ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

July 16, 2007 - 5:35pm — arunhegde

ನಮ್ಮನೆ ಮಗುವಿಗೆ ನಾಮಕರಣ ಮಾಡಲು ಪಕ್ಕದ ಮನೆಯವರ ಒಪ್ಪಿಗೆ ಬೇಕಂತೆ!... ಮಹಾರಾಷ್ಟ್ರ ಮತ್ತು ಎಂ.ಇ.ಎಸ್ ನ ಹೊಸ ತಗಾದೆ ಇದು. ಅಲ್ಲ ಸ್ವಾಮಿ, ಬೆಳಗಾಲಿಯೇನು ಮಹಾರಾಷ್ಟ್ರದಲ್ಲಿದೆಯೋ ಅಥವ ಕರ್ನಾಟಕದಲ್ಲೋ ಎಂಬ ಸಂಶಯ ಬರುತ್ತೆ ಇವರ ಮಾತು ಕೇಳಿದರೆ. ಕನ್ನಡದ ನೀರು, ಗಾಳಿ ಬೆಳಕು ಸೇವಿಸಲು ಬೇಕು.. ಆದರೆ ಕನ್ನಡ ಬೇಡ.. ಕರ್ನಾಟಕ ಬೇಡ.. ಇದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂ.ಇ.ಎಸ್) ಎಂಬ ಸಂಸ್ಥೆಯ ನಿಲುವು. ಹಾಳಾಗಿ ಹೋಗಲಿ, ಅವರ ಮನೋಭಾವ ಅವರ ಬಳಿ ಇರಲಿ ಅಂತ ಸುಮ್ಮನೆ ಇರೋಕೂ ಬಿಡೋಲ್ಲ.. ಬೆಳಗಾಂ ಅನ್ನು ಬೆಳಗಾವಿ ಎಂದು ಕನ್ನಡತನ್ನಕ್ಕೆ ಒಪ್ಪುವಂತೆ ಸರ್ಕಾರ ನಾಮಕರಣ ಮಾಡಿದರೆ ಅದಕ್ಕೂ ತಕರಾರು... ಮಹಾರಾಷ್ಟ್ರ ಸರ್ಕಾರದ ಬೆಂಬಲೆ ಬೇರೆ ಇವರಿಗೆ... ನನ್ನ ನೆಲದಲ್ಲಿ ನಾವು ವಿಧಾನ ಸೌಧ ನಿರ್ಮಿಸೋದಕ್ಕೆ ಇವರ ವಿರೋಧ... ಸರ್ವೋಚ್ಛ ನ್ಯಾಯಾಲಯಕ್ಕೆ ದೂರು.... ಇದು ಉದ್ಧಟತನದ ಪರಮಾವಧಿಯಲ್ಲದೇ ಮತ್ತಿನ್ನೇನು? ನಾವೇನು ಅವರ ಸಾಂಗ್ಲಿಯಲ್ಲೋ, ಪುಣೆಯಲ್ಲೋ ವಿಧಾನ ಸೌಧ ನಿರ್ಮಿಸುತ್ತಿಲ್ಲವಲ್ಲಾ... ಅವರ ಕೊಲ್ಹಾಪುರವನ್ನೇನೂ ಮರು ನಾಮಕರಣ ಮಾಡ್ತಾ ಇಲ್ವಲ್ಲಾ.. ನಮ್ಮ ನೆಲದಲ್ಲಿ ನಾವು ಮಾಡೊ ಕಾಯಕಗಳನ್ನು ಪ್ರಶ್ನಿಸಲು, ವಿರೋಧಿಸಲು ಅವರು ಯಾರು!. ಕಾರವಾರ, ಸೂಪಾ ತಮಗೆ ಬೇಕು ಅಂತ ಗೋವಾನೂ ಕೂಗ್ತಾ ಇದೆ. ಶಾಂತ ಪ್ರಿಯರು ಎಂದ ಮಾತ್ರಕ್ಕೆ ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ಏನು ಬೇಕಾದರೂ ಮಾಡಬಹುದು ಎಂಬ ಧೋರಣೆ ಇವರುಗಳದ್ದು. ನಮ್ಮ ಮೌನವನ್ನು ಬಲಹೀನತೆಯೆಂಸು ತಪ್ಪಾಗಿ ಅರ್ಥೈಸುತ್ತಿರೋ ಹಾಗಿದೆ ಇವರೆಲ್ಲ.. ಕನ್ನಡಿಗನಾಗಿ ಮಹಾರಾಷ್ಟ್ರ, ಎಂ.ಇ.ಎಸ್ ನ ಈ ಧೋರಣೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಧಿಕ್ಕಾರವಿರಲಿ ಇವರುಗಳ ಈ ಆಷಾಢಭೂತಿತನಕ್ಕೆ!.

