ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಮುಕ್ತ ಸಂವಾದಗಳ ಅವಶ್ಯಕತೆ

July 19, 2007 - 12:50am — Aram

ಇತ್ತೀಚಿನ ಕೆಲವು ತಿಂಗಳುಗಳಲ್ಲಿ SLB/URA ಮತ್ತು ಬಂಜಗೆರೆ/ತುಂಬಿದಕೆರೆ ವಿಷಯ ಬಿಸಿಬಿಸಿ ಚರ್ಚೆಯಾಗುತ್ತಿರುವುದು ತುಂಬಾ ಸಂತೋಷದ ಸಂಗತಿ.

ನಿಜವಾಗಿಯೂ ನಾನು ಬ್ಲಾಗರನಾಗಲು ಕಾರಣವೇ ಮಾನ್ಯ URA ಯವರ ಹಾಗೂ ಅವರ ಮೇಲಿನ ವಾಕ್ ದಾಳಿ.

ಬ್ಲಾಗ್ ಲೋಕದಲ್ಲಿ ನಮಗೆ ಮನಸ್ಸಿಗೆ ಬಂದದ್ದನ್ನು ಬರೆದು ಪ್ರಕಟಿಸುವ ಮುಕ್ತ ಅವಕಾಶ ಮಾತ್ರವಲ್ಲ, ಇತರರ ಬ್ಲಾಗುಗಳ ಮೇಲೂ ಕಾಮೆಂಟಿಸುವ ಅವಕಾಶವಿದೆ - ಯಾವ ತರಹದ ಕತ್ತರಿ ಪ್ರಯೋಗದ ಭಯವಿಲ್ಲದೆ.

ಈ ರೀತಿ ಮುಕ್ತ ಸಂವಾದಗಳು ನಡೆಯುವುದರಿಂದ ನಮ್ಮ ತರ್ಕಶಕ್ತಿ, ಪ್ರತಿಭಟನಾಶಕ್ತಿಗಳು ಹರಿತವಾಗುತ್ತವೆ ಎಂದು ನನ್ನ ನಂಬಿಕೆ.

ಪ್ರತಿವಾದಿಗಳನ್ನು ಮನಒಲಿಸಿ ಗೆಲ್ಲುವುದು ಬಹಳ ಕಷ್ಟಸಾಧ್ಯ.

ಹಾಗೆಂದು ಅವರನ್ನು ತೀರ ಮೂದಲಿಸಿ ಅವರ ವಾದಗಳನ್ನು ಅತಿಯಾಗಿ ಖಂಡನೆ ಮಾಡಿ ಅವರ ಬಾಯಿಯನ್ನೇ ಸದಾಕಾಲಕ್ಕೂ ಬಂದ್ ಮಾಡುವುದೂ ಅಪೇಕ್ಶಣೀಯವಲ್ಲವೆಂದು ನನ್ನ ಅನಿಸಿಕೆ.

ಉದಾಹರಣೆಗೆ: ಶ್ರೀ DS ನಾಗಭೂಷಣರು ತಮ್ಮ ಸುದೀರ್ಘವಾದ ಲೇಖನಗಳನ್ನು ಪ್ರಕಟಿಸುವುದನ್ನೇ ನಿಲ್ಲಿಸಿದ್ದಾರೆ.

ಅದೇ ರೀತಿ ಮಾನ್ಯ ಜೋಸೆಫ್ ರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ವಾದ ಸರಿ ಇರಲಿ ತಪ್ಪಿರಲಿ, ಅವರ ಶೈಲಿ, ಕನ್ನಡಭಾಷೆಯ ಮೇಲಿನ ಅವರ ಪ್ರಭುತ್ವ, ವಿಷಯ ಮಂಡನೆ, ಇತ್ಯಾದಿಗಳು ಪ್ರಶಂಸಾರ್ಹ.

ಇವರೆಲ್ಲರೂ ಚರ್ಚೆಗೆ ವಿಷಯಗಳನ್ನು ಒದಗಿಸಿದ್ಚರಿಂದಲೇ ಅಲ್ಲವೇ ನಮ್ಮ ತಲೆಗೆ ಕೆಲಸ ಸಿಕ್ಕಿದ್ದು!

ದಾಸಶ್ರೇಶ್ಟರು ಹಾಡಿದ ಹಾಗೆ ನಿಂದಕರಿರಬೇಕು. ಕವಿವರ್ಯರು (ಬೇಂದ್ರೆ ?) ಹೇಳಿದ ಹಾಗೆ ಹಂದಿಗಳಿದ್ದರೆ ಊರು ಕೇರಿಗಳು ಶುದ್ದವಾಗಿರುತ್ತವೆ.

ಆದ್ದರಿಂದ ಸಹ್ರದಯ ಬ್ಲಾಗ್ಗರ್ ಗಳೇ ನಿಮ್ಮಲ್ಲಿ ನನ್ನ ನಮ್ರವಾದ ವಿನಂತಿ: ಇನ್ನೊಬ್ಬರ ವಾದಗಳನ್ನು ಖಂಡನೆ ಮಾಡುವ ಆತುರದಲ್ಲಿ ಅವರ ಬಾಯಿಯನ್ನೇ ಕಟ್ಟಿಹಾಕದಿರೋಣ.

ಒಂದೇಕೈಯಲ್ಲಿ ಚಪ್ಪಾಳೆ ಸಾಧ್ಯವಿಲ್ಲ ಅಲ್ಲವೇ?

ಬಲವಾದ opposition party ಇದ್ದರೆ ಮಾತ್ರ democracy ಚೆನ್ನಾಗಿ ಕೆಲಸಮಾಡುತ್ತದೆ.

ಎಲ್ಲವೂ ಏಕಮುಖವಾಗಿ, ವಾದಮಂಡನೆ, ಖಂಡನೆಗಳು ನಿಂತುಹೋದರೆ ಸಂಪದದ ಸ್ವಾರಸ್ಯವೇ ಕಡಿಮೆಯಾಗಿಬಿಡುವ ಅಪಾಯವಿದೆ.

ಹಾಗಾಗದಂತೆ ಜಾಗರೂಕರಾಗಿರೋಣ.

‹ ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು ಹಾವೇರಿಯಲ್ಲಿ ಗೊಬ್ಬರ ಕೇಳಿದಕ್ಕೆ ರಯಿತರಿಗೆ ಸಿಕ್ಕಿದ್ದು ಬಿಸಿಗುಂಡು... ›
  • ರಾಜಕೀಯ
~.~
  • Login or register to post comments
  • 809 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 19, 2007 - 2:35pm — jaiguruji

ಉ: ಮುಕ್ತ ಸಂವಾದಗಳ ಅವಶ್ಯಕತೆ

jaiguruji's picture

ಆರಾಮ್,

ಇಲ್ಲಿ ಹಂದಿಗಳಾರು? ಎಂದು ತಲೆ ಕೆರೆಯುತ್ತಿದ್ದೇನೆ ! Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2007 - 6:45pm — ahankari

ಉ: ಮುಕ್ತ ಸಂವಾದಗಳ ಅವಶ್ಯಕತೆ

ahankari's picture

ಅಲ್ಲ ಸ್ವಾಮಿ ಕುಂಬಳಕಾಯಿ ಕಳ್ಲ ಅಂಥಾ ಹೇಳಿದ್ರೆ ಹೆಗಲು ಮುಟ್ಟಿ ನೋಡಿದ ಅಂದ ಹಾಗಾಯ್ತು ನಿಮ್ಮ ಕಥೆ ಸುಮ್ಮನೆ ತಮಾಶೆಗೆ ಹೇಳಿದ್ದು , ನನ್ನ ಪ್ರಥಮ ಕನ್ನಡ ಬರಹ commentninda ಆರಂಭವಾಗಿದೆ Smiling
ಜೈ ಗುರೂಜಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2007 - 10:09pm — Aram

ಉ: ಮುಕ್ತ ಸಂವಾದಗಳ ಅವಶ್ಯಕತೆ

Aram's picture

ಗುರೂಜೀ ಕೀ ಜೈ! ಗುರು ಬೀನ ಗ್ಯಾನ ನೈನ ಪಾವೇ - ( ಉಸ್ತಾದ್ ಆಮೀರ್ ಖಾನ್ ಸಾಹೇಬ್)

"ಇಲ್ಲಿ ಹಂದಿಗಳಾರು? ಎಂದು ತಲೆ ಕೆರೆಯುತ್ತಿದ್ದೇನೆ !"

- ಶಿಷ್ಯನನ್ನು ಪರೀಕ್ಷಿಸುತ್ತೀದ್ದೀರಾ?

ಈ ವರೆಗೆ ಸಾಕಷ್ಟು ಬಿಸಿಬಿಸಿ ಚರ್ಚೆಮಾಡಿ ದಣಿದಿದ್ದೇವೆ. ಜರಾ ಹವಾ ಬದಲಾಯ್ಸೋ ಸಲುವಾಗಿ ಹಳೇ Reader's Digest ನಲ್ಲಿ ಬಂದ ನಗೆಹನಿ ನೆನಪಾಗುತ್ತಿದೆ. ಗಜಗಾಮಿನಿ ಒಮ್ಮೆ ಮೈಸೂರು ಮ್ರಗಾಲಯಕ್ಕೆ ಹೋಗಿದ್ದಾಗ, ಅಲ್ಲಿ ಘೇಂಡಾ ಮ್ರಗ ನೋಡಿ ಕಾವಲುಗಾರನನ್ನು ಕೇಳಿದಳಂತೆ ಅದು ಗಂಡೋ ಹೆಣ್ಣೋ ಎಂದು. ಆವನು ಉತ್ತರಿಸಿದ್ದು: "ಅದು ಗಂಡೋ ಹೆಣ್ಣೋ ಎಂದು ತಿಳಿಯಬೇಕಾಗಿದ್ದು ಇನ್ನೊಂದು ಘೇಂಡಾಕ್ಕೆ ಮಾತ್ರ, ನಿಮಗ್ಯಾಕೆ ಆ ಚಿಂತೆ?"

ನಾಡಿಗರ ಸಂಪದಲೋಕದಲ್ಲಿ ಇರುವವರೆಲ್ಲರೂ ಸಂಭಾವಿತರು ಮಾತ್ರ. ಇಲ್ಲಿ ಹಂದಿಗಳಾಗಲಿ, ನಿಂದಕರಾಗಲಿ ಈ ತನಕ ಯಾರೂ ಕಂಡಿಲ್ಲ.
ನಾನು ಆ reference ಮಾಡಿದ್ದು, ಜಗನ್ನಿಯಾಮಕನ ದಿವ್ಯ ಜಗತ್ತಿನಲ್ಲಿ ಪ್ರತಿಯೊಂದು ಪ್ರಾಣಿಯ ಇರುವಿಕೆಗೂ ಉದ್ದೇಶವೊಂದಿದ್ದೇ ಇದೆ ಎನ್ನುವುದನ್ನು ಒತ್ತಿ ಹೇಳುವ ಸಲುವಾಗಿ ಅಷ್ಟೇ.

ಕ್ಷಮೆ ಇರಲಿ.

ಒಂದೆರಡು ಗಳಿಗೆ ನಕ್ಕು ಹಗುರಾಗಬೇಕೆಂದೆನಿಸಿದರೆ ಅರೆಬೆಂದಕಾಳೂರಿನವರೇ ಆದ ಕುಮಾರಿ ಅಪರ್ಣಾ ಮುರಳೀಧರ್ (ಅರೆ ಮಲೆಯಾಳೀ ಕನ್ನಡತಿ) ಇವರ ಈ ಬ್ಲಾಗ್ ಸಂದರ್ಶಿಸಿ.
http://amuralidhar.blogspot.com/2007/04/brief-history-of-everything-or-b...

(Aramisharam)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2007 - 7:17pm — muralihr

ಉ: ಮುಕ್ತ ಸಂವಾದಗಳ ಅವಶ್ಯಕತೆ

muralihr's picture

ಹಾಗಾಗದಿರೋಕ್ಕೆ ಏನಾದರೂ ಎಚ್ಚರಿಕೆ Warning List ಕೊಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2007 - 10:18pm — Aram

ಉ: ಮುಕ್ತ ಸಂವಾದಗಳ ಅವಶ್ಯಕತೆ

Aram's picture

@ahankari
ನಾನೂ ನಿಮ್ಮ ಹಾಗೇ ಕಾಮೆಂಟಿಗನಾಗಿಯೇ ಸಂಪದಕ್ಕೆ ಅಂಬೆಗಾಲಿಟ್ಟದ್ದು. ಐದು ನನ್ನ ಮೊದಲ ಬ್ಲಾಗು.

@muraliHR

ಮುರಳಿಯಣ್ಣಾ: ನಿಮ್ಮ ಕೋರಿಕೆ ಅರ್ಥವಾಗಲಿಲ್ಲ, ಕ್ಷಮಿಸಿ. ( ಹಾಗಾಗದಿರೋಕ್ಕೆ ಏನಾದರೂ ಎಚ್ಚರಿಕೆ Warning List ಕೊಡಿ.) ??

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2007 - 10:45pm — gc

ಉ: ಮುಕ್ತ ಸಂವಾದಗಳ ಅವಶ್ಯಕತೆ

gc's picture

U R A protector?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 20, 2007 - 12:18am — Aram

ಉ: ಮುಕ್ತ ಸಂವಾದಗಳ ಅವಶ್ಯಕತೆ

Aram's picture

ಜೀಸೀ ಸರ್:

UR A ಯವರ partyಯೋ ನಾನು ಎಂದು ಕೇಳಿದಿರಾ?

ಖಂಡಿತವಾಗಿಯೂ ಅಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2007 - 8:12pm — aithalsandy

ಉ: ಮುಕ್ತ ಸಂವಾದಗಳ ಅವಶ್ಯಕತೆ

aithalsandy's picture

Fantastic pun .... Smiling.. (Objectively looking at the pun & pun only)

ಸಂದೀಪ ಐತಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2007 - 10:04pm — Aram

ಉ: ಮುಕ್ತ ಸಂವಾದಗಳ ಅವಶ್ಯಕತೆ

Aram's picture

ಜೀ ಸೀ ಸಾರು:

ನಿಮ್ಮ ಪ್ರಶ್ನೆ: U R A protector?

ನನ್ನ ಉತ್ತರ: I am a demolisher

of unreasonable beliefs and falsehoods

ಐತಾಳ್ರೇ:
ಎಂಥದ್ದು ಮಾರಾಯ್ರೆ
ನಿಮ್ಮ ಕಾ ಮೆಂಟು ಜೋರಾಗಿತ್ತು; ಧನ್ಯವಾದಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2007 - 10:00am — gc

ಉ: ಮುಕ್ತ ಸಂವಾದಗಳ ಅವಶ್ಯಕತೆ

gc's picture

Aramರೆ, ನೀವು ಹೇಳಿದ್ದು "I am a demolisher of unreasonable beliefs and falsehoods". ಅಂದ್ರೆ U R A iconoclast? Smiling

ನೀವು ಹೇಳಿದ ಹಾಗೆ ಶ್ರೀ D.S.ನಾಗಭೂಷಣ ಅವರು ಬ್ಲಾಗಿಸಿವುದನ್ನು ನಿಲ್ಲಿಸಿಲ್ಲ. "ಸುದೀರ್ಘವಾದ ಲೇಖನಗಳನ್ನು" ಬರೆದೂ ಬರೆದೂ ಕೀಲಿಮಣೆ ಸವಕಳಿಯಾಗಿತ್ತೆನೋ? Eye-wink ಅವರ ಹೊಸ ಲೇಖನಗಳನ್ನು ನೋಡಿ - http://www.sampada.net/blog/d_s_nagabhushana/22/07/2007/5082 ಮತ್ತು http://www.sampada.net/blog/d_s_nagabhushana/18/07/2007/5040.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2007 - 7:47pm — Aram

ಉ: ಮುಕ್ತ ಸಂವಾದಗಳ ಅವಶ್ಯಕತೆ

Aram's picture

ಜೀ ಸೀ ಯವರೇ:

ನೀವು U R A ಎಂದು ಜಾಣ್ಮೆಯಿಂದ ಹಾಕಿದ ಗಾಳಕ್ಕೆ ಸುಲಭವಾಗಿ ಸಿಕ್ಕಿಬಿಟ್ಟೆ.

ಶ್ರೀ ಮುರಳಿಯವರು ತಮ್ಮ profile ನಲ್ಲೇ ಸಾರಿದ ಹಾಗೆ: WHO AM I ? is the only valid question.
Please dont ask me that question.

ಹೌದು, ಶ್ರೀ DSN ಅವರ ಎರಡೂ ಲೇಖನಗಳನ್ನು ಗಮನಿಸಿದೆ, ಆದರೆ ಪೂರ್ತಿಯಾಗಿ ಓದುವ ಸಾಹಸ ಮಾಡಲಿಲ್ಲ.

ಜವಾಹರಲಾಲರು ಹೇಳಿದ ಹಾಗೆ: Aram is haram ಎಂದು ಮಾತ್ರ ನನ್ನ ಬಗ್ಗೆ ಹೇಳಬಲ್ಲೆ.

ಅದು ಸರಿ; ಅಂದ ಹಾಗೆ ನಿಮ್ಮನ್ನು ಅಚಾತುರ್ಯವಶಾತ್ ಸಾರ್ ಎಂದೆ. ನಿಮ್ಮ profileನಲ್ಲಿ ಯಾವ ವಿವರವೂ ಇಲ್ಲ ಇದು ಸರಿಯೋ ಅಲ್ಲವೋ ಎಂದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2007 - 9:09pm — gc

ಉ: ಮುಕ್ತ ಸಂವಾದಗಳ ಅವಶ್ಯಕತೆ

gc's picture

ಅರಾಮ್ ಅವರೆ, ಸರ್ ಅನ್ನಿಸಿಕೊಳ್ಳಲು ನನಗೆ ಎರಡು ಕತ್ತೆ ವಯಸ್ಸಾಗಿದೆ ಅನ್ನೋದು ಬಿಟ್ರೆ ಯೋಗ್ಯತೆ, ಅಧಿಕಾರ ಅಥವಾ ಅಂಥಾ ಜ್ಞಾನವೇನೂ ಇಲ್ಲ Smiling ಮುಕ್ತ ಸಂವಾದದ ಜೊತೆಗೆ ಸ್ವಲ್ಪ ನಗು ಮತ್ತು pun ಇರಲಿ. ಸಂಪದವನ್ನು ಹಲವು ತಿಂಗಳಿಂದ ಓದುತ್ತಿರುವ ನಾನು ಸಭ್ಯತೆ ಮೀರಿ ಬರೆದ ಲೇಖನಗಳು ಮತ್ತು ಪ್ರತಿಕ್ರಿಯೆಗಳನ್ನು ನೋಡಿದ್ದು ತೀರಾ ವಿರಳ.

ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2007 - 10:04pm — Ulta Pultu

ಉ: ಮುಕ್ತ ಸಂವಾದಗಳ ಅವಶ್ಯಕತೆ

Ulta Pultu's picture

GC Sir:

ಕತ್ತೆಯನ್ನೇಕೆ ಕೀಳಾಗಿ ಹೀನೈಸಿ ಹೇಳುತ್ತೇವೆ ನನಗೆ ಗೊತ್ತಿಲ್ಲ.

ಯೋಗ್ಯತೆ, ಅಧಿಕಾರ ಇವೆಲ್ಲವುಗಳಿಗಿಂತ ನಿಮ್ಮ ಜಾಣ್ಮೆ ಇಷ್ಟವಾಯಿತು.

ಮುಕ್ತ ಸಂವಾದ, ಸಾಕಷ್ಟು ಅಥವಾ ಸಾಕೋ ಸಾಕ್ ಎನ್ನುವಷ್ಟು ನಗು, punಡಿತರ ಜಾಣ ಮಾತುಗಳು ಇವೆಲ್ಲವುಗಳ SUM ಮೊತ್ತವಾಗಿ ಸಂಪದವಾಗಲಿ ಎಂದು ಹಾರೈಸುತ್ತೇನೆ.

ಆದರೆ, ಆರಾಮ್ ಕೆಲವೊಮ್ಮೆ ಹರಾಮ್ ಎನಿಸಿದರೆ ಕ್ಷಮೆ ಇರಲಿ, ಹೇ ರಾಮ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 20, 2007 - 10:19am — roshan_netla

ಉ: ಮುಕ್ತ ಸಂವಾದಗಳ ಅವಶ್ಯಕತೆ

roshan_netla's picture

ನೀರಲ್ಲಿ ಇಳಿಯುವಾಗ ಅದರ ಆಳತಿಳಿಯದಿದ್ದರೆ ಚಿಂತೆ ಇಲ್ಲ ಆದರೆ ಇಳಿಯುವಾತ ತನಗೆ ಈಜಲು ಬರುವುದೋ ಯೆಸ್ಟು ಈಜಬಹುದು ಅನ್ನುವುದನ್ನು ತಿಳಿದುಕೊಳ್ಳಬೇಕು. ಹಾಗೆ ಚರ್ಚೆಗೆ ಕೂತವ ಅದನ್ನು ಸಮರ್ತಿಸುವಂತ ಸಿದ್ದತೆ ಮಾಡಿಕೊಳಬೇಕು. ಅವನಿಗೆ ಬರುವ ಟೀಕೆಗೆ ಉತರಿಸಲು ತಯಾರಿರಬೇಕು ಇಲ್ಲದಿದರೆ ಅದನ್ನು ಒಪ್ಪುವ ವಿಶಾಲಮನಸ್ಸು ಹೊದಿದ್ದರೆ ಉತ್ತಮ. ನಾವಿಲ್ಲಿ ಚರ್ಚೆ ಮಾಡುವುದು ನಮ್ಮ ತಿಳುವಳಿಕೆ ಹೆಚ್ಚಿಸಿಕೊಳಲು ಅಂತ ನಾನು ತಿಳಿದುಕೊಂಡಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 20, 2007 - 9:17pm — Aram

ಉ: ಮುಕ್ತ ಸಂವಾದಗಳ ಅವಶ್ಯಕತೆ

Aram's picture

ರೋಶನ್:

ಒಪ್ಪಿದೆ ನಿಮ್ಮ ಮಾತು.

ನೀವು ಹೇಳಿದ ಮನೋಭಾವದ ಮಹಾನುಭಾವರು ನೂರಕ್ಕೊಬ್ಬರು ಪುಣ್ಯವಶಾತ್ ದೊರಕುವಂಥಹವರು.

ಎಲ್ಲರೂ ನಾವು ಅಪೇಕ್ಷೆ ಪಟ್ಟಂತೆ ಇರುವುದಿಲ್ಲ, ವರ್ತಿಸುವುದಿಲ್ಲ ಅಲ್ಲವೇ?

ಹಾಗೆಂದು ನಾವು ಆದರ್ಶದ ನಿಯಮಗಳನ್ನು ಹೇಳದೇ ಇರಲೂ ಆಗದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 20, 2007 - 10:33pm — chitra

ಉ: ಮುಕ್ತ ಸಂವಾದಗಳ ಅವಶ್ಯಕತೆ

chitra's picture

Aram, ನಾನು ಗಮನಿಸಿದಂತೆ, ಬಂಜಗೆರೆ....ತುಂಬಿದ ಕೆರೆ ..ದಾರದಲ್ಲಿ ಚರ್ಚೆ ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿತ್ತು. ಜೋಸಫರು ತಮ್ಮ ಪೋಸ್ಟಿನಲ್ಲಿ ಬ್ರಾಹ್ಮಣರ ಬಗ್ಗೆ ಮಾಡಿರುವ ಆರೋಪಗಳಿಗೆ ಏನೊಂದು ಪ್ರತಿ ಹೇಳದ ನೀವು ಮತ್ತಿತರರು ಸಂಗನಗೌಡರು ಜೋಸಫರನ್ನು ಒಂದು ಪ್ರಶ್ನೆ (ಸಕಾರಣ) ಕೇಳಿದೊಡನೆ ಅವರ ಸಂತೈಕೆಗೆ ತೊಡಗಿದಿರಿ. ಅದರ ಅಗತ್ಯವೇನಿತ್ತು?

ಇದ್ದದ್ದು ಇದ್ದ ಹಾಗೆ ಯಾರಾದರೂ ಹೇಳಿದರೆ "ಇನ್ನು ಮುಂದೆ ಬರೆಯುವುದನ್ನು ನಿಲ್ಲಿಸುತ್ತೇನೆ, ಈ ಎಳೆಯಿಂದ ಹೊರಹೋಗುತ್ತೇನೆ, ದಯವಿಟ್ಟು ಕ್ಷಮಿಸಿಬಿಡಿ" ಎಂಬ ಬೆದರಿಕೆಗಳು ಬೇರೆ. ನಿಮ್ಮ ಅರ್ಥದಲ್ಲಿ ಮುಕ್ತ ಸಂವಾದ ಎಂದರೆ, ಹಿಂದುಗಳನ್ನು ಅದರಲ್ಲೂ ಬ್ರಾಹ್ಮಣರನ್ನು ಮನಬಂದಂತೆ ಹೀಯಾಳಿಸುವುದು ಎಂದಾದರೆ, ಕ್ಷಮಿಸಿ. ನಾನೂ ಕೂಡ ಈ ಎಳೆಯಿಂದ ಹೊರನಡೆದೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 21, 2007 - 12:12am — Aram

ಉ: ಮುಕ್ತ ಸಂವಾದಗಳ ಅವಶ್ಯಕತೆ

Aram's picture

CHITRA: ಕಮೆಂಟಿಗೆ ಧನ್ಯವಾದಗಳು.

"ಬ್ರಾಹ್ಮಣರ ಬಗ್ಗೆ ಮಾಡಿರುವ ಆರೋಪಗಳಿಗೆ ಏನೊಂದು ಪ್ರತಿ ಹೇಳದ ..."
---- ಬ್ರಾಹ್ಮಣರ attitude ಅನಾದಿಕಾಲದಿಂದಲೂ ಒಂದೇ ಆಗಿದೆ ಏನಂದರೆ: ನಾಯಿಗಳು ಬೊಗಳಿದರೆ ತಮ್ಮ ದೇವಲೋಕವೇನೂ ಹಾಳಾಗುವುದಿಲ್ಲ ಎಂದು; ನಾನೂ ಕೂಡಾ ಹುಟ್ಟಿನಿಂದ, ಸಂಸ್ಕಾರದಿಂದ, ಹಾಗೂ ಗರ್ವದಿಂದ ಬ್ರಾಹ್ಮಣ.

ಕೆಲವು ಜಾತಿನಾಯಿಗಳು ವಿನಾಕಾರಣ ಬೊಗಳುವುದು ಹೆಚ್ಹು - ಹಾಗೆಂದು ಶ್ವಾನಪ್ರೇಮಿಗಳಾದ ನಾವು ನಮ್ಮ ನಾಯಿಗಳನ್ನು ಪ್ರೀತಿಸುವುದನ್ನು ನಿಲ್ಲಿಸುತ್ತೇವೆಯೆ?

ಬ್ರಾಹ್ಮಣರಿಗೆ ಸಿಟ್ಟು ಬರುವುದು ಬಹಳ ವಿರಳ; ಬಂದಾಗ ಮಾತ್ರ ಚಾಣಕ್ಯಶಿಖೆ ಬಿಚ್ಹುತ್ತದೆ.

ಬಹುಜನ ದಲಿತನಾಯಕಿಯೇ ಬ್ರಾಹ್ಮಣರ ಸತ್ ವವನ್ನು recognize ಮಾಡಿರುವುದು ಗೊತ್ತೇ ಇದೆ.

ಅಂದ ಮೇಲೆ ಹೆಚ್ಚು ಹೇಳಬೇಕಾಗಿಲ್ಲ.

ಯಾರೇ ಕೂಗಾಡಲಿ, ಊರೇ ಹೋರಾಡಲಿ - ಸಂಪದದ ಮೇಲೆ ಪ್ರೀತಿ ನಮ್ಮೆಲ್ಲರಲ್ಲೂ ಹರಡಲಿ.<>

Srila Prabhupada cites Chanakya’s advice that valid moral instruction should be accepted even if given by a lowborn or unqualified person. Even if gold is covered by stool, says Chanakya, it is still gold.<>

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿಜವಾಗಿಯೂ ಆದೆನೆ ನಾನಿಂದು ಮುಕ್ತ ಮುಕ್ತ ಮುಕ್ತಾ.ಆಆಆ....
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ಕಾಕತಾಳೀಯವೆಂದರೆ....
  • ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಗ್ಗೆ ಅರಹುತ್ತ
  • ಸಂಪದದ ಹೊಸ ರೂಪ
Syndicate content

ಲೇಖಕರು

Aram's picture

ಪರಿಚಯ

I am a simple person with tastes in hindustani classical music, reading Kannada and English books, current affairs, politics, etc.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • "ಕನ್ನಡ+ತಮಿಳ್" = ?
  • ಸ್ತ್ರೀಸೌಂದರ್ಯ
  • ಯೋಗವಾಹಕ
  • ತೆರೆ, ತೆಱೆ
  • ಮಾತಿನ ಒಳಗುಟ್ಟು - ಡಾ. ಡಿ.ಎನ್.ಶಂಕರಬಟ್ಟರ ಹೊಚ್ಚ ಹೊಸ ಹೊತ್ತಗೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
  • bhcsb
    ಉ:
    July 24, 2008 - 4:59pm
ಇನ್ನಷ್ಟು


ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator