರದಲ್ಲಿ ಬರೆಯಲಾದ ಕಾವ್ಯ ಪುರಾಣಗಳ ಮೂಲಕ ಪ್ರಚುರಗೊಂಡಿದೆ. ಈ ಕಾವ್ಯ ಪುರಾಣಗಳಲ್ಲಿ ಸಿಗುವುದು ಅಲಂಕೃತ ಸತ್ಯಗಳು ಮಾತ್ರ. ಅಧಿಕೃತವೆನಿಸಬಲ್ಲಂತಹ ಶಾಸನ, ದಸ್ತಾವೇಜು, ತಾಳೆಯೋಲೆ. ಹಸ್ತಪ್ರತಿ, ವಂಶವೃಕ್ಷಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಈ ಕಪೋಲಕಲ್ಪಿತ ಪುರಾಣಗಳನ್ನು ಒರೆಗೆ ಹಚ್ಚಿ ನೋಡಬೇಕಿದೆ.

ಬಸವಣ್ಣನವರು ಬಿಜ್ಜಳನ ಸರ್ಕಾರದಲ್ಲಿ ಭಂಡಾರಿಯಾಗಿದ್ದರು ಎಂಬುದು ಪ್ರಚಲಿತ ಸತ್ಯ. ಆದರೆ ಬಸವನ ಕಾಲಾನಂತರ ಅಂದರೆ ಕೇವಲ ಅರ್ಧ ಶತಮಾನದ ನಂತರ ಬರೆಯಲಾದ ಶಾಸನಗಳಲ್ಲಿ ಬಸವನಿಗೆ ದಂಣಾಯಕ ಎಂಬ ಬಿರುದನ್ನೇ ಹೆಚ್ಚು ಬಳಸಲಾಗಿದೆ ಎಂದು ಗಮನಿಸಿದಾಗ ೧೩ನೇ ಶತಮಾನದ ಬಸವದೇವರಾಜರಗಳೆ, ೧೪ನೇ ಶತಮಾನದ ಬಸವಪುರಾಣ, ೧೫ನೇ ಶತಮಾನದ ಶಿವತತ್ವಚಿಂತಾಮಣಿ, ೧೬ನೇ ಶತಮಾನದ ಸಿಂಗಿರಾಜಪುರಾಣಗಳ ವಿಭಿನ್ನ ಕಥೆಗಳು ಕಲಸುಮೇಲೋಗರವಾಗಿ ಬೇರೊಂದು ತೆರನ ನಿರೂಪಣೆಗೆ ಪಕ್ಕಾಗಿವೆ ಎಂಬುದರಲ್ಲಿ ಸಂಶಯವಿಲ್ಲ.

ಜಯಪ್ರಕಾಶರು ಈ ಕುರಿತಂತೆ ಆಳ ಸಂಶೋಧನೆ ನಡೆಸಿ ಲಭ್ಯವಿರುವ ಎಲ್ಲ ಮಾಹಿತಿ ಹಾಗೂ ಹೇಳಿಕೆಗಳನ್ನು ಎಳೆಎಳೆಯಾಗಿ ಬಿಡಿಸಿಡುತ್ತಾ ಸತ್ಯಕ್ಕೆ ಕನ್ನಡಿ ಹಿಡಿದಿದ್ದಾರೆ. ಅವರ ಪರಿಪೂರ್ಣ ಸಂಶೋಧನಾ ಕ್ರಮವನ್ನು ಸರಿಯಾಗಿ ಅಭ್ಯಸಿಸಿ ಅವರು ನೀಡಿರುವ ಪುರಾವೆ ಹಾಗೂ ವಾದಸರಣಿಯನ್ನು ಪುಟಕ್ಕಿಟ್ಟು ಪರೀಕ್ಷಿಸಿ ತಮ್ಮಲ್ಲಿರುವ ಪುರಾವೆಗಳಿಂದ ಅವರದನ್ನು ಶೂನ್ಯಗೊಳಿಸುವ ಅಥವಾ ಖಂಡಿಸುವ ಭಂಜಿಸುವ ಪ್ರಯತ್ನ ಮಾಡುವುದು ಬಿಟ್ಟು ಬೀದಿ ಜಗಳಕ್ಕೆ ತೊಡಗಿರುವವರು ಜೋರುದನಿಯಿಂದ ಸುಳ್ಳನ್ನು ಸತ್ಯವಾಗಿಸ ಹೊರಟಿದ್ದಾರೆ.

ನಮ್ಮ ಸಮಾಜದ ಒಂದು ವರ್ಗವು ತಾವೇ ವಿದ್ಯಾವಂತರೆಂದೂ ಸಮಾಜವನ್ನು ಮುನ್ನಡೆಸುವರೆಂದೂ ಸಾಮಾಜಿ ಬದಲಾವಣೆಗಳಲ್ಲಿ ತಾವೇ ನಿರ್ಣಾಯಕರಂದೂ ಭಾವಿಸಿಕೊಳ್ಳುವ ಪರಿಪಾಠವನ್ನು ರಕ್ತಗತವಾಗಿ ಪಡೆದಿವೆ. ಇತರ ವರ್ಗಗಳು ಈ ತರ್ಕವನ್ನು ಬಹುಮಟ್ಟಿಗೆ ಪೋಷಿಸಿಕೊಂಡೇ ಬಂದಿವೆ. ಬಸವ ಬ್ರಾಹ್ಮಣಸಂಜಾತ ಎಂಬ ಸ್ಥಾಪಿತ ತರ್ಕವನ್ನು ಬಲವಾಗಿ ಬೇರೂರಿಸುತ್ತಾ ಬಂದಿರುವ ಈ ಅಯ್ಯಗಳಿಗೆ ಒಮ್ಮೆಲೇ ಆತ ದಲಿತ ಸಂಜಾತನೆಂದು ಹೇಳಿದರೆ ಅಪಥ್ಯವಾಗದೇ ಇದ್ದೀತೇ?

ಉದಾಹರಣೆಗೆ ಹಕ್ಕಬುಕ್ಕರೆಂಬ ಸಾಮಾನ್ಯ ಕೃಷಿಕರು ಅಥವಾ ಕುರುಬರು ಪುಂಡರ ವಿರುದ್ಧ ಸೆಣಸಲು ತಮ್ಮದೇ ಸೈನ್ಯ ಕಟ್ಟಿ ಅನಂತರ ಅದು ರಾಜ್ಯವಾದುದಕ್ಕೆ ವಿದ್ಯಾರಣ್ಯರೆಂಬ ಬ್ರಾಹ್ಮಣರೇ ಕಾರಣರೆಂದೂ, ಚಲಿಕೆಪ್ಪ ಗುದ್ಲೆಪ್ಪರಂಥ ರೈತರು ಚಾಲುಕ್ಯ ರಾಜ್ಯ ಕಟ್ಟಿ ಆಳಿದ್ದಕ್ಕೂ ಅಂತದೇ ಒಂದು ದೈವೀ ನಾಂದಿಯನ್ನು ತಳುಕುಹಾಕಿದ್ದನ್ನೇ ನಮ್ಮ ಪಠ್ಯಪುಸ್ತಗಳಲ್ಲಿ ಓದಿದ್ದೇವೆ. ಸಳನೆಂಬ ವೀರನು ಕೆಚ್ಚೆದೆಯಿಂದ ಹುಲಿಯೊಂದಿಗೆ ಹೋರಾಡಿ ನಂತರ ಕಟ್ಟಿದ ಹೊಯ್ಸಳ ಸಾಮ್ರಾಜ್ಯಕ್ಕೆ ಪ್ರೇರಣೆಯಿತ್ತವರೂ ಬ್ರಾಹ್ಮಣರಂಥ ಉಚ್ಚಕುಲದವರೆಂಬ ಸುಳಿವಿನಲ್ಲೂ ಈ ಅಂಶ ದೃಢವಾಗುತ್ತದೆ.

“(ಮಹಾಭಾರತ ಬರೆದ) ವ್ಯಾಸ ಬೆಸ್ತರ ಕುಲದವನು, (ರಾಮಾಯಣ ಬರೆದ) ವಾಲ್ಮೀಕಿ ಬೇಡರ ಕುಲದವನು ಎಂದು ಸಾಂಸ್ಕೃತಿಕ ಅಧ್ಯಯನಗಳ ಆಧಾರದಲ್ಲಿ ಈಗ ಹಲವಾರು ಸಂಸ್ಕೃತಿ ಚಿಂತಕರು ಸೂಚಿಸುತ್ತಿದ್ದಾರಾದರೂ ಅದು ನಿಜವಲ್ಲವೆಂಬಂತೆ ವಾದಿಸುವ ಅಥವಾ ಪ್ರತಿಪಾದಿಸುವ ಸಂಸ್ಕೃತಿತಜ್ಞರು ಈಗಲೂ ಇದ್ದಾರೆ. ಅದಕ್ಕೆ ಅವರು ಸೂಚಿಸುವ ಸರಳ ಸಾಕ್ಷ್ಯಾಧಾರವೆಂದರೆ, ಸಂಸ್ಕೃತವೆನ್ನುವುದು ಬ್ರಾಹ್ಮಣರಿಗೆ ಮೀಸಲಾದ ಭಾಷೆಯಾಗಿತ್ತಾದ್ದರಿಂದ ಸಂಸ್ಕೃತದಲ್ಲಿ ಎರಡು ಮಹಾಕಾವ್ಯಗಳನ್ನು ಬರೆಯಲು ಬ್ರಾಹ್ಮಣೇತರರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ವ್ಯಾಸ ಮತ್ತು ವಾಲ್ಮೀಕಿ ಇಬ್ಬರೂ ಬ್ರಾಹ್ಮಣರೇ ಇರಬೇಕು. ಹೆಚ್ಚಿನ ಪರಿಶೀಲನೆಗೆ ಹೋಗದೆ ಈ ಸಾಕ್ಷ್ಯಾಧಾರವನ್ನು ಗಮನಿಸಿದರೆ ಇದು ನಂಬಬಹುದಾದ ವಾಸ್ತವವೆಂಬಂತೆಯೇ ಕಾಣುತ್ತದೆ. ಆದ್ದರಿಂದ ಆ ಬಗೆಯ ಪ್ರತೀತಿಯೇ ವಾಸ್ತವ ಸತ್ಯವೆಂಬ ದಿರಿಸಿನಲ್ಲಿ ಜನಮನ್ನಣೆ ಪಡೆಯುತ್ತದೆ.” (ಬಂಜಗೆರೆ ಜಯಪ್ರಕಾಶ, ಆನುದೇವಾ ಹೊರಗಣವನು, ಪುಟ ೧೨, ಲಕ್ಷ್ಮೀ ಪ್ರಕಾಶನ,ಬೆಂಗಳೂರು ೨೦೦೭)

ಈ ಒಂದು ಬೌದ್ಧಿಕ ದಾಸ್ಯವನ್ನು ತೊಡೆದು ಹಾಕಲು ಬಸವಣ್ಣ ಪ್ರಯತ್ನಿಸಿದಾಗ ಅಂದಿನ ಸಮಾಜದ ಎಲ್ಲ ಪ್ರಗತಿಪರರೂ ಅವರೊಂದಿಗೆ ಕೈಜೋಡಿಸಿದರು. ಆ ಶರಣ ಚಳವಳಿಯ ಮೂಲಸ್ರೋತವು ವೇದವಿರೋಧೀ ಹಾಗೂ ವರ್ಣಭೇದವಿರೋಧೀ ಆಗಿತ್ತು.

“ಹನ್ನೆರಡನೇ ಶತಮಾನದ ತರುವಾಯ ಶರಣಧರ್ಮ ಕೆರೆಯ ಪದ್ಮರಸ, ಮಗ್ಗೆಯ ಮಾಯಿದೇವ, ಗುಬ್ಬಿಯ ಮಲ್ಲಣ್ಣರಿಂದಾಗಿ ವೇದಗಮಮುಖಿಯಾಗುತ್ತಾ ಬಂದಿದ್ದಿತು …” (ಎಂ ಎಂ ಕಲಬುರ್ಗಿ, ಮಾರ್ಗ ೪, ಪುಟ ೩೨೧, ಸಪ್ನ ಬುಕ್ ಹೌಸ್, ಬೆಂಗಳೂರು, ೨೦೦೪) ಎಂಬ ಅಭಿಪ್ರಾಯವನ್ನು ಉಲ್ಲೇಖಿಸುತ್ತಾ ಜಯಪ್ರಕಾಶರು ಆರ್ ಎನ್ ನಂದಿಯವರ ಅಭಿಪ್ರಾಯವನ್ನೂ ನಮಗೆ ನೀಡುತ್ತಾರೆ. “ಸುಪ್ರಸಿದ್ಧ ‘ಬಸವಪುರಾಣ’ವನ್ನು ಬರೆದ ಭೀಮಕವಿ ಹದಿನಾಲ್ಕನೇ ಶತಮಾನದ ಸ್ಮಾರ್ತ ಪಂಡಿತನು ಹೌದು, ‘ಪ್ರಭುಲಿಂಗಲೀಲೆ’ಯನ್ನು ಬರೆದ ಚಾಮರಸ ಆರಾಧ್ಯ ಬ್ರಾಹ್ಮಣನಾಗಿದ್ದನು … ವೀರಶೈವ ಚಳವಳಿಯನ್ನು ಸೇರಿದ ಸ್ಮಾರ್ತ ಬ್ರಾಹ್ಮಣರು ತಮ್ಮ ಶ್ರೇಷ್ಠತೆಯನ್ನು ಪ್ರತಿಪಾದಿಸುವುದಲ್ಲದೆ ಧರ್ಮದ ಇತರ ಬ್ರಾಹ್ಮಣೇತರ ಸದಸ್ಯರ ಜೊತೆಗೆ ತಮ್ಮ ಉನ್ನತ ಸ್ಥಾನಮಾನಗಳನ್ನು ಹಂಚಿಕೊಳ್ಳಲೂ ಹಿಂಜರಿದರು. ವಚನಕಾರರು ಭ್ರಾತೃತ್ವ ಸಮಾನತೆಯನ್ನು ಪ್ರತಿಪಾದಿಸಿದರೂ ಬಹುತೇಕ ವೀರಶೈವ ಕೃತಿಗಳು ಬ್ರಾಹ್ಮಣ ಪ್ರತಿಪಾದಿತ ಜಾತಿಶ್ರೇಣಿಗೆ ವಿಧೇಯತೆಯನ್ನು ಉಪದೇಶಿಸುತ್ತವೆ. ಕರ್ನಾಟಕದಲ್ಲಿ ಈ ರೀತಿಯಾಗಿ ವರ್ಣಾಶ್ರಮ ಪ್ರಕಾರ ಪುನಾರಚನೆಗೊಂಡ ಶೈವ ಸಮುದಾಯವು ದೈವೀಪ್ರೇರಿತವಾದುದೆಂದು ಭೀಮಕವಿ ಒತ್ತಿ ಹೇಳುತ್ತಾನೆ.” (ಆರ್ ಎನ್ ನಂದಿ, ಬಸವಣ್ಣನ ವಚನಗಳು – ಸಾಂಸ್ಕೃತಿಕ ಮುಖಾಮುಖಿ, ಪುಟ ೭, ಕನ್ನಡ ವಿ ವಿ , ಹಂಪಿ, ೨೦೦೪)

“ಬ್ರಾಹ್ಮಣರ ಈ ಮನೋಭಾವವೇ ಬಸವಣ್ಣನಿಗೆ ಅಂಟಿಸಿದ ಜಾತಿಸೂಚನೆಯಲ್ಲಿ ಅಡಗಿದೆ ಎಂದು ಭಾವಿಸಬಹುದು…(ಏಕೆಂದರೆ) ಸತ್ಯವನ್ನು ಪ್ರತಿಪಾದಿಸುವುದಕ್ಕಿಂತ ಹಿತಾಸಕ್ತಿಯನ್ನು ಪ್ರತಿಪಾದಿಸುವುದು ಇತಿಹಾಸ ರಚನೆಯಲ್ಲಿ ಹಲವಾರು ಕಡೆ ಕಂಡುಬರುತ್ತದೆಯಾದ್ದರಿಂದ ತಮ್ಮ ಜಾತಿ ಶ್ರೇಷ್ಠತೆಯ ಬಗ್ಗೆ ಅಭಿಮಾನವುಳ್ಳ ಸ್ಮಾರ್ತ, ಆರಾಧ್ಯ ಬ್ರಾಹ್ಮಣರು ತಮ್ಮಂತೆಯೇ ಬಸವಣ್ಣನನ್ನು ಕಲ್ಪಿಸಿಕೊಂಡದ್ದು ಹೆಚ್ಚು ಸಹಜವಾದುದಾಗಿದೆ…ಲಿಂಗಾಯತ ಪಂಥದೊಳಗೆ ಭದ್ರ ತಳಪಾಯ ಕಲ್ಪಿಸಿಕೊಳ್ಳುವ ಅಗತ್ಯದಿಂದ ಆ ಚಳವಳಿಯ ನೇತಾರ ಬಸವಣ್ಣನೂ ಕೂಡ ಜನಿವಾರವನ್ನು ಕಿತ್ತುಹಾಕಿದ ಬ್ರಾಹ್ಮಣನಾಗಿದ್ದ ಎಂಬ ಕವಿಕಲ್ಪನೆಯು ಆ ಪಂಥದೊಂದಿಗೆ ಹೆಚ್ಚಿನ ಸಕೀಲ ಸಂಬಂಧವನ್ನು ಒದಗಿಸಿಕೊಡುತ್ತದೆ. (ಏಕೆಂದರೆ ಬಸವನ ಸಮಕಾಲೀನರಲ್ಲಿ ಇವನು ಇಂಥವ ಇಂಥ ವಂಶದವ ಎಂದು ಸೂಚಿಸುವ ಪರಿಪಾಠವಿರಲಿಲ್ಲ.) ಶರಣತತ್ವ ಪ್ರತಿಪಾದಿಸುವವರು ತಮ್ಮ ಜಾತಿ ಹಿನ್ನೆಲೆಗಳ ಶ್ರೇಷ್ಠತೆಯನ್ನು ಕೈಬಿಟ್ಟು ಶಿವಭಕ್ತರಾಗಿ ಪ್ರಾಚುರ್ಯ ಹೊಂದಲು ಹೆಚ್ಚು ಪ್ರಯತ್ನಿಸುವ ಸಾಂಸ್ಕೃತಿಕ ಮನೋಸ್ಥಿತಿಯವರಾಗಿದ್ದರು. ಆ ನಂತರದ ದಿನಗಳಲ್ಲಿ ತಾವು ಧಿಕ್ಕರಿಸುತ್ತಿದ್ದ ಬ್ರಾಹ್ಮಣಶಾಹಿಯನ್ನು ಸ್ವತಃ ಅದೇ ಜಾತಿಯಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ಧಿಕ್ಕರಿಸಿದ ಎಂಬ ರಮ್ಯ ಕಲ್ಪನೆಯನ್ನು ಜನರಲ್ಲಿ ತೇಲಿಬಿಟ್ಟಿರಬೇಕು.” (ಬಂಜಗೆರೆ ಜಯಪ್ರಕಾಶ, ಆನುದೇವಾ ಹೊರಗಣವನು, ಪುಟ ೩೧-೩೨, ಮೇಲಿನಂತೆ)

‹ ಕನ್ನಡದ ಸೊಗಡು, ಉಲಿ, ಬರೆಪು, ಒರೆಗಳು ಸಂಸ್ಕೃತಕ್ಕೆ ಜೈಜೈ!! ಕನ್ನಡಕ್ಕೆ ಬೈಬೈ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 2245 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 15, 2007 - 11:31pm — santoshgs

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

santoshgs's picture

ತುಂಬಾ ಚೆನ್ನಾಗಿ ಬರೆದಿದ್ದೀರಾ. ನಾನು ಈ ವಿಷಯದ ಬಗ್ಗೆ ಪೇಪರ್ ನಲ್ಲಿ ತುಂಬಾ ಓದಿದ್ದೆ. ಈಗ ನೀವು ಬರೆದ ಮೇಲೆ ಈ ಪುಸ್ತಕವನ್ನು ಓದಲೇ ಬೇಕೆನಿಸುತ್ತಿದೆ. ಆಮೇಲೆ ನನ್ನ ಅಭಿಪ್ರಾಯ ಬರೆಯುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 4:01pm — sb1966

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

sb1966's picture

ನಿಮ್ಮ ಬರಹ ಒಪ್ಪಿಕೊಳ್ಳತಕ್ಕದ್ದು. ಮೊದಲನೆಯದು, ಲೇಖಕರು ತಮ್ಮ ವಿಚಾರಗಳನ್ನು ವಿವರವಾದ ಆಧಾರಗಳೊಂದಿಗ ಕೊಟ್ಟಿರುವಾಗ ಅದನ್ನು ಓದಿ ನಂತರ ಆ ವಿಷಯದ ಬಗ್ಗೆ ಚರ್ಚೆ, ವಾದ, ವಿವಾದಗಳನ್ನು ಮಾಡುವುದು ಒಳ್ಳೆಯದು. ಅಲ್ಲದೆ ಲೇಖಕರು ತಮ್ಮ ವಿಚಾರವನ್ನು ಮಂಡಿಸಿದ್ದಾರೆಯೇ ಹೊರತು ಅದನ್ನು ಒಪ್ಪಿಕೊಳ್ಳುವುದು ಬಿಡುವುದು ಓದುವವರಿಗೆ ಬಿಟ್ಟದ್ದು. ಕೆಲವು ಆಧಾರಗಳೊಂದಿಗ ಯಾರಾದರೂ ವಿಷಯವನ್ನು ತಿಳಿಸಿದಾಗ ನಮ್ಮ ತಿಳುವಳಿಕೆ ಹಾಗೂ ಆಧಾರಗಳ ಮೇಲೆ ಅದನ್ನು ಒಪ್ಪುವುದು ಬಿಡುವುದು ವ್ಯಕ್ತಿಗತ ವಿಚಾರ. ಕೇವಲ ಪ್ರಚಾರಕ್ಕಾಗಿ ವಿವಾದಗಳನ್ನು ಹುಟ್ಟುಹಾಕಿ, ಅದರಿಂದ ಹೆಸರುಗಳಿಸುವವರಿಂದ ದೂರವಿರುವುದು ಉತ್ತಮ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 12:47am — mahesha

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

mahesha's picture

“(ಮಹಾಭಾರತ ಬರೆದ) ವ್ಯಾಸ ಬೆಸ್ತರ ಕುಲದವನು, (ರಾಮಾಯಣ ಬರೆದ) ವಾಲ್ಮೀಕಿ ಬೇಡರ ಕುಲದವನು ಎಂದು ಸಾಂಸ್ಕೃತಿಕ ಅಧ್ಯಯನಗಳ ಆಧಾರದಲ್ಲಿ ಈಗ ಹಲವಾರು ಸಂಸ್ಕೃತಿ ಚಿಂತಕರು ಸೂಚಿಸುತ್ತಿದ್ದಾರಾದರೂ ಅದು ನಿಜವಲ್ಲವೆಂಬಂತೆ ವಾದಿಸುವ ಅಥವಾ ಪ್ರತಿಪಾದಿಸುವ ಸಂಸ್ಕೃತಿತಜ್ಞರು ಈಗಲೂ ಇದ್ದಾರೆ.
ಅದಕ್ಕೆ ಅವರು ಸೂಚಿಸುವ ಸರಳ ಸಾಕ್ಷ್ಯಾಧಾರವೆಂದರೆ, ಸಂಸ್ಕೃತವೆನ್ನುವುದು ಬ್ರಾಹ್ಮಣರಿಗೆ ಮೀಸಲಾದ ಭಾಷೆಯಾಗಿತ್ತಾದ್ದರಿಂದ ಸಂಸ್ಕೃತದಲ್ಲಿ ಎರಡು ಮಹಾಕಾವ್ಯಗಳನ್ನು ಬರೆಯಲು ಬ್ರಾಹ್ಮಣೇತರರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ವ್ಯಾಸ ಮತ್ತು ವಾಲ್ಮೀಕಿ ಇಬ್ಬರೂ ಬ್ರಾಹ್ಮಣರೇ ಇರಬೇಕು. ಹೆಚ್ಚಿನ ಪರಿಶೀಲನೆಗೆ ಹೋಗದೆ ಈ ಸಾಕ್ಷ್ಯಾಧಾರವನ್ನು ಗಮನಿಸಿದರೆ ಇದು ನಂಬಬಹುದಾದ ವಾಸ್ತವವೆಂಬಂತೆಯೇ ಕಾಣುತ್ತದೆ

ಈ ಹೇಳಿಕೆಗಳು ಅನಿತು ಸರಿಯಿಲ್ಲ. ಓಸುಗರ/ಕಾರಣಗಳು!

೧) ಮಹಾಭಾರತ(ವ್ಯಾಸ), ಮತ್ತು ರಾಮಾಯಣ(ವಾಲ್ಮೀಕಿ) ಇವು ’ಸಂಸ್ಕೃತ’ದಲ್ಲಿಲ್ಲ( ಅಂದರೆ ಪಾಣಿನಿ ಸಂಸ್ಕೃತದಲ್ಲಿಲ್ಲ ). ಇವು ಇರುವುದು ವೇದ-ನುಡಿಯಲ್ಲಿ(ವೇದ ಸಂಸ್ಕೃತ). ವೇದ- ನುಡಿ/ಸಂಸ್ಕೃತ ಮಾಮೂಲಿ ಮಂದಿಯ ಆಡು ನುಡಿಯಾಗಿತ್ತು, ಆ ಕಾಲದ ವೈದಿಕ ಸಂಸ್ಕೃತಿಯ ನಾಲ್ಕೂ ವರ್ಣಗಳೂ ಒಂದೇ ಭಾಷೆಯನ್ನು ಆಡುತ್ತಿದ್ವವು. ಅದೂ ಅಲ್ಲದೇ ಮಹಾಭಾರತ, ರಾಮಾಯಣ, ವೇದದ ಕಾಲದಲ್ಲಿ ವರ್ಣಾಶ್ರಮ ಪದ್ದತಿ ಎಷ್ಟು ಬೇರೆಯಾಗಿತ್ತು ಅನ್ನುವುದಕ್ಕೆ ಕೌಶಿಕ, ವಿಶ್ವಾಮಿತ್ರ ಆದುದು ಸಾಕ್ಷಿ.

ಅಂದರೆ ಕಾಳಿದಾಸ, ಭಾಸ ನಾಟಕಗಳಲ್ಲಿ(classical ಸಂಸ್ಕೃತದ ಕೃತಿಗಳು) ಬರುವ ಪಾಕೃತ ಸಂಭಾಷಣೆಗಳಂತೆ ಮಹಾಭಾರತ/ರಾಮಾಯಣದಲ್ಲಿ ಇಲ್ಲ ಅಲ್ವಾ!!( ನಾನು ಪೂರ ರಾಮಾಯಣ, ಮಹಾಭಾರತ ಓದಿಲ್ಲ, ಆದರೆ ಈ ಸಂಗತಿ ಓದಿಕೊಂಡಿದ್ದೇನೆ )

ವ್ಯಾಸನ ಬಗ್ಗೆ ಹೇಳಬೇಕೆಂದರೆ ಅವನು ಬ್ರಾಹ್ಮಣನೇ, ಕಾರಣ ಅವನಪ್ಪ ಬ್ರಾಹ್ಮಣ. ಅದೂ ಅಲ್ಲದೇ, ಹುಡುಗನಾಗಿದ್ದಾಗಲೇ, ಪರಾಶರನು ವ್ಯಾಸನನ್ನು ತನ್ನ ಜೊತೆ ಕರೆದೊಯ್ದು, ವೇದೋಪನಿತ್ತುಗಳ ಪಾಠ ಹೇಳಿಕೊಟ್ಟಿರುತ್ತಾನೆ.

ಇದಕ್ಕೆ ಈ ಶ್ಲೋಕ ನೋಡಿ!!
ವ್ಯಾಸಂ ವಸಿಷ್ಠ-ನಫ್ತಾರಂ ಶಕ್ತೇಃ ಪೌತ್ರಮಕಲ್ಮಶಂ
ಪರಾಶರಾತ್ಮಜಂ ವಂದೇ ಶುಕ-ತಾತಂ ತಪೋ ನಿಧಿಂ|| ( ಇದು ಮಹಾಭಾರತದ ಶ್ಲೋಕ, ಇದನ್ನು ವಿಷ್ಣುಸಹಸ್ರನಾಮದಲ್ಲಿ ಹೇಳುವ ರೂಢಿಯುಂಟು)

ವಸಿಷ್ಠನ ಮರಿಮಗನು, ಶಕ್ತಿಯ ಮೊಮ್ಮಗನೂ, ಪರಾಶರನ ಮಗನೂ, ಶುಕನ ತಂದೆಯೂ, ತಪೋನಿಧಿ( ತಪದಿಂದ ಸಿರಿಪಡೆದವನು)ಯು, ಅಕಲ್ಮಶನು ಆದ ವ್ಯಾಸನನ್ನು ವಂದಿಸುವೆ!
ಇಲ್ಲಿ ವಸಿಷ್ಠ, ಶಕ್ತಿ, ಪರಾಶರ ಇವರೆಲ್ಲರೂ ಬ್ರಾಹ್ಮಣರೇ ಹಾಗೇ ವ್ಯಾಸ ಮತ್ತು ಶುಕರು.

ವಾಲ್ಮೀಕಿ ಬಗ್ಗೆ ಹೆಚ್ಚು ತಿಳಿದಿಲ್ಲ. ವಾಲ್ಮೀಕಿಗೆ ಭರದ್ವಾಜ(ಭಾರದ್ವಾಜ?) ಎಂಬ ಇನ್ನೊಂದು ಹೆಸರಿದೆ ಅಲ್ವಾ?
===========================================================
ವಾಲ್ಮೀಕಿ, ವ್ಯಾಸ, ಕಾಳಿದಾಸ ಇವರ ಜಾತಿಯನ್ನು ಕೆದುಕಲು ಶುರು ಹಚ್ಚಿದ್ದಾರೆ. ಆದರೆ ವಾಲ್ಮೀಕಿ, ವ್ಯಾಸ, ಕಾಳಿದಾಸ ಅನ್ನುವ ಒಬ್ಬನೇ ವ್ಯಕ್ತಿ ಇದ್ದನೋ, ಇಲ್ಲವೇ, ಹಲವು ಮಂದಿ ಅದೇ ಹೆಸರಲ್ಲಿ( ಒಂದು ಪದವಿ ತರಹ ) ಇದ್ದರೋ ಎಂಬ ವಾದವೂ ಇದೆ.

ಸಂಸ್ಕೃತ ಬರೀ ಬ್ರಾಹ್ಮಣರ ಭಾಷೆ ಎನ್ನುವ ಮಾತು ಬಲು ತಪ್ಪು!! ಉತ್ತರ ಭಾರತದಲ್ಲಿ ನಾಲ್ಕು ವರ್ಣದವರೂ ಮಾತಾಡುವುದು ಹಿಂದಿ ಆದರೇ, ತಮ್ಮ ಧಾರ್ಮಿಕ ಕ್ರಿಯೆಗೆ ಸಂಸ್ಕೃತವನ್ನೇ ಬಳಸುವುದು.

ಸಂಸ್ಕೃತದ ಸಾಹಿತ್ಯದಲ್ಲಿ ಬೌದ್ಧರ, ಜೈನ ಕೊಡುಗೆಯೂ ತಕ್ಕ ಮಟ್ಟಿಗಿದೆ ಎಂದು ಓದಿದ್ದೇನೆ. ಅದೂ ಅಲ್ಲದೇ ಕೃಷ್ಣದೇವರಾಯ( ಇವನು ಬ್ರಾಹ್ಮಣನಲ್ಲವಲ್ಲ ) ಒಂದು ಸಂಸ್ಕೃತ ಕಾವ್ಯವನ್ನು ಬರೆದಿದ್ದನು. ಹಾಗೆ ದುರ್ವಿನಿತ ಕೂಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 7:26pm — Aram

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

Aram's picture

ಮಾನ್ಯ ಜೋಸೆಫ್ ರೇ:

ನಿಮ್ಮ ಪಾಂಡಿತ್ಯಪೂರ್ಣ ಲೇಖನಕ್ಕೆ ಮೆಚ್ಚುಗೆಗಳು.

ಮಹಾನುಭಾವ ಬಸವಣ್ಣನವರು ಹೇಳಿದ ವಚನಗಳು, ಪ್ರತಿಪಾದಿಸಿದ ವಿಚಾರಗಳು ಮುಖ್ಯವೇ ಹೊರತು ಅವರ ಹುಟ್ಟಿನ ಗುಟ್ಟು ಅವರ ಉದ್ಯೋಗ, ಬದುಕು, ಇತ್ಯಾದಿಗಳೆಲ್ಲವೂ ಗೌಣ ಎಂದು ನನ್ನ ನಂಬಿಕೆ.

ಜಗಜ್ಯೋತಿ ಎನಿಸಿದ ಅವರು ಹತ್ತಿಸಿದ ಜ್ಯೋತಿಗೆ ಜಾತಿ ಬೇರೆ ಉಂಟೇ?

ವಿಚಾರವಂತರ ಯುಗವೆನಿಸಿದ ಈ ಕಾಲದಲ್ಲೂ ಇಂತಹ ಕೋಳಿಜಗಳಗಳೇಕೆ ಹುಟ್ಟುತ್ತಲಿವೆ ಎಂಬುದು ಕುತೂಹಲಕಾರಿ ವಿಷಯ.

ಇದು ಕೇವಲ ಕರ್ನಾಟಕ ಮಾತ್ರವಲ್ಲ ಜಾಗತಿಕವಾಗಿಯೂ ನಡೆಯುತ್ತಿರುವುದು ನೋಡಿದರೆ ಇದು ಕಾಲನ ಮಹಿಮೆಯೇ ಸರಿ ಎನಿಸುತ್ತದೆ.

Dan Brown ಬರೆದ The Da Vinci Code, Michael Baigent ನ Holy Blood, Holy Grail ಗಳ ಬಗ್ಗೆ ಕ್ರಿಸ್ತಾನುಯಾಯಿಯಾದ ನಿಮ್ಮ ಅನಿಸಿಕೆ ಗಳನ್ನು ಕೇಳಲು ಉತ್ಸುಕನಾಗಿದ್ದೇನೆ. - ಆರಾಮ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 7:39pm — jaiguruji

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

jaiguruji's picture

Aram,

ನಿಮ್ಮ ಲಿಸ್ಟಿಗೆ Dead Sea Scrolls ಕೂಡ ಸೇರಿಸಬಹುದು ! ಇದು ಎರಡು ಕಡೆ ಚೂಪಾಗಿರುವ ಕತ್ತಿ, ಹೀಗಾಗಿ ಬಹಳ ಹುಶಾರಾಗಿರಬೇಕು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 8:49pm — Aram

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

Aram's picture

ಗುರೂಜೀ ಕೀ ಜೈ !

ಹುಟ್ಟಿನಿಂದ ಹಿಂದೂ ಆಗಿದ್ದರೂ ದೇವಪುತ್ರ ಯೇಸುವಿನ ಉಪದೇಶಗಳನ್ನು ಮೆಚ್ಚುತ್ತೇನೆ, ಮಾತ್ರವಲ್ಲ churchಗೂ ಹೋಗಿದ್ದೇನೆ.

ಹಾಗೆಯೇ ಹಿಂದುಸ್ತಾನೀ ಸಂಗೀತಪ್ರೇಮಿಯಾಗಿ ಸಂಗ್ರಹಿಸಿದ ನೂರಾರು tape, CD ಗಳಲ್ಲಿ ಬಹುಭಾಗ ಮುಸ್ಲಿಂ ಉಸ್ತಾದರದ್ದೇ.

ಉಸ್ತಾದ್ ಆಮೀರ್ ಖಾನ್ ರ "ಜಿನ ಕೇ ಮನ ರಾಮ ವಿರಾಜೇ... " ಹಾಗೆಯೇ, ಪಂಡಿತ್ ಭೀಮ್ ಸೇನ್ ಜೋಶಿಯವರ "ಕರೀಮ ನಾಮ ತೇರೋ...," "ತೂ ಹೈ ಮುಹಮ್ಮದ ಶಾ ದರಬಾರೇ ನಿಜಾಮುದೀನ ಔಲಿಯಾ....," ಉಸ್ತಾದ್ ರಾಶೀದ್ ಖಾನ್ ರ "ಕಾನಾ ರೇ ನಂದ ನಂದನ ಹೇ ದು:ಖ ಭಂಜನ ಅಲಕ ನಿರಂಜನ.." ಎಂಬ ಹಾಡುಗಳಿಂದ ಪ್ರಭಾವಿತನಾಗಿದ್ದೇನೆ.

ಕನಕದಾಸರ "ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ?" ಎಂಬ ಹಾಡು, SLB ಯವರ ವಂಶವ್ರಕ್ಶದ ಕಥೆಯ ಶ್ರೋತ್ರೀಯರ ಹುಟ್ಟಿನ ಗುಟ್ಟು ನೆನಪಾಗುತ್ತದೆ. ಹಾಗೆಯೇ, ಇಂದಿನ anglo-indians, ಹಾಗೂ ಇತರ ಧರ್ಮೀಯರ ಪೂರ್ವಜರ ಮೂಲ ಜಾತಿ ಯಾವುದು ಎನಿಸುತ್ತದೆ. ವರ್ಣಸಂಕರ......

ಹಿಂದೂಗಳ ಹಾಗೆ ಅನೇಕ ದೇವರುಗಳನ್ನು ಪೂಜಿಸದೇ, ದೇವಪುತ್ರನೊಬ್ಬನನ್ನೇ ನಂಬುವವರಲ್ಲೂ ಮರಣಾಂತಿಕ ಭೇದಭಾವಗಳಿರುವುದನ್ನು ನೋಡಿ ಆಶ್ಚರ್ಯ ಪಟ್ಟಿದ್ದೇನೆ. -- catholic vs. protestant, sunni vs. shia, ಯಾದವೀಕಲಹಗಳನ್ನೆಲ್ಲಾ ನೋಡಿದರೆ ಮನುಷ್ಯನಿಗೆ ಜಗಳ ಕಾಯಲು ನೆಪ ಯಾವುದೂ ಆಗುತ್ತದೆ ಎನಿಸುತ್ತದೆ.

Dead Sea Scrolls ಬಗ್ಗೆ ಹೆಚ್ಚು ಹೇಳುವಿರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2007 - 1:47am — hpn

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

hpn's picture

ಹೆ ಹೆ. ಬಹಳ ಒಳ್ಳೆಯ ಕಾಮೆಂಟ್ ಇದು. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2007 - 3:04pm — jaiguruji

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

jaiguruji's picture

Dead Sea Scrolls ಹೆಸರು ಕೇಳಿದರೆ ಸಾಕು ಇವತ್ತಿಗೂ ಉರಿದು ಬೀಳುವ ಕ್ರಿಶ್ಚಿಯನ್ ರಿದ್ದಾರೆ. ಅದರ ಬಗ್ಗೆ ಎಷ್ಟೊಂದು theoryಗಳು ಬಂದಿವೆ ಮತ್ತು ಪರ-ವಿರೋಧ ವ್ಯಕ್ತವಾಗಿದೆಯೆಂದರೆ ಅನೇಕ ಜನ ಕ್ರಿಶ್ಚಿಯನ್ ಬಾಂಧವರು ಅದರ ಬಗ್ಗೆ ಚರ್ಚೆಯನ್ನೆ ಬಯಸುವದಿಲ್ಲ!

Dead Sea Scrolls ಗೂಗಲ್ ಮಾಡಿ ಅಥವಾ http://en.wikipedia.org/wiki/Dead_Sea_Scrolls ಇಲ್ಲಿಂದ ಮುಂದೆ exlore ಮಾಡ್ತಾ ಹೋಗಿ. ತುಂಬಾ ಕುತೂಹಲಕಾರಿ ವಿಷಯವಿದೆ.

ಅದೇ ರೀತಿ ಇರುವದು ’ಜೀಸಸ್ ಸಮಾಧಿಯ ಕಥೆ’ : http://www.tombofjesus.com/2007/home.html

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 8:21pm — muralihr

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

muralihr's picture

ಎಲ್ಲಾ ಮಹಾ ಪುರುಷರ ಜಾತಿಯನ್ನು ತಿಳಿಸಿದ್ದೀರಿ.
ಅಲ್ಲಮ್ಮಾ , ಅಕ್ಕ ಮಹಾದೇವಿ ಆಮೇಲೆ ದಾಸಿಮಯ್ಯ ರವರ ಜಾತಿಯನ್ನು ತಿಳಿಸಿ ಬಿಡಿ.
ಸದ್ಯಕ್ಕೆ ಇಷ್ಟು ಸಾಕು ನಾಳೆ ಮತ್ತೊ೦ದು ದೊಡ್ದ ಪಟ್ಟಿ ಕೊಡುವೆ Smiling.

>> ಅದು ರಾಜ್ಯವಾದುದಕ್ಕೆ ವಿದ್ಯಾರಣ್ಯರೆಂಬ ಬ್ರಾಹ್ಮಣರೇ ಕಾರಣ -
ವಿದ್ಯಾರಣ್ಯ ಬ್ರಾಹ್ಮಣನಾಗಿದ್ದು ಅವನ ದುರಾದೃಷ್ಟ. "ಎಲ್ಲಾ ಕಾಲದಲ್ಲಿಯೂ ಸಕಲ ದಲಿತರನ್ನು ತುಳಿಯುವ ಕೆಲಸವನ್ನು ಬಿಟ್ಟು ಬೇರೆ ಯಾವುದೇ ಕೆಲಸವನ್ನು ಬ್ರಾಹ್ಮಣರು ಮಾಡಿಲ್ಲಾ" - ಎನ್ನುವ ಆಧುನಿಕ ಚರಿತ್ರೆಗೆ , ಎಲ್ಲಾ "ಬ್ರಾಹ್ಮಣ" "ಮಾಹಾ(??)" ಪುರುಷರ ಕುರಿತು ಅಧ್ಯಯನ ನಡೆಸಿ ಚರಿತ್ರೆಯನ್ನು ತಿದ್ದಿ "ಬ್ರಾಹ್ಮಣ" ದ್ವೇಷಿಗಳನ್ನು ಹುಟ್ಟು ಹಾಕುವ ಯೋಜನೆಗೆ ಸರ್ಕಾರವು ಬೆ೦ಬಲ ಕೊಟ್ಟು ಒ೦ದು ವಿಶ್ವ ವಿದ್ಯಾಲವನ್ನು ಕಟ್ಟಲಿ. ಕನ್ನಡ ಜಾತಿ ಸಾಹಿತ್ಯವು ಬೆಳೆಸುವ ಜಾತಿ ಸಾಹಿತಿ ಮ೦ದಿಗೆ ತರಬೇತಿಯನ್ನು ಕೊಟ್ಟು ಪುರಸ್ಕರಿಸಲಿ.
ಅದಕ್ಕೆ ಪೆರಿಯಾರ್ ಅ೦ತಲೋ ಇಲ್ಲಾ ಬೇರೆ ಯಾವುದಾದರೂ ಹೆಸರನ್ನು ಇಟ್ಟು ಇ೦ತಹ ಕುತೂಹಲಕಾರಿ ಸ೦ಶೋಧನೆಗಳನ್ನು ನಡೆಸಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 10:31pm — mahesha

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

mahesha's picture

ವಿದ್ಯಾರಣ್ಯ ಬ್ರಾಹ್ಮಣನಾಗಿದ್ದು ಅವನ ದುರಾದೃಷ್ಟ. "ಎಲ್ಲಾ ಕಾಲದಲ್ಲಿಯೂ ಸಕಲ ದಲಿತರನ್ನು ತುಳಿಯುವ ಕೆಲಸವನ್ನು ಬಿಟ್ಟು ಬೇರೆ ಯಾವುದೇ ಕೆಲಸವನ್ನು ಬ್ರಾಹ್ಮಣರು ಮಾಡಿಲ್ಲಾ" - ಎನ್ನುವ ಆಧುನಿಕ ಚರಿತ್ರೆಗೆ , ಎಲ್ಲಾ "ಬ್ರಾಹ್ಮಣ" "ಮಾಹಾ(??)" ಪುರುಷರ ಕುರಿತು ಅಧ್ಯಯನ ನಡೆಸಿ ಚರಿತ್ರೆಯನ್ನು ತಿದ್ದಿ "ಬ್ರಾಹ್ಮಣ" ದ್ವೇಷಿಗಳನ್ನು ಹುಟ್ಟು ಹಾಕುವ ಯೋಜನೆಗೆ ಸರ್ಕಾರವು ಬೆ೦ಬಲ ಕೊಟ್ಟು ಒ೦ದು ವಿಶ್ವ ವಿದ್ಯಾಲವನ್ನು ಕಟ್ಟಲಿ. ಕನ್ನಡ ಜಾತಿ ಸಾಹಿತ್ಯವು ಬೆಳೆಸುವ ಜಾತಿ ಸಾಹಿತಿ ಮ೦ದಿಗೆ ತರಬೇತಿಯನ್ನು ಕೊಟ್ಟು ಪುರಸ್ಕರಿಸಲಿ.
ಅದಕ್ಕೆ ಪೆರಿಯಾರ್ ಅ೦ತಲೋ ಇಲ್ಲಾ ಬೇರೆ ಯಾವುದಾದರೂ ಹೆಸರನ್ನು ಇಟ್ಟು ಇ೦ತಹ ಕುತೂಹಲಕಾರಿ ಸ೦ಶೋಧನೆಗಳನ್ನು ನಡೆಸಲಿ.

ಮುರುಳಿ ದೇವರು,

ಇದು ಅತಿಯಾಯಿತು. ನೀವು ಬರೆದುದು ತಮಾಷೆಯೆಂದಾದರೂ ಅದು ಅತಿಯೇ!!
ಏನು ವಿದ್ಯಾರಣ್ಣರ ಅದೃಷ್ಟದ ಬಗ್ಗೆ ಹೇಳೋದು?!!

ಏನು ಬ್ರಾಹ್ಮಣರು ಬಿಟ್ಟಿಗೆ ಬಿದ್ದಿದ್ದಾರ? ಕನ್ನಡ ಸಾಹಿತ್ಯವೂ, ಸಂಸ್ಕೃತ ಸಾಹಿತ್ಯವೋ, ಬಂಗಾಳಿಯೋ, ತೆಲುಗೋ, ತಮಿಳೋ, ಮುಂದಾದ ಭಾರತದ ಮುಖ್ಯ ನುಡಿಯೇ ಆಗಲಿ ಬ್ರಾಹ್ಮಣರ ಕೊಡುಗೆ ಎದ್ದು ಕಾಣುವುದು. ಇವಕ್ಕೆಲ್ಲ ಬ್ರಾಹ್ಮಣರು ಬೇಕಾ?

ಹಾಗಾದರೆ ಬ್ರಾಹ್ಮಣರು ಬರೆದ ಒಂದು ಹೊತ್ತಗೆಯನ್ನು ಓದಬೇಡಿರಿ. ಪ್ರಭುಲಿಂಗಲೀಲೆ, ಬಸವಪುರಾಣ, ಮುಂತಾದವನ್ನು ಬರೆದವನು ಸ್ಮಾರ್ಥ ಬ್ರಾಹ್ಮಣರಂತೆ. ಮಹಾಭಾರತ ಬರೆದ ವ್ಯಾಸ ಬ್ರಾಹ್ಮಣ, ನಮ್ಮ ಸಂವಿಧಾನ ರಚನಾ ಸಮಿತಿಯಲ್ಲೋ ಬ್ರಾಹ್ಮಣರಿದ್ದರು. ಹಾಗಾದರೆ ಮೀಸಲಾತಿ ತಂದ ಸಂವಿಧಾನವೂ ಅಪವಿತ್ರವೇ?

ಬಸವಣ್ಣರ ಹುಟ್ಟಿನ ವಿಚಾರ ಎತ್ತಿಕೊಂಡು ಬರೀ ಬ್ರಾಹ್ಮಣರನ್ನು ಬೈಯುವುದೇ ಆಯಿತು. ಅದರ ಗುರಿಯೇ ಬರೀ "ಬ್ರಹ್ಮದ್ವೇಷ"ವೇ?

ಈಗ ಬ್ರಾಹ್ಮಣರಿಗೆ ಯಾವ ಅಧಿಕಾರವೂ ಇಲ್ಲವಲ್ಲ. ಮತ್ತೇಕೆ ಅವರ ಗೊಡವೆ. ಈ ಬ್ರಾಹ್ಮಣರು ಎಲ್ಲದಕ್ಕೂ ಬೇಕು, ಉಗಿಸಿಕೊಳ್ಳಕ್ಕೂ ಬೇಕು. Sad !!

ಮಾದರಿಗೆ ಆವರಣ ಬರೆದವನೂ ಬ್ರಾಹ್ಮಣ, ಅದನ್ನು ಟೀಕಿಸಿ ಮಂದಿಯಿಂದ ಹಳಿಯಿಸಿಕೊಂಡವನೂ ಬ್ರಾಹ್ಮಣ. ಇದಕ್ಕಿಂತ ಮಾದರಿ ಇದೆಯೇ?
ಹಾಗೇ
ಕರ್ನಾಟಕ ಏಕೀಕರಣದ ಮೊದಲುಗಾರ ಆಲೂರು ವೆಂಕಟರಾಯನೂ ಬ್ರಾಹ್ಮಣ, ಹಾಗೆ ಕನ್ನಡವನ್ನು ಆಡಳಿತ ಭಾಷೆ-ಮಾಡಲು ಹೆಣಗಿದ ಗುಂಡೂರಾಯನೂ ಬ್ರಾಹ್ಮಣನೇ!!

ಎಲ್ಲ ಪಂಗಡದಲ್ಲೂ ಕೆಟ್ಟವರು ಒಳ್ಳೆಯವರು ಇರ್ತಾರಲ್ಲ!!

ಮುರುಳಿಯವರಂತೂ ಪೂರ ಬ್ರಾಹ್ಮಣರನ್ನೇ ಮೂಲವಸ್ತುವನ್ನಾಗಿ ಇಟ್ಟಿಕೊಂಡು ಬರೆದುಬಿಟ್ಟಿದ್ದಾರೆ.

ಮುರುಳಿ ದೇವರು,
"ಬಂಜೆಗೆರೆ/ ಬಸವಣ್ಣ" ಅತ್ತ ಗಮನ ಹರಿಸಿ.

ಬ್ರಾಹ್ಮಣರಿಗೆ ಇವರಿಬ್ಬರನ್ನು ಕಟ್ಟಿಕೊಂಡು ಏನು ಆಗಬೇಕಿಲ್ಲ!! ಅದಕ್ಕೆ ಯಾವ ಬ್ರಾಹ್ಮಣ ಸಂಘವೂ ಈ ಸಂಗತಿ ಮೂಗು ತೂರಿಸು ತಂಟೆಗೇ ಹೋಗಿಲ್ಲ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2007 - 12:15am — muralihr

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

muralihr's picture

ಬ್ರಾಹ್ಮಣರಿಗೆ ಇವರಿಬ್ಬರನ್ನು ಕಟ್ಟಿಕೊಂಡು ಏನು ಆಗಬೇಕಿಲ್ಲ!! ಅದಕ್ಕೆ ಯಾವ ಬ್ರಾಹ್ಮಣ ಸಂಘವೂ ಈ ಸಂಗತಿ ಮೂಗು ತೂರಿಸು ತಂಟೆಗೇ ಹೋಗಿಲ್ಲ.
ಏನು ವಿದ್ಯಾರಣ್ಣರ ಅದೃಷ್ಟದ ಬಗ್ಗೆ ಹೇಳೋದು?!!

>> ರೀ ಸ್ವಾಮಿ - ಕೋಪಿಸ್ಕೋ ಬೇಡಿ !!
ಒ೦ದು ವಚನವನ್ನು ಹೇಳಿ ನನ್ನ ಮಾತನ್ನು ಮು೦ದು ವರೆಸುತ್ತೇನೆ.

ಆರು ಬೆಟ್ಟವ ಹಾರಿದನೆ೦ದರೆ
ಹಾರಿದನೆ೦ದೆನಬೇಕು ಮೂರ್ಖರೊಳು
ಕಲಹವೇ ಸಲ್ಲ -

ಇಲ್ಲಿ "ವಿದ್ಯಾರಣ್ಣ" ಏನೂ ಕೆಲ್ಸ ಮಾಡಿಲ್ಲಾ ಸುಮ್ಮನೇ Credit ಮಾತ್ರ ತೆಗೆದುಕೊ೦ಡದ್ದು ಅನ್ನುವ ದನಿ ಇತ್ತು.
ಆ ದನಿಯ ಹಿ೦ದೆ ಆತ ಬ್ರಾಹ್ಮಣ ಅನ್ನುವ ಲೇಬಲ್ ಬೇರೆ. ವಿದ್ಯಾರಣ್ಣರಿಗೆ ಯಾರಿ೦ದಲೂ Certificate ಬೇಕಿರಲಿಲ್ಲಾ.
ಸುಮ್ಮನೇ ವಿದ್ಯಾರಣ್ಯರನ್ನು ಮತ್ತು ಅವರ ಜಾತಿಯನ್ನು ಇಲ್ಲಿ ತರುವ ಕೆಲ್ಸಾ ಇರಲಿಲ್ಲಾ.
ಮೊನ್ನೆ ಅವರು ಬರೆದಿರುವ ಸ೦ಗೀತ ಸಾರ ಓದುತ್ತಿದ್ದೆ. ಅವರಿಗೆ ರಾಜಕೀಯ ಎಕೆ ಬೇಕಿತ್ತು ??
ಅ೦ತಹ ವಿದ್ವಾ೦ಸರು ಮತ್ತು ಋಷಿಗಳಿಗೆ ಆತ ಏನೂ ಕೆಲ್ಸಾ ಮಾಡಿಲ್ಲಾ , ಆದರೆ ಚರಿತ್ರೆ ಬರೆದವರೂ ಆತ ಬ್ರಾಹ್ಮಣನಾದ ಕಾರಣಕ್ಕಾಗಿ
ಚರಿತ್ರೆಯಲ್ಲಿ ಸುಮ್ಮ ಸುಮ್ಮನೇ ಸೇರಿಸಿದ್ದಾರೆ. ಅವರ ಪಾತ್ರ ಏನೂ ಇರಲಿಲ್ಲಾ ಅ೦ದಾಗ ಎನು ಹೇಳೋಕ್ಕಾಗುತ್ತೆ.
ಸ್ವಲ್ಪ ಓದಿ ಅಧ್ಯಯನ ಮಾಡಿದ್ದರೆ ಏನಾದರೂ ಹೇಳಬಹುದು.

ನ೦ಗೆ ಎಲ್ಲ ವಾದದಲ್ಲೂ ಬ್ರಾಹ್ಮಣರನ್ನು ವಿನಾಕಾರಣ ತುರುಕಿ ರಗಳೆ ಮಾಡುವ ಇ೦ತಹ ಬರಹಗಳನ್ನು ಕ೦ಡು ಬೇಜಾರಾಗಿ ಈ ರೀತಿ ಬರೆದೆ. ಅಲ್ಲಾ ಯಾವುದೇ ಕೆಲ್ಸಾ ಮಾಡಲಿ "ಬ್ರಾಹ್ಮಣ" ಅ೦ದು ಹಳದಿ ಕಣ್ಣಿನಿ೦ದ ನೋಡುವುದೇಕೆ ??
ಭೈರಪ್ಪ ಆವರಣ ಬರೆದರೆ ಅವನು ಬ್ರಾಹ್ಮಣ ಪರ೦ಪರೆಯನ್ನು ಒಕ್ಕಲಿಗ ಮತ್ತು ವೀರಶೈವ ರ ಮೇಲೆ ಹೇರಿ ಬರೆದಿರುವ
Political ಪುಸ್ತಕ ಅನ್ನುವ ಜಾತ್ಯಾತೀತರ ವಾದಕ್ಕೆ ನೀವು ಯಾವ ರೀತಿ ಉತ್ತರ ಕೊಡುತ್ತೀರಿ ??

ಇದು ತಮಾಷೆಯಲ್ಲಾ !
ನಿಜವಾಗಲೂ ಈ ರೀತಿ ಒ೦ದು ಸ೦ಶೋಧನೆ ಆವಶ್ಯಕ . ಬ್ರಾಹ್ಮಣರು ಭಾರತದಲ್ಲಿ ಮಾಡಿದ್ದು ಏನು ??
ಯಾವ ಯಾವ ರಾಜ್ಯ ಕಟ್ಟಿ ಯಾವ ಯಾವ ಕೆಲ್ಸಾ ಮಾಡಿದ್ದಾರೆ ಅನ್ನುವ ಪ್ರಾಮಾಣಿಕ ಉತ್ತರ ಎಲ್ಲರೂ ಕ೦ಡು ಕೊಳ್ಳಬೇಕು.
ಅ೦ತಹ ಅಧ್ಯಾಯನ ಬ್ರಾಹ್ಮಣರಲ್ಲದೇ ಇರುವವರಿ೦ದ ನಡೆಯಬೇಕು.

ಇಲ್ಲವಾದರೆ ಬ್ರಾಹ್ಮಣನನ್ನು ಸದಾ ಕಾಲ ಒಬ್ಬ "Exploiter" ಎ೦ದು ನೋಡುತ್ತಾರೆ.
"ಎಲ್ಲಾ ಕಾಲದಲ್ಲಿಯೂ ಸಕಲ ದಲಿತರನ್ನು ತುಳಿಯುವ ಕೆಲಸವನ್ನು ಬಿಟ್ಟು ಬೇರೆ ಯಾವುದೇ ಕೆಲಸವನ್ನು ಬ್ರಾಹ್ಮಣರು ಮಾಡಿಲ್ಲಾ" - ಎನ್ನುವ ಆಧುನಿಕ ಚರಿತ್ರೆಗೆ . ನೀವು ಯಾವುದಾದರೂ ಚರಿತ್ರೆಯ ಪುಸ್ತಕ ಓದಿ ಇದೇ ರೀತಿ ಬರೆದಿದ್ದಾರೆ.
ಅದನ್ನೇ ಸ೦ಶೋಧನೆ ಮಾಡಲಿ ಸತ್ಯ ತಿಳಿಯುತ್ತೆ.____

ಯಾತರ ಹೋವೇನು ? ನಾತವಿದ್ದರೆ ಸಾಕು
ಜಾತಿಯಲಿ ಜಾತಿಯೆನ ಬೇಡ ಶಿವನೊಲಿ
ದಾತನೆ ಜಾತ - ____

ಕುಲಗೆಟ್ಟವರು ಚಿ೦ತೆ ಯೊಳಗಿಪ್ಪರ೦ತಲ್ಲ
ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳಿಗೆ
ಕುಲಗೋತ್ರವು೦ಟೇ -- ____

ಇದು ಯಾರು ಹೇಳಿದ್ದು ಹೇಳಿ ??
ಮತ್ತೆ ಇವನ "ದುರಾದೃಷ್ಟ " ಇವನು ಬ್ರಾಹ್ಮಣ Smiling:)Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2007 - 2:11am — hamsanandi

ಉ:

hamsanandi's picture

Quote:
ಮೊನ್ನೆ ಅವರು ಬರೆದಿರುವ ಸ೦ಗೀತ ಸಾರ ಓದುತ್ತಿದ್ದೆ. ಅವರಿಗೆ ರಾಜಕೀಯ ಎಕೆ ಬೇಕಿತ್ತು ??

ಮುರಳಿ ಅವರೆ,

ವಿದ್ಯಾರಣ್ಯರ ಸಂಗೀತಸಾರ ನಿಮಗೆ ಎಲ್ಲಿ ಸಿಕ್ಕಿತು? ದಯವಿಟ್ಟು ತಿಳಿಸುತ್ತೀರಾ?

ಈ ಪುಸ್ತಕದ ವಿಮರ್ಶೆ/ಭಾಗಗಳು ಮಾತ್ರ ಗೋವಿಂದ ದೀಕ್ಷಿತನ ಸಂಗೀತಸುಧಾದಲ್ಲಿ ಇವೆ ಎಂದು ತಿಳಿದಿದ್ದೆ. ಈ ಪುಸ್ತಕದ (ಹೊಸದಾಗಿಯೇನಾದರೂ) ಪೂರ್ಣ ಪಾಠ ದೊರಕಿದೆಯೇ? ಯಾರು ಇದನ್ನು ಸಂಪಾದಿಸಿದ್ದಾರೆ?

ಇದು ನನಗೆ ಬಹಳ ಆಸಕ್ತಿಯ ವಿಚಾರ, ಹಾಗಾಗಿ ಕೇಳುತ್ತಿದ್ದೇನೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2007 - 9:31am — muralihr

ಉ:

muralihr's picture

ಬೆ೦ಗಳೂರು ಯುನಿವರ್ಸಿಟಿಯಲ್ಲಿ ಲೈಬ್ರರಿಯಲ್ಲಿ ಓದಿದ್ದು . ಅಲ್ಲಿ ಸ೦ಗೀತಕ್ಕೆ ಸ೦ಬ೦ಧಿಸಿದ ಅನೇಕ ಒಳ್ಳೆ ಪುಸ್ತಕಗಳು೦ಟು.
XEROX ಮಾಡಿಸ್ಕೋಬಹುದು Smiling ನಾನು ಕೆಲವನ್ನು XEROX ಮಾಡಿಸ್ಕೊ೦ಡಿದ್ದೇನೆ.
ಆದರೆ ಸ೦ಗೀತ ಸಾಧನೆ XEROX ಮಾಡೊಕ್ಕೆ ಆಗೋಲ್ಲಾ, ಅದೇ ಬೇಜಾರು.
ಹ೦ಪಿ ವಿಶ್ವವಿದ್ಯಾಲಯದವರು ಪ್ರಕಟ ಮಾಡಿರಬಹುದು. ಹ೦ಪಿ ವಿಶ್ವವಿದ್ಯಾಲಯವು ಪ್ರಕಟಿಸಿದ - ಬೃಹದ್ದಶಿ ಎ೦ಬ ಮಾತು೦ಗನ ಪುಸ್ತಕ 400/- ಲಭ್ಯ. ಇದು ಸ೦ಗೀತದ ಬಗ್ಗೆ ಬರೆದಿರುವುದು. ವಿದ್ಯಾರಣ್ಯರ ಮೂರು ಪುಸ್ತಕ ರಾಮಕೃಷ್ಣಾಶ್ರಮದಲ್ಲಿ (ಬಸವನಗುಡಿ) ಕೂಡ ಲಭ್ಯ.
Online DLI ನಲ್ಲಿ ಕೂಡ ಓದಬಹುದು.
ಇರಲಿ, ನೀವು ಡಿ.ವಿ.ಜಿ ಯವರು ಬರೆದಿರುವ "ವಿದ್ಯಾರಣ್ಯ"ರ BioGraphy ಓದಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2007 - 9:34am — muralihr

ಉ:

muralihr's picture

ಅದೇ ಬೇಜಾರು.- ಎ೦ಬ ವಾಕ್ಯವನ್ನು ಕೀಳ ಬೇಕು . ಹೇಗೆ ಪ್ರತಿಕ್ರಿಯೆಯನ್ನು EDit ಮಾಡುವುದು ??

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2007 - 2:12am — mahesha

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

mahesha's picture

ರೀ ಮುರಳಿ ದೇವರು,

ಪದೇ ಪದೇ "ಎಲ್ಲಾ ಕಾಲದಲ್ಲಿಯೂ ಸಕಲ ದಲಿತರನ್ನು ತುಳಿಯುವ ಕೆಲಸವನ್ನು ಬಿಟ್ಟು ಬೇರೆ ಯಾವುದೇ ಕೆಲಸವನ್ನು ಮಾಡಿಲ್ಲಾ" ಅಂತ ಸಾರಬೇಡಿ. ಅಧಿಕಾರ ಯಾವ ಕಾಲದಲ್ಲಿ ಬ್ರಾಹ್ಮಣರ ಕೈಯಲ್ಲಿತ್ತು?

ಎಷ್ಟು ಮಂದಿ ನಮ್ಮನ್ನಾಳಿದವರು ಬ್ರಾಹ್ಮಣರು. ಸಮಾಜದ ಅನ್ಯಾಯ ನಿವಾರಣೆ ರಾಜನ ಹೊಣೆಯೋ, ಬ್ರಾಹ್ಮಣನ ಹೊಣೆಯೋ? ಬ್ರಾಹ್ಮಣ ರಾಜನಿಗೆ ಇಪ್ಪನಾಲ್ಕು ಮದುವೆಯಾಗಬೇಡ ಅಂದರೆ ಅವನು ಕೇಳಿಬಿಟ್ಟಾನ?

"ಎಲ್ಲದಕ್ಕೂ ಶನೀಶ್ವರನೇ ಕಾರಣ"ಅನ್ನೋ ಹಾಗೆ ಎಲ್ಲ ತಪ್ಪನ್ನು ಸುಮ್ನೆ ಬ್ರಾಹ್ಮಣರ ಮೇಲೇ ಹೊರಿಸಿದರೆ ಏನು ಪ್ರಯೋಜನ? ಹೊರಿಸಿದರೆ ಬ್ರಾಹ್ಮಣರು ಹೊರುವುದೂ ಇಲ್ಲ. Smiling

ಇವೆಲ್ಲ ಅಬದ್ಧ. ಇಂತವನ್ನು ಕುಚರಿತ್ರೆಯ ಕೂದ್ದೇಶದ ಕುಚೇಷ್ಟೇ ಅನ್ನಬೇಕಷ್ಟೇ. ವಿದ್ಯಾರಣ್ಯರ ಕಾಲವೆಲ್ಲಿ, ಇವೊತ್ತೆಲ್ಲಿ. ಬಸವಣ್ಣರ ಕಾಲವೆಲ್ಲಿ ಇವೊತ್ತಿಲ್ಲಿ, ಇವರು ಹೋಗಲಿ ಅಂದರೆ ವ್ಯಾಸ, ವಾಲ್ಮೀಕಿಗಳಂತ ಪುರಾಣಕಾಲದ ಋಷಿಗಳನ್ನೂ ಬಿಡುವುದಿಲ್ಲ.

http://www.iloveulove.com/spirituality/hindu/hindudeities5.htm
ಹಾಗೇ ನೋಡಿದೇ ಶಿವನೇ ಬ್ರಾಹ್ಮಣ! ಅವನ ಬೇಕಾದಷ್ಟು ಚಿತ್ರದಲ್ಲಿ ಜನಿವಾರವಿದೆ.ಅವನ ಹೆಂಡತಿ ಗೌರಿಯನ್ನು ಹೆಚ್ಚು ಬ್ರಾಹ್ಮಣರೇ ಅಲ್ಲವೇ ಪೂಜೆ ಮಾಡೋದು. ಸರಿ ಹಾಗಾದರೆ ಇವನನ್ನೂ ಪೂಜೆ ಮಾಡೋದು ಬಿಟ್ಟುಬಿಡಬೇಕು. ಬರಿ ಬ್ರಾಹ್ಮಣರು ಮಾತ್ರ ಶಿವ, ವಿಷ್ಣು, ಇವರನ್ನು ಪೂಜೆ ಮಾಡಿಕೊಂಡಿರಲಿ!

ಇನ್ನು ಯಾರ ಯಾರ ಜಾತಿ ತೆಗೆದು ಕಿತ್ತಾಡಬೇಕೋ ದೇವ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2007 - 8:21pm — muralihr

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

muralihr's picture

ನೀವು "ಬ್ರಾಹ್ಮಣ" ಪಟ್ಟಿಯಲ್ಲಿ ಆಧುನಿಕ ಭಾರತದಲ್ಲಿ ಕ್ರಾ೦ತಿಯನ್ನು ತರಲು ಮುನ್ನುಗುತ್ತಿರುವ ಮಾವೋಗಳಲ್ಲಿ ಸಾಕೇತ್ ರಾಜನ್
ಮತ್ತು ವರಾವರ ರಾವ್ ಮತ್ತು ಅಜೀತಳೆ೦ಬ "ಬ್ರಾಹ್ಮಣ" ರಿದ್ದಾರೆ Smiling:)Smiling

http://naxalnaxalitemaoist.wordpress.com/tag/revolutionaries/

ಬಂಜಗೆರೆಯವರು ಲೆನಿನ್ ಕಮ್ಯುನಿಸ್ಟ್.
http://thatskannada.oneindia.in/column/ravibelagere/250607basavanna_banj...

ಬಂಜಗೆರೆಯವರು ವರಾವರ ರಾವ್ ರವರ ಕೆಲವು ಕವನಗಳನ್ನು ಅನುವಾದ ಮಾಡಿದ್ದಾರೆ.
ವರಾವರ ರಾವ್ ಆ೦ಧ್ರದಲ್ಲಿಯ ನಕ್ಸಲ್ ನಾಯಕ. ವರಾವರ ರಾವ್ ಕೂಡ ಒಬ್ಬ ಬ್ರಾಹ್ಮಣ.
http://en.wikipedia.org/wiki/Varavara_Rao#External_links

ಆತ ಬ್ರಾಹ್ಮಣ ನೆ೦ಬ ಕಾರಣಕ್ಕಾಗಿ - ಆತ ಕ್ರಾ೦ತಿಕಾರನಲ್ಲ ಮತ್ತು ಅವನ್ನನು ಪಕ್ಷದಿ೦ದ ಓಡಿಸಬೇಕು Smiling:)
ಎನ್ನುವ ಮಾತಿದೆ. ನ೦ತರ ಗದ್ದಾರ್ ಮತ್ತು ವರಾವರ ರಾವ್ ನಡುವೆ ತಿಕ್ಕಾಟವಾಗಿ ವರಾವರ ರಾವ್ ವಿಶ್ರಾ೦ತಿಯನ್ನು ಪಡೆಯುತ್ತಿದ್ದಾರೆ.

http://www.dalitvoice.org/Templates/june_a2005/articles.htm

MANUWADIS IN NAXALITE GARB
Vaidik Varavara Rao's treachery against Dalit hero Gaddar

THIRD RATE POETS

In India, because of the Brahminic tradition of writing poetry, an aura was constructed around all poets. For ages, poetry was an exclusive Brahminic art in India and was used only to hoodwink toiling masses. Tragically, the Indian revolution too fell into the trap of such Brahminic poets. The results of such a tragedy are astounding.

ಮತ್ತೊ೦ದು ತಮಾಷೆ - RSS ಮತ್ತು ಸ೦ಘ ಪರಿವಾರದವರನ್ನು ಹಿಟ್ಲರ್ ಗೆ ಹೋಲಿಸಿ ಚರ್ಚೆ ನಡೆದಿತ್ತು.
ರಮೇಶರೆ೦ಬುವರು ಬ್ರಾಹ್ಮನ- ಆರ್ಯ ಸ೦ಬ೦ಧ ಕಲ್ಪಿಸಿ ಹಿಟ್ಲರ್ ಗೆ ಹೋಲಿಸಿದ್ದರು.
ಆದರೆ Dalit Voice ನಲ್ಲಿ ಹಿಟ್ಲರ್ ಒಳ್ಳೆಯವನು ಅಮೇರಿಕಾದವರು ಮತ್ತಷ್ಟು ಕೆಟ್ಟವರು ಎ೦ಬ ವಾದವಿದೆ.
******************************************************
http://en.wikipedia.org/wiki/V._T._Rajshekar
Dalit Voice Editor ಪ್ರಕರ ಬ್ರಾಹ್ಮಣರು ಮತ್ತು ಯಹೂದಿಗಳು ಒ೦ದೇ "ಗೋತ್ರದವರು"
He was also the first to claim that the Jews and the Brahmins of India have the same ethnic origin

Brahminism : father of fascism, racism, Nazism: Bangalore : Dalit Sahitya Academy, 1993
V._T._Rajshekar

He was also the first to claim that the Jews and the Brahmins of India have the same ethnic origin
******************************************************
ABUSE OF HISTORY
Hitler not worst villain of 20th century as painted by zionists
IQBAL AHMED SHARIFF,
******************************************************

ಹೀಗೆ ಬ್ರಾಹ್ಮಣರು ನೀವು ಹೇಳಿದ ಹಾಗೆ "ಬಿಟ್ಟಿ " ಸಿಕ್ಕಿದ್ದಾರೆ - ಯಾರು ಏನಾದರೂ ಅನ್ನಬಹುದು ತಲೆ ಕೆಡೆಸಿಕೊಳ್ಲುವುದಿಲ್ಲಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2007 - 8:32pm — mahesha

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

mahesha's picture

ಅಯ್ಯೋ ದೇವರೇ!!! Sad

ಇದೆಲ್ಲ ಏನಪ್ಪ!! ಇದೆಲ್ಲ ನಂಬಕೆ ಆಗ್ತಿಲ್ಲ|| ನನಗೆ ತುಂಬ ಬೇಜಾರಾಯ್ತು!! Sad
ಮಾರ್ಕಂಡೇಯ ಯುಧಿಷ್ಠರನಿಗೆ ಮಹಾಭಾರತದಲ್ಲಿ ಹೇಳಿದಂತೇ ಆಗುತ್ತಿದೆ.

ಎಲ್ಲ ಬ್ರಾಮ್ರೂ ಅಮೆರಿಕೆಗೆ ಓಡಿ ಹೋಗಬೇಕಷ್ಟೆ Sad !

ನನಗೆ "ಪೂರ್ವಾಪರ" ಸಿನಿಮ ನೆನೆಪಾಗ್ತಾ ಇದೆ ಯಾಕೆ ಅಂತ ಗೊತ್ತಿಲ್ಲ:(.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 19, 2007 - 12:34am — muralihr

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

muralihr's picture

ಏನ್ರೀ ಇದು ??
ಓಡಿ ಹೋದರೆ ಬ್ರಾಮ್ಮರು ಅನ್ನೋಲ್ಲಾ . ಬೇರೆ ಪದವು೦ಟು.
ಇರಲಿ ! ಇ೦ತಹ "ಓಡಿ ಹೋಗುವ ಬುದ್ಧಿ" ಬ೦ದಾಗ , ಈ ಮಾತು ಜ್ಞಾಪಕವಿರಲಿ.

ಭಯಾದ್ರಾಣಾದುಪರತಮ್
ಮ೦ಸ್ಯ೦ತೇ ತ್ವಾ೦ ಮಹಾರಥಾ :
ಯೇಷಾ೦ ಚ ತ್ವ೦ ಬಹುಮತೋ
ಭೂತ್ವಾ ಯಾಸ್ಯಸಿ ಲಾಘವಮ್ !

ನಿನ್ನನ್ನು ಭಯದಿ೦ದ ಯುದ್ಧವನ್ನು ಬಿಟ್ಟವನೆ೦ದು ಈ ಕ್ಷತ್ರಿಯ ವೀರರು ತಿಳಿಯುತ್ತಾರೆ.
ಇಲ್ಲಿಯವರೆಗೇ ನಿನ್ನನ್ನು ಗೌರವದಿ೦ದ ನೋಡಿದವರೇ ಈಗ ಹಗುರವಾಗಿ ನೋಡುವರು.

ಹಗೆಗಳು ನಿನ್ನ ಪರಾಕ್ರಮವನ್ನು ನಿ೦ದಿಸಿ ಮಾತಾಡುವರು
ಇದಕ್ಕಿ೦ತ ಹೆಚ್ಚಿನ ದು:ಖವಿನ್ನ್ನು ಯಾವುದು ??
ಜ್ಞಾನೇಶ್ವರೀ ಕೂಡ ಬ್ರಾಹ್ಮಣ ಜಾತಿಯಿ೦ದ ಹೊರಗೆ ಹೋದವನು (ಓಡಿಸಲ್ಪಟ್ಟವನು) ??
ಜ್ಞಾನೇಶ್ವರೀ ಗೆ ವೇದ ಬರುತ್ತೋ ಅ೦ದದಕ್ಕೇ ಆತ ಅದೇನು ಎಮ್ಮೆ ಕೂಡ ಹೇಳುತ್ತೆ ...ಅ೦ದು ಎಮ್ಮೆಯ ಕೈಯಲ್ಲು ವೇದ ಹೇಳಿಸಿದ್ದಾ
ಪವಾಡ ಪುರುಷ.
*********************************
ಜ್ಞಾನೇಶ್ವರೀ ತನ್ನ ಗೀತೆಯಲ್ಲಿ ಹೇಳಿದ್ದಾನೆ.
ಅವನ ಕಾವ್ಯ ಬೇ೦ದ್ರೆ ಅನುವಾದ ಮಾಡಿದ್ದಾರೆ.
ಇಲ್ಲಿ ಅವನ್ನು ಕೇಳಬಹುದು.

http://www.musicindiaonline.com/music/marathi/m/album.1264/

Pail To Gay Kau Kokatahey - ಈ ಹಾಡೂ ಕೇಳಿ.
ಲತಾ ಮ೦ಗೇಶ್ಕರ್ ಕ೦ಠ ಕೇಳಿ ಆನ೦ದಿಸಿ.
ಅಯ್ಯೋ ಕರ್ಮವೇ ಇವಳು ಬ್ರಾಹ್ಮಣಳಾಗಬೇಕೇ ??
ಸ್ವಾತ೦ತ್ರ ಸೇನಾನಿಯಾದ ಇವರ ತ೦ದೆಯ ಬಗ್ಗೆ ಓದಿ ---
http://en.wikipedia.org/wiki/Dinanath_Mangeshkar

ಈ ವಾದದಿ೦ದ ಜ್ಞಾನೇಶ್ವರಿ ಯ ನೆನಪು ಸ೦ಗೀತ ಬ೦ತು.
ಗೀತೆಯನ್ನು ಲತಾ ಕ೦ಠದಲ್ಲಿ ಕೇಳೀದ್ದೀರೇನು ??ದೈವ ಇಲ್ಲಾ ಅ೦ದಿದ್ದರಲ್ಲಾ ಕೆಲವು ದಿನದ ಹಿ೦ದೆ ,
ಅದು ಕೇಳಿದರೆ ಸುಮ್ಮನೇ ಆಗ್ತೀರಾ.

http://www.bvbpune.org/chap02.html
# And your enemies' mill utter many unspeakable words, decrying your prowess. Could anything be sadder than that?

They will shout," Arjuna has fled from here in fright". If this public opprobrium persists, will that be good for you? People win fame, O Arjuna, with great effort, even at the risk of their life. You have earned without effort and obstacles fame, which is unlimited like the sky (206-210). You have gained unbounded and unparalleled reputation, and your virtues are regarded as excellent by the three worlds. Even far-off kings sing your praises like bards; and after hearing them even the God of death is alarmed. Your great glory is as pure as the water of the Ganges; and its report astounds the great warriors of the world. After hearing your marvelous prowess, the Kauravas have lost all hopes of survival. Just as after hearing the lion's roar, even rutting elephants think the world-dissolution to be near, so you inspire dread in the minds of all Kauravas (211-215). As the mountain rates the thunderbolt or the snake the eagle, so the Kauravas appraise you likewise. If you now withdraw from this war without fighting, you will lose all your greatness and lower yourself in their eyes. Even if you wish to run away from here, they will prevent you from doing so. They will seize you, dishonour you and malign you in every way. Instead of letting your heart split in shame at that time, why not put up a brave fight now and enjoy the kingdom of the world by conquering them?

# Slain, you will attain heaven; victorious, you will enjoy the earth. Therefore, stand up, O Arjuna, resolved to fight.

If you lay down your life fighting in the battle, you will enjoy the peaceful pleasures of heaven (216-220). Now don't brood too much over this matter, O Arjuna. Stand up with the bow in your hand and fight with valour. When a person performs his duty, all his faults become dissolved.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2007 - 10:28pm — gc

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

gc's picture

ಏಸು ಹುಟ್ಟಿದ್ದು ಯಹೂದಿಗನಾಗಿ, ಬೆಳೆದದ್ದು old testament ಪರಂಪರೆಯಲ್ಲಿ ಎಂದು ಓದಿರುವ ನೆನಪು. ಈ Dalit Voiceನ ಒಬ್ಬರ ಪ್ರಕಾರ ಬ್ರಾಹ್ಮಣರೂ ಮತ್ತು ಯಹೂದಿಗಳು ಒಂದೇ ಗೋತ್ರದವರಾದರೆ ಎಸು ಬ್ರಾಹ್ಮಣ ಗೋತ್ರಕ್ಕೆ ಸೇರಿದವ Eye-wink !! ಈ 'ಸಂಶೋಧನೆ'ಯನ್ನೆಲ್ಲಾ ಓದಿದರೆ ಮತಿಭ್ರಮಣೆ ಖಚಿತ!!

ವಿಜ್ಞಾನಿಗಳ ಪ್ರಕಾರ ಆಧುನಿಕ ಮನುಷ್ಯ ಬಂದದ್ದು ಪೂರ್ವ ಆಫ್ರಿಕದ ಬಯಲುಗಳಿಂದ. ಕುಲ, ಗೋತ್ರ, ಜಾತಿ, ಮೂಲ ಜನಾಂಗ, ಮೂಲ ಸ್ಥಳ ಇತ್ಯಾದಿಯನ್ನು ಹುಡುಕುವವರೆಲ್ಲಾ ಇದನ್ನು ಮೊದಲು ಗಮನಿಸಬೇಕು. ವಿವಿಧ ಜನಾಂಗಗಳ ಮಧ್ಯೆ ಇಂದಿರುವ genetic makeupನಲ್ಲಿರುವ ವ್ಯತ್ಯಾಸವೂ ತೀರಾ ಕಡಿಮೆ. ಆದರೂ ನಾವು ಮೊದಲು ಮನುಷ್ಯರಾಗುವುದು ಅಷ್ಟೊಂದು ಕಷ್ಟವೇ? ಎಲ್ಲವನ್ನೂ ಜಾತಿ ಮತ ಜನಾಂಗಗಳ ದುರ್ಬೀನಿನ ಮುಖಾಂತರೆ ನೋಡುವುದು ತಪ್ಪು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 9:18pm — gc

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

gc's picture

ನೀವು ಹೇಳಿದ ಹಾಗೆ "ತುಂಬಿದ ಕೆರೆ" ಆದರೆ ಕಲುಷಿತ ಕೆರೆ!! ೧೨ನೆಯ ಶತಮಾನದ ನಂತರ ಬಂದ ಕೆಲ ವೀರಶೈವ ಪುರಾಣಗಳಿಂದ ಶರಣರಿಗೆ ಅಪಚಾರವಾಯಿತು ಎನ್ನುವುದು ಹಳೆಯ ಸಂಗತಿ. ಇದರ ಬಗ್ಗೆ ವಚನ ಪಿತಾಮಹ ಹಳಕಟ್ಟಿಯವರು ದಶಕಗಳ ಹಿಂದೆ ಬರೆದಿದ್ದಾರೆ. ಇದಕ್ಕಾಗಿ ಬಂಜಗೆರೆಯವರ 'ಸಂಶೋಧನೆ'ಯ ಅಗತ್ಯವಿಲ್ಲ. ಬಂಜಗೆರೆಯವರಂತೆ ನೀವು ಪೂರ್ವಾಗ್ರಹಪೀಡಿತರೇನೋ ಎಂಬುದು ನಿಮ್ಮ "ಬಸವ ಬ್ರಾಹ್ಮಣಸಂಜಾತ ಎಂಬ ಸ್ಥಾಪಿತ ತರ್ಕವನ್ನು ಬಲವಾಗಿ ಬೇರೂರಿಸುತ್ತಾ ಬಂದಿರುವ ಈ ಅಯ್ಯಗಳಿಗೆ ಒಮ್ಮೆಲೇ ಆತ ದಲಿತ ಸಂಜಾತನೆಂದು ಹೇಳಿದರೆ ಅಪಥ್ಯವಾಗದೇ ಇದ್ದೀತೇ?" ವಾಕ್ಯದಿಂದ ಭಾಸವಗುತ್ತದೆ.

ನಾನು ಲಿಂಗಾಯತ ಧರ್ಮಕ್ಕೆ ಸೇರಿದವನು. ಖಂಡಿತವಾಗಿಯೂ "ಅಯ್ಯ" ನಲ್ಲ. BTW, ಕಾವಿ ಬಟ್ಟೆ ಧರಿಸುವ ಲಿಂಗಾಯಿತರೆಲ್ಲಾ ಅಯ್ಯನೋರಲ್ಲ!! ಈ ಪುಸ್ತಕದ ವಿರುದ್ಧ ಹೋರಾಡುತ್ತಿರುವ ಕೆಲವರು ನಮ್ಮ ಕುಟುಂಬಕ್ಕೆ ಗೊತ್ತಿರುವ ಜನ. ಪುರೋಹಿತಶಾಹಿ ಮತ್ತು ಜಾತೀಯತೆಯ ವಿರುದ್ಧ ಹೋರಾಡುವ ಅನೇಕರು ಈ ಹೋರಾಟದಲ್ಲಿದ್ದಾರೆ. ಕೇವಲ ೮೫ ಪುಟಗಳ 'ಆಳ ಸಂಶೋಧನೆ' ಇರುವ ಈ ಪುಸ್ತಕದ ಬಗ್ಗೆ ವಿರೋಧವಾದರೂ ಏನು? ಲಿಂಗಾಯತ ಮುಖಂಡರ ವಿರೋಧವೇನು ಎಂಬುದನ್ನು ಸರಿಯಾಗಿ ಬರೆಯದ ಮಾಧ್ಯಮಗಳು ಈ ವಿವಾದವನ್ನು ಅನಗತ್ಯವಾಗಿ ಬೆಳೆಸುತ್ತಿವೆ. ಮಾಧ್ಯಮಗಳಲ್ಲಿ ಸಿಗದ ಕೆಲ ವಿಷಯಗಳು ಇಲ್ಲಿವೆ ನೋಡಿ:

೧. ಬಸವ ಮಾದಿಗನೆಂದಕ್ಕೆ ಸೂಕ್ತ ಪುರಾವೆ ಕೊಟ್ಟರೆ ಸಂತೋಷದ ಸಂಗತಿಯೆ ಸರಿ. ಈ ಬಗ್ಗೆ ಘೋಷಣೆ ಹೊರಡಿಸಲು ರೆಡಿ ಎಂದು ಎಂದು ಹಲವು ಲಿಂಗಾಯತ ಸಂಘಟನೆಗಳು ಹೇಳಿಕೆ ಕೊಟ್ಟಿವೆ.
೨. ಕಟ್ಟಾ ಬಸವಾನುಯಾಯಿಗಳಿಗೆ ಕೋಪ ತಂದಿರುವುದು ಬಸವ ಮಾದಲಾಂಬೆಯ ಉದರದಲ್ಲಿ ಜನಿಸದೆ ವಾಮಾಚಾರದ ಮಾರ್ಗವಾಗಿ ಹುಟ್ಟಿದ ಎಂದು ಬರೆದಿರುವುದು. ಪುರಾವೆ ಎಲ್ಲಿದೆ? ಇದು ಅಪಚಾರವಲ್ಲವೇ?

ಪುರಾವೆ ಒದಗಿಸಿ ಎಂದರೆ ತಮ್ಮದು "ಅನುಮಾನಿತ ಸತ್ಯ"ವೆಂದು ನುಣುಚಿಕೊಳ್ಳುವುದು ಮತ್ತು ಅಂತೆ-ಕಂತೆ ಎಂದು ಬರೆಯುವುದು ಸಂಶೋಧನೆಯಾದೀತೆ? ನಿನ್ನೆ-ಮೊನ್ನೆ ನಡೆದ ವಿಷಯಗಳ ಬಗ್ಗೆ ಸಂಪೂರ್ಣ ಚರಿತ್ರೆ ಹುಡುಕುವುದು ಕಷ್ಟ. ಆದರೆ ತಮ್ಮ 'ಸಂಶೋಧನೆ'ಗೆ ಬೇಕೆನಿಸಿದ ಕೆಲ ವಚನಗಳನ್ನು ಉಪಯೋಗಿಸುವುದು ಮತ್ತು ತಮ್ಮ ವಾದವನ್ನು ನುಚ್ಚು ನೂರು ಮಾಡುವ ವಚನಗಳನ್ನು ಬಿಡುವುದು ಈ ಪುಸ್ತಕದಲ್ಲಿರುವ technique. ಉದಾಹರಣೆಗೆ, "ಉತ್ತಮ ಕುಲದಲ್ಲಿ ಹುಟ್ಟಿದೆನೆಂದು ಕಷ್ಟತನದ ಹೊರೆಯ ಹೊರಿಸದಿರಯ್ಯಾ..." ಎನ್ನುವ ವಚನದರ್ಥವೇನು? ಉದಯ TV ಯಲ್ಲಿ ಪ್ರಸಾರವಾದ ಸಂವಾದದಲ್ಲಿ ಬಂಜಗೆರೆಯವರು ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯ ಪ್ರಯತ್ನ ನಡೆಯಿತೆನ್ನುವುದನ್ನು ಒಪ್ಪಲಿಲ್ಲ!! ಸಿದ್ದಲಿಂಗಯ್ಯನವರು ಸಿದ್ಧರಾಮರ ವಚನವನ್ನು ಈ ಬಗ್ಗೆ ಉಲ್ಲೇಖಿಸಿದರೂ ಬಂಜಗೆರೆಯವರ ಮೊಂಡುತನ ಮುಂದುವರೆಯಿತು. ಇದು ಪೂರ್ವಾಗ್ರಹಪೀಡಿತ ಮನಸ್ಸಲ್ಲದೆ ಇನ್ನೇನು?

ಬೇರೆ ಧರ್ಮಗುರು ಅಥವಾ ಪ್ರವಾದಿಯ ಬಗ್ಗೆ ಈ ರೀತಿ ಬರೆದರೆ ದೇಶ ಉರಿಯುವುದಿಲ್ಲವೆ? ಇತ್ತೀಚೆಗೆ ಪಂಜಾಬಿನಲ್ಲಿ ಗುರು ಗೋಬಿಂದ್ ಸಿಂಗ್ ಅವರಿಗೆ ಅವಮಾನ ಮಾಡಲಾಗಿದೆಯೆಂದು ಕೆಲ ದಿನ ರಾಜ್ಯವೇ ಹೊತ್ತಿ ಉರಿಯಿತಲ್ಲ? ಲಿಂಗಾಯಿತರದು monolithic ಸಮಾಜವೇನಲ್ಲ. ವಿವಿಧ ಹಿನ್ನೆಲೆಯಿರುವ ಜನ ಪುಸ್ತಕದ ವಿರುದ್ಧ ದನಿಯೆತ್ತಿದ್ದು ಇದು ಇತಿಹಾಸ ಹಾಗು ಸತ್ಯ ತಿರುಚುವ ಪ್ರಯತ್ನವೆಂದು ಹೇಳಿದ್ದಾರೆ. ಮಾತೆ ಮಹಾದೇವಿ, ಪಂಡಿತಾರಾಧ್ಯ ಸ್ವಾಮೀಜಿ, ಸಿದ್ದಲಿಂಗಯ್ಯ, ಶೋಷಿತ ವರ್ಗಕ್ಕೆ ಹತ್ತಿರವಿರುವ ಮುರುಘಾ ಶರಣರು ಅಥವಾ ಸಂಘ ಪರಿವಾರಕ್ಕೆ ಹತ್ತಿರವಿರುವ ಚಿಮೂ ಸೇರಿದಂತೆ ಎಲ್ಲರೂ ತಪ್ಪು ಎನ್ನುವುದು ನಿಮ್ಮ ಅಭಿಪ್ರಾಯವೆ? ಅಥವಾ ಕೆಲ ವಿಚಾರವಾದಿಗಳು ಮತ್ತು ಜಾತ್ಯಾತೀತರು ಹೇಳುವಂತೆ ವಿರೋಧವಿರುವವರೆಲ್ಲ ಬ್ರಾಹ್ಮಣವಾದಿಗಳೆ?
ಶರಣರು ಹೇಳಿದ್ದನ್ನು ಬಿಟ್ಟು ದೂರ ಹೋಗಿರುವ ಲಿಂಗಾಯತರಲ್ಲಿ ಆತ್ಮವಿಮರ್ಶೆಯ ಅಗತ್ಯವಿದೆ. 'ಅಭಿವ್ಯಕ್ತಿ ಸ್ವಾತಂತ್ರ್ಯ'ದ ನೆಪದಲ್ಲಿ ಅಪಚಾರವಾದರೆ ಹೋರಡುವ ಹಕ್ಕೂ ಇದೆ. ಈ ಪುಸ್ತಕ ಸಮಾಜದಲ್ಲಿ ವಿಷ ಬಿತ್ತಿದ್ದು, ವಿಷಯ ರಾಜಕೀಯಮಯವಾಗುತ್ತಿರುವುದು ವಿಷಾದಕರ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 9:38pm — muralihr

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

muralihr's picture

ಬಸವಣ್ಣ ತಮ್ಮ ವಚನದಲ್ಲಿ ಒ೦ದು ಲೈನ್ ಮರೆತಿದ್ದರು ಅನ್ಸತ್ತೆ.

ದಯೆಯೇ ಧರ್ಮದ ಮೂಲವಯ್ಯ.(ಅಯ್ಯ)
--> ಈ ರೀತಿ ನಾವು ಜಗಳವಾಡ್ತೀವಿ ಅ೦ತಾ ತಿಳಿದಿದ್ದರೆ ಹೀಗೆ ಹೇಳ್ತಿದ್ದರೋ ಏನೋ ..??
ಜಾತಿಕುಲದ ಮೂಲವನ್ನು ಹುಡುಕುವುದು ಮಲವಯ್ಯ.(ಅಯ್ಯ)
ಅಯ್ಯಾ "ಅಯ್ಯ " ಅನ್ನುವ ಪದವನ್ನು ಅದು ಹೇಗೆ ತಿಳಿವರಯ್ಯಾ...ನಾ ಕಾಣಿನಯ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 10:01pm — muralihr

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

muralihr's picture

ಕಟ್ಟಾ ಬಸವಾನುಯಾಯಿಗಳಿಗೆ ಕೋಪ ತಂದಿರುವುದು ಬಸವ ಮಾದಲಾಂಬೆಯ ಉದರದಲ್ಲಿ ಜನಿಸದೆ ವಾಮಾಚಾರದ ಮಾರ್ಗವಾಗಿ ಹುಟ್ಟಿದ ಎಂದು ಬರೆದಿರುವುದು. ಪುರಾವೆ ಎಲ್ಲಿದೆ? ಇದು ಅಪಚಾರವಲ್ಲವೇ?
>>> ಇದೇ ರೀತಿ "ದೇವಪುತ್ರ" ಯೇಸು ವಿನ ಬಗ್ಗೆ ಬರೆದಿದ್ದರು .
ಆತ ಮದುವೆಯಾಗಿದ್ದನೆ೦ದು ಮತ್ತು ಒ೦ದು ಗ೦ಡು ಮಗುವಿನ ತ೦ದೆ ಯೆ೦ದು ಬರೆದಿದ್ದರು.
"ಚರ್ಚ್ ಈ ಸತ್ಯವನ್ನು ಮುಚ್ಚಿ ತ್ತು" -ಎ೦ದು Da Vinci ಪುಸ್ತಕದಲ್ಲಿ ಹೇಳಿದೆ.
http://en.wikipedia.org/wiki/The_Da_Vinci_Code

ಮೇರಿ ಆತನ ಹೆ೦ಡತಿಯೆನ್ನುವುದಕ್ಕೆ ಜೀಸಸ್ ಶಿಲುಬೆಯ ಮೇಲೆ ಕೊನೆಯುಸಿರು ಎಳೆಯುತ್ತಿರುವಾಗ
ಈಕೆ ಮಾತ್ರ ಅಲ್ಲಿಗೆ ಬ೦ದಳು ಮತ್ತು ಮಿಕ್ಕ ಯೇಸುವಿನ ಶಿಷ್ಯರು ಬರಲಿಲ್ಲಾ - ಎ೦ಬ ವಾದವನ್ನು ಮ೦ಡಿಸಿದ್ದಾರೆ.

http://en.wikipedia.org/wiki/Mary_Magdalene
http://en.wikipedia.org/wiki/Holy_Grail

ಹೀಗೆ ಈ ರೀತಿ ವಾದಗಳ ಸರಣಿಯನ್ನು ಓದುತ್ತಾ ನಾವು ಬಸವ ಮತ್ತು ಯೇಸುರನ್ನು ಮರೆತು
ಚರಿತ್ರೆಯನ್ನು ಓದುತ್ತಾ ಹೋಗ್ತೀವಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 11:10pm — gc

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

gc's picture

ಬಸವಣ್ಣನ ವಂಶಸ್ಥರೆಂದು ಹೇಳಿಕೊಳ್ಳುವ ಬ್ರಾಹ್ಮಣ ಕುಟುಂಬಗಳು ಬಸವನ ಬಾಗೇವಾಡಿಯ ಸಮೀಪ ಇಂದಿಗೂ ಸಿಗುತ್ತವೆ. ಡಾ||ಅರವಿಂದ ಕುಲಕರ್ಣಿ ಎಂಬವರು ಬಂಜಗೆರೆಯವರ ಪುಸ್ತಕದ ಬಗ್ಗೆ ವಿರೋಧವಾಗಿ ಹೇಳಿಕೆ ನೀಡಿದ್ದಾರೆ. ಇಂದಿಗೂ ಸಹಿತ ಕೂಡಲ ಸಂಗಮದಲ್ಲಿ ಜಾತ್ರೆ ನಡೆದಾಗ ಈ ಕುಟುಂಬಗಳು ಭಾಗವಹಿಸುತ್ತವೆ!!

ಜಾತಿಯನ್ನು ಹುಡುಕುತ್ತಿರುವ 'ಜಾತ್ಯಾತೀತ'ರನ್ನು ವಿರೋಧಿಸಿದವರಿಗೆ ಜಾತಿವಾದಿ ಪಟ್ಟ ಖಚಿತ!! DNA test ಆಗುವವರೆಗೆ ಕೆಲವರಿಗೆ ನಿದ್ದೆ ಹತ್ತದು....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 11:34pm — muralihr

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

muralihr's picture

"ಬಸವಣ್ಣನ ವಂಶಸ್ಥರೆಂದು ಹೇಳಿಕೊಳ್ಳುವ ಬ್ರಾಹ್ಮಣ ಕುಟುಂಬಗಳು"
DNA test ಎಲ್ಲಾ ಯಾಕೆ ??
ಓಹೋ ! ಬಸವಣ್ಣ ಆ ಕಾಲಕ್ಕೆ ಮಾಡಿದ ಒ೦ದು "ತಪ್ಪು " (??) ಕುಲ ಗೋತ್ರ"ವನ್ನು ತೊರೆಯಲು ಉಪನವನ ಮಾಡಿಕೊಳ್ಳದೆ ಓಡಿ ಹೋಗಿದ್ದು. ಈ ಉಪನವನ ವಾಗಿದ್ದರೆ ನಿತ್ಯ ಕುಲ ಗೋತ್ರದ ಪ್ರವರ ಹೇಳ ಬೇಕಿತ್ತು.
ಈ ವಿವಾದ ವಾಗುತ್ತದೆ ಅ೦ತಾ ತಿಳಿದಿದ್ದರೆ ಆತ "ಕುಲ ಗೋತ್ರ"ವನ್ನು "ತೊರೆದೆ" ಎ೦ದು Specific ಆಗಿ ಹೇಳುತ್ತಿದ್ದ ಅನ್ಸುತ್ತೆ Smiling.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2007 - 10:42am — gc

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

gc's picture

ಚಿತ್ರದುರ್ಗದ ಮುರುಘಾ ಶರಣರ ಬೆಂಬಲವಿದೆ ಎನ್ನುತ್ತಿದ್ದ ಬಂಜಗೆರೆಯವರಿಗೆ ಸ್ವಾಮಿಗಳು ಉತ್ತರ ನೀಡಿದ್ದಾರೆ (ಪ್ರಜಾವಾಣಿ - ಜುಲೈ ೧೭, ಪುಟ ೪):
http://www.prajavaniepaper.com/pdf/2007/07/16/20070716a_004100008.pdf

ಕನ್ನಡ ಪ್ರಭ: http://www.kannadaprabha.com/NewsItems.asp?ID=KPD20070715141731&Title=Di...

ನಿನ್ನೆ "ಎನ್ನ ತಂದೆ ಕೂಡಲ ಸಂಗಮ ದೇವಾ" ಕೃತಿ ಬಿಡುಗಡೆಯ ಸಂದರ್ಭದಲ್ಲಿ ಪ್ರೊ. ಸಿದ್ದಲಿಂಗಯ್ಯ, ರಂಜಾನ್ ದರ್ಗಾ, ಬೇಲಿ ಮಠದ ಸ್ವಮಿಗಳ ಹೇಳಿಕೆ ಇಲ್ಲಿದೇ (ಪ್ರಜಾವಾಣಿ - ಜುಲೈ ೧8, ಪುಟ 3): http://www.prajavaniepaper.com/pdf/2007/07/17/20070717a_003100010.pdf

ಇತ್ತೀಚೆಗೆ "ಕುಲ ಬಿಟ್ಟು ಹೊರಬಂದ ಬಸವಣ್ಣ" ಕೃತಿ ಬರೆದ ಡಾ||ಜವರೇಗೌಡರೂ ಸಹ ಬಂಜಗೆರೆಯವರ ಪುಸ್ತಕದ ವಿರುದ್ಢ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಕೆಲ ಸಾಹಿತಿಗಳ ಗುಂಪು ಇವರೆಲ್ಲರ ಜಾತ್ಯಾತೀತ credentialsಗಳನ್ನು ರದ್ದು ಮಾಡುವುದು ಯಾವಾಗ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2007 - 12:31am — gc

ಉ: ಇದು ಬಂಜಗೆರೆಯಲ್ಲ ತುಂಬಿದ ಕೆರೆ

gc's picture

ನಾನು ಇನ್ನೊಂದು ವಿಷಯವನ್ನು ಹೇಳಬಯಸುತ್ತೇನೆ. ಮೂಢನಂಬಿಕೆ ಮತ್ತು ಪವಾಡಗಳನ್ನು ವಿರೋಧಿಸಿದ ಶರಣರಿಗೆ ಅಪಚಾರವಾಗುವಂತೆ ಕೆಲ ಪುರಾಣಗಳಲ್ಲಿ ಪವಾಡಗಳನ್ನು ತುರುಕಲಾಯಿತು. ಒಂದು ಲಕ್ಷಕ್ಕೂ ಹೆಚ್ಚಿನ ವಚನಗಳ ಪೈಕಿ ನಮಗೆ ಸಿಕ್ಕಿರುವುದು ಸುಮಾರು ೨೫ ಸಾವಿರ ಮಾತ್ರ. ಕಲ್ಯಾಣದ ಕ್ರಾಂತಿಯ ನಂತರ ಬಸವಾದಿ ಶರಣರ ತತ್ವಗಳು ಮೂಲೆಗುಂಪಾಗಿ ಜಾತಿ ವ್ಯವಸ್ಥೆ ಮತ್ತು ಪುರೊಹಿತಶಾಹಿಗಳು ಪ್ರಬಲಗೊಂಡವು. ವೀರಶೈವ ಧರ್ಮಕ್ಕೆ ವಿರೋಧವೆನಿಸುವ ಅಂಶಗಳು ಹರಿಹರ, ರಾಘವಾಂಕ, ಭೀಮ ಕವಿಗಳ ಕಾವ್ಯಗಳಲ್ಲಿ ಕಂಡು ಬರುತ್ತವೆ. ಆದ್ದರಿಂದ ಈ ಪುರಾಣಗಳನ್ನು ಚರಿತ್ರೆಯೆಂದು ಓದುವುದು ಸರಿಯಲ್ಲ.

ಬಂಜಗೆರೆಯವರು ಹೇಳಿದ "ಅನುಮಾನಿತ ಸತ್ಯ"ಗಳೆಲ್ಲ ಸರಿಯಿದ್ದರೆ, ಬಸವಣ್ಣನಿಗೆ ವಿದ್ಯೆ ಮತ್ತು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಲು ಅವಕಾಶ, 'ಉನ್ನತ' ಕುಲದಲ್ಲಿ ಹುಟ್ಟಿದವಳ ಜೊತೆ ಮದುವೆ ಸಾಧ್ಯವಿದ್ದರೆ, ೧೨ನೆಯ ಶತಮಾನ ೨೧ನೆಯ ಶತಮಾನಕ್ಕಿಂತ ಸಾಮಾಜಿಕವಾಗಿ ಮುಂದುವರಿದಿತ್ತೆಂದು ಹೇಳಬಹುದಲ್ಲ!! ಹರಳಯ್ಯ-ಮಧುವರಸರ ಮಕ್ಕಳ ಅಂತರ್ಜಾತಿ ಮದುವೆ ತುಂಬಾ common ಆಗಿರಬೇಕಿತ್ತಲ್ಲವೆ? ಇದೆಲ್ಲಾ ನಡೆದಿದ್ದರೆ ಸಾಮಾಜಿಕ ಕ್ರಾಂತಿಯ ಅವಶ್ಯಕತೆ ಯಾಕೆ?

ಕೊನೆಯದಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಅಪಚಾರವೆಸಗುವ license ಅಲ್ಲ. ಆಧುನಿಕ ಪ್ರಜಾಪ್ರಭುತ್ವವಿರುವ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಜೊತೆಗೆ ಧಾರ್ಮಿಕ ಮನೋಭಾವನೆಗಳಿಗೂ ಪ್ರಾಮುಖ್ಯತೆ ಇರುತ್ತದೆ. ಮಾನನಷ್ಟ ಮೊಕದ್ದಮೆಗಳು, blashphemy laws, ಅಶ್ಲೀಲತೆಯ ಬಗ್ಗೆ ಕಾನೂನುಗಳು ಬ್ರಿಟನ್, ಅಮೇರಿಕದಂತಹ ದೇಶಗಳಲ್ಲೂ ಸಿಗುತ್ತವೆ. ಮಿತಿಯಿಲ್ಲದ ಸ್ವಾ