‹ ಕನ್ನಡ-ತೆಲುಗು ಒಂದೇ ಲಿಪಿ ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಸರಿ? ›
  • ಸುದ್ದಿ, ಸಮಾಚಾರ
~.~
  • Login or register to post comments
  • 527 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 16, 2007 - 6:47pm — mahesha

ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

mahesha's picture

ಅರುಣ!

ಈ ಬೆಳಗಾವಿಯಲ್ಲಿ ಮರಾಟಿಗರು ತರಲೆ, ಕಾರವಾರದಲ್ಲಿ ಕೊಂಕಣಿಗರ ತರಲೆ, ಬೆಂಗಳೂರಲ್ಲಿ ತಮಿಳರ ತರಲೆ, ಮಂಗಳೂರಲ್ಲಿ ಮಳಯಾಳಿಗಳ ತರಲೆ ಯಾಕೆ ಜಾಸ್ತಿಯಾಗಿದೆ ಅಂದರೆ?

೧) decency ಅಂತ ಎಲ್ಲದಕ್ಕೂ ತೆಪ್ಪಗಿರುವ ಕನ್ನಡಿಗರಿಂದ. ಇದು ಹೇಡಿತನದ ಪರಮಾವಧಿ.
೨) ಬಲು ಸಾರ್ಥಿಗಳು ನಾವು ಕನ್ನಡಿಗರು. ನಾನು, ನಮ್ಮ ಮನೆ ಇಷ್ಟೆ ನಮ್ಮ ದೃಷ್ಟಿಗೆ ಸಿಗುವುದು. ಇದನ್ನು ಬಿಟ್ಟರೇ, ನಾನು ಮಂಗಳೂರು, ನಾನು ಉಡುಪಿ, ನಾನು ಬಳ್ಳಾರಿ, ನಾನು ಬೀದರ, ನಾನು ಹುಬ್ಬಳ್ಳಿ, ನಾನು ಬೆಂಗಳೂರು, ನಾನು ಮೈಸೂರು ಎನ್ನುವ ಒಡಕು ಬೇರೆ.

ಇದಕ್ಕೆ ಪುರಾವೆ.
೧) ಬೆಳಗಾವಿಗಾಗಿ ಇಡೀ ಕರ್ನಾಟಕ ಬಂದ್ ಮಾಡಿದಾಗ ಸಿಕ್ಕಾಪಟ್ಟೆ ಓದಿದವರ ಜಿಲ್ಲೆಗಳು "ನಮಗೆ ಯಾಕೆ ಬೆಳಗಾವಿ" ಅಂತ ಸುಮ್ಮನಿದದ್ದು?
೨) ಕಾವೇರಿ ವಿಷಯದಲ್ಲೂ ಹಿಂಗೆ.
ಹೀಗಾದರೇ ಎಲ್ಲಿಂದ ಬರಬೇಕು ಒಕ್ಕಟ್ಟು. ಹತ್ತು ಮಂದಿಯ ಬಳಗದ ನಡುವೆ ಇದ್ದಾಗ ಕೆಲವು ಸರತಿ 'ಬಳಗಕ್ಕಾಗಿ' ನಮಗೆ ಹಿಡಿಸದಿದ್ದರೂ ಕೆಲವು ಕೆಲಸ ಮಾಡಬೇಕಾಗುತ್ತದೆ. ಅದನ್ನು ಬಿಟ್ಟು ನಾನೇ ಸ್ಪೆಷಲ್ ಅಂತ ಕೂತರೆ!!

ನಮ್ಮಲ್ಲಿ ಒಗ್ಗಟ್ಟಿಲ್ಲ. ಓದಿಕೊಂಡಿದ್ದೇವೆ ಎಂಬ decency ಎನ್ನುವ ಪುಕ್ಕಲು ನಮಗೆ ಜಾಸ್ತಿ. ಹಾಗಾದರೆ, ನಮ್ಮ ಮೇಲೆ ಎರಗಿ ಬರುತ್ತಿರುವ ಮರಾಟಿ, ಕೊಂಕಣಿ, ತಮಿಳು ಮಂದಿ ಏನು ಕಡಮೆ ಓದಿದವರೇ? ಆದರೆ ಅವರಿಗೆಲ್ಲ ತಮ್ಮ ನುಡಿಗಳ ಬಗ್ಗೆ ಕಾಳಜಿ, ಒಕ್ಕಟ್ಟು, ಹೆಮ್ಮೆ ಇದೆ. ನಮಗೆ ಇಲ್ಲ.

ಈ ಬೆಳಗಾವಿ ವಿಷಯಕ್ಕೆ ಬೆಳಗಾವಿಯ ಕನ್ನಡಿಗರು ಹೆಚ್ಚು ಒತ್ತುಕೊಟ್ಟು ಹೋರಾಟ ಬೇಕಲ್ಲವೇ? ಅದನ್ನು ಬಿಟ್ಟು ಬೆಳಗಾವಿ ಮಂದಿಯೇ ಮೋರೆಗೆ ಮಸಿ ಬಳಿಸಿಕೊಂಡ "ಮೋರೆ"ಯಂತವರನ್ನು ಆರಿಸಿಕಳಿಸುತ್ತಿದ್ದಾರೆ.

ಮಂಗಳೂರಲ್ಲೂ ಇದೇ, ಮಂಗಳೂರಿನ ಮಂದಿ ಕಾಸರಗೋಡಿನ ಬಗ್ಗೆ ಚಕಾರ ಎತ್ತಲ್ಲ. ಕಾಸರಗೋಡಿನ ಬಗ್ಗೆ ಮಾತಾಡಕ್ಕೆ ಬೆಂಗಳೂರು ಮೈಸರೋರು ಬರಬೇಕಾ? ಅವರು ಬಂದರೂ ಅಲ್ಲಿಯವರ ನೆರವಿಲ್ಲದೇ ಕೆಲಸ ಮಾಡೋದು ಕಷ್ಟ ಅಲ್ವಾ!!

ಇಲ್ಲಿ ಮರಾಟಿ, ಕೊಂಕಣಿ, ತಮಿಳರನ್ನು ನಾನು ಹೊಗಳುತ್ತೇನೆ. ಅವರು ಅವರ ನುಡಿಗೆ ಏನು ಮಾಡಬೇಕು ಅದನ್ನು ಮಾಡುತ್ತಿದ್ದಾರ. ಅವರವರ ನುಡಿಯನ್ನು ಬಲಪಡಿಸುತ್ತಿದ್ದಾರೆ. ಅವರ dutyಗೆ ನಿಯತ್ತಾಗಿದ್ದಾರೆ. ಅದು ಅವರ ಒಳ್ಳೆಯ ಗುಣವೇ.
ನಾವು ಕನ್ನಡಿಗರು ಹಾಗಿಲ್ಲ.
ಆದರೆ ದಿಟವಾಗಲೂ ಬೈಸಿಕೊಳ್ಳಬೇಕಾದವರು ನಾವು ಕನ್ನಡಿಗರು, ನಮಗೆ ನಮ್ಮ ಕನ್ನಡ, ಕರ್ನಾಟಕ ಬೇಕಾಗಿಲ್ಲ!! ನಮಗೆ ಬೇಕಿರುವುದು ಪೊಳ್ಳು decency ಎಂಬ ಪುಕ್ಕಲು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2007 - 6:49pm — mahesha

ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

mahesha's picture

ಸಾರ್ಥಿಗಳು = ಸ್ವಾರ್ಥಿಗಳು ಅಂತ ತಗೊಳ್ಳಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 16, 2007 - 8:03pm — arunhegde

ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

arunhegde's picture

ಮಹೇಶ್ ಅವರೇ,

ನೀವು ಹೇಳಿದ್ದು ಅಕ್ಷರಷಃ ಸತ್ಯ. ಕನ್ನಡಿಗರಾದ ನಮ್ಮಲ್ಲೇ ಒಳ ಜಗಳಗಳಿದ್ದಾಗ ಹೊರಗಿವನವಿಗೆ ನಮ್ಮ ಮೇಲೆ ಈ ರೀತಿ ದಾಳಿ ನಡೆಸುವುದು ಕಷ್ಟವೇನಲ್ಲ. ಮೊದಲು ನಮ್ಮಲ್ಲಿರುವ ಒಡಕುಗಳನ್ನು ಮುಚ್ಚಿಕೊಳ್ಳಬೇಕು.

- ಅರುಣ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2007 - 1:54pm — saranga.hebbar

ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

saranga.hebbar's picture

ee kannada nadina janara ee dhorane nijavagiyu bahala tondaregidu maduvantahudu. nanu udupiyalli hutti beledavanu. allina janaru endu tavagiye horage bandu horata madidavaralla. adu allina janara drawback. avaru bengaluru mysuru janarinda sahaya(adu development agali athava govt. aa pradeshavannu neglect madulirali athava innitara) expect madthare. adare tavagiye ee vishayadalli modalu madakke hogalla. obbaru sahaya madidre matte vapasu adakkintha jastiye sahaya maduvashtu olle manassu ide avarige. ello ondu kadeyinda ee kelsa prarambhavagabekashte. karnataka sarakara dakshina kannada mattu udupi jillegalige sariyada imporatance kodtha illa antha nanage anisuttade. mangalurinalli halavu savalattugalu hagu resource galiddaru adannu sariyagi upayogisuttilla. Mangalurinalli Bandaru iddaroo bengalurige sariyada connectivity illa. Raste yavagalu kettiruttade. hige yavude vishaya takkondru ide taraha nadeyuttide.
Inthaha vishaya karanatakada uddagalakku ide. ittichege Belagavige namma sarakaravu ottu koduttide. Idu ondu olleya belavanigeye sari. Ishtu samaya vijapura belagavi, rayachuru hige uttara karnatakavannu nirlakshida parinama, pakkada rajyadavaru adara upyogapadeyalu prarambhisiruvudu. Hige ulida pakkada rajyadavaru intaha karya prarambhisuvudakkintha modalu namma rajyadalli idara bagge gambhira chintane nadiyabekagide. illadiddalli karnataka = mysuru , bengaluru, mattu sutta muttala pradesha endagabahudu....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2007 - 2:34pm — mahesha

ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

mahesha's picture

ಸಾರಂಗರೇ

http://www.iit.edu/~laksvij/language/kannada.html ಇದನ್ನು ಬಳಸಿನೋಡಿರಿ. ರೋಮನ್ ಲಿಪಿ ಇಂದ ಕನ್ನಡ unicodeಗೆ

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2007 - 3:59pm — saranga.hebbar

ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

saranga.hebbar's picture

ಮಹೇಶ್ ಅವರೇ , ಕೊಂಡಿ ಕಳುಹಿಸಿದಕ್ಕೆ ಧನ್ಯವಾದಗಳು.

ನಾನು ಮೊದಲು ಬರೆದ ಕಾಮೆಂಟ್ಸ್ ಅನ್ನು ಈಗ ಕನ್ನಡದಲ್ಲಿ ಸೇರಿಸುತ್ತಿದ್ದೇನೆ.

ಈ ಕನ್ನಡ ನಾಡಿನ ಜನರ ಈ ಧೋರಣೆ ನಿಜವಾಗಿಯೂ ಬಹಳ ತೊಂದರೆಗೀಡು ಮಾಡುವಂತಹುದು. ನಾನು ಉಡುಪಿಯಲ್ಲಿ ಹುಟ್ಟಿ ಬೆಳೆದವನು. ಅಲ್ಲಿನ ಜನರು ಎಂದೂ ತಾವಾಗಿಯೇ ಹೊರಗೆ ಬಂದು ಹೋರಾಟ ಮಾಡಲ್ಲ. ಅಡು ಅಲ್ಲಿನ ಜನರ ಒಂದು "ಡ್ರಾಬಾಕ್". ಅವರು ಬೆಂಗಳೂರು ಮೈಸೂರು ಜನರಿಂದ ಸಹಾಯ(ಅಡು ಜನ ಪರ ಧೋರಣೆಯಾಗಲಿ ಅಥವಾ ಸರಕಾರ ಆ ಪ್ರದೇಶವನ್ನು ನಿರ್ಲಕ್ಶ್ಯ ಮಾಡುವುದಿರಲಿ ಅಥವಾ ಇನ್ನಿತರ ಏನಾ ವಿಶಯಗಳಿರಲಿ) ನಿರೀಕ್ಷಿಸುತ್ತಾರೆ. ಆದರೆ ತಾವಾಗಿಯೇ, ಈ ವಿಶಯದಲ್ಲಿ, ಮೊದಲು ಮಾಡಕ್ಕೆ ಹೋಗಲ್ಲ. ಒಬ್ಬರು ಸಹಾಯ ಮಾಡಿದ್ರೆ ಮತ್ತೆ ವಾಪಾಸು ಅದಕ್ಕಿಂತ ಜಾಸ್ತಿಯೇ ಸಹಾಯ ಮಾಡುವಷ್ಟು ಒಳ್ಳೆ ಮನಸ್ಸು ಇದೆ ಅವರಿಗೆ. ಎಲ್ಲೊ ಒಂದು ಕಡೆಯಿಂದ ಈ ಕೆಲ್ಸ ಪ್ರಾರಂಭವಾಗಬೆಕಷ್ಟೆ. ಕರ್ನಾಟಕ ಸರಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸರಿಯಾದ ಪ್ರಾಮುಖ್ಯತೆ ಕೊಡ್ತಾ ಇಲ್ಲ ಅಂತ ನನಗೆ ಅನ್ನಿಸುತ್ತದೆ. ಮಂಗಳೂರಿನಲ್ಲಿ ಹಲವು ಸವಲತ್ತುಗಳು ಹಾಗೂ ಅವಕಾಶಗಳಿದ್ದರೂ ಅದನ್ನು ಸರಿಯಾಗಿ ಉಪಯೊಗಿಸಿಕೊಳ್ಳುತ್ತಿಲ್ಲ. ಮಂಗಳೂರಿನಲ್ಲಿ ಬಂದರು ಇದ್ದರೂ ಬೆಂಗಳೂರಿಗೆ ಸರಿಯಾದ ಕನ್ನೆಕ್ಟಿವಿಟಿ ಇಲ್ಲದೇ "ಊಟಕ್ಕಿಲ್ಲದ ಉಪ್ಪಿನಕಾಯಿಯ ಹಾಗೆ" ಆಗಿದೆ. ರಸ್ತೆ ಯಾವಾಗಲೂ ಕೆಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗೆ ಯಾವುದೇ ವಿಷಯ ತಕ್ಕೊಂಡ್ರೂ ಇದೇ ತರಹ ನಡೆಯುತ್ತಿದೆ. ಒಬ್ಬರಿಗೊಬ್ಬರು ಪರಸ್ಪರ ದೂರುವುದೇ ಒಂದು ಕೆಲಸವಾಗಿದೆ.
ಇಂತಹ ವಿಷಯ ಕರ್ನಾಟಕದ ಉದ್ದಗಲಕ್ಕೂ ಇದೆ. ಇತ್ತೀಚೆಗೆ ಬೆಳಗಾವಿಗೆ ನಮ್ಮ ಸರಕಾರವು ಒತ್ತು ಕೊಡುತ್ತಿದೆ. ಇದು ಒಂದು ಒಳ್ಳೆಯ ಬೆಳವಣಿಗೆಯೇ ಸರಿ. ಇಷ್ಟು ಸಮಯ ವಿಜಪುರ ಬೆಳಗಾವಿ, ರಾಯಚೂರು ಹೀಗೆ ಉತ್ತರ ಕರ್ನಾಟಕವನ್ನು ನಿರ್ಲಕ್ಷಿದ ಪರಿಣಾಮ, ಪಕ್ಕದ ರಾಜ್ಯದವರು ಅದರ ಉಪಯೋಗಪಡೆಯಲು ಪ್ರಾರಂಭಿಸಿರುವುದು. ಹೀಗೆ ಉಳಿದ ಪಕ್ಕದ ರಾಜ್ಯದವರು ಇಂತಹ ಕಾರ್ಯ ಪ್ರಾರಂಭಿಸುವುದಕ್ಕಿಂತ ಮೊದಲು ನಮ್ಮ ರಜ್ಯದವರು ಎಚ್ಚೆತ್ತು ಇದರ ಬಗ್ಗೆ ಗಂಭೀರ ಚಿಂತನೆ ನಡಿಯಬೇಕಾಗಿದೆ. ಇಲ್ಲದಿದ್ದಲ್ಲಿ ಕರ್ನಟಕ = ಮೈಸೂರು , ಬೆಂಗಳೂರು, ಮತ್ತು ಸುತ್ತ ಮುತ್ತಲ ಪ್ರದೇಷ ಎಂದಾಗಬಹುದು....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2007 - 4:11pm — mahesha

ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

mahesha's picture

ಕನ್ನಡ ಲಿಪಿಯಲ್ಲಿ ಬರೆದುದಕ್ಕೆ ನನ್ನಿ!

Smiling
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2007 - 1:55pm — saranga.hebbar

ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

saranga.hebbar's picture

ee kannada nadina janara ee dhorane nijavagiyu bahala tondaregidu maduvantahudu. nanu udupiyalli hutti beledavanu. allina janaru endu tavagiye horage bandu horata madalla. adu allina janara drawback. avaru bengaluru mysuru janarinda sahaya(adu development agali athava govt. aa pradeshavannu neglect madulirali athava innitara) expect madthare. adare tavagiye ee vishayadalli modalu madakke hogalla. obbaru sahaya madidre matte vapasu adakkintha jastiye sahaya maduvashtu olle manassu ide avarige. ello ondu kadeyinda ee kelsa prarambhavagabekashte. karnataka sarakara dakshina kannada mattu udupi jillegalige sariyada imporatance kodtha illa antha nanage anisuttade. mangalurinalli halavu savalattugalu hagu resource galiddaru adannu sariyagi upayogisuttilla. Mangalurinalli Bandaru iddaroo bengalurige sariyada connectivity illa. Raste yavagalu kettiruttade. hige yavude vishaya takkondru ide taraha nadeyuttide.
Inthaha vishaya karanatakada uddagalakku ide. ittichege Belagavige namma sarakaravu ottu koduttide. Idu ondu olleya belavanigeye sari. Ishtu samaya vijapura belagavi, rayachuru hige uttara karnatakavannu nirlakshida parinama, pakkada rajyadavaru adara upyogapadeyalu prarambhisiruvudu. Hige ulida pakkada rajyadavaru intaha karya prarambhisuvudakkintha modalu namma rajyadalli idara bagge gambhira chintane nadiyabekagide. illadiddalli karnataka = mysuru , bengaluru, mattu sutta muttala pradesha endagabahudu....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 17, 2007 - 1:37am — ಸಂಗನಗೌಡ

ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

ಸಂಗನಗೌಡ's picture

ಇದರ ಬಗ್ಗೆ ನನ್ನ ಬಲಾಗಿನಲ್ಲೊಮ್ಮೆ ಬರೆದಿದ್ದೇನೆ(http://obbakannadiga.blogspot.com). 'ಬೆಳಗಾವಿ' ಎಂಬ ಹೆಸರಲ್ಲಿ 'ಬೆಳ' ಎಂಬುದು ಅಪ್ಪಟ ಕನ್ನಡ ಒರೆ. 'ಬೆಳ' ಇರುವ ಇತರ ಕನ್ನಡ ಹೆಸರುಗಳು ತುಂಬಾ ಸಿಗುತ್ತವೆ. ಬೆಳಗಲಿ, ಶ್ರವಣ ಬೆಳಗೊಳ, ಬೆಳಂದೂರು, ಬೆಳಗೆರೆ,.. ಹೀಗೆ. 'ಗಾವಿ' ಮತ್ತು 'ಗಾಂವ್' ಇವೆರಡೂ 'ಗ್ರಾಮ'ದ ತದ್ಭವಗಳಿದ್ದಿರಬಹುದು. ಕನ್ನಡಗರು ಬೆಳಗಾವಿಯನ್ನು ಬೆಳಗಾವಿಯೆಂದೇ ಕರೆಯುತ್ತಾರೆ. ಮರಾಟಿಗರನ್ನು ಕಂಡು ಕೆಲ ಕಡೆ ಬೆಳಗಾಂವ್ ಅಂತಿರಬಹುದು, ಆದರೆ ನಾವು ಬೆಳಗಾವಿ ಅಂತನೇ ಅನ್ನುವದು. ಇದರಂತೆ ಇನ್ನೂ ಊರುಗಳ ಹೆಸರುಗಳಿವೆ. ಮಾದರಿಗೆ ಸೊರಗಾವಿ, ಸಿಗ್ಗಾವಿ ಹಲವಾರು. ಇವಕ್ಕಿನ್ನೂ ಮರಾಟಿಗರ 'ಗಾಂವ್' ಸೋಂಕು ತಗುಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2007 - 2:14pm — Khavi

ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

Khavi's picture

ಹುಂ .. ನನಗೆ ಈ ಹಳೆ ಹಾಡು ನೆನಪಿಗೆ ಬರತಾಇದೆ
" ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ
ಮುನ್ನಡೆಯೆ ಕನ್ನಡದ ದಾರಿದೀವಿಗೆ ನೀನೆ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಳಗಾವಿ ನಮ್ಮದೇ......... ಎ೦ದೆ೦ದಿಗೂ.................
  • ಪ್ರೇಮದ ಓಲೆ
  • ಅಡುಗೆ ಮಾಡುವ ವಿಧಾನ - ಒಂದು ಚುಟುಕ
  • ಡೋಂಗಿ ಭಂಗಿ
  • ನಮ್ಮ ಬೆಂಗಳೂರು ಅಥವ ಅವರ್ ಬ್ಯಾಂಗ್ಳೂರ್
Syndicate content

ಲೇಖಕರು

arunhegde's picture

ಪೂರ್ಣ ಹೆಸರು
ಅರುಣ್ ಹೆಗಡೆ

ಪರಿಚಯ

ನಾನು ಅರುಣ್ ಕುಮಾರ್ ಡಿ. ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್. ಮೂಲತಃ ಉತ್ತರ ಕನ್ನಡ ಜಿಲ್ಲೆಗೆ ಸೇರಿದವನು. ಕನ್ನಡದ ಬಗ್ಗೆ ಗೌರವ ಅಭಿಮಾನವಿದ್ದು ಕನ್ನಡ ಅಂತರ್ಜಾಲ ತಾಣಗಳಿಗೆ ಭೇಟಿ ಕೊಡುವುದು, ಸಾಧ್ಯವಾದರೆ ನಾನೂ ಒಂದಿಷ್ಟು ಬರೆಯುವುದು ನನ್ನ ಹವ್ಯಾಸಗಳಲ್ಲೊಂದು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ಕನ್ನಡ ಕಸ್ತೂರಿ
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
  • ಜಿಮೇಲ್ ಕನ್ನಡ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ವೈದ್ಯನಾರಾಯಣಕಥೆ
    July 6, 2008 - 8:48pm
  • yuvapremi
    ಉ: ಕನಸಿನ ಕನ್ಯ
    July 6, 2008 - 8:46pm
  • Narayana
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:38pm
  • ಗಣೇಶ
    ಉ: ವೈದ್ಯನಾರಾಯಣಕಥೆ
    July 6, 2008 - 8:09pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:03pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:01pm
  • ಗಣೇಶ
    ಉ: ಶಾಸಕರ ರಾಜೀನಾಮೆ ರಾಜಕೀಯ
    July 6, 2008 - 7:54pm
  • venkatesh
    ಉ: ಬ್ರಹ್ಮ ಕಮಲ
    July 6, 2008 - 7:44pm
  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
ಇನ್ನಷ್ಟು


ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